Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 10ರ ದಿನಭವಿಷ್ಯ – Kannada News | Numerology Horoscope Feb 10: Birth Numbers 1, 2, 3 Daily Predictions

ಜನ್ಮಸಂಖ್ಯೆಗೆ 1, 2, 3ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಫೆಬ್ರವರಿ 10ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಪ್ರಯಾಣದಲ್ಲಿ ಇರುವವರು ಬೆಲೆ ಬಾಳುವ ವಸ್ತುಗಳ ಕಡೆಗೆ ಲಕ್ಷ್ಯ ನೀಡಿ. ಮನೆಯಲ್ಲಿ ಇರುವಂಥ ಪ್ರಮುಖ ಕಾಗದ- ಪತ್ರಗಳು ಇವೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ. ಅದರ ನಕಲು ತೆಗೆಸುವುದಕ್ಕೆ ಮನೆಯಿಂದ ಹೊರಗೆ ತೆಗೆದುಕೊಂಡು ಹೋಗುತ್ತೀರಿ ಎಂದಾದರೆ ಜೋಪಾನವಾಗಿ ವಾಪಸ್ ತಂದು, ಮನೆಯಲ್ಲಿ ಇಟ್ಟುಕೊಳ್ಳುವ ಕಡೆಗೆ ಗಮನವನ್ನು ನೀಡಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಒಂದು ಬಗೆಯಲ್ಲಿ ಈ ದಿನ ಸಂತೋಷವಾಗಿ ಕಳೆಯಲಿದೆ. ಅದರಲ್ಲೂ ನೀವು ಬಹಳ ಇಷ್ಟ ಪಡುವಂಥ ವ್ಯಕ್ತಿಗಳನ್ನು ಭೇಟಿ ಆಗಲಿದ್ದೀರಿ. ಅವರು ಸ್ನೇಹಿತರಾಗಿರಬಹುದು ಅಥವಾ ಸಂಬಂಧಿಗಳಾಗಿರಬಹುದು, ಆದರೆ ಅವರ ಜತೆಗೆ ನೀವು ಕಳೆಯುವ ಸಮಯ ಸಂತಸವನ್ನು ನೀಡುತ್ತದೆ. ಆದ್ದರಿಂದ ಬಹಳ ಖುಷಿ ಖುಷಿಯಾದ ಮನಸ್ಥಿತಿಯಲ್ಲಿ ಇರುತ್ತೀರಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಈ ಹಿಂದಿನ ಕೆಲವು ಘಟನೆಗಳು ನಿಮ್ಮಲ್ಲಿ ಬದಲಾವಣೆ ತರಲಿದೆ. ನಿಮ್ಮ ಸಿದ್ಧತೆ ಬಹಳ ಚೆನ್ನಾಗಿರಲಿದೆ. ಇತರರು ಸಹ ಇದೇ ವಿಚಾರಕ್ಕೆ ನಿಮ್ಮ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲಿದ್ದಾರೆ. ಒಂದು ವೇಳೆ ನೀವೇನಾದರೂ ವಿವಾಹ ವಯಸ್ಕರಾಗಿದ್ದಲ್ಲಿ ಮದುವೆಗೆ ಪ್ರಯತ್ನ ಪಡುತ್ತಿದ್ದರೆ ಮ್ಯಾಟ್ರಿಮೋನಿ ವೆಬ್ ಸೈಟ್ ಗಳು ಅಥವಾ ವಧು-ವರರ ಸಮಾವೇಶಗಳಲ್ಲಿ ಸೂಕ್ತ ಸಂಬಂಧ ದೊರೆಯುವಂಥ ಯೋಗ ಇದೆ.

ಲೇಖನ- ಸ್ವಾತಿ ಎನ್.ಕೆ.

Source link

Leave a Reply

Your email address will not be published. Required fields are marked *