ಆಪ್ಟಿಕಲ್ ಇಲ್ಯೂಷನ್ ಚಿತ್ರImage Credit source: Instagram
ನಿಮ್ಮ ಏಕಾಗ್ರತೆಯನ್ನು ಪರೀಕ್ಷಿಸಲು ನೀವು ರೆಡಿ ಇದ್ದೀರಾ. ಹೌದು, ಈ ಆಪ್ಟಿಕಲ್ ಇಲ್ಯೂಷನ್ (Optical Illusion) ಚಿತ್ರಗಳು, ಬ್ರೈನ್ ಟೀಸರ್ ಆಟಗಳಿಂದ ನಿಮ್ಮ ಬುದ್ಧಿವಂತಿಕೆ ಪರೀಕ್ಷಿಸಿಕೊಳ್ಳಬಹುದು. ಆದರೆ ಈ ಟ್ರಿಕ್ಕಿ ಒಗಟು ಬಿಡಿಸುವಾಗ ನಿಮ್ಮ ಮೆದುಳನ್ನು ಬಳಸಿಕೊಳ್ಳುವುದು ಬಹಳ ಮುಖ್ಯ. ಇದೀಗ ನೀವು ಬುದ್ಧಿವಂತರೇ ಎಂದು ಪರೀಕ್ಷಿಸುವ ಸಮಯ. ಈ ಚಿತ್ರದಲ್ಲಿರುವ ಸೇಬು ಹಣ್ಣನ್ನು ಪತ್ತೆ ಹಚ್ಚಬೇಕು. ನೀವು ಐದು ಸೆಕೆಂಡುಗಳೊಳಗೆ ಈ ಒಗಟು ಬಿಡಿಸಲು ಸಾಧ್ಯವೇ.
ಈ ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಕಾಣಿಸಿದ್ದೇನು?
ಎಸ್ಕೇಪ್ ಮನೋರ್ (escape manor) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಪೋಸ್ಟ್ ಹಂಚಿಕೊಳ್ಳಲಾಗಿದೆ. ಈ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಭ್ರಮೆ ಉಂಟು ಮಾಡುವುದು ಸಹಜ. ಈ ಚಿತ್ರದಲ್ಲಿ ನೋಡಿದಾಗ ನಿಮ್ಮ ಕಣ್ಣಿಗೆ ಕೋಳಿ, ಬಾತುಕೋಳಿ ಹಾಗೂ ಕುಂಬಳಕಾಯಿ ರಾಶಿ ಕಾಣಿಸುತ್ತದೆ. ಈ ಕಾರ್ಟೂನ್ ಆಧಾರಿತ ಚಿತ್ರದಲ್ಲಿ ಸೇಬು ಹಣ್ಣು ಒಂದಿದೆ. ಈ ಹಣ್ಣನ್ನು ನೀವು ಐದು ಸೆಕೆಂಡುಗಳೊಳಗೆ ಪತ್ತೆ ಹಚ್ಚಿದ್ರೆ ನಿಮ್ಮದು ದೃಷ್ಟಿ ತೀಕ್ಷ್ಣವಾಗಿದೆ ಎಂದರ್ಥ. ಈ ಒಗಟು ಬಿಡಿಸುವ ಸವಾಲನ್ನು ಸ್ವೀಕರಿಸಲು ರೆಡಿ ಇದ್ದೀರಾ ಎಂದು ಭಾವಿಸುತ್ತೇವೆ.
ಪೋಸ್ಟ್ ಇಲ್ಲಿದೆ
ಇದನ್ನೂ ಓದಿ: ನೀವು ಜಾಣರೇ, ಈ ಲಿವಿಂಗ್ ರೂಮ್‌ನಲ್ಲಿರುವ ಚಿಟ್ಟೆಯನ್ನು ಗುರುತಿಸಬಲ್ಲಿರಾ
ಸೇಬು ಹಣ್ಣನ್ನು ಗುರುತಿಸಲು ಸಾಧ್ಯವಾಯಿತೇ?
ಈ ಚಿತ್ರದಲ್ಲಿ ಕೋಳಿ, ಬಾತುಕೋಳಿಗಳು ಹಾಗೂ ಕುಂಬಳಕಾಯಿಯನ್ನು ಒಳಗೊಂಡಿದೆ. ಈ ಚಿತ್ರದ ವಿನ್ಯಾಸದಿಂದ ಇಲ್ಲಿರುವ ಸೇಬು ಹಣ್ಣನ್ನು ಪತ್ತೆ ಹಚ್ಚುವುದು ಅಷ್ಟು ಸುಲಭವಲ್ಲ. ಇಲ್ಲಿ ಬಿಳಿ ಬಣ್ಣದಲ್ಲಿ ವೃತ್ತ ಎಳೆದು ಸೇಬನ್ನು ಗುರುತಿಸಿದ್ದೇವೆ. ಈ ಫೋಟೋದಲ್ಲಿ ಸಣ್ಣ ಗಾತ್ರದ ಹಾಗೂ ಕೆಂಪು ಬಣ್ಣದ ಸೇಬು ನಿಮ್ಮ ಕಣ್ಣಿಗೆ ಗೋಚರಿಸುತ್ತದೆ. ಈ ಕೆಳಗಿನ ಚಿತ್ರದಲ್ಲಿ ಸೇಬು ಹಣ್ಣನ್ನು ಗುರುತಿಸಿರುವುದನ್ನು ನೀವು ನೋಡಬಹುದು.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
