Money9 Financial Freedom Summit: ಚಿಲ್ಲರೆ ಹೂಡಿಕೆದಾರರೇ ಷೇರು ಮಾರುಕಟ್ಟೆಯ ಬೆನ್ನೆಲುಬು; ಬರುಣ್ ದಾಸ್

Money9 Financial Freedom Summit: ಚಿಲ್ಲರೆ ಹೂಡಿಕೆದಾರರೇ ಷೇರು ಮಾರುಕಟ್ಟೆಯ ಬೆನ್ನೆಲುಬು; ಬರುಣ್ ದಾಸ್

ನವದೆಹಲಿ, ಮಾರ್ಚ್​​ 12: ಚಿಲ್ಲರೆ ಹೂಡಿಕೆದಾರರು ಷೇರು ಮಾರುಕಟ್ಟೆಯ ಬೆನ್ನೆಲುಬು. ಕಳೆದ ಎರಡು ವರ್ಷಗಳಲ್ಲಿ ಷೇರು ಮಾರುಕಟ್ಟೆಯ ನಿಜವಾದ ಹೀರೋಗಳೆಂದರೆ ರಿಟೇಲ್ ಹೂಡಿಕೆದಾರರು ಹೊರತು ಸಾಂಸ್ಥಿಕ ಹೂಡಿಕೆದಾರರಲ್ಲ. ಚಿಲ್ಲರೆ ಹೂಡಿಕೆದಾರರೇ ನವ ಭಾರತದ ಶಕ್ತಿ ಎಂದು ಮನಿ9 ಫೈನಾನ್ಶಿಯಲ್ ಫ್ರೀಡಂ ಶೃಂಗಸಭೆ 2026ರಲ್ಲಿ (Money9 Financial Summit) ಟಿವಿ9 ನೆಟ್‌ವರ್ಕ್‌ನ ಎಂಡಿ ಮತ್ತು ಸಿಇಒ ಬರುಣ್ ದಾಸ್​​ (Barun Das) ಹೇಳಿದ್ದಾರೆ.

ಜನರನ್ನು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಮಾಡುವುದೇ ನಮ್ಮ ಗುರಿ: ಬರುಣ್ ದಾಸ್

ಮನಿ9 ಫೈನಾನ್ಶಿಯಲ್ ಫ್ರೀಡಂ ಶೃಂಗಸಭೆ 2026 ರಲ್ಲಿ ಮಾತನಾಡಿದ ಟಿವಿ9 ನೆಟ್‌ವರ್ಕ್‌ನ ಎಂಡಿ ಮತ್ತು ಸಿಇಒ ಬರುಣ್ ದಾಸ್, ಟಿವಿ9 ನೆಟ್‌ವರ್ಕ್‌ನಲ್ಲಿ ಮನಿ9 ಅನ್ನು ನಾವು ಒಂದು ವಿಶೇಷ ಉದ್ದೇಶದೊಂದಿಗೆ ಆರಂಭಿಸಿದ್ದೇವೆ. ಭಾರತೀಯ ಭಾಷೆಗಳಲ್ಲೇ ಹಣಕಾಸು ಜ್ಞಾನವನ್ನು ಜನರಿಗೆ ತಲುಪಿಸುವ ಮೂಲಕ ಆ ನಿಟ್ಟಿನಲ್ಲಿ ಅವರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಹಾಯ ಮಾಡುವುದು ನಮ್ಮ ಉದ್ದೇಶ. ನಮ್ಮಲ್ಲಿ ಬಹುತೇಕ ಜನರು ಹಣಕ್ಕಾಗಿ ಕೆಲಸ ಮಾಡುತ್ತೇವೆ. ಆದರೆ ನಮ್ಮಗಾಗಿ ಹಣ ದುಡಿಯಲಾರಂಭಿಸಿದಾಗ ನಾವು ಆರ್ಥಿಕವಾಗಿ ಸ್ವಾತಂತ್ರ್ಯರಾಗುತ್ತೇವೆ ಎಂದರು.

2024 ಮತ್ತು 2025ರಲ್ಲಿ ವಿದೇಶಿ ಹೂಡಿಕೆದಾರರು ನಿವ್ವಳ ಮಾರಾಟಗಾರರಾಗಿದ್ದರೂ, ಆ ಸಮಯದಲ್ಲಿ ಚಿಲ್ಲರೆ ಹೂಡಿಕೆದಾರರು ಷೇರು ಮಾರುಕಟ್ಟೆಯ ಬೆನ್ನೆಲುಬಾದರು. ಕಳೆದ ಒಂದೂವರೆ ವರ್ಷದಲ್ಲಿ ಭಾರತದಲ್ಲಿ ಚಿನ್ನದ ಬೆಲೆ ದ್ವಿಗುಣವಾಗಿದೆ. ಭಾರತೀಯ ಕುಟುಂಬಗಳು ತಮ್ಮ ಪಾರಂಪರಿಕ ಸಂಪತ್ತಾದ ಚಿನ್ನದಿಂದ ಗಳಿಸಿದ ಮೌಲ್ಯವು, ಸಂಪೂರ್ಣ ಷೇರು ಮಾರುಕಟ್ಟೆಯ ಮಾರುಕಟ್ಟೆ ಮೌಲ್ಯದಿಂದ ಬಂದ ಲಾಭಕ್ಕೆ ಸಮಾನವಾಗಿದೆ ಎಂದು ಅವರು ತಿಳಿಸಿದರು.

ಭಾರತೀಯ ಕುಟುಂಬಗಳ ನಿಜವಾದ ಶಕ್ತಿಯೇ ಚಿನ್ನ

ನನಗೆ ಹಲವಾರು ಬಾರಿ ನಮ್ಮ ಅಜ್ಜಿ–ಅಜ್ಜಿಯವರು ಹೇಳಿದ್ದೇ ಸರಿ ಎನ್ನಿಸುತ್ತದೆ. ಚಿನ್ನ ನಿಜವಾಗಿಯೂ ಸಂಕಷ್ಟದ ಸಂದರ್ಭಗಳಲ್ಲಿ ನೆರವಾಗುತ್ತದೆ. ಕಳೆದ ಒಂದೂವರೆ ವರ್ಷದಲ್ಲಿ ಭಾರತದಲ್ಲಿ ಚಿನ್ನದ ಬೆಲೆ 10 ಗ್ರಾಂಗೆ ಸುಮಾರು ಒಂದು ಲಕ್ಷ ರೂಪಾಯಿವರೆಗೆ ಏರಿಕೆಯಾಗಿದೆ. ಭಾರತೀಯ ಕುಟುಂಬಗಳಲ್ಲಿ ಸುಮಾರು 27 ಸಾವಿರ ಟನ್ ಚಿನ್ನವಿದ್ದು, ಇದರ ಪರಿಣಾಮವಾಗಿ ಅವರ ಸಂಪತ್ತಿನಲ್ಲಿ ಸುಮಾರು 100 ಲಕ್ಷ ಕೋಟಿ ರೂ ಹೆಚ್ಚಳವಾಗಿದೆ. ಇದೇ ಭಾರತೀಯ ಕುಟುಂಬಗಳ ನಿಜವಾದ ಶಕ್ತಿ. ಜಗತ್ತಿನಲ್ಲೇ ಚಿನ್ನದ ಮೇಲೆ ಅತ್ಯಧಿಕ ಸ್ವಾಮ್ಯ ಹೊಂದಿರುವವರು ಭಾರತೀಯರು ಎಂದರು.

ಎಸ್‌ಐಪಿ ಹೂಡಿಕೆಯಲ್ಲಿ ದಾಖಲೆ

ಇತ್ತೀಚಿನ ದಿನಗಳಲ್ಲಿ ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್ ಅಂದರೆ ಎಸ್​​ಐಪಿ ಮೂಲಕ ನಡೆಯುತ್ತಿರುವ ಹೂಡಿಕೆಗಳು ಗಮನಾರ್ಹವಾಗಿವೆ. 2025ರ ಡಿಸೆಂಬರ್ ಮತ್ತು 2026ರ ಜನವರಿ ತಿಂಗಳಲ್ಲಿ ಮಾಸಿಕವಾಗಿ ಸುಮಾರು 31 ಸಾವಿರ ಕೋಟಿ ರೂ ಎಸ್‌ಐಪಿ ಹೂಡಿಕೆ ನಡೆದಿದೆ. ಜನವರಿ ವೇಳೆಗೆ ದೇಶದಲ್ಲಿ 26 ಕೋಟಿಗೂ ಹೆಚ್ಚು ಎಸ್‌ಐಪಿ ಖಾತೆಗಳು ಇದ್ದವು.

ಇದನ್ನೂ ಓದಿ: Money9 Summit: 2047ರೊಳಗೆ ಮಹಾರಾಷ್ಟ್ರ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ: ಮಹಾರಾಷ್ಟ್ರ ಸಿಎಂ ಫಡ್ನವಿಸ್

ಇನ್ನು ಭಾರತದಲ್ಲಿ ಚಿಲ್ಲರೆ ಹೂಡಿಕೆದಾರರು ಇದೀಗ ಪ್ರಬುದ್ಧರಾಗಿದ್ದು, ಜೊತೆಗೆ ಬುದ್ಧಿವಂತರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ ಹಣಕಾಸು ಒಳಗೊಳ್ಳುವಿಕೆ ಅಭಿಯಾನದ ಪ್ರಯೋಜನವನ್ನು ಅವರು ಸಮರ್ಪಕವಾಗಿ ಪಡೆದುಕೊಂಡಿದ್ದಾರೆ. ‘ಮ್ಯೂಚುವಲ್ ಫಂಡ್ ಸರಿಯೇ’ ಎಂಬ ಸಂದೇಶವನ್ನು ಅವರು ಅರ್ಥಮಾಡಿಕೊಂಡಿದ್ದಾರೆ. ಕ್ರಮಬದ್ಧ ಹೂಡಿಕೆಗಳ ಮೂಲಕವೇ ಭವಿಷ್ಯದಲ್ಲಿ ವೇಗವಾಗಿ ಬೆಳೆಯುತ್ತಿರುವ ಭಾರತದ ಆರ್ಥಿಕತೆಯಲ್ಲಿ ನಿಜವಾದ ಸಂಪತ್ತು ನಿರ್ಮಾಣ ಸಾಧ್ಯವೆಂದು ಅವರು ಅರಿತುಕೊಂಡಿದ್ದಾರೆ ಎಂದು ಬರುಣ್ ದಾಸ್ ಹೇಳಿದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *