IPL 2026: ಕರ್ನಾಟಕದ ಈ 2 ನಗರಗಳಲ್ಲಿ ಐಪಿಎಲ್ ಫ್ಯಾನ್ ಪಾರ್ಕ್ ಸ್ಥಾಪನೆ; ಯಾವಾಗ, ಎಲ್ಲಿ?

IPL 2026: ಕರ್ನಾಟಕದ ಈ 2 ನಗರಗಳಲ್ಲಿ ಐಪಿಎಲ್ ಫ್ಯಾನ್ ಪಾರ್ಕ್ ಸ್ಥಾಪನೆ; ಯಾವಾಗ, ಎಲ್ಲಿ?

2026 ರ ಐಪಿಎಲ್ (IPL 2026) ಇದೇ ಮಾರ್ಚ್​ 28 ರಿಂದ ಆರಂಭವಾಗುತ್ತಿದೆ. ಈ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ನೋಡಲು ಅಭಿಮಾನಿಗಳು ಕೂಡ ಕಾದು ಕುಳಿತಿದ್ದಾರೆ. ಆದಾಗ್ಯೂ ಎಲ್ಲಾ ಅಭಿಮಾನಿಗಳಿಗೂ ಕ್ರೀಡಾಂಗಣಕ್ಕೆ ಹೋಗಿ ಪಂದ್ಯಗಳನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಟಿಕೆಟ್ ಸಿಗದೆ ಇರುವುದು ಅಥವಾ ಟಿಕೆಟ್ ಬೆಲೆ ಅಧಿಕವಾಗಿರುವುದು ಸೇರಿದಂತೆ ಇದಕ್ಕೆ ನಾನಾ ಕಾರಣಗಳಿರುತ್ತವೆ. ಅಂತಹ ಅಭಿಮಾನಿಗಳು ನಿರಾಶೆಗೊಳ್ಳದಂತೆ ನೋಡಿಕೊಳ್ಳುವ ಸಲುವಾಗಿ ಬಿಸಿಸಿಐ ದೇಶದ ನಾನಾ ನಗರಗಳಲ್ಲಿ ಐಪಿಎಲ್ ಫ್ಯಾನ್ ಪಾರ್ಕ್​ಗಳನ್ನು (IPL 2026 Fan Parks) ಸ್ಥಾಪಿಸಲಿದೆ. ಬಿಸಿಸಿಐ ಒಟ್ಟು 11 ರಾಜ್ಯಗಳ 15 ನಗರಗಳನ್ನು ಈ ಫ್ಯಾನ್ ಪಾರ್ಕ್​ ಸ್ಥಾಪನೆಗೆ ಆಯ್ಕೆ ಮಾಡಿಕೊಂಡಿದೆ.

ಫ್ಯಾನ್ ಪಾರ್ಕ್​ ವೇಳಾಪಟ್ಟಿ:

  • ಮೊದಲ ವಾರ: ಮಾರ್ಚ್ 28, 29, 2026.
  • ಎರಡನೇ ವಾರ: ಏಪ್ರಿಲ್ 4, 5, 2026.
  • ಮೂರನೇ ವಾರ: ಏಪ್ರಿಲ್ 11, 12, 2026.

ಯಾವ ನಗರಗಳಲ್ಲಿ ಎಲ್ಲಿ?

ಮೊದಲ ವಾರ (ಮಾರ್ಚ್ 28-29):

ರೋಹ್ಟಕ್ (ಹರಿಯಾಣ – ಛೋಟು ರಾಮ್ ಪಾಲಿಟೆಕ್ನಿಕ್ ಮೈದಾನ), ಭೋಪಾಲ್ (ಮಧ್ಯಪ್ರದೇಶ – ಸರ್ಕಾರಿ ಎಂವಿಎಂ ಕಾಲೇಜು ಮೈದಾನ), ನಾಗ್ಪುರ (ಮಹಾರಾಷ್ಟ್ರ – ಮೆಕೋಸಾಬಾಗ್ ಮೆಥೋಡಿಸ್ಟ್ ಹೈಸ್ಕೂಲ್ ಆಟದ ಮೈದಾನ), ತುಮಕೂರು (ಕರ್ನಾಟಕ – ಸರ್ಕಾರಿ ಜೂನಿಯರ್ ಕಾಲೇಜು ಮೈದಾನ), ಕೃಷ್ಣನಗರ (ಪಶ್ಚಿಮ ಬಂಗಾಳ – ಡಿಎಲ್ ರಾಯ್ ಕ್ರೀಡಾಂಗಣ).

ಎರಡನೇ ವಾರ (ಏಪ್ರಿಲ್ 4-5):

ಮಥುರಾ (ಉತ್ತರ ಪ್ರದೇಶ – ಅಮರನಾಥ ವಿದ್ಯಾ ಆಶ್ರಮ), ಜೋಧಪುರ (ರಾಜಸ್ಥಾನ – ಬರ್ಕತುಲ್ಲಾ ಖಾನ್ ಕ್ರೀಡಾಂಗಣ), ನಿಜಾಮಾಬಾದ್ (ತೆಲಂಗಾಣ – ಮಹಿಳಾ ಶಿಕ್ಷಣ ಸಂಸ್ಥೆಗಳ ಮೈದಾನ), ಮೈಸೂರು (ಕರ್ನಾಟಕ – ಎಸ್‌ಬಿಆರ್‌ಆರ್ ಮಹಾಜನ್ ಪ್ರಥಮ ದರ್ಜೆ ಕಾಲೇಜು), ಭುವನೇಶ್ವರ (ಒಡಿಶಾ – ಕಿಟ್ಸ್ ವಿಶ್ವವಿದ್ಯಾಲಯ ಕ್ರೀಡಾಂಗಣ).

ಮೂರನೇ ವಾರ (ಏಪ್ರಿಲ್ 11-12):

ಮೀರತ್ (ಉತ್ತರ ಪ್ರದೇಶ – ಭೈನಸಾಲಿ ಮೈದಾನ), ನಾಡಿಯಾಡ್ (ಗುಜರಾತ್ – ರಾಧೆ ಫಾರ್ಮ್), ರತ್ನಗಿರಿ (ಮಹಾರಾಷ್ಟ್ರ – ಲೇಟ್ ಪ್ರಮೋದ್ ಮಹಾಜನ್ ಕ್ರೀಡಾ ಸಂಕೀರ್ಣ), ಕೊಯಮತ್ತೂರು (ತಮಿಳುನಾಡು – ಹಿಂದೂಸ್ತಾನ್ ಕಾಲೇಜ್ ಆಫ್ ಆರ್ಟ್ಸ್ ಅಂಡ್ ಸೈನ್ಸ್), ರೂರ್ಕೆಲಾ (ಒಡಿಶಾ – ಸೆಕ್ಟರ್ 17 ಗ್ರೌಂಡ್).

ಫ್ಯಾನ್ ಪಾರ್ಕ್​ ವಿಶೇಷತೆಗಳು

ಫ್ಯಾನ್ ಪಾರ್ಕ್ ಕೇವಲ ಪಂದ್ಯ ನೋಡುವುದಕ್ಕಲ್ಲ, ಇದು ಒಂದು ಮಿನಿ ಕಾರ್ನೀವಲ್‌ನಂತಿರಲಿದೆ. ನೇರ ಪಂದ್ಯ ವೀಕ್ಷಣೆಯ ಜೊತೆಗೆ, ಸಂಗೀತ, ಮನರಂಜನಾ ಕಾರ್ಯಕ್ರಮಗಳು ಮತ್ತು ಫುಡ್ ಕೋರ್ಟ್‌ಗಳು ಇರುತ್ತವೆ. ವಿಶೇಷವಾಗಿ ಮಕ್ಕಳಿಗಾಗಿ, ವಿಶೇಷ ಆಟದ ಪ್ರದೇಶಗಳು, ವರ್ಚುವಲ್ ಬ್ಯಾಟಿಂಗ್ ಅನುಭವ, ಬೌಲಿಂಗ್ ನೆಟ್‌ಗಳು ಮತ್ತು ಫೇಸ್ ಪೇಂಟಿಂಗ್ ಕೂಡ ಇರುತ್ತದೆ.

2015 ರಲ್ಲಿ ಪ್ರಾರಂಭ

ಬಿಸಿಸಿಐ ಈ ಫ್ಯಾನ್ ಪಾರ್ಕ್‌ಗಳ ಸಂಪ್ರದಾಯವನ್ನು 2015 ರಲ್ಲಿ ಪ್ರಾರಂಭಿಸಿತು. ಕ್ರೀಡಾಂಗಣಗಳಿಂದ ದೂರವಿರುವ ನಗರಗಳಲ್ಲಿ ಐಪಿಎಲ್ ಕ್ರೇಜ್ ಅನ್ನು ಹೆಚ್ಚಿಸುವಲ್ಲಿ ಅವು ಪ್ರಮುಖ ಪಾತ್ರ ವಹಿಸಿವೆ. 2026 ರ ಋತುವಿನಲ್ಲಿಯೂ ಅದೇ ಉತ್ಸಾಹವನ್ನು ಮುಂದುವರೆಸುತ್ತಾ, ಹೆಚ್ಚು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಅಭಿಮಾನಿಗಳಿಗಾಗಿ ಈ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *