‘ಸು ಫ್ರಮ್ ಸೋ’ ಸಿನಿಮಾ ನಿರ್ದೇಶನ ಮಾಡಿ ಅಪಾರ ಜನಪ್ರಿಯತೆ ಪಡೆದ ನಿರ್ದೇಶಕ ಜೆಪಿ ತುಮಿನಾಡು ಅವರು ವಿವಾಹ ಆಗಿದ್ದಾರೆ. ಅವರ ಹೊಸ ಜೀವನಕ್ಕೆ ಎಲ್ಲರೂ ಶುಭಾಶಯ ತಿಳಿಸುತ್ತಾ ಇದ್ದಾರೆ.
ಜೆಪಿ ವಿವಾಹ ಆದ ಹುಡುಗಿಯ ಹೆಸರು ರಶ್ಮಿಕಾ. ಸೋಶಿಯಲ್ ಮೀಡಿಯಾದಲ್ಲಿ ಮದುವೆಯ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ‘ಸು ಫ್ರಮ್ ಸೋ’ ಬಳಿಕ ಒಂದು ಬ್ರೇಕ್ನಲ್ಲಿ ಇದ್ದ ಅವರು ಈಗ ಮದುವೆ ಆಗುವ ನಿರ್ಧಾರ ಮಾಡಿದ್ದಾರೆ.
ಜೆಪಿ ಹಾಗೂ ರಶ್ಮಿಕಾ ಫೋಟೋಗಳು ಗಮನ ಸೆಳೆದಿವೆ. ಆಪ್ತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಈ ಮದುವೆ ನಡೆದಿದೆ. ವಿವಾಹ ಮಂಟಪ ಸಾಕಷ್ಟು ಅದ್ದೂರಿಯಾಗಿ ಕಾಣಿಸಿದೆ. ಜೆಪಿ ಹೊಸ ಬಾಳಿಗೆ ಎಲ್ಲರ ಹಾರೈಕೆ ಸಿಕ್ಕಿದೆ.
ಜೆಪಿ ತುಮಿನಾಡು ಅವರು ಕರಾವಳಿ ಪ್ರತಿಭೆ. ಸಿನಿಮಾ ರಂಗಕ್ಕೆ ಕಾಲಿಡುವ ಮೊದಲು 14 ವರ್ಷ ಅವರು ರಂಗಭೂಮಿಯಲ್ಲಿ ಶ್ರಮಿಸಿದರು. ಅನೇಕ ನಾಟಕಗಳ ರಚನೆ, ನಿರ್ದೇಶನ ಹಾಗೂ ನಟನೆ ಮಾಡಿದರು. ಜೆಪಿ ಅವರು ಹೆಚ್ಚಾಗಿ ಹಾಸ್ಯ ನಾಟಕಗಳನ್ನೇ ಬರೆಯುತ್ತಿದ್ದರು.
‘ಸು ಫ್ರಮ್ ಸೋ’ ಸಿನಿಮಾ ಕೂಡ ಹಾಸ್ಯದ ಶೈಲಿಯಲ್ಲೇ ಮೂಡಿ ಬಂತು. ಈ ಕಾರಣಕ್ಕೆ ಸಿನಿಮಾ 100 ಕೋಟಿ ರೂಪಾಯಿ ಗಳಿಸಿತು. ರಾಜ್ ಬಿ ಶೆಟ್ಟಿ ಅವರು ಸಿನಿಮಾದಲ್ಲಿ ಗುರೂಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.




