ಬೆಂಗಳೂರಿನ ಜನರೇ ಈ ವೀಕೆಂಡ್​​ ಮಿಸ್​ ಮಾಡಿಕೊಳ್ಳಬೇಡಿ: ಈ ನಗರದಲ್ಲಿ ನಡೆಯಲಿದೆ ರೆಸ್ಟೋರೆಂಟ್ ವೀಕ್ – Kannada News | Bengaluru’s Food Culture Shines at Restaurant Week India 2026: A Deep Dive

ಬೆಂಗಳೂರು, ಮೇ.1: ಬೆಂಗಳೂರಿನ ರೆಸ್ಟೋರೆಂಟ್ ವೀಕ್ ಇಂಡಿಯಾ 2026 ಸಮ್ಮೇಳನದಲ್ಲಿ ನಗರ ಆಹಾರಗಳಿಗೆ ಹೆಚ್ಚಿನ ಆದ್ಯತೆ ಸಿಕ್ಕಿದೆ. ಇಲ್ಲಿ ಆಹಾರಕ್ಕೆ ಬೇರೆ ರಾಜ್ಯದ ಜನ ಫಿದಾ ಆಗಿದ್ದಾರೆ. ಈ ಬಗ್ಗೆ ಗುಜರಾತಿನ ದಂಪತಿಗಳು ಈ ವಿಶೇಷ ಕೂಟದಲ್ಲಿ ಬಗ್ಗೆ ಅದ್ಬುತವಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ದೇಶದ ಪ್ರಮುಖ ನಗರಗಳಾದ ದೆಹಲಿ ಮತ್ತು ಮುಂಬೈಗೆ ಹೋಲಿಸಿದರೆ ಬೆಂಗಳೂರಿನ ಆಹಾರ ಸಂಸ್ಕೃತಿಯು ಅತ್ಯಂತ ವಿಭಿನ್ನ ಮತ್ತು ಆಳವಾದದ್ದು. ಇಲ್ಲಿನ ಜನರು ಕೇವಲ ಫ್ಯಾಷನ್ ಅಥವಾ ಟ್ರೆಂಡ್‌ಗಾಗಿ ಹೋಟೆಲ್‌ಗಳಿಗೆ ಹೋಗುವುದಿಲ್ಲ, ಬದಲಿಗೆ ಅಧಿಕೃತ ರುಚಿ ಮತ್ತು ಗುಣಮಟ್ಟಕ್ಕೆ ಹೆಚ್ಚಿನ ಬೆಲೆ ನೀಡುತ್ತಾರೆ. ಇನ್ನು ಬೆಂಗಳೂರಿನ ರೆಸ್ಟೋರೆಂಟ್ ವೀಕ್ ಇಂಡಿಯಾವೂ ಏಪ್ರಿಲ್ 24ರಿಂದ ಆರಂಭವಾಗಿದೆ ಮೇ 3 ಅಂದರೆ ಭಾನುವಾರದ ವರೆಗೆ ಇದೆ.

ಏಪ್ರಿಲ್ ತಿಂಗಳಿನಲ್ಲಿ ಹತ್ತು ದಿನಗಳ ಕಾಲ ಬೆಂಗಳೂರು, ದೆಹಲಿ ಮತ್ತು ಮುಂಬೈ ನಗರಗಳಲ್ಲಿ ‘ರೆಸ್ಟೋರೆಂಟ್ ವೀಕ್’ ಆಯೋಜಿಸಲಾಗಿದೆ. ಈ ಅವಧಿಯಲ್ಲಿ ಆಯ್ದ ಪ್ರಸಿದ್ಧ ರೆಸ್ಟೋರೆಂಟ್‌ಗಳಲ್ಲಿ ಒಬ್ಬರಿಗೆ 1500 ರೂ. ರಂತೆ ನಿಗದಿಪಡಿಸಿದ ದರದಲ್ಲಿ (Prix-fixe menu) ಊಟ ಲಭ್ಯವಿರುತ್ತದೆ. ಇದರಲ್ಲಿ ಒಂದು ಹಸಿವು ಹೆಚ್ಚಿಸುವ ಆಹಾರ (Appetizer), ಒಂದು ಮುಖ್ಯ ಊಟ ಮತ್ತು ಒಂದು ಸಿಹಿ ತಿಂಡಿ ಒಳಗೊಂಡಿರುತ್ತದೆ. ಯುವ ಗ್ರಾಹಕರಿಗೆ ಹೊಸ ರೆಸ್ಟೋರೆಂಟ್‌ಗಳನ್ನು ಪರಿಚಯಿಸುವುದು ಮತ್ತು ನಗರದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದು ಇದರ ಗುರಿಯಾಗಿದೆ.

ಬೆಂಗಳೂರಿನ ಒಟ್ಟು 17 ರೆಸ್ಟೋರೆಂಟ್‌ಗಳು ಈ ಸಂಭ್ರಮದಲ್ಲಿ ಪಾಲ್ಗೊಂಡಿವೆ:

23rd ಸ್ಟ್ರೀಟ್ ಪಿಜ್ಜಾ (23rd Street Pizza)

ಲೂಪಾ (Lupa), ಮ್ಯೂರೋ (Muro), ಫರ್ವರ್ (Fervour)

ಆಲಿವ್ ಬೀಚ್ (Olive Beach), ಟಿಜೌರಿ (Tijouri), ಸ್ಪೈಸ್ ಟೆರೇಸ್ (Spice Terrace)

ಕೋಪಿಟಿಯಾಮ್ ಲಾಹ್ (Kopitiam Lah), ಕಪ್ಪ ಚಕ್ಕ ಕಂಧಾರಿ (Kappa Chakka Kandhari)

ದಿ ಹುಡ್ (The Hood), ಬಾರ್ ಸಮ (Bar Sama), ಪಿಕಾಪ್ ನೋ ಕ್ಯಾಪ್ (Pizza No Cap)

ಇದನ್ನೂ ಓದಿ: ನಮ್ಮ ಮಸಾಲ ದೋಸೆಗೆ ವಿಶ್ವ ಮಟ್ಟದಲ್ಲಿ ಭಾರೀ ಡಿಮ್ಯಾಂಡ್​; ‘ಟಾಪ್ 10’ ಅತ್ಯುತ್ತಮ ಪ್ಯಾನ್‌ಕೇಕ್‌ಗಳ ಪಟ್ಟಿಯಲ್ಲಿ ಸ್ಥಾನ!

ರೆಸ್ಟೋರೆಂಟ್ ವೀಕ್ ಇಂಡಿಯಾದ ಸಹ-ಸಂಸ್ಥಾಪಕ ಆತಿಶ್ ನಾಥ್ ಅವರು ಹೇಳುವ ಪ್ರಕಾರ, ಆಹಾರ ರುಚಿ ಹಾಗೂ ಮೌಲ್ಯದಲ್ಲಿ ರಾಜದಿಂದ ರಾಜ್ಯಕ್ಕೆ ವಿಭಿನ್ನತೆ ಇರುತ್ತದೆ. ಈಗ ಬೆಂಗಳೂರಿನ ಗ್ರಾಹಕರನ್ನು ಮೆಚ್ಚಿಸುವುದು ಕಷ್ಟ, ಏಕೆಂದರೆ ಅವರು ರುಚಿಯ ಬಗ್ಗೆ ಆಳವಾದ ಜ್ಞಾನ ಹೊಂದಿರುತ್ತಾರೆ. ಅವರು ಹಣಕ್ಕೆ ತಕ್ಕ ಮೌಲ್ಯವನ್ನು ಬಯಸುತ್ತಾರೆ. ಇನ್ನು ಮುಂಬೈನ ಜನರು ಹೊಸ ರೆಸ್ಟೋರೆಂಟ್‌ಗಳ ಬಗ್ಗೆ ಇರುವ ಕುತೂಹಲ ಮತ್ತು ಅಲ್ಲಿನ ಶಕ್ತಿಯನ್ನು ಇಷ್ಟಪಡುತ್ತಾರೆ. ದೆಹಲಿ ಜನರು ಪರಂಪರೆಗೆ ಮತ್ತು ತಮ್ಮ ಅಧಿಕಾರವನ್ನು ತೋರಿಸಲು ಇಷ್ಟಪಡುತ್ತಾರೆ. ಬೆಂಗಳೂರಿನಲ್ಲಿ ಜನರು ಪಿಜ್ಜಾ ಸವಿಯುತ್ತಾ ಅದರ ರುಚಿಯ ಬಗ್ಗೆ ಚರ್ಚೆ ಮಾಡುತ್ತಾರೆ. ಇದು ಇಲ್ಲಿನ ಜನರ ಆಹಾರದ ಮೇಲಿರುವ ಆಸಕ್ತಿಯನ್ನು ತೋರಿಸುತ್ತದೆ. ಒಟ್ಟಾರೆಯಾಗಿ, ಬೆಂಗಳೂರು ಯಾವುದೇ ಅಬ್ಬರವಿಲ್ಲದೆ ತನ್ನದೇ ಆದ ವಿಶಿಷ್ಟ ಮತ್ತು ಉತ್ತರ ಆಹಾರ ಸಂಸ್ಕೃತಿಯನ್ನು ಬೆಳೆಸಿಕೊಂಡಿದೆ.

ಪ್ರಮುಖ ರೆಸ್ಟೋರೆಂಟ್‌ಗಳ ಪಟ್ಟಿ:

  • ಬೆಂಗಳೂರು: ಕಪ್ಪಾ ಚಕ್ಕ ಕಂಧಾರಿ (Kappa Chakka Kandhari), ಬಾರ್ ಸಾಮ (Bar Sama), ಲೂಪಾ (Lupa), 23rd ಸ್ಟ್ರೀಟ್ ಪಿಜ್ಜಾ, ಮತ್ತು ಮ್ಯೂರೋ.

  • ಮುಂಬೈ: ಬಾಂಬೆ ಕ್ಯಾಂಟೀನ್ (The Bombay Canteen), ಅಮೇರಿಕಾನೋ (Americano) ಮತ್ತು ಒ ಪೆಡ್ರೊ (O Pedro).

  • ದೆಹಲಿ: ಇಂಜಾ (Inja), ಅಡ್ರಿಫ್ಟ್ ಕಾಯ (Adrift Kaya) ಮತ್ತು ಆಲಿವ್ ಬಾರ್ & ಕಿಚನ್ (Olive Bar & Kitchen).

  • ಬುಕ್ ಮಾಡುವುದು ಹೇಗೆ?

    1. ಕಡ್ಡಾಯ ಬುಕಿಂಗ್: ಈ ರೆಸ್ಟೋರೆಂಟ್‌ಗಳಲ್ಲಿ ನೇರವಾಗಿ ಹೋಗಿ ಕುಳಿತುಕೊಳ್ಳಲು ಅವಕಾಶವಿರುವುದಿಲ್ಲ. ‘ರೆಸ್ಟೋರೆಂಟ್ ವೀಕ್’ ಅಧಿಕೃತ ವೆಬ್‌ಸೈಟ್ ಮೂಲಕ ಮುಂಚಿತವಾಗಿ ಬುಕ್ ಮಾಡುವುದು ಕಡ್ಡಾಯ.

    2. ಪೂರ್ವ ಪಾವತಿ (Pre-payment): ಬುಕಿಂಗ್ ಮಾಡುವಾಗಲೇ ಹಣವನ್ನು ಪಾವತಿಸಬೇಕಾಗುತ್ತದೆ. ಇದು ಗ್ರಾಹಕರು ಮತ್ತು ರೆಸ್ಟೋರೆಂಟ್ ಇಬ್ಬರಿಗೂ ನಿಶ್ಚಿತತೆಯನ್ನು ನೀಡುತ್ತದೆ.

    3. ನಿಗದಿತ ಮೆನು: ನೀವು ಹೋಗುವ ಮೊದಲೇ ಮೆನು ಸಿದ್ಧವಿರುತ್ತದೆ (ಅಪ್ಪೆಟೈಸರ್, ಮೇನ್ ಕೋರ್ಸ್ ಮತ್ತು ಡೆಸರ್ಟ್). ಇದು ಗೊಂದಲವಿಲ್ಲದ, ಉದ್ದೇಶಪೂರ್ವಕ ಊಟದ ಅನುಭವವನ್ನು ನೀಡುತ್ತದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:08 pm, Fri, 1 May 26

Source link

ಮಲೆ ಮಹದೇಶ್ವರ ಬೆಟ್ಟದಿಂದ ಬರುತ್ತಿದ್ದ ಬಸ್​​ ಪಲ್ಟಿ: 30ಕ್ಕೂ ಹೆಚ್ಚು ಜನರಿಗೆ ಗಾಯ – Kannada News | KSRTC Bus Overturns Near Male Mahadeshwara Hills: More Than30 Injured at Ponnachi Turn, Traffic Hit for Kilometers

ಚಾಮರಾಜನಗರ, ಮೇ 01: ಮಲೆ ಮಹದೇಶ್ವರ ಬೆಟ್ಟದಿಂದ ಬರುತ್ತಿದ್ದ ಕೆಎಸ್​​ಆರ್​​ಟಿಸಿ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಅಪಘಾತದಲ್ಲಿ 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ತಾಳ ಬೆಟ್ಟದ ಪೊನ್ನಾಚಿ ತಿರುವಿನ ಬಳಿ ನಿಯಂತ್ರಣ ಕಳೆದುಕೊಂಡು ಬಸ್​​ ಪಲ್ಟಿಯಾಗಿದ್ದು, ಸ್ಥಳಕ್ಕೆ ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಭೇಟಿ ನೀಡಿದ್ದಾರೆ. ಗಾಯಾಳುಗಳನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಅಪಘಾತದ ಹಿನ್ನೆಲೆ ಕಿಲೋ ಮೀಟರ್ ಗಟ್ಟಲೆ ಸಂಚಾರ ದಟ್ಟಣೆ ಉಂಟಾಗಿತ್ತು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಲಾಂಗ್ ವೀಕೆಂಡ್ ಎಫೆಕ್ಸ್: ಬೆಂಗಳೂರು-ನೆಲಮಂಗಲ ಹೈವೇಯಲ್ಲಿ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್! – Kannada News | Long Weekend Rush: Massive Traffic Jam on Bengaluru Nelamangala Highway as Residents Head to Hometowns

ನೆಲಮಂಗಲ, ಮೇ 1: ಇಂದಿನಿಂದ (ಮೇ 1) ಸತತ ಮೂರು ದಿನಗಳ ರಜೆ ಇರುವುದರಿಂದ ಬೆಂಗಳೂರಿಗರು ತಮ್ಮ ಊರುಗಳತ್ತ ಮತ್ತು ಪ್ರವಾಸಿ ತಾಣಗಳತ್ತ ತೆರಳುತ್ತಿದ್ದಾರೆ. ಇದರಿಂದಾಗಿ ಬೆಂಗಳೂರಿನಿಂದ ಹೊರಹೋಗುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶುಕ್ರವಾರ ಬೆಳಗ್ಗೆ ವಾಹನಗಳ ದಟ್ಟಣೆ ವಿಪರೀತವಾಗಿ ಹೆಚ್ಚಾಗಿದ್ದು, ಪ್ರಯಾಣಿಕರು ಗಂಟೆಗಟ್ಟಲೆ ರಸ್ತೆಯಲ್ಲೇ ಕಳೆಯುವಂತಾಗಿದೆ. ಅದರಲ್ಲೂ ಬೆಂಗಳೂರು-ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿದೆ. ಕಿಲೋಮೀಟರ್‌ಗಟ್ಟಲೆ ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದು, ಅತ್ಯಂತ ನಿಧಾನಗತಿಯಲ್ಲಿ ಚಲಿಸುತ್ತಿವೆ. ನೆಲಮಂಗಲ ಟೋಲ್ ಬಳಿ ವಾಹನಗಳು ಸಾಲುಗಟ್ಟಿರುವ ಚಾಚಿಕೊಂಡಿದ್ದು, ಸಂಚಾರ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿರುವುದು ಕಂಡುಬಂತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ವಸುದೇವ ಕುಟುಂಬ’ ಧಾರಾವಾಹಿ ಕಿರಿಕ್, ನಿರ್ಮಾಪಕರ ನಡು ರಸ್ತೆಯಲ್ಲಿ ಅಡ್ಡ ಹಾಕಿದ ಹಂಸ – Kannada News | Producer not giving remuneration actress confronted producer

‘ವಸುದೇವ ಕುಟುಂಬ’ ಧಾರಾವಾಹಿಯ (Serial) ನಟ, ನಟಿಯರು ಮತ್ತು ತಂತ್ರಜ್ಞರು ಧಾರಾವಾಹಿಯ ನಿರ್ಮಾಪಕರ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ. ಮಾಜಿ ಬಿಗ್​​ಬಾಸ್ ಸ್ಪರ್ಧಿ ಹಂಸ, ನಟಿ ಚೈತ್ರಾ, ಹಿರಿಯ ನಟ ಅವಿನಾಶ್ ಸೇರಿದಂತೆ ಕೆಲವು ಪ್ರಮುಖ ಕಲಾವಿದರು ನಟಿಸುತ್ತಿರುವ ಧಾರಾವಾಹಿ ಇದಾಗಿದ್ದು, ಸ್ಟಾರ್ ಸುವರ್ಣ ಚಾನೆಲ್​​ನಲ್ಲಿ ಪ್ರಸಾರ ಕಾಣುತ್ತಿದೆ. ಕೆಲವು ತಿಂಗಳುಗಳಿಂದಲೂ ಧಾರಾವಾಹಿಯ ನಿರ್ಮಾಪಕರು ಕಲಾವಿದರಿಗೆ ಸಂಭಾವನೆ ನೀಡಿಲ್ಲ ಮಾತ್ರವಲ್ಲದೆ, ಆಹಾರ, ಇನ್ನಿತರೆಗಳನ್ನು ಸರಿಯಾಗಿ ನೀಡಿಲ್ಲ ಎಂದು ಕಲಾವಿದರು ಆರೋಪಿಸಿದ್ದು, ಇಂದು (ಏಪ್ರಿಲ್ 01) ನಿರ್ಮಾಪಕರನ್ನು ನಡು ರಸ್ತೆಯಲ್ಲಿ ಅಡ್ಡಹಾಕಿ ಪೇಮೆಂಟ್ ಕೊಡುವಂತೆ ಧಾರಾವಾಹಿಯ ನಟಿಯರಾದ ಹಂಸ ಮತ್ತು ಚೈತ್ರಾ ಕೇಳಿದ್ದು, ನಿರ್ಮಾಪಕರು ಸ್ಥಳದಿಂದ ಪರಾರಿ ಆಗಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ಪೇಮೆಂಟ್ ಬಂದಿಲ್ಲದ ಕಾರಣ ಬೇಸತ್ತು ಬಿಗ್ ಬಾಸ್ ಸೀಸನ್ 11 ಸ್ಪರ್ದಿ ನಟಿ ಹಂಸ ಹಾಗೂ ನಟಿ ಚೈತ್ರ ಜೊತೆ ಯೂನಿಟ್ ಸದಸ್ಯರು ನಿರ್ಮಾಪಕರನ್ನು ಮುಖಾ-ಮುಖಿ ಭೇಟಿಯಾಗಿ ಪೇಮೆಂಟ್​​ಗೆ ಒತ್ತಾಯಿಸಿದ್ದಾರೆ. ಕೋರಮಂಗಲ ಅನಿಲ್ ಎಂಬುವರು, ಕೋರಮಂಗಲ ಟಾಕೀಸ್ ಹೆಸರಲ್ಲಿ ‘ವಸುದೇವ ಕುಟುಂಬ’ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದು, ನಾಗರಬಾವಿಯಲ್ಲಿ ಅವರು ನಡೆಸುತ್ತಿರುವ ‘ತತ್ಸವಿ ಹೋಟೆಲ್’ ಬಳಿ ಇಂದು ಮಧ್ಯಾಹ್ನ ಆಗಮಿಸಿದ ಹಂಸ, ಚೈತ್ರಾ ಹಾಗೂ ಯೂನಿಟ್​​ನ ಇತರೆ ಕೆಲವು ಮಂದಿ ನಿರ್ಮಾಪಕರನ್ನು ಸಂಭಾವನೆಗಾಗಿ ಒತ್ತಾಯಿಸಿದ್ದಾರೆ. ಆದರೆ ನಿರ್ಮಾಪಕ ಅನಿಲ್ ಮತ್ತು ಅವರ ಪತ್ನಿ ಕೂಡಲೇ ಸ್ಥಳದಿಂದ ಪಲಾಯನ ಮಾಡಿದ್ದಾರೆ.

ಇದನ್ನೂ ಓದಿ:‘ಆಸೆ’ ಧಾರಾವಾಹಿ ತಂಡದ ಬಗ್ಗೆ ಗಂಭೀರ ಆರೋಪ ಮಾಡಿದ್ರಾ ಅಮೃತಾ ರಾಮಮೂರ್ತಿ?

ನಟಿ ಹಂಸ ಅವರಿಗೆ ಮೂರು ಲಕ್ಷ ರೂಪಾಯಿ, ಚೈತ್ರಾ ಅವರಿಗೂ ಸಹ ದೊಡ್ಡ ಮೊತ್ತದ ಹಣವನ್ನು ನಿರ್ಮಾಪಕರು ಬಾಕಿ ಉಳಿಸಿಕೊಂಡಿದ್ದಾರಂತೆ. ಚೈತ್ರಾ ಅವರು ಈ ಹಿಂದೆ ಕಣ್ಣೀರು ಹಾಕಿ ನಿರ್ಮಾಪಕರ ಬಳಿ ಹಣ ಕೇಳಿದ್ದರೂ ಸಹ ಅವರು ಕೊಟ್ಟಿಲ್ಲ, ಇದೀಗ ಹಂಸ ಅವರು ಹೋಟೆಲ್ ಬಳಿ ಬಂದು ನೇರಾ-ನೇರ ನಿರ್ಮಾಪಕರನ್ನು ಹಣ ಕೇಳಿದ್ದಾರೆ. ಆದರೆ ಹಂಸ ಅವರನ್ನು ‘ರೌಡಿಸಂ ಮಾಡುತ್ತಿದ್ದೀರ’ ಎಂದು ಕೇಳಿದ ನಿರ್ಮಾಪಕ ಮತ್ತು ಅವರ ಪತ್ನಿ, ಹಂಸ ಅವರು ಧ್ವನಿ ಎತ್ತರಿಸುತ್ತಿದ್ದಂತೆ ಅಲ್ಲಿಂದ ಪರಾರಿ ಆಗಿದ್ದಾರೆ.

ಬಳಿಕ ಮಾಧ್ಯಮಗಳ ಬಳಿ ಮಾತನಾಡಿರುವ ಹಂಸ, ಅವರು ಇದೊಂದು ಕಚಡಾ ನಿರ್ಮಾಣ ಸಂಸ್ಥೆ, ಯಾರಿಗೂ ಸಹ ಸರಿಯಾಗಿ ಪೇಮೆಂಟ್ ಕೊಟ್ಟಿಲ್ಲ. ಇವರಿಂದ ಬೇರೆ ಧಾರಾವಾಹಿ ಅವಕಾಶವನ್ನೂ ಸಹ ಕಳೆದುಕೊಂಡಿದ್ದೇವೆ. ಹಣ ಕೇಳಿದ ನಟ-ನಟಿಯರನ್ನು ಬದಲಾವಣೆ ಮಾಡಿಬಿಟ್ಟಿದ್ದಾರೆ. ಯೂನಿಟ್ ಅವರನ್ನು ಕ್ಷುಲ್ಲಕವಾಗಿ ನೋಡಿಕೊಂಡಿದ್ದಾರೆ. ಹಳಸಿದ ಅನ್ನ ಹಾಕಿದ್ದಾರೆ. ಈ ನಿರ್ಮಾಪಕರ ವಿರುದ್ಧ ಪೊಲೀಸ್ ದೂರು ದಾಖಲಿಸುವುದಾಗಿಯೂ ಹಂಸ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 1:47 pm, Fri, 1 May 26

Source link

ಮಳೆ ಮಧ್ಯೆ ಜೆಪಿ ನಗರ ಟು ಕೋರಮಂಗಲ ಜರ್ನಿ: ಆಟೋ ಚಾಲಕನ ಈ ಒಂದು ಮಾತು ಪ್ರಿಯಾಂಕಾ ಕಣ್ಣಾಲಿ ಒದ್ದೆ ಮಾಡಿದ್ದು ಯಾಕೆ ಗೊತ್ತಾ? – Kannada News | Heartwarming: Bengaluru Auto Driver’s Kindness Amidst Rain Wins Hearts

ಬೆಂಗಳೂರು, ಮೇ.1: ರಾಜ್ಯ ರಾಜಧಾನಿಯಲ್ಲಿ ಎರಡು ದಿನಗಳಿಂದ ಸುರಿದ ಮಳೆಗೆ ಭಾರೀ ಅನಾಹುತಗಳು ಆಗಿವೆ. ಇದರ ನಡುವೆ ಕೆಲವೊಂದು ಮಾನವೀಯತೆಯ ಘಟನೆಗಳು ಕೂಡ ನಡೆದಿದೆ. ಅದರಲ್ಲೂ ಆಟೋ ಚಾಲಕರು ಕೆಲವೊಂದು ಕಡೆ ಮಾನವೀಯತೆಯನ್ನು ಮೆರೆದಿದ್ದಾರೆ. ಇದೀಗ ಇಲ್ಲೊಂದು ವೈರಲ್​ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರಿಗೆ ಆಟೋ ಚಾಲಕ ಮಾಡಿದ ಸಹಾಯದ ಬಗ್ಗೆ ಇಲ್ಲಿ ನೆನಪಿಸಿಕೊಂಡಿದ್ದಾರೆ. ಪ್ರಿಯಾಂಕಾ ಎಂಬ ಮಹಿಳೆ ಜೆಪಿ ನಗರದಿಂದ ಕೋರಮಂಗಲಕ್ಕೆ ದಿನನಿತ್ಯದ ಪ್ರಯಾಣದಲ್ಲಿ ಹೇಗೆ ದಯೆ ಮತ್ತು ಸಹಾನುಭೂತಿಯ ಭಾವನಾತ್ಮಕ ವಿಚಾರಗಳು ಇರುತ್ತದೆ ಎಂಬ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

“ಆಟೋ ಬುಕ್ ಮಾಡುವಾಗ ಮಳೆ ಬರುತ್ತಿರಲಿಲ್ಲ, ಆದರೆ ಪ್ರಯಾಣ ಪ್ರಾರಂಭವಾದ ಕೂಡಲೇ ಮಳೆ ಬರಲು ಶುರುವಾಗಿದೆ. ಜೆಪಿ ನಗರದಿಂದ ಕೋರಮಂಗಲಕ್ಕೆ ಹೋಗುವಾಗ ಮಳೆ ಬರಲು ಪ್ರಾರಂಭವಾಗಿತ್ತು ಎಂದು ಪ್ರಿಯಾಂಕ ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ ಹೀಗೆ ಹೇಳಿಕೊಂಡಿದ್ದಾರೆ. ಮೊದಲಿಗೆ ಮಳೆ ಕಡಿಮೆ ಇತ್ತು ಮತ್ತು ತಂಪಾದ ವಾತಾವರಣ ಖುಷಿ ನೀಡಿತ್ತು. ಆದರೆ ಸ್ವಲ್ಪ ಹೊತ್ತಿಲ್ಲ ನಂತರ ಜೋರು ಮಳೆ ಬರಲು ಆರಂಭಿಸಿದೆ. ಇನ್ನು ನಾನು ಹೋಗುತ್ತಿದ್ದ ಆಟೋ ಆ ಕಡೆ ಈ ಕಡೆ ಯಾವುದೇ ಪರದೆ ಇರಲಿಲ್ಲ. ಓಪನ್​ ಇತ್ತು. ನಾನು ಮತ್ತು ಚಾಲಕ ಇಬ್ಬರೂ ಕೆಲವೇ ನಿಮಿಷಗಳಲ್ಲಿ ಸಂಪೂರ್ಣವಾಗಿ ಒದ್ದೆಯಾಗಿದ್ದೆವು” ಎಂದು ಹೇಳಿಕೊಂಡಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

ಆದರೆ ಈ ವೇಳೆ ಆಟೋ ಚಾಲಕ ನನ್ನನ್ನೂ ಗಮನಿಸುತ್ತ ಇದ್ದರು, ಪಾಪ ಅವರಿಗೆ ನಾನು ಒದ್ದೆಯಾದೆ ಎಂಬ ಚಿಂತೆ ಕಾಡುತ್ತಿತ್ತು. ಏನು ಮಾಡುವುದು ಎಂಬ ಯೋಚನೆ ಮಾಡುತ್ತಿದ್ದರು. ನಾನು ಇದನ್ನು ಗಮನಿಸಿದೆ. ಆದರೆ ನನಗೆ ಈ ಬಗ್ಗೆ ಚಿಂತೆ ಇರಲಿಲ್ಲ. ಯಾಕೆಂದರೆ ನಾನು ಮನೆ ಹೋಗುತ್ತಿದ್ದ ಕಾರಣ ಮನೆ ಹೋಗಿ ಬಟ್ಟೆ ಬದಲಾಯಿಸಬಹುದು ಎಂದುಕೊಂಡೆ. ಅದರೂ ನಾನು ಕೇಳಿದೆ ಇಷ್ಟು ಜೋರಾಗಿ ಮಳೆ ಬರುತ್ತಿದ್ದರು ಯಾಕೆ ಎಲ್ಲೂ ನಿಲ್ಲಿಸುತ್ತಿಲ್ಲ ಎಂದು, ಆ ಚಾಲಕನಿಂದ ಬಂದ ಉತ್ತರ ನಾನು ಯಾವತ್ತೂ ಮರೆಯುವುದಿಲ್ಲ. “ಮ್ಯಾಡಮ್, ನೀವು ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿದ ಕಾರಣಕ್ಕೆ ನಾನು ನಿಲ್ಲಲಿಲ್ಲ; ಇಲ್ಲದಿದ್ದರೆ ಎಲ್ಲಾದರೂ ಆಟೋ ನಿಲ್ಲಿಸುತ್ತಿದ್ದೆ ಎಂದು ಹೇಳಿದ್ದಾರೆ. ಈ ಮಾತನ್ನು ಯಾವದೇ ಕಾರಣಕ್ಕೂ ನಾನು ಮರೆಯುವುದಿಲ್ಲ ಎಂದು ಅವರು ಈ ವಿಡಿಯೋದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ತಪ್ಪು ಮಾಡಿದ್ರೆ ದಂಡ ಹಾಕಿ, ಕೈ ಮಾಡುವ ಹಕ್ಕಿಲ್ಲ: ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ ಟ್ರಾಫಿಕ್ ಪೊಲೀಸರ ದೌರ್ಜನ್ಯ

ಹೀಗೆ ಆಟೋ ಚಾಲಕ ಹಾಗೂ ಪ್ರಿಯಾಂಕ ಅವರ ಮಾತುಕತೆ ನಡೆಯುತ್ತಿತ್ತು. ನಿಮ್ಮ ಮನೆ ಎಲ್ಲಿ ಎಂದು ಕೇಳಿದೆ. ಅದಕ್ಕೆ ಆಟೋ ಚಾಲಕ ನನ್ನ ಮನೆ ಬನಶಂಕರಿ ಎಂದು ಹೇಳಿದ್ದಾರೆ. ಪ್ರಿಯಾಂಕ ಅವರು ಡ್ರಾಪ್​ ಬಂದಾಗ ಅವರು ಚಾಲಕನ ಬಳಿ ಕೇಳಿದ್ರೂ ಮುಂದೆ ಎಲ್ಲಿಗೆ ಪಯಾಣ ಎಂದು, ಎಲ್ಲಿಗೂ ಇಲ್ಲ ಮೇಡಂ ಎಂದು ಹೇಳಿದ್ದಾರೆ. ಆಟೋ ಚಾಲಕನ ಪರಿಸ್ಥಿತಿಯಿಂದ ಮನಸ್ಸು ಮಿಡಿದ ಪ್ರಿಯಾಂಕಾ, ಅಣ್ಣ ಸ್ವಲ್ಪ ಹೊತ್ತು ಕಾಯಿರಿ ಎಂದು ಹೇಳಿ ಒಂದು ಟಿ-ಶರ್ಟ್ ತೆಗೆದುಕೊಂಡು ಬಂದು ಕೊಟ್ಟಿದ್ದಾರೆ. “ನಾನು ಟಿ-ಶರ್ಟ್ ಕೊಟ್ಟ ಕ್ಷಣ ಅವರ ನಗು ಎಲ್ಲವನ್ನೂ ಹೇಳಿತ್ತು. ಜತೆಗೆ ಈ ಟಿ-ಶರ್ಟ್ ಅವರಿಗೆ​​​​ ತುಂಬಾ ಅಗತ್ಯವಾಗಿತ್ತು. “ಕೆಲವೊಮ್ಮೆ ಮಾನವೀಯತೆ ಎಂದರೆ ಯಾರಾದರೊಬ್ಬರ ಅಸೌಕರ್ಯವನ್ನು ಗಮನಿಸಿ, ಸಾಧ್ಯವಾದಷ್ಟು ಸಹಾಯ ಮಾಡುವುದು,” ಎಂದೂ ಪ್ರಿಯಾಂಕ ಹೇಳಿದ್ದಾರೆ.

ಇನ್ನು ಈ ವಿಡಿಯೋವನ್ನು ಹಂಚಿಕೊಂಡಿರುವುದು ಪ್ರಶಂಸೆಗೆ ಅಥವಾ ಪ್ರಚಾರಕ್ಕೆ ಅಲ್ಲ, ಒಂದು ನೆನಪು—ಚಿಕ್ಕದಾದ ಸಹಾಯವಾದರೂ ಯಾರಿಗಾದರೂ ಮಾಡುವುದು ಒಂದು ವಿಭಿನ್ನ ಸಂತೋಷವನ್ನು ಕೊಡುತ್ತದೆ. ಮತ್ತು ನಿಜವಾಗಿ, ಅಗತ್ಯವಿರುವವರಿಗೆ ಸಹಾಯ ಮಾಡುವ ಶಕ್ತಿ ಮತ್ತು ಅವಕಾಶವನ್ನು ನಮಗೆ ನೀಡಿದ ದೇವರಿಗೆ ಕೃತಜ್ಞತೆಗಾಗಿ ಎಂದು ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:06 am, Fri, 1 May 26

Source link

ವಿದ್ಯಾಭ್ಯಾಸ ಮುಗಿದರೂ ಸಿಗದ ಕೆಲಸ, ಸಾಲಬಾಧೆ, ಅಮೆರಿಕದಲ್ಲಿ ಭಾರತೀಯ ಯುವಕ ಆತ್ಮಹತ್ಯೆ – Kannada News | Indian Student Suicide in US: Unemployment and Debt Burden Drive Tragedy

ಕರ್ನೂಲ್, ಮೇ 1: ದೊಡ್ಡ ದೊಡ್ಡ ಕನಸ್ಸುಗಳನ್ನು ಹೊತ್ತು ಅಮೆರಿಕ(America)ಕ್ಕೆ ಓದಲು ಹೋಗಿದ್ದ ಭಾರತೀಯ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ 26 ವರ್ಷದ  ಚಂದು ಮೃತ ಯುವಕ. ವಿದ್ಯಾಭ್ಯಾಸ ಮುಗಿಸಿ ಉದ್ಯೋಗಕ್ಕಾಗಿ  ಅರಸುತ್ತಿದ್ದ ಯುವಕನ ಅಕಾಲಿಕ ಸಾವು ಆತನ ಕುಟುಂಬವನ್ನು ಅಕ್ಷರಶಃ ಬೀದಿಗೆ ತಳ್ಳಿದೆ. ಚಂದು ಚಿಕಾಗೋದ ಡಿಪಾಲ್ ವಿಶ್ವವಿದ್ಯಾಲಯದಿಂದ ಇತ್ತೀಚೆಗಷ್ಟೇ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದರು. ಕಳೆದ ಹಲವು ವಾರಗಳಿಂದ ಉದ್ಯೋಗ ಹುಡುಕುತ್ತಿದ್ದರೂ ಸಿಕ್ಕಿರಲಿಲ್ಲ.

ಕರ್ನೂಲ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಅವರ ತಂದೆ ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳು ಮತ್ತು ಕುಟುಂಬವು ಹೊಂದಿದ್ದ ಸಾಲದ ಹೊರೆಯು ಚಂದು ಅವರ ಮೇಲೆ ತೀವ್ರ ಭಾವನಾತ್ಮಕ ಒತ್ತಡ ಹೇರಿತ್ತು. ಈ ನಿರಂತರ ಒತ್ತಡ ತಾಳಲಾರದೆ ಅವರು ಅಮೆರಿಕದಲ್ಲಿರುವ ತಮ್ಮ ನಿವಾಸದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚಂದು ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಸುಮಾರು 20 ಲಕ್ಷ ರೂ. ವೆಚ್ಚವಾಗಲಿದ್ದು, ಬಡ ಕುಟುಂಬಕ್ಕೆ ಇದನ್ನು ಭರಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಅಮೆರಿಕದಲ್ಲಿರುವ ಭಾರತೀಯ ಸಮುದಾಯವು ಹಣವನ್ನು ಸಂಗ್ರಹಿಸುವ ಗುರಿಯೊಂದಿಗೆ ನಿಧಿಸಂಗ್ರಹಣೆಯನ್ನು ಪ್ರಾರಂಭಿಸಿದೆ. ಕಳೆದ ಎರಡು ದಿನಗಳಲ್ಲಿ ಈಗಾಗಲೇ 76,000 ಡಾಲರ್​ಗೂ ಹೆಚ್ಚು ಹಣ ಸಂಗ್ರಹವಾಗಿದ್ದು, ಇದರಲ್ಲಿ ಚಂದು ಅವರ ಕುಟುಂಬ ಮಾಡಿರುವ ಸಾಲವನ್ನು ತೀರಿಸಲು 25,000 ಡಾಲರ್​ ಹಣವನ್ನು ಅವರ ಹೆತ್ತವರಿಗೆ ನೀಡಲು ನಿರ್ಧರಿಸಲಾಗಿದೆ.

ಮತ್ತಷ್ಟು ಓದಿ: ಧಾರವಾಡ ವಿದ್ಯಾರ್ಥಿ ಆತ್ಮಹತ್ಯೆ ಕೇಸ್: ಮೂವರು ಪೇದೆ ಬೆನ್ನಲ್ಲೇ ಇನ್ಸ್​​ಪೆಕ್ಟರ್​​ ತಲೆದಂಡ

ಈ ಘಟನೆಯ ಕುರಿತು ಆಂಧ್ರಪ್ರದೇಶದ ಸಚಿವ ನಾರಾ ಲೋಕೇಶ್ ಅವರು ಸಂತಾಪ ಸೂಚಿಸಿದ್ದು, ಮೃತದೇಹವನ್ನು ತಾಯ್ನಾಡಿಗೆ ತರಲು ಕೇಂದ್ರ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರ ಸಹಾಯ ಕೋರಿದ್ದಾರೆ. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿರುವ ಸಚಿವ ರಾಮ್ ಮೋಹನ್ ನಾಯ್ಡು ಅವರು, ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದು, ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ.

ಸಮುದಾಯದ ಸದಸ್ಯರ ಪ್ರಕಾರ, ಚಂದು ಕೇವಲ ಒಬ್ಬ ವಿದ್ಯಾರ್ಥಿಯಲ್ಲದೆ ತನ್ನ ಕಿರಿಯ ಸಹೋದರ ಮತ್ತು ಸ್ನೇಹಿತರಿಗೆ ಆಧಾರಸ್ತಂಭವಾಗಿದ್ದರು. ಆದರೆ ವಿಧಿಯಾಟದಿಂದ ಆತನ ಬದುಕಿನ ಮಹತ್ವಾಕಾಂಕ್ಷೆಗಳು ಅರ್ಧಕ್ಕೇ ಮೊಟಕುಗೊಂಡಿವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರಣಮಳೆಗೆ ಬೆಂಗಳೂರಿನ ಜನ ಹೈರಾಣು: ಒಂದೇ ದಿನ ಮೆಟ್ರೋ ಮೊರೆ ಹೋದ 12 ಲಕ್ಷ ಜನ! – Kannada News | Namma Metro Record: Over 12.85 Lakh Passengers Travel in a Single Day Due to Bengaluru Rains

ಒಂದೇ ದಿನ ಮೆಟ್ರೋ ಮೊರೆ ಹೋದ 12 ಲಕ್ಷ ಜನ!

Image Credit source: google Gemini

ಬೆಂಗಳೂರು, ಮೇ 01: ಸಿಲಿಕಾನ್ ಸಿಟಿಯಲ್ಲಿ ಕಳೆದ ಬುಧವಾರ ಸುರಿದ ಭಾರೀ ಮಳೆ ಮತ್ತು ರಸ್ತೆಗಳಲ್ಲಾದ ಟ್ರಾಫಿಕ್ ಜಾಮ್‌ನಿಂದಾಗಿ ಹೈರಾಣಾದ ಜನರು ಅಕ್ಷರಶಃ ಮೆಟ್ರೋ (Namma Metro) ಮೊರೆ ಹೋಗಿದ್ದಾರೆ. ರಸ್ತೆಗಳೆಲ್ಲಾ ತುಂಬಿ ಮೊಣಕಾಲು ತನಕ ನೀರು ಬಂದಿತ್ತು. ಏಕಾಏಕಿ ಸುರಿದ ಮಳೆಗೆ ಅದೆಷ್ಟೋ ವಾಹನಗಳು ಕೈ ಕೊಟ್ಟ ಕಾರಣಕ್ಕೆ ಜನ ಓಲಾ, ಊಬರ್ ಕಡೆ ಮುಖ ಮಾಡಿದರೆ, ಹಲವರಿಗೆ ಬುಕಿಂಗ್ ಸಮಸ್ಯೆ ಎದುರಾಗಿತ್ತು. ಸರಿ, ಇದೆಲ್ಲರ ಸಹವಾಸವೇ ಬೇಡವೆಂದ ಬೆಂಗಳೂರಿಗರು ಕೊನೆಗೆ ಕಡೆ ಶಿಫ್ಟ್ ಆಗಿದ್ದರು. ಈ ಹಿನ್ನೆಲೆ ಅವತ್ತು ಒಂದೇ ದಿನ 12.85 ಲಕ್ಷ ಜನ ಮೆಟ್ರೋದಲ್ಲಿ ಸಂಚಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇದರ ಪರಿಣಾಮವಾಗಿ ಏಪ್ರಿಲ್ 29ರಂದು ‘ನಮ್ಮ ಮೆಟ್ರೋ’ ಇತಿಹಾಸದಲ್ಲೇ ಅತ್ಯಧಿಕ ಪ್ರಯಾಣಿಕರು ಸಂಚರಿಸುವ ಮೂಲಕ ಹೊಸ ದಾಖಲೆ ನಿರ್ಮಾಣವಾಗಿದೆ.

ದಾಖಲೆಯ ಪ್ರಯಾಣಿಕರ ಸಂಖ್ಯೆ

ಸಾಮಾನ್ಯವಾಗಿ ಬೆಂಗಳೂರು ಮೆಟ್ರೋದಲ್ಲಿ ಪ್ರತಿನಿತ್ಯ ಸುಮಾರು 10 ಲಕ್ಷ ಪ್ರಯಾಣಿಕರು ಸಂಚರಿಸುತ್ತಾರೆ. ಆದರೆ, ಬುಧವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದ್ದರಿಂದ, ಜನ ಸುರಕ್ಷಿತ ಮತ್ತು ವೇಗದ ಪ್ರಯಾಣಕ್ಕಾಗಿ ಮೆಟ್ರೋವನ್ನು ಆಯ್ದುಕೊಂಡಿದ್ದಾರೆ. ಅಂದು ಒಟ್ಟು 12,85,108 ಪ್ರಯಾಣಿಕರು ಮೆಟ್ರೋ ಬಳಸಿದ್ದು, ಇದು ಈ ಹಿಂದಿನ ಗರಿಷ್ಠ ದಾಖಲೆಯಾದ 10.87 ಲಕ್ಷವನ್ನು ಬೃಹತ್ ಅಂತರದಿಂದ ಹಿಂದಿಕ್ಕಿದೆ. ಕಳೆದ ತಿಂಗಳು ಬೆಂಗಳೂರಿನಲ್ಲಿ ಬಿಸಿಲಿನ ತಾಪ ವಿಪರೀತವಾಗಿದ್ದ ಸಂದರ್ಭದಲ್ಲಿ, ಜನರು ಬೈಕ್ ಮತ್ತು ಸ್ಕೂಟರ್‌ಗಳನ್ನು ಬಿಟ್ಟು ಎಸಿ ಸೌಲಭ್ಯವಿರುವ ಬಿಎಂಟಿಸಿ ಬಸ್‌ಗಳು ಹಾಗೂ ಮೆಟ್ರೋದತ್ತ ಮುಖ ಮಾಡಿದ್ದರು.

ಇದನ್ನೂ ಓದಿ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್: ಪಿಂಕ್ ಲೈನ್ ಹಳಿ ಮೇಲೆ ಆರ್‌ಡಿಎಸ್‌ಒ ಪರೀಕ್ಷೆ ಆರಂಭ!

ಇಂಟರ್‌ಚೇಂಜ್ ನಿಲ್ದಾಣಗಳಲ್ಲಿ ಜನಜಂಗುಳಿ

ಇದೇ ವೇಳೆ ಮೆಜೆಸ್ಟಿಕ್ (ನಾಡಪ್ರಭು ಕೆಂಪೇಗೌಡ ನಿಲ್ದಾಣ) ಮತ್ತು ಆರ್.ವಿ. ರಸ್ತೆಯ ಇಂಟರ್‌ಚೇಂಜ್ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ವಿಪರೀತವಾಗಿತ್ತು. ಸುಮಾರು 2.52 ಲಕ್ಷ ಪ್ರಯಾಣಿಕರು ಈ ನಿಲ್ದಾಣಗಳನ್ನು ಬಳಸಿದ್ದಾರೆ ಎಂದು ತಿಳಿದುಬಂದಿದೆ. ಮಳೆಯ ಕಾರಣದಿಂದ ಆಟೋ ಮತ್ತು ಟ್ಯಾಕ್ಸಿಗಳ ದರ ಏರಿಕೆ ಹಾಗೂ ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ಜನರು ಮೆಟ್ರೋ ಕಡೆ ಮುಖ ಮಾಡಿದ್ದೇ ಈ ದಾಖಲೆಗೆ ಪ್ರಮುಖ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲಿವಿನ್ ರಿಲೇಷನ್​ಶಿಪ್​ನಲ್ಲಿದ್ದ ಯುವತಿ ನೇಣಿಗೆ ಶರಣು! ಪ್ರಿಯಕರನ ಮೇಲಿನ ಅನುಮಾನವೇ ಮುಳುವಾಯ್ತಾ? – Kannada News | Bengaluru Crime: Meghalaya Woman in Live in Relationship ends life Over Suspicion

ಲಿವಿನ್ ರಿಲೇಷನ್​ಶಿಪ್​ನಲ್ಲಿದ್ದ ಯುವತಿ ನೇಣಿಗೆ ಶರಣು!

ಬೆಂಗಳೂರು, ಮೇ 01: ನಗರದಲ್ಲಿ ಲಿವಿನ್ ರಿಲೇಷನ್‌ಶಿಪ್​ನಲ್ಲಿದ್ದ (Live-in Relationship) ಜೋಡಿಗಳ ಜಗಳ ದುರಂತ ಅಂತ್ಯ ಕಂಡಿದೆ. ಪ್ರಿಯಕರ ಬೇರೆ ಯುವತಿಯ ಜೊತೆ ಮಾತನಾಡುತ್ತಿದ್ದಾನೆ ಎಂದು ಅನುಮಾನದಿಂದ ಮೇಘಾಲಯ ಮೂಲದ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಿಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸಂಜೀವಿನಿ ನಗರದಲ್ಲಿ ಸಂಭವಿಸಿದೆ.

ಪ್ರೇಮಿಗಳ ನಡುವೆ 8 ವರ್ಷಗಳ ಅಂತರ

ಮೃತ ಯುವತಿಯನ್ನು ಮೇಘಾಲಯ ಮೂಲದ ಅಗತ ಬೈತಿಯಂಗುಂ (34) ಎಂದು ಗುರುತಿಸಲಾಗಿದೆ. ಈಕೆ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡಿದ್ದಳು. ಮಣಿಪುರ ಮೂಲದ ನವಾಜ್ ಶರೀಫ್ (26) ಎಂಬಾತನ ಜೊತೆ ಅಗತ ಕಳೆದ ಮೂರು ವರ್ಷಗಳಿಂದ ಸಂಜೀವಿನಿ ನಗರದ ಬಾಡಿಗೆ ಮನೆಯೊಂದರಲ್ಲಿ ಲಿವಿನ್ ರಿಲೇಷನ್‌ಶಿಪ್‌ನಲ್ಲಿದ್ದಳು ಎಂದು ಹೇಳಲಾಗಿದೆ. ಅಗತ ಮತ್ತು ಆಕೆಯ ಬಾಯ್​ಫ್ರೆಂಡ್​ ನಡುವೆ 8 ವರ್ಷಗಳ ಅಂತರವಿತ್ತು. ಇದೇ ಕಾರಣಕ್ಕೆ ಇಬ್ಬರ ನಡುವೆ ಪದೇ ಪದೇ ಮನಸ್ತಾಪ ಹಾಗೂ ಗಲಾಟೆಗಳೂ ನಡೆಯುತ್ತಿದ್ದವು. ನವಾಜ್ ಶರೀಫ್ ಯಾರೊಂದಿಗಾದರೂ ಫೋನ್‌ನಲ್ಲಿ ಮಾತನಾಡಿದರೆ ಅಗತ ಅತಿಯಾಗಿ ಅನುಮಾನ ಪಡುತ್ತಿದ್ದರು ಎನ್ನಲಾಗಿದೆ.

ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ

ಕಳೆದ ಬುಧವಾರ ರಾತ್ರಿ ನವಾಜ್ ಶರೀಫ್ ತನ್ನ ತಾಯಿಯ ಜೊತೆ ಫೋನ್‌ನಲ್ಲಿ ಮಾತನಾಡುತ್ತಿದ್ದ. ಇದನ್ನು ಗಮನಿಸಿದ ಅಗತ, ನೀನು ಯಾವುದೋ ಹುಡುಗಿ ಜೊತೆ ಮಾತನಾಡುತ್ತಿದ್ದೀಯಾ ಎಂದು ಜಗಳ ತೆಗೆದಿದ್ದಾಳೆ. ಈ ವಿಚಾರವಾಗಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಜಗಳ ವಿಕೋಪಕ್ಕೆ ಹೋದಾಗ ನವಾಜ್ ಶರೀಫ್ ಮನೆಯಿಂದ ಹೊರಗೆ ಹೋಗಿದ್ದಾನೆ. ಈ ವೇಳೆ ಅಗತ ಮನೆಯ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನವಾಜ್ ಶರೀಫ್ ಮರಳಿ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಕೊಡಿಗೇಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ ಜೈಲಿನಲ್ಲಿದ್ದುಕೊಂಡೇ ಪತ್ನಿ ಜೊತೆ ವೀಡಿಯೋ ಕಾಲ್​ನಲ್ಲಿ ರೊಮ್ಯಾನ್ಸ್! ವೀಡಿಯೋ ವೈರಲ್

ಘಟನೆಗೆ ಸಂಬಂಧಿಸಿದಂತೆ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿನ್ನೆಯೇ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ನಡೆಸಿರುವ ಪೊಲೀಸರು, ಬಳಿಕ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. ಅನುಮಾನದ ಸುಳಿಗೆ ಸಿಲುಕಿ ಮೂರು ವರ್ಷಗಳ ಸಂಬಂಧವೊಂದು ಹೀಗೆ ದುರಂತಮಯವಾಗಿ ಕೊನೆಗೊಂಡಿರುವುದು ಸ್ಥಳೀಯರಲ್ಲಿ ವಿಷಾದ ಮೂಡಿಸಿದೆ.

ವರದಿ: ವಿಕಾಸ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Tulasi Male: ತುಳಸಿ ಮಾಲೆಯ ಆಧ್ಯಾತ್ಮಿಕ ಮಹತ್ವ, ಧರಿಸುವ ವಿಧಾನ ಮತ್ತು ಪ್ರಯೋಜನಗಳು – Kannada News | Tulasi Mala: Spiritual Significance, Benefits and How to Wear for Peace

ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲ್ಪಟ್ಟಿರುವ ತುಳಸಿ ಸಸ್ಯವನ್ನು ‘ವಿಷ್ಣು ಪ್ರಿಯ’ ಎಂದು ಭಕ್ತಿಯಿಂದ ಆರಾಧಿಸಲಾಗುತ್ತದೆ. ಈ ಸಸ್ಯದ ಪ್ರತಿಯೊಂದು ಭಾಗವೂ ಆಧ್ಯಾತ್ಮಿಕ ಶಕ್ತಿಯನ್ನು ಹೊಂದಿದ್ದು, ತುಳಸಿ ಕಾಂಡಗಳಿಂದ ತಯಾರಿಸಿದ ಮಾಲೆಯನ್ನು ಧರಿಸುವುದು ಕೇವಲ ಒಂದು ಸಂಪ್ರದಾಯವಲ್ಲ; ಅದು ಮನಸ್ಸಿನ ಶಾಂತಿ ಮತ್ತು ಆಧ್ಯಾತ್ಮಿಕ ಶುದ್ಧೀಕರಣಕ್ಕೆ ನಾಂದಿಯಾಗುತ್ತದೆ ಎಂದು ನಂಬಲಾಗಿದೆ. ತುಳಸಿ ನೆಲೆಸಿರುವ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ ಎಂಬ ಬಲವಾದ ವಿಶ್ವಾಸವೂ ನಮ್ಮಲ್ಲಿದೆ.

ತುಳಸಿ ಮಾಲೆಯನ್ನು ಧರಿಸುವ ಪ್ರಕ್ರಿಯೆಯನ್ನು ಕೇವಲ ಆಭರಣದಂತೆ ನೋಡದೆ, ಒಂದು ಶಿಸ್ತುಬದ್ಧ ಆಧ್ಯಾತ್ಮಿಕ ಅಭ್ಯಾಸವಾಗಿ ಪರಿಗಣಿಸಬೇಕು. ಈ ಮಾಲೆಯನ್ನು ಧರಿಸುವ ವ್ಯಕ್ತಿಯು ತನ್ನ ದೈನಂದಿನ ಜೀವನದಲ್ಲಿ ಪೂರ್ಣ ಶುದ್ಧತೆಯನ್ನು ಕಾಪಾಡಿಕೊಳ್ಳುವುದು ಅತಿ ಮುಖ್ಯವಾಗಿದೆ. ವಿಶೇಷವಾಗಿ ಮಾಂಸಾಹಾರ ಮತ್ತು ಮದ್ಯಪಾನದಂತಹ ತಾಮಸಿಕ ಅಭ್ಯಾಸಗಳಿಂದ ದೂರವಿದ್ದು, ಸಾತ್ವಿಕ ಮತ್ತು ಮಿತವಾದ ಆಹಾರ ಸೇವನೆಯನ್ನು ರೂಢಿಸಿಕೊಳ್ಳಬೇಕು.

ಮಾಲೆ ಧರಿಸಿದ ವ್ಯಕ್ತಿಯ ನಡವಳಿಕೆಯೂ ಅಷ್ಟೇ ಪವಿತ್ರವಾಗಿರಬೇಕು; ಮಾತಿನಲ್ಲಿ ಸದಾ ಪ್ರಾಮಾಣಿಕತೆ ಇರಬೇಕು ಮತ್ತು ಇತರರನ್ನು ನೋಯಿಸುವಂತಹ ಅಸಭ್ಯ ಮಾತುಗಳನ್ನು ಬಳಸಬಾರದು. ದೇವರ ನಾಮವನ್ನು ಸದಾ ಜಪಿಸುವುದು ಆಧ್ಯಾತ್ಮಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಜೀವನದ ಏರಿಳಿತಗಳಲ್ಲಿ ಅಥವಾ ಅಶೌಚದ ಸಂದರ್ಭಗಳಲ್ಲಿ ಮಾಲೆಯನ್ನು ತಾತ್ಕಾಲಿಕವಾಗಿ ತೆಗೆದಿಡಬೇಕಾಗಿ ಬಂದರೆ, ಪುನಃ ಧರಿಸುವ ಮುನ್ನ ಶುದ್ಧೀಕರಣ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಈ ಮಾಲೆಯ ನಿರ್ವಹಣೆಯ ಬಗ್ಗೆಯೂ ಶಾಸ್ತ್ರಗಳಲ್ಲಿ ಸ್ಪಷ್ಟ ನಿರ್ದೇಶನಗಳಿವೆ; ಮುರಿದ ಮಣಿಗಳು ಅಥವಾ ಹಾನಿಗೊಳಗಾದ ದಾರವಿರುವ ಮಾಲೆಗಳನ್ನು ಧರಿಸಬಾರದು. ಕುತ್ತಿಗೆಗೆ ಧರಿಸಲು ಅನಾನುಕೂಲವಾದರೆ ಕೈಯಲ್ಲಿಯೂ ಇದನ್ನು ಧರಿಸಬಹುದು, ಆದರೆ ಸದಾ ಗೌರವದಿಂದಲೇ ನಿರ್ವಹಿಸಬೇಕು. ಆಧ್ಯಾತ್ಮಿಕ ಗುರುಗಳಿಂದ ಅಥವಾ ಪವಿತ್ರ ಕ್ಷೇತ್ರಗಳಿಂದ ಪಡೆದ ಮಾಲೆಯನ್ನು ಧರಿಸುವುದು ಅತ್ಯಂತ ಶ್ರೇಷ್ಠವೆಂದು ಪರಿಗಣಿಸಲಾಗುತ್ತದೆ.

ಪವಿತ್ರ ದಿನಗಳಾದ ಗುರುವಾರ, ಏಕಾದಶಿ ಅಥವಾ ಪೌರ್ಣಮಿಯಂದು ಸ್ನಾನದ ನಂತರ ಪ್ರಾರ್ಥನೆ ಸಲ್ಲಿಸಿ ಈ ಮಾಲೆಯನ್ನು ಧರಿಸುವುದು ಅತ್ಯಂತ ಶುಭಕರ. ಹೀಗೆ ಶ್ರದ್ಧೆಯಿಂದ ತುಳಸಿ ಮಾಲೆ ಧರಿಸುವುದರಿಂದ ವ್ಯಕ್ತಿಯ ಆಲೋಚನೆಗಳಲ್ಲಿ ಸಕಾರಾತ್ಮಕ ಬದಲಾವಣೆ ಉಂಟಾಗಿ, ಭಕ್ತಿ ಮತ್ತು ಮಾನಸಿಕ ಶಾಂತಿ ವೃದ್ಧಿಸುತ್ತದೆ. ಇದು ಕೇವಲ ಧಾರ್ಮಿಕ ಚಿಹ್ನೆಯಲ್ಲ, ಬದಲಾಗಿ ವ್ಯಕ್ತಿಯನ್ನು ಉದಾತ್ತ ಮತ್ತು ಶಿಸ್ತುಬದ್ಧ ಜೀವನದತ್ತ ಕೊಂಡೊಯ್ಯುವ ಶಕ್ತಿಯಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

BESCOM Electricity Price Hike: ಬೆಸ್ಕಾಂ ವಿದ್ಯತ್ ದರ ಇಂದಿನಿಂದ ಏರಿಕೆ, ಲಕ್ಷಾಂತರ ಗ್ರಾಹಕರಿಗೆ ಶಾಕ್ – Kannada News | BESCOM Electricity Price Hike: Power Tariff Increased by 56 Paise per Unit in Bengaluru and 7 Other Districts from Today

ಬೆಂಗಳೂರು, ಮೇ 1: ಬೆಂಗಳೂರು ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ ಎಂಟು ಜಿಲ್ಲೆಗಳ ಗ್ರಾಹಕರಿಗೆ ಇಂದಿನಿಂದ (ಮೇ 1) ವಿದ್ಯುತ್ ದರ ಏರಿಕೆಯ ಬಿಸಿ ತಟ್ಟಲಿದೆ. ಪ್ರತಿ ಯೂನಿಟ್‌ಗೆ 56 ಪೈಸೆ ಹೆಚ್ಚಳ ಮಾಡಲಾಗಿದ್ದು, ಇದು ಗ್ರಾಹಕರಿಗೆ ಮೇಲೆ ಮತ್ತಷ್ಟು ಆರ್ಥಿಕ ಹೊರೆ ಉಂಟುಮಾಡಲಿದೆ. ಈಗಾಗಲೇ ಗ್ಯಾಸ್ ಬೆಲೆ ಏರಿಕೆಯ ಬಿಸಿ ಅನುಭವಿಸುತ್ತಿರುವ ನಾಗರಿಕರಿಗೆ ಈ ವಿದ್ಯುತ್ ದರ ಏರಿಕೆ ಮತ್ತೊಂದು ಹೊಡೆತವಾಗಿದೆ. ಬೆಸ್ಕಾಂ ಸಂಸ್ಥೆಯು ಸುಮಾರು 2000 ಕೋಟಿ ರೂ. ನಷ್ಟವನ್ನು ಅನುಭವಿಸಿದ್ದು, ಇದನ್ನು ಸರಿದೂಗಿಸುವ ಸಲುವಾಗಿ ವಿದ್ಯುತ್ ದರ ಹೆಚ್ಚಳಕ್ಕೆ ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗ (KERC) ಅಸ್ತು ಎಂದಿದೆ. ಇಂದಿನಿಂದ ಅನ್ವಯವಾಗುವಂತೆ ಮೀಟರ್ ರೀಡಿಂಗ್‌ಗೆ ಹೊಸ ದರಗಳು ಜಾರಿಗೆ ಬರಲಿವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version