ಮಡಿಕೇರಿ, ಫೆಬ್ರವರಿ 03: ಕೊಡಗು ಜಿಲ್ಲೆಯಲ್ಲಿ ಮರಗಳ ಮಾರಣಹೋಮ ಮುಂದುವರಿದಿದ್ದು, ರೆಸಾರ್ಟ್ಗಾಗಿ 2 ಎಕರೆಯಲ್ಲಿದ್ದ ಮರಗಳನ್ನು ವೈದ್ಯರೋರ್ವರು ಕಡಿಸಿರುವ ಆರೋಪ ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮದಲ್ಲಿ ಕೇಳಿಬಂದಿದೆ. ವೈದ್ಯ ಶ್ಯಾಮ್ ಅಪ್ಪಣ್ಣ ಎಂಬವರು ತಾವು ಖರೀದಿಸಿದ್ದ ಎರಡು ಎಕರೆ ಭೂಮಿಯಲ್ಲಿದ್ದ ಮರಗಳನ್ನು ಅರಣ್ಯ, ಕಂದಾಯ ಇಲಾಖೆ ಅನುಮತಿ ಪಡೆಯದೆ ಕಟಾವು ಮಾಡಿಸಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ವೈದ್ಯ ಶ್ಯಾಮ್ ಅಪ್ಪಣ್ಣ, ಸಹಕರಿಸಿದ ವಿನಯ್, ಸಂದೀಪ್ ಪುಣೆ ಎಂಬುವರ ಮೇಲೂ ಅರಣ್ಯ ಇಲಾಖೆ FIR ದಾಖಲಿಸಿದೆ. ಆದರೆ ಎಫ್ಐಆರ್ನಲ್ಲಿ 14 ಮರಗಳು ಮಾತ್ರ ನಾಶ ಎಂದು ಉಲ್ಲೇಖಿಸಲಾಗಿದ್ದು, ಎರಡು ಎಕರೆಯಲ್ಲಿ 50ಕ್ಕೂ ಅಧಿಕ ಮರಗಳು ನಾಶವಾಗಿರುವ ಶಂಕೆ ವ್ಯಕ್ತವಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
