ಎಷ್ಟೇ ಪರಿಚಯಸ್ಥರೇ ಆಗಲಿ, ಸಾಲ (loan) ಪಡೆಯುತ್ತಿದ್ದರೆ ಆ ಸಾಲಕ್ಕೆ ನಾಮಿನಿಯಾಗಿ ತಮ್ಮ ಹೆಸರನ್ನು ಹಾಕಲು ಹಿಂದೇಟು ಹಾಕುತ್ತೇವೆ. ಒಂದು ವೇಳೆ ಸಾಲ ಪಡೆದ ವ್ಯಕ್ತಿ ಮೃತ ಪಟ್ಟರೆ ಆ ಸಾಲದ ಹೊರೆ ನಮ್ಮ ಮೇಲೆ ಬರುತ್ತದೆ ಎಂಬ ಭಯ ಕಾಡುವುದು ಸಹಜ. ಆದರೆ ಈ ಸಾಲದ ಅವಧಿಯಲ್ಲಿ ಯಾವುದೇ ಅನಿರೀಕ್ಷಿತ ಘಟನೆಗಳು ಸಂಭವಿಸಿದರೆ, ಕಾನೂನು ಪ್ರಕ್ರಿಯೆಗಳನ್ನು ಸುಲಭಗೊಳಿಸುವುದೇ ಈ ನಾಮಿನಿ ಹೆಸರು (nominee name). ಸಾಲಗಾರನು ಈ ನಾಮಿನಿ ಹೆಸರನ್ನು ಬದಲಾಯಿಸಲು ಅವಕಾಶವಿದೆ. ಸಾಲದ ಖಾತೆಯಲ್ಲಿರುವ ಹೆಸರನ್ನು ಬದಲಾಯಿಸಲು ಸಾಲ ಪಡೆದ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯ ಶಾಖೆಗೆ ಭೇಟಿ ನೀಡಬೇಕಾಗುತ್ತದೆ. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ಸಾಲದ ಖಾತೆಯಲ್ಲಿ ನಾಮಿನಿ ಹೆಸರನ್ನು ಬದಲಾಯಿಸುವುದು ಹೇಗೆ?
ಹಂತ 1: ನಿಮ್ಮ ಸಾಲವಿರುವ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಲ್ಲಿ ನಾಮಿನೇಷನ್ ಬದಲಾವಣೆ ಫಾರ್ಮ್ ಪಡೆಯಿರಿ. ಆದರೆ ಬ್ಯಾಂಕ್‌ಗಳ ಅಧಿಕೃತ ವೆಬ್‌ಸೈಟ್‌ನ ಡೌನ್‌ಲೋಡ್ ವಿಭಾಗದಲ್ಲಿ ಈ ಫಾರ್ಮ್‌ಗಳು ಲಭ್ಯವಿರುತ್ತದೆ.
ಹಂತ 2: ಈ ಫಾರ್ಮ್‌ನಲ್ಲಿ ನಿಮ್ಮ ಸಾಲದ ಖಾತೆ ಸಂಖ್ಯೆ, ಹೊಸದಾಗಿ ನಾಮಿನಿ ಮಾಡಲು ಬಯಸುವ ವ್ಯಕ್ತಿಯ ಹೆಸರು, ಆ ವ್ಯಕ್ತಿಯ ಜನ್ಮದಿನಾಂಕ ಹಾಗೂ ನಿಮ್ಮೊಂದಿಗಿರುವ ಸಂಬಂಧ ಈ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.
ಹಂತ 3: ಹೊಸ ನಾಮಿನಿಯ ಪಾನ್ ಕಾರ್ಡ್, ಆಧಾರ್ ಕಾರ್ಡ್, ಅಥವಾ ಪಾಸ್‌ಪೋರ್ಟ್‌ನಂತಹ ದಾಖಲೆಗಳು, ವಿಳಾಸದ ಪುರಾವೆಯ ಜೆರಾಕ್ಸ್ ಪ್ರತಿಯನ್ನು ಫಾರ್ಮ್‌ನೊಂದಿಗೆ ಲಗತ್ತಿಸಿ.
ಹಂತ 4: ಸಾಲದ ಖಾತೆದಾರರು ನಾಮಿನೇಷನ್ ಬದಲಾವಣೆ ಫಾರ್ಮ್‌ನಲ್ಲಿ ಸಹಿ ಮಾಡಿ.
ಹಂತ 5: ಭರ್ತಿ ಮಾಡಿದ ಫಾರ್ಮ್ ಹಾಗೂ ಗುರುತಿನ ಚೀಟಿ ಸೇರಿದಂತೆ ಇನ್ನಿತ್ತರ ದಾಖಲೆಗಳನ್ನು ಬ್ಯಾಂಕ್ ಅಧಿಕಾರಿಗೆ ನೀಡಿ.
ಹಂತ 6: ಬ್ಯಾಂಕ್ ಸಿಬ್ಬಂದಿ ಈ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ನಿಮ್ಮ ಸಾಲದ ಖಾತೆಯಲ್ಲಿ ಹೊಸ ನಾಮಿನಿ ಹೆಸರನ್ನು ಸೇರಿಸುತ್ತಾರೆ.
ಇದನ್ನೂ ಓದಿ: ಸಾಲ ಮರುಪಾವತಿ ಮಾಡಿದ ಕೂಡ್ಲೇ ಬ್ಯಾಂಕ್‌ನಿಂದ ಈ ದಾಖಲೆಗಳನ್ನು ತಪ್ಪದೇ ಪಡೆಯಿರಿ
ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)
ಪ್ರಶ್ನೆ: ನಾಮಿನಿ ಎಂದರೆ ಯಾರು?
ಉತ್ತರ: ಸಾಲಗಾರರು ಮೃತಪಟ್ಟರೆ ಆ ಸಾಲದ ಹೊಣೆಗಾರಿಕೆಯನ್ನು ಅಥವಾ ಸಾಲದ ಆಸ್ತಿಯನ್ನು ನಿರ್ವಹಿಸುವವರೇ ಈ ನಾಮಿನಿಗಳು.
ಪ್ರಶ್ನೆ: ಸಾಲಗಾರರಿಗೆ ತಮ್ಮ ಲೋನ್ ಅಕೌಂಟ್ ನಲ್ಲಿರುವ ನಾಮಿನಿ ಹೆಸರನ್ನು ಬದಲಾಯಿಸಲು ಅವಕಾಶವಿದೆಯೇ?
ಉತ್ತರ: ತಮ್ಮ ಲೋನ್ ಅಕೌಂಟ್ ನಲ್ಲಿರುವ ನಾಮಿನಿ ಹೆಸರನ್ನು ಬದಲಾಯಿಸಲು ಅವಕಾಶವಿದೆ.
ಪ್ರಶ್ನೆ: ಸಾಲದ ಖಾತೆಯಲ್ಲಿರುವ ನಾಮಿನಿ ಹೆಸರನ್ನು ಬದಲಾಯಿಸುವುದು ಹೇಗೆ?
ಉತ್ತರ: ನಾಮಿನಿ ಹೆಸರನ್ನು ಬದಲಾಯಿಸಲು ಸಾಲ ಪಡೆದ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯ ಶಾಖೆಗೆ ಭೇಟಿ ನೀಡಬೇಕು.
ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
