Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 6ರ ದಿನಭವಿಷ್ಯ

ನಿಮಗೆ ಕಿರಿಕಿರಿ ಮಾಡುವಂಥ ಶತ್ರುಗಳ ಹಿಂಸೆಯಿಂದ ಹೊರಬರುವುದಕ್ಕೆ ಪಾತಾಳ ವಾರಾಹಿ ದೇವಿಯ ಸ್ಮರಣೆ- ಆರಾಧನೆ ಮಾಡಿ. ಇದರಿಂದ ಶುಭ ಬೆಳವಣಿಗೆಗಳು ಆಗಲಿವೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ನಿಮ್ಮದೆಷ್ಟೋ ಅಷ್ಟು ಕೆಲಸವನ್ನು ಮಾತ್ರ ಮಾಡುವ ಕಡೆಗೆ ಲಕ್ಷ್ಯವನ್ನು ನೀಡಿ. ಅತ್ಯುತ್ಸಾಹದಲ್ಲೋ ಅಥವಾ ಇನ್ನೊಬ್ಬರಿಗೆ ಸಹಾಯ ಆಗಲಿ ಅಂದುಕೊಂಡೋ ಏನಾದರೂ ಅಗತ್ಯಕ್ಕಿಂತ ಹೆಚ್ಚು ಮಾತನಾಡುವುದೋ ಅಥವಾ ಕೆಲಸಕ್ಕೆ ತೊಡಗುವುದೋ ಮಾಡಿದರೆ ಆ ನಂತರ ಪರಿತಪಿಸುವಂತೆ ಆಗಲಿದೆ. ವಸ್ತ್ರಾಭರಣಗಳ ಖರೀದಿಗೆ ಹೆಚ್ಚಿನ ಖರ್ಚಾಗುವಂಥ ಯೋಗ ಇದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಸಂಬಂಧಿಗಳೋ- ಸ್ನೇಹಿತರೋ ತಮ್ಮ ಶಾಪಿಂಗ್ ಗೆ ನೀವೂ ಬರಬೇಕು ಎಂದು ಒತ್ತಡ ಹಾಕಿ, ಕರೆದುಕೊಂಡು ಹೋಗಲಿದ್ದಾರೆ. ಮನೆಗೆ ಬೇಕಾದ ವಸ್ತುಗಳು ಕೆಲವನ್ನು ತರಲೇಬೇಕು ಎಂಬ ಕಾರಣಕ್ಕೆ ಕ್ರೆಡಿಟ್ ಕಾರ್ಡ್ ಬಳಸಲಿದ್ದೀರಿ. ಇಷ್ಟು ಕಾಲ ಅಷ್ಟೇನೂ ತಲೆ ಕೆಡಿಸಿಕೊಳ್ಳದೆ ಸುಮ್ಮನೆ ಇದ್ದಂಥ ವಸ್ತು- ವಿಷಯಗಳಿಗೆ ಸಿಕ್ಕಾಪಟ್ಟೆ ಪ್ರಾಶಸ್ತ್ಯ ಬಂದುಬಿಡುತ್ತದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ಪ್ರಯಾಣದಿಂದ ಆಯಾಸ ಕಾಡಲಿದೆ. ಉದ್ಯೋಗ ಸ್ಥಳದಲ್ಲಿಯೂ ಕೆಲಸದ ಒತ್ತಡ ಇದ್ದು, ಅದರಿಂದ ಮಾನಸಿಕವಾದ ದಣಿವು ಕೂಡ ಜತೆಯಾಗುತ್ತದೆ. ಸಂಬಂಧಿಗಳು ಆಡಿದ ಮಾತುಗಳಿಂದ ಅಥವಾ ಈ ದಿನ ನಿಮಗೆ ಫೋನ್ ಮಾಡಿ, ಆಡುವಂಥ ಕೆಲವು ಮಾತುಗಳಿಂದ ವಿಪರೀತ ಸಿಟ್ಟು ಬರುವಂತೆ ಆಗಲಿದೆ. ವಿವಾಹಿತರಿಗೆ ಸಂಗಾತಿಯು ಹಣಕಾಸಿನ ವಿಚಾರದಲ್ಲಿ ತೆಗೆದುಕೊಳ್ಳುವ ತೀರ್ಮಾನ ಸಿಟ್ಟು ತರಿಸುತ್ತದೆ.

ಲೇಖನ- ಸ್ವಾತಿ ಎನ್.ಕೆ.

Source link

Leave a Reply

Your email address will not be published. Required fields are marked *