IPL 2026: ಸೋತ RCBಗೆ ನಾಳೆ ಮತ್ತೆ ಪಂದ್ಯ..!

IPL 2026: ಸೋತ RCBಗೆ ನಾಳೆ ಮತ್ತೆ ಪಂದ್ಯ..!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 19ನೇ ಸೀಸನ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈವರೆಗೆ ಮೂರು ಪಂದ್ಯಗಳನ್ನಾಡಿದೆ. ಮೊದಲ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ 6 ವಿಕೆಟ್​ಗಳ ಜಯ ಸಾಧಿಸಿದ್ದ ಆರ್​ಸಿಬಿ, ದ್ವಿತೀಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 43 ರನ್​ಗಳಿಂದ ಬಗ್ಗು ಬಡಿದಿದ್ದರು. ಆದರೆ ಮೂರನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಗ್ಗರಿಸಿದೆ.

ಗುವಾಹಟಿಯಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ 20 ಓವರ್​ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 201 ರನ್​ಗಳು. 202 ರನ್​ಗಳ ಗುರಿಯನ್ನು ರಾಜಸ್ಥಾನ್ ರಾಯಲ್ಸ್ ತಂಡ 18 ಓವರ್​ಗಳಲ್ಲಿ ಚೇಸ್ ಮಾಡಿ 6 ವಿಕೆಟ್​ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಆರ್​ಆರ್ ಪಡೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಇತ್ತ ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದೀಗ 4ನೇ ಪಂದ್ಯಕ್ಕಾಗಿ ಸಜ್ಜಾಗಬೇಕಿದೆ. ಅದು ಕೂಡ ಒಂದೇ ದಿನದ ಅಂತರದಲ್ಲಿ. ಅಂದರೆ ಆರ್​ಸಿಬಿ ತಂಡವು ತನ್ನ ಮುಂದಿನ ಪಂದ್ಯವನ್ನು ನಾಳೆ (ಏ.12) ಆಡಲಿದೆ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾನುವಾರ ನಡೆಯಲಿರುವ ಈ ಪಂದ್ಯಕ್ಕಾಗಿ ಶನಿವಾರ ಆರ್​ಸಿಬಿ ತಂಡ ಮುಂಬೈಗೆ ಬಂದಿಳಿಯಲಿದೆ. ಅಂದರೆ ಇಲ್ಲಿ ಆರ್​ಸಿಬಿ ತಂಡಕ್ಕೆ ಅಭ್ಯಾಸ ನಡೆಸಲು ಕೇವಲ ಒಂದು ದಿನ ಮಾತ್ರ ಸಿಗಲಿದೆ.

ಇತ್ತ ಮೊದಲ ವಾರದಲ್ಲಿ ಕೇವಲ 2 ಪಂದ್ಯಗಳನ್ನು ಮಾತ್ರ ಆಡಿದ್ದ ಆರ್​ಸಿಬಿ ಇದೀಗ ಬ್ಯಾಕ್ ಟು ಬ್ಯಾಕ್ ಎರಡು ಮ್ಯಾಚ್​ಗಳನ್ನಾಡಬೇಕಿದೆ. ಅದರಂತೆ ಈಗಾಗಲೇ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯ ಮುಗಿಸಿ ಆರ್​ಸಿಬಿ ಪಡೆ ಮುಂಬೈಗೆ ಪ್ರಯಾಣಿಸಿದ್ದು, ನಾಳೆ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.

ಅತ್ತ ಮುಂಬೈ ಇಂಡಿಯನ್ಸ್ ತಂಡವು ಕಳೆದ ಮ್ಯಾಚ್​ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 27 ರನ್​ಗಳಿಂದ ಸೋಲನುಭವಿಸಿತ್ತು. ಇದೀಗ ಆರ್​ಸಿಬಿ ತಂಡ ಕೂಡ ಆರ್​ಆರ್ ವಿರುದ್ಧವೇ ಸೋತು ಮುಂದಿನ ಮ್ಯಾಚ್​ಗಾಗಿ ಸಜ್ಜಾಗಿದೆ. ಅಂದರೆ ಇಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೊನೆಯ ಪಂದ್ಯಗಳಲ್ಲಿ ಸೋತಿರುವ ಎರಡು ಟೀಮ್​ಗಳು ಮುಖಾಮುಖಿಯಾಗುತ್ತಿರುವುದು ವಿಶೇಷ.

ಹೀಗಾಗಿ ಈ ಪಂದ್ಯದ ಮೂಲಕ ಒಂದು ತಂಡವು ಗೆಲುವಿನ ಲಯಕ್ಕೆ ಮರಳಲಿದೆ. ಆ ತಂಡ ಮುಂಬೈ ಇಂಡಿಯನ್ಸ್ ಆಗಿರಲಿದೆಯಾ ಅಥವಾ ಆರ್​ಸಿಬಿ ಆಗಲಿದೆಯಾ ಎಂಬುದು ಖಚಿತವಾಗಲು ನಾಳೆಯ ಪಂದ್ಯ ಮುಗಿಯುವವರೆಗೆ ಕಾಯಲೇಬೇಕು.

ಮುಂಬೈ ಇಂಡಿಯನ್ಸ್ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ರಯಾನ್ ರಿಕಲ್ಟನ್, ರಾಬಿನ್ ಮಿಂಝ್, ರಾಜ್ ಬಾವಾ, ರಘು ಶರ್ಮಾ, ಮಿಚೆಲ್ ಸ್ಯಾಂಟ್ನರ್, ಕಾರ್ಬಿನ್ ಬಾಷ್, ನಮನ್ ಧೀರ್, ಜಸ್​ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್, ಅಲ್ಲಾ ಗಫನ್ಝರ್, ಅಶ್ವನಿ ಕುಮಾರ್, ದೀಪಕ್ ಚಹರ್‌, ವಿಲ್ ಜ್ಯಾಕ್ಸ್, ಶೆರ್ಫೇನ್ ರದರ್​ಫೋರ್ಡ್​,​  ಮಯಾಂಕ್ ಮಾರ್ಕಂಡೆ, ಶಾರ್ದೂಲ್ ಠಾಕೂರ್, ಕ್ವಿಂಟನ್ ಡಿ ಕಾಕ್, ಡ್ಯಾನಿಶ್ ಮಾಲೆವಾರ್, ಮೊಹಮ್ಮದ್ ಇಝಾರ್, ಅಥರ್ವ ಅಂಕೋಲೆಕರ್, ಮಯಾಂಕ್ ರಾವತ್.

ಇದನ್ನೂ ಓದಿ: ಬೌಲರ್ ಯಾರೇ ಇರಲಿ… RCB ಪಂದ್ಯದ ಬಳಿಕ ವೈಭವ್ ಎಚ್ಚರಿಕೆ..!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಜೇಕಬ್ ಬೆಥೆಲ್, ಜೋಶ್ ಹೇಝಲ್​ವುಡ್, ಯಶ್ ದಯಾಲ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ಯಶ್ ದಯಾಳ್, ರಾಸಿಖ್ ಸಲಾಂ, ವೆಂಕಟೇಶ್ ಅಯ್ಯರ್, ಅಭಿನಂದನ್ ಸಿಂಗ್, ಸುಯಶ್ ಶರ್ಮಾ, ಜೇಕಬ್ ಡಫಿ, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ಜೋರ್ಡನ್ ಕಾಕ್ಸ್, ವಿಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾನ್.

 

Source link

Leave a Reply

Your email address will not be published. Required fields are marked *