ಬ್ಲೂಬೆರಿ, ಸ್ಟ್ರಾಬೆರಿ, ಬ್ಲ್ಯಾಕ್‌ಬೆರಿ… ಯಾವ ಬೆರ್ರಿ ಹಣ್ಣು ಯಾವ ಆರೋಗ್ಯ ಸಮಸ್ಯೆಗೆ ಉತ್ತಮ ತಿಳಿದುಕೊಳ್ಳಿ – Kannada News | 5 Healthy Berries You Should Add to Your Daily Diet
ಇತ್ತೀಚಿನ ದಿನಗಳಲ್ಲಿ ಆರೋಗ್ಯಕರ ಆಹಾರದ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚಾಗಿದೆ. ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವ ಆಹಾರಗಳಲ್ಲಿ ಹಣ್ಣುಗಳಿಗೆ ವಿಶೇಷ ಸ್ಥಾನವಿದ್ದು, ಅವುಗಳಲ್ಲಿ ಬೆರ್ರಿ ಹಣ್ಣುಗಳು (Berries) ಸೂಪರ್‌ಫುಡ್‌ಗಳೆಂದು ಪರಿಗಣಿಸಲಾಗುತ್ತದೆ. ಬ್ಲೂಬೆರಿ, ಸ್ಟ್ರಾಬೆರಿ, ರಾಸ್ಪ್‌ಬೆರಿ, ಬ್ಲ್ಯಾಕ್‌ಬೆರಿ ಹಾಗೂ ಕ್ರ್ಯಾನ್‌ಬೆರಿ ಹಣ್ಣುಗಳಲ್ಲಿ ಫೈಬರ್, ವಿಟಮಿನ್ ಸಿ, ವಿಟಮಿನ್ ಕೆ, ಮ್ಯಾಂಗನೀಸ್ ಹಾಗೂ ಶಕ್ತಿಶಾಲಿ ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿವೆ. ಇವು ಹೃದಯದ ಆರೋಗ್ಯ, ಮೆದುಳಿನ ಕಾರ್ಯಕ್ಷಮತೆ, ಜೀರ್ಣಕ್ರಿಯೆ ಮತ್ತು ರೋಗನಿರೋಧಕ ಶಕ್ತಿಯನ್ನು ಉತ್ತಮಗೊಳಿಸಲು ಸಹಕಾರಿಯಾಗುತ್ತವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹೀಗಾದರೆ…