Lunar Eclipse 2026: ಮಾ.03ರ ಚಂದ್ರಗ್ರಹಣದ ಬಳಿಕ ಈ ರಾಶಿಗೆ ಅದೃಷ್ಟವೋ ಅದೃಷ್ಟ! – Kannada News | March 2026 Lunar Eclipse: Libra’s Fortune and Remedies by Dr.Basavaraj Guruji

ಈ ವರ್ಷದ ಮೊದಲ ಚಂದ್ರಗ್ರಹಣವು ಫಾಲ್ಗುಣ ಮಾಸದ ಹುಣ್ಣಿಮೆಯಂದು ಅಂದರೆ ಮಾರ್ಚ್ 03 ರಂದು ಸಂಭವಿಸಲಿದೆ. ಈ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸಲಿದ್ದು, 12 ರಾಶಿಗಳ ಮೇಲೆ ಪರಿಣಾಮ ಬೀರಲಿದೆ. 12 ರಾಶಿಗಳ ಪೈಕಿ ಈ ಒಂದು ಈ ರಾಶಿಗೆ ಅದೃಷ್ಟದ ಬಾಗಿಲು ತೆರೆಯಲಿದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿಯವರು ಭವಿಷ್ಯ ನುಡಿದಿದ್ದಾರೆ. ತುಲಾ ರಾಶಿಯ ಅಧಿಪತಿ ಶುಕ್ರನಾಗಿದ್ದು, ಚಿತ್ತಾ, ಸ್ವಾತಿ ಮತ್ತು ವಿಶಾಖ ನಕ್ಷತ್ರದವರು ಈ ಗ್ರಹಣದ ಪ್ರಭಾವಕ್ಕೆ ಒಳಪಡುತ್ತಾರೆ. ಈ ಚಂದ್ರಗ್ರಹಣವು ತುಲಾ ರಾಶಿಯವರ 11ನೇ ಮನೆಯಾದ ಲಾಭ ಸ್ಥಾನದಲ್ಲಿ ಸಂಭವಿಸಲಿದ್ದು, ಇದು ಹಲವು ಮಹತ್ವದ ಫಲಿತಾಂಶಗಳನ್ನು ನೀಡಲಿದೆ.

ಸಕಾರಾತ್ಮಕ ಪ್ರಭಾವಗಳು:

ಗ್ರಹಣದ ಪರಿಣಾಮವಾಗಿ, ತುಲಾ ರಾಶಿಯವರಿಗೆ ನಿರೀಕ್ಷಿತ ಹಣದ ಹರಿವು ಹಾಗೂ ಅನಿರೀಕ್ಷಿತ ಆರ್ಥಿಕ ಲಾಭಗಳು ದೊರೆಯುವ ಸಾಧ್ಯತೆ ಇದೆ. ಶತ್ರುಗಳು ಮಿತ್ರರಾಗಿ ಬದಲಾಗುತ್ತಾರೆ. ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆ ಕಂಡುಬರುತ್ತದೆ ಮತ್ತು ಯಾವುದೇ ವಿಷಯದ ಬಗ್ಗೆ ಆಳವಾಗಿ ಯೋಚಿಸುವ ಸಾಮರ್ಥ್ಯ ಹೆಚ್ಚುತ್ತದೆ. ಮಕ್ಕಳಿಂದ ಶುಭ ಫಲಗಳು ಪ್ರಾಪ್ತವಾಗುತ್ತವೆ. ರಾಜಕೀಯ ಕ್ಷೇತ್ರದಲ್ಲಿ ಸ್ಥಾನಮಾನ ಮತ್ತು ಆದಾಯದಲ್ಲಿ ಏರಿಕೆ ಕಂಡುಬರುತ್ತದೆ. ದೀರ್ಘಕಾಲದ ಋಣಗಳಿಂದ ಮುಕ್ತಿ ಸಿಗುವ ಸಾಧ್ಯತೆಗಳಿದ್ದು, ಸಾಲಗಳನ್ನು ತೀರಿಸಲು ಇದು ಉತ್ತಮ ಸಮಯ. ವ್ಯಾಪಾರಸ್ಥರಿಗೆ ಈ ಅವಧಿ ಬಹಳ ಶುಭವಾಗಿದ್ದು, ವ್ಯಾಪಾರದಲ್ಲಿ ಪ್ರಗತಿ ಸಾಧಿಸುತ್ತಾರೆ. ಕಾನೂನು ವಿಷಯಗಳಲ್ಲಿ ಯಶಸ್ಸು ಲಭಿಸುತ್ತದೆ ಮತ್ತು ಜೀವನದ ಒತ್ತಡಗಳು ಕಡಿಮೆಯಾಗುತ್ತವೆ. ಪೂರ್ವಿಕರ ಆಸ್ತಿ ವಿಚಾರಗಳಲ್ಲಿಯೂ ಶುಭ ಫಲ ದೊರೆಯುತ್ತದೆ. ದಂಪತಿಗಳ ನಡುವೆ ಉತ್ತಮ ಅನ್ಯೋನ್ಯತೆ ಮೂಡಲಿದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಎಚ್ಚರಿಕೆ ಮತ್ತು ಸವಾಲುಗಳು:

ಸಕಾರಾತ್ಮಕ ಅಂಶಗಳ ಜೊತೆಗೆ ಕೆಲವು ಎಚ್ಚರಿಕೆಗಳನ್ನೂ ಗುರೂಜಿ ನೀಡಿದ್ದಾರೆ. ಹೆಣ್ಣು ಮಕ್ಕಳ ವಿವಾಹ ವಿಷಯಗಳ ಬಗ್ಗೆ ಚಿಂತೆ ಕಾಡಬಹುದು. ಕೆಲವರಿಗೆ ಸ್ಥಾನ ಪಲ್ಲಟ ಅಥವಾ ಮನೆ ಬದಲಾವಣೆಯ ಸಾಧ್ಯತೆ ಇದೆ. ದಾಯಾದಿ ಕಲಹಗಳು ಹೆಚ್ಚಾದರೂ, ಅವು ಅಂತಿಮವಾಗಿ ಇತ್ಯರ್ಥವಾಗುತ್ತವೆ. ತಾಳ್ಮೆ ಕಳೆದುಕೊಳ್ಳದೆ, ಸಹನೆಯಿಂದ ವರ್ತಿಸುವುದು ಮತ್ತು ಅನಗತ್ಯ ಖರ್ಚುಗಳನ್ನು ನಿಯಂತ್ರಿಸುವುದು ಮುಖ್ಯ. ಈ ರಾಶಿಯವರಿಗೆ ಪ್ರೀತಿಪಾತ್ರರ ಅಗಲಿಕೆ ಅಥವಾ ಅವರ ಅನಾರೋಗ್ಯದ ಚಿಂತೆ ಕಾಡುವ ಸಾಧ್ಯತೆಯೂ ಇದೆ. ಲೆಕ್ಕಾಚಾರಗಳಲ್ಲಿ ತಪ್ಪುಗಳಾಗಿ ಟೆನ್ಷನ್ ಆಗುವ ಸಂಭವ ಇರುವುದರಿಂದ, ಎಲ್ಲವನ್ನೂ ಸರಿಯಾಗಿ ದಾಖಲಿಸಿಕೊಳ್ಳುವುದು ಉತ್ತಮ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಾ.03 ವರ್ಷದ ಮೊದಲ ಚಂದ್ರಗ್ರಹಣ; ಇದು ಭಾರತದಲ್ಲಿ ಗೋಚರಿಸುತ್ತಾ?

ಪರಿಹಾರೋಪಾಯಗಳು:

ಡಾ. ಬಸವರಾಜ ಗುರೂಜಿಯವರು ಈ ಗ್ರಹಣದ ಪ್ರತಿಕೂಲ ಪರಿಣಾಮಗಳನ್ನು ಕಡಿಮೆ ಮಾಡಲು ಮತ್ತು ಶುಭ ಫಲಗಳನ್ನು ಹೆಚ್ಚಿಸಲು ಕೆಲವು ಪರಿಹಾರಗಳನ್ನು ಸೂಚಿಸಿದ್ದಾರೆ. ತುಲಾ ರಾಶಿಯವರು ದೇವಿಯ ಸ್ತೋತ್ರಗಳನ್ನು ಪಠಿಸುವುದು ಮತ್ತು ದೇವಿಯ ದರ್ಶನ ಮಾಡಿಕೊಳ್ಳುವುದು ಉತ್ತಮ. ವಿಶೇಷವಾಗಿ ಮಹಾಲಕ್ಷ್ಮಿಯ ಗಾಯತ್ರಿ ಮಂತ್ರವಾದ “ಓಂ ಮಹಾದೇವ್ಯೈ ಚ ವಿದ್ಮಹೇ ವಿಷ್ಣುಪತ್ನ್ಯೈ ಚ ಧೀಮಹಿ ತನ್ನೋ ಲಕ್ಷ್ಮಿ ಪ್ರಚೋದಯಾತ್” ಇದನ್ನು ಪಠಿಸುವುದರಿಂದ ಬಹಳಷ್ಟು ಶುಭವಾಗುತ್ತದೆ. ಮಹಾಲಕ್ಷ್ಮಿಗೆ ಬಿಳಿ ಹೂವಿನ ಹಾರವನ್ನು ಅರ್ಪಿಸುವುದು ಫಲಪ್ರದ. ಜೊತೆಗೆ ಅನಾಥ ಮಕ್ಕಳಿಗೆ ಅಥವಾ ಪುಟ್ಟ ಮಕ್ಕಳಿಗೆ ಮೊಸರನ್ನ, ಹಾಲಿನ ಅನ್ನ, ಅಥವಾ ಬಾದಾಮಿ ಹಾಲು ದಾನ ಮಾಡುವುದು ಬಹಳಷ್ಟು ಶುಭವನ್ನು ತರುತ್ತದೆ ಎಂದು ಗುರೂಜಿ ತಿಳಿಸಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *