ಕೃಷ್ಣಾ ನದಿಯ ಒಳಹರಿವು ಮತ್ತೆ ಏರಿಕೆImage Credit source: tv9
ಬೆಂಗಳೂರು, ಜುಲೈ 22: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಳೆದ ಮೂರು-ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯ (Monsoon Rain) ಪರಿಣಾಮ ಕೃಷ್ಣಾ ನದಿಯ (Krishna River) ಒಳಹರಿವು ಮತ್ತೆ ಏರಿಕೆಯಾಗಿದೆ. ಒಂದೇ ದಿನದಲ್ಲಿ ಸುಮಾರು 80 ಸಾವಿರ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದ್ದು, ವೇದಗಂಗಾ ಹಾಗೂ ದೂದಗಂಗಾ ನದಿಗಳಲ್ಲೂ ನೀರಿನ ಹರಿವು ಹೆಚ್ಚಿದೆ. ಇದರ ಪರಿಣಾಮ ನಿಪ್ಪಾಣಿ ಹಾಗೂ ಚಿಕ್ಕೋಡಿ ತಾಲೂಕಿನ ಐದಕ್ಕೂ ಹೆಚ್ಚು ಸೇತುವೆಗಳು ಜಲಾವೃತಗೊಂಡಿದ್ದು, ಯಡೂರು-ಕಲ್ಲೋಳ ಸಂಪರ್ಕ ಸೇತುವೆ ಎರಡನೇ ಬಾರಿ ಮುಳುಗಡೆಯಾಗಿದೆ. ಇದರ ಪರಿಣಾಮ ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕೂ ಒಳಹರಿವು ಹೆಚ್ಚಾಗಿದ್ದು, ಜಲಾಶಯದ ನೀರಿನ ಮಟ್ಟದಲ್ಲಿ ಏರಿಕೆ ಕಂಡುಬಂದಿದೆ.
ಮತ್ತೊಂದೆಡೆ, ಜುಲೈ ತಿಂಗಳು ಅಂತ್ಯ ಬರುತ್ತಿದ್ದರೂ ಬೆಂಗಳೂರಿನ ಪ್ರಮುಖ ಕುಡಿಯುವ ನೀರಿನ ಮೂಲವಾದ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಇನ್ನೂ 100 ಅಡಿ ದಾಟದಿರುವುದು ಗಮನಾರ್ಹವಾಗಿದೆ.
ಆಲಮಟ್ಟಿ ಜಲಾಶಯ (ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ)
- ಗರಿಷ್ಠ ಮಟ್ಟ: 519.60 ಮೀಟರ್
- ಇಂದಿನ ನೀರಿನ ಮಟ್ಟ: 518.25 ಮೀಟರ್
- ಒಳಹರಿವು: 63,792 ಕ್ಯೂಸೆಕ್
- ಹೊರಹರಿವು: 25,000 ಕ್ಯೂಸೆಕ್
ಬಸವಸಾಗರ ಜಲಾಶಯ – ನಾರಾಯಣಪುರ (ಯಾದಗಿರಿ)
- ಗರಿಷ್ಠ ಮಟ್ಟ: 492.25 ಮೀಟರ್
- ಇಂದಿನ ನೀರಿನ ಮಟ್ಟ: 489.26 ಮೀಟರ್
- ಒಳಹರಿವು: 14,771 ಕ್ಯೂಸೆಕ್
- ಹೊರಹರಿವು: 6,000 ಕ್ಯೂಸೆಕ್
ಕೆಆರ್‌ಎಸ್ ಜಲಾಶಯ (ಮಂಡ್ಯ)
- ಗರಿಷ್ಠ ಮಟ್ಟ: 124.80 ಅಡಿ
- ಇಂದಿನ ನೀರಿನ ಮಟ್ಟ: 92.24 ಅಡಿ
- ಒಳಹರಿವು: 852 ಕ್ಯೂಸೆಕ್
- ಹೊರಹರಿವು: 1,801 ಕ್ಯೂಸೆಕ್
- ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ
- ಇಂದಿನ ನೀರಿನ ಸಂಗ್ರಹ: 17.317 ಟಿಎಂಸಿ
ಜುಲೈ ತಿಂಗಳ ಕೊನೆಯ ವಾರ ಸಮೀಪಿಸುತ್ತಿದ್ದರೂ, ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಪ್ರಮುಖ ಮೂಲವಾದ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಇನ್ನೂ 100 ಅಡಿ ಗಡಿ ದಾಟಿಲ್ಲ. ಒಳಹರಿವು ಕೂಡ ಸೀಮಿತ ಪ್ರಮಾಣದಲ್ಲೇ ಮುಂದುವರಿದಿರುವುದು ಆತಂಕ ಮೂಡಿಸಿದೆ.
ಕಬಿನಿ ಜಲಾಶಯ (ಮೈಸೂರು)
- ಇಂದಿನ ನೀರಿನ ಮಟ್ಟ: 72.65 ಅಡಿ
- ಕಳೆದ ವರ್ಷ ಇದೇ ದಿನ: 83.63 ಅಡಿ
- ಇಂದಿನ ನೀರಿನ ಸಂಗ್ರಹ: 13.01 ಟಿಎಂಸಿ
- ಕಳೆದ ವರ್ಷ ಇದೇ ದಿನ ನೀರಿನ ಸಂಗ್ರಹ: 19.27 ಟಿಎಂಸಿ
- ಇಂದಿನ ಒಳಹರಿವು: 3,132 ಕ್ಯೂಸೆಕ್
- ಕಳೆದ ವರ್ಷ: 11,746 ಕ್ಯೂಸೆಕ್
- ನದಿಗೆ ಬಿಡುಗಡೆ: 500 ಕ್ಯೂಸೆಕ್
- ಕಳೆದ ವರ್ಷ ಬಿಡುಗಡೆ: 12,000 ಕ್ಯೂಸೆಕ್
- ಕಳೆದ 24 ಗಂಟೆ ಮಳೆ: 5 ಮಿ.ಮೀ.
ಕಳೆದ ವರ್ಷಕ್ಕೆ ಹೋಲಿಸಿದರೆ, ಕಬಿನಿ ಜಲಾಶಯದ ನೀರಿನ ಮಟ್ಟ, ಸಂಗ್ರಹ ಹಾಗೂ ಒಳಹರಿವು ಈ ಬಾರಿ ಗಮನಾರ್ಹವಾಗಿ ಕಡಿಮೆಯಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 11:25 am, Wed, 22 July 26
