IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 50ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ಹಾಗೂ ರಾಯಲ್ ಚಾಲೆಂಜರ್ಸ್ (RCB) ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ. ಗುರುವಾರ (ಮೇ 6) ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಆರ್ಸಿಬಿ ತಂಡ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ರೂಪಿಸಲಿದೆ. ಇದಕ್ಕಾಗಿ ಕಳೆದ ಬಾರಿ ಕಣಕ್ಕಿಳಿದಂತೆ 6+2+4 ಸಂಯೋಜನೆಯನ್ನು ರೂಪಿಸಲಿದ್ದಾರೆ.
ಅದರಂತೆ ಆರ್ಸಿಬಿ ಪರ ಪೂರ್ಣ ಪ್ರಮಾಣದ ಬ್ಯಾಟರ್ಗಳಾಗಿ ವಿರಾಟ್ ಕೊಹ್ಲಿ, ಜೇಕಬ್ ಬೆಥೆಲ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಜಿತೇಶ್ ಶರ್ಮಾ ಹಾಗೂ ಟಿಮ್ ಡೇವಿಡ್ ಕಾಣಿಸಿಕೊಳ್ಳಲಿದ್ದಾರೆ.
ಇನ್ನು ಆಲ್ರೌಂಡರ್ಗಳಾಗಿ ಕೃನಾಲ್ ಪಾಂಡ್ಯ ಹಾಗೂ ರೊಮಾರಿಯೊ ಶೆಫರ್ಡ್ ಕಣಕ್ಕಿಳಿಯಲಿದ್ದಾರೆ. ಹಾಗೆಯೇ ಬೌಲರ್ಗಳಾಗಿ ಆರ್ಸಿಬಿ ಪರ ಜೋಶ್ ಹೇಝಲ್ವುಡ್, ಭುವನೇಶ್ವರ್ ಕುಮಾರ್, ರಾಸಿಖ್ ದಾರ್ ಕಾಣಿಸಿಕೊಳ್ಳುವುದು ಖಚಿತ. ಇವರೊಂದಿಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಸ್ಪಿನ್ನರ್ ಸುಯಶ್ ಶರ್ಮಾ ಕೂಡ ಸೇರ್ಪಡೆಯಾಗಲಿದ್ದಾರೆ.
ಅಂದರೆ ಆರುಬ್ಯಾಟರ್ಗಳು, ಇಬ್ಬರು ಆಲ್ರೌಂಡರ್ಗಳು ಮತ್ತು ನಾಲ್ವರು ಬೌಲರ್ಗಳೊಂದಿಗೆ ಆರ್ಸಿಬಿ ತಂಡವು ತನ್ನ ಪ್ಲೇಯಿಂಗ್ ಇಲೆವೆನ್ ರೂಪಿಸಲಿದ್ದಾರೆ. ಅದರಂತೆ ಆರ್ಸಿಬಿ ತಂಡದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ…
- ವಿರಾಟ್ ಕೊಹ್ಲಿ
- ಜೇಕಬ್ ಬೆಥೆಲ್
- ದೇವದತ್ ಪಡಿಕ್ಕಲ್
- ರಜತ್ ಪಾಟಿದಾರ್ (ನಾಯಕ)
- ಟಿಮ್ ಡೇವಿಡ್
- ಜಿತೇಶ್ ಶರ್ಮಾ
- ರೊಮಾರಿಯೊ ಶೆಫರ್ಡ್
- ಕೃನಾಲ್ ಪಾಂಡ್ಯ
- ಜೋಶ್ ಹೇಝಲ್ವುಡ್
- ಭುವನೇಶ್ವರ್ ಕುಮಾರ್
- ರಾಸಿಖ್ ದಾರ್
- ಸುಯಶ್ ಶರ್ಮಾ (ಇಂಪ್ಯಾಕ್ಟ್ ಪ್ಲೇಯರ್).
ಕಾಕ್ಸ್ಗೆ ಸಿಗಲಿದೆಯಾ ಚಾನ್ಸ್?
ಫಿಲ್ ಸಾಲ್ಟ್ ಅನುಪಸ್ಥಿತಿಯಲ್ಲಿ ಕಳೆದ ಮೂರು ಮ್ಯಾಚ್ಗಳಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ಜೇಕಬ್ ಬೆಥೆಲ್ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಒಂದು ವೇಳೆ ಬೆಥೆಲ್ ಅವರನ್ನು ಆಡುವ ಬಳಗದಿಂದ ಕೈ ಬಿಟ್ಟರೆ, ಇಂಗ್ಲೆಂಡ್ನ ಮತ್ತೋರ್ವ ಸ್ಫೋಟಕ ದಾಂಡಿಗ ಜೋರ್ಡನ್ ಕಾಕ್ಸ್ಗೆ ಚಾನ್ಸ್ ಸಿಗಬಹುದು. ಇದರ ಹೊರತಾಗಿ ಆರ್ಸಿಬಿ ತಂಡವು ತನ್ನ ಪ್ಲೇಯಿಂಗ್ ಇಲೆವೆನ್ನಲ್ಲಿ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಯಿಲ್ಲ.
ಇದನ್ನೂ ಓದಿ: IPL 2026: ಐಪಿಎಲ್ ಪ್ಲೇಆಫ್ ವೇಳಾಪಟ್ಟಿ ಪ್ರಕಟ