ಆಪ್ಟಿಕಲ್ ಇಲ್ಯೂಷನ್ ಚಿತ್ರ,Image Credit source: Social Media
ಬುದ್ಧಿವಂತಿಕೆ ಮತ್ತು ದೃಷ್ಟಿ ತೀಕ್ಷ್ಣತೆ ಪರೀಕ್ಷಿಸಲು ನೀವು ಮುಂದಾಗಿದ್ರೆ ಈ ಇಲ್ಯೂಷನ್ ಚಿತ್ರವು ನೂರಕ್ಕೆ ನೂರರಷ್ಟು ನಿಮ್ಮ ಸಹಾಯಕ್ಕೆ ಬರುತ್ತದೆ. ಈ ಒಗಟಿನ ಆಟಗಳು ಅಥವಾ ಆಪ್ಟಿಕಲ್ ಇಲ್ಯೂಷನ್ (Optical Illusion) ಚಿತ್ರಗಳನ್ನು ಬಿಡಿಸುವುದರಲ್ಲಿರುವ ಮಜಾನೇ ಬೇರೆ. ಅಂತಹದ್ದೇ ಚಿತ್ರವೊಂದು ಇದೀಗ ವೈರಲ್ ಆಗಿದ್ದು, ಈ ಚಿತ್ರದಲ್ಲಿ ಮೊಲವನ್ನು ಕಂಡು ಹಿಡಿಯಬೇಕು. 5 ಸೆಕೆಂಡುಗಳೊಳಗೆ ಈ ಒಗಟು ಬಿಡಿಸಿ ಜಾಣರು ಎನಿಸಿಕೊಳ್ಳಿ.
ಈ ಚಿತ್ರದಲ್ಲಿ ಏನು ಕಾಣಿಸುತ್ತದೆ?
ಈ ಮೋಜಿನ ಆಟಗಳ ಮೂಲಕ ಕಣ್ಣುಗಳು ಮತ್ತು ಬುದ್ಧಿಯೂ ಎಷ್ಟು ಚುರುಕಾಗಿದೆ ಎಂದು ತಿಳಿಯಲು ಸಾಧ್ಯ. ಈ ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಕಾಣಿಸುವುದೇ ಸೈಕಲ್. ಇಲ್ಲಿರುವ ಮರದ ಪಕ್ಕದಲ್ಲಿ ಸೈಕಲ್ ಬಿದ್ದಿದೆ. ಆದರೆ, ಇಲ್ಲಿ ಮೊಲವೂ ಇದೆ. ಈ ಪೋಟೋದಲ್ಲಿರುವ ಸವಾಲು ಮೊಲ ಎಲ್ಲಿದೆ ಎಂಬುದನ್ನು ಗುರುತಿಸುವುದು. ನೀವು 5 ಸೆಕೆಂಡುಗಳಲ್ಲಿ ಮೊಲವನ್ನು ಹುಡುಕಲು ಸಾಧ್ಯವಾದರೆ, ನಿಮ್ಮ ವೀಕ್ಷಣಾ ಕೌಶಲ್ಯಕ್ಕೆ ನೀವು ಹ್ಯಾಟ್ಸ್ ಆಫ್ ಹೇಳುತ್ತೇವೆ.
ಇದನ್ನೂ ಓದಿ: ನಿಮ್ಮ ಕಣ್ಣಿಗೊಂದು ಸವಾಲ್; ಈ ಎರಡು ಚಿತ್ರಗಳಲ್ಲಿನ ವ್ಯತ್ಯಾಸ ಗುರುತಿಸಬಲ್ಲಿರಾ
ಮೊಲವು ನಿಮ್ಮ ಕಣ್ಣಿಗೆ ಕಾಣಿಸಿತೇ?
ಇಲ್ಯೂಷನ್ ಚಿತ್ರದಲ್ಲಿ ಅಡಗಿರುವ ಗುಪ್ತ ವಸ್ತುಗಳನ್ನು ಹುಡುಕುವುದು ಅಷ್ಟು ಸುಲಭವಲ್ಲ. ಈ ಒಗಟನ್ನು ಬಿಡಿಸುವಾಗಲು ನಿಮಗೆ ಅಂತಹದ್ದೇ ಅನುಭವವಾಗಿರುತ್ತದೆ. ಈ ಚಿತ್ರದಲ್ಲಿ ನಿಮಗೆ ಮೊಲ ಕಾಣಿಸಿತೇ, ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಈ ಕೆಳಗಿನ ಚಿತ್ರದಲ್ಲಿ ಮೊಲ ಎಲ್ಲಿದೆ ಎಂದು ನಾವು ನಿಮಗೆ ಹೇಳುತ್ತೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 4:21 pm, Sun, 22 February 26
