ಜುಲೈ 7 ಅಂದರೆ ಇಂದು ಆಧ್ಯಾತ್ಮಿಕ ಜಗತ್ತಿನಲ್ಲಿ ಅತ್ಯಂತ ಪವಿತ್ರ ಹಾಗೂ ಅಪರೂಪದ ದಿನವಾಗಿದೆ. ಒಂದೆಡೆ ಶಿವನ ರೌದ್ರಾವತಾರವಾದ ಕಾಲಭೈರವನ ಆರಾಧನೆಯ ಕಾಲಾಷ್ಟಮಿ, ಮತ್ತೊಂದೆಡೆ ಬ್ರಹ್ಮಾಂಡದ ಸಕಾರಾತ್ಮಕ ಶಕ್ತಿಯ ಹೆಬ್ಬಾಗಿಲು ಎನಿಸುವ ‘7-7 ಪೋರ್ಟಲ್’ ವಿಶಿಷ್ಟವಾಗಿ ಒದಗಿಬಂದಿದೆ. ಈ ಮಹಾ ಸಂಗಮದ ದಿನದಂದು ಅನೇಕರು ತಮ್ಮ ಆಸೆಗಳನ್ನು ಈಡೇರಿಸಿಕೊಳ್ಳಲು (Manifestation) ಪ್ರಯತ್ನಿಸುತ್ತಿರುತ್ತಾರೆ. ಆದರೆ, ಹಲವು ಬಾರಿ ನಾವು ಎಷ್ಟು ಪ್ರಾರ್ಥಿಸಿದರೂ ಅಂದುಕೊಂಡಿದ್ದು ಕೈಗೂಡುವುದಿಲ್ಲ. ಇದಕ್ಕೆ ಕಾರಣವೇನು ಎಂಬುದರ ಬಗ್ಗೆ ಖ್ಯಾತ ನಟಿ ಕಾವ್ಯಾ ಶಾಸ್ತ್ರಿ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.
ಮ್ಯಾನಿಫೆಸ್ಟೇಷನ್‌ಗೆ ಬೇಕಾದ ಪ್ರಮುಖ ಮೂರು ಅಂಶ:
ಕಾವ್ಯಾ ಶಾಸ್ತ್ರಿ ಅವರ ಪ್ರಕಾರ, ನಾವು ಬ್ರಹ್ಮಾಂಡ(universe)ದ ಬಳಿ ಏನನ್ನಾದರೂ ಕೇಳುವಾಗ ಪ್ರಮುಖವಾಗಿ ಮೂರು ವಿಷಯಗಳು ಒಂದಕ್ಕೊಂದು ಹೊಂದಾಣಿಕೆಯಾಗಬೇಕು (Align). ನಮ್ಮ ಮನಸ್ಸು, ನಮ್ಮ ನಡೆ (Actions) ಹಾಗೂ ನಮ್ಮ ತೀವ್ರವಾದ ಕೋರಿಕೆ—ಇವು ಮೂರು ಒಂದಾದಾಗ ಮಾತ್ರ ನಾವಂದುಕೊಂಡಿದ್ದು ನಮಗೆ ಸಿಗುತ್ತದೆ. ಆದರೆ ಈ ಮೂರರ ಮಧ್ಯೆ ಹೊಂದಾಣಿಕೆ ಇಲ್ಲದಿದ್ದಾಗ ನಮ್ಮ ಪ್ರಾರ್ಥನೆಗಳು ವಿಫಲವಾಗುತ್ತವೆ.
ಸುಪ್ತ ಮನಸ್ಸಿನಲ್ಲಿರುವ ಅನುಮಾನದ ಮೂಟೆ:
ನಮ್ಮ ಪ್ರಾರ್ಥನೆಗಳು ಕೈಗೂಡದೆ ಇರಲು ಮೊದಲ ಕಾರಣ ಮನಸ್ಸಿನ ಆಳದಲ್ಲಿರುವ ಗೊಂದಲ. ನಾವು ದೇವರೆದುರು ನಿಂತು “ನನಗೆ ಈ ಕೆಲಸ ಸಿಗಲಿ” ಎಂದು ಕೇಳಿಕೊಳ್ಳುತ್ತೇವೆ. ಆದರೆ ನಮ್ಮ ಮನಸ್ಸಿನಲ್ಲಿ (Back of the mind), “ಇದು ನನಗೆ ಸಿಗುತ್ತಾ? ನನಗೆ ಅಷ್ಟು ಅರ್ಹತೆ ಇದೆಯಾ? ನನಗಿಂತ ಉತ್ತಮರು ಬಂದರೆ ಏನು ಮಾಡುವುದು?” ಎಂಬ ನೂರಾರು ಅನುಮಾನಗಳನ್ನು ನಾವೇ ಹುಟ್ಟುಹಾಕಿಕೊಳ್ಳುತ್ತೇವೆ.
ಸೋಲಿನ ಭಯ ಹಾಗೂ ನಕಾರಾತ್ಮಕತೆ:
ಭವಿಷ್ಯದಲ್ಲಿ ನಮಗೆ ಒಂದು ವೇಳೆ ಸೋಲಾದರೆ ನೋವಾಗಬಾರದು ಎಂಬ ಕಾರಣಕ್ಕೆ, ಒಳ್ಳೆಯದನ್ನು ಯೋಚಿಸುವ ಮೊದಲೇ ಕೆಟ್ಟದ್ದಕ್ಕೆ ನಮ್ಮ ಮನಸ್ಸನ್ನು ನಾವೇ ಸಿದ್ಧಗೊಳಿಸಿಬಿಡುತ್ತೇವೆ. ಇಂತಹ ನಕಾರಾತ್ಮಕ ಆಲೋಚನೆಗಳು ನಮ್ಮ ಯಶಸ್ಸನ್ನು ತಡೆಯುತ್ತವೆ ಮತ್ತು ಬ್ರಹ್ಮಾಂಡದ ಸಕಾರಾತ್ಮಕ ಶಕ್ತಿಯನ್ನು ನಮ್ಮಿಂದ ದೂರ ನಿಲ್ಲಿಸುತ್ತವೆ.
ಅತಿಯಾದ ತಾರ್ಕಿಕ (Logical) ಆಲೋಚನೆ:
ಪ್ರತಿಯೊಂದಕ್ಕೂ ಲಾಜಿಕ್ ಹುಡುಕುವ ನಮ್ಮ ಸ್ವಭಾವವೂ ಇದಕ್ಕೆ ಕಾರಣ. “ಇದು ಹೇಗೆ ಸಾಧ್ಯ? ಅವರು ಸಹಾಯ ಮಾಡುತ್ತಾರಾ? ಇವರು ಮಾಡ್ತಾರಾ?” ಎಂದು ಪ್ರತಿಯೊಂದಕ್ಕೂ ಲಾಜಿಕ್ ಹುಡುಕುವುದನ್ನು ಮೊದಲು ನಿಲ್ಲಿಸಬೇಕು. ಮ್ಯಾನಿಫೆಸ್ಟೇಷನ್ ಯಶಸ್ವಿಯಾಗಲು ಬ್ರಹ್ಮಾಂಡದ ಶಕ್ತಿಯ ಮೇಲೆ ಸಂಪೂರ್ಣ ನಂಬಿಕೆ ಇಡುವುದು ಅತ್ಯಂತ ಅಗತ್ಯ.
ಇದನ್ನೂ ಓದಿ Panchamukhi Ganesha: ಪಂಚಮುಖಿ ಗಣೇಶ ಮನೆಯಲ್ಲಿದ್ದರೆ ಸಕಲ ಕಷ್ಟಗಳೂ ನಿವಾರಣೆ; ಐದು ಮುಖಗಳ ದಿವ್ಯ ರಹಸ್ಯವೇನು?
ಇತರರ ಬಗ್ಗೆ ನೆಗೆಟಿವ್ ಮಾತನಾಡುವ ದೊಡ್ಡ ತಪ್ಪು:
ನಮ್ಮ ಮ್ಯಾನಿಫೆಸ್ಟೇಷನ್ ವರ್ಕ್ ಆಗದಿರಲು ಮತ್ತೊಂದು ದೊಡ್ಡ ತಪ್ಪು ಎಂದರೆ — ನಮ್ಮ ಬಗ್ಗೆ ನಮಗೆ ಗೌರವ ಇಲ್ಲದಿರುವುದು ಮತ್ತು ಇತರರ ಬಗ್ಗೆ ನೆಗೆಟಿವ್ ಆಗಿ ಮಾತನಾಡುವುದು. ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದ ಯಾವುದೇ ಪೋಸ್ಟ್‌ಗಳ ಕಮೆಂಟ್ ಸೆಕ್ಷನ್‌ಗೆ ಹೋಗಿ ನೋಡಿದರೆ, ಪ್ರತಿಯೊಬ್ಬರೂ ಯಾರಾದರೂ ಒಬ್ಬರ ಬಗ್ಗೆ ನೆಗೆಟಿವ್ ಕಮೆಂಟ್ ಮಾಡಿರುತ್ತಾರೆ. “ಅವಳು ದಪ್ಪಗಿದ್ದಾಳೆ, ಅವನು ಸಣ್ಣಗಿದ್ದಾನೆ, ಅವಳು ಹೇಗೆ ದುಡ್ಡು ಮಾಡಿದಳೋ ಗೊತ್ತಿಲ್ಲ” ಅಂತೆಲ್ಲಾ ಇತರರ ಜೀವನದ ಬಗ್ಗೆ ಸುಮ್ಮನೆ ನಕಾರಾತ್ಮಕವಾಗಿ ಮಾತನಾಡುತ್ತಾರೆ. ನೆನಪಿಡಿ, ಬ್ರೈನ್ ಅಥವಾ ಬ್ರಹ್ಮಾಂಡಕ್ಕೆ ನೀವು ನಿಮ್ಮ ಬಗ್ಗೆ ಮಾತನಾಡುತ್ತಿದ್ದೀರೋ ಅಥವಾ ಇತರರ ಬಗ್ಗೆ ಮಾತನಾಡುತ್ತಿದ್ದೀರೋ ಎಂಬ ವ್ಯತ್ಯಾಸ ತಿಳಿಯುವುದಿಲ್ಲ. ನೀವು ಆಡುವ ನಕಾರಾತ್ಮಕ ಶಬ್ದಗಳು ಕೊನೆಗೆ ನಿಮ್ಮದೇ ಜೀವನದ ಮೇಲೆ ಕೆಟ್ಟ ಪ್ರಭಾವ ಬೀರುತ್ತವೆ.
ಇಂದಿನಿಂದಲೇ ಈ ಸರಳ ಬದಲಾವಣೆ ಮಾಡಿಕೊಳ್ಳಿ:
ಯಾರನ್ನಾದರೂ ಹೊಗಳಲು ಸಾಧ್ಯವಾಗದಿದ್ದರೆ ಪರವಾಗಿಲ್ಲ, ಆದರೆ ಕನಿಷ್ಠ ಪಕ್ಷ ಯಾರ ಬಗ್ಗೆಯೂ ನೆಗೆಟಿವ್ ಕಮೆಂಟ್ ಅಥವಾ ನೆಗೆಟಿವ್ ಆಲೋಚನೆ ಮಾಡಬೇಡಿ. ತಂತ್ರಗಳಿಗಿಂತ ಹೆಚ್ಚಾಗಿ ಆ ತಂತ್ರದ ಹಿಂದಿರುವ ನಿಮ್ಮ ಉದ್ದೇಶ ಎಷ್ಟು ಪವಿತ್ರವಾಗಿದೆ ಮತ್ತು ಅದು ಎಷ್ಟು ಬಲವಾಗಿದೆ ಎಂಬುದು ಮುಖ್ಯ. “ಇದು ಖಂಡಿತವಾಗಿಯೂ ಆಗುತ್ತದೆ” ಎಂಬ ದೃಢವಾದ ನಂಬಿಕೆಯನ್ನು ನಿಮ್ಮದಾಗಿಸಿಕೊಳ್ಳಿ, ಬ್ರಹ್ಮಾಂಡವು ನಿಮ್ಮ ಇಷ್ಟಾರ್ಥಗಳನ್ನು ಖಂಡಿತವಾಗಿ ಪೂರೈಸುತ್ತದೆ ಎಂದು ಕಾವ್ಯಾ ಶಾಸ್ತ್ರಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 10:03 am, Tue, 7 July 26
