Lizard Repellent Plants: ಕೆಮಿಕಲ್‌ ಸ್ಪ್ರೇ ಬೇಕಿಲ್ಲ, ಈ ಗಿಡಗಳ ಸಹಾಯದಿಂದ ಹಲ್ಲಿಗಳ ಕಾಟದಿಂದ ಮುಕ್ತಿ ಪಡೆಯಬಹುದು – Kannada News | Plant these plants at home to get rid of lizards

ಮಳೆಗಾಲ ಆರಂಭವಾಗಿದೆ. ಈ ಸಮಯದಲ್ಲಿ ಹಾವು, ಸೊಳ್ಳೆ, ಕೀಟಗಳ ಹಾವಳಿ ಹೆಚ್ಚಿರುವಂತೆ ಹಲ್ಲಿಗಳ (lizards) ಕಾಟವೂ ಹೆಚ್ಚಿರುತ್ತವೆ. ಹೌದು ವಿಶೇಷವಾಗಿ ಬೇಸಿಗೆ ಮತ್ತು ಮಳೆಗಾಲದ ಸಮಯದಲ್ಲಿ ಮನೆಯ ಗೋಡೆಯ ಅಲ್ಲಲ್ಲಿ ಹಲ್ಲಿಗಳು ಕಾಣಿಸಿಕೊಳ್ಳುತ್ತವೆ. ಕೆಲವರು ಈ ಹಲ್ಲಿಗಳನ್ನು ಕಂಡರೆ ಭಯ ಪಟ್ಟರೆ, ಇನ್ನೂ ಕೆಲವರು ಈ ಜೀವಿ ಆಹಾರಕ್ಕೆ ಬಿದ್ದರೆ ಏನು ಮಾಡೋದು ಎಂಬ ಭಯದಲ್ಲಿರುತ್ತಾರೆ. ಅದಕ್ಕಾಗಿ ಕೆಮಿಕಲ್‌ ಉತ್ಪನ್ನಗಳನ್ನು ಬಳಸಿ ಹಲ್ಲಿಗಳನ್ನು ಸಾಯಿಸುತ್ತಾರೆ. ಈ ಕೆಮಿಕಲ್‌ ಉತ್ಪನ್ನಗಳನ್ನು ಬಳಸುವ ಮತ್ತು ಹಲ್ಲಿಗಳನ್ನು ಸಾಯಿಸುವ ಬದಲು ಯಾವುದೇ ಹಾನಿಯಾಗದಂತೆ ಈ ಕೆಲವೊಂದು ಗಿಡಗಳ ಸಹಾಯದಿಂದ ಹಲ್ಲಿಗಳ ಕಾಟದಿಂದ ಸುಲಭವಾಗಿ ಮುಕ್ತಿ ಪಡೆಯಬಹುದು. ಹಲ್ಲಿಗಳು ಮನೆಯೊಳಗೆ ಬರದಂತೆ ತಡೆಯಲು ಸಹಕಾರಿಯಾದ ಆ ಗಿಡಗಳು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಹಲ್ಲಿಗಳ ಕಾಟದಿಂದ ಮುಕ್ತಿ ಪಡೆಯಲು ಸಹಕಾರಿ ಈ ಗಿಡಗಳು:

ಲ್ಯಾವೆಂಡರ್:

ಲ್ಯಾವೆಂಡರ್ ಸಸ್ಯವು ಮನೆಯ ಅಂದವನ್ನು ಹೆಚ್ಚಿಸುವುದರ ಜೊತೆಗೆ ಹಲ್ಲಿಗಳನ್ನು ಓಡಿಸಲು ಸಹ ಸಹಕಾರಿಯಾಗಿದೆ. ಇದರ ಬಲವಾದ ವಾಸನೆಯನ್ನು ಕೀಟಗಳು ಮತ್ತು ಹಲ್ಲಿಗಳು ಇಷ್ಟಪಡುವುದಿಲ್ಲ. ಆದ್ದರಿಂದ ಈ ಗಿಡವನ್ನು ನೀವು ಮನೆಯಲ್ಲಿ ನೆಡಬಹುದು.

ಚೆಂಡು ಹೂವಿನ ಗಿಡ:

ಚೆಂಡು ಹೂವಿನ ಗಿಡವನ್ನು ನೆಡುವುದರಿಂದ ಮನೆಯ ಸೌಂದರ್ಯ ಹೆಚ್ಚುವುದಲ್ಲದೆ ಸೊಳ್ಳೆ, ಕೀಟ, ಹಾವು, ಹಲ್ಲಿ ಮನೆಯೊಳಗೆ ಪ್ರವೇಶಿಸುವುದನ್ನು ತಡೆಯುತ್ತದೆ. ಹೌದು ಅವುಗಳ ಬಲವಾದ ಪರಿಮಳವು ಹಲ್ಲಿಗಳನ್ನು ದೂರವಿಡಲು ಸಹಾಯ ಮಾಡುತ್ತದೆ. ಆದ್ದರಿಂದ ನೀವು ಈ ಗಿಡಗಳನ್ನು ಮುಖ್ಯ ಬಾಗಿಲು ಅಥವಾ ಕಿಟಕಿಗಳ ಬಳಿ ಪಾಟ್‌ನಲ್ಲಿ ಇಡಬಹುದು.

ರೋಸ್ಮರಿ ಗಿಡ:

ರೋಸ್ಮರಿ ಎಲೆಗಳಿಂದ ಹೊರಹೊಮ್ಮುವ ಬಲವಾದ ಸುವಾಸನೆಯನ್ನು ಕೀಟ, ಸೊಳ್ಳೆ, ಹಲ್ಲಿಗಳು ಇಷ್ಟಪಡುವುದಿಲ್ಲ. ಹಾಗಾಗಿ ಈ ಗಿಡಗಳನ್ನು ಮನೆಯಲ್ಲಿ ಇಡುವ ಮೂಲಕ ಯಾವುದೇ ರಾಸಾಯನಿಕ ಉತ್ಪನ್ನಗಳನ್ನು ಬಳಸದೆ ಹಲ್ಲಿಗಳನ್ನು ಮನೆಯಿಂದ ದೂರವಿಡಬಹುದು.  ಅಲ್ಲದೆ ಈ ಸಸ್ಯವು ಮನೆಯ ಸೌಂದರ್ಯವನ್ನು ಹೆಚ್ಚಿಸಲು ಸಹ ಸಹಕಾರಿ.

ಇದನ್ನೂ ಓದಿ: ಸಕಾರಾತ್ಮಕತೆಯನ್ನು ಹರಡುವ ಗಿಡಗಳನ್ನು ಪ್ರತಿ ಮನೆಯಲ್ಲೂ ನೆಡಬೇಕು

ಪುದೀನ ಮತ್ತು ತುಳಸಿ:

ಪುದೀನದ ಪರಿಮಳ ಮತ್ತು ತುಳಸಿಯ ನೈಸರ್ಗಿಕ ಸುವಾಸನೆಯು ಮನೆಯೊಳಗೆ ಹಲ್ಲಿ ಮತ್ತು ಅನೇಕ ಬಗೆಯ ಕೀಟಗಳು ಮನೆಯೊಳಗೆ ಪ್ರವೇಶಿಸದಂತೆ ತಡೆಯುತ್ತದೆ. ಅಲ್ಲದೆ ನೀವು ಲೆಮನ್‌ ಗ್ರಾಸ್‌ ಗಿಡವನ್ನು ಸಹ ನೆಡಬಹುದು. ಇವೆಲ್ಲವೂ ಬಲವಾದ ವಾಸನೆಯನ್ನು ಹೊಂದಿದ್ದು, ಇವು ಹಲ್ಲಿ, ಕೀಟಗಳು ಮನೆಯೊಳಗೆ ಪ್ರವೇಶಿಸುವುದನ್ನು ತಡೆಯುತ್ತವೆ.

ಸ್ವಚ್ಛತೆಯ ಬಗ್ಗೆಯೂ ಗಮನ ಹರಿಸಿ:

ಮೇಲಿನ ಕೆಲವೊಂದು ಗಿಡಗಳನ್ನು ನೆಡುವುದರ ಜೊತೆಗೆ ಹಲ್ಲಿಗಳ ಕಾಟದಿಂದ ಮುಕ್ತಿ ಪಡೆಯಲು ಮನೆಯ ಸ್ವಚ್ಛತೆಯ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸಬೇಕು. ಮನೆಯ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡಿ. ಕಸ ಸಂಗ್ರಹವಾಗಲು ಬಿಡಬೇಡಿ, ಆಹಾರ ಪದಾರ್ಥಗಳನ್ನು ತೆರೆದಿಡಬೇಡಿ ಮತ್ತು ಗೋಡೆಗಳಲ್ಲಿನ ಬಿರುಕುಗಳನ್ನು ಮುಚ್ಚಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *