ಆಪ್ಟಿಕಲ್ ಇಲ್ಯೂಷನ್ ಚಿತ್ರImage Credit source: Social Media
ಆಪ್ಟಿಕಲ್ ಇಲ್ಯೂಷನ್ನಂತಹ (Optical Illusion) ಒಗಟಿನ ಚಿತ್ರಗಳು ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸಲು ಸಹಾಯ ಮಾಡುತ್ತದೆ. ಹೆಚ್ಚಿನವರು ಇಂತಹ ಒಗಟನ್ನು ಬಿಡಿಸಲು ಪ್ರಯತ್ನಿಸುತ್ತಾರೆ. ಆದರೆ ಎಲ್ಲರಿಗೂ ಅದು ಸಾಧ್ಯವಾಗಲ್ಲ. ಇದೀಗ ಮೆದುಳಿನ ತೀಕ್ಷ್ಣತೆಗೆ ಸವಾಲೊಡ್ಡುವ ಒಗಟಿನ ಚಿತ್ರವೊಂದು ವೈರಲ್ ಆಗಿದೆ. ಅಡುಗೆ ಮನೆಯಲ್ಲಿ ಅಡಗಿರುವ ಕಳ್ಳ ಬೆಕ್ಕನ್ನು ಕಂಡುಹಿಡಿಯುವ ಸವಾಲು ಇಲ್ಲಿದೆ. ಇಲ್ಲಿರುವ ವಸ್ತುಗಳ ನಡುವೆ ಅಡಗಿ ಕುಳಿತಿರುವುದರಿಂದ ಕಳ್ಳ ಬೆಕ್ಕನ್ನು ಕಂಡು ಹಿಡಿಯುವುದು ಅಷ್ಟು ಸುಲಭವಲ್ಲ. ಇದೀಗ ಕೇವಲ 20 ಸೆಕೆಂಡುಗಳೊಳಗೆ ಈ ಮನೆಯ ಮುದ್ದಿನ ಸಾಕು ಪ್ರಾಣಿಯನ್ನು ಹುಡುಕಿ ಜಾಣರು ಎನಿಸಿಕೊಳ್ಳಿ.
ಈ ಚಿತ್ರದಲ್ಲಿ ನಿಮಗೆ ಏನು ಕಾಣಿಸಿತು?
ಇಲ್ಯೂಷನ್ ಚಿತ್ರದಲ್ಲಿ ಅಡಗಿರುವ ವಸ್ತುಗಳನ್ನು, ಪ್ರಾಣಿ ಪಕ್ಷಿಗಳನ್ನು ಕಂಡು ಹಿಡಿಯುವುದು ಹೇಳುವಷ್ಟು ಸುಲಭವಲ್ಲ. ಈ ಚಿತ್ರ ನೋಡಿದಾಗ ನಿಮಗೆ ಅಡುಗೆ ಮನೆಯ ಸ್ಪಷ್ಟ ಚಿತ್ರಣವು ಕಾಣಿಸುತ್ತದೆ. ಈ ಅಡುಗೆ ಮನೆಯಲ್ಲಿ ಪಾತ್ರೆ, ಡೈನಿಂಗ್ ಟೇಬಲ್ ಸೇರಿದಂತೆ ವಿವಿಧ ವಸ್ತುಗಳಿವೆ. ನೀವು ಇಲ್ಲಿ ಅಡಗಿ ಕುಳಿತಿರುವ ಬೆಕ್ಕನ್ನು ಪತ್ತೆ ಹಚ್ಚಬೇಕು.
ಇದನ್ನೂ ಓದಿ: ದಟ್ಟವಾದ ಕಾನನದಲ್ಲಿ ಅಡಗಿ ಕುಳಿತಿರುವ ಚಿರತೆಯನ್ನು ಗುರುತಿಸಬಲ್ಲಿರಾ
ಬೆಕ್ಕು ನಿಮ್ಮ ಕಣ್ಣಿಗೆ ಕಾಣಿಸಿತೇ?
ಅಡುಗೆ ಮನೆಯಲ್ಲಿ ಅಡಗಿ ಕುಳಿತಿರುವ ಮನೆಯ ಮುದ್ದಿನ ಬೆಕ್ಕನ್ನು ಹುಡುಕುವುದು ಕಷ್ಟಕರ. ಹೌದು, ನೀವು ಕಣ್ಣು ಅಗಲಿಸಿ ನೋಡಿದರೂ ಕಳ್ಳ ಬೆಕ್ಕು ನಿಮ್ಮ ಕಣ್ಣಿಗೆ ಕಾಣಿಸಿಲ್ಲವೇ. ಈ ಟ್ರಿಕ್ಕಿ ಒಗಟು ಬಿಡಿಸಲು ಸಾಧ್ಯವಾಗಿಲ್ಲ ಅಂದ್ರೆ ನಾವೇ ಈ ಸಾಕು ಪ್ರಾಣಿ ಎಲ್ಲಿದೆ ಎಂದು ಹೇಳುತ್ತೇವೆ. ಬೆಕ್ಕು ಎಲ್ಲಿದೆ ಎಂದು ಈ ಕೆಳಗಿನ ಚಿತ್ರದಲ್ಲಿ ಗುರುತಿಸಿದ್ದೇವೆ. ನೀವು ಈ ಸಾಕು ಪ್ರಾಣಿಯನ್ನು ನೋಡಿದ್ದೀರಿ ಎಂದು ಭಾವಿಸುತ್ತೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ