ಐಪಿಎಲ್ 2026 (IPL 2026) ರ 54ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ (RCB vs MI) ನಡುವಿನ ಸೇಡಿನ ಸಮರಕ್ಕೆ ವೇದಿಕೆ ಸಜ್ಜಾಗಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ಎರಡೂ ತಂಡಗಳು ಪಾಯಿಂಟ್ ಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ಬಲಪಡಿಸಿಕೊಳ್ಳಲು ಪ್ರಯತ್ನಿಸಲಿವೆ. ಈ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅತ್ಯುತ್ತಮ ಫಾರ್ಮ್‌ನಲ್ಲಿತ್ತು. ಆದರೆ ಕಳೆದೆರಡು ಪಂದ್ಯಗಳಲ್ಲಿ ತಂಡ ಲಯ ಕಳೆದುಕೊಂಡಿದೆ. ಹೀಗಾಗಿ ಮುಂಬೈ ವಿರುದ್ಧ ಸತತ ಎರಡನೇ ಪಂದ್ಯವನ್ನು ಗೆದ್ದು ಮತ್ತೆ ಗೆಲುವಿನ ಲಯಕ್ಕೆ ಮರಳಲು ಆರ್ಸಿಬಿ ಪ್ರಯತ್ನಿಸಲಿದೆ. ಇತ್ತ ಮುಂಬೈ ಇಂಡಿಯನ್ಸ್ ಕೂಡ ರೋಹಿತ್ ಶರ್ಮಾ ಆಗಮನದಿಂದ ಬಲಿಷ್ಠವಾಗಿ ಕಾಣುತ್ತಿದ್ದು, ಗೆಲುವಿನ ಸರಣಿಯನ್ನು ಮುಂದುವರೆಸುವ ಇರಾದೆಯಲ್ಲಿದೆ.
2ನೇ ತವರು ನೆಲದಲ್ಲಿ ಆರ್ಸಿಬಿ ಕಣಕ್ಕೆ
ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ಎರಡು ಮೈದಾನಗಳನ್ನು ತನ್ನ ತವರು ಮೈದಾನಗಳಾಗಿ ಆಯ್ಕೆ ಮಾಡಿಕೊಂಡಿದೆ. ಅದರಂತೆ ತನ್ನ ತವರು ನೆಲದ ಪಂದ್ಯಗಳಲ್ಲಿ ಮೊದಲ 5 ಪಂದ್ಯಗಳನ್ನು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಿದ್ದ ಆರ್ಸಿಬಿ, ಇದೀಗ ತನ್ನ ಎರಡನೇ ತವರು ನೆಲವಾದ ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಉಳಿದಿರುವ ಎರಡು ಪಂದ್ಯಗಳನ್ನು ಆಡಲಿದೆ.
ಆರ್ಸಿಬಿ ಹಾಗೂ ಮುಂಬೈ ನಡುವಿನ ಐಪಿಎಲ್ 2026 ರ 54ನೇ ಪಂದ್ಯ ಯಾವಾಗ ನಡೆಯಲಿದೆ?
ಆರ್ಸಿಬಿ ಹಾಗೂ ಮುಂಬೈ ನಡುವಿನ ಐಪಿಎಲ್ 2026 ರ 54ನೇ ಪಂದ್ಯ ಮೇ 10 ರ ಶನಿವಾರದಂದು ನಡೆಯಲಿದೆ.
ಆರ್ಸಿಬಿ ಹಾಗೂ ಮುಂಬೈ ನಡುವಿನ ಐಪಿಎಲ್ 2026 ರ 54ನೇ ಪಂದ್ಯ ಎಲ್ಲಿ ನಡೆಯಲಿದೆ?
ಆರ್ಸಿಬಿ ಹಾಗೂ ಮುಂಬೈ ನಡುವಿನ ಐಪಿಎಲ್ 2026 ರ 54ನೇ ಪಂದ್ಯ ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ.
ಆರ್ಸಿಬಿ ಹಾಗೂ ಮುಂಬೈ ನಡುವಿನ ಐಪಿಎಲ್ 2026 ರ 54ನೇ ಪಂದ್ಯ ಎಷ್ಟು ಗಂಟೆಗೆ ಆರಂಭವಾಗಲಿದೆ?
ಆರ್ಸಿಬಿ ಹಾಗೂ ಮುಂಬೈ ನಡುವಿನ ಐಪಿಎಲ್ 2026 ರ 54ನೇ ಪಂದ್ಯ ಸಂಜೆ 7:30 ಕ್ಕೆ ಪ್ರಾರಂಭವಾಗಲಿದೆ. ರಾಯ್‌ಪುರ ಪಿಚ್ ಬ್ಯಾಟಿಂಗ್ ಸ್ನೇಹಿ ಎಂದು ಪರಿಗಣಿಸಲಾಗಿದ್ದು, ಹೆಚ್ಚಿನ ಸ್ಕೋರ್ ದಾಖಲಾಗುವ ಸಾಧ್ಯತೆ ಇದೆ. ಆದಾಗ್ಯೂ, ಪಂದ್ಯ ಮುಂದುವರೆದಂತೆ, ಸ್ಪಿನ್ನರ್ಗಳು ಸಹ ಪ್ರಮುಖ ಪಾತ್ರ ವಹಿಸಬಹುದು.
ಆರ್ಸಿಬಿ ಹಾಗೂ ಮುಂಬೈ ನಡುವಿನ ಐಪಿಎಲ್ 2026 ರ 54ನೇ ಪಂದ್ಯವನ್ನು ಎಲ್ಲಿ ವೀಕ್ಷಿಸಬೇಕು?
ಆರ್ಸಿಬಿ ಹಾಗೂ ಮುಂಬೈ ನಡುವಿನ ಐಪಿಎಲ್ 2026 ರ 54ನೇ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಹಾಗೆಯೇ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಪಂದ್ಯವನ್ನು ವೀಕ್ಷಿಸಲು ಇಷ್ಟಪಡುವ ವೀಕ್ಷಕರಿಗೆ, ಜಿಯೋ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಲಭ್ಯವಿರುತ್ತದೆ.
GT vs RCB: ಅಂಪೈರ್ಯಿಂದ ಆರ್ಸಿಬಿಗೆ ಮಹಾಮೋಸ; ಸಿಡಿದೆದ್ದ ಕೊಹ್ಲಿ
ಉಭಯ ತಂಡಗಳು
ರಾಯಲ್ ಚಾಲೆಂಜರ್ಸ್ ಬೆಂಗಳೂರು: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ಟಿಮ್ ಡೇವಿಡ್, ಜಾಕೋಬ್ ಬೆಥೆಲ್, ರೊಮಾರಿಯೊ ಶೆಫರ್ಡ್, ಜೋಶ್ ಹ್ಯಾಜಲ್‌ವುಡ್, ನುವಾನ್ ತುಷಾರ, ದೇವದತ್ ಪಡಿಕ್ಕಲ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ರಸಿಖ್ ದಾರ್, ಭುವನೇಶ್ವರ್ ಕುಮಾರ್, ಜೋರ್ಡಾನ್ ಕಾಕ್ಸ್, ವೆಂಕಟ್ ಸಿಂಗ್, ಸುಯಶ್ ಲ್ಯೂನ್ ಕಾಕ್ಸ್, ವೆಂಕಟ್ ಸಿಂಗ್ ಶರ್ಮಾ, ಭುವನೇಶ್ವರ್ ಕುಮಾರ್ ಕಾನಿಷ್ಕ್ ಚೌಹಾಣ್, ಅಭಿನಂದನ್ ಸಿಂಗ್, ಮಂಗೇಶ್ ಯಾದವ್, ಫಿಲ್ ಸಾಲ್ಟ್, ಸಾತ್ವಿಕ್ ದೇಸ್ವಾಲ್, ವಿಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ.
ಮುಂಬೈ ಇಂಡಿಯನ್ಸ್: ಹಾರ್ದಿಕ್ ಪಾಂಡ್ಯ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಡ್ಯಾನಿಶ್ ಮಾಲೆವಾರ್, ರಾಬಿನ್ ಮಿಂಜ್ (ವಿಕೆಟ್ ಕೀಪರ್), ರಿಯಾನ್ ರಿಕೆಲ್ಟನ್ (ವಿಕೆಟ್ ಕೀಪರ್), ಶೆರ್ಫೇನ್ ರುದರ್‌ಫೋರ್ಡ್, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಅಥರ್ವ ಅಂಕೋಲೆಕರ್, ರಾಜ್ ಬಾವಾ, ಕಾರ್ಬಿನ್ ಬಾಷ್, ವಿಲ್ ಜ್ಯಾಕ್ಸ್, ಮಯಾಂಕ್ ರಾವತ್, ನಮನ್ ಧೀರ್, ಮಿಚೆಲ್ ಸ್ಯಾಂಟ್ನರ್, ಶಾರ್ದೂಲ್ ಠಾಕೂರ್, ತಿಲಕ್ ವರ್ಮಾ, ಅಶ್ವಿನಿ ಕುಮಾರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ, ದೀಪಕ್ ಚಾಹರ್, ಎಎಮ್ ಗಜನ್‌ಫರ್, ಮಯಾಂಕ್ ಮಾರ್ಕಾಂಡೆ, ಮೊಹಮ್ಮದ್ ಶರ್ಮಾರ್, ಮೊಹಮ್ಮದ್ ಇಜ್ಮಾರ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 4:05 pm, Sat, 9 May 26
