LSG vs DC: ಡೆಲ್ಲಿಗೆ ಗೆಲುವು ತಂದ ರಿಜ್ವಿ- ಸ್ಟಬ್ಸ್; ತವರಿನಲ್ಲಿ ಸೋತ ಲಕ್ನೋ

LSG vs DC: ಡೆಲ್ಲಿಗೆ ಗೆಲುವು ತಂದ ರಿಜ್ವಿ- ಸ್ಟಬ್ಸ್; ತವರಿನಲ್ಲಿ ಸೋತ ಲಕ್ನೋ

ಲಕ್ನೋದ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 ರ ಐದನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೋ ಸೂಪರ್​ಜೈಂಟ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ತಂಡ, ಡೆಲ್ಲಿ ಬೌಲಿಂಗ್ ದಾಳಿಗೆ ನಲುಗಿ ಪೂರ್ಣ 20 ಓವರ್​ಗಳನ್ನು ಆಡಲಾಗದೆ 18.4 ಓವರ್​ಗಳಲ್ಲಿ ಕೇವಲ 141 ರನ್​ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸಮೀರ್ ರಿಜ್ವಿ ಅವರ ಅರ್ಧಶತಕ ಹಾಗೂ ಟ್ರಿಸ್ಟನ್ ಸ್ಟಬ್ಸ್ ಅವರ ಸಮಯೋಜಿತ ಇನ್ನಿಂಗ್ಸ್ ನೆರವಿನಿಂದ 17.1 ಓವರ್​ಗಲ್ಲಿ ಗೆಲುವಿನ ದಡ ಮುಟ್ಟಿತು. ಈ ಸೋಲಿನೊಂದಿಗೆ ಲಕ್ನೋ ತಂಡ ಈ ಆವೃತ್ತಿಯಲ್ಲಿ ತವರಿನಲ್ಲಿ ಸೋತ ಮೊದಲ ತಂಡ ಎನಿಸಿಕೊಂಡಿತು.

Source link

Leave a Reply

Your email address will not be published. Required fields are marked *