ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಚುನಾವಣೆ ಮುಕ್ತಾಯ; ದಾಖಲೆಯ ಶೇ. 91ರಷ್ಟು ಮತದಾನ – Kannada News | West Bengal assembly Elections Polling ends voter turnout over 91 per cent

ಕೊಲ್ಕತ್ತಾ, ಏಪ್ರಿಲ್ 23: ಪಶ್ಚಿಮ ಬಂಗಾಳದಲ್ಲಿ (West Bengal Assembly Elections) ಮೊದಲ ಹಂತದ ಮತದಾನ ಮುಕ್ತಾಯವಾಗಿದೆ. ಈ ಬಾರಿ ಶೇ. 91ಕ್ಕಿಂತ ಹೆಚ್ಚು ಮತದಾನವಾಗಿದೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ 152 ಕ್ಷೇತ್ರಗಳಲ್ಲಿ ಇಂದು ಸಂಜೆ 6 ಗಂಟೆಗೆ ಮತದಾನ ಮುಕ್ತಾಯಗೊಂಡಿದೆ. ನಿಗದಿತ ಮುಕ್ತಾಯದ ಮೊದಲು ಮತದಾನ ಕೇಂದ್ರಗಳನ್ನು ತಲುಪಿದ ಮತದಾರರಿಗೆ ತಮ್ಮ ಮತದಾನವನ್ನು ಚಲಾಯಿಸಲು ಅವಕಾಶ ನೀಡಲಾಗಿತ್ತು.

ಚುನಾವಣಾ ಆಯೋಗದ ಪ್ರಕಾರ, 3.60 ಕೋಟಿ ಮತದಾರರಲ್ಲಿ ಶೇ. 91.46ರಷ್ಟು ಜನರು ಸಂಜೆ 6 ಗಂಟೆಯವರೆಗೆ ಮತ ಚಲಾಯಿಸಿದ್ದಾರೆ. ರಾಜ್ಯದ ಇತ್ತೀಚಿನ ಚುನಾವಣಾ ಇತಿಹಾಸದಲ್ಲಿ ಇಂದಿನ ಮತದಾನ ಅತ್ಯಧಿಕವಾಗಿದೆ.

ಇದನ್ನೂ ಓದಿ: Tamil Nadu Elections: 74 ವರ್ಷದ ದಾಖಲೆ ಮುರಿದ ತಮಿಳುನಾಡು; ಇಂದಿನ ಚುನಾವಣೆಯಲ್ಲಿ ಶೇ. 84ರಷ್ಟು ಮತದಾನ

294 ಬಲದ ಪಶ್ಚಿಮ ಬಂಗಾಳ ವಿಧಾನಸಭೆಯ 152 ಕ್ಷೇತ್ರಗಳಲ್ಲಿ 167 ಮಹಿಳೆಯರು ಸೇರಿದಂತೆ 1,478 ಅಭ್ಯರ್ಥಿಗಳ ಚುನಾವಣಾ ಭವಿಷ್ಯವನ್ನು ನಿರ್ಧರಿಸಲು ಬಿಗಿ ಭದ್ರತೆಯ ನಡುವೆ ಇಂದು ಬೆಳಿಗ್ಗೆ 7 ಗಂಟೆಗೆ 16 ಜಿಲ್ಲೆಗಳಲ್ಲಿ ಮತದಾನ ಪ್ರಾರಂಭವಾಯಿತು. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ನಡುವೆ ಪೈಪೋಟಿ ನಡೆದಿದೆ. ಇಂದು ಸಂಜೆ 6 ಗಂಟೆಗೆ ಪಶ್ಚಿಮ ಬಂಗಾಳದ ಎಲ್ಲಾ 152 ವಿಧಾನಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಅಧಿಕೃತವಾಗಿ ಕೊನೆಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿಗದಿತ ಮುಕ್ತಾಯದ ಸಮಯದಲ್ಲಿ ಇನ್ನೂ ಸರತಿ ಸಾಲಿನಲ್ಲಿ ನಿಂತಿದ್ದವರಿಗೆ ಮತ ಚಲಾಯಿಸಲು ಅವಕಾಶ ನೀಡಲಾಗಿದೆ. ಇದರಿಂದಾಗಿ ಮತಗಟ್ಟೆಯಲ್ಲಿ ಹಾಜರಿರುವ ಪ್ರತಿಯೊಬ್ಬ ಅರ್ಹ ಮತದಾರರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬಂಗಾಳದಲ್ಲಿ ಭುಗಿಲೆದ್ದ ಗಲಭೆ; ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ

2026ರ ಮತದಾನವು 2011ರ ದಾಖಲೆಯನ್ನು ಮೀರಿಸಿದೆ. 2011ರಲ್ಲಿ, ಶೇ. 84ರಷ್ಟು ಮತದಾನವಾಗಿತ್ತು. 2016ರಲ್ಲಿ ಶೇ. 82.66ರಷ್ಟು ಮತದಾನವಾಗಿತ್ತು. 2021ರಲ್ಲಿ, ಶೇ. 81.56ರಷ್ಟು ಮತದಾನವಾಗಿತ್ತು. ಈ ಬಾರಿ ಶೇ. 91.46ರಷ್ಟು ಮತದಾನವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚುನಾವಣೆ ಸಮಯದಲ್ಲಿ ವಿಜಯ್ ವಿರುದ್ಧ ದ್ವೇಷ ತೀರಿಸಿಕೊಂಡರೇ ನಟ ಅಜಿತ್ ಕುಮಾರ್? – Kannada News | Did Ajith Kumar indirectly said do not vote for Thalapathy Vijay

ತಮಿಳುನಾಡಿನಲ್ಲಿ ಚುನಾವಣೆ ಚಾಲ್ತಿಯಲ್ಲಿದೆ. ಇಂದು (ಏಪ್ರಿಲ್ 23) ಮತದಾನ ನಡೆದಿದೆ. ತಮಿಳು ಚಿತ್ರರಂಗದ ಹಲವಾರು ಸೆಲೆಬ್ರಿಟಿಗಳು ಸಹ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದಾರೆ. ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ (Thalapathy Vijay) ಸಹ ಚುನಾವಣೆಗೆ ಸ್ಪರ್ಧಿಸಿದ್ದಾರೆ. ತಮಿಳು ಚಿತ್ರರಂಗದಲ್ಲಿ ಹಲವು ವರ್ಷಗಳಿಂದಲೂ ದಳಪತಿ ವಿಜಯ್ ಮತ್ತು ಅಜಿತ್ ಕುಮಾರ್ ಪರಸ್ಪರ ಎದುರಾಳಿಗಳು. ಪರಸ್ಪರರ ಅಭಿಮಾನಿಗಳು ಸಹ ಎದುರಾಳಿಗಳಂತೇ ವರ್ತಿಸುತ್ತಾರೆ. ಇದೆಲ್ಲ ಹೀಗಿರುವಾಗ, ಅಜಿತ್ ಅವರು ಪರೋಕ್ಷವಾಗಿ ದಳಪತಿ ವಿಜಯ್​​ಗೆ ಮತ ಹಾಕಬೇಡಿ ಎಂಬ ಸಂದೇಶ ನೀಡಿದ್ದಾರೆ ಎಂಬ ಸುದ್ದಿ ಹರಡಿದೆ.

ಇತ್ತೀಚೆಗಷ್ಟೇ ಬೆಲ್ಜಿಯಂನಲ್ಲಿ ನಡೆದ ಕಾರ್ ರೇಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಎರಡನೇ ಸ್ಥಾನವನ್ನು ಅಜಿತ್ ಪಡೆದುಕೊಂಡಿದ್ದಾರೆ. ಬುಧವಾರವಷ್ಟೇ ಚೆನ್ನೈಗೆ ಮರಳಿದ ಅಜಿತ್ ಅವರು, ಇಂದು ಬೆಳಗ್ಗೆ 7 ಗಂಟೆ ವೇಳೆಗೆ ತಿರುವನ್ಮಿಯೂರು ಮತಗಟ್ಟೆಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಆದರೆ ಮತದಾನದ ನಂತರ ಹೊರಬಂದ ಅಜಿತ್ ಅವರಿಗೆ ಪತ್ರಕರ್ತರು ‘ತಮಿಳುನಾಡಿನಲ್ಲಿ ಸರ್ಕಾರದ ಬದಲಾವಣೆ ಬೇಕೇ?” ಎಂದು ಕೇಳಿದಾಗ, ಅಜಿತ್ ಅವರು ’ಬೇಡ’ ಎಂದು ಉತ್ತರಿಸಿದ್ದಾರೆ ಎಂಬ ಸುದ್ದಿ ವೈರಲ್ ಹಠಾತ್ತನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು. ಇದು ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಯಿತು.

ಇದನ್ನೂ ಓದಿ:ದಳಪತಿ ವಿಜಯ್, ಸಂಗೀತಾ ವಿಚ್ಛೇದನ ಪ್ರಕರಣ: ಜೂನ್ 15ಕ್ಕೆ ವಿಚಾರಣೆ ಮುಂದೂಡಿಕೆ

ಈಗ ಆಡಳಿತದಲ್ಲಿರುವ ಡಿಎಂಕೆ ಪಕ್ಷವೇ ಮುಂದುವರೆಯಲಿ, ಹೊಸ ಪಕ್ಷಗಳಿಗೆ ಅಧಿಕಾರ ನೀಡುವುದು ಬೇಡ ಎಂಬ ಸಂದೇಶವನ್ನು ಅಜಿತ್ ನೀಡಿದ್ದಾರೆ. ಪರೋಕ್ಷವಾಗಿ ವಿಜಯ್ ಅವರಿಗೆ ಅಧಿಕಾರ ನೀಡುವುದು ಬೇಡ ಎಂಬ ಸಂದೇಶ ನೀಡಿದ್ದಾರೆ ಎಂಬ ಸುದ್ದಿ ಹರಡತೊಡಗಿತು. ಆದರೆ ಕೂಡಲೇ ಇದಕ್ಕೆ ಪ್ರತಿಕ್ರಿಯೆ ನೀಡಿದ ಅಜಿತ್ ಅವರ ಮ್ಯಾನೇಜರ್ ಸುರೇಶ್, ಸುರೇಶ್ ಚಂದ್ರ, ‘ವೈರಲ್ ಆಗುತ್ತಿರುವ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಅಜಿತ್ ಕುಮಾರ್ ಅವರು ಪತ್ರಕರ್ತರೊಂದಿಗೆ ಯಾವುದೇ ಸಂವಾದ ನಡೆಸಿಲ್ಲ. ಅವರ ಹೆಸರಿನಲ್ಲಿ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ದಳಪತಿ ವಿಜಯ್ ಮತ್ತು ಅಜಿತ್ ಕುಮಾರ್ ಚಿತ್ರರಂಗದಲ್ಲಿ ಸಮಕಾಲೀನರು. ಹಲವು ವರ್ಷಗಳಿಂದಲೂ ಚಿತ್ರರಂಗದಲ್ಲಿ ಸ್ಟಾರ್ ನಟರಾಗಿ ಮಿಂಚುತ್ತಿದ್ದಾರೆ. ಬಾಕ್ಸ್ ಆಫೀಸ್​​ನಲ್ಲಿ ಎದುರಾಳಿಗಳೂ ಸಹ ಆಗಿದ್ದಾರೆ. ವಿಜಯ್ ಅಭಿಮಾನಿಗಳು, ಪದೇ ಪದೇ ಅಜಿತ್ ಬಗ್ಗೆ ಹೀನಾಯ ಟ್ರೋಲ್ ಮಾಡುವುದು, ಅಜಿತ್ ಅಭಿಮಾನಿಗಳು, ವಿಜಯ್ ಅವರನ್ನು ಟ್ರೋಲ್ ಮಾಡುವುದು ನಡದೇ ಇದೆ. ಇದೀಗ ಈ ಸುದ್ದಿ ವೈರಲ್ ಆಗುವ ಮೂಲಕ ಇಬ್ಬರು ನಟರ ಅಭಿಮಾನಿಗಳ ನಡುವೆ ಕಂದಕ ಇನ್ನೂ ಹೆಚ್ಚಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಂಗಾಳದಲ್ಲಿ ಭುಗಿಲೆದ್ದ ಗಲಭೆ; ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ – Kannada News | West Bengal Assembly Elections; BJP candidate Shuvendu Sarkar chased through Field and assaulted

ಕೊಲ್ಕತ್ತಾ, ಏಪ್ರಿಲ್ 23: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ (West Bengal Assembly Elections) ಮೊದಲ ಹಂತದ ಮತದಾನ ಇಂದು ನಡೆಯುತ್ತಿದೆ. ಬಂಗಾಳದ ದಕ್ಷಿಣ ದಿನಾಜ್‌ಪುರದ ಬಿಜೆಪಿ ಅಭ್ಯರ್ಥಿ ಸುವೇಂದು ಸರ್ಕಾರ್ ಅವರನ್ನು ಟಿಎಂಸಿ ಕಾರ್ಯಕರ್ತರು ಬೆನ್ನಟ್ಟಿ ಹಲ್ಲೆ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಹಲ್ಲೆಯಿಂದ ತಪ್ಪಿಸಿಕೊಳ್ಳಲು ಸುವೇಂದು ಸರ್ಕಾರ್ ಪೊಲೀಸರ ಜೊತೆ ಮೈದಾನದೊಳಗೆ ಓಡಿದ್ದಾರೆ. ಭದ್ರತಾ ಸಿಬ್ಬಂದಿಯೊಬ್ಬರು ಬಿಜೆಪಿ ಅಭ್ಯರ್ಥಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿರುವಾಗ ಟಿಎಂಸಿ ಕಾರ್ಯಕರ್ತರು ಸುವೇಂದು ಸರ್ಕಾರ್ ಅವರನ್ನು ಗದರಿಸುತ್ತಾ, ಹಲ್ಲೆ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಮತಗಟ್ಟೆಗೆ ತೆರಳುತ್ತಿದ್ದ ಸುವೇಂದು ಸರ್ಕಾರ್ ಅವರನ್ನು ತಡೆದು ಹಲ್ಲೆ ನಡೆಸಲಾಗಿದೆ. ಈ ಹಲ್ಲೆಯಿಂದ ಪಾರಾಗಲು ಅವರು ಹೊಲದಲ್ಲಿ ಓಡಿದ್ದಾರೆ. ಆದರೂ ಬೆನ್ನಟ್ಟಿ ಬಂದ ಜನರು ಅವರ ಮೇಲೆ ದಾಳಿ ನಡೆಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಂದಲ್ಲ, ಎರಡು ಒಟಿಟಿಗಳಲ್ಲಿ ಬಿಡುಗಡೆ ಆಗಲಿದೆ ‘ಧುರಂಧರ್ 2’?

ರಣ್ವೀರ್ ಸಿಂಗ್ (Ranveer Singh) ನಟಿಸಿ, ಆದಿತ್ಯ ಧರ್ ನಿರ್ದೇಶನ ಮಾಡಿರುವ ‘ಧುರಂಧರ್ 2’ ಸಿನಿಮಾ ಭಾರತದ ಬಾಕ್ಸ್ ಆಫೀಸ್​​ನಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತಿದೆ. ವರ್ಷಗಳಿಂದಲೂ ಗಳಿಕೆಯ ಪಟ್ಟಿಯಲ್ಲಿ ಟಾಪ್ ಸ್ಥಾನದಲ್ಲಿ ಕುಳಿತಿದ್ದ ಸಿನಿಮಾಗಳನ್ನು ಒಂದೊಂದಾಗಿ ಹಿಂದಿಕ್ಕುತ್ತಿದೆ. ಭಾರತದಲ್ಲಿ ಮಾತ್ರವೇ ಅಲ್ಲದೆ ವಿದೇಶದಲ್ಲೂ ಸಹ ‘ಧುರಂಧರ್ 2’ ಹವಾ ಎಬ್ಬಿಸಿದ್ದು, ಹಲವು ದೇಶಗಳಲ್ಲಿ, ಈವರೆಗೆ ಅತಿ ಹೆಚ್ಚು ಗಳಿಕೆ ಮಾಡಿರುವ ಭಾರತದ ಸಿನಿಮಾ ಎನಿಸಿಕೊಂಡಿದೆ. ಇದೀಗ ಸಿನಿಮಾ ಬಿಡುಗಡೆ ಒಂದೂವರೆ ತಿಂಗಳಾಗುತ್ತಾ ಬಂದಿದ್ದು, ಸಿನಿಮಾದ ಒಟಿಟಿ ಬಿಡುಗಡೆ ಬಗ್ಗೆ ಚರ್ಚೆ ಚಾಲ್ತಿಯಲ್ಲಿದೆ. ಇದೀಗ ಹರಿದಾಡುತ್ತಿರುವ ಸುದ್ದಿಯಂತೆ ‘ಧುರಂಧರ್ 2’ ಒಂದಲ್ಲ ಬದಲಿಗೆ ಎರಡು ಒಟಿಟಿಗಳಲ್ಲಿ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ.

ಅಂದಹಾಗೆ ಕಳೆದ ವರ್ಷ ಬಿಡುಗಡೆ ಆಗಿದ್ದ ‘ಧುರಂಧರ್’ ಸಿನಿಮಾ ನೆಟ್​​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆಗಿತ್ತು. ಚಿತ್ರಮಂದಿರದಲ್ಲಿ ಬ್ಲಾಕ್ ಬಸ್ಟರ್ ಆಗಿದ್ದ ಈ ಸಿನಿಮಾ ಒಟಿಟಿಯಲ್ಲೂ ಕಮಾಲ್ ಮಾಡಿತ್ತು. ಆದರೆ ‘ಧುರಂಧರ್ 2’ ಸಿನಿಮಾ ಜಿಯೋ ಹಾಟ್​​ಸ್ಟಾರ್​​ನಲ್ಲಿ ಸ್ಟ್ರೀಮಿಂಗ್ ಆಗಲಿದೆ ಎಂಬ ಸುದ್ದಿ ಕಳೆದ ಕೆಲ ವಾರಗಳಿಂದಲೂ ಹರಿದಾಡುತ್ತಿದೆ. ‘ಧುರಂಧರ್ 2’ ನಿರ್ಮಾಣ ಮತ್ತು ವಿತರಣೆ ಸಂಸ್ಥೆ ಸಹ ಆಗಿದ್ದು, ಇದೀಗ ಸಿನಿಮಾವನ್ನು ತಮ್ಮ ಒಟಿಟಿಯಲ್ಲೇ ಬಿಡುಗಡೆ ಮಾಡಲು ಒಪ್ಪಂದ ಮಾಡಿಕೊಂಡಿದೆ.

ಆದರೆ ಇದೀಗ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ‘ಧುರಂಧರ್ 2’ ಸಿನಿಮಾ ಜಿಯೋ ಹಾಟ್​​ಸ್ಟಾರ್ ಜೊತೆಗೆ ನೆಟ್​​ಫ್ಲಿಕ್ಸ್​ನಲ್ಲಿಯೂ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ. ‘ಧುರಂಧರ್ 2’ ಸಿನಿಮಾ ಜಿಯೋ ಹಾಟ್​​ಸ್ಟಾರ್ ಜೊತೆಗೆ 150 ಕೋಟಿ ರೂಪಾಯಿ ಒಪ್ಪಂದ ಮಾಡಿಕೊಂಡಿದೆ. ಅಂತರಾಷ್ಟ್ರೀಯ ಪ್ರೇಕ್ಷಕರನ್ನು ರೀಚ್ ಆಗುವ ಕಾರಣಕ್ಕೆ ನೆಟ್​​ಫ್ಲಿಕ್ಸ್​ನಲ್ಲಿಯೂ ಸಿನಿಮಾ ಬಿಡುಗಡೆ ಮಾಡಲು ಮುಂದಾಗಿದ್ದು, ನೆಟ್​​ಫ್ಲಿಕ್ಸ್​ ಜೊತೆಗೂ ದೊಡ್ಡ ಮೊತ್ತಕ್ಕೆ ಒಪ್ಪಂದ ಮಾಡಿಕೊಳ್ಳಲು ನಿರ್ಮಾಪಕರು ಮುಂದಾಗಿದ್ದಾರೆ.

ಇದನ್ನೂ ಓದಿ:ಹೊಟ್ಟೆಗೆ ಕ್ಲಿಪ್ ಹಾಕಿಕೊಂಡು ನಟನೆ: ರಣ್ವೀರ್ ಸಿಂಗ್ ಡೆಡಿಕೇಷನ್ ಎಂಥಹದ್ದು ಗೊತ್ತೆ?

ಸಿನಿಮಾ ಒಂದು ಎರಡು ಒಟಿಟಿಗಳಲ್ಲಿ ಬಿಡುಗಡೆ ಆಗುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ‘ಆರ್​​ಆರ್​​ಆರ್’ ಸಿನಿಮಾ ಎರಡು ಒಟಿಟಿಗಳಲ್ಲಿ ಬಿಡುಗಡೆ ಆಗಿತ್ತು. ಎರಡೂ ಕಡೆ ದೊಡ್ಡ ಯಶಸ್ಸನ್ನು ಗಳಿಸಿತು. ಭಾರತದ ಇನ್ನೂ ಕೆಲವು ಸಿನಿಮಾಗಳು ಎರಡು ಒಟಿಟಿಗಳಲ್ಲಿ ಬಿಡುಗಡೆ ಆಗಿರುವುದುಂಟು. ಇದೀಗ ‘ಧುರಂಧರ್ 2’ ಸಿನಿಮಾ ಸಹ ಅದೇ ಹಾದಿ ಹಿಡಿದಂತಿದೆ.

‘ಧುರಂಧರ್ 2’ ಭಾರತದ ಸೈನಿಕನೋರ್ವ ಪಾಕಿಸ್ತಾನಕ್ಕೆ ತೆರಳಿ ಭಯೋತ್ಪಾದಕರನ್ನು ಮಟ್ಟ ಹಾಕುವ ಕತೆಯನ್ನು ಒಳಗೊಂಡಿದೆ. ಸಿನಿಮಾನಲ್ಲಿ ರಣ್ವೀರ್ ಸಿಂಗ್ ಜೊತೆಗೆ ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್, ಸಂಜಯ್ ದತ್, ಆರ್ ಮಾಧವನ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಆದಿತ್ಯ ಧರ್, ಸಿನಿಮಾದ ಸಹ ನಿರ್ಮಾಣವನ್ನೂ ಅವರು ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Tamil Nadu Elections: 74 ವರ್ಷದ ದಾಖಲೆ ಮುರಿದ ತಮಿಳುನಾಡು; ಇಂದಿನ ಚುನಾವಣೆಯಲ್ಲಿ ಶೇ. 82.24ರಷ್ಟು ಮತದಾನ – Kannada News | Assembly Elections Tamil Nadu records historic 82.24 percent voting highest since 1952

ಚೆನ್ನೈ, ಏಪ್ರಿಲ್ 23: ತಮಿಳುನಾಡು ವಿಧಾನಸಭಾ ಚುನಾವಣೆ (Tamil Nadu Assembly Elections) ಇಂದು ಸಂಜೆ 6 ಗಂಟೆಗೆ ಮುಕ್ತಾಯವಾಯಿತು. ಅಧಿಕಾರಿಗಳು ಮುಕ್ತಾಯದ ಸಮಯಕ್ಕಿಂತ ಮೊದಲು ಮತಗಟ್ಟೆಗಳನ್ನು ತಲುಪಿದ ಮತದಾರರಿಗೆ ತಮ್ಮ ಮತಪತ್ರಗಳನ್ನು ಚಲಾಯಿಸಲು ಅವಕಾಶ ನೀಡಿದರು. ಇದೇ ಮೊದಲ ಬಾರಿಗೆ ದಾಖಲೆಯ ಶೇ. 82.24ರಷ್ಟು ಮತದಾನ ದಾಖಲಾಗಿದೆ. 5.73 ಕೋಟಿ ಅರ್ಹ ಮತದಾರರಲ್ಲಿ ಸುಮಾರು ಶೇ. 82.24ರಷ್ಟು ಜನರು ತಮ್ಮ ಮತದಾನ ಮಾಡಿದರು. 75,064 ಮತಗಟ್ಟೆಗಳಲ್ಲಿ ಮತದಾನ ನಡೆಯಿತು. 4,023 ಅಭ್ಯರ್ಥಿಗಳು ಇಂದಿನ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. 74 ವರ್ಷಗಳ ಬಳಿಕ ತಮಿಳುನಾಡಿನಲ್ಲಿ ಇಷ್ಟು ದೊಡ್ಡ ಪ್ರಮಾಣದ ಮತದಾನ ನಡೆದಿದೆ.

ತಮಿಳುನಾಡಿನ 8 ಜಿಲ್ಲೆಗಳನ್ನು ಹೊರತುಪಡಿಸಿ, ಉಳಿದ 30 ಜಿಲ್ಲೆಗಳಲ್ಲಿ ಶೇ.80ಕ್ಕಿಂತ ಹೆಚ್ಚು ಮತದಾನ ನಡೆದಿದೆ. ತಮಿಳುನಾಡು ರಾಜ್ಯದ ಪಶ್ಚಿಮ ಜಿಲ್ಲೆಗಳು ರಾಜ್ಯದ ಇತರ ಭಾಗಗಳಿಗಿಂತ ಹೆಚ್ಚಿನ ಮತಗಳನ್ನು ದಾಖಲಿಸಿವೆ. ಕರೂರ್‌ನಲ್ಲಿ ಗರಿಷ್ಠ ಶೇ. 89ರಷ್ಟು ಮತಗಳು ದಾಖಲಾಗಿವೆ. 16 ಕ್ಷೇತ್ರಗಳ ಪೈಕಿ ಚೆನ್ನೈ ಜಿಲ್ಲೆಯಲ್ಲಿ ಶೇ. 83.44ರಷ್ಟು ಮತಗಳು ಮತ್ತು 12 ಕ್ಷೇತ್ರಗಳಲ್ಲಿ ಶೇ. 80ಕ್ಕಿಂತ ಹೆಚ್ಚು ಮತಗಳನ್ನು ಚಲಾಯಿಸಲಾಗಿದೆ.

ಇದನ್ನೂ ಓದಿ: ಚುನಾವಣಾ ಆಯೋಗದಿಂದ ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ 1,000 ಕೋಟಿಗೂ ಹೆಚ್ಚು ಹಣ ವಶಕ್ಕೆ

ತಮಿಳುನಾಡಿನ ಎಲ್ಲಾ 234 ಕ್ಷೇತ್ರಗಳಿಗೆ ಇಂದು ಒಂದೇ ಹಂತದಲ್ಲಿ ಚುನಾವಣೆ ನಡೆದಿದ್ದು, ರಾಜ್ಯದಾದ್ಯಂತ ಜನರು ಬೆಳಗಿನ ಜಾವದಿಂದಲೇ ಹೆಚ್ಚಿನ ಉತ್ಸಾಹದಿಂದ ಮತ ಚಲಾಯಿಸಿದ್ದಾರೆ. ತಮಿಳುನಾಡಿನಲ್ಲಿ ಈ ಹಿಂದೆ 2011ರ ವಿಧಾನಸಭಾ ಚುನಾವಣೆಯಲ್ಲಿ ಶೇ. 78.29ರಷ್ಟು ಮತದಾನ ದಾಖಲಾಗಿತ್ತು. ಇಂದಿನ ಶೇ. 82.24ರಷ್ಟು ಮತದಾನವು ಆ ದಾಖಲೆಯನ್ನು ಮೀರಿಸಿದೆ. ಇಂದು ಸರಿಸುಮಾರು 4.71 ಕೋಟಿ ಜನರು ತಮ್ಮ ಮತದಾನವನ್ನು ಚಲಾಯಿಸಿದ್ದಾರೆ.

ಕರೂರು ಜಿಲ್ಲೆಯಲ್ಲಿ ಶೇ. 89ರಷ್ಟು ಮತದಾನವಾಗಿದ್ದು, ರಾಜ್ಯದಲ್ಲಿ ಅತಿ ಹೆಚ್ಚು ಮತದಾನವಾಗಿದೆ. ಚೆನ್ನೈ ಜಿಲ್ಲೆಯಲ್ಲಿ ಶೇ. 81.34ರಷ್ಟು ಮತದಾನವಾಗಿದ್ದರೆ, ಕನ್ಯಾಕುಮಾರಿಯಲ್ಲಿ ಶೇ. 73.44ರಷ್ಟು ಮತದಾನವಾಗಿದೆ. ಎಡಪ್ಪಾಡಿ ಪಳನಿಸ್ವಾಮಿ ಅವರ ಕ್ಷೇತ್ರ ಎಡಪ್ಪಾಡಿಯಲ್ಲಿ ಶೇ. 89.09ರಷ್ಟು ಮತದಾನ ದಾಖಲಾಗಿದೆ. ದಳಪತಿ ವಿಜಯ್ ಅವರ ಪೆರಂಬೂರ್ ಕ್ಷೇತ್ರದಲ್ಲಿ ಶೇ. 86.72ರಷ್ಟು ಮತದಾನವಾಗಿದ್ದರೆ, ಅವರ ಇನ್ನೊಂದು ಕ್ಷೇತ್ರವಾದ ತಿರುಚ್ಚಿ ಪೂರ್ವದಲ್ಲಿ ಶೇ. 79.32ರಷ್ಟು ಮತದಾನವಾಗಿದೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಕೊಳತ್ತೂರು ಕ್ಷೇತ್ರದಲ್ಲಿ ಶೇ. 83.58ರಷ್ಟು ಮತ್ತು ಸೀಮನ್ ಅವರ ಕಾರೈಕುಡಿ ಕ್ಷೇತ್ರದಲ್ಲಿ ಶೇ. 71.88ರಷ್ಟು ಮತದಾನ ದಾಖಲಾಗಿದೆ.

ಇದನ್ನೂ ಓದಿ: ತಮಿಳುನಾಡು ಚುನಾವಣೆಯಲ್ಲಿ ಮತ ಹಾಕಿದ ಸೆಲೆಬ್ರಿಟಿಸ್; ಇಲ್ಲಿವೆ ಫೋಟೋಸ್

ಹಿಂದಿನ ತಮಿಳುನಾಡು ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಮತದಾನದ ಶೇಕಡಾವಾರು:

2021 – 73.63%

2016 – 74.81%

2011 – 78.01%

2006 – 70.82%

2001 – 59.07%

1996 – 66.95%

1991 – 63.84%

1989 – 69.69%

1984 – 73.47% 1

980 – 65.42%

1977 – 61.58%

1971 – 72.10%

1967 – 76.57%

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

SSLC ಪರೀಕ್ಷೆ: ಸರ್ಕಾರ ಅಂಕಕ್ಕೆ ಕೋಕ್ ನೀಡಲು ಹೊರಟಿದ್ದ ತೃತೀಯ ಭಾಷೆಯಲ್ಲಿ ಶೇ. 98.55 ಫಲಿತಾಂಶ – Kannada News | Karnataka SSLC Exam Result 2026: 98.55 percent Student Pass in Third Language

ಬೆಂಗಳೂರು, ಏಪ್ರಿಲ್​​ 23: ವಿದ್ಯಾರ್ಥಿಗಳ ಮೇಲಿನ ಹೊರೆ ತಗ್ಗಿಸುವ ನಿಟ್ಟಿನಲ್ಲಿ SSLC ಪರೀಕ್ಷೆಯ ತೃತೀಯ ಭಾಷೆಗೆ ಅಂಕಗಳ ಬದಲು ಗ್ರೇಡ್​​ ನೀಡಲು ರಾಜ್ಯ ಸರ್ಕಾರ ಮುಂದಾಗಿತ್ತು. ಒಟ್ಟು 625 ಅಂಕಗಳ ಬದಲಿಗೆ 525 ಅಂಕಗಳಿಗೆ ಪರೀಕ್ಷಾ ಮೌಲ್ಯಮಾಪನವನ್ನು ಸೀಮಿತಗೊಳಿಸುವ ಬಗ್ಗೆ ನಿರ್ಧರಿಸಲಾಗಿತ್ತು. ತ್ರಿಭಾಷಾ ಸೂತ್ರದ ಅಡಿಯಲ್ಲಿ ತೃತೀಯ ಭಾಷೆಯನ್ನು ಕೇವಲ ಅರ್ಹತಾ ವಿಷಯವನ್ನಾಗಿ ಪರಿಗಣಿಸಿ, ಗ್ರೇಡ್ ನೀಡುವ ಮೂಲಕ ಒಟ್ಟು ಶೇಕಡಾವಾರು ಅಂಕಗಳ ಲೆಕ್ಕಾಚಾರದಿಂದ ಇದನ್ನು ಹೊರಗಿಡಲು ಉದ್ದೇಶಿಸಿತ್ತು. ಆದರೆ ಅಂತಿಮವಾಗಿ ಕೋರ್ಟ್​​ ಆದೇಶದಂತೆ ತೃತೀಯ ಭಾಷೆಗೂ ಅಂಕಗಳನ್ನು ನೀಡಲಾಗಿದೆ. ಇಲ್ಲಿ ಗಮನಾರ್ಹ ವಿಷಯವೆಂದರೆ ತೃತೀಯ ಭಾಷೆಯಲ್ಲಿ ಶೇಕಡಾ 98.55ರಷ್ಟು ಫಲಿತಾಂಶ ಬಂದಿದೆ. ಅಂದರೆ ಪರೀಕ್ಷೆ ಬರೆದಿದ್ದ 7,69,751 ವಿದ್ಯಾರ್ಥಿಗಳ ಪೈಕಿ 7,58,623 ಮಕ್ಕಳು ಉತ್ತೀರ್ಣರಾಗಿದ್ದಾರೆ.

ವಿಷಯವಾರು ವಿದ್ಯಾರ್ಥಿಗಳ ಫಲಿತಾಂಶ

ವಿಷಯ ಪರೀಕ್ಷೆ ಬರೆದವರ ಸಂಖ್ಯೆ ಉತ್ತೀರ್ಣರಾದವರ ಸಂಖ್ಯೆ ಶೇಕಡಾವಾರು ಫಲಿತಾಂಶ
ಪ್ರಥಮ ಭಾಷೆ 769926 748660 97.24
ದ್ವಿತೀಯ ಭಾಷೆ 769795 755369 98.13
ತೃತೀಯ ಭಾಷೆ 769751 758623 98.55
ಗಣಿತ 769447 753882 97.98
ವಿಜ್ಞಾನ 769507 752611 97.8
ಸಮಾಜ ವಿಜ್ಞಾನ 769714 753127 97.85

ಇದನ್ನೂ ಓದಿ: Karnataka SSLC Result 2026; 625ಕ್ಕೆ 625 ಅಂಕ ಪಡೆದ ಟಾಪರ್ಸ್ ಯಾರು? ಇಲ್ಲಿದೆ ಮಾಹಿತಿ

ಶೇ. 100 ಫಲಿತಾಂಶ ಪಡೆದ ಶಾಲೆಗಳೆಷ್ಟು?

2,393 ಸರ್ಕಾರಿ, 824 ಅನುದಾನಿತ, 2959 ಖಾಸಗಿ ಶಾಲೆಗಳು ಈ ಬಾರಿ ಶೇ.100ರಷ್ಟು ಫಲಿತಾಂಶವನ್ನು ದಾಖಲಿಸಿವೆ. ಹಾಗೆಯೇ 5 ಅನುದಾನಿತ ಶಾಲೆಗಳು ಮತ್ತು 22 ಖಾಸಗಿ ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಪರೀಕ್ಷೆ ಬರೆದಿದ್ದ ಗ್ರಾಮಾಂತರ ಭಾಗದ 4,42,280 ವಿದ್ಯಾರ್ಥಿಗಳ ಪೈಕಿ 4,19,261 ಮಕ್ಕಳು ಪಾಸ್ ಆಗಿದ್ದಾರೆ. ಹಾಗೆಯೇ ನಗರ ಪ್ರದೇಶ 3,27,929 ಮಕ್ಕಳ ಪೈಕಿ 3,05,533 ಮಕ್ಕಳು ತೇರ್ಗಡೆ ಹೊಂದಿದ್ದಾರೆ.

68,207 ವಿದ್ಯಾರ್ಥಿಗಳು A+ ಶ್ರೇಣಿ(90ರಿಂದ 100%) 1,30,403 ಮಂದಿ A ಶ್ರೇಣಿ(80ರಿಂದ 90%), 1,40,963 ವಿದ್ಯಾರ್ಥಿಗಳು B+ ಶ್ರೇಣಿ(70ರಿಂದ 79%), 1,42,645 ಮಕ್ಕಳು B ಶ್ರೇಣಿ(60ರಿಂದ 69%), 1,28,722 ವಿದ್ಯಾರ್ಥಿಗಳು C+ ಶ್ರೇಣಿ(50ರಿಂದ 59%) ಮತ್ತು 1,13,854 ಮಂದಿ C ಶ್ರೇಣಿಯಲ್ಲಿ(33ರಿಂದ 49%) ಉತ್ತೀರ್ಣರಾಗಿರೋದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:16 pm, Thu, 23 April 26

Source link

ಕರ್ನಾಟಕದಲ್ಲಿ ತೈಲ ಮತ್ತು ಅನಿಲ ಪೂರೈಕೆ ಸ್ಥಿರ: ಆತಂಕಪಡುವ ಅಗತ್ಯವಿಲ್ಲ ಎಂದ ತೈಲ ಕಂಪನಿಗಳು – Kannada News | Karnataka Fuel Stability: Oil and Gas Supply Secure Amidst Global Tensions

ಪಿಐಬಿ ಮಾಧ್ಯಮಗೋಷ್ಠಿImage Credit source: pib.gov.in

ಬೆಂಗಳೂರು, ಏಪ್ರಿಲ್​ 23: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಭೌಗೋಳಿಕ ಉದ್ವಿಗ್ನತೆ ಮತ್ತು ಜಾಗತಿಕ ವಿದ್ಯಮಾನಗಳ ಮಧ್ಯೆ ಇತ್ತ ಕರ್ನಾಟಕದಲ್ಲಿ (Karnataka) ತೈಲ ಮತ್ತು ಅನಿಲ ಪೂರೈಕೆ ಸ್ಥಿರ, ಸದೃಢ ಮತ್ತು ಸಂಪೂರ್ಣ ನಿಯಂತ್ರಣದಲ್ಲಿದೆ. ರಾಜ್ಯವು ಸುಸಂಘಟಿತ ಪೆಟ್ರೋಲಿಯಂ ಮೂಲಸೌಕರ್ಯ ಜಾಲವನ್ನು ಹೊಂದಿದೆ ಎಂದು ತೈಲ ಮಾರುಕಟ್ಟೆ ಕಂಪನಿಗಳು ಮಾಹಿತಿ ನೀಡಿವೆ.

ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಕೊರತೆಯಿಲ್ಲ: ಸಿದ್ಧಾರ್ಥ ಅಗರವಾಲ್

ಭಾರತ ಸರ್ಕಾರದ ವಾರ್ತಾ ಶಾಖೆ (ಪಿಐಬಿ) ಹಾಗೂ ಭಾರತದ ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ, ಹಿಂದೂಸ್ತಾನ್ ಪೆಟ್ರೋಲಿಯಂ ಮತ್ತು ಗೇಲ್‍ ಇಂಡಿಯಾ ಜಂಟಿಯಾಗಿ ಮಾಧ್ಯಮಗೋಷ್ಠಿ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಾರ್ಯಕಾರಿ ನಿರ್ದೇಶಕ ಸಿದ್ಧಾರ್ಥ ಅಗರವಾಲ್, ರಾಜ್ಯವು 15 ಎಂಎಂಟಿಪಿಎ (ಮೆಟ್ರಿಕ್ ಟನ್ಸ್ ಪರ್ ಆನಮ್) ಕಚ್ಚಾ ತೈಲ ಸಂಸ್ಕರಣಾ ಸಾಮರ್ಥ್ಯದ ಸಂಸ್ಕರಣಾಗಾರವನ್ನು ಹೊಂದಿದ್ದು, ರಾಜ್ಯದ ಯಾವುದೇ ಭಾಗದಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ಕೊರತೆಯಿಲ್ಲ ಮತ್ತು ಎಲ್ಲಾ ರಿಟೇಲ್ ಮಾರಾಟ ಮಳಿಗೆಗಳು ಸಹಜವಾಗಿ ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಸಂಸ್ಕರಣಾಗಾರಗಳಿಂದ ಟರ್ಮಿನಲ್‍, ಡಿಪೋ ಹಾಗೂ ರಿಟೇಲ್ ಮಳಿಗೆಗಳವರೆಗೆ ಯಾವುದೇ ಅಡೆತಡೆಯಿಲ್ಲದೆ ತೈಲದ ಪೂರೈಕೆ ಸುಗಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಎಲ್‌ಪಿಜಿ ಕೊರತೆ, ದರ ಏರಿಕೆಗೆ ಸೆಡ್ಡು: ಹೋಟೆಲ್ ಕಸ ನೀಡಿ ಬಯೋಗ್ಯಾಸ್ ಪಡೆಯಲು ಮುಂದಾದ ಬೆಂಗಳೂರಿನ ಹೋಟೆಲ್‌ಗಳು!

ಗೃಹಬಳಕೆಯ ಎಲ್​​ಪಿಜಿಗೆ ಸಂಬಂಧಿಸಿದಂತೆ, ಕರ್ನಾಟಕವು ಸಮರ್ಪಕ ಮತ್ತು ನಿರಂತರ ಪೂರೈಕೆಯನ್ನು ಪಡೆಯುತ್ತಿದೆ. ಮಾರ್ಚ್​​ನಲ್ಲಿ ಆತಂಕ ಕಾರಣಕ್ಕೆ ಖರೀದಿ ಹಿನ್ನೆಲೆ ಬುಕ್ಕಿಂಗ್​​ಗಳು ದಿನಕ್ಕೆ 3.75 ಲಕ್ಷಕ್ಕೆ ಏರಿಕೆಯಾಗಿದ್ದು, ಇದರಿಂದ ವಿತರಣಾ ಅವಧಿ ಸ್ವಲ್ಪ ವಿಳಂಬವಾಗಿತ್ತು. ಆದರೆ, ಪ್ರಸ್ತುತ ಪರಿಸ್ಥಿತಿ ಸ್ಥಿರವಾಗಿದೆ. ಇದೀಗ ದಿನಕ್ಕೆ 3.06 ಲಕ್ಷಕ್ಕೆ ಬುಕ್ಕಿಂಗ್ ಇಳಿಕೆಯಾಗಿದ್ದು, ವಿತರಣಾ ಅವಧಿಯೂ ಕ್ರಮೇಣ ಸುಧಾರಿಸಲಾಗುತ್ತಿದೆ ಎಂದರು.

ಎಲ್​​ಪಿಜಿ ಸೇವೆಗಳಲ್ಲಿ ಡಿಜಿಟಲ್ ಬಳಕೆ ಸುಧಾರಣೆ

ಎಲ್​​ಪಿಜಿ ಸೇವೆಗಳಲ್ಲಿ ಡಿಜಿಟಲ್ ಬಳಕೆಯು ಗಣನೀಯವಾಗಿ ಸುಧಾರಿಸಿದ್ದು, ಶೇಕಡಾ 94.5 ರಷ್ಟು ಬುಕ್ಕಿಂಗ್ ಡಿಜಿಟಲ್ ಮೂಲಕ ನಡೆಯುತ್ತಿವೆ. ಡೆಲಿವರಿ ಅಥೆಂಟಿಕೇಶನ್ ಕೋಡ್ (ಡಿಎಸಿ) ವ್ಯವಸ್ಥೆಯ ಪಾಲನೆಯಲ್ಲಿ ಗಮನಾರ್ಹ ಏರಿಕೆಯಾಗಿದ್ದು, ಇದು ವಿತರಣೆಯಲ್ಲಿ ಪಾರದರ್ಶಕತೆ ಹೆಚ್ಚಿಸಿದೆ ಹಾಗೂ ಸಿಲಿಂಡರ್​ಗಳು ಸರಿಯಾದ ಗ್ರಾಹಕರಿಗೆ ತಲುಪಿಸುತ್ತದೆ.

ವಾಣಿಜ್ಯ ಎಲ್‍.ಪಿ.ಜಿ. ಪೂರೈಕೆ ಕುರಿತು ಮಾಹಿತಿ ನೀಡಿದ ಅವರು, ಮಾರ್ಚ್ 2026ರಲ್ಲಿ ಕರ್ನಾಟಕ ಸರ್ಕಾರವು ಹೊರಡಿಸಿದ ನಿರ್ದೇಶನಗಳ ಅನುಸಾರವಾಗಿ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು ಮತ್ತು ಸಾರಿಗೆಯಂತಹ ಅಗತ್ಯ ಸೇವೆಗಳಿಗೆ ಆದ್ಯತೆ ನೀಡಿ ವಾಣಿಜ್ಯ ಎಲ್​​ಪಿಜಿ ಪೂರೈಕೆಯನ್ನು ನಿರ್ವಹಿಸಲಾಗುತ್ತಿದೆ. ಸಿಎನ್​ಜಿ ಬಳಕೆಯಲ್ಲಿನ ಸ್ಥಿರ ಬೆಳವಣಿಗೆ ಮತ್ತು ಸಿಟಿ ಗ್ಯಾಸ್ ವಿತರಣಾ ಜಾಲಗಳ ವಿಸ್ತರಣೆಯಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಗೃಹಬಳಕೆ ಎಲ್​ಪಿಜಿ ಸಿಲಿಂಡರ್​ಗಾಗಿ ರಾಜಧಾನಿ ಜನರ ಕ್ಯೂ!

ಆಟೋ ಎಲ್​ಪಿಜಿ ಗೆ ಸಂಬಂಧಿಸಿದಂತೆ, ಖಾಸಗಿ ಕಂಪನಿಗಳ ಕಾರ್ಯಾಚರಣೆ ಕಡಿಮೆಯಾದ ಕಾರಣ ತೈಲ ಮಾರುಕಟ್ಟೆ ಕಂಪನಿಗಳ ಮಳಿಗೆಗಳಲ್ಲಿ ಬೇಡಿಕೆ ಹೆಚ್ಚಾಗಿರುವುದು ಕಂಡುಬಂದಿದೆ. ಪ್ರಸ್ತುತ ಕರ್ನಾಟಕದಲ್ಲಿ ತೈಲ ಮಾರುಕಟ್ಟೆ ಕಂಪನಿಗಳು ಕೇವಲ ಶೇ 20ರಷ್ಟು ಮಾರುಕಟ್ಟೆ ಪಾಲನ್ನು ಮಾತ್ರ ಹೊಂದಿವೆ ಎಂಬುದು ಗಮನಾರ್ಹ. ಈ ಸೀಮಿತ ಅಸ್ತಿತ್ವ ಮತ್ತು ವಿತರಣಾ ಮೂಲಸೌಕರ್ಯದ ಮಿತಿಗಳ ನಡುವೆಯೂ, ಹೆಚ್ಚಿದ ಬೇಡಿಕೆಯನ್ನು ಪೂರೈಸಲು ತೈಲ ಕಂಪನಿಗಳು ತಮ್ಮ ಅಸ್ತಿತ್ವದಲ್ಲಿರುವ ಸಾಮರ್ಥ್ಯವನ್ನು ಮೀರಿ ಎಲ್ಲ ಪ್ರಯತ್ನಗಳನ್ನು ಮಾಡುತ್ತಿವೆ ಎಂದು ಹೇಳಿದರು.

ದೇಶದಲ್ಲಿ 5.01 ಲಕ್ಷ ಪಿಎನ್​ಜಿ ಸಂಪರ್ಕ: ಸಂಜಯಕುಮಾರ ಸಿಂಗ್

ಗೇಲ್ ಕಂಪನಿಯ ಪ್ರಧಾನ ವ್ಯವಸ್ಥಾಪಕ ಸಂಜಯಕುಮಾರ ಸಿಂಗ್ ಮಾತನಾಡಿ, ಪಶ್ಚಿಮ ಏಷ್ಯಾದಲ್ಲಿ ಬಿಕ್ಕಟ್ಟು ಆರಂಭವಾದಾಗಿನಿಂದ ಈವರೆಗೆ ದೇಶದಲ್ಲಿ 5.01 ಲಕ್ಷ ಪಿಎನ್​ಜಿ ಸಂಪರ್ಕವನ್ನು ಕಲ್ಪಿಸಲಾಗಿದೆ. ಗ್ರಾಹಕರು ಆನ್​​ಲೈನ್‍ ಅಥವಾ ನೇರವಾಗಿ ಕಚೇರಿಗೆ ಬಂದು ಪಿಎನ್​ಜಿ ಸಂಪರ್ಕ ಪಡೆಯಬಹುದು. ಪಿಎನ್​​ಜಿ ಸಂಪರ್ಕದ ಜಾಲವನ್ನು ಮತ್ತಷ್ಟು ಬಲಪಡಿಸಲು ಹೊಟೇಲ್​ ಸಂಘಗಳು ಹಾಗೂ ಅಪಾರ್ಟ್‌ಮೆಂಟ್‌ ಮಾಲೀಕರ ಜೊತೆ ನಿರಂತರ ಮಾತುಕತೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಎಲ್​ಪಿಜಿಯಿಂದ ಪಿಎನ್​ಜಿಗೆ ಬದಲಾಗಿ: ಎಸ್​ಜಿ ರವೀಂದ್ರ

ಬೆಂಗಳೂರಿನ ಪಿಐಬಿ ಹೆಚ್ಚುವರಿ ಮಹಾನಿರ್ದೇಶಕ ಎಸ್​ಜಿ ರವೀಂದ್ರ ಮಾತನಾಡಿ, ಗ್ರಾಹಕರು ಪಿಎನ್​ಜಿ ಸೌಲಭ್ಯಕ್ಕೆ ವರ್ಗಾಯಿಸುವಂತೆ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ. ಇದು ಕಡಿಮೆ ವೆಚ್ಚದಾಯಕ ಹಾಗೂ ಸುಲಭವಾಗಿ ಬಳಸಿಕೊಳ್ಳಬಹುದು ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

MI vs CSK IPL 2026 Live Score: ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ಕೆ – Kannada News | Mumbai Indians vs Chennai Super Kings IPL 2026 Live Cricket Score MI vs CSK Match on 23rd April latest news in Kannada

ಐಪಿಎಲ್ 2026 ರ 33 ನೇ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯುತ್ತಿದೆ. ಮುಂಬೈ ತಂಡವು ಈ ಪಂದ್ಯವನ್ನು ತನ್ನ ತವರು ಮೈದಾನವಾದ ವಾಂಖೆಡೆ ಕ್ರೀಡಾಂಗಣದಲ್ಲಿ ಆಡುತ್ತಿದೆ. ಎರಡೂ ತಂಡಗಳ ನಡುವಿನ ಪಂದ್ಯಗಳನ್ನು ಐಪಿಎಲ್​ನ ಎಲ್ ಕ್ಲಾಸಿಕೊ ಎಂದೂ ಕರೆಯಲಾಗುತ್ತದೆ. ಈ ಪಂದ್ಯದಲ್ಲಿ, ಎರಡೂ ತಂಡಗಳು ಆವೃತ್ತಿಯ ಮೂರನೇ ಗೆಲುವನ್ನು ಹುಡುಕುತ್ತಿವೆ. ಎರಡೂ ತಂಡಗಳು ಇಲ್ಲಿಯವರೆಗೆ ಆರು ಪಂದ್ಯಗಳಲ್ಲಿ ನಾಲ್ಕರಲ್ಲಿ ಸೋತಿವೆ.

Source link

ವಿಜಯ್ ಪಕ್ಷಕ್ಕೆ ಮತ ಹಾಕಿ ಖುಷಿಯಿಂದ ಪೋಸ್ ಕೊಟ್ಟ ನಟಿ ತ್ರಿಶಾ ಕೃಷ್ಣನ್ – Kannada News | Trisha Krishnan hints support for Thalapathy Vijay TVK Party in Tamil Nadu Elections 2026

ತಮಿಳುನಾಡು ವಿಧಾನಸಭಾ ಚುನಾವಣೆ (Tamil Nadu Election) ಇಂದು (ಏಪ್ರಿಲ್ 23) ನಡೆದಿದೆ. ಮತದಾನದ ಪ್ರಕ್ರಿಯೆಯಲ್ಲಿ ಸಿನಿಮಾ ತಾರೆಯರು ಪಾಲ್ಗೊಂಡಿದ್ದಾರೆ. ನಟ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷದ ಭವಿಷ್ಯ ಏನಾಗಲಿದೆ ಎಂಬುದನ್ನು ತಿಳಿಯಲು ಜನರು ಕಾದಿದ್ದಾರೆ. ವಿಜಯ್ ಅವರ ಆಪ್ತ ಗೆಳತಿ ಎನ್ನಲಾದ ನಟಿ ತ್ರಿಶಾ ಕೃಷ್ಣನ್ (Trisha Krishnan) ಕೂಡ ಬಂದು ಮತದಾನ ಮಾಡಿದ್ದಾರೆ. ವೋಟ್ ಹಾಕಿದ ಬಳಿಕ ಅವರು ಒಂದು ಫೋಟೋ ಹಂಚಿಕೊಂಡಿದ್ದಾರೆ. ಅದರಲ್ಲಿ ಒಂದು ಸಂದೇಶ ನೀಡಿದ್ದಾರೆ.

ಚೆನ್ನೈನಲ್ಲಿ ಮತದಾನ ಮಾಡಿದ ಬಳಿಕ ತ್ರಿಶಾ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಬೆರಳಿನ ಶಾಯಿ ತೋರಿಸುತ್ತಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಆದರೆ, ಈ ಫೋಟೋಕ್ಕಿಂತ ಹೆಚ್ಚಾಗಿ ಅವರು ಬಳಸಿದ ಹಾಡು ಈಗ ಸುದ್ದಿಯಲ್ಲಿದೆ. ತ್ರಿಶಾ ಮತ್ತು ವಿಜಯ್ ಜೋಡಿಯ ಸೂಪರ್ ಹಿಟ್ ಚಿತ್ರ ‘ಗಿಲ್ಲಿ’ ಹಾಡನ್ನು ಅವರು ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಆಗಿ ಬಳಸಿದ್ದಾರೆ.

ಅಚ್ಚರಿಯ ವಿಷಯವೆಂದರೆ, ಅವರು ಆ ಹಾಡಿನಲ್ಲಿ ವಿಸಿಲ್ ಬರುವ ಭಾಗವನ್ನೇ ಆರಿಸಿಕೊಂಡಿದ್ದಾರೆ. ವಿಜಯ್ ಅವರ TVK ಪಕ್ಷದ ಅಧಿಕೃತ ಚಿಹ್ನೆ ವಿಸಿಲ್ ಆಗಿರುವುದರಿಂದ, ತ್ರಿಶಾ ಅವರು ತಾವು ವಿಜಯ್‌ಗೆ ಮತ ಹಾಕಿರುವುದಾಗಿ ಪರೋಕ್ಷವಾಗಿ ಅಭಿಮಾನಿಗಳಿಗೆ ತಿಳಿಸಿದಂತಾಗಿದೆ. ಅದು ಅಭಿಮಾನಿಗಳಿಗೆ ಸುಲಭವಾಗಿ ಅರ್ಥ ಆಗಿದೆ. ಆ ಬಗ್ಗೆ ಅನೇಕರು ಕಮೆಂಟ್ ಮಾಡಿದ್ದಾರೆ.

ತ್ರಿಶಾ ಅವರ ಈ ಪೋಸ್ಟ್ ನೋಡಿ ಖುಷಿಯಾದ ವಿಜಯ್ ಅಭಿಮಾನಿಗಳು ಕಾಮೆಂಟ್ ಬಾಕ್ಸ್‌ನಲ್ಲಿ ಹಬ್ಬ ಮಾಡುತ್ತಿದ್ದಾರೆ. ‘ಕೋಡ್ ವರ್ಡ್ ಗೊತ್ತಾಯಿತು’, ‘ಇದು ಅತ್ತಿಗೆಯ ಕಡೆಯಿಂದ ಸಿಕ್ಕ ಗ್ರೀನ್ ಸಿಗ್ನಲ್’ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು, ಕೆಲವರು ‘ಹಾಡಿನ ಮೂಲಕವೇ ಯಾರಿಗೆ ವೋಟ್ ಹಾಕಿದ್ದಾರೆಂದು ತಿಳಿಸಿಬಿಟ್ಟರು’ ಎಂದು ಅಭಿಪ್ರಾಯ ತಿಳಿಸಿದ್ದಾರೆ.

ಇದನ್ನೂ ಓದಿ: ವಿಜಯ್ ಜೊತೆಗಿನ ಅಫೇರ್ ಬಗ್ಗೆ ನೇರ ಪ್ರಶ್ನೆ: ತ್ರಿಶಾ ಪ್ರತಿಕ್ರಿಯೆ ಹೇಗಿತ್ತು ನೋಡಿ

ತಾಯಿ ಉಮಾ ಅವರೊಂದಿಗೆ ಮತಗಟ್ಟೆಗೆ ಬಂದ ತ್ರಿಶಾ ಅವರು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ‘ದಯವಿಟ್ಟು ಎಲ್ಲರೂ ಬಂದು ಮತದಾನ ಮಾಡಿ. ಇದು ನಿಮ್ಮ ಹಕ್ಕು ಮತ್ತು ಕರ್ತವ್ಯ’ ಎಂದು ಮನವಿ ಮಾಡಿದರು. ವಿಜಯ್ ಮತ್ತು ತ್ರಿಶಾ ನಡುವಿನ ಒಡನಾಟ ಜಾಸ್ತಿ ಆಗಿದೆ. ಅದರ ಬೆನ್ನಲ್ಲೇ ವಿಜಯ್ ಪತ್ನಿ ಸಂಗೀತಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರಿನ ರಾಂಪುರ ಬಳಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ – Kannada News | A massive fire has erupted In Plastic recycling godown Near Rampura at bengaluru

ಬೆಂಗಳೂರು, (ಏಪ್ರಿಲ್ 23): ಬೆಂಗಳೂರಿನ (Bengaluru) ರಾಂಪುರ ಬಳಿ ಭಾರೀ ಅಗ್ನಿ (Fire) ದುರಂತ ಸಂಭವಿಸಿದೆ. ದೊಡ್ಡಗುಬ್ಬಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ರಾಂಪುರ ಗ್ರಾಮದಲ್ಲಿ ಅನುಪಯುಕ್ತ ವಸ್ತುಗಳ (ಗುಜರಿ) ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಸುತ್ತ 10 ಕಿಲೋ ಮೀಟರ್ ವ್ಯಾಪ್ತಿಗೂ ದಟ್ಟ ಹೊಗೆ ಗೋಚರಿಸುತ್ತಿದೆ. ಅಷ್ಟರ ಮಟ್ಟಿಗೆ ಬೆಂಕಿ ಹೊತ್ತಿಕೊಂಡಿದೆ. ದೊಡ್ಡ ಪ್ರಮಾಣದಲ್ಲಿ ಹೊಗೆ ಆವರಿಸುತ್ತಿರುವರಿಂದ ಸುತ್ತಮುತ್ತ ಆತಂಕದ ವಾತವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ವಾಹನಗಳು ಸಹ ದೌಡಾಯಿಸಿದ್ದು, ಬೆಂಕಿ ನಂದಿಸಲು ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version