70% ಕೋಕೋ ಇರುವ ಡಾರ್ಕ್ ಚಾಕೊಲೇಟ್ ಏಕೆ ಒಳ್ಳೆಯದು? ವೈದ್ಯರು ಹೇಳಿರುವ ಮಾಹಿತಿ ಇಲ್ಲಿದೆ – Kannada News | Health Benefits of Dark Chocolate You Should Know
ಚಾಕೊಲೇಟ್ ಎಂದರೆ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲರಿಗೂ ಇಷ್ಟ. ಆದರೆ ಎಲ್ಲಾ ಚಾಕೊಲೇಟ್‌ಗಳು ಆರೋಗ್ಯಕ್ಕೆ ಒಂದೇ ರೀತಿಯ ಪ್ರಯೋಜನ ನೀಡುವುದಿಲ್ಲ. ವಿಶೇಷವಾಗಿ ಡಾರ್ಕ್ ಚಾಕೊಲೇಟ್ (Dark Chocolate) ಅನ್ನು ಸಾಮಾನ್ಯ ಮಿಲ್ಕ್ ಚಾಕೊಲೇಟ್‌ಗಿಂತ ಹೆಚ್ಚು ಆರೋಗ್ಯಕರ ಆಯ್ಕೆ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಐರನ್, ಮ್ಯಾಗ್ನೀಶಿಯಂ, ಕಾಪರ್, ಮ್ಯಾಂಗನೀಸ್, ಫೈಬರ್ ಹಾಗೂ ಫ್ಲೇವನಾಯ್ಡ್ಸ್ (Flavonoids) ಎಂಬ ಶಕ್ತಿಶಾಲಿ ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಇವು ಹೃದಯದ ಆರೋಗ್ಯ, ರಕ್ತನಾಳಗಳ ಕಾರ್ಯಕ್ಷಮತೆ ಹಾಗೂ ದೇಹದ ಕೋಶಗಳನ್ನು ರಕ್ಷಿಸಲು ಸಹಕಾರಿ ಎಂದು ಹಲವು ಅಧ್ಯಯನಗಳು…