Video: ಪ್ರಧಾನಿ ಮೋದಿ ಮತ್ತು ನನಗೆ ಇಬ್ರಿಗೂ ‘ಹೆಂಡತಿ’ ಕಾಟ ಇಲ್ಲ ಎಂದ ರಾಹುಲ್ ಗಾಂಧಿ – Kannada News | Amid Serious Debate, Rahul Gandhi’s Remark Brings Smiles in Lok Sabha

ನವದೆಹಲಿ, ಏಪ್ರಿಲ್ 17:  ಪ್ರಧಾನಿ ಮೋದಿ ಹಾಗೂ ನನಗೆ ಇಬ್ಬರಿಗೂ ಹೆಂಡತಿ ಕಾಟವಿಲ್ಲ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಗಂಭೀರವಾದ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ವಿಂಗಡಣೆ (Delimitation) ಕುರಿತ ಚರ್ಚೆ ನಡೆಯುತ್ತಿದ್ದಾಗ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯ ಒಂದು ಹೇಳಿಕೆ ಇಡೀ ಸದನದ ಗಮನವನ್ನು ಬೇರೆಡೆಗೆ ಸೆಳೆಯಿತು. ನನಗೆ ಹಾಗೂ ಪ್ರಧಾನಿ ಮೋದಿ ಇಬ್ಬರಿಗೂ ಹೆಂಡತಿ ಕಾಟ ಇಲ್ಲ ಎಂದು ಹೇಳಿದ್ದಾರೆ. ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಇಂದು ಮಹಿಳಾ ಮೀಸಲಾತಿ ಮಸೂದೆಯ ಕುರಿತು ಸುದೀರ್ಘ ಚರ್ಚೆ ನಡೆಯುತ್ತಿತ್ತು. ರಾಜಕೀಯ ಆರೋಪ-ಪ್ರತ್ಯಾರೋಪಗಳ ನಡುವೆ ಮೈಕ್ ಹಿಡಿದ ರಾಹುಲ್ ಗಾಂಧಿ, ಸರ್ಕಾರದ ಮೇಲೆ ವಾಗ್ದಾಳಿ ನಡೆಸುತ್ತಾ ವೈಯಕ್ತಿಕ ಜೀವನದ ಕುರಿತು ಲಘು ಟೀಕೆ ಮಾಡಿದರು.

ತಮ್ಮ ಹೇಳಿಕೆಯನ್ನು ಮುಂದುವರಿಸಿದ ರಾಹುಲ್, ನಮಗೆ ಅಂತಹ ವೈಯಕ್ತಿಕ ಸಮಸ್ಯೆಗಳಿಲ್ಲದಿದ್ದರೂ, ನಾವು ಮಹಿಳೆಯರನ್ನು ಈ ದೇಶದ ಪ್ರೇರಕ ಶಕ್ತಿ ಎಂದು ಗೌರವಿಸುತ್ತೇವೆ. ಆದರೆ ಬಿಜೆಪಿ ಸರ್ಕಾರವು ಮಹಿಳೆಯರ ಅಭಿವೃದ್ಧಿಯ ಹೆಸರಿನಲ್ಲಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದೆ ಎಂದು ಟೀಕಿಸಿದರು. ಬಿಜೆಪಿ ಸರ್ಕಾರವು ಮಹಿಳೆಯರ ಬೆನ್ನ ಹಿಂದೆ ಅಡಗಿ ಭಾರತದ ಚುನಾವಣಾ ನಕ್ಷೆಯನ್ನು ತನಗೆ ಬೇಕಾದಂತೆ ಬದಲಿಸಲು ಹೊರಟಿದೆ. ಕ್ಷೇತ್ರ ಪುನರ್ವಿಂಗಡಣೆಯ ಮೂಲಕ ದಕ್ಷಿಣ ಭಾರತದ ರಾಜ್ಯಗಳ ಶಕ್ತಿಯನ್ನು ಕುಂದಿಸುವುದು ಮತ್ತು ಒಬಿಸಿ ಸಮುದಾಯದ ಮಹಿಳೆಯರನ್ನು ಕಡೆಗಣಿಸುವುದು ಇವರ ಅಸಲಿ ಉದ್ದೇಶ ಎಂದು ಆರೋಪಿಸಿದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ಚಿನ್ನ ಮತ್ತು ಬೆಳ್ಳಿ ಆಮದಿಗೆ 15 ಬ್ಯಾಂಕುಗಳಿಗೆ ಸರ್ಕಾರದಿಂದ 3 ವರ್ಷ ಅನುಮತಿ – Kannada News | Govt authorises 15 banks to import gold and silver till 2029 March

ನವದೆಹಲಿ, ಏಪ್ರಿಲ್ 17: ಕೇಂದ್ರ ಸರ್ಕಾರ ವಿದೇಶಗಳಿಂದ ಚಿನ್ನ ಮತ್ತು ಬೆಳ್ಳಿ ಆಮದು (gold and silver import) ಮಾಡಿಕೊಳ್ಳಲು ಭಾರತದ 15 ಪ್ರಮುಖ ಬ್ಯಾಂಕುಗಳಿಗೆ ಅನುಮತಿ ನೀಡಿದೆ. ಎಸ್​ಬಿಐ, ಎಕ್ಸಿಸ್ ಬ್ಯಾಂಕ್, ಎಚ್​ಡಿಎಫ್​ಸಿ ಇತ್ಯಾದಿ 15 ಬ್ಯಾಂಕುಗಳು 2029ರ ಮಾರ್ಚ್ 31ರವರೆಗೂ ಚಿನ್ನ, ಬೆಳ್ಳಿಯನ್ನು ಆಮದು ಮಾಡಿಕೊಳ್ಳಲು ಸರ್ಕಾರದ ಅನುಮತಿ ಪಡೆದಿವೆ. ಎರಡು ಬ್ಯಾಂಕುಗಳಿಗೆ ಚಿನ್ನವನ್ನು ಮಾತ್ರವೇ ಆಮದು ಮಾಡಿಕೊಳ್ಳುವ ಅನುಮತಿ ಸಿಕ್ಕಿದೆ. ಅನುಮತಿ ಪಡೆದ ಬ್ಯಾಂಕುಗಳಲ್ಲಿ ಎರಡು ವಿದೇಶೀ ಬ್ಯಾಂಕುಗಳೂ ಸೇರಿವೆ.

ಸರ್ಕಾರದ ಅನುಮತಿ ಇಲ್ಲದೇ ಬ್ಯಾಂಕುಗಳು ಚಿನ್ನ ಮತ್ತು ಬೆಳ್ಳಿಯನ್ನು ಆಮದು ಮಾಡಿಕೊಳ್ಳುವಂತಿಲ್ಲ. 2026ರ ಮಾರ್ಚ್ 31ರವರೆಗೂ ಮಾತ್ರವೇ ಅನುಮತಿ ಇತ್ತು. ಆ ನಂತರ ಸರ್ಕಾರದಿಂದ ಯಾವುದೇ ಹೊಸ ಅಧಿಸೂಚನೆ ಬಂದಿರಲಿಲ್ಲ. ಹೀಗಾಗಿ, ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗಿದ್ದ ಸರಕುಗಳು ಕಸ್ಟಮ್ಸ್ ವಿಭಾಗದಲ್ಲೇ ಉಳಿದುಕೊಂಡಿದ್ದವು. ಇದರಿಂದ ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೇಡಿಕೆಗೆ ತಕ್ಕಷ್ಟು ಪೂರೈಕೆ ಇರದ ಪರಿಸ್ಥಿತಿ ಬರುವುದರಲ್ಲಿತ್ತು.

ಇದನ್ನೂ ಓದಿ: Gold Rates: ಚಿನ್ನ, ಬೆಳ್ಳಿ ಬೆಲೆಗಳ ಇಳಿಕೆ; ಇಲ್ಲಿದೆ ದರಪಟ್ಟಿ

ಭಾರತದಲ್ಲಿ ಚಿನ್ನಕ್ಕೆ ತಗ್ಗಿದ ಬೇಡಿಕೆ

ಭಾರತದಲ್ಲಿ 2025ರಲ್ಲಿ ಚಿನ್ನಕ್ಕೆ ಇರುವ ಬೇಡಿಕೆ 710.9 ಮೆಟ್ರಿಕ್ ಟನ್​ಗೆ ಇಳಿದಿದೆ. ವರ್ಲ್ಡ್ ಗೋಲ್ಡ್ ಕೌನ್ಸಿಲ್ ಪ್ರಕಾರ ಇದು ಐದು ವರ್ಷದಲ್ಲೇ ಅತ್ಯಂತ ಕಡಿಮೆ ಬೇಡಿಕೆ ಎನಿಸಿದೆ. ಚಿನ್ನಕ್ಕೆ ಬೇಡಿಕೆ ಕಡಿಮೆ ಆಗಲು ಗ್ರಾಹಕರ ಖರೀದಿ ನಿರಾಸಕ್ತಿ ಪ್ರಮುಖ ಕಾರಣವಿರಬಹುದು. ಚಿನ್ನಕ್ಕೆ ಡಿಮ್ಯಾಂಡ್ ಕಡಿಮೆಗೊಂಡರೆ ಅದು ದೇಶದ ಆರ್ಥಿಕತೆಗೆ ಸಕಾರಾತ್ಮಕ ಕೊಡುಗೆ ನೀಡಬಲ್ಲುದು.

ಚೀನಾ ನಂತರ ಭಾರತವೇ ಜಗತ್ತಿನಲ್ಲಿ ಅತಿಹೆಚ್ಚು ಚಿನ್ನ ಮತ್ತು ಬೆಳ್ಳಿ ಖರೀದಿಸುವುದು. ಚಿನ್ನಕ್ಕೆ ಬೇಡಿಕೆ ಕಡಿಮೆ ಆದರೆ ಆಮದು ವೆಚ್ಚ ಕಡಿಮೆ ಆಗುತ್ತದೆ. ಡಾಲರ್ ಎದುರು ರುಪಾಯಿ ಮೌಲ್ಯ ಉತ್ತಮಗೊಳ್ಳುತ್ತದೆ. ಜಾಗತಿಕವಾಗಿ ಚಿನ್ನ, ಬೆಳ್ಳಿ ಬೆಲೆಗಳು ತಗ್ಗಬಹುದು.

ಚಿನ್ನ, ಬೆಳ್ಳಿ ಎರಡನ್ನೂ ಆಮದು ಮಾಡಲು ಅನುಮತಿಸಲಾದ ಬ್ಯಾಂಕುಗಳಿವು

  1. ಎಕ್ಸಿಸ್ ಬ್ಯಾಂಕ್
  2. ಬ್ಯಾಂಕ್ ಆಫ್ ಇಂಡಿಯಾ
  3. ಡ್ಯೂಶೆ ಬ್ಯಾಂಕ್
  4. ಫೆಡರಲ್ ಬ್ಯಾಂಕ್
  5. ಎಚ್​ಡಿಎಫ್​ಸಿ ಬ್ಯಾಂಕ್
  6. ಇಂಡಸ್ಟ್ರಿಯಲ್ ಅಂಡ್ ಕಮರ್ಷಿಯಲ್ ಬ್ಯಾಂಕ್ ಆಫ್ ಚೀನಾ
  7. ಐಸಿಐಸಿಐ ಬ್ಯಾಂಕ್
  8. ಇಂಡಸ್​ಇಂಡ್ ಬ್ಯಾಂಕ್
  9. ಇಂಡಿಯನ್ ಓವರ್​ಸೀಸ್ ಬ್ಯಾಂಕ್
  10. ಕೋಟಕ್ ಮಹೀಂದ್ರ ಬ್ಯಾಂಕ್
  11. ಕರೂರ್ ವೈಷ್ಯ ಬ್ಯಾಂಕ್
  12. ಪಂಜಾಬ್ ನ್ಯಾಷನಲ್ ಬ್ಯಾಂಕ್
  13. ಆರ್ಬಿಐ ಬ್ಯಾಂಕ್
  14. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
  15. ಯೆಸ್ ಬ್ಯಾಂಕ್

ಇದನ್ನೂ ಓದಿ: ಏಷ್ಯಾದ ನಂ. 1 ಶ್ರೀಮಂತ ಅಂಬಾನಿಯಲ್ಲ, ಅದಾನಿ; ಟಾಪ್-20ಯಲ್ಲಿ ಅಮೆರಿಕನ್ನರನ್ನು ಬಿಟ್ಟರೆ ಭಾರತೀಯರೇ ಹೆಚ್ಚು

ಚಿನ್ನವನ್ನು ಮಾತ್ರವೇ ಆಮದು ಮಾಡಿಕೊಳ್ಳಲು ಅನುಮತಿಸಲಾದ ಬ್ಯಾಂಕುಗಳು

  1. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
  2. ಸಬೆರ್ ಬ್ಯಾಂಕ್ (Sberbank)

ಬ್ಯಾಂಕುಗಳು ಈ ಚಿನ್ನ, ಬೆಳ್ಳಿಯನ್ನು ಏನು ಮಾಡುತ್ತವೆ?

ಬ್ಯಾಂಕುಗಳು ಈ ಚಿನ್ನವನ್ನು ರೀಟೇಲ್ ಕ್ಷೇತ್ರಕ್ಕೆ ಮಾರುತ್ತವೆ. ಆಭರಣದಂಗಡಿಗಳು, ಗೋಲ್ಡ್ ರಿಫೈನರಿಗಳು, ರೀಟೇಲ್ ಮಾರಾಟಗಾರರು ಮೊದಲಾದವರಿಗೆ ಮಾರುತ್ತವೆ. ಈ ಮೂಲಕ ಬೇಡಿಕೆಗೆ ತಕ್ಕಷ್ಟು ಹೊಸ ಚಿನ್ನ, ಬೆಳ್ಳಿ ಸರಕುಗಳು ಮಾರುಕಟ್ಟೆ ಪ್ರವೇಶಿಸುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ನಿಲ್ಲದ ಡ್ರ್ಯಾಗ್ ರೇಸ್ ಹಾಗೂ ಸ್ಟಂಟ್‌ಗಳ ಹುಚ್ಚಾಟ! ವಿಡಿಯೋ ವೈರಲ್ – Kannada News | Bengaluru Drag Race Menace: Modified Silencers and Stunts Terrify Public

ಬೆಂಗಳೂರು, ಏಪ್ರಿಲ್ 17: ನಗರದಲ್ಲಿ ಡ್ರ್ಯಾಗ್ ರೇಸ್ ಹಾಗೂ ಸ್ಟಂಟ್‌ಗಳ ಹುಚ್ಚಾಟ ಮುಂದುವರಿದಿದ್ದು, ಟ್ರಾಫಿಕ್ ಪೊಲೀಸರ ಕ್ರಮಕ್ಕೂ ಲೆಕ್ಕಿಸದೆ ಪುಂಡರು ಅಟ್ಟಹಾಸ ಮೆರೆಯುತ್ತಿದ್ದಾರೆ. ಗುರುವಾರ ರಾತ್ರಿ ಸುಮಾರು 9:30ರ ವೇಳೆಗೆ ಡೈರಿ ಸರ್ಕಲ್‌ನಿಂದ ಜಯದೇವ ಆಸ್ಪತ್ರೆ ಕಡೆ ಸಾಗುವ ರಸ್ತೆಯಲ್ಲಿ ಕಾರೊಂದನ್ನು ವೇಗವಾಗಿ ಓಡಿಸಿದ ಚಾಲಕ ಭಾರೀ ಶಬ್ದ ಮಾಡುವ ಮೂಲಕ ಸಾರ್ವಜನಿಕರಿಗೆ ಆತಂಕ ಉಂಟುಮಾಡಿದ್ದಾನೆ. ಮೊಡಿಫೈಡ್ ಸೈಲೆನ್ಸರ್‌ನಿಂದ ಬೆಂಕಿ ಹೊರಬರುವ ದೃಶ್ಯ ಕಂಡುಬಂದಿದ್ದು, ಅಕ್ಕಪಕ್ಕದ ವಾಹನ ಸವಾರರು ಬೆಚ್ಚಿಬಿದ್ದಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವರದಿ: ನಟರಾಜ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ರೋಹಿತ್ ಶೆಟ್ಟಿ ಮನೆ ಮೇಲೆ ಗುಂಡಿನ ದಾಳಿ ಪ್ರಕರಣ: ಆಗ್ರಾದಲ್ಲಿ ಶೂಟರ್ ಬಂಧನ – Kannada News | Rohit Shetty house firing case main accused Pradeep Kumar Arrested in Agra

ಬಾಲಿವುಡ್‌ನ ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ (Rohit Shetty) ಅವರ ಮುಂಬೈ ನಿವಾಸದ ಮೇಲೆ ಗುಂಡಿನ ದಾಳಿ ನಡೆಸಿದ್ದ ಪ್ರಮುಖ ಆರೋಪಿಯನ್ನು ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಮತ್ತು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ. ಫೆಬ್ರವರಿ 1ರಂದು ಮುಂಬೈನ ಜುಹು ಉಪನಗರದಲ್ಲಿರುವ ರೋಹಿತ್ ಶೆಟ್ಟಿ ಅವರ ‘ಶೆಟ್ಟಿ ಟವರ್’ ನಿವಾಸದ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ (Firing) ನಡೆಸಿದ್ದರು. ಈ ದಾಳಿಯಲ್ಲಿ ಅವರ ಮನೆಯ ಬಾಲ್ಕನಿಯ ಗಾಜಿಗೆ ಹಾನಿಯಾಗಿತ್ತು.

ಚಿತ್ರರಂಗದಲ್ಲಿ ಭೀತಿ ಹುಟ್ಟಿಸಲು ಮತ್ತು ಹಣ ಸುಲಿಗೆ ಮಾಡುವ ಉದ್ದೇಶದಿಂದ ಕುಖ್ಯಾತ ಶುಭಂ ಲೋಂಕರ್ ಗ್ಯಾಂಗ್ ಈ ಕೃತ್ಯ ಎಸಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಯನ್ನು ಉತ್ತರ ಪ್ರದೇಶದ ಆಗ್ರಾ ನಿವಾಸಿ ಪ್ರದೀಪ್ ಕುಮಾರ್ ಎಂದು ಗುರುತಿಸಲಾಗಿದೆ. ಗುಪ್ತಚರ ಮಾಹಿತಿಯ ಆಧಾರದ ಮೇಲೆ ಆಗ್ರಾದ ಅಶೋಕ್ ನಗರದಲ್ಲಿ ಗುರುವಾರ ಸಂಜೆ 3.56ಕ್ಕೆ ಈತನನ್ನು ಸೆರೆಹಿಡಿಯಲಾಗಿದೆ.

ಆಗ್ರಾದ ಎಸ್‌ಟಿಎಫ್ ಫೀಲ್ಡ್ ಯುನಿಟ್‌ನ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಕೇಶ್ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಪ್ರಾಥಮಿಕ ವಿಚಾರಣೆಯ ವೇಳೆ, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಮೂಲಕ ಲೋಂಕರ್ ಗ್ಯಾಂಗ್‌ನ ಸಂಪರ್ಕಕ್ಕೆ ಬಂದಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಭೂಗತ ಲೋಕದಲ್ಲಿ ತನ್ನ ಪ್ರಾಬಲ್ಯ ಸ್ಥಾಪಿಸಲು ಸನ್ನಿ, ದೀಪು ಮತ್ತು ಸೋನು ಎಂಬ ಸಹಚರರೊಂದಿಗೆ ಸೇರಿ ಈ ಕೃತ್ಯ ಎಸಗಿರುವುದಾಗಿ ಆತ ತಿಳಿಸಿದ್ದಾನೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರದೀಪ್ ಶರ್ಮಾ ಅಲಿಯಾಸ್ ಗೋಲು, ದೀಪಕ್ ಮತ್ತು ವಿಷ್ಣು ಕುಶ್ವಾಹ ಸೇರಿದಂತೆ ಒಟ್ಟು ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS), ಶಸ್ತ್ರಾಸ್ತ್ರ ಕಾಯ್ದೆ ಮತ್ತು ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (MCOCA) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: ನಿರ್ದೇಶಕ ರೋಹಿತ್ ಶೆಟ್ಟಿ ಖಾಸಗಿ ಕಾರಿನ ಮೇಲೆ ಪೊಲೀಸ್ ಸ್ಟಿಕ್ಕರ್: ವಿವಾದಕ್ಕೆ ಸ್ಪಷ್ಟನೆ

ಗುಂಡಿನ ದಾಳಿ ನಡೆದ ಬಳಿಕ ನಿರ್ದೇಶಕ ರೋಹಿತ್ ಶೆಟ್ಟಿ ಅವರಿಗೆ ಮುಂಬೈ ಪೊಲೀಸರು ಹೆಚ್ಚಿನ ಭದ್ರತೆ ನೀಡಿದರು. ಆ ಸಂದರ್ಭದಲ್ಲಿ ರೋಹಿತ್ ಶೆಟ್ಟಿ ಅವರ ಖಾಸಗಿ ಕಾರುಗಳ ಮೇಲೆ ಪೊಲೀಸ್ ಸ್ಟಿಕ್ಕರ್ ಅಂಟಿಸಲಾಗಿತ್ತು. ಅದರಿಂದ ವಿವಾದ ಸೃಷ್ಟಿ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗಾಂಧಿ ಹತ್ಯೆ ಹಿಂದೆ ಆರ್​​​ಎಸ್​​ಎಸ್ ಕೈವಾಡ​ ಇತ್ತಾ? ಇದು ‘ಆಖ್ರಿ ಸವಾಲ್’ – Kannada News | Aakhri Sawaal: Sanjay Dutt’s Film Sparks debate with Historical Questions

ಸಂಜಯ್ ದತ್ ನಟಿಸಿ, ನಿರ್ಮಿಸಿರೋ ‘ಆಖ್ರಿ ಸವಾಲ್’ ಮೊದಲಿನಿಂದಲೂ ಸಾಕಷ್ಟು ಕುತೂಹಲ ಮೂಡಿಸುತ್ತಾ ಬರುತ್ತಿದೆ. ಈ ಚಿತ್ರದ ಪೋಸ್ಟರ್​​ಗಳು ಗಮನ ಸೆಳೆದಿವೆ. ಈಗ ಚಿತ್ರ ತಂಡ ಒಂದಷ್ಟು ಹೊಸ ಪೋಸ್ಟರ್​​ಗಳನ್ನು ರಿಲೀಸ್ ಮಾಡಿದೆ. ಇದರಲ್ಲಿ ಒಂದಷ್ಟು ಪ್ರಶ್ನೆಗಳಿವೆ. ಈವರೆಗೆ ಯಾರೂ ಕೇಳದ ಪ್ರಶ್ನೆಗಳು. ಇದಕ್ಕೆಲ್ಲ ಉತ್ತರ ‘ಆಖ್ರಿ ಸವಾಲ್’ ಸಿನಿಮಾದಲ್ಲಿ ಸಿಗಲಿದೆಯೇ ಎಂಬ ಪ್ರಶ್ನೆ ಮೂಡಿದೆ.

ಮೇ 8ರಂದು ‘ಆಖ್ರಿ ಸವಾಲ್’ ಸಿನಿಮಾ ಥಿಯೇಟರ್ನಲ್ಲಿ ರಿಲೀಸ್ ಆಗಲಿದೆ. ಅದಕ್ಕೂ ಮೊದಲು ಸಿನಿಮಾ ಪ್ರಚಾರ ಕೆಲಸ ಮಾಡಲಾಗುತ್ತಿದೆ. ವಿವಿಧ ರೀತಿಯ ಪೋಸ್ಟರ್​​ಗಳ ಮೂಲಕ ಗಮನ ಸೆಳೆಯುವ ಪ್ರಯತ್ನ ನಡೆದಿದೆ.ಈಗ ರಿಲೀಸ್ ಆಗಿರೋ ಪ್ರಶ್ನೆಗಳು ಸಾಕಷ್ಟು ಆಳ ಅರ್ಥವನ್ನು ಹೊಂದಿವೆ.

‘ಮಹಾತ್ಮ ಗಾಂಧಿ ಹತ್ಯೆ ಹಿಂದೆ ಆರ್​​ಎಸ್​​ಎಸ್​ ಕೈವಾಡ ಇತ್ತಾ?’, ‘ಬಾಬ್ರಿ ಮಸೀದಿ ನಾಶದ ಹಿಂದೆ ಆರ್​ಎಸ್​ಎಸ್​ ಇತ್ತಾ?’, ‘ತುರ್ತುಪರಿಸ್ಥಿತಿ ಹಿಂದಿನ ಸತ್ಯವೇನು? ಇದರಲ್ಲಿ ಆರ್​ಎಸ್​​ಎಸ್​ನ ಪಾತ್ರವೇನು? ಎಂಬ ಮೂರು ಪ್ರಶ್ನೆಗಳನ್ನು ಕೇಳಲಾಗಿದೆ.

ಇವು ದೇಶದ ಇತಿಹಾಸಕ್ಕೆ ಸಂಬಂಧಿಸಿದ ಗಂಭೀರವಾದ ಪ್ರಶ್ನೆಗಳಾಗಿವೆ. ‘ಯಾರೂ ಈ ಬಗ್ಗೆ ಪ್ರಶ್ನೆ ಮಾಡುವ ಧೈರ್ಯ ಮಾಡಿಲ್ಲ. ಈ ಎಲ್ಲಾ ಪ್ರಶ್ನೆಗಳಿಗೆ ಮೇ 8ರಂದು ಉತ್ತರ ಕಂಡುಕೊಳ್ಳಿ’ ಎಂದು ಬರೆಯಲಾಗಿದೆ. ಅಂದರೆ ಮೇ 8ರಂದು ಸಿನಿಮಾ ಥಿಯೇಟರ್​​ನಲ್ಲಿ ಬಿಡುಗಡೆ ಆಗಲಿದೆ.

ಇದನ್ನೂ ಓದಿ: ‘ಧುರಂಧರ್’ ಯಶಸ್ಸಿನ ಬೆನ್ನಲ್ಲೇ ಸಂಜಯ್ ದತ್ ಹೊಸ ಸಿನಿಮಾ ‘ಆಖ್ರಿ ಸವಾಲ್’

‘ಆಖ್ರಿ ಸವಾಲ್’ ಚಿತ್ರವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ಸಿನಿಮಾ ಮಾಡಿದ ಅಭಿಜೀತ್ ಮೋಹನ್ ವಾರಂಗ್ ನಿರ್ದೇಶನ ಮಾಡಿದ್ದಾರೆ. ಮರಾಠಿಯಲ್ಲಿ ನಿರ್ದೇಶನ ಮಾಡಿದ್ದ ‘ಪೊಕಾಸೋ’ (2021) ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ಈಗ ಅವರು ಹಿಂದಿಯಲ್ಲಿ ತಮ್ಮ ಎರಡನೇ ಸಿನಿಮಾ ಮಾಡಿದ್ದಾರೆ. ‘ಆಖ್ರಿ ಸವಾಲ್’ ಚಿತ್ರವನ್ನು ನಿಖಿಲ್ ನಂದ್ ಪ್ರೆಸೆಂಟ್ ಮಾಡುತ್ತಿದ್ದಾರೆ. ನಿಖಿಲ್ ಹಾಗೂ ಸಂಜಯ್ ದತ್ ಇದನ್ನು ನಿರ್ಮಾಣ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

2026 ರ ಟಿ20 ವಿಶ್ವಕಪ್‌ನಲ್ಲಿ ಮ್ಯಾಚ್ ಫಿಕ್ಸಿಂಗ್..! ತನಿಖೆ ಪ್ರಾರಂಭಿಸಿದ ಐಸಿಸಿ – Kannada News | T20 World Cup 2026 Match Fixing Allegations: ICC Probes Canada vs NZ Game

ಭಾರತ ಮತ್ತು ಶ್ರೀಲಂಕಾದ ಆತಿಥ್ಯದಲ್ಲಿ ನಡೆದಿದ್ದ 2026 ರ ಟಿ20 ವಿಶ್ವಕಪ್​ನಲ್ಲಿ (T20 World Cup 2026) ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂಬ ಗಂಭೀರ ಆರೋಪವೊಂದು ಕೇಳಿಬಂದಿದೆ. ಹೀಗಾಗಿ ಇದಕ್ಕೆ ಸಂಬಂಧಿಸಿದಂತೆ ಐಸಿಸಿ (ICC) ಕೂಡ ಈಗಾಗಲೇ ತನಿಖೆ ನಡೆಸುತ್ತಿದೆ ಎಂತಲೂ ವರದಿಯಾಗಿದೆ. ವರದಿಯ ಪ್ರಕಾರ, ನ್ಯೂಜಿಲೆಂಡ್ ಹಾಗೂ ಕೆನಡಾ ನಡುವಿನ ಪಂದ್ಯದ ವೇಳೆ ಮ್ಯಾಚ್ ಫಿಕ್ಸಿಂಗ್ ನಡೆದಿದ್ದು, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಭ್ರಷ್ಟಾಚಾರ ನಿಗ್ರಹ ಘಟಕ ಈ ಪಂದ್ಯದ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದೆ ಎಂದು ವರದಿಯಾಗಿದೆ.

ಟಿ20 ವಿಶ್ವಕಪ್‌ನಲ್ಲಿ ಮ್ಯಾಚ್ ಫಿಕ್ಸಿಂಗ್?

ಇಎಸ್‌ಪಿಎನ್ ಕ್ರಿಕ್‌ಇನ್ಫೊ ವರದಿಯ ಪ್ರಕಾರ, ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್​ನ ಭ್ರಷ್ಟಾಚಾರ ನಿಗ್ರಹ ಘಟಕ, ಕೆನಡಾ ಕ್ರಿಕೆಟ್‌ ಮೇಲೆ ಕೇಳಿಬಂದಿರುವ ಮ್ಯಾಚ್ ಫಿಕ್ಸಿಂಗ್ ಆರೋಪಗಳ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದೆ. ಟಿ20 ವಿಶ್ವಕಪ್​ನಲ್ಲಿ ಕೆನಡಾ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಇದೀಗ ಐಸಿಸಿ ಈ ಬಗ್ಗೆ ತನಿಖೆ ಆರಂಭಿಸಿದೆ. ಐಸಿಸಿ ಈ ಬಗ್ಗೆ ತನಿಖೆ ನಡೆಸಲು ಕಾರಣವೂ ಇದ್ದು, ಪಂದ್ಯದ ವೇಳೆ ಕೆನಡಾ ತಂಡದ ಬೌಲರ್​ಗಳು ಬೌಲ್ ಮಾಡಿದ ದುಬಾರಿ ಓವರ್​ಗಳು ಸಾಕಷ್ಟು ಅನುಮಾನಗಳನ್ನು ಹುಟ್ಟಿಹಾಕಿವೆ.

ನಿರ್ದಿಷ್ಟವಾಗಿ ಹೇಳುವುದಾದರೆ, ನ್ಯೂಜಿಲೆಂಡ್‌ ಇನ್ನಿಂಗ್ಸ್‌ನ ಐದನೇ ಓವರ್ ಅನ್ನು ಕೆನಡಾದ ನಾಯಕ ದಿಲ್‌ಪ್ರೀತ್ ಬಾಜ್ವಾ ಎಸೆದರು. ಈ ಓವರ್​ನಲ್ಲಿ ಅವರು ನೋ-ಬಾಲ್ ಹಾಗೂ ವೈಡ್ ಸೇರಿದಂತೆ ಒಟ್ಟು 15 ರನ್‌ಗಳನ್ನು ಬಿಟ್ಟುಕೊಟ್ಟರು. ಇದಕ್ಕೂ ಮೊದಲು, ಕೆನಡಾದ ವೇಗಿಗಳಾದ ಜಸ್ಕರನ್ ಸಿಂಗ್ ಮತ್ತು ಡಿಲ್ಲನ್ ಹೆಯ್ಲಿಗರ್ ಕೂಡ ದುಬಾರಿ ಓವರ್‌ಗಳನ್ನು ಎಸೆದಿದ್ದರು. ಏತನ್ಮಧ್ಯೆ, ಸ್ಪಿನ್ನರ್ ಸಾದ್ ಬಿನ್ ಜಾಫರ್ ಮೂರನೇ ಓವರ್‌ನಲ್ಲಿ ವಿಕೆಟ್-ಮೇಡನ್ ಓವರ್ ಎಸೆದಿದ್ದರು.

ಭ್ರಷ್ಟಾಚಾರ, ಅಪರಾಧ ಮತ್ತು ಕ್ರಿಕೆಟ್

ಇದೆಲ್ಲವನ್ನು ಕೇಂದ್ರವಾಗಿಸಿಕೊಂಡು ಕೆನಡಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ “ಭ್ರಷ್ಟಾಚಾರ, ಅಪರಾಧ ಮತ್ತು ಕ್ರಿಕೆಟ್” ಎಂಬ ಸಾಕ್ಷ್ಯಚಿತ್ರವನ್ನು ನಿರ್ಮಿಸಿ ಪ್ರಸಾರ ಮಾಡಿತ್ತು. ಈ ಸಾಕ್ಷ್ಯಚಿತ್ರ ಪ್ರಸಾರವಾದ ಬಳಿಕ ಐಸಿಸಿ ಈ ಬಗ್ಗೆ ತನಿಖೆ ಪ್ರಾರಂಭಿಸಿದೆ. ಈ ಸಾಕ್ಷ್ಯಚಿತ್ರದಲ್ಲಿ ಕೆನಡಾ ಕ್ರಿಕೆಟ್ ಮಂಡಳಿಯೊಳಗಿನ ಆಂತರಿಕ ವ್ಯವಹಾರಗಳು, ಆಟಗಾರರ ಆಯ್ಕೆಯಲ್ಲಿ ಒತ್ತಡ ಮತ್ತು ಅನುಮಾನಾಸ್ಪದ ಪಂದ್ಯ-ಸಂಬಂಧಿತ ಚಟುವಟಿಕೆಗಳನ್ನು ಎತ್ತಿ ತೋರಿಸಿದೆ. ಅಲ್ಲದೆ ಟಿ20 ವಿಶ್ವಕಪ್ ವೇಳೆ ಕೆನಡಾ ತಂಡದ ತರಬೇತುದಾರರಾಗಿದ್ದ ಖುರ್ರಾಮ್ ಚೋಹನ್ ಅವರದ್ದು ಎನ್ನಲಾದ ಮೊಬೈಲ್ ರೆಕಾರ್ಡಿಂಗ್‌ ಅನ್ನು ಸಹ ಈ ಸಾಕ್ಷ್ಯಚಿತ್ರದಲ್ಲಿ ಭಿತ್ತರಿಸಲಾಗಿದ್ದು, ಈ ರೆಕಾರ್ಡಿಂಗ್​ನಲ್ಲಿ ಅವರು, ‘ಕೆನಾಡ ತಂಡದ ಆಯ್ಕೆ ಮಂಡಳಿಯ ಸದಸ್ಯರು ತಂಡದಲ್ಲಿ ಕೆಲವು ಆಟಗಾರರನ್ನು ಸೇರಿಸಲು ಒತ್ತಡ ಹೇರಿದ್ದರು’ ಎಂದು ಹೇಳಿಕೊಂಡಿದ್ದಾರೆ.

2027 ರ ಏಕದಿನ ವಿಶ್ವಕಪ್ ಸ್ವರೂಪ ಹೇಗಿರಲಿದೆ? ಭಾರತಕ್ಕೆ ಸುವರ್ಣಾವಕಾಶ

ಕೆನಡಾ ಕ್ರಿಕೆಟ್‌ನಲ್ಲಿ ಅವ್ಯವಸ್ಥೆ

ಐಸಿಸಿಯ ಭ್ರಷ್ಟಾಚಾರ ನಿಗ್ರಹ ಘಟಕವು ಪ್ರಸ್ತುತ ಈ ಆರೋಪಗಳ ತನಿಖೆ ನಡೆಸುತ್ತಿದೆಯಾದರೂ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಕಳೆದ ಒಂದು ವರ್ಷದಿಂದ ಕೆನಡಾ ಕ್ರಿಕೆಟ್ ಆಡಳಿತಾತ್ಮಕ ಅಸ್ಥಿರತೆಯನ್ನು ಎದುರಿಸುತ್ತಿದೆ. ಮಾಜಿ ಸಿಇಒ ಸಲ್ಮಾನ್ ಖಾನ್ ಅವರ ನೇಮಕಾತಿ ಮತ್ತು ಅವರ ವಿರುದ್ಧದ ದುರುಪಯೋಗ ಮತ್ತು ವಂಚನೆ ಆರೋಪಗಳು, ಆಟಗಾರರ ಸಂಬಳ ಮತ್ತು ಬಹುಮಾನದ ಹಣದಲ್ಲಿನ ವಿಳಂಬ ಮತ್ತು ಮಂಡಳಿಯಲ್ಲಿನ ಬದಲಾವಣೆಗಳು ಈಗಾಗಲೇ ಸುದ್ದಿಯಲ್ಲಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:55 pm, Fri, 17 April 26

Source link

ಮಾಲೀಕ ಶೌಚಾಲಯಕ್ಕೆ ಹೋಗಿ ಬರುವುದರೊಳಗೆ ಬಂಗಾರದ ಅಂಗಡಿ ಕದ್ದ ಖದೀಮರು; ಹಾಡಹಗಲೇ ಕೃತ್ಯ – Kannada News | Bengaluru Jewelry Robbery: Gold Store Looted in 3 Mins While Owner in Restroom

ಬೆಂಗಳೂರು, ಏಪ್ರಿಲ್​​ 17: ರಾಜ್ಯದಲ್ಲಿ ಬಂಗಾರದ ಅಂಗಡಿಗಳ ದರೋಡೆ ಪ್ರಕರಣ ಮುಂದುವರಿದಿದ್ದು, ಬೆಂಗಳೂರಿನಲ್ಲಿ (Bengaluru) ಹಾಡ ಹಗಲೇ ಬಂಗಾರದ ಅಂಗಡಿಯನ್ನು ಖದೀಮರು ದೋಚಿರುವ ಘಟನೆ ನಡೆದಿದೆ. ಅಂಗಡಿಯ ಮಾಲೀಕ ಶೌಚಾಲಯಕ್ಕೆ ಹೋಗಿ ಬರುವ ಒಳಗೆ ಖದೀಮರು ಕನ್ನ ಹಾಕಿದ್ದು, ಬಂಗಾರ ಮತ್ತು ಬೆಳ್ಳಿ ಆಭರಣಗಳು ಸೇರಿ ನಗದನ್ನು ದೋಚಿ ಎಸ್ಕೇಪ್​​ ಆಗಿದ್ದಾರೆ. ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದ್ದು, ಈ ಬಗ್ಗೆ ದೂರು ದಾಖಲಾಗಿದೆ. ಪ್ರಕರಣ ಬೆನ್ನುಹತ್ತಿರುವ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಅಷ್ಟಕ್ಕೂ ಆಗಿದ್ದೇನು?

ಬನಶಂಕರಿಯ ಬಂಗಾರದ ಅಂಗಡಿಯೊಂದರ ಮಾಲಕರಾಗಿರುವ ಮೂಕಾಂಬಿಕಾ ನಗರ ನಿವಾಸಿ ಎನ್. ಮಂಜುನಾಥ್ (52) ಹತ್ತಿರದ ಅಂಗನವಾಡಿಯ ಶೌಚಾಲಯಕ್ಕೆ ತೆರಳಿದ್ದರು. ಮಧ್ಯಾಹ್ನ ಸುಮಾರು 3.22ಕ್ಕೆ ಅಂಗಡಿಯನ್ನು ತೆರೆದಿಟ್ಟು ಹೊರಗೆ ಹೋಗಿದ್ದ ಅವರು 3.25ಕ್ಕೆ ಅಂದರೆ ಕೇವಲ 3 ನಿನಿಷಗಳ ಒಳಗೆ ಹಿಂದಿರುಗಿದ್ದಾರೆ. ಆದರೆ ಅಷ್ಟರೊಳಗಾಗಿಯೇ ಖದೀಮರು ಅಂಗಡಿಗೆ ನುಗ್ಗಿದ್ದು ಬೆಲೆ ಬಾಳುವ ಆಭರಣ ಸೇರಿ, ಹಣವನ್ನು ದೋಚಿದ್ದಾರೆ. ಮಂಜುನಾಥ್​​ ಅವರು ಹಿಂದಿರುಗುವ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಅಂಗಡಿಗೆ ನುಗ್ಗಿ ಪ್ರದರ್ಶನಕ್ಕೆ ಇಡಲಾಗಿದ್ದ ಆಭರಣ ದೋಚುತ್ತಿರುವುದನ್ನು ಗಮನಿಸಿದ್ದಾರೆ. ಇದನ್ನು ನೋಡಿದ ಖದೀಮ ಕೂಡಲೇ ಅಂಗಡಿಯಿಂದ ಕಾಲ್ಕಿತ್ತಿದ್ದು, ಅದಾಗಲೇ ಬೈಕ್​​ನಲ್ಲಿ ಕಾಯುತ್ತಿದ್ದ ಇಬ್ಬರು ಸಹಚರರ ಜೊತೆ ಎಸ್ಕೇಪ್​​ ಆಗಿದ್ದಾನೆ. ಮಂಜುನಾಥ್​​ ಅವರು ಆರೋಪಿಗಳನ್ನು ಹಿಡಿಯಲು ಯತ್ನಿಸಿದ್ದರಾದರೂ ಅದು ಸಾಧ್ಯವಾಗಲಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: KSCA ಸದಸ್ಯನಿಂದಲೇ IPL ಬ್ಲಾಕ್ ಟಿಕೆಟ್ ದಂಧೆ! ಚಿನ್ನಸ್ವಾಮಿ ಸ್ಟೇಡಿಯಂ ಹೋಟೆಲ್ ಕ್ಯಾಪ್ಟನ್ ಜೊತೆ ಸೇರಿ ಕೃತ್ಯ

ಇನ್ನು ಕಳ್ಳತನವಾಗಿರುವ ವಸ್ತುಗಳಲ್ಲಿ ಸುಮಾರು 50 ಗ್ರಾಂ ತೂಕದ ಎರಡು ಪ್ಯಾಕೆಟ್ ಬೆಳ್ಳಿ ಸರಗಳು,  10 ಗ್ರಾಂ ತೂಕದ ಮೂರು ಕಾರ್ಡ್ ಚಿನ್ನದ ಮೂಗುತಿಗಳು ಹಾಗೂ 3,000 ನಗದು ಸೇರಿವೆ. ಇವುಗಳ ಒಟ್ಟು ಮೊತ್ತ ಸುಮಾರು 1.8 ಲಕ್ಷ ರೂಪಾಯಿಗಳು ಎಂದು ಅಂದಾಜಿಸಲಾಗಿದ್ದು, ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳತನ ಸಂಪೂರ್ಣ ದೃಶ್ಯ ಸೆರೆಯಾಗಿದೆ. ಏ.13ರಂದೇ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಪೊಲೀಸರು ಬಿಎನ್‌ಎಸ್ ಸೆಕ್ಷನ್ 305 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಮೂವರು ಆರೋಪಿಗಳ ಬಗ್ಗೆ ಸುಳಿವು ಪತ್ತೆಮಾಡಿದ್ದು, ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಸ್ಕೂಟರ್ ನಂಬರನ್ನೂ ಪತ್ತೆ ಹಚ್ಚಿದ್ದೇವೆ ಎಂದು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 2:50 pm, Fri, 17 April 26

Source link

ಗದಗದಲ್ಲಿ ಧೂಳೆಬ್ಬಿಸಿದ ಎತ್ತುಗಳ ಮಿಂಚಿನ ಓಟ ಹೇಗಿತ್ತು ನೋಡಿ!

Source link

ಸಿಎಂ ಸಿದ್ದರಾಮಯ್ಯ ಗಟ್ಟಿಯಾಗಿ ನಿಲ್ಲಬೇಕು, ಆದರೆ ಅವರು ನಿಲ್ಲುತ್ತಿಲ್ಲ: ಕೆ.ಎನ್. ರಾಜಣ್ಣ ಸ್ಫೋಟಕ ಹೇಳಿಕೆ – Kannada News | Siddaramaiahs Silence on Internal Party Conspiracy Draws KN Rajannas Criticism.

ಬೆಂಗಳೂರು, ಏ,17: ಕಾಂಗ್ರೆಸ್ ಹಿರಿಯ ನಾಯಕ ಕೆ.ಎನ್. ರಾಜಣ್ಣ ಅವರು ಪಕ್ಷದಲ್ಲಿ ನಿಷ್ಠೆಯಿಂದ ಇರುವವರನ್ನು ಗುರಿಯಾಗಿಸುತ್ತಿರುವ ಬಗ್ಗೆ ತೀವ್ರ ಅಸಮಾಧಾನ ಮತ್ತು ಬೇಸರ ವ್ಯಕ್ತಪಡಿಸಿದ್ದಾರೆ. ಪಟ್ಟಭದ್ರ ಹಿತಾಸಕ್ತಿಗಳು ಪಕ್ಷ ನಿಷ್ಠರ ವಿರುದ್ಧ ಹುನ್ನಾರ ನಡೆಸುತ್ತಿವೆ ಎಂದು ಅವರು ಆರೋಪಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ರಾಜಣ್ಣ, ಸತೀಶ್ ಜಾರಕಿಹೊಳಿ ಅವರ ಹೇಳಿಕೆಯನ್ನು ಉಲ್ಲೇಖಿಸಿ, ಜಮೀರ್ ಅಹಮದ್ ಮತ್ತು ಅವರನ್ನೇ ಟಾರ್ಗೆಟ್ ಮಾಡಲಾಗುತ್ತಿದೆ ಎಂದರು. ಹಿಂದೆ ವಾಲ್ಮೀಕಿ ಸಮುದಾಯವನ್ನು ಗುರಿಯಾಗಿಸಲಾಗಿತ್ತು, ಈಗ ಅಲ್ಪಸಂಖ್ಯಾತ ಸಮುದಾಯದವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಈ ಸಂಬಂಧವಾಗಿ ತಾವು ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡುವುದಾಗಿ ತಿಳಿಸಿದರು.ಪಕ್ಷಕ್ಕೆ ನಿಷ್ಠರಾಗಿರುವ, ಕಾಂಗ್ರೆಸ್ ಪಕ್ಷ ಬೆಳೆಯಬೇಕು, ಮತ್ತು ಅದರ ಮೂಲಕ ಬಡವರಿಗೆ ಅನುಕೂಲವಾಗಬೇಕು ಎಂದು ನಿರೀಕ್ಷಿಸುವವರ ಮೇಲೆ ಪಕ್ಷದಲ್ಲಿರುವ ಪಟ್ಟಭದ್ರ ಹಿತಾಸಕ್ತಿಗಳು ಹುನ್ನಾರಗಳನ್ನು ನಡೆಸುತ್ತಿವೆ ಎಂದು ರಾಜಣ್ಣ ಸ್ಪಷ್ಟಪಡಿಸಿದರು. ಇಂತಹ ಸನ್ನಿವೇಶಗಳು ಬಂದಾಗ ಮುಖ್ಯಮಂತ್ರಿಗಳು ಗಟ್ಟಿಯಾಗಿ ನಿಲ್ಲಬೇಕು, ಆದರೆ ಅವರು ನಿಲ್ಲುತ್ತಿಲ್ಲ ಎಂಬುದು ತಮಗೆ ಬೇಸರ ತರಿಸಿದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಇಂದ ಅಂತಹ ದೃಢ ನಿಲುವನ್ನು ರಾಜಣ್ಣ ನಿರೀಕ್ಷಿಸಿದ್ದರು. “ಸಿದ್ದರಾಮಯ್ಯನವರು ಏನಾದ್ರೂ ಕಟ್ಟ ಹಾಕಿದ್ದಾರಾ? ನಾವು ಸಿದ್ದರಾಮಯ್ಯನವರಿಂದ ಈ ರೀತಿ ಅಸಹಾಯಕ ಪರಿಸ್ಥಿತಿಯನ್ನು ನಿರೀಕ್ಷಿಸಿರಲಿಲ್ಲ” ಎಂದು ಅವರು ಪ್ರಶ್ನಿಸಿದರು. ಎಲ್ಲಾ ಪಕ್ಷಗಳಲ್ಲೂ ಪಟ್ಟಭದ್ರ ಹಿತಾಸಕ್ತಿಗಳು ಇರುತ್ತವೆ, ಕಾಂಗ್ರೆಸ್‌ನಲ್ಲೂ ಇವೆ ಎಂದು ಅವರು ಒಪ್ಪಿಕೊಂಡರು. ಆದರೆ ಸಿದ್ದರಾಮಯ್ಯನವರನ್ನು ಅಸಹಾಯಕರನ್ನಾಗಿಸಿದ ಆ ಶಕ್ತಿ ಅಥವಾ ವ್ಯಕ್ತಿ ಯಾರೆಂದು ನೇರವಾಗಿ ಹೇಳಲು ಅವರು ನಿರಾಕರಿಸಿದರು, “ನೀವೇ ಅರ್ಥ ಮಾಡಿಕೊಳ್ಳಿ” ಎಂದು ಹೇಳಿದರು. ಸಿದ್ದರಾಮಯ್ಯನವರು ತಮ್ಮ ಮೌನ ಮುರಿಯಬೇಕು ಎಂದು ಒತ್ತಾಯಿಸಿದ ರಾಜಣ್ಣ, ಮುಖ್ಯಮಂತ್ರಿಗಳ ಮೇಲೆ ಯಾವ ರೀತಿಯ ನಿರ್ಬಂಧಗಳು ಅಥವಾ ಕಂಪಲ್ಷನ್ಸ್ ಇವೆಯೋ ತಮಗೆ ತಿಳಿದಿಲ್ಲ ಎಂದರು. ಯಾವ ಒತ್ತಡದಿಂದ ಅವರು ಇಂತಹ ತಟಸ್ಥ ಧೋರಣೆ ತಳೆದಿದ್ದಾರೋ ಎಂಬುದು ಸ್ಪಷ್ಟವಾಗಿಲ್ಲ. ನಿಷ್ಠಾವಂತ ಕಾರ್ಯಕರ್ತರನ್ನು ರಕ್ಷಿಸಲು ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಬೇಕು ಎಂಬುದು ರಾಜಣ್ಣ ಅವರ ಆಶಯವಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಂಕೋಲಾ: ಮನೆಯೊಳಗೆ ಅವಿತು ಕುಳಿತಿತ್ತು 16 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ! ವಿಡಿಯೋ ಇಲ್ಲಿದೆ ನೋಡಿ – Kannada News | Massive 16 Foot King Cobra Rescued from House in Ankola: Brave Rescue Operation by Snake Experts in Halavalli

ಕಾರವಾರ, ಏಪ್ರಿಲ್ 17: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಳವಳ್ಳಿ ಗ್ರಾಮದಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಪತ್ತೆಯಾಗಿದ್ದು, ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಮನೆಯೊಂದರೊಳಗೆ ಸುಮಾರು 16 ಅಡಿ ಉದ್ದದ ಈ ಕಾಳಿಂಗ ಸರ್ಪ ಅವಿತು ಕುಳಿತಿದ್ದನ್ನು ಕಂಡು ಮನೆಯವರು ಮತ್ತು ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದರು. ವಿಷಯ ತಿಳಿದ ತಕ್ಷಣವೇ ಸ್ಥಳೀಯರು ಉರಗ ಪ್ರೇಮಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಉರಗ ತಜ್ಞರಾದ ಸೂರಜ್ ಶೆಟ್ಟಿ ಅರಬೈಲ್ ಹಾಗೂ ಹರೀಶ್ ಮಡಿವಾಳ ಅವರು ಅರಣ್ಯ ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆ ಕಾರ್ಯಾಚರಣೆ ಆರಂಭಿಸಿದರು. ಮನೆಯ ಕಿರಿದಾದ ಜಾಗದಲ್ಲಿ ಸೇರಿಕೊಂಡಿದ್ದ ಹಾವನ್ನು ಅತ್ಯಂತ ಎಚ್ಚರಿಕೆಯಿಂದ, ಯಾರಿಗೂ ತೊಂದರೆಯಾಗದಂತೆ ಸೆರೆಹಿಡಿದರು.

ಸೆರೆಹಿಡಿದ 16 ಅಡಿ ಉದ್ದದ ಈ ಸರ್ಪವನ್ನು ಅರಣ್ಯ ಇಲಾಖೆಯ ಮಾರ್ಗದರ್ಶನದಂತೆ ಜನವಸತಿ ಇಲ್ಲದ ದಟ್ಟ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಲಾಗಿದೆ. ಹಾವನ್ನು ಸುರಕ್ಷಿತವಾಗಿ ರಕ್ಷಿಸಿ, ಕಾಡಿಗೆ ಬಿಟ್ಟ ಸೂರಜ್ ಶೆಟ್ಟಿ ಮತ್ತು ತಂಡದ ಕಾರ್ಯಕ್ಕೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ. ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಇತ್ತೀಚೆಗೆ ಬಿಸಿಲಿನ ತಾಪ ಹೆಚ್ಚಾಗುತ್ತಿರುವುದರಿಂದ ತಂಪಾದ ಜಾಗ ಹುಡುಕಿಕೊಂಡು ಹಾವುಗಳು ಜನವಸತಿ ಪ್ರದೇಶಕ್ಕೆ ಬರುತ್ತಿವೆ ಎಂದು ಹೇಳಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version