ಆಪ್ಟಿಕಲ್ ಇಲ್ಯೂಷನ್ ಚಿತ್ರImage Credit source: stock.adobe.com
ಆಪ್ಟಿಕಲ್ ಇಲ್ಯೂಷನ್ (Optical Illusion) , ಬ್ರೈನ್ ಟೀಸರ್‌ನಂತಹ ಒಗಟಿನ ಚಿತ್ರಗಳನ್ನು ಬಿಡಿಸುವುದು ಹೇಳಿದ್ದಷ್ಟು ಸುಲಭವಲ್ಲ. ಈ ಒಗಟಿನ ಚಿತ್ರಗಳು ನಿಮ್ಮ ಮೆದುಳಿಗೆ ಕೆಲಸ ನೀಡುತ್ತವೆ. ಈ ಒಗಟುಗಳನ್ನು ಬಿಡಿಸುವುದೆಂದರೆ ಬಹುತೇಕರಿಗೆ ಇಷ್ಟ. ಹೀಗಾಗಿ ಬಿಡುವಿನ ಸಮಯವನ್ನು ಹೆಚ್ಚಿನವರು ಈ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳನ್ನು ಬಿಡಿಸುವುದರಲ್ಲಿ ತಮ್ಮ ಸಮಯ ಕಳೆಯುತ್ತಾರೆ. ಆದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಚಿತ್ರದಲ್ಲಿ ಮುದ್ದಾದ ಶ್ವಾನಗಳಿವೆ. ಈ ಸಾಕು ಪ್ರಾಣಿಗಳ ನಡುವೆ ಚಿನ್ನದ ನಾಣ್ಯವೊಂದಿದೆ. ನೀವು 10 ಸೆಕೆಂಡುಗಳೊಳಗೆ ಈ ನಾಣ್ಯವನ್ನು ಪತ್ತೆ ಹಚ್ಚುವುದೇ ನಿಮ್ಮ ಮುಂದಿರುವ ಬಹುದೊಡ್ಡ ಸವಾಲು. ಈ ಒಗಟು ಬಿಡಿಸಿ ನೀವು ಜಾಣರು ಎನಿಸಿಕೊಳ್ಳಿ.
ಈ ಚಿತ್ರದಲ್ಲಿ ನಿಮಗೆ ಏನು ಕಾಣಿಸಿತು?
ಈ ಒಗಟಿನ ಚಿತ್ರ ಮೊದಲಿಗೆ ಕಷ್ಟವೆನಿಸಬಹುದು. ಆದರೆ ನೀವು ಬುದ್ದಿವಂತರೇ ಎಂದು ಪರೀಕ್ಷಿಸಿಕೊಳ್ಳಲು ಸಹಕಾರಿಯಾಗಿದೆ. ನೀವು ಈ ಚಿತ್ರದಲ್ಲಿ ಹಚ್ಚ ಹಸಿರಿನ ಸಸ್ಯಗಳ ನಡುವೆ ಮುದ್ದು ಮುದ್ದಾದ ಶ್ವಾನಗಳನ್ನು ನೋಡಿರಬಹುದು. ಇಲ್ಲಿ ಚಿನ್ನದ ನಾಣ್ಯವನ್ನು ಮರೆ ಮಾಡಲಾಗಿದೆ. ಮೇಲೆ ನೀಡಲಾಗಿರುವ 10 ಸೆಕೆಂಡುಗಳೊಳಗೆ ಈ ಒಗಟನ್ನು ಬಿಡಿಸಬೇಕು. ಈ ಸವಾಲನ್ನು ಸ್ವೀಕರಿಸಲು ನೀವು ರೆಡಿ ಇದ್ದೀರಾ.
ಇದನ್ನೂ ಓದಿ: ಹಚ್ಚ ಹಸಿರಿನ ಗಿಡ ಮರಗಳ ನಡುವೆ ಅಡಗಿರುವ ಹಾವನ್ನು 10 ಸೆಕೆಂಡುಗಳಲ್ಲಿ ಗುರುತಿಸಬಲ್ಲಿರಾ?
ಚಿನ್ನದ ನಾಣ್ಯ ನಿಮ್ಮ ಕಣ್ಣಿಗೆ ಬಿದ್ದಿತೇ?
ಈ ಒಗಟಿನ ಆಟಗಳು ನಿಮ್ಮ ಮೆದುಳನ್ನು ಕೆರೆದುಕೊಳ್ಳುವಂತೆ ಮಾಡುತ್ತದೆ. ಈಗ ನೀವು ಇಲ್ಲಿರುವ ಚಿನ್ನದ ನಾಣ್ಯವನ್ನು ಹುಡುಕಬೇಕು. ಎಷ್ಟೇ ಪ್ರಯತ್ನ ಪಟ್ಟರೂ ಚಿನ್ನದ ನಾಣ್ಯವನ್ನು ಹುಡುಕಲು ಸಾಧ್ಯವಾಗುತ್ತಿಲ್ಲವೇ. ನಾವು ನಿಮಗೆ ಕೆಲ ಸಲಹೆಗಳನ್ನು ನೀಡುತ್ತೇವೆ. ಶ್ವಾನಗಳಿರುವ ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ. ಒಂದೊಂದು ಭಾಗಗಳನ್ನು ವಿಂಗಡಿಸಿಕೊಳ್ಳಿ. ಈ ಸಲಹೆ ಆಧರಿಸಿ ಒಗಟು ಬಿಡಿಸಲು ಪ್ರಯತ್ನಿಸಿ. ಏನೇ ಮಾಡಿದ್ರು ಚಿನ್ನದ ನಾಣ್ಯ ಕಾಣಿಸಿಲ್ಲ ಎಂದಾದರೆ ನಾವೇ ಈ ಕೆಳಗಿನ ಚಿತ್ರದಲ್ಲಿ ಚಿನ್ನದ ನಾಣ್ಯವನ್ನು ಗುರುತಿಸಿದ್ದೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
