ಬೆಂಗಳೂರು, ಜು.8: ಪಶ್ಚಿಮ ಘಟ್ಟಗಳು ಸೇರಿದಂತೆ ರಾಜ್ಯದಾದ್ಯಂತ ಮುಂಗಾರು ಮಳೆ ತೀವ್ರಗೊಂಡಿರುವುದರಿಂದ ಕರ್ನಾಟಕದ ಪ್ರಮುಖ ಜಲಾಶಯಗಳಿಗೆ ನೀರಿನ ಒಳಹರಿವು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ವಿಜಯಪುರದ ಆಲಮಟ್ಟಿ ಡ್ಯಾಂಗೆ ಅತಿ ಹೆಚ್ಚು ನೀರು ಹರಿದುಬರುತ್ತಿದ್ದು, ಕೆಆರ್‌ಎಸ್, ತುಂಗಭದ್ರಾ ಮತ್ತು ಭದ್ರಾ ಜಲಾಶಯಗಳ ನೀರಿನ ಮಟ್ಟದಲ್ಲೂ ಗಣನೀಯ ಏರಿಕೆ ಕಂಡುಬಂದಿದೆ.
ಆಲಮಟ್ಟಿ ಜಲಾಶಯ (ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರ)
ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಕೃಷ್ಣಾ ನದಿಗೆ ನಿರ್ಮಿಸಲಾಗಿರುವ ಆಲಮಟ್ಟಿ ಡ್ಯಾಂಗೆ ಮಹಾರಾಷ್ಟ್ರ ಹಾಗೂ ಘಟ್ಟ ಪ್ರದೇಶದ ಮಳೆಯಿಂದಾಗಿ ಅತಿ ಭಾರಿ ಪ್ರಮಾಣದ ಒಳಹರಿವು ದಾಖಲಾಗಿದೆ.
ಗರಿಷ್ಠ ಮಟ್ಟ: 519.60 ಮೀಟರ್
ಇಂದಿನ ನೀರಿನ ಮಟ್ಟ: 510.68 ಮೀಟರ್
ಒಳಹರಿವು: 1,26,373 ಕ್ಯೂಸೆಕ್
ಹೊರಹರಿವು: 483 ಕ್ಯೂಸೆಕ್
ಕೆಆರ್‌ಎಸ್ ಜಲಾಶಯ (ಮಂಡ್ಯ)
ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಚುರುಕಾಗಿರುವುದರಿಂದ ಮಂಡ್ಯದ ಕೃಷ್ಣರಾಜಸಾಗರ (KRS) ಡ್ಯಾಂ ನೀರಿನ ಮಟ್ಟದಲ್ಲಿ ಸುಧಾರಣೆ ಕಂಡುಬಂದಿದೆ. ನಿನ್ನೆ ಬೆಳಗ್ಗೆ 5,734 ಕ್ಯೂಸೆಕ್ ಇದ್ದ ಒಳಹರಿವು ಇಂದು ಮತ್ತಷ್ಟು ಹೆಚ್ಚಾಗಿದೆ.
ಗರಿಷ್ಠ ಮಟ್ಟ: 124.80 ಅಡಿ
ಇಂದಿನ ನೀರಿನ ಮಟ್ಟ: 83.64 ಅಡಿ
ಒಳಹರಿವು: 7,531 ಕ್ಯೂಸೆಕ್
ಹೊರಹರಿವು: 790 ಕ್ಯೂಸೆಕ್
ತುಂಗಭದ್ರಾ ಜಲಾಶಯ (ಕೊಪ್ಪಳ)
ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ತೀವ್ರಗೊಂಡಿದೆ. ಕೇವಲ ಎರಡೇ ದಿನಗಳಲ್ಲಿ ಜಲಾಶಯಕ್ಕೆ 2 ಟಿಎಂಸಿಗೂ ಅಧಿಕ ನೀರು ಹರಿದುಬಂದಿದೆ. ಎರಡು ದಿನಗಳ ಹಿಂದೆ 9 ಟಿಎಂಸಿ ಇದ್ದ ನೀರಿನ ಸಂಗ್ರಹ ಈಗ 11.217 ಟಿಎಂಸಿಗೆ ಏರಿಕೆಯಾಗಿದೆ.
ಒಟ್ಟು ಸಂಗ್ರಹ ಸಾಮರ್ಥ್ಯ: 105 ಟಿಎಂಸಿ
ಇಂದಿನ ಸಂಗ್ರಹ: 11.217 ಟಿಎಂಸಿ
ಒಳಹರಿವು: 17,000ಕ್ಕೂ ಅಧಿಕ ಕ್ಯೂಸೆಕ್
ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ (ಪ್ರಸ್ತುತ ಸಂಗ್ರಹ: 12.485 ಟಿಎಂಸಿ)
ಭದ್ರಾ ಜಲಾಶಯ (ಶಿವಮೊಗ್ಗ)
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಭದ್ರಾ ಜಲಾಶಯಕ್ಕೂ ಸಹ ಮಲೆನಾಡು ಭಾಗದ ಮಳೆಯಿಂದಾಗಿ ಉತ್ತಮ ಒಳಹರಿವು ಇದೆ.
ಗರಿಷ್ಠ ಮಟ್ಟ: 186 ಅಡಿ
ಇಂದಿನ ನೀರಿನ ಮಟ್ಟ: 142.8 ಅಡಿ
ಒಳಹರಿವು: 17,818 ಕ್ಯೂಸೆಕ್
ಹೊರಹರಿವು: 214 ಕ್ಯೂಸೆಕ್
ಒಟ್ಟು ಸಾಮರ್ಥ್ಯ: 71.535 ಟಿಎಂಸಿ (ಪ್ರಸ್ತುತ ಸಂಗ್ರಹ: 28.752 ಟಿಎಂಸಿ)
ಇದನ್ನೂ ಓದಿ: ಭಯೋತ್ಪಾದನಾ ಪಿತೂರಿ ಜಾಲ: ಕರ್ನಾಟಕ ಸೇರಿ 9 ರಾಜ್ಯಗಳಲ್ಲಿ ಎನ್‌ಐಎ ಶೋಧ
ಹಾರಂಗಿ ಜಲಾಶಯ (ಕೊಡಗು)
ಕೊಡಗಿನ ಕುಶಾಲನಗರ ತಾಲೂಕಿನ ಹಾರಂಗಿ ಜಲಾಶಯವು ಸಹ ತುಂಬುವ ಹಂತದತ್ತ ಸಾಗುತ್ತಿದೆ.
ಗರಿಷ್ಠ ಮಟ್ಟ: 2859 ಅಡಿ
ಇಂದಿನ ನೀರಿನ ಮಟ್ಟ: 2838 ಅಡಿ
ಒಳಹರಿವು: 2,090 ಕ್ಯೂಸೆಕ್
ಹೊರಹರಿವು: 180 ಕ್ಯೂಸೆಕ್
ಬಸವಸಾಗರ ಜಲಾಶಯ (ನಾರಾಯಣಪುರ – ಯಾದಗಿರಿ)
ಯಾದಗಿರಿ ಜಿಲ್ಲೆಯ ಹೂವಿನಹಡಗಲಿ (ಹುಣಸಗಿ) ತಾಲೂಕಿನ ನಾರಾಯಣಪುರ ಬಳಿ ಇರುವ ಬಸವಸಾಗರ ಜಲಾಶಯದಲ್ಲಿ ಒಳಹರಿವು ಸದ್ಯಕ್ಕೆ ಕ್ಷೀಣಿಸಿದೆ.
ಗರಿಷ್ಠ ಮಟ್ಟ: 492.25 ಮೀಟರ್
ಇಂದಿನ ಮಟ್ಟ: 488.80 ಮೀಟರ್
ಒಳಹರಿವು: 00 ಕ್ಯೂಸೆಕ್
ಹೊರಹರಿವು: 767 ಕ್ಯೂಸೆಕ್
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
