ಕ್ರಿಕೆಟ್ನಲ್ಲಿ “ಕ್ಯಾಚಸ್ ವಿನ್ ಮ್ಯಾಚಸ್” (Catches win matches) ಎಂಬ ಮಾತಿದೆ. ಈ ಮಾತನ್ನು ಏಪ್ರಿಲ್ 25 ರಂದು ನಡೆದ ಎರಡು ಪಂದ್ಯಗಳು ಅಕ್ಷರಶಃ ನಿಜವಾಗಿಸಿದ್ದಾರೆ. ಈ ಎರಡೂ ಮ್ಯಾಚ್ಗಳಲ್ಲಿ ಫೀಲ್ಡರ್ಗಳು ಮಾಡಿದ ಎಡವಟ್ಟುಗಳಿಂದ ಪಂದ್ಯದ ಫಲಿತಾಂಶ ಬದಲಾಗಿದೆ. ಹೀಗೆ ಇಡೀ ಪಂದ್ಯದ ಗತಿಯನ್ನೇ ಬದಲಿಸಿದ ಆ “ಕೈಚೆಲ್ಲಿದ ಕ್ಯಾಚ್ಗಳ” ಸಂಪೂರ್ಣ ವಿವರ ಇಲ್ಲಿದೆ.
ಡೆಲ್ಲಿ ಕ್ಯಾಪಿಟಲ್ಸ್ (DC) ಮತ್ತು ಪಂಜಾಬ್ ಕಿಂಗ್ಸ್ (PBKS) ಪಂದ್ಯ:
ಈ ಪಂದ್ಯದಲ್ಲಿ ಪಂಜಾಬ್ ತಂಡ 265 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟಿ ವಿಶ್ವ ದಾಖಲೆ ನಿರ್ಮಿಸಿತು. ಇದಕ್ಕೆ ಪಂಜಾಬ್ ಬ್ಯಾಟರ್ಗಳಿಗೆ ಸಿಕ್ಕ ಜೀವದಾನಗಳೇ ಮುಖ್ಯ ಕಾರಣ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬೃಹತ್ ಮೊತ್ತ ಪೇರಿಸಲು ಪಂಜಾಬ್ ಕಿಂಗ್ಸ್ ಆಟಗಾರರು ಕೈಚೆಲ್ಲಿದ ಕ್ಯಾಚ್ಗಳು ಕೂಡ ಕಾರಣ ಎಂಬುದು ಇಲ್ಲಿ ಉಲ್ಲೇಖಾರ್ಹ. ಆ ಕ್ಯಾಚ್ಗಳೆಂದರೆ…
- KL ರಾಹುಲ್ ಅವರ ಕ್ಯಾಚ್ಗಳು: ಕೆ.ಎಲ್. ರಾಹುಲ್ 12 ರನ್ ಗಳಿಸಿದ್ದಾಗ ಶಶಾಂಕ್ ಸಿಂಗ್ (2.2 ಓವರ್) ಮತ್ತು ನಂತರ ವಿಜಯಕುಮಾರ್ ವೈಶಾಕ್ (9.2 ಓವರ್) ಕ್ಯಾಚ್ ಕೈಬಿಟ್ಟಿದ್ದರು. ಇದರ ಲಾಭ ಪಡೆದ ರಾಹುಲ್ ಅಜೇಯ 152 ರನ್* ಸಿಡಿಸಿದರು.
- ಶ್ರೇಯಸ್ ಅಯ್ಯರ್ ಜೀವದಾನ: ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಅವರಿಗೆ ಕರುಣ್ ನಾಯರ್ ಮೂರು ಎಸೆತಗಳ ಅಂತರದಲ್ಲಿ ಎರಡು ಬಾರಿ (14.6 ಮತ್ತು 15.2 ಓವರ್) ಜೀವದಾನ ನೀಡಿದರು.
- ಬೌಂಡರಿ ಲೈನ್ ಎಡವಟ್ಟು: ಮಾರ್ಕಸ್ ಸ್ಟೋಯಿನಿಸ್ (16.6 ಓವರ್) ಮತ್ತು ಮುಕೇಶ್ ಕುಮಾರ್ (8.1 ಓವರ್) ಇಬ್ಬರೂ ಕ್ಯಾಚ್ ಹಿಡಿದರೂ, ನಿಯಂತ್ರಣ ತಪ್ಪಿ ಬೌಂಡರಿ ಕುಶನ್ ಮುಟ್ಟಿದ್ದರಿಂದ ಅವು ಸಿಕ್ಸರ್ ಆಗಿ ಪರಿವರ್ತನೆಯಾದವು.
- ಇತರ ಮಿಸ್ಗಳು: ಆಖಿಬ್ ನಬಿ ಮತ್ತು ಲುಂಗಿ ಎನ್ಗಿಡಿ ಕೂಡ ಕ್ಯಾಚ್ಗಳನ್ನು ಹಿಡಿಯುವಲ್ಲಿ ವಿಫಲರಾಗಿದ್ದರು.
ರಾಜಸ್ಥಾನ್ ರಾಯಲ್ಸ್ (RR) ಮತ್ತು ಸನ್ ರೈಸರ್ಸ್ ಹೈದರಾಬಾದ್ (SRH) ಪಂದ್ಯ:
ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಕಳಪೆ ಫೀಲ್ಡಿಂಗ್ ಪ್ರದರ್ಶಿಸಿದರೆ, ದ್ವಿತೀಯ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಕಳಪೆ ಫೀಲ್ಡಿಂಗ್ಗೆ ಭಾರೀ ಬೆಲೆ ತೆರಬೇಕಾಯಿತು.
- ಅಭಿಷೇಕ್ ಶರ್ಮಾ ಕ್ಯಾಚ್: ರವೀಂದ್ರ ಜಡೇಜಾ ಮತ್ತು ಶಿಮ್ರಾನ್ ಹೆಟ್ಮೆಯರ್ ಇಬ್ಬರೂ ಅಭಿಷೇಕ್ ಶರ್ಮಾ ಅವರ ಕ್ಯಾಚ್ ಪಡೆಯುವಲ್ಲಿ ವಿಫಲರಾಗಿದ್ದರು.
- ಧ್ರುವ್ ಜುರೆಲ್ ಕ್ಯಾಚ್: ಸಾಕಿಬ್ ಹುಸೇನ್ ಅವರು ಧ್ರುವ್ ಜುರೆಲ್ ಅವರು ನೀಡಿ ಕ್ಯಾಚ್ ಅನ್ನು ಎರಡು ಬಾರಿ (5.6 ಮತ್ತು 8.5 ಓವರ್) ಕೈಬಿಟ್ಟಿದ್ದರು.
- ಇತರೆ ಮಿಸ್ಗಳು: ಟ್ರಾವಿಸ್ ಹೆಡ್, ರಿಯಾನ್ ಪರಾಗ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಅವರಿಗೂ ಎದುರಾಳಿ ತಂಡದ ಫೀಲ್ಡಿಂಗ್ ಮಿಸ್ಗಳಿಂದಾಗಿ ಹೊಸ ಜೀವದಾನಗಳು ಸಿಕ್ಕವು.
ಇದನ್ನೂ ಓದಿ: ಬರೋಬ್ಬರಿ 986 ರನ್ಗಳು… ಐಪಿಎಲ್ನಲ್ಲಿ ಹೊಸ ಇತಿಹಾಸ
ಒಟ್ಟಾರೆಯಾಗಿ, ಈ ದಿನವನ್ನು “ಕೈಚೆಲ್ಲಿದ ಅವಕಾಶಗಳ ದಿನ” (A Day of Missed Chances) ಎಂದು ಕರೆಯಲಾಗಿದೆ, ಏಕೆಂದರೆ ಈ ತಪ್ಪುಗಳೇ ಪಂದ್ಯದ ಫಲಿತಾಂಶವನ್ನು ಬದಲಿಸಿದವು.
ಕೈಚೆಲ್ಲಿದ ಕ್ಯಾಚ್ಗಳ ಸಂಕ್ಷಿಪ್ತ ವಿವರಗಳು:
- 2.2 ಓವರ್– ಶಶಾಂಕ್ ಸಿಂಗ್ ಕೈಯಿಂದ ಕೆ.ಎಲ್. ರಾಹುಲ್ ಅವರ ಕ್ಯಾಚ್ ಮಿಸ್.
- 9.2 ಓವರ್– ವಿಜಯಕುಮಾರ್ ವೈಶಾಕ್ ಕೈಯಿಂದ ಕೆ.ಎಲ್. ರಾಹುಲ್ ಅವರ ಕ್ಯಾಚ್ ಮಿಸ್.
- 16.6 ಓವರ್– ಮಾರ್ಕಸ್ ಸ್ಟೊಯಿನಿಸ್ ಕ್ಯಾಚ್ ಹಿಡಿದರೂ, ಬೌಂಡರಿ ಲೈನ್ ಟಚ್ ಆಗಿ ಅದು ಸಿಕ್ಸ್ ಆಯಿತು.
- 1.3 ಓವರ್– ಆಖಿಬ್ ನಬಿ ಕೈಯಿಂದ ಪ್ರಭ್ಸಿಮ್ರಾನ್ ಸಿಂಗ್ ಅವರ ಕ್ಯಾಚ್ ಮಿಸ್.
- 2.3 ಓವರ್– ಲುಂಗಿ ಎನ್ಗಿಡಿ ಕ್ಯಾಚ್ ಹಿಡಿಯುವಲ್ಲಿ ವಿಫಲರಾದರು.
- 8.1 ಓವರ್– ಮುಕೇಶ್ ಕುಮಾರ್ ಕ್ಯಾಚ್ ಹಿಡಿದರೂ, ಬೌಂಡರಿ ಕುಶನ್ ಅನ್ನು ಮುಟ್ಟಿದರು.
- 14.6 ಓವರ್– ಕರುಣ್ ನಾಯರ್ ಕೈಯಿಂದ ಶ್ರೇಯಸ್ ಅಯ್ಯರ್ ಅವರ ಕ್ಯಾಚ್ ಮಿಸ್.
- 15.2 ಓವರ್– ಕರುಣ್ ನಾಯರ್ ಕೈಯಿಂದ ಶ್ರೇಯಸ್ ಅಯ್ಯರ್ ಅವರ ಕ್ಯಾಚ್ ಮಿಸ್.
- 4.1 ಓವರ್– ಅನಿಖೇತ್ ವರ್ಮಾ ಕೈಯಿಂದ ವೈಭವ್ ಸೂರ್ಯವಂಶಿ ಅವರ ಕ್ಯಾಚ್ ಮಿಸ್.
- 5.6 ಓವರ್– ಸಾಕಿಬ್ ಹುಸೇನ್ ಕೈಯಿಂದ ಧ್ರುವ್ ಜುರೆಲ್ ಅವರ ಕ್ಯಾಚ್ ಮಿಸ್.
- 8.5 ಓವರ್– ಸಾಕಿಬ್ ಹುಸೇನ್ ಕೈಯಿಂದ ಧ್ರುವ್ ಜುರೆಲ್ ಅವರ ಕ್ಯಾಚ್ ಮಿಸ್.
- 15.2 ಓವರ್– ಪ್ರಫುಲ್ ಹಿಂಗೆ ಕೈಯಿಂದ ರಿಯಾನ್ ಪರಾಗ್ ಅವರ ಕ್ಯಾಚ್ ಮಿಸ್.
- 0.1 ಓವರ್– ಧ್ರುವ್ ಜುರೆಲ್ ಕೈಯಿಂದ ಟ್ರಾವಿಸ್ ಹೆಡ್ ಅವರ ಕ್ಯಾಚ್ ಮಿಸ್.
- 3.2 ಓವರ್– ಅಭಿಷೇಕ್ ಶರ್ಮಾ ಅವರ ಕ್ಯಾಚ್ ಪಡೆಯುವಲ್ಲಿ ಶಿಮ್ರಾನ್ ಹೆಟ್ಮೆಯರ್ ವಿಫಲರಾದರು.
- 4.6 ಓವರ್– ರವೀಂದ್ರ ಜಡೇಜಾ ಕೈಯಿಂದ ಅಭಿಷೇಕ್ ಶರ್ಮಾ ಅವರ ಕ್ಯಾಚ್ ಮಿಸ್.
- 14.1 ಓವರ್– ಬ್ರಿಜೇಶ್ ಶರ್ಮಾ ಕೈಯಿಂದ ನಿತೀಶ್ ಕುಮಾರ್ ರೆಡ್ಡಿ ಅವರ ಕ್ಯಾಚ್ ಮಿಸ್.
