
ಐಪಿಎಲ್ಗಾಗಿ (IPL) ಕಾಯುವಿಕೆಗೆ ಅಂತ್ಯ ಹಾಡುವ ಸಮಯ ಬಂದಿದೆ. ಮುಂದಿನ ವಾರದಿಂದ ಕ್ರಿಕೆಟ್ ಅಂಗಳದಲ್ಲಿ ಅಭಿಮಾನಿಗಳ ಗದ್ದಲ ಜೋರಾಗಲಿದೆ. ದೇಶ- ವಿದೇಶದ ಸ್ಟಾರ್ ಆಟಗಾರರು ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಅಬ್ಬರಿಸಲು ಸಿದ್ಧರಾಗಿದ್ದಾರೆ. ಐಪಿಎಲ್ ಎಂದರೆ ನಮಗೆಲ್ಲ ನೆನಪಾಗುವುದು ಬ್ಯಾಟರ್ಗಳ ಅಬ್ಬರ, ಬೌಲರ್ಗಳ ದಯಾನೀಯ ಸ್ಥಿತಿ. ಏಕದಿನ ಹಾಗೂ ಟೆಸ್ಟ್ ಮಾದರಿಯಲ್ಲಿ ಸಾಮಾನ್ಯವಾಗಿದ್ದ ಶತಕಗಳು ಇದೀಗ ಟಿ20 ಮಾದರಿಯಲ್ಲೂ ಸರ್ವೆ ಸಾಮಾನ್ಯವಾಗಿವೆ. ಅದರಲ್ಲೂ ಕೆಲವೇ ಕೆಲವು ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ಬ್ಯಾಟ್ಸ್ಮನ್ಗಳು ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದಾರೆ. ಆದಾಗ್ಯೂ ಈ ಹೊಡಿಬಡಿ ಆಟದಲ್ಲೂ ನಿಧಾನಗತಿಯ ಬ್ಯಾಟಿಂಗ್ ಮಾಡಿ ಶತಕ ಬಾರಿಸಿದ ಆಟಗಾರರಿದ್ದಾರೆ. ಅವರಲ್ಲಿ ಟಾಪ್ 5 ರ ಪಟ್ಟಿಯಲ್ಲಿ ಯಾರ್ಯಾರಿದ್ದಾರೆ ನೋಡಿ.
ಐಪಿಎಲ್ನ 5 ನಿಧಾನಗತಿಯ ಶತಕ
ಐಪಿಎಲ್ನಲ್ಲಿ ನಿಧಾನಗತಿಯ ಶತಕದ ದಾಖಲೆಯನ್ನು ಮನೀಷ್ ಪಾಂಡೆ ಮತ್ತು ವಿರಾಟ್ ಕೊಹ್ಲಿ ಜಂಟಿಯಾಗಿ ಹೊಂದಿದ್ದಾರೆ. ವಿರಾಟ್ ಕೊಹ್ಲಿ 2024 ರ ಐಪಿಎಲ್ನಲ್ಲಿ 67 ಎಸೆತಗಳಲ್ಲಿ ಶತಕ ಬಾರಿಸಿದ್ದರು. ವಿರಾಟ್ ಈ ಶತಕವನ್ನು ರಾಜಸ್ಥಾನ ರಾಯಲ್ಸ್ ವಿರುದ್ಧ ಕಲೆಹಾಕಿದ್ದರು. ಹಾಗೆಯೇ 2009 ರ ಐಪಿಎಲ್ನಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ ಕನ್ನಡಿಗ ಮನೀಷ್ ಪಾಂಡೆ ಆರ್ಸಿಬಿ ಪರ 67 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಆದಾಗ್ಯೂ ಈ ಶತಕದ ಮೂಲಕ ಐಪಿಎಲ್ನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಆಟಗಾರನೆಂಬ ದಾಖಲೆಯನ್ನು ಮನೀಷ್ ಬರೆದಿದ್ದರು. ಈ ಇಬ್ಬರೂ ಬ್ಯಾಟ್ಸ್ಮನ್ಗಳು ತಮ್ಮ ಸ್ಫೋಟಕ ಬ್ಯಾಟಿಂಗ್ಗೆ ಹೆಸರುವಾಸಿಯಾಗಿದ್ದಾರೆಯಾದರೂ ಅವರ ಹೆಸರಿನಲ್ಲಿ ಈ ಅನಗತ್ಯ ದಾಖಲೆ ಇದೆ.
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕೂಡ ಈ ಪಟ್ಟಿಯಲ್ಲಿದ್ದು, 2011 ರ ಐಪಿಎಲ್ನಲ್ಲಿ ಕೊಚ್ಚಿ ಟಸ್ಕರ್ಸ್ ಕೇರಳ ವಿರುದ್ಧ 66 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಮತ್ತೊಬ್ಬ ಕನ್ನಡಿಗ ಕೆಎಲ್ ರಾಹುಲ್ 2016 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 64 ಎಸೆತಗಳಲ್ಲಿ ಶತಕ ಪೂರೈಸಿದರೆ, ಅಂಬಟಿ ರಾಯುಡು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 62 ಎಸೆತಗಳಲ್ಲಿ ಶತಕ ಬಾರಿಸಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
- ವಿರಾಟ್ ಕೊಹ್ಲಿ , ಐಪಿಎಲ್ 2024, 67 ಚೆಂಡುಗಳು
- ಮನೀಶ್ ಪಾಂಡೆ, ಐಪಿಎಲ್ 2009, 67 ಚೆಂಡುಗಳು
- ಸಚಿನ್ ತೆಂಡೂಲ್ಕರ್, ಐಪಿಎಲ್ 2011, 66 ಚೆಂಡುಗಳು
- ಕೆಎಲ್ ರಾಹುಲ್, ಐಪಿಎಲ್ 2019, 64 ಎಸೆತಗಳು
- ಅಂಬಟಿ ರಾಯುಡು, ಐಪಿಎಲ್ 2018, 62 ಎಸೆತಗಳು
ಐಪಿಎಲ್ ಇತಿಹಾಸದಲ್ಲಿ ಒಂದೇ ಒಂದು ಸಿಕ್ಸ್ ಹೊಡೆಯದ ಐವರು ಆಟಗಾರರಿವರು
ಅತಿ ವೇಗದ ಶತಕದ ದಾಖಲೆ ಯಾರ ಹೆಸರಿನಲ್ಲಿದೆ?
ಏತನ್ಮಧ್ಯೆ, ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗದ ಶತಕದ ದಾಖಲೆ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಗೇಲ್ ಕೇವಲ 30 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಅಂದಿನಿಂದ, ಈ ದಾಖಲೆ ಹಾಗೆಯೇ ಉಳಿದಿದೆ. ಆದ್ದರಿಂದ, ಈ 19 ನೇ ಆವೃತ್ತಿಯಲ್ಲಿ ಯಾರು ಗೇಲ್ ಅವರ ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿಯಾಗುತ್ತಾರೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ