IND-W vs SL-W: 69,79,79.. ಹ್ಯಾಟ್ರಿಕ್ ಅರ್ಧಶತಕ ಸಿಡಿಸಿದ ಶಫಾಲಿ ವರ್ಮಾ

ಶ್ರೀಲಂಕಾ ಮಹಿಳಾ ತಂಡದ ವಿರುದ್ಧ ತಿರುವನಂತಪುರದಲ್ಲಿ ನಡೆಯುತ್ತಿರುವ 4ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಸ್ಫೋಟಕ 79 ರನ್​ಗಳ ಇನ್ನಿಂಗ್ಸ್ ಆಡಿದ್ದಾರೆ. ಇದು ಈ ಸರಣಿಯಲ್ಲಿ ಶಫಾಲಿ ಅವರ ಸತತ ಮೂರನೇ ಅರ್ಧಶತಕವಾಗಿದೆ. ಸರಣಿಯ ಮೊದಲ ಪಂದ್ಯದಲ್ಲಿ ಕೇವಲ 9 ರನ್​ಗಳಿಗೆ ಔಟಾಗಿದ್ದ ಶಫಾಲಿ, ಆ ಬಳಿಕ 2ನೇ ಟಿ20 ಪಂದ್ಯದಲ್ಲಿ 69 ರನ್, 3ನೇ ಟಿ20 ಪಂದ್ಯದಲ್ಲಿ 79 ರನ್ ಹಾಗೂ 4ನೇ ಟಿ20 ಪಂದ್ಯದಲ್ಲಿ 79 ರನ್ ಬಾರಿಸಿದ್ದಾರೆ. ಟಿ20 ವಿಶ್ವಕಪ್ ಸಮೀಪಿಸುತ್ತಿರುವಾಗ ಶಫಾಲಿ ಅವರ ಈ ಅಮೋಘ ಫಾರ್ಮ್​ ತಂಡಕ್ಕೆ ಆನೆಬಲ ತಂದುಕೊಟ್ಟಿದೆ. ಇನ್ನು ಈ ಪಂದ್ಯದಲ್ಲಿ 46 ಎಸೆತಗಳನ್ನು ಎದುರಿಸಿದ ಶಫಾಲಿ 12 ಬೌಂಡರಿ ಹಾಗೂ 1 ಸಿಕ್ಸರ್ ಕೂಡ ಬಾರಿಸಿದರು. ಮಾತ್ರವಲ್ಲದೆ ಸ್ಮೃತಿ ಜೊತೆಗೂಡಿ ಮೊದಲ ವಿಕೆಟ್​ಗೆ 162 ರನ್​ಗಳ ದಾಖಲೆಯ ಜೊತೆಯಾಟ ಕಟ್ಟಿದರು.

Source link

Leave a Reply

Your email address will not be published. Required fields are marked *