ಕೆಂಪು ಬಣ್ಣದ ಕಮಲದ ಹೂವನ್ನು ಲಕ್ಷ್ಮೀ ದೇವಿಯ ವಿಗ್ರಹ ಅಥವಾ ಚಿತ್ರಪಟ ಅಥವಾ ದೇವಸ್ಥಾನದಲ್ಲಿನ ವಿಗ್ರಹಕ್ಕೆ ಅರ್ಪಣೆ ಮಾಡಿ. ಇದರಿಂದಾಗಿ ಕಾರ್ಯ ವಿಳಂಬ ದೂರವಾಗಲಿದೆ. ಅದೇ ವೇಳೆ ನಿಮಗೆ ಬರಬೇಕಾದ ಆದಾಯಕ್ಕೆ ತಡೆ ಆಗುತ್ತಿದ್ದಲ್ಲಿ ಅದರ ನಿವಾರಣೆ ಆಗಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ನೀವು ಮಾಡುತ್ತಿರುವ ಪ್ರಯತ್ನ ಹಾಗೂ ಹಾಕುತ್ತಿರುವ ಶ್ರಮಕ್ಕೆ ಪ್ರತಿಫಲವು ಮೇಲ್ನೋಟಕ್ಕೆ ಕಂಡು ಬರುವುದಿಲ್ಲ. ಆದರೆ ದೀರ್ಘಾವಧಿಗೆ ಇದು ನಿಮ್ಮ ಕೈ ಹಿಡಿಯಲಿದೆ. ನಿಮ್ಮ ಸಾಧನೆಯನ್ನು ಬಾಯಿ ಬಿಟ್ಟು ಹೇಳುವ ಅಗತ್ಯ ಇಲ್ಲದಂತೆ ಸಂಬಂಧಪಟ್ಟವರ ಗಮನಕ್ಕೆ ಬರಲಿದೆ. ಒಂದು ಕೆಲಸಕ್ಕೆ ಇತರರ ಮೇಲೆ ಅವಲಂಬಿತರಾಗುವ ಮೊದಲಿಗೆ ನಿಮ್ಮ ಮನಸ್ಸು ಹೇಳುವ ಮಾತನ್ನು ಸಹ ಕೇಳಿಸಿಕೊಳ್ಳಿ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಹಣ ಬರುವುದೊಂದೇ ಕೆಲಸದಲ್ಲಿ ಸಿಗುವ ತೃಪ್ತಿ ಅಲ್ಲ ಎಂಬುದು ಈ ದಿನ ಹಲವು ಸಲ ನಿಮಗೆ ಅನಿಸುತ್ತದೆ. ಅದೇ ವೇಳೆ, ಅದರಾಚೆಗೆ ಬೇರೆ ಏನೋ ಇದೆ ಎಂಬ ಹುಡುಕಾಟ ಹೊಸ ಎತ್ತರಕ್ಕೆ ಏರುವುದಕ್ಕೆ ಸ್ಫೂರ್ತಿ ಆಗಲಿದೆ. ಅನುಭವದಿಂದ ನೀವು ಕಲಿತ ಪಾಠವನ್ನು ಅನ್ವಯಿಸಿಕೊಳ್ಳಲು ಪ್ರಯತ್ನಿಸಿ. ಅತ್ಯುತ್ಸಾಹದಲ್ಲಿ ಈ ಹಿಂದೆ ಯಾವಾಗಲೋ ನೀಡಿದ್ದ ಮಾತನ್ನು ಈಡೇರಿಸವುದಕ್ಕೆ ಬಹಳ ಶ್ರಮ ಹಾಕುವಂತೆ ಆಗಲಿದೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ನಿಮಗೆ ಆತ್ಮವಿಶ್ವಾಸ ಇರುವಂಥ ಕೆಲಸ- ಕಾರ್ಯ ಮಾಡುವುದಕ್ಕೂ ಒಂದು ಬಗೆಯ ಹಿಂಜರಿಕೆ ಕಾಡಲಿದೆ. ಯಾವುದಕ್ಕೂ ಇರಲಿ ಸ್ನೇಹಿತರ ಸಲಹೆಯನ್ನು ಕೇಳೋಣ ಎಂಬ ಪರಿಸ್ಥಿತಿ ಉದ್ಭವಿಸುತ್ತದೆ. ‘ನನ್ನಿಂದ ಆದ ಸಹಾಯವನ್ನು ನಿಮಗೆ ಮಾಡಲಾ?’ ಎಂಬ ಪ್ರಶ್ನೆಯನ್ನು ಯಾರಿಗೇ ಕೇಳಬೇಕಾದರೂ ಸಾವಿರ ಬಾರಿ ಆಲೋಚಿಸುವುದು ಒಳ್ಳೆಯದು. ಏಕೆಂದರೆ ಇದೊಂದು ಮಾತು ನಿಮ್ಮ ಇಡೀ ದಿನದ ಸಮಯವನ್ನು ತೆಗೆದುಕೊಂಡು ಬಿಡಬಹುದು.
ಲೇಖನ- ಸ್ವಾತಿ ಎನ್.ಕೆ.
