Headlines

Mangaluru: ಕೌಟುಂಬಿಕ ಕಲಹಕ್ಕೆ ಹರಿದ ನೆತ್ತರು; ಗಲಾಟೆ ವೇಳೆ ಹೋಯ್ತು ಇಬ್ಬರ ಪ್ರಾಣ! – Kannada News | Domestic Row Claims Two Lives in Manjeshwara, Kasaragod

ಶೇಕುಂಞ ಮತ್ತು ಉಮರ್ ಫಾರೂಕ್​​ ಜೊತೆ ಜುಮೈಲImage Credit source: Tv9 Kannada

ಮಂಗಳೂರು, ಫೆಬ್ರವರಿ 03: ಕೌಟುಂಬಿಕ ಕಲಹಕ್ಕೆ ಇಬ್ಬರು ಬಲಿಯಾಗಿರುವ ಘಟನೆ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ತೂಮಿನಾಡಿನಲ್ಲಿ ನಡೆದಿದೆ. ಜುಮೈಲ(18) ಮತ್ತು ಶೇಕುಂಞ(55) ಮೃತ ದುರ್ದೈವಿಗಳಾಗಿದ್ದು, ಆರೋಪಿ ಉಮರ್ ಫಾರೂಕ್​​ನ ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಜಗಳ ಬಿಡಿಸಲು ಹೋದ ಜುಮೈಲ ಮೊದಲು ಮೃತ ಪಟ್ಟಿದ್ದರೆ, ಗಂಭೀರ ಗಾಯಗೊಂಡಿದ್ದ ಶೇಕುಂಞ ಕೂಡ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಫಾರೂಕ್​ ಹಾಗೂ ಪತ್ನಿ ತಾಹಿರ ನಡುವೆ ಕೌಟುಂಬಿಕ ಕಲಹ ಇತ್ತು ಎನ್ನಲಾಗಿದ್ದು, ಫಾರೂಕ್​ನ‌ ನಾದಿನಿ ಮನೆಯಲ್ಲಿ ಪತ್ನಿ ತಾಹಿತ ಮತ್ತು ಪುತ್ರಿ ಜುಮೈಲ ವಾಸವಿದ್ದರು. ಕೌಟುಂಬಿಕ ಕಲಹ ತಾರಕಕ್ಕೇರಿ ವಿಚ್ಛೇದನದ ಮಾತುಕತೆ ಕೂಡ ನಡೆದಿತ್ತು. ಈ ವೇಳೆ ತನ್ನ ಹೆಸರಿಗೆ ಆಸ್ತಿ ಮಾಡಿಕೊಡುವಂತೆ ಫಾರೂಕ್​ ಬೇಡಿಕೆ ಇಟ್ಟಿದ್ದ. ಇದೇ ವಿಚಾರವಾಗಿ ನಿನ್ನೆ ಉಮ್ಮರ್ ಮತ್ತು ಆತನ ಬಾವ ಶೇಕುಂಞ ನಡುವೆ ಜಗಳ ಆರಂಭವಾಗಿದ್ದು, ಅದು ವಿಕೋಪಕ್ಕೆ ಹೋದಾಗ ಜಗಳ ಬಿಡಿಸಲು ಹೋದ ಜುಮೈಲಾಗೆ ಕತ್ತಿ ತಗುಲಿದೆ. ಗಾಯಗೊಂಡ ಆಕೆ ಮೃತಪಟ್ಟಿದ್ದಾಳೆ.

ಇದನ್ನೂ ಓದಿ: ವಿವಾಹವಾಗಿ ಇಬ್ಬರು ಮಕ್ಕಳಿದ್ದರೂ ಕಮಲಾಕರ ಗುರೂಜಿ ಜೊತೆಗೆ ಸಂಬಂಧ; ಪುತ್ರಿಯಿಂದಲೇ ಮ್ಯಾಟರ್​​ ರಿವೀಲ್​

ಇನ್ನು ಆರೋಪಿ ಉಮ್ಮರ್ ಫಾರೂಖ್ ಕೆಲ‌ ತಿಂಗಳ ಹಿಂದಷ್ಟೇ ವಿದೇಶದಿಂದ ಬಂದಿರುವ ಮಾಹಿತಿ ಇದ್ದು, ಆತ ಇತ್ತೀಚೆಗೆ ಗಾಂಜಾ ಸೇರಿದಂತೆ ಮಾದಕ ದ್ರವ್ಯಗಳ ವ್ಯಸನಿಯಾಗಿದ್ದ ಎಂದು ಕೂಡ ಆರೋಪಿಸಲಾಗಿದೆ. ಪ್ರಕರಣ ಸಂಬಂಧ ಆರೋಪಿಯನ್ನು ಕಸ್ಟಡಿಗೆ ಪಡೆದಿರುವ ಮಂಜೇಶ್ವರ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಇಬ್ಬರ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಆರೋಪಿ ಉಮ್ಮರ್ ಫಾರೂಖ್​​ಗೆ ತಕ್ಕ ಶಿಕ್ಷೆಯಾಗಬೇಕೆಂಬ ಆಗ್ರಹ ಕೇಳಿಬಂದಿದೆ.

ಕ್ಷುಲ್ಲಕ ಕಾರಣಕ್ಕೆ ವಕೀಲನ ಮೇಲೆ ಹಲ್ಲೆ

ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡದಲ್ಲಿ ಕ್ಷುಲ್ಲಕ ಕಾರಣಕ್ಕೆ ದುಷ್ಕರ್ಮಿಗಳು ವಕೀಲನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಬೆನ್ ಚಿಂಚೊಳ್ಳಿ ನಿವಾಸಿಯಾಗಿರುವ 26 ವರ್ಷದ ಅನಿಲ್​ ಕುಮಾರ್ ಗಾಯಾಳುವಾಗಿದ್ದು, ಹಂದಿ ಸಾಕಾಣಿಕೆ ‌ವಿಚಾರವಾಗಿ ನಡೆದ ಜಗಳ ಸಂಬಂಧ ಠಾಣೆಗೆ ದೂರು ಕೊಡಲು ಹೋಗುತ್ತಿದ್ದಾಗ ಅಡ್ಡಗಟ್ಟಿ ಹಲ್ಲೆ ನಡೆಸಲಾಗಿದೆ. ಘಟನೆ ಸಂಬಂಧ ‌ಹಳ್ಳಿಖೇಡ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, ಹಲ್ಲೆಗೊಳಗಾದ ಅನಿಲ್ ಕುಮಾರ್​ಗೆ ಬ್ರಿಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *