ಟಿ20 ವಿಶ್ವಕಪ್ನ ಸ್ಕಾಟ್ಲೆಂಡ್ ತಂಡದ ಮೈಕೆಲ್ ಲೀಸ್ಕ್ (Michael Leask) ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಅದು ಕೂಡ ಕೇವಲ 5 ಎಸೆತಗಳಲ್ಲಿ ಎಂಬುದು ವಿಶೇಷ. ಅಂದರೆ ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತ್ಯುತ್ತಮ ಸ್ಟ್ರೈಕ್ ರೇಟ್ನಲ್ಲಿ ರನ್ಗಳಿಸಿ ಬ್ಯಾಟರ್ ಎಂಬ ದಾಖಲೆ ಲೀಸ್ಕ್ ಪಾಲಾಗಿದೆ.
ಟಿ20 ವಿಶ್ವಕಪ್ನ ಸ್ಕಾಟ್ಲೆಂಡ್ ತಂಡದ ಮೈಕೆಲ್ ಲೀಸ್ಕ್ (Michael Leask) ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಅದು ಕೂಡ ಕೇವಲ 5 ಎಸೆತಗಳಲ್ಲಿ ಎಂಬುದು ವಿಶೇಷ. ಅಂದರೆ ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತ್ಯುತ್ತಮ ಸ್ಟ್ರೈಕ್ ರೇಟ್ನಲ್ಲಿ ರನ್ಗಳಿಸಿ ಬ್ಯಾಟರ್ ಎಂಬ ದಾಖಲೆ ಲೀಸ್ಕ್ ಪಾಲಾಗಿದೆ.
ನವದೆಹಲಿ, ಫೆಬ್ರವರಿ 12: ಸಂಸತ್ತಿನ ಮುಂಭಾಗ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಅಶ್ವಿನಿ ವೈಷ್ಣವ್ ಮಾಧ್ಯಮದ ಮುಂದೆ ಪ್ರತಿಕ್ರಿಯೆ ನೀಡುವಾಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಧ್ಯೆ ಬಂದು ತೊಂದರೆ ಕೊಟ್ಟಿರುವ ವಿಡಿಯೋ ವೈರಲ್ ಆಗಿದೆ. ಇಬ್ಬರು ನಾಯಕರು ಮಾಧ್ಯಮದವರೊಂದಿಗೆ ಮಾತನಾಡುತ್ತಿರುವ ಸಮಯದಲ್ಲಿ ರಾಹುಲ್ ಗಾಂಧಿ ಸಚಿವರ ಪಕ್ಕ ಬಂದು ನಿಂತಿದ್ದರು.
ಕೂಡಲೇ ಇರುಸು ಮುರುಸು ಉಂಟಾಗಿ ಸಚಿವರು ಅಲ್ಲಿಂದ ಹೋಗಿದ್ದಾರೆ. ವಿರೋಧ ಪಕ್ಷದ ನಾಯಕನಿಂದ ಇಂಥಾ ವರ್ತನೆ ನಿರೀಕ್ಷಿಸಲಿರಲಿಲ್ಲ ಎಂದು ಬಿಜೆಪಿ ಫೇಸ್ಬುಕ್ನಲ್ಲಿ ವಿಡಿಯೋವನ್ನು ಹಂಚಿಕೊಂಡಿದೆ. ಸ್ವಲ್ಪ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿದ್ದಾರೆ ಎಂಬ ಏಕೈಕ ಕಾರಣಕ್ಕೆ ಸಂಸದ ರವನೀತ್ ಸಿಂಗ್ ಬಿಟ್ಟು ಅವರನ್ನು, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಗದ್ದಾರ್ (ದ್ರೋಹಿ) ಎಂದು ಕರೆಯುವ ಮೂಲಕ ತೀವ್ರ ವಿವಾದ ಸೃಷ್ಟಿಸಿದ್ದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಹೊಸ ಹೊಸ ಧಾರಾವಾಹಿಗಳು ಪ್ರಸಾರ ಕಾಣುತ್ತಾ ಇರುತ್ತವೆ. ಈಗ ಈ ಧಾರಾವಾಹಿ ರೋಚಕ ಘಟ್ಟ ತಲುಪಿದೆ. ಈ ಧಾರಾವಾಹಿ ಪ್ರಮುಖ ಹಾಗೂ ರೋಚಕ ಘಟ್ಟ ತಲುಪಿದೆ. ಈಗ ಧಾರಾವಾಹಿಯ ಕಥೆಯೇ ಬದಲಾಗುವ ಹಂತ ತಲುಪಿದೆ. ವಕೀಲೆಯಾಗಿ ಅನ್ಯಾಯದ ವಿರುದ್ಧ ಸಿಡಿದೇಳುತ್ತಿದ್ದ ಭಾರ್ಗವಿ ಈಗ ಬದಲಾಗುತ್ತಿದ್ದಾರೆ. ಇದು ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ.
ಪ್ರಭಾವಿ ವಕೀಲ ಜೆಪಿ ಪಾಟೀಲ್‌ನಿಂದ ಭಾರ್ಗವಿ ತಂದೆ ರವೀಂದ್ರ ಭಟ್ಕಳ್ ವಕೀಲ ವೃತ್ತಿಯಿಂದ ದೂರ ಆಗಿದ್ದರು. ಈಗ ಮತ್ತೆ ಅದೇ ಕೋರ್ಟ್‌ಗೆ ಅವರನ್ನು ಕರೆತರುವ ದಿಟ್ಟ ಗುರಿ ಹೊಂದಿದ್ದಳು ಭಾರ್ಗವಿ. ಆ ಕನಸು ಈಡೇರಿತ್ತು. ಆದರೆ, ಆದರೆ, ಇದೀಗ ಆ ದೊಡ್ಡ ಗೆಲುವನ್ನು ಸಂಭ್ರಮಿಸೋಕೆ ಅವಳ ಜೊತೆಗೆ ಅಪ್ಪನೇ ಇಲ್ಲ.
ಇದುವರೆಗೆ ಕಥೆಯಲ್ಲಿ ಭಾಗರ್ವಿ ಧೈರ್ಯದ ಸಂಕೇತ ಆಗಿದ್ದಳು. ವೀಕ್ಷಕರಲ್ಲೂ ಅವಳನ್ನು ನೋಡಿ ಒಂದು ಧೈರ್ಯ ಬಂದಿತ್ತು. ಆದರೆ, ಭೀಕರ ರಸ್ತೆ ಅಪಘಾತದಲ್ಲಿ ತಂದೆ ರವೀಂದ್ರ ಭಟ್ಕಳ್ ಅವರ ಅಕಾಲಿಕ ಸಾವು ಅವಳನ್ನು ಕಂಗಾಲಾಗಿಸಿದೆ. ಈ ಸಾವು ಕೇವಲ ಅಪಘಾತವೋ ಅಥವಾ ಭಾರ್ಗವಿಯ ವೈರಿಗಳ ಕುತಂತ್ರವೋ ಎನ್ನುವ ಪ್ರಶ್ನೆ ಮೂಡಿದೆ.
ತಂದೆಯ ಸಾವಿನಿಂದ ಕಂಗಾಲಾಗಿರುವ ತಾಯಿ, ಅಪ್ಪನ ಸಾವಿಗೆ ಕಾರಣವಾದ ಈ ಲಾಯರ್ ಕೆಲಸ ಬಿಡುವಂತೆ ಭಾರ್ಗವಿಗೆ ಸೂಚಿಸಿದ್ದಾಳೆ. ತಾಯಿ ನೋವಿಗೆ ಸ್ಪಂದಿಸಿ ಅಪ್ಪನ ಚಿತೆಯ ಮುಂದೆಯೇ ಕಠಿಣ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾಳೆ. ಅಮ್ಮನೇ ಹೇಳುವವರೆಗೂ ವಕೀಲ ವೃತ್ತಿ ಮಾಡಲ್ಲ ಎಂದಿದ್ದಾಳೆ. ಈ ಮೂಲಕ ಭಾರ್ಗವಿ ತನ್ನ ವೃತ್ತಿಜೀವನಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾಳೆ.
ಇದನ್ನೂ ಓದಿ: ಕಲರ್ಸ್ ಕನ್ನಡದ ಹೊಸ ಧಾರಾವಾಹಿಗೆ ನಾಯಕಿ ಆದ ಸಂಜನಾ ಬುರ್ಲಿ
ಲಾಯರ್ ವೃತ್ತಿ ಬಿಟ್ಟ ಭಾರ್ಗವಿ ಹೇಗೆ ಜೀವನ ಮಾಡುತ್ತಾಳೆ? ಈ ಟ್ವಿಸ್ಟ್ನಿಂದ ಧಾರಾವಾಹಿ ಹೇಗೆ ಸಾಗುತ್ತದೆ ಎಂಬಿತ್ಯಾದಿ ಪ್ರಶ್ನೆ ಮೂಡಿದೆ. ಕಥೆ ಇಲ್ಲಿಗೆ ಮುಗಿಯಿತೇ ಅಥವಾ ಇದು ಹೊಸ ಅಧ್ಯಾಯದ ಆರಂಭವೇ ಎನ್ನುವ ಕುತೂಹಲ ವೀಕ್ಷಕರಲ್ಲಿ ಮೂಡಿದೆ. ಸೋಮವಾರದಿಂದ ಶುಕ್ರವಾರದ ವರೆಗೆ ಬದಲಾದ ಸಮಯದಲ್ಲಿ ರಾತ್ರಿ 9:30ಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಭಾರ್ಗವಿ ಎಲ್ಎಲ್ಬಿ ಪ್ರಸಾರ ಕಾಣಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On – 8:29 am, Thu, 12 February 26
ಶಾಸಕರ ವಿದೇಶ ಪ್ರವಾಸ: ವರದಿ ಕೇಳಿದ ಹೈಕಮಾಂಡ್Image Credit source: TV9 Network
ಬೆಂಗಳೂರು, ಫೆಬ್ರವರಿ 12: ಕರ್ನಾಟಕ ರಾಜಕಾರಣದಲ್ಲಿ ಕಾಂಗ್ರೆಸ್ (Congress) ಶಾಸಕರ ವಿದೇಶ ಪ್ರವಾಸ (Foriegn Trip) ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಶಾಸಕರ ಫಾರಿನ್ ಟ್ರಿಪ್ಗೆ ಪಕ್ಷದೊಳಗೇ ಅಸಮಾಧಾನದ ಧ್ವನಿ ಕೇಳಿಬರುತ್ತಿದೆ. ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್‌ಗೆ ಯೋಜಿಸಲಾದ ಈ ಪ್ರವಾಸದ ಉದ್ದೇಶವೇನು ಎಂಬುದರ ಬಗ್ಗೆಯೇ ಸ್ಪಷ್ಟತೆ ಇಲ್ಲ ಎನ್ನಲಾಗಿದೆ. ಇದು ಹೈಕಮಾಂಡ್ ಮಟ್ಟದಲ್ಲಿ ಗಮನ ಸೆಳೆದಿದೆ. ವಿದೇಶ ಪ್ರವಾಸದ ವಿಚಾರ ಬಹಿರಂಗವಾದ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ನಾಯಕರಿಂದ ಮಾಹಿತಿ ಕೇಳಿದೆ ಎಂದು ಮೂಲಗಳು ತಿಳಿಸಿವೆ.
ಪಶುಸಂಗೋಪನಾ ಇಲಾಖೆಯ ಅಧ್ಯಯನ ಪ್ರವಾಸದ ಹೆಸರಿನಲ್ಲಿ ಕೆಲವು ಶಾಸಕರು ವಿದೇಶಕ್ಕೆ ತೆರಳಲು ಸಿದ್ಧರಾಗಿರುವುದು ದೃಢಪಟ್ಟಿದೆ. ಯಾವೆಲ್ಲ ಶಾಸಕರು ವಿದೇಶ ಪ್ರವಾಸ ಕೈಗೊಳ್ಳುತ್ತಾರೆ ಎಂಬುದೂ ಬಹಿರಂಗವಾಗಿದೆ. ಆದರೆ, ಆರಂಭದಲ್ಲಿ ಇದು ಸರ್ಕಾರಿ ಪ್ರವಾಸ ಎಂದು ಹೇಳಲಾಗಿತ್ತು. ನಂತರ ಖಾಸಗಿ ಪ್ರವಾಸವಾಗಿ ಬದಲಾಗುತ್ತಿದೆಯೇ ಎಂಬ ಅನುಮಾನಗಳು ಪಕ್ಷದೊಳಗೇ ಮೂಡಿವೆ. ಹೀಗಾಗಿ, ಕಾಂಗ್ರೆಸ್ ನಾಯಕರು ಪ್ರವಾಸದ ಕುರಿತು ಸಂಪೂರ್ಣ ವರದಿ ಸಲ್ಲಿಸಬೇಕೆಂದು ಹೈಕಮಾಂಡ್ ಸೂಚನೆ ನೀಡಿರುವುದಾಗಿ ತಿಳಿದುಬಂದಿದೆ.
ರಾಜ್ಯದಲ್ಲಿ ಜನಸಾಮಾನ್ಯರ ಸಮಸ್ಯೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಶಾಸಕರ ವಿದೇಶಿ ಪ್ರವಾಸ ಅಗತ್ಯವಿತ್ತೇ ಎಂಬ ಪ್ರಶ್ನೆ ಕೂಡ ಪಕ್ಷದೊಳಗೆ ಚರ್ಚೆಗೆ ಕಾರಣವಾಗಿದೆ. ‘ಪವರ್ ಪಾಲಿಟಿಕ್ಸ್ ನಡೆಯುತ್ತಿರುವ ಹೊತ್ತಿನಲ್ಲಿ ಟೂರ್ ಪಾಲಿಟಿಕ್ಸ್ ಬೇಕಿತ್ತಾ?’ ಎಂಬ ಅಸಮಾಧಾನ ಕೆಲ ನಾಯಕರಿಂದ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ. ಅಧ್ಯಯನ ಪ್ರವಾಸವೇ ಆಗಿದ್ದರೆ ಸರ್ಕಾರದಿಂದ ಅಧಿಕೃತ ಅನುಮತಿ ಪಡೆದಿದ್ದೀರಾ ಎಂದು ಹೈಕಮಾಂಡ್ ಪ್ರಶ್ನಿಸಿದೆ ಎನ್ನಲಾಗಿದೆ.
ಇದೊಂದೆಡೆ, ಇದು ಸಂಪೂರ್ಣವಾಗಿ ಅಧ್ಯಯನ ಪ್ರವಾಸ ಎಂದು ಕೆಲವು ಶಾಸಕರು ಸ್ಪಷ್ಟಪಡಿಸಿದರೆ, ಇನ್ನೂ ಕೆಲವರು ಪ್ರವಾಸದ ಉದ್ದೇಶದ ಬಗ್ಗೆ ಗೊಂದಲಮಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಪ್ರವಾಸಕ್ಕೆ ಸರ್ಕಾರದಿಂದ ಎನ್‌ಒಸಿ ನೀಡಲು ಸಿಎಂ ಕಚೇರಿ ಮುಂದಾಗಿತ್ತು ಎಂಬ ಮಾತುಗಳೂ ಕೇಳಿಬರುತ್ತಿವೆ. ಅಲ್ಲದೆ ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್ ಕೌನ್ಸಲೇಟ್‌ಗಳಿಗೆ ವೀಸಾ ಪ್ರಕ್ರಿಯೆಗಾಗಿ ಸರ್ಕಾರದಿಂದ ಪತ್ರ ರವಾನೆಯಾಗಿದೆ ಎಂಬ ಮಾಹಿತಿ ಕೂಡ ಹರಿದಾಡುತ್ತಿದೆ.
ಇದನ್ನೂ ಓದಿ: ನಾಯಕತ್ವ ಜಂಜಾಟದ ನಡುವೆ ಸದ್ದು ಮಾಡಿದ ಶಾಸಕರ ಫಾರಿನ್ ಟ್ರಪ್: ಈ ಪ್ರವಾಸದ ಹಿಂದಿನ ಗುಟ್ಟೇನು?
ಒಟ್ಟಿನಲ್ಲಿ ಕಾಂಗ್ರೆಸ್ ಶಾಸಕರ ವಿದೇಶಿ ಪ್ರವಾಸ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದ್ದು, ಅಧ್ಯಯನ ಪ್ರವಾಸವೇ ಅಥವಾ ಖಾಸಗಿ ಪ್ರವಾಸವೇ ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಗಬೇಕಿದೆ. ಈ ನಡುವೆ ಹೈಕಮಾಂಡ್ ಸಂಪೂರ್ಣ ವರದಿ ಕೇಳಿರುವುದು ಪ್ರಕರಣಕ್ಕೆ ಮತ್ತಷ್ಟು ಟ್ವಿಸ್ಟ್ ಕೊಟ್ಟಿದೆ.
ಮೈಸೂರು, ಫೆ.12: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಅಕ್ರಮವಾಗಿ ಕೇರಳ ಲಾಟರಿ ಮಾರಾಟ ಮಾಡುತ್ತಿದ್ದ ಜಾಲವನ್ನು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ (SP) ವಿಶೇಷ ತಂಡ ಪತ್ತೆಹಚ್ಚಿ ಭರ್ಜರಿ ಕಾರ್ಯಾಚರಣೆ ನಡೆಸಿದೆ.ಪಿರಿಯಾಪಟ್ಟಣದಲ್ಲಿ ನಡೆದ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ಅರುಣ್ ಕುಮಾರ್ ಹಾಗೂ ಸ್ವಾಮಿ ಎಂದು ಹೇಳಲಾಗಿದೆ. ಅರುಣ್ ಕುಮಾರ್ ಪಿರಿಯಾಪಟ್ಟಣದ ವೆಂಕಟೇಶ್ವರ ವೇ ಬ್ರಿಡ್ಜ್ (Weigh Bridge) ಬಳಿ ಅಕ್ರಮವಾಗಿ ಲಾಟರಿ ಮಾರಾಟ ಮಾಡುತ್ತಿದ್ದಾಗ ವಶಕ್ಕೆ ಪಡೆಯಲಾಗಿದೆ. ಸ್ವಾಮಿಯನ್ನು ಪಿರಿಯಾಪಟ್ಟಣದ ಸಿಂಚನ ಹೋಟೆಲ್‌ನಲ್ಲಿ ಲಾಟರಿ ಮಾರಾಟ ಮಾಡುತ್ತಿದ್ದ ವೇಳೆ ಬಂಧಿಸಲಾಗಿದೆ.
ಪೊಲೀಸರು ಬಂಧಿತರಿಂದ ಒಟ್ಟು 78,130 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಅದರಲ್ಲಿ ಒಟ್ಟು 55,200 ರೂ. ಮೌಲ್ಯದ ಕೇರಳ ರಾಜ್ಯದ ಲಾಟರಿ ಟಿಕೆಟ್‌ಗಳನ್ನು ಜಪ್ತಿ ಮಾಡಲಾಗಿದೆ. ಆರೋಪಗಳಿಂದ ಅರುಣ್ ಕುಮಾರ್‌ನಿಂದ 33,000 ರೂ. ಮತ್ತು ಸ್ವಾಮಿಯಿಂದ 22,200 ರೂ. ಮೌಲ್ಯದ ಟಿಕೆಟ್ ವಶಪಡಿಸಿಕೊಳ್ಳಲಾಗಿದೆ. ಇನ್ನು ಆರೋಪಿಗಳಿಂದ ಒಟ್ಟು 22,930 ರೂ. ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ. ಅದರಲ್ಲಿ ಅರುಣ್ ಕುಮಾರ್‌ನಿಂದ 20,000 ರೂ. ಹಾಗೂ ಸ್ವಾಮಿಯಿಂದ 2,930 ರೂ. ಹಣವನ್ನು ಪೊಲೀಸರು ವಶಪಡಿದಿದ್ದಾರೆ.
ಇದನ್ನೂ ಓದಿ: ಮೈಸೂರಿನಲ್ಲಿ ಪುಟ್ಟ ಬಾಲಕಿಯ ಬ್ಯಾಗಿನೊಳಗೆ ನಾಗರ ಹಾವು ಪ್ರತ್ಯಕ್ಷ!
ಮೈಸೂರು ಜಿಲ್ಲಾ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಅವರ ಮಾರ್ಗದರ್ಶನದಲ್ಲಿ ಮತ್ತು ಅಡಿಷನಲ್ ಎಸ್‌ಪಿ ಮಲ್ಲಿಕ್ ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಈ ತಂಡದಲ್ಲಿ ಇನ್ಸ್‌ಪೆಕ್ಟರ್ ಗೋವಿಂದರಾಜು ಮತ್ತು ಪಿಎಸ್‌ಐ ಜಗದೀಶ್ ಹಾಗೂ ಎಸ್‌ಪಿ ಸ್ಕ್ವ್ಯಾಡ್ ಸಿಬ್ಬಂದಿ ಪಾಲ್ಗೊಂಡಿದ್ದರು. ಕರ್ನಾಟಕದಲ್ಲಿ ಲಾಟರಿ ಮಾರಾಟವನ್ನು ನಿಷೇಧಿಸಲಾಗಿದ್ದರೂ, ಗಡಿ ಭಾಗದ ಮೂಲಕ ಕೇರಳ ಲಾಟರಿಯನ್ನು ತಂದು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿತ್ತು. ಈ ಸಂಬಂಧ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಹಾಸ್ಯ ನಟ ರಾಜ್‌ಪಾಲ್ ಯಾದವ್ (Rajpal Yadav) ಹೆಸರನ್ನು ಹೇಳಿದರೆ ಮುಖದಲ್ಲಿ ನಗು ಬರುತ್ತದೆ. ಸಣ್ಣ ಪಾತ್ರಗಳಿಗೂ ಜೀವ ತುಂಬುವ ರಾಜ್‌ಪಾಲ್, ‘ಹೇರಾ ಫೇರಿ’, ‘ಭಾಗಮ್ ಭಾಗ್’, ‘ಭೂಲ್ ಭುಲೈಯಾ’ ಮುಂತಾದ ಚಿತ್ರಗಳಲ್ಲಿ ಹಾಸ್ಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅವರು ಕಳೆದ ಹಲವು ವರ್ಷಗಳಿಂದ ಹಿಂದಿ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಪ್ರಸ್ತುತ, ರಾಜ್‌ಪಾಲ್ ತಮ್ಮ ಜೀವನದ ಅತ್ಯಂತ ಕಠಿಣ ಸಮಯವನ್ನು ಎದುರಿಸುತ್ತಿದ್ದಾರೆ.
ರಾಜ್‌ಪಾಲ್ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಸಿನಿಮಾ ನಿರ್ದೇಶಿಸಲು, ನಿರ್ಮಿಸಲು ನಿರ್ಧರಿಸಿದರು. ಈ ಪ್ರಕ್ರಿಯೆಯಲ್ಲಿ ಅವರು ಮಾಡಿದ ತಪ್ಪುಗಳು ಅವರನ್ನು ಬಹಳಷ್ಟು ತೊಂದರೆಗೆ ಸಿಲುಕಿಸಿವೆ. ಈ ಸಮಸ್ಯೆ ಎಷ್ಟು ದೊಡ್ಡದಾಗಿದೆ ಎಂದರೆ ಅವರು ಕೊನೆಗೆ ಜೈಲಿಗೆ ಶರಣಾಗಬೇಕಾಯಿತು.
‘ಅತಾ ಪತಾ ಲಾಪತಾ’ ಚಿತ್ರವನ್ನು ನಿರ್ದೇಶಿಸಿ, ನಿರ್ಮಾಣ ಮಾಡಿದ್ದು ರಾಜ್‌ಪಾಲ್ ಯಾದವ್ ಅವರ ಜೀವನದ ಅತ್ಯಂತ ಕೆಟ್ಟ ನಿರ್ಧಾರವಾಗಿತ್ತು. ಈ ಚಿತ್ರ ಅವರಿಗೆ ಕೇವಲ ಒಂದು ಯೋಜನೆಯಾಗಿರಲಿಲ್ಲ, ಆದರೆ ಅವರು ಅದನ್ನು ಒಂದು ಕನಸಾಗಿ ನೋಡಿದರು. ಅವರು ಈ ಕನಸನ್ನು ನನಸಾಗಿಸಿದರು. ಈ ಸಿನಿಮಾ ಚಿತ್ರಮಂದಿರಗಳಲ್ಲಿಯೂ ಬಿಡುಗಡೆಯಾಯಿತು. ಆದರೆ ಪ್ರೇಕ್ಷಕರಿಂದ ವಿಶೇಷ ಪ್ರತಿಕ್ರಿಯೆ ಸಿಗಲಿಲ್ಲ.
ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿಯಾಗದ ಈ ಚಿತ್ರದಿಂದಾಗಿ, ರಾಜ್‌ಪಾಲ್ ಸಾಲದ ಬೆಟ್ಟವನ್ನೇ ಉಳಿಸಿಕೊಂಡರು. ಸಾಲವನ್ನು ಪಾವತಿಸಲು ಅವರು ನೀಡಿದ ಎಲ್ಲಾ ಚೆಕ್‌ಗಳು ಬೌನ್ಸ್ ಆದವು. ಕೊನೆಗೆ, ಅವರ ವಿರುದ್ಧದ ಪ್ರಕರಣ ನ್ಯಾಯಾಲಯವನ್ನು ತಲುಪಿತು. ಪ್ರಕರಣವು ದೀರ್ಘಕಾಲದವರೆಗೆ ನಡೆಯಿತು ಮತ್ತು ನ್ಯಾಯಾಲಯದ ಆದೇಶದ ಪ್ರಕಾರ, ಅವರು ತಿಹಾರ್ ಜೈಲಿನಲ್ಲಿ ಶರಣಾಗಬೇಕಾಯಿತು. ಪರದೆಯ ಮೇಲೆ ಹಾಸ್ಯ ಪಾತ್ರಗಳನ್ನು ನಿರ್ವಹಿಸುವ ಮೂಲಕ ಪ್ರೇಕ್ಷಕರನ್ನು ನಗಿಸಿದ ಈ ನಟ, ಜೈಲಿನಲ್ಲಿ ಶರಣಾಗುವಾಗ ಅತ್ತರು.
ಇದನ್ನೂ ಓದಿ: ತಿಹಾರ್ ಜೈಲು ಪಾಲಾದ ಖ್ಯಾತ ಹಾಸ್ಯ ನಟ ರಾಜ್‌ಪಾಲ್ ಯಾದವ್; ಕಾರಣ ಏನು?
ರಾಜ್‌ಪಾಲ್ ಯಾದವ್ ನಿರ್ದೇಶನದ ಈ ಚಿತ್ರದಲ್ಲಿ ಅವರು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಬಜೆಟ್ ಸುಮಾರು 11 ಕೋಟಿ ರೂಪಾಯಿ ಎಂದು ಹೇಳಲಾಗುತ್ತದೆ. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಕೇವಲ 38 ಲಕ್ಷ ರೂಪಾಯಿಗಳನ್ನು ಗಳಿಸಿತು. ಈ ಚಿತ್ರ 2012ರಲ್ಲಿ ಬಿಡುಗಡೆಯಾಯಿತು.ಇದು ಅವರ ಸಾಲದ ಹೊರೆ ಹೆಚ್ಚಿಸಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ದೇವಸ್ಥಾನಗಳಿಗೆ ಭೇಟಿ ನೀಡಿದಾಗ ನಾವು ಚಪ್ಪಲಿಗಳನ್ನು ಹೊರಗೆ ಬಿಡುವುದು ಒಂದು ಸಾಮಾನ್ಯ ಆಚರಣೆ. ಈ ಕಾರ್ಯದ ಹಿಂದೆ ಅಹಂಕಾರ ತ್ಯಾಗದ ದೊಡ್ಡ ಅರ್ಥ ಅಡಗಿದೆ. ನಮ್ಮ ಅಹಂಕಾರ ಮತ್ತು ದರ್ಪವನ್ನು ದೇವಸ್ಥಾನದ ಹೊರಗೆ ಬಿಟ್ಟು, ವಿನಮ್ರಭಾವದಿಂದ ದೇವರ ಮುಂದೆ ಶರಣಾಗತಿಯನ್ನು ಸೂಚಿಸುತ್ತದೆ. ಗುರುಗಳನ್ನು ಭೇಟಿಯಾದಾಗ ಅಥವಾ ಹಿರಿಯರಿಗೆ ನಮಸ್ಕರಿಸುವಾಗಲೂ ಚಪ್ಪಲಿಗಳನ್ನು ಪಕ್ಕಕ್ಕೆ ಬಿಡುವುದು ಇದೇ ವಿನಮ್ರತೆಯ ಸಂಕೇತವಾಗಿದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ.
ಗುರೂಜಿಯವರು ಹೇಳುವಂತೆ, ಪಾದರಕ್ಷೆಗಳ ಮಹತ್ವವನ್ನು ಪುರಾಣಗಳಲ್ಲಿಯೂ ಉಲ್ಲೇಖಿಸಲಾಗಿದೆ. ರಾಮಾಯಣದಲ್ಲಿ, ಭರತನು ರಾಮ ವನವಾಸಕ್ಕೆ ತೆರಳಿದಾಗ, ರಾಮನ ಪಾದುಕೆಗಳನ್ನು ಸಿಂಹಾಸನದ ಮೇಲೆ ಇಟ್ಟು, ಅವುಗಳಿಗೆ ನಿರಂತರವಾಗಿ ಪೂಜೆ ಸಲ್ಲಿಸುತ್ತಾ ರಾಮನ ಹೆಸರಿನಲ್ಲಿ ಆಡಳಿತ ನಡೆಸಿದನು. ಇದು ಪಾದರಕ್ಷೆಗಳು ವ್ಯಕ್ತಿಯ ಪ್ರತಿನಿಧಿಯಾಗಿ, ಅವರ ಶಕ್ತಿ ಮತ್ತು ಸ್ಥಾನಮಾನವನ್ನು ಪ್ರತಿಕಬಿಂಬಿಸಬಲ್ಲವು ಎಂಬುದಕ್ಕೆ ಉತ್ತಮ ಉದಾಹರಣೆ. ಇಂದಿಗೂ ಶಿರಡಿಯ ಸಾಯಿಬಾಬಾ ಮಂದಿರ, ಮತ್ತು ಅನೇಕ ಮಠಗಳಲ್ಲಿ ಗುರುಗಳ ಪಾದುಕೆಗಳನ್ನು ಪೂಜಿಸಲಾಗುತ್ತದೆ. ಈ ಪಾದುಕಾ ಪೂಜೆಯು ಗುರುಗಳಿಗೆ ಸಲ್ಲಿಸುವ ಗೌರವ ಮತ್ತು ಅವರ ಶಕ್ತಿಯನ್ನು ಪಡೆಯುವ ಸಂಕೇತವಾಗಿದೆ.
ಪಾದರಕ್ಷೆಗಳು ಶಿಸ್ತಿನ ಸಂಕೇತವೂ ಹೌದು. ಸಂಪೂರ್ಣ ಪಾದವನ್ನು ಮುಚ್ಚುವಂತಹ ಪಾದುಕೆಗಳನ್ನು ಧರಿಸುವುದು ಹೆಚ್ಚು ಶುಭವೆಂದು ಪರಿಗಣಿಸಲಾಗುತ್ತದೆ. ದಾನಗಳಲ್ಲಿ ಪಾದರಕ್ಷೆಗಳ ದಾನವು ಬಹಳ ವಿಶೇಷವಾದದ್ದು. ಶನಿ ದೋಷದಿಂದ ಬಳಲುತ್ತಿರುವವರು ಸೋಮವಾರ, ಬುಧವಾರ ಅಥವಾ ಶನಿವಾರದಂದು ಒಂದು ಜೊತೆ ಪಾದರಕ್ಷೆಗಳನ್ನು ದಾನ ಮಾಡುವುದರಿಂದ ಶುಭವಾಗುತ್ತದೆ ಎಂಬ ನಂಬಿಕೆ ಇದೆ. ಸನ್ಯಾಸಿಗಳು ಮರದ ಪಾದುಕೆಗಳನ್ನು ಧರಿಸುವುದು ಆಧ್ಯಾತ್ಮಿಕ ಶುದ್ಧತೆ ಮತ್ತು ಸರಳ ಜೀವನದ ಸಂಕೇತ.
ಇದನ್ನೂ ಓದಿ: ಈ ರಾಶಿಯವರು ತಪ್ಪಿಯೂ ಬೆಳ್ಳಿ ಧರಿಸಬೇಡಿ, ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು!
ಮನೆಯಿಂದ ಹೊರಗೆ ಹೋಗುವಾಗ ಅಥವಾ ಒಳಗೆ ಬರುವಾಗ ಪಾದರಕ್ಷೆಗಳನ್ನು ನೋಡುತ್ತೇವೆ. ಅವುಗಳನ್ನು ಅಚ್ಚುಕಟ್ಟಾಗಿ, ಒಂದಕ್ಕೊಂದು ಸಮೀಪದಲ್ಲಿ ಇಡುವುದು ಬಹಳ ಮುಖ್ಯ. ಒಂದು ಚಪ್ಪಲಿಯನ್ನು ಒಂದು ಕಡೆ, ಮತ್ತೊಂದನ್ನು ಇನ್ನೊಂದು ಕಡೆ ಬಿಸಾಡುವುದು ಸರಿಯಾದ ಕ್ರಮವಲ್ಲ. ಪಾದರಕ್ಷೆಗಳು ಧನಾತ್ಮಕ ಮತ್ತು ಋಣಾತ್ಮಕ ಶಕ್ತಿಗಳನ್ನು ಹೊಂದಿರುತ್ತವೆ. ಅವುಗಳನ್ನು ಸರಿಯಾಗಿ ಇರಿಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಫೆಬ್ರವರಿ 12: ಜುಲೈ 15ರಂದು ಬೆಂಗಳೂರಿನ ಭಾರತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೌಡಿಶೀಟರ್ ಬಿಕ್ಲು ಶಿವ ಹತ್ಯೆ ನಡೆದಿತ್ತು. ಜಾಗದ ವಿಚಾರಕ್ಕೆ ಸಂಬಂಧಿಸಿದ ಈ ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜ್ ಹೆಸರು ತಳುಕು ಹಾಕಿಕೊಂಡಿತ್ತು. ಪ್ರಕರಣದಲ್ಲಿ ಭೈರತಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದ್ದು, ಅವರಿಗೆ ಬಂಧನ ಭೀತಿ ಎದುರಾಗಿದೆ. ಹೈಕೋರ್ಟ್ ಆದೇಶದ ಬೆನ್ನಲ್ಲೇ ಭೈರತಿ ನಾಪತ್ತೆಯಾಗಿದ್ದಾರೆ. ಸಿಐಡಿ ತಂಡ ಬೆಂಗಳೂರು ನಗರದಾದ್ಯಂತ ಶೋಧ ನಡೆಸಿದೆ. ಅವರು ಕೆಲ ದಿನಗಳ ಹಿಂದೆಯೇ ಮೊಬೈಲ್ ಸ್ವಿಚ್ ಆಫ್ ಮಾಡಿ ದುಬೈಗೆ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.
ಭೈರತಿ ಬಸವರಾಜ್ ಪ್ರಸ್ತುತ ನಿರೀಕ್ಷಣಾ ಜಾಮೀನು ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಪೊಲೀಸರು ಅವರಿಗೆ ಲುಕ್ ಔಟ್ ನೋಟಿಸ್ ಹೊರಡಿಸಲು ಸಿದ್ಧತೆ ನಡೆಸಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲೂ ಜಾಮೀನು ಸಿಗದಿದ್ದರೆ, ಅವರು ಶರಣಾಗುವುದು ಅನಿವಾರ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು, ಫೆಬ್ರವರಿ 12: ಬೆಂಗಳೂರಿನ (Bangalore) ಹೆಚ್ಎಎಲ್ (HAL) ರಸ್ತೆಯಲ್ಲಿ ನಡೆದ ಭಯಾನಕ ಘಟನೆಯೊಂದು ಸಾರ್ವಜನಿಕರನ್ನು ಬೆಚ್ಚಿಬೀಳುವಂತೆ ಮಾಡಿದೆ. ಕಾರು ಮತ್ತು ಗೂಡ್ಸ್ ವಾಹನ ಚಾಲಕರ ನಡುವೆ ಸಣ್ಣ ಗಲಾಟೆ ನಡೆದು, ಬಳಿಕ ಕಾರು ಚಾಲಕ ಗೂಡ್ಸ್ ವಾಹನದ ಚಾಲಕನನ್ನು ತನ್ನ ಕಾರಿನ ಬಾನೆಟ್ ಮೇಲೆ ಹೊತ್ತೊಯ್ದ ಘಟನೆ ಬುಧವಾರ ಮಧ್ಯಾಹ್ನ ಸುಮಾರು 12.45ರ ಸುಮಾರಿಗೆ ನಡೆದಿದೆ. ಮೂಲಗಳಿಂದ ದೊರೆತ ಮಾಹಿತಿ ಪ್ರಕಾರ, ಗೂಡ್ಸ್ ವಾಹನ ಮತ್ತು ಕಾರು ಟಚ್ ಆಗಿದ್ದ ಹಿನ್ನೆಲೆಯಲ್ಲಿ ಇಬ್ಬರು ಚಾಲಕರ ನಡುವೆ ಮಾತಿನ ಚಕಮಕಿ ನಡೆದಿದೆ. ವಾಹನಕ್ಕೆ ಉಂಟಾದ ನಷ್ಟದ ಪರಿಹಾರ ನೀಡುವಂತೆ ಗೂಡ್ಸ್ ವಾಹನದ ಚಾಲಕ ನಂಜುಂಡ ಕೇಳಿದ್ದಾನೆ. ಇದರಿಂದ ಇಬ್ಬರ ಮಧ್ಯೆ ವಾಗ್ವಾದ ಹೆಚ್ಚಾಗಿ, ನಂಜುಂಡ ಕಾರಿನ ಮುಂದೆ ನಿಂತಿದ್ದ ವೇಳೆ ಕಾರು ಚಾಲಕ ಸುರೇಶ್ ಏಕಾಏಕಿ ಕಾರು ಚಾಲನೆ ಮಾಡಿದ್ದಾನೆ. ಪರಿಣಾಮ, ನಂಜುಂಡ ಕಾರಿನ ಬಾನೆಟ್ ಮೇಲೆ ಬಿದ್ದು ಸುಮಾರು ಒಂದು ಕಿಲೋಮೀಟರ್‌ಗೂ ಹೆಚ್ಚು ದೂರ ಒಯ್ಯಲ್ಪಟ್ಟಿದ್ದಾನೆ.
ನಂಜುಂಡ ಜೋರಾಗಿ ಕಿರುಚುತ್ತಿದ್ದರೂ ಚಾಲಕ ಕಾರನ್ನು ನಿಲ್ಲಿಸದೆ ಸಾಗಿದ ದೃಶ್ಯ ರಸ್ತೆಬದಿ ಸಾಗುತ್ತಿದ್ದ ಜನರನ್ನು ಬೆಚ್ಚಿಬೀಳುವಂತೆ ಮಾಡಿದೆ. ಕೆಂಪು ಬಣ್ಣದ ಕಾರಿನ ಚಲನವಲನ ಗಮನಿಸಿದ ಕೆಲವರು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾರೆ.
ಟ್ರಿನಿಟಿ ಜಂಕ್ಷನ್ ಬಳಿ ಆರಂಭವಾದ ಗಲಾಟೆ ಬಳಿಕ ಸಿಬಿ ಜಂಕ್ಷನ್ ಹಾಗೂ ASC ಸೆಂಟರ್ ಕಾಲೇಜು ವರೆಗೆ ಮುಂದುವರಿದಿದ್ದು, ಇತರೆ ಕ್ಯಾಬ್ ಚಾಲಕರು ಅಡ್ಡಹಾಕಿದ ಬಳಿಕ ಚಾಲಕ ಕಾರು ನಿಲ್ಲಿಸಿದ್ದಾನೆ ಎಂಬುದು ತಿಳಿದುಬಂದಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಡಬಲ್ ಮರ್ಡರ್: ಹೆತ್ತ ತಂದೆ-ತಾಯಿಯನ್ನೇ ಕೊಂದ ಮಗ
ಘಟನೆಗೆ ಸಂಬಂಧಿಸಿ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೇವಲ ಒಂದು ಗಂಟೆಯಲ್ಲೇ ಆರೋಪಿಯಾಗಿದ್ದ ಕಾರು ಚಾಲಕ ಸುರೇಶ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಕಾರನ್ನು ಸೀಜ್ ಮಾಡಲಾಗಿದ್ದು, ಆರೋಪಿಯ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ವರದಿ: ನಟರಾಜ್, ಟಿವಿ9 ಬೆಂಗಳೂರು
ಢಾಕಾ, ಫೆಬ್ರವರಿ 12: ಬಾಂಗ್ಲಾದೇಶ(Bangladesh)ದಲ್ಲಿ ಇಂದು ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ. ಯುವ ಗುಂಪಿನ ದಂಗೆಯು 2024ರಲ್ಲಿ ಶೇಖ್ ಹಸೀನಾ ಅವರ ಸರ್ಕಾರ ಪತನಕ್ಕೆ ಕಾರಣವಾದ ಕಾರಣ ಇದನ್ನು ವಿಶ್ವದ ಮೊದಲ ಜೆನ್ಝಿ ಚುನಾವಣೆ ಎಂದು ಕರೆಯಲಾಗುತ್ತದೆ. ಇದರಿಂದಾಗಿ ಹಸೀನಾ ಬಾಂಗ್ಲಾದೇಶದಿಂದ ಪಲಾಯನ ಮಾಡಿ ಭಾರತಕ್ಕೆ ಬರುವಂತಾಗಿತ್ತು. ಬಾಂಗ್ಲಾದೇಶ ಚುನಾವಣೆಗಳನ್ನು ವಿಶ್ವದ ಅನೇಕ ಪ್ರಮುಖ ದೇಶಗಳು ಹಾಗೂ ಎರಡು ಏಷ್ಯಾದ ದೈತ್ಯ ರಾಷ್ಟ್ರಗಳಾದ ಭಾರತ ಹಾಗೂ ಚೀನಾ ಸೂಕ್ಷ್ಮವಾಗಿ ಗಮನಿಸುತ್ತಿವೆ.
ಶೇಖ್ ಹಸೀನಾ ಬಳಿಕ ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವನ್ನು ರಚಿಸಲಾಯಿತು. ಈ ಚುನಾವಣೆಯು ಕೇವಲ ಆಡಳಿತ ಬದಲಾವಣೆಯ ಪ್ರಶ್ನೆಯಲ್ಲ, ಆದರೆ ದೇಶದ ಸಾಂವಿಧಾನಿಕ ರಚನೆಯಲ್ಲಿ ಪ್ರಮುಖ ಬದಲಾವಣೆಗಳಿಗೆ ಕೂಡ ಮುದ್ರೆ ಒತ್ತುತ್ತದೆ. ಸಂಸತ್ತಿನ ಮತದಾನದ ಜತೆ 84 ಅಂಶಗಳ ಸುಧಾರಣಾ ಪ್ಯಾಕೇಜ್ ಮೇಲೆ ಜನಾಭಿಪ್ರಾಯ ಸಂಗ್ರಹವನ್ನು ಸಹ ನಡೆಸಲಾಗುತ್ತದೆ.
ಸ್ಥಳೀಯ ಸಮಯ ಬೆಳಗ್ಗೆ 7.30ರಿಂದ ಮತದಾನ ಆರಂಭವಾಗಲಿದ್ದು, 4 ಗಂಟೆಯವರೆಗೆ ನಡೆಯಲಿದೆ. ದೇಶಾದ್ಯಂತ 299 ಸಂಸದೀಯ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಜಮಾತ್-ಎ-ಇಸ್ಲಾಮಿ ಅಭ್ಯರ್ಥಿ ನಿಧನದಿಂದಾಗಿ ಒಂದು ಕ್ಷೇತ್ರದಲ್ಲಿ ಮತದಾನ ಮುಂದೂಡಲಾಗಿದೆ. ಒಟ್ಟು 50 ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತಿವೆ. 1,755 ಅಭ್ಯರ್ಥಿಗಳು ರಾಜಕೀಯ ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ ಮತ್ತು 273 ಸ್ವತಂತ್ರ ಅಭ್ಯರ್ಥಿಗಳಿದ್ದಾರೆ. ಸುಮಾರು 127 ಮಿಲಿಯನ್ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಮತ್ತಷ್ಟು ಓದಿ: ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬಾಂಗ್ಲಾದೇಶ; ಟ್ಯಾರಿಫ್ ಶೇ. 19ಕ್ಕೆ ಇಳಿಕೆ
ಈ ಬಾರಿ ಚುನಾವಣೆ ಸಂಸತ್ತಿನ ರಚನೆಗೆ ಮಾತ್ರ ಸೀಮಿತವಾಗಿಲ್ಲ. 84 ಅಂಶಗಳ ಸುಧಾರಣಾ ಪ್ಯಾಕೇಜ್ ಕುರಿತು ಸಾರ್ವಜನಿಕ ಅಭಿಪ್ರಾಯವನ್ನು ಸಂಗ್ರಹಿಸುವ ಜನಾಭಿಪ್ರಾಯ ಸಂಗ್ರಹವನ್ನೂ ನಡೆಸಲಾಗುತ್ತಿದೆ. ಪ್ರಸ್ತಾವಿತ ಸುಧಾರಣೆಗಳಲ್ಲಿ ಪ್ರಧಾನ ಮಂತ್ರಿಯ ಎರಡು ಅವಧಿಯ ಮಿತಿ, ನಿಷ್ಪಕ್ಷಪಾತ ಉಸ್ತುವಾರಿ ಸರ್ಕಾರಿ ವ್ಯವಸ್ಥೆಯ ಪುನಃಸ್ಥಾಪನೆ ಮತ್ತು ಸಂಸತ್ತಿನಲ್ಲಿ ಮೇಲ್ಮನೆ ರಚನೆಯಂತಹ ಪ್ರಮುಖ ಬದಲಾವಣೆಗಳು ಸೇರಿವೆ. ಇದು ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ.
ದಶಕಗಳಿಂದ ರಾಜಕೀಯದ ಕೇಂದ್ರಬಿಂದುವಾಗಿರುವ ಅವಾಮಿ ಲೀಗ್ ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ನೋಂದಣಿ ಸ್ಥಗಿತಗೊಂಡಿರುವುದರಿಂದ, ಸ್ಪರ್ಧೆಯು ಪ್ರಾಥಮಿಕವಾಗಿ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (ಬಿಎನ್‌ಪಿ) ಮತ್ತು ಜಮಾತ್-ಇ-ಇಸ್ಲಾಮಿ ನೇತೃತ್ವದ ಮೈತ್ರಿಕೂಟದ ನಡುವೆ ಇದೆ.
17 ವರ್ಷಗಳ ಸ್ವಯಂ-ಗಡಿಪಾರು ನಂತರ ದೇಶಕ್ಕೆ ಮರಳಿರುವ ಬಿಎನ್‌ಪಿ ಮುಖ್ಯಸ್ಥ ತಾರಿಕ್ ರೆಹಮಾನ್ ಅವರನ್ನು ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿದೆ. ಬಾಂಗ್ಲಾದೇಶದಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಚೀನಾ ಅನುಕೂಲಕರವಾಗಿ ನೋಡುತ್ತದೆ. ಅಲ್ಲಿ ಭಾರತದ ಪ್ರಭಾವ ಕಡಿಮೆಯಾಗಿದೆ ಎಂದು ಅದು ಭಾವಿಸುತ್ತದೆ. ಆದ್ದರಿಂದ, ತನ್ನ ಸಂಬಂಧಗಳನ್ನು ಹೆಚ್ಚಿಸಲು, ಅದು ಢಾಕಾದಲ್ಲಿ ತನ್ನ ಹೂಡಿಕೆ ಮತ್ತು ರಾಜತಾಂತ್ರಿಕ ಸಂಪರ್ಕವನ್ನು ಹೆಚ್ಚಿಸಿದೆ. ಇತ್ತೀಚೆಗೆ, ಬಾಂಗ್ಲಾದೇಶ ಗಡಿಯ ಬಳಿ ಡ್ರೋನ್ ಕಾರ್ಖಾನೆಯನ್ನು ನಿರ್ಮಿಸಲು ಭಾರತದೊಂದಿಗೆ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಚೀನಾ ಒಂದು ದಶಕಕ್ಕೂ ಹೆಚ್ಚು ಕಾಲ ಬಾಂಗ್ಲಾದೇಶದ ಅತಿದೊಡ್ಡ ವ್ಯಾಪಾರ ಪಾಲುದಾರ ದೇಶವಾಗಿತ್ತು. ವಾರ್ಷಿಕ ದ್ವಿಪಕ್ಷೀಯ ವ್ಯಾಪಾರವು ಸುಮಾರು 18 ಶತಕೋಟಿ ಡಾಲರ್ನಷ್ಟಿತ್ತು. ಒಟ್ಟು ವ್ಯಾಪಾರದ ಸರಿಸುಮಾರು ಶೇ.95ರಷ್ಟು. ಹಸೀನಾ ನಿರ್ಗಮನದ ನಂತರ ಚೀನಾದ ಕಂಪನಿಗಳು ಬಾಂಗ್ಲಾದೇಶದಲ್ಲಿ ನೂರಾರು ಮಿಲಿಯನ್ ಡಾಲರ್ಗಳನ್ನು ಹೂಡಿಕೆ ಮಾಡಿವೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ