ಬೆಂಗಳೂರು, ಜುಲೈ 20: ಕಳೆದ 3-4 ದಿನಗಳಿಂದ ಬೆಂಗಳೂರಲ್ಲಿ (Bengaluru) ಮಳೆಯಾಗುತ್ತಿದ್ದು, ಇಂದು ಕೂಡ ನಗರದ ವಿವಿಧೆಡೆ ಉತ್ತಮ ವರ್ಷಧಾರೆಯಾಗಿದೆ. ಬಸವನಗುಡಿ, ಶಾಂತಿನಗರ, ಟೌನ್ಹಾಲ್, ಮೆಜೆಸ್ಟಿಕ್, ಜಯನಗರ, ಮಲ್ಲೇಶ್ವರಂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಾಳಿ ಸಹಿತ ಉತ್ತಮ ಮಳೆಯಾಗಿದೆ. ಮಳೆ ಹಿನ್ನೆಲೆ ದ್ವಿಚಕ್ರ ವಾಹನಗಳ ಸವಾರರು ಮತ್ತು ಪಾದಚಾರಿಗಳು ಪರದಾಟ ನಡೆಸಿದ್ದು, ಬಸ್ ನಿಲ್ದಾಣ ಮತ್ತು ಅಂಗಡಿಮುಂಗಟ್ಟುಗಳ ಬಳಿ ನಿಂತು ಆಶ್ರಯ ಪಡೆದಿದ್ದಾರೆ.
ಅರ್ಧ ಕರ್ನಾಟಕಕ್ಕೆ ನಾಳೆ ಯೆಲ್ಲೋ ಅಲರ್ಟ್
#ಕರ್ನಾಟಕ ರಾಜ್ಯದ ಮುಂದಿನ 5 ದಿನಗಳ #ಮುಂಗಾರು ಮಳೆ #ಮುನ್ಸೂಚನೆ ನಕ್ಷೆಗಳು, ಜಿಲ್ಲಾವಾರು ಎಚ್ಚರಿಕೆಗಳೊಂದಿಗೆ.#KSNDMC #ಎಚ್ಚರಿಕೆವಹಿಸಿ
Next 5 days #SouthwestMonsoon #Rainfall #forecast maps for #Karnataka state with district-wise warnings.
Source: @Indiametdept @KarnatakaVarthe #KarnataKaRains pic.twitter.com/uSmdSqum4K— Karnataka State Natural Disaster Monitoring Centre (@KarnatakaSNDMC) July 20, 2026
ಈ ನಡುವೆ ಹವಾಮಾನ ಇಲಾಖೆ ನಾಳೆ ಅರ್ಧ ಕರ್ನಾಟಕಕ್ಕೆ ಯೆಲ್ಲೋ ಅಲರ್ಟ್ ಘೊಷಿಸಿದೆ. ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ, ರಾಯಚೂರು, ಬಾಗಲಕೋಟೆ, ಕೊಪ್ಪಳ, ಬೆಳಗಾವಿ, ಧಾರವಾಡ, ಗದಗ, ಉತ್ತರ ಕನ್ನಡ, ಹಾವೇರಿ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳ ವಿವಿಧೆಡೆ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ:
ಬೈಂದೂರಿನ ಕೆರ್ಗಾಳುವಿನಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಮಳೆ
District-wise realized #Maximum #rainfall (mm) & rainfall #distribution details during the last 24 hrs ending at 8.30 am on 20th July 2026.#KSNDMC @KarnatakaVarthe pic.twitter.com/YaBOPn4yTI
— Karnataka State Natural Disaster Monitoring Centre (@KarnatakaSNDMC) July 20, 2026
ಉಡುಪಿ ಜಿಲ್ಲೆಯ ಬೈಂದೂರಿನ ಕೆರ್ಗಾಳುವಿನಲ್ಲಿ ನಿನ್ನೆ ರಾಜ್ಯದಲ್ಲಿಯೇ ಅತಿ ಹೆಚ್ಚು ಅಂದರೆ 160.5 ಮಿ.ಮೀ. ಮಳೆಯಾಗಿದೆ. ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಆಗುಂಬೆ 1ರಲ್ಲಿ 155 ಮಿ.ಮೀ. , ದಕ್ಷಿಣ ಕನ್ನಡದ ಬೆಳ್ತಂಗಡಿಯ ಮುಂಡಾಜೆಯಲ್ಲಿ 98.5 ಮಿ.ಮೀ. , ಮಡಿಕೇರಿಯ ಪೆರಾಜೆ ಮತ್ತು ಯಾದಗಿರಿಯ ಸುರಪುರದ ಮಾಲಗತ್ತಿಯಲ್ಲಿ ತಲಾ 64.5 ಮಿ.ಮೀ. , ರಾಯಚೂರಿನ ಪೂರ್ತಿಪ್ಲಿಯಲ್ಲಿ 59 ಮಿ.ಮೀ., ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ದೊಡ್ಮನೆಯಲ್ಲಿ 57.5 ಮಿ.ಮೀ. ಮತ್ತು ಬೆಳಗಾವಿಯ ಬೆಳವಟ್ಟಿಯಲ್ಲಿ 56 ಮಿ.ಮೀ. ಮಳೆಯಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
