Headlines

Optical Illusion: ನಿಮಗೊಂದು ಸವಾಲ್; ಈ ಚಿತ್ರದಲ್ಲಿರುವ ಕಳ್ಳ ಬೆಕ್ಕನ್ನು ಜಸ್ಟ್ 10 ಸೆಕೆಂಡುಗಳಲ್ಲಿ ಗುರುತಿಸಿ – Kannada News | Optical illusion: Spot the hidden cat in this picture within 10 seconds.

ನೀವು ಬುದ್ಧಿವಂತರೇ, ಹಾಗಾದ್ರೆ ಮೆದುಳು ಹಾಗೂ ಬುದ್ಧಿವಂತಿಕೆಯನ್ನು ಪರೀಕ್ಷಿಸುವ ಸಮಯ ಈಗ ಬಂದಿದೆ. ನೀವು ಈ ಹಿಂದೆ ಒಗಟಿನ ಚಿತ್ರಗಳನ್ನು ಬಿಡಿಸಲು ವಿಫಲ ಆಗಿದ್ದೀರಬಹುದು. ನಿಮ್ಮ ವೀಕ್ಷಣಾ ಸಾಮರ್ಥ್ಯ ಹಾಗೂ ಬುದ್ಧಿವಂತಿಕೆಯ ಮಟ್ಟವನ್ನು ಪರೀಕ್ಷಿಸಲು ಹೆಚ್ಚಿನವರು ಈ ಆಪ್ಟಿಕಲ್‌ ಇಲ್ಯೂಷನ್‌ (optical illusion) ಚಿತ್ರ ನೋಡಿ. ಈ ಅಡುಗೆ ಮನೆಯಲ್ಲಿ ಅಡಗಿರುವ ಬೆಕ್ಕನ್ನು ಕಂಡು ಹಿಡಿಯುವ ಸವಾಲು ಇಲ್ಲಿದೆ. ಈ ಒಗಟು ಬಿಡಿಸಿ ಜಾಣರು ಎನಿಸಿಕೊಳ್ಳಿ.

ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ

ಫೈಂಡ್ ದಿ ಸ್ನೈಪರ್’ (/FindTheSniper) ಎಂಬ ಸಬ್‌ರೆಡಿಟ್‌ನಲ್ಲಿ ಈ ಆಪ್ಟಿಕಲ್ ಭ್ರಮೆಯುಳ್ಳ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಅಡುಗೆ ಮನೆಯ ನೋಟವನ್ನು ಕಾಣಬಹುದು. ಪಾತ್ರೆಗಳು, ಉಪಕರಣಗಳು ಹಾಗೂ ದಿನನಿತ್ಯದ ವಸ್ತುಗಳು ಅಸ್ತವ್ಯಸ್ತವಾಗಿರುವುದನ್ನು ನೋಡಬಹುದು. ಈ ಅಡುಗೆ ಮನೆಯಲ್ಲಿ ಬೆಕ್ಕಿನ ಮರಿ ಸ್ಪಷ್ಟವಾಗಿ ಕಾಣದಂತೆ ಅಡಗಿಕೊಂಡಿದೆ. ಹತ್ತು ಸೆಕೆಂಡುಗಳೊಳಗೆ ಈ ಬೆಕ್ಕನ್ನು ನಿಮ್ಮ ಕಣ್ಣಿಗೆ ಕಾಣಿಸಿದ್ರೆ ನೀವು ಜಾಣರು ಎಂದರ್ಥ.

ರೆಡ್ಡಿಟ್‌ ಪೋಸ್ಟ್‌ ಇಲ್ಲಿದೆ

Find the predator
by
u/Suspecious_Banana in
FindTheSniper

ಇದನ್ನೂ ಓದಿ: ನಿಮ್ಮದು ಹದ್ದಿನ ಕಣ್ಣಾಗಿದ್ರೆ ಈ ಚಿತ್ರದಲ್ಲಿ ಅಡಗಿರುವ ಕಳ್ಳ ಬೆಕ್ಕನ್ನು ಗುರುತಿಸಬಲ್ಲಿರಾ

ಬೆಕ್ಕು ನಿಮ್ಮ ಕಣ್ಣಿಗೆ ಕಂಡಿತೇ?

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಭ್ರಮೆಯನ್ನುಂಟು ಮಾಡುವುದು ಸಹಜ. ಬೆಕ್ಕು ತನ್ನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸರಾಗವಾಗಿ ಬೆರೆತುಹೋಗಿದ್ದು, ಹೆಚ್ಚಿನವರಿಗೆ ಈ ಕಳ್ಳ ಬೆಕ್ಕನ್ನು ಕಂಡು ಹಿಡಿಯಲು ಸಾಧ್ಯವಿಲ್ಲ. ಅತ್ಯುತ್ತಮ ವೀಕ್ಷಣಾ ಕೌಶಲ್ಯ ಹೊಂದಿರುವ ಜನರು ಮಾತ್ರ 10 ಸೆಕೆಂಡುಗಳು ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ಬೆಕ್ಕನ್ನು ಗುರುತಿಸಬಹುದು. ಈ ಚಿತ್ರದಲ್ಲಿ ಡಿಶ್‌ವಾಶರ್‌ ಮೇಲಿರುವ ಚೀಲದೊಳಗೆ ಸದ್ದಿಲ್ಲದೆ ವಿಶ್ರಾಂತಿ ಪಡೆಯುತ್ತಿದೆ. ಈ ಕಳ್ಳ ಬೆಕ್ಕು ನಿಮ್ಮ ಕಣ್ಣಿಗೆ ಕಾಣಿಸಿತು ಎಂದು ಭಾವಿಸುತ್ತೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:17 am, Sun, 14 June 26

Source link

Leave a Reply

Your email address will not be published. Required fields are marked *