ನವದೆಹಲಿ, ಜೂನ್ 23: ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು (ಮೇ 23) ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ದೇಶದ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರತಿಷ್ಠಿತ ಪದ್ಮ ಪ್ರಶಸ್ತಿ 2026 (Padma Awards 2026) ಪ್ರದಾನ ಮಾಡಿದರು. ಮಲಯಾಳಂ ಚಿತ್ರರಂಗದ ಖ್ಯಾತ ನಟ ಮಮ್ಮುಟ್ಟಿ, ಖ್ಯಾತ ಗಾಯಕಿ ಅಲಕಾ ಯಾಗ್ನಿಕ್ ಸೇರಿದಂತೆ 7 ಸಾಧಕರಿಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು. ತಮಿಳು ನಟ ಆರ್. ಮಾಧವನ್, ಕ್ರಿಕೆಟಿಗ ರೋಹಿತ್ ಶರ್ಮ ಸೇರಿದಂತೆ 56 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಲಯಾಳಂ ಪತ್ರಕರ್ತ ಪಿ. ನಾರಾಯಣನ್ ಮತ್ತು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ.ಟಿ ಥಾಮಸ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಒಟ್ಟು 65 ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದ್ದು, ಇದರಲ್ಲಿ 2 ಪದ್ಮವಿಭೂಷಣ, 7 ಪದ್ಮಭೂಷಣ ಹಾಗೂ 56 ಪದ್ಮಶ್ರೀ ಪ್ರಶಸ್ತಿಗಳು ಸೇರಿವೆ.
ಇದನ್ನೂ ಓದಿ: ಪದ್ಮಶ್ರೀ ಪುರಸ್ಕೃತ ಅಂಕೇಗೌಡರ 20 ಲಕ್ಷ ಪುಸ್ತಕಗಳ ಸಂರಕ್ಷಣೆಗೆ ಸಿಎಂ DK Shivakumar ಭರ್ಜರಿ ಕೊಡುಗೆ
ಪದ್ಮಭೂಷಣ ಪ್ರಶಸ್ತಿ ವಿಜೇತರಲ್ಲಿ ಪ್ರಮುಖರು:
ಮಮ್ಮುಟ್ಟಿ (ಮಲಯಾಳಂ ಸೂಪರ್‌ಸ್ಟಾರ್): ಚಿತ್ರರಂಗಕ್ಕೆ ನೀಡಿದ ಅನನ್ಯ ಕೊಡುಗೆಗಾಗಿ ಮಮ್ಮುಟ್ಟಿ ಅವರಿಗೆ ಪದ್ಮಭೂಷಣ ನೀಡಿ ಗೌರವಿಸಲಾಯಿತು. 5 ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ ಅವರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
#WATCH | Delhi | Malayalam cinema legend Mammootty awarded the Padma Bhushan by President Droupadi Murmu
(Video source: Rashtrapati Bhavan) pic.twitter.com/XXCPOyG4pS
— ANI (@ANI) June 23, 2026
ಅಲಕಾ ಯಾಗ್ನಿಕ್ (ಖ್ಯಾತ ಗಾಯಕಿ): ಭಾರತೀಯ ಸಂಗೀತ ಕ್ಷೇತ್ರಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಅಲಕಾ ಯಾಗ್ನಿಕ್ಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ ಸ್ವೀಕರಿಸುವ ಮುನ್ನ ವೇದಿಕೆಯ ಬಳಿ ಪ್ರಧಾನಿ ಮೋದಿ ಅವರ ಪಾದ ಮುಟ್ಟಿ ಆಶೀರ್ವಾದ ಪಡೆದದ್ದು ಗಮನ ಸೆಳೆಯಿತು. ಹಿಂದಿ, ತೆಲುಗು, ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ನೂರಾರು ಸೂಪರ್ ಹಿಟ್ ಗೀತೆಗಳನ್ನು ಇವರು ಹಾಡಿದ್ದಾರೆ.
#WATCH | Delhi | Eminent playback singer Alka Yagnik conferred with Padma Bhushan by President Droupadi Murmu
(Video source: Rashtrapati Bhavan) pic.twitter.com/ui2U9koEMy
— ANI (@ANI) June 23, 2026
ಪದ್ಮಶ್ರೀ ಪ್ರಶಸ್ತಿ ಪಡೆದ ಪ್ರಮುಖರು:
ಸತೀಶ್ ಶಾ (ಮರಣೋತ್ತರ): ಖ್ಯಾತ ಹಾಸ್ಯ ನಟ ದಿವಂಗತ ಸತೀಶ್ ಶಾ ಅವರಿಗೆ ಮರಣೋತ್ತರ ಪದ್ಮಶ್ರೀ ಘೋಷಿಸಲಾಗಿದ್ದು, ಅವರ ಪರವಾಗಿ ಸಹೋದರ ಅರವಿಂದ್ ಶಾ ಪ್ರಶಸ್ತಿ ಸ್ವೀಕರಿಸಿದರು.
ಇದನ್ನೂ ಓದಿ: Padma Awards 2026: ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸದ ರೋಹಿತ್ ಶರ್ಮಾ..! ಕಾರಣವೇನು?
ಆರ್ ಮಾಧವನ್: ‘ರೆಹನಾ ಹೈ ತೇರೆ ದಿಲ್ ಮೇ’, ‘3 ಇಡಿಯಟ್ಸ್’, ‘ರಾಕೆಟ್ರಿ: ದಿ ನಂಬಿ ಎಫೆಕ್ಟ್’ ಖ್ಯಾತಿಯ ಬಹುಭಾಷಾ ನಟ ಆರ್. ಮಾಧವನ್ ಅವರಿಗೆ ಪದ್ಮಶ್ರೀ ನೀಡಿ ಗೌರವಿಸಲಾಯಿತು.
Acclaimed Actor Madhavan Ranganathan (@ActorMadhavan) receives #PadmaShri from President Droupadi Murmu
Distinguished actor, popularly known as “Maddy”, producer, director and public figure. Impacted Indian cinema across multiple languages. Acted in more than… pic.twitter.com/kM6vNsVcsP
— PIB India (@PIB_India) June 23, 2026
ಗದ್ದೆ ಬಾಬು ರಾಜೇಂದ್ರ ಪ್ರಸಾದ್: ತೆಲುಗು ಚಿತ್ರರಂಗದ ಹಿರಿಯ ನಟ ರಾಜೇಂದ್ರ ಪ್ರಸಾದ್ ಅವರಿಗೆ ಪದ್ಮಶ್ರೀ ಪ್ರದಾನ ಮಾಡಲಾಯಿತು.
ಮಗಂತಿ ಮುರಳಿ ಮೋಹನ್: ತೆಲುಗಿನ ಮತ್ತೊಬ್ಬ ಹಿರಿಯ ನಟ ಮುರಳಿ ಮೋಹನ್ ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದಾರೆ.
#WATCH | Delhi | Tennis legend Vijay Amritraj awarded the Padma Bhushan by President Droupadi Murmu
(Video source: Rashtrapati Bhavan) pic.twitter.com/jbKNQ1aSpv
— ANI (@ANI) June 23, 2026
ರೋಹಿತ್ ಶರ್ಮಾ (ಕ್ರಿಕೆಟಿಗ): ಭಾರತೀಯ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ರೋಹಿತ್ ಶರ್ಮಾ ಅವರಿಗೆ ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
#WATCH | Delhi | Former Captain of the Indian Cricket Team, Rohit Sharma, awarded the Padma Shri by President Droupadi Murmu
(Video source: Rashtrapati Bhavan) pic.twitter.com/ckz1kc4poF
— ANI (@ANI) June 23, 2026
ಗುರು ಸಾಂಗ್ಯುಸಾಂಗ್ ಪೊಂಗೆನರ್: ಈಶಾನ್ಯ ರಾಜ್ಯದ ಪ್ರಸಿದ್ಧ ಜಾನಪದ ಕಲಾ ಪ್ರಕಾರವನ್ನು ಜೀವಂತವಾಗಿಟ್ಟಿರುವ ಜಾನಪದ ಕಲಾವಿದ ಗುರು ಸಾಂಗ್ಯುಸಾಂಗ್ ಅವರಿಗೆ ಪದ್ಮಶ್ರೀ ನೀಡಿ ಗೌರವಿಸಲಾಯಿತು.
#WATCH | Delhi | Karbi Folk singer Pokhila Lekthepi awarded the Padma Shri by President Droupadi Murmu
(Video source: Rashtrapati Bhavan) pic.twitter.com/p4aZn9KOhq
— ANI (@ANI) June 23, 2026
2026 ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿಯವರು ಒಟ್ಟು 131 ಪದ್ಮ ಪ್ರಶಸ್ತಿಗಳನ್ನು ಅನುಮೋದಿಸಿದ್ದರು. ಇದರಲ್ಲಿ 5 ಪದ್ಮವಿಭೂಷಣ, 13 ಪದ್ಮಭೂಷಣ ಮತ್ತು 113 ಪದ್ಮಶ್ರೀ ಪ್ರಶಸ್ತಿಗಳು ಸೇರಿವೆ. ಈ ಹಿಂದೆ ನಡೆದ ಮೊದಲ ಹಂತದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಮಿಳು ನಟ ಅಜಿತ್ ಕುಮಾರ್, ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಮತ್ತು ಬಂಗಾಳಿ ನಟ ಪ್ರೊಸೆಂಜಿತ್ ಚಟರ್ಜಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
