ಇಸ್ರೋದಲ್ಲಿ ಶಿಕ್ಷಕರ ಹುದ್ದೆಗಳ ಭರ್ಜರಿ ನೇಮಕಾತಿImage Credit source: Getty Images
ದೇಶದ ಪ್ರತಿಷ್ಠಿತ ಸಂಸ್ಥೆಯಾದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಅಡಿಯಲ್ಲಿ ಕಾರ್ಯನಿರ್ವಹಿಸುವ ತಿರುಪತಿ ಜಿಲ್ಲೆಯ ಶ್ರೀಹರಿಕೋಟಾದಲ್ಲಿರುವ ‘ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ’ (SDSC SHAR) ಖಾಲಿ ಇರುವ ವಿವಿಧ ಬೋಧನಾ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಇಸ್ರೋ ಸಂಸ್ಥೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಲು ಬಯಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಒಟ್ಟು ಹುದ್ದೆಗಳ ವಿವರಗಳು:
ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಸ್ಪೇಸ್ ಸೆಂಟ್ರಲ್ ಸ್ಕೂಲ್‌ಗಳಲ್ಲಿ ಖಾಲಿ ಇರುವ ಒಟ್ಟು 10 ಬೋಧನಾ ಹುದ್ದೆಗಳನ್ನು ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಭರ್ತಿ ಮಾಡಲಾಗುತ್ತಿದೆ. ಹುದ್ದೆಗಳ ವಿವರ ಹೀಗಿದೆ:
- ತರಬೇತಿ ಪಡೆದ ಪದವೀಧರ ಶಿಕ್ಷಕರು (TGT): ಒಟ್ಟು 4 ಹುದ್ದೆಗಳು (ಗಣಿತ, ವಿಜ್ಞಾನ, ತೆಲುಗು ಮತ್ತು ವರ್ಕ್‌ಶಾಪ್ ಎಜುಕೇಶನ್ ವಿಭಾಗಗಳು).
- ಪ್ರಾಥಮಿಕ ಶಿಕ್ಷಕರು (PRT): ಒಟ್ಟು 6 ಹುದ್ದೆಗಳು.
ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Degree) ಅಥವಾ ನಾಲ್ಕು ವರ್ಷಗಳ ಇಂಟಿಗ್ರೇಟೆಡ್ ಪದವಿ ಪಡೆದಿರಬೇಕು. ಇದರೊಂದಿಗೆ ಬಿ.ಎಡ್ (B.Ed), ಡಿ.ಎಲ್.ಎಡ್ (D.El.Ed), ಬಿ.ಎಲ್.ಎಡ್ (B.El.Ed) ಅಥವಾ ವಿಶೇಷ ಶಿಕ್ಷಣದಲ್ಲಿ ಡಿಪ್ಲೊಮಾ ಅರ್ಹತೆ ಹೊಂದಿರಬೇಕು. ಜೊತೆಗೆ, ಕೇಂದ್ರ ಸರ್ಕಾರದ CTET ಅಥವಾ ರಾಜ್ಯ ಸರ್ಕಾರಗಳ TET ಪರೀಕ್ಷೆಯಲ್ಲಿ ಕಡ್ಡಾಯವಾಗಿ ಉತ್ತೀರ್ಣರಾಗಿರಬೇಕು. ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 30 ವರ್ಷಗಳ ಒಳಗಿರಬೇಕು (ನಿಯಮಾನುಸಾರ ವಯೋಮಿತಿ ಸಡಲಿಕ್ಕೆ ಇರಲಿದೆ).
ಆಯ್ಕೆ ವಿಧಾನ ಮತ್ತು ಆಕರ್ಷಕ ವೇತನ ಶ್ರೇಣಿ:
ಅರ್ಹ ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆ (Written Test – CBT) ಮತ್ತು ಕೌಶಲ್ಯ ಪರೀಕ್ಷೆಯ (Skill Test) ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಈ ಹುದ್ದೆಗಳಿಗೆ ಆಯ್ಕೆಯಾಗುವ ಶಿಕ್ಷಕರಿಗೆ ಕೇಂದ್ರ ಸರ್ಕಾರದ ನಿಯಮಾವಳಿಗಳ ಪ್ರಕಾರ ಅತ್ಯುತ್ತಮ ವೇತನ ನೀಡಲಾಗುತ್ತದೆ:
- TGT ಹುದ್ದೆಗಳಿಗೆ: ತಿಂಗಳಿಗೆ ರೂ. 44,900 ರಿಂದ ರೂ. 1,44,400 ವರೆಗೆ ವೇತನ ಇರಲಿದೆ.
- PRT ಹುದ್ದೆಗಳಿಗೆ: ತಿಂಗಳಿಗೆ ರೂ. 35,400 ರಿಂದ ರೂ. 1,12,400 ವರೆಗೆ ವೇತನ ಶ್ರೇಣಿ ಸಿಗಲಿದೆ.
ಇದನ್ನೂ ಓದಿ: ಲಿಖಿತ ಪರೀಕ್ಷೆಯಿಲ್ಲದೆ ಸಿಗಲಿದೆ ತಿಂಗಳಿಗೆ 2.25 ಲಕ್ಷ ರೂ. ಸಂಬಳದ ಉದ್ಯೋಗ! ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿ ಸಲ್ಲಿಸುವ ವಿಧಾನ ಮತ್ತು ಪ್ರಮುಖ ದಿನಾಂಕಗಳು:
ಆಸಕ್ತ ಅಭ್ಯರ್ಥಿಗಳು ಇಸ್ರೋ ಶಾರ್ (SDSC SHAR) ಅಧಿಕೃತ ವೆಬ್‌ಸೈಟ್ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ನಿಗದಿಪಡಿಸಿದ ಅರ್ಜಿ ಶುಲ್ಕದೊಂದಿಗೆ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗುತ್ತದೆ.
- ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭದ ದಿನಾಂಕ: 16 ಜೂನ್ 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07 ಜುಲೈ 2026 (ರಾತ್ರಿ 11:59 ರವರೆಗೆ)
ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಈ ಬಾಹ್ಯಾಕಾಶ ಸಂಸ್ಥೆಯಲ್ಲಿ ಗೌರವಾನ್ವಿತ ಬೋಧನಾ ವೃತ್ತಿ ಆರಂಭಿಸಲು ಇದು ಸುವರ್ಣಾವಕಾಶವಾಗಿದ್ದು, ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಸನಿಹದವರೆಗೂ ಕಾಯದೆ ತಕ್ಷಣವೇ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
