ದಳಪತಿ ವಿಜಯ್ ಪುತ್ರ ಜೇಸನ್ ಸಂಜಯ್Image Credit source: Pinterest
ತಮಿಳು ಚಿತ್ರರಂಗದ ‘ದಳಪತಿ‘ ಎಂದೇ ಖ್ಯಾತರಾದ ನಟ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ಈಗ ಸುದ್ದಿಯಲ್ಲಿದ್ದಾರೆ. ಸ್ಟಾರ್ ನಟನ ಮಗ ಅಂದಮೇಲೆ ತಂದೆಯಂತೆ ನಾಯಕ ನಟನಾಗುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ, ಜೇಸನ್ ಆರಿಸಿಕೊಂಡ ಹಾದಿಯೇ ಬೇರೆ. ಸಿನಿಮಾ ನಿರ್ದೇಶನದ ಕನಸು ಹೊತ್ತಿರುವ ಜೇಸನ್ ಸಂಜಯ್ ಅವರ ಶಿಕ್ಷಣ ಮತ್ತು ವೃತ್ತಿ ಜೀವನದ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ತಂದೆ ರಾಜಕೀಯಕ್ಕೆ, ಮಗ ನಿರ್ದೇಶನಕ್ಕೆ:
ನಟ ವಿಜಯ್ ಇತ್ತೀಚೆಗೆ ತಮ್ಮದೇ ಆದ ‘ತಮಿಳಗ ವೆಟ್ರಿ ಕಳಗಂ’ (TVK) ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ರಾಜಕೀಯದಲ್ಲಿ ಸಕ್ರಿಯರಾಗಲು ವಿಜಯ್ ಸಿನಿಮಾದಿಂದ ದೂರ ಸರಿಯುತ್ತಿರುವ ಬೆನ್ನಲ್ಲೇ, ಅವರ ಪುತ್ರ ಜೇಸನ್ ಸಿನಿಮಾ ರಂಗಕ್ಕೆ ತಾಂತ್ರಿಕವಾಗಿ ಎಂಟ್ರಿ ನೀಡುತ್ತಿರುವುದು ವಿಶೇಷ.
ಜೇಸನ್ ಸಂಜಯ್ ಅವರ ಶಿಕ್ಷಣ (Education):
ಜೇಸನ್ ಸಂಜಯ್ ಅವರು ಸಿನಿಮಾ ರಂಗಕ್ಕೆ ಬರುವ ಮೊದಲು ಅದಕ್ಕೆ ಬೇಕಾದ ಅಡಿಪಾಯವನ್ನು ಗಟ್ಟಿಯಾಗಿ ಹಾಕಿಕೊಂಡಿದ್ದಾರೆ. ಇವರು ತಮ್ಮ ಶಾಲಾ ಶಿಕ್ಷಣವನ್ನು ಚೆನ್ನೈನ ‘ಅಮೇರಿಕನ್ ಇಂಟರ್ನ್ಯಾಷನಲ್ ಸ್ಕೂಲ್’ನಲ್ಲಿ ಪೂರೈಸಿದರು. ಬಳಿಕ ಚಲನಚಿತ್ರ ನಿರ್ಮಾಣದ (Film Production) ಬಗ್ಗೆ ಆಸಕ್ತಿ ಹೊಂದಿದ್ದ ಇವರು ಕೆನಡಾದ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಫಿಲ್ಮ್ ಮೇಕಿಂಗ್ ಕೋರ್ಸ್ ಮುಗಿಸಿದ್ದಾರೆ. ಇದಾದ ಬಳಿಕ ಲಂಡನ್‌ನಲ್ಲಿ ಚಿತ್ರಕಥೆ (Screenwriting) ಮತ್ತು ನಿರ್ದೇಶನದ ಬಗ್ಗೆ ಉನ್ನತ ವ್ಯಾಸಂಗ ಮಾಡಿದ್ದು, ಅಂತರಾಷ್ಟ್ರೀಯ ಮಟ್ಟದ ಸಿನಿಮಾ ತಾಂತ್ರಿಕತೆಯನ್ನು ಕಲಿತಿದ್ದಾರೆ.
ಇದನ್ನೂ ಓದಿ: ನಟ ವಿಜಯ್ ಪುತ್ರಿ ದಿವ್ಯಾ ಸಾಶಾ ಬಗ್ಗೆ ನಿಮಗೆಷ್ಟು ಗೊತ್ತು? ಶೈಕ್ಷಣಿಕ ಹಿನ್ನೆಲೆಯ ಬಗ್ಗೆ ಇಲ್ಲಿದೆ ಮಾಹಿತಿ
ಜೇಸನ್ ಸಂಜಯ್ ಅವರ ವೃತ್ತಿಜೀವನದ ಹಾದಿ (Career Path):
ನಟನೆಯ ಬದಲಿಗೆ ಕ್ಯಾಮೆರಾ ಹಿಂದೆ ನಿಂತು ಕಥೆ ಹೇಳುವುದು ಜೇಸನ್ ಅವರಿಗೆ ಇಷ್ಟದ ಕೆಲಸ. ವಿದೇಶದಲ್ಲಿ ವ್ಯಾಸಂಗ ಮಾಡುವಾಗಲೇ ಜೇಸನ್ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದಾರೆ. ಅವರು ನಿರ್ದೇಶಿಸಿದ ‘ಪುಲ್ ದಿ ಟ್ರಿಗರ್’ (Pull the Trigger) ಕಿರುಚಿತ್ರವು ಅವರ ಕೌಶಲ್ಯಕ್ಕೆ ಸಾಕ್ಷಿಯಾಗಿದೆ. ಇದಲ್ಲದೇ ತಮಿಳು ಚಿತ್ರರಂಗದ ಖ್ಯಾತ ನಿರ್ಮಾಣ ಸಂಸ್ಥೆ ‘ಲೈಕಾ ಪ್ರೊಡಕ್ಷನ್ಸ್’ (Lyca Productions) ಜೊತೆ ಜೇಸನ್ ಕೈಜೋಡಿಸಿದ್ದಾರೆ. ಇವರ ಚೊಚ್ಚಲ ಸಿನಿಮಾ ನಿರ್ದೇಶನಕ್ಕೆ ಈ ಸಂಸ್ಥೆ ಬಂಡವಾಳ ಹೂಡುತ್ತಿದ್ದು, ಇದು ಒಬ್ಬ ಯುವ ನಿರ್ದೇಶಕನಿಗೆ ಸಿಕ್ಕ ದೊಡ್ಡ ಮನ್ನಣೆಯಾಗಿದೆ.
ತಂದೆಯೊಂದಿಗಿನ ಸಂಪರ್ಕ ಕಡಿತ?
ವಿಜಯ್ ಮತ್ತು ಸಂಗೀತಾ ವಿಚ್ಛೇದನ ವಿಚಾರಣೆ ಸುದ್ದಿ ಹರಡುತ್ತಿರುವಾಗಲೇ ಜೇಸನ್ ಸಂಜಯ್ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ತಂದೆ ವಿಜಯ್ ಅವರನ್ನು ಅನ್‌ಫಾಲೋ ಮಾಡಿದ್ದಾರೆ . ಇದಲ್ಲದೇ ಜೇಸನ್ ತಮ್ಮ ಹೆಸರಿನಲ್ಲಿದ್ದ ತಂದೆಯ ಇನಿಶಿಯಲ್ (S) ಬದಲಿಗೆ ತಾಯಿಯ ಹೆಸರನ್ನು ಬಳಸಲು ಆರಂಭಿಸಿದ್ದಾರೆ ಎಂಬ ಚರ್ಚೆಗಳು ಸೋಷಿಯಲ್ ಮೀಡಿಯಾದಲ್ಲಿ ನಡೆದಿವೆ. ಇದು ತಂದೆ ಮತ್ತು ಮಗನ ನಡುವಿನ ಸಂಬಂಧ ಅಷ್ಟೊಂದು ಚೆನ್ನಾಗಿಲ್ಲ ಎಂಬುದಕ್ಕೆ ಸಾಕ್ಷಿ ಎಂಬಂತೆ ಬಿಂಬಿತವಾಗುತ್ತಿದೆ. ಮೂಲಗಳ ಪ್ರಕಾರ, ಜೇಸನ್ ಕಳೆದ ಕೆಲವು ಸಮಯದಿಂದ ತಮ್ಮ ತಂದೆಯೊಂದಿಗೆ ಅಷ್ಟಾಗಿ ಸಂಪರ್ಕದಲ್ಲಿಲ್ಲ ಮತ್ತು ಅವರು ತಮ್ಮ ತಾಯಿಯ ಬೆಂಬಲಕ್ಕೆ ನಿಂತಿದ್ದಾರೆ ಎನ್ನಲಾಗುತ್ತಿದೆ.
ಶಿಕ್ಷಣಕ್ಕೆಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 2:51 pm, Thu, 7 May 26