LPG: 14.2 ಕಿಲೋ ಬದಲು 10 ಕಿಲೋ ಎಲ್​ಪಿಜಿ ಗ್ಯಾಸ್ ವಿತರಿಸುವ ಸಾಧ್ಯತೆ

LPG: 14.2 ಕಿಲೋ ಬದಲು 10 ಕಿಲೋ ಎಲ್​ಪಿಜಿ ಗ್ಯಾಸ್ ವಿತರಿಸುವ ಸಾಧ್ಯತೆ

ನವದೆಹಲಿ, ಮಾರ್ಚ್ 23: ಹೆಚ್ಚೆಚ್ಚು ಜನರಿಗೆ ಎಲ್​ಪಿಜಿ ಪೂರೈಕೆ (LPG distribution) ಸಿಗುವಂತಾಗಲು ಸರ್ಕಾರ ಹೊಸ ತಂತ್ರ ಯೋಜಿಸಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಗೃಹಬಳಕೆಗೆ ಕಡಿಮೆ ಎಲ್​ಪಿಪಿ ಇರುವ ಸಿಲಿಂಡರ್​ಗಳನ್ನು ವಿತರಿಸಲು ಆಲೋಚಿಸಿವೆ. ಎಕನಾಮಿಕ್ ಟೈಮ್ಸ್​ನಲ್ಲಿ ಬಂದಿರುವ ವರದಿ ಪ್ರಕಾರ, ಈಗಿರುವ 14.2 ಕಿಲೋ ಎಲ್​ಪಿಜಿ ಬದಲು 10 ಕಿಲೋ ಎಲ್​ಪಿಜಿ ಸಿಲಿಂಡರ್​ಗಳ ವಿತರಣೆ ಮಾಡಲಾಗಬಹುದು.

ಕಡಿಮೆ ಪ್ರಮಾಣದ ಎಲ್​ಪಿಜಿ ಪೂರೈಕೆಯಿಂದ ಏನು ಲಾಭ?

ಎಲ್​ಪಿಜಿ ಲಭ್ಯತೆ ಸೀಮಿತ ಪ್ರಮಾಣದಲ್ಲಿ ಮಾತ್ರವೇ ಇರುವುದು. ಹೀಗಾಗಿ, ಗೃಹಬಳಕೆಗೆ ಎಲ್​ಪಿಜಿ ಕಡಿಮೆ ಪ್ರಮಾಣದ ಇರುವ ಸಿಲಿಂಡರ್ ಅನ್ನು ನೀಡಿದರೆ ಹೆಚ್ಚೆಚ್ಚು ಮನೆಗಳಿಗೆ ಪೂರೈಕೆ ಮಾಡಲು ಸಾಧ್ಯವಾಗುತ್ತದೆ ಎಂಬುದು ಒಂದು ಆಲೋಚನೆ. ಪಶ್ಚಿಮ ಏಷ್ಯಾದ ಯುದ್ಧದ ಸ್ಥಿತಿ ದೀರ್ಘಕಾಲ ಮುಂದುವರಿಯದೇ ಇದ್ದರೆ ಈ ತಂತ್ರ ಕೆಲಸ ಮಾಡುತ್ತದೆ.

ಇದನ್ನೂ ಓದಿ: PM Modi on Fertilizers: ಭಾರತದಲ್ಲಿ ಸಾಕಷ್ಟು ರಸಗೊಬ್ಬರ ದಾಸ್ತಾನಿದೆ, ರೈತರಿಗೆ ತೊಂದರೆಯಾಗಲು ಬಿಡುವುದಿಲ್ಲ: ಮೋದಿ ಭರವಸೆ

ಭಾರತದ ಶೇ. 60ರಷ್ಟು ಎಲ್​ಪಿಜಿ ಅಗತ್ಯವನ್ನು ಆಮದು ಮೂಲಕ ಪೂರೈಸಲಾಗುತ್ತಿದೆ. ಅದರ ಶೇ. 80ಕ್ಕಿಂತಲೂ ಹೆಚ್ಚು ಆಮದು ಹಾರ್ಮುಜ್ ಜಲಸಂಧಿ ಮಾರ್ಗದಿಂದ ಬರುತ್ತದೆ. ಹೀಗಾಗಿ, ಭಾರತಕ್ಕೆ ಎಲ್​ಪಿಜಿ ಬಿಕ್ಕಟ್ಟು ಬಹಳವೇ ಕಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರೂ ಕೂಡ ಇಂದು ಲೋಕಸಭೆಯಲ್ಲಿ ಈ ವಿಚಾರದ ಬಗ್ಗೆ ಮಾತನಾಡಿ, ಮಧ್ಯಪ್ರಾಚ್ಯ ಯುದ್ಧ ಸ್ಥಿತಿ ಬಗ್ಗೆ ಆತಂಕ ವ್ಯಕ್ತಪಡಿಸಿದರು.

ಭಾರತದಲ್ಲಿ ಗೃಹಬಳಕೆಗೆ 14.2 ಕಿಲೋ ಎಲ್​ಪಿಜಿ ಸಿಲಿಂಡರ್ ವಿತರಣೆ ಮಾಡಲಾಗುತ್ತದೆ. ಒಂದು ಸಣ್ಣ ಕುಟುಂಬಕ್ಕೆ ಈ ಸಿಲಿಂಡರ್​ನಲ್ಲಿರುವ ಗ್ಯಾಸ್ ಒಂದರಿಂದ ಮೂರು ತಿಂಗಳವರೆಗೆ ಬಾಳಿಕೆ ಬರುತ್ತದೆ. 10 ಕಿಲೋ ಎಲ್​ಪಿಜಿ ರೀಫಿಲ್ ಆಗಿರುವ ಸಿಲಿಂಡರ್ ಸಾಮಾನ್ಯವಾಗಿ ಒಂದರಿಂದ ಎರಡು ತಿಂಗಳು ಬರಬಹುದು.

ಇದನ್ನೂ ಓದಿ: ಸಾಧ್ಯವಿರುವೆಡೆಯೆಲ್ಲಾ ತೈಲ ಮತ್ತು ಅನಿಲ ಪಡೆಯುತ್ತಿದ್ದೇವೆ- ಪ್ರಧಾನಿ ಮೋದಿ

10 ಕಿಲೋ ಎಲ್​ಪಿಜಿ ಎಂದರೆ ಸಿಲಿಂಡರ್ ಬದಲಾಗಲ್ಲ. 14.2 ಕಿಲೋ ಎಲ್​ಪಿಜಿ ಸಿಲಿಂಡರ್​ನಲ್ಲೇ 10 ಕಿಲೋ ಎಲ್​ಪಿಜಿ ರೀಫಿಲ್ ಮಾಡಲಾಗುತ್ತದೆ. ಸಿಲಿಂಡರ್ ಮೇಲೆ ಹೊಸ ಲೇಬಲ್ ಹಾಕಲಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *