MNNIT ಇಂಟರ್ನ್‌ಶಿಪ್‌ ಆಫರ್; ಸೈಬರ್ ಸೆಕ್ಯೂರಿಟಿ ಕಲಿಯುವವರಿಗೆ ಸುವರ್ಣಾವಕಾಶ, ಜೊತೆಗೆ 20,000ರೂ. ಸ್ಟೈಪೆಂಡ್! – Kannada News

MNNIT ಇಂಟರ್ನ್‌ಶಿಪ್‌ ಆಫರ್Image Credit source: Pinterest

ಇಂದಿನ ಡಿಜಿಟಲ್ ಯುಗದಲ್ಲಿ ಆನ್‌ಲೈನ್ ವಂಚನೆ ಹಾಗೂ ಸೈಬರ್ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇಂತಹ ಸೈಬರ್ ದಾಳಿಗಳಿಗೆ ಬ್ರೇಕ್ ಹಾಕಲು ದೇಶದ ಯುವ ಸಮೂಹವನ್ನು ಹೈಟೆಕ್ ಸುರಕ್ಷತಾ ಕವಚದೊಂದಿಗೆ ಸಜ್ಜುಗೊಳಿಸಲು ಕೇಂದ್ರ ಸರ್ಕಾರ ಮತ್ತು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಮುಂದಾಗಿವೆ. ಇದರ ಭಾಗವಾಗಿ, ಪ್ರಯಾಗ್‌ರಾಜ್‌ನ ಮೋತಿಲಾಲ್ ನೆಹರು ರಾಷ್ಟ್ರೀಯ ತಾಂತ್ರಿಕ ಸಂಸ್ಥೆ (MNNIT) ಸೈಬರ್ ಸೆಕ್ಯೂರಿಟಿ ವಲಯದಲ್ಲಿ ವಿಶೇಷ ಇಂಟರ್ನ್‌ಶಿಪ್ (Internship) ಅವಕಾಶಗಳನ್ನು ಪ್ರಕಟಿಸಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ಪ್ರಾಯೋಜಕತ್ವದಡಿ, ಮಾಹಿತಿ ಭದ್ರತೆ ಮತ್ತು ಜಾಗೃತಿ (ISEA) ಪ್ರಾಜೆಕ್ಟ್‌ನ ಮೂರನೇ ಹಂತದ ಅಡಿಯಲ್ಲಿ ಈ ತರಬೇತಿಯನ್ನು ನೀಡಲಾಗುತ್ತಿದೆ.

ಇಂಟರ್ನ್‌ಶಿಪ್ ಅವಧಿ ಮತ್ತು ಸಿಗುವ ಸ್ಟೈಪೆಂಡ್ ಎಷ್ಟು?

ಈ ತಾಂತ್ರಿಕ ಇಂಟರ್ನ್‌ಶಿಪ್ ಕಾರ್ಯಕ್ರಮವು ಒಟ್ಟು 6 ರಿಂದ 8 ವಾರಗಳ ಅವಧಿಯದ್ದಾಗಿರಲಿದೆ (ಅಂದಾಜು 2 ತಿಂಗಳು). ತರಬೇತಿಯ ಅವಧಿಯಲ್ಲಿ ಆಯ್ಕೆಯಾಗುವ ಪ್ರತಿ ವಿದ್ಯಾರ್ಥಿಗೆ ಒಟ್ಟು 20,000ರೂ. ಸ್ಟೈಪೆಂಡ್ (ಅಂದರೆ ತಿಂಗಳಿಗೆ 10,000ರೂ. ರಂತೆ) ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ. ಇದರೊಂದಿಗೆ ವಿದ್ಯಾರ್ಥಿಗಳಿಗೆ ಸಂಸ್ಥೆಯ ಕ್ಯಾಂಪಸ್ ಒಳಗಡೆಯೇ ಉಚಿತ ಹಾಸ್ಟೆಲ್ (ವಸತಿ) ಮತ್ತು ಭೋಜನದ ಸೌಲಭ್ಯವನ್ನೂ ಕಲ್ಪಿಸಿಕೊಡಲಾಗುತ್ತದೆ.

ಯಾರಿಗೆಲ್ಲಾ ಅವಕಾಶ?

  • ಕಂಪ್ಯೂಟರ್ ಸೈನ್ಸ್ ಮತ್ತು ಇನ್ಫರ್ಮೇಷನ್ ಟೆಕ್ನಾಲಜಿ (IT) ಹಿನ್ನೆಲೆಯುಳ್ಳ ವಿದ್ಯಾರ್ಥಿಗಳಿಗೆ ಮಾತ್ರ ಈ ಇಂಟರ್ನ್‌ಶಿಪ್‌ನಲ್ಲಿ ಭಾಗವಹಿಸಲು ಅವಕಾಶವಿದೆ.
  • ಪ್ರಸ್ತುತ B.Tech, MCA, BCA, B.Sc (CS/IT) ಅಥವಾ M.Sc (CS/IT) ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
  • ಅರ್ಜಿದಾರರು C, C++, Java, ಅಥವಾ Python ನಂತಹ ಪ್ರೋಗ್ರಾಮಿಂಗ್ ಭಾಷೆಗಳಲ್ಲಿ ಉತ್ತಮ ಜ್ಞಾನ ಹೊಂದಿರಬೇಕು.
  • ನೆಟ್‌ವರ್ಕ್ ಸೆಕ್ಯೂರಿಟಿ, ಕ್ರಿಪ್ಟೋಗ್ರಫಿ (Cryptography) ಮತ್ತು ಆಧುನಿಕ ಸೈಬರ್ ಸೆಕ್ಯೂರಿಟಿ ಪರಿಕರಗಳ ಬಗ್ಗೆ ಮೂಲಭೂತ ಜ್ಞಾನ ಇರುವವರಿಗೆ ಆಯ್ಕೆ ಪ್ರಕ್ರಿಯೆಯಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ.
  • ಅರ್ಜಿದಾರರ ಗರಿಷ್ಠ ವಯೋಮಿತಿ 25 ವರ್ಷ ಮೀರಿರಬಾರದು (SC/ST/OBC ಮತ್ತು ಮಹಿಳಾ ಅಭ್ಯರ್ಥಿಗಳಿಗೆ ನಿಯಮಾವಳಿಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ).

ಇದನ್ನೂ ಓದಿ: 16 ಸರ್ಕಾರಿ ಉದ್ಯೋಗ ತಿರಸ್ಕರಿಸಿ IPS ಆದ ಯುವತಿ; ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿದ ತೃಪ್ತಿ ಭಟ್ ಯಶೋಗಾಥೆ

ಇಂಟರ್ನ್‌ಶಿಪ್‌ನಲ್ಲಿ ಏನೆಲ್ಲಾ ಕಲಿಯಬಹುದು?

ಆಯ್ಕೆಯಾದ ಅಭ್ಯರ್ಥಿಗಳಿಗೆ MNNIT ಸಂಸ್ಥೆಯ ಹಿರಿಯ ಪ್ರೊಫೆಸರ್‌ಗಳು ಹಾಗೂ ತಜ್ಞರ ಮಾರ್ಗದರ್ಶನದಲ್ಲಿ ಈ ಕೆಳಗಿನ ಪ್ರಮುಖ ವಿಷಯಗಳ ಕುರಿತು ಪ್ರಾಯೋಗಿಕ ಅನುಭವ ಮತ್ತು ಲೈವ್ ರಿಸರ್ಚ್ ಮಾಡುವ ಅವಕಾಶ ಸಿಗಲಿದೆ:

  • ಇನ್ಫರ್ಮೇಷನ್ ಸೆಕ್ಯೂರಿಟಿ (ಮಾಹಿತಿ ಭದ್ರತೆ)
  • ನೆಟ್‌ವರ್ಕ್ ಸೆಕ್ಯೂರಿಟಿ ಮತ್ತು ಎಥಿಕಲ್ ಹ್ಯಾಕಿಂಗ್
  • ಸೈಬರ್ ದಾಳಿಗಳನ್ನು ತಡೆಯುವ ಸುಧಾರಿತ ಫ್ರೇಮ್‌ವರ್ಕ್ ವಿನ್ಯಾಸ

ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಸಲ್ಲಿಸುವ ವಿಧಾನ:

ಈ ಇಂಟರ್ನ್‌ಶಿಪ್‌ಗಾಗಿ ದೇಶಾದ್ಯಂತದ ಮೆರಿಟ್ ವಿದ್ಯಾರ್ಥಿಗಳಿಂದ ಈಗಾಗಲೇ ಭಾರಿ ಪ್ರಮಾಣದ ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಅರ್ಹ ಅಭ್ಯರ್ಥಿಗಳನ್ನು ಇಂಟರ್ವ್ಯೂ (ಸಂದರ್ಶನ) ಮೂಲಕ ಆಯ್ಕೆ ಮಾಡಲಾಗುತ್ತದೆ.

ಆಸಕ್ತ ವಿದ್ಯಾರ್ಥಿಗಳು MNNIT ಅಧಿಕೃತ ವೆಬ್‌ಸೈಟ್‌ನಿಂದ ನಿಗದಿಪಡಿಸಿದ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು, ತಮ್ಮ ಶೈಕ್ಷಣಿಕ ದಾಖಲಾತಿಗಳ ಸ್ಕ್ಯಾನ್ ಮಾಡಿದ ಪ್ರತಿಗಳೊಂದಿಗೆ isea@mnnit.ac.in ಇಮೇಲ್ ಐಡಿಗೆ ಇಮೇಲ್ ಕಳುಹಿಸುವ ಮೂಲಕ ಅರ್ಜಿ ಸಲ್ಲಿಸಬೇಕಿರುತ್ತದೆ. ಇಮೇಲ್ ಕಳುಹಿಸುವಾಗ ಸಬ್ಜೆಕ್ಟ್ ಲೈನ್‌ನಲ್ಲಿ “Application for Internship for 6-8 Weeks” ಎಂದು ಕಡ್ಡಾಯವಾಗಿ ನಮೂದಿಸಬೇಕು.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *