Nagara Panchami 2026: ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿಯ ಸೊಗಡು – Kannada News | Actress Umashree And Others Women Celebrates Nagara Panchami In Palace Ground at bengaluru

ಬೆಂಗಳೂರು, (ಆಗಸ್ಟ್ 16): ಹಿಂದೂ(Hindu) ಸಂಸ್ಕೃತಿಯಲ್ಲಿ ಸಾಲು ಸಾಲು ಹಬ್ಬಗಳ ಆಗಮನಕ್ಕೆ ಮಂಗಲಮಯ ಮುನ್ನುಡಿ ಬರೆಯುವ ಮೊದಲ ಪವಿತ್ರ ಪರ್ವವೇ ನಾಗರ ಪಂಚಮಿ. ಪ್ರತಿವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯಂದು(Nagara Panchami) ಆಚರಿಸಲಾಗುವ ಈ ದಿನ, ನಾಗ ದೇವತೆಯನ್ನು ಅತ್ಯಂತ ಶ್ರದ್ಧೆ, ಭಕ್ತಿ ಮತ್ತು ಕೃತಜ್ಞತೆಯಿಂದ ಪೂಜಿಸುವುದು ಅನಾದಿ ಕಾಲದಿಂದಲೂ ಬಂದ ಶ್ರೇಷ್ಠ ಸಂಪ್ರದಾಯ. ಈ ಹಬ್ಬವನ್ನು ಉತ್ತರ ಕರ್ನಾಟಕದಲ್ಲಿ ಭಾಗದಲ್ಲಿ ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ. ಬಗೆ ಬಗೆ ಖಾದ್ಯಗಳನ್ನ ಮಾಡಿ ಕುಟುಂಬಸ್ಥರೊಂದಿಗೆ ನಾಗಪ್ಪನಿಗೆ ಹಾಲು ಎರೆದು ಸಂಭ್ರಮಿಸುತ್ತಾರೆ. ಈ ಸಂಭ್ರಮ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮನೆ ಮಾಡಿದೆ. ಹೌದು…ಇಂದು (ಆಗಸ್ಟ್​ 16) ಬೆಳಿಗ್ಗೆಯಿಂದ ಅರಮನೆ ಮೈದಾನದ ಗಾಯತ್ರಿ ವಿಹಾರದ ‘ವೃಕ್ಷ ಸಾಂಪ್ರದಾಯಿಕ ಕಲಾಮಂಟಪ’ದಲ್ಲಿ ‘ನಮ್ಮೂರ ನಾಗರ ಪಂಚಮಿ 2026’ ಅದ್ದೂರಿಯಾಗಿ ಆಚರಿಸಲಾಯ್ತು. ನಟಿ ಉಮಾಶ್ರೀ ಸೇರಿದಂತೆ ಅನೇಕ ಮಹಿಳೆಯವರು ಭಾಗಿ ಆಗಿದ್ದರು. ನಗರೀಕರಣದಲ್ಲಿ ಮರೆಯಾಗುತ್ತಿರುವ ಹಳ್ಳಿ ಸಂಸ್ಕೃತಿಯನ್ನು ಮರುಸೃಷ್ಟಿಸುವುದೇ ಈ ಕಾರ್ಯಕ್ರಮದ ಉದ್ದೇಶ. ನಾಗಪೂಜೆ ಮತ್ತು ಗೋಪೂಜೆಯೊಂದಿಗೆ ಆರಂಭವಾಗುವ ಈ ಹಬ್ಬದಲ್ಲಿ ಇಳಕಲ್ ಸೀರೆ, ಕೋಲಾಟ, ಪಗಡಿ, ರಂಗೋಲಿ, ಸೇವಿಗೆ ಹೊಸೆಯುವುದು, ರೊಟ್ಟಿ ಬಡಿಯುವುದು, ಬುಟ್ಟಿ ಬ್ಯಾಲೆನ್ಸ್, ಬೀಸಣಿಕೆ ಸ್ಪರ್ಧೆ ಏರ್ಪಡಿಸಲಾಗಿತ್ತು.

ಇದನ್ನು ಓದಿ:  Naga Panchami 2026: ಆ. 17 ನಾಗರ ಪಂಚಮಿ; ಪೂಜಾ ಮುಹೂರ್ತ ಮತ್ತು ಸರ್ಪ ನಮಸ್ಕಾರ ಮಂತ್ರಗಳ ಮಹತ್ವ ತಿಳಿಯಿರಿ

Source link

Leave a Reply

Your email address will not be published. Required fields are marked *