Tamil Nadu Elections: 74 ವರ್ಷದ ದಾಖಲೆ ಮುರಿದ ತಮಿಳುನಾಡು; ಇಂದಿನ ಚುನಾವಣೆಯಲ್ಲಿ ಶೇ. 82.24ರಷ್ಟು ಮತದಾನ – Kannada News | Assembly Elections Tamil Nadu records historic 82.24 percent voting highest since 1952

ಚೆನ್ನೈ, ಏಪ್ರಿಲ್ 23: ತಮಿಳುನಾಡು ವಿಧಾನಸಭಾ ಚುನಾವಣೆ (Tamil Nadu Assembly Elections) ಇಂದು ಸಂಜೆ 6 ಗಂಟೆಗೆ ಮುಕ್ತಾಯವಾಯಿತು. ಅಧಿಕಾರಿಗಳು ಮುಕ್ತಾಯದ ಸಮಯಕ್ಕಿಂತ ಮೊದಲು ಮತಗಟ್ಟೆಗಳನ್ನು ತಲುಪಿದ ಮತದಾರರಿಗೆ ತಮ್ಮ ಮತಪತ್ರಗಳನ್ನು ಚಲಾಯಿಸಲು ಅವಕಾಶ ನೀಡಿದರು. ಇದೇ ಮೊದಲ ಬಾರಿಗೆ ದಾಖಲೆಯ ಶೇ. 82.24ರಷ್ಟು ಮತದಾನ ದಾಖಲಾಗಿದೆ. 5.73 ಕೋಟಿ ಅರ್ಹ ಮತದಾರರಲ್ಲಿ ಸುಮಾರು ಶೇ. 82.24ರಷ್ಟು ಜನರು ತಮ್ಮ ಮತದಾನ ಮಾಡಿದರು. 75,064 ಮತಗಟ್ಟೆಗಳಲ್ಲಿ ಮತದಾನ ನಡೆಯಿತು. 4,023 ಅಭ್ಯರ್ಥಿಗಳು ಇಂದಿನ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. 74 ವರ್ಷಗಳ ಬಳಿಕ ತಮಿಳುನಾಡಿನಲ್ಲಿ ಇಷ್ಟು ದೊಡ್ಡ ಪ್ರಮಾಣದ ಮತದಾನ ನಡೆದಿದೆ.

ತಮಿಳುನಾಡಿನ 8 ಜಿಲ್ಲೆಗಳನ್ನು ಹೊರತುಪಡಿಸಿ, ಉಳಿದ 30 ಜಿಲ್ಲೆಗಳಲ್ಲಿ ಶೇ.80ಕ್ಕಿಂತ ಹೆಚ್ಚು ಮತದಾನ ನಡೆದಿದೆ. ತಮಿಳುನಾಡು ರಾಜ್ಯದ ಪಶ್ಚಿಮ ಜಿಲ್ಲೆಗಳು ರಾಜ್ಯದ ಇತರ ಭಾಗಗಳಿಗಿಂತ ಹೆಚ್ಚಿನ ಮತಗಳನ್ನು ದಾಖಲಿಸಿವೆ. ಕರೂರ್‌ನಲ್ಲಿ ಗರಿಷ್ಠ ಶೇ. 89ರಷ್ಟು ಮತಗಳು ದಾಖಲಾಗಿವೆ. 16 ಕ್ಷೇತ್ರಗಳ ಪೈಕಿ ಚೆನ್ನೈ ಜಿಲ್ಲೆಯಲ್ಲಿ ಶೇ. 83.44ರಷ್ಟು ಮತಗಳು ಮತ್ತು 12 ಕ್ಷೇತ್ರಗಳಲ್ಲಿ ಶೇ. 80ಕ್ಕಿಂತ ಹೆಚ್ಚು ಮತಗಳನ್ನು ಚಲಾಯಿಸಲಾಗಿದೆ.

ಇದನ್ನೂ ಓದಿ: ಚುನಾವಣಾ ಆಯೋಗದಿಂದ ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ 1,000 ಕೋಟಿಗೂ ಹೆಚ್ಚು ಹಣ ವಶಕ್ಕೆ

ತಮಿಳುನಾಡಿನ ಎಲ್ಲಾ 234 ಕ್ಷೇತ್ರಗಳಿಗೆ ಇಂದು ಒಂದೇ ಹಂತದಲ್ಲಿ ಚುನಾವಣೆ ನಡೆದಿದ್ದು, ರಾಜ್ಯದಾದ್ಯಂತ ಜನರು ಬೆಳಗಿನ ಜಾವದಿಂದಲೇ ಹೆಚ್ಚಿನ ಉತ್ಸಾಹದಿಂದ ಮತ ಚಲಾಯಿಸಿದ್ದಾರೆ. ತಮಿಳುನಾಡಿನಲ್ಲಿ ಈ ಹಿಂದೆ 2011ರ ವಿಧಾನಸಭಾ ಚುನಾವಣೆಯಲ್ಲಿ ಶೇ. 78.29ರಷ್ಟು ಮತದಾನ ದಾಖಲಾಗಿತ್ತು. ಇಂದಿನ ಶೇ. 82.24ರಷ್ಟು ಮತದಾನವು ಆ ದಾಖಲೆಯನ್ನು ಮೀರಿಸಿದೆ. ಇಂದು ಸರಿಸುಮಾರು 4.71 ಕೋಟಿ ಜನರು ತಮ್ಮ ಮತದಾನವನ್ನು ಚಲಾಯಿಸಿದ್ದಾರೆ.

ಕರೂರು ಜಿಲ್ಲೆಯಲ್ಲಿ ಶೇ. 89ರಷ್ಟು ಮತದಾನವಾಗಿದ್ದು, ರಾಜ್ಯದಲ್ಲಿ ಅತಿ ಹೆಚ್ಚು ಮತದಾನವಾಗಿದೆ. ಚೆನ್ನೈ ಜಿಲ್ಲೆಯಲ್ಲಿ ಶೇ. 81.34ರಷ್ಟು ಮತದಾನವಾಗಿದ್ದರೆ, ಕನ್ಯಾಕುಮಾರಿಯಲ್ಲಿ ಶೇ. 73.44ರಷ್ಟು ಮತದಾನವಾಗಿದೆ. ಎಡಪ್ಪಾಡಿ ಪಳನಿಸ್ವಾಮಿ ಅವರ ಕ್ಷೇತ್ರ ಎಡಪ್ಪಾಡಿಯಲ್ಲಿ ಶೇ. 89.09ರಷ್ಟು ಮತದಾನ ದಾಖಲಾಗಿದೆ. ದಳಪತಿ ವಿಜಯ್ ಅವರ ಪೆರಂಬೂರ್ ಕ್ಷೇತ್ರದಲ್ಲಿ ಶೇ. 86.72ರಷ್ಟು ಮತದಾನವಾಗಿದ್ದರೆ, ಅವರ ಇನ್ನೊಂದು ಕ್ಷೇತ್ರವಾದ ತಿರುಚ್ಚಿ ಪೂರ್ವದಲ್ಲಿ ಶೇ. 79.32ರಷ್ಟು ಮತದಾನವಾಗಿದೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಕೊಳತ್ತೂರು ಕ್ಷೇತ್ರದಲ್ಲಿ ಶೇ. 83.58ರಷ್ಟು ಮತ್ತು ಸೀಮನ್ ಅವರ ಕಾರೈಕುಡಿ ಕ್ಷೇತ್ರದಲ್ಲಿ ಶೇ. 71.88ರಷ್ಟು ಮತದಾನ ದಾಖಲಾಗಿದೆ.

ಇದನ್ನೂ ಓದಿ: ತಮಿಳುನಾಡು ಚುನಾವಣೆಯಲ್ಲಿ ಮತ ಹಾಕಿದ ಸೆಲೆಬ್ರಿಟಿಸ್; ಇಲ್ಲಿವೆ ಫೋಟೋಸ್

ಹಿಂದಿನ ತಮಿಳುನಾಡು ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಮತದಾನದ ಶೇಕಡಾವಾರು:

2021 – 73.63%

2016 – 74.81%

2011 – 78.01%

2006 – 70.82%

2001 – 59.07%

1996 – 66.95%

1991 – 63.84%

1989 – 69.69%

1984 – 73.47% 1

980 – 65.42%

1977 – 61.58%

1971 – 72.10%

1967 – 76.57%

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

SSLC ಪರೀಕ್ಷೆ: ಸರ್ಕಾರ ಅಂಕಕ್ಕೆ ಕೋಕ್ ನೀಡಲು ಹೊರಟಿದ್ದ ತೃತೀಯ ಭಾಷೆಯಲ್ಲಿ ಶೇ. 98.55 ಫಲಿತಾಂಶ – Kannada News | Karnataka SSLC Exam Result 2026: 98.55 percent Student Pass in Third Language

ಬೆಂಗಳೂರು, ಏಪ್ರಿಲ್​​ 23: ವಿದ್ಯಾರ್ಥಿಗಳ ಮೇಲಿನ ಹೊರೆ ತಗ್ಗಿಸುವ ನಿಟ್ಟಿನಲ್ಲಿ SSLC ಪರೀಕ್ಷೆಯ ತೃತೀಯ ಭಾಷೆಗೆ ಅಂಕಗಳ ಬದಲು ಗ್ರೇಡ್​​ ನೀಡಲು ರಾಜ್ಯ ಸರ್ಕಾರ ಮುಂದಾಗಿತ್ತು. ಒಟ್ಟು 625 ಅಂಕಗಳ ಬದಲಿಗೆ 525 ಅಂಕಗಳಿಗೆ ಪರೀಕ್ಷಾ ಮೌಲ್ಯಮಾಪನವನ್ನು ಸೀಮಿತಗೊಳಿಸುವ ಬಗ್ಗೆ ನಿರ್ಧರಿಸಲಾಗಿತ್ತು. ತ್ರಿಭಾಷಾ ಸೂತ್ರದ ಅಡಿಯಲ್ಲಿ ತೃತೀಯ ಭಾಷೆಯನ್ನು ಕೇವಲ ಅರ್ಹತಾ ವಿಷಯವನ್ನಾಗಿ ಪರಿಗಣಿಸಿ, ಗ್ರೇಡ್ ನೀಡುವ ಮೂಲಕ ಒಟ್ಟು ಶೇಕಡಾವಾರು ಅಂಕಗಳ ಲೆಕ್ಕಾಚಾರದಿಂದ ಇದನ್ನು ಹೊರಗಿಡಲು ಉದ್ದೇಶಿಸಿತ್ತು. ಆದರೆ ಅಂತಿಮವಾಗಿ ಕೋರ್ಟ್​​ ಆದೇಶದಂತೆ ತೃತೀಯ ಭಾಷೆಗೂ ಅಂಕಗಳನ್ನು ನೀಡಲಾಗಿದೆ. ಇಲ್ಲಿ ಗಮನಾರ್ಹ ವಿಷಯವೆಂದರೆ ತೃತೀಯ ಭಾಷೆಯಲ್ಲಿ ಶೇಕಡಾ 98.55ರಷ್ಟು ಫಲಿತಾಂಶ ಬಂದಿದೆ. ಅಂದರೆ ಪರೀಕ್ಷೆ ಬರೆದಿದ್ದ 7,69,751 ವಿದ್ಯಾರ್ಥಿಗಳ ಪೈಕಿ 7,58,623 ಮಕ್ಕಳು ಉತ್ತೀರ್ಣರಾಗಿದ್ದಾರೆ.

ವಿಷಯವಾರು ವಿದ್ಯಾರ್ಥಿಗಳ ಫಲಿತಾಂಶ

ವಿಷಯ ಪರೀಕ್ಷೆ ಬರೆದವರ ಸಂಖ್ಯೆ ಉತ್ತೀರ್ಣರಾದವರ ಸಂಖ್ಯೆ ಶೇಕಡಾವಾರು ಫಲಿತಾಂಶ
ಪ್ರಥಮ ಭಾಷೆ 769926 748660 97.24
ದ್ವಿತೀಯ ಭಾಷೆ 769795 755369 98.13
ತೃತೀಯ ಭಾಷೆ 769751 758623 98.55
ಗಣಿತ 769447 753882 97.98
ವಿಜ್ಞಾನ 769507 752611 97.8
ಸಮಾಜ ವಿಜ್ಞಾನ 769714 753127 97.85

ಇದನ್ನೂ ಓದಿ: Karnataka SSLC Result 2026; 625ಕ್ಕೆ 625 ಅಂಕ ಪಡೆದ ಟಾಪರ್ಸ್ ಯಾರು? ಇಲ್ಲಿದೆ ಮಾಹಿತಿ

ಶೇ. 100 ಫಲಿತಾಂಶ ಪಡೆದ ಶಾಲೆಗಳೆಷ್ಟು?

2,393 ಸರ್ಕಾರಿ, 824 ಅನುದಾನಿತ, 2959 ಖಾಸಗಿ ಶಾಲೆಗಳು ಈ ಬಾರಿ ಶೇ.100ರಷ್ಟು ಫಲಿತಾಂಶವನ್ನು ದಾಖಲಿಸಿವೆ. ಹಾಗೆಯೇ 5 ಅನುದಾನಿತ ಶಾಲೆಗಳು ಮತ್ತು 22 ಖಾಸಗಿ ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಪರೀಕ್ಷೆ ಬರೆದಿದ್ದ ಗ್ರಾಮಾಂತರ ಭಾಗದ 4,42,280 ವಿದ್ಯಾರ್ಥಿಗಳ ಪೈಕಿ 4,19,261 ಮಕ್ಕಳು ಪಾಸ್ ಆಗಿದ್ದಾರೆ. ಹಾಗೆಯೇ ನಗರ ಪ್ರದೇಶ 3,27,929 ಮಕ್ಕಳ ಪೈಕಿ 3,05,533 ಮಕ್ಕಳು ತೇರ್ಗಡೆ ಹೊಂದಿದ್ದಾರೆ.

68,207 ವಿದ್ಯಾರ್ಥಿಗಳು A+ ಶ್ರೇಣಿ(90ರಿಂದ 100%) 1,30,403 ಮಂದಿ A ಶ್ರೇಣಿ(80ರಿಂದ 90%), 1,40,963 ವಿದ್ಯಾರ್ಥಿಗಳು B+ ಶ್ರೇಣಿ(70ರಿಂದ 79%), 1,42,645 ಮಕ್ಕಳು B ಶ್ರೇಣಿ(60ರಿಂದ 69%), 1,28,722 ವಿದ್ಯಾರ್ಥಿಗಳು C+ ಶ್ರೇಣಿ(50ರಿಂದ 59%) ಮತ್ತು 1,13,854 ಮಂದಿ C ಶ್ರೇಣಿಯಲ್ಲಿ(33ರಿಂದ 49%) ಉತ್ತೀರ್ಣರಾಗಿರೋದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:16 pm, Thu, 23 April 26

Source link

ಕರ್ನಾಟಕದಲ್ಲಿ ತೈಲ ಮತ್ತು ಅನಿಲ ಪೂರೈಕೆ ಸ್ಥಿರ: ಆತಂಕಪಡುವ ಅಗತ್ಯವಿಲ್ಲ ಎಂದ ತೈಲ ಕಂಪನಿಗಳು – Kannada News | Karnataka Fuel Stability: Oil and Gas Supply Secure Amidst Global Tensions

ಪಿಐಬಿ ಮಾಧ್ಯಮಗೋಷ್ಠಿImage Credit source: pib.gov.in

ಬೆಂಗಳೂರು, ಏಪ್ರಿಲ್​ 23: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಭೌಗೋಳಿಕ ಉದ್ವಿಗ್ನತೆ ಮತ್ತು ಜಾಗತಿಕ ವಿದ್ಯಮಾನಗಳ ಮಧ್ಯೆ ಇತ್ತ ಕರ್ನಾಟಕದಲ್ಲಿ (Karnataka) ತೈಲ ಮತ್ತು ಅನಿಲ ಪೂರೈಕೆ ಸ್ಥಿರ, ಸದೃಢ ಮತ್ತು ಸಂಪೂರ್ಣ ನಿಯಂತ್ರಣದಲ್ಲಿದೆ. ರಾಜ್ಯವು ಸುಸಂಘಟಿತ ಪೆಟ್ರೋಲಿಯಂ ಮೂಲಸೌಕರ್ಯ ಜಾಲವನ್ನು ಹೊಂದಿದೆ ಎಂದು ತೈಲ ಮಾರುಕಟ್ಟೆ ಕಂಪನಿಗಳು ಮಾಹಿತಿ ನೀಡಿವೆ.

ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಕೊರತೆಯಿಲ್ಲ: ಸಿದ್ಧಾರ್ಥ ಅಗರವಾಲ್

ಭಾರತ ಸರ್ಕಾರದ ವಾರ್ತಾ ಶಾಖೆ (ಪಿಐಬಿ) ಹಾಗೂ ಭಾರತದ ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ, ಹಿಂದೂಸ್ತಾನ್ ಪೆಟ್ರೋಲಿಯಂ ಮತ್ತು ಗೇಲ್‍ ಇಂಡಿಯಾ ಜಂಟಿಯಾಗಿ ಮಾಧ್ಯಮಗೋಷ್ಠಿ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಾರ್ಯಕಾರಿ ನಿರ್ದೇಶಕ ಸಿದ್ಧಾರ್ಥ ಅಗರವಾಲ್, ರಾಜ್ಯವು 15 ಎಂಎಂಟಿಪಿಎ (ಮೆಟ್ರಿಕ್ ಟನ್ಸ್ ಪರ್ ಆನಮ್) ಕಚ್ಚಾ ತೈಲ ಸಂಸ್ಕರಣಾ ಸಾಮರ್ಥ್ಯದ ಸಂಸ್ಕರಣಾಗಾರವನ್ನು ಹೊಂದಿದ್ದು, ರಾಜ್ಯದ ಯಾವುದೇ ಭಾಗದಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ಕೊರತೆಯಿಲ್ಲ ಮತ್ತು ಎಲ್ಲಾ ರಿಟೇಲ್ ಮಾರಾಟ ಮಳಿಗೆಗಳು ಸಹಜವಾಗಿ ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಸಂಸ್ಕರಣಾಗಾರಗಳಿಂದ ಟರ್ಮಿನಲ್‍, ಡಿಪೋ ಹಾಗೂ ರಿಟೇಲ್ ಮಳಿಗೆಗಳವರೆಗೆ ಯಾವುದೇ ಅಡೆತಡೆಯಿಲ್ಲದೆ ತೈಲದ ಪೂರೈಕೆ ಸುಗಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಎಲ್‌ಪಿಜಿ ಕೊರತೆ, ದರ ಏರಿಕೆಗೆ ಸೆಡ್ಡು: ಹೋಟೆಲ್ ಕಸ ನೀಡಿ ಬಯೋಗ್ಯಾಸ್ ಪಡೆಯಲು ಮುಂದಾದ ಬೆಂಗಳೂರಿನ ಹೋಟೆಲ್‌ಗಳು!

ಗೃಹಬಳಕೆಯ ಎಲ್​​ಪಿಜಿಗೆ ಸಂಬಂಧಿಸಿದಂತೆ, ಕರ್ನಾಟಕವು ಸಮರ್ಪಕ ಮತ್ತು ನಿರಂತರ ಪೂರೈಕೆಯನ್ನು ಪಡೆಯುತ್ತಿದೆ. ಮಾರ್ಚ್​​ನಲ್ಲಿ ಆತಂಕ ಕಾರಣಕ್ಕೆ ಖರೀದಿ ಹಿನ್ನೆಲೆ ಬುಕ್ಕಿಂಗ್​​ಗಳು ದಿನಕ್ಕೆ 3.75 ಲಕ್ಷಕ್ಕೆ ಏರಿಕೆಯಾಗಿದ್ದು, ಇದರಿಂದ ವಿತರಣಾ ಅವಧಿ ಸ್ವಲ್ಪ ವಿಳಂಬವಾಗಿತ್ತು. ಆದರೆ, ಪ್ರಸ್ತುತ ಪರಿಸ್ಥಿತಿ ಸ್ಥಿರವಾಗಿದೆ. ಇದೀಗ ದಿನಕ್ಕೆ 3.06 ಲಕ್ಷಕ್ಕೆ ಬುಕ್ಕಿಂಗ್ ಇಳಿಕೆಯಾಗಿದ್ದು, ವಿತರಣಾ ಅವಧಿಯೂ ಕ್ರಮೇಣ ಸುಧಾರಿಸಲಾಗುತ್ತಿದೆ ಎಂದರು.

ಎಲ್​​ಪಿಜಿ ಸೇವೆಗಳಲ್ಲಿ ಡಿಜಿಟಲ್ ಬಳಕೆ ಸುಧಾರಣೆ

ಎಲ್​​ಪಿಜಿ ಸೇವೆಗಳಲ್ಲಿ ಡಿಜಿಟಲ್ ಬಳಕೆಯು ಗಣನೀಯವಾಗಿ ಸುಧಾರಿಸಿದ್ದು, ಶೇಕಡಾ 94.5 ರಷ್ಟು ಬುಕ್ಕಿಂಗ್ ಡಿಜಿಟಲ್ ಮೂಲಕ ನಡೆಯುತ್ತಿವೆ. ಡೆಲಿವರಿ ಅಥೆಂಟಿಕೇಶನ್ ಕೋಡ್ (ಡಿಎಸಿ) ವ್ಯವಸ್ಥೆಯ ಪಾಲನೆಯಲ್ಲಿ ಗಮನಾರ್ಹ ಏರಿಕೆಯಾಗಿದ್ದು, ಇದು ವಿತರಣೆಯಲ್ಲಿ ಪಾರದರ್ಶಕತೆ ಹೆಚ್ಚಿಸಿದೆ ಹಾಗೂ ಸಿಲಿಂಡರ್​ಗಳು ಸರಿಯಾದ ಗ್ರಾಹಕರಿಗೆ ತಲುಪಿಸುತ್ತದೆ.

ವಾಣಿಜ್ಯ ಎಲ್‍.ಪಿ.ಜಿ. ಪೂರೈಕೆ ಕುರಿತು ಮಾಹಿತಿ ನೀಡಿದ ಅವರು, ಮಾರ್ಚ್ 2026ರಲ್ಲಿ ಕರ್ನಾಟಕ ಸರ್ಕಾರವು ಹೊರಡಿಸಿದ ನಿರ್ದೇಶನಗಳ ಅನುಸಾರವಾಗಿ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು ಮತ್ತು ಸಾರಿಗೆಯಂತಹ ಅಗತ್ಯ ಸೇವೆಗಳಿಗೆ ಆದ್ಯತೆ ನೀಡಿ ವಾಣಿಜ್ಯ ಎಲ್​​ಪಿಜಿ ಪೂರೈಕೆಯನ್ನು ನಿರ್ವಹಿಸಲಾಗುತ್ತಿದೆ. ಸಿಎನ್​ಜಿ ಬಳಕೆಯಲ್ಲಿನ ಸ್ಥಿರ ಬೆಳವಣಿಗೆ ಮತ್ತು ಸಿಟಿ ಗ್ಯಾಸ್ ವಿತರಣಾ ಜಾಲಗಳ ವಿಸ್ತರಣೆಯಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಗೃಹಬಳಕೆ ಎಲ್​ಪಿಜಿ ಸಿಲಿಂಡರ್​ಗಾಗಿ ರಾಜಧಾನಿ ಜನರ ಕ್ಯೂ!

ಆಟೋ ಎಲ್​ಪಿಜಿ ಗೆ ಸಂಬಂಧಿಸಿದಂತೆ, ಖಾಸಗಿ ಕಂಪನಿಗಳ ಕಾರ್ಯಾಚರಣೆ ಕಡಿಮೆಯಾದ ಕಾರಣ ತೈಲ ಮಾರುಕಟ್ಟೆ ಕಂಪನಿಗಳ ಮಳಿಗೆಗಳಲ್ಲಿ ಬೇಡಿಕೆ ಹೆಚ್ಚಾಗಿರುವುದು ಕಂಡುಬಂದಿದೆ. ಪ್ರಸ್ತುತ ಕರ್ನಾಟಕದಲ್ಲಿ ತೈಲ ಮಾರುಕಟ್ಟೆ ಕಂಪನಿಗಳು ಕೇವಲ ಶೇ 20ರಷ್ಟು ಮಾರುಕಟ್ಟೆ ಪಾಲನ್ನು ಮಾತ್ರ ಹೊಂದಿವೆ ಎಂಬುದು ಗಮನಾರ್ಹ. ಈ ಸೀಮಿತ ಅಸ್ತಿತ್ವ ಮತ್ತು ವಿತರಣಾ ಮೂಲಸೌಕರ್ಯದ ಮಿತಿಗಳ ನಡುವೆಯೂ, ಹೆಚ್ಚಿದ ಬೇಡಿಕೆಯನ್ನು ಪೂರೈಸಲು ತೈಲ ಕಂಪನಿಗಳು ತಮ್ಮ ಅಸ್ತಿತ್ವದಲ್ಲಿರುವ ಸಾಮರ್ಥ್ಯವನ್ನು ಮೀರಿ ಎಲ್ಲ ಪ್ರಯತ್ನಗಳನ್ನು ಮಾಡುತ್ತಿವೆ ಎಂದು ಹೇಳಿದರು.

ದೇಶದಲ್ಲಿ 5.01 ಲಕ್ಷ ಪಿಎನ್​ಜಿ ಸಂಪರ್ಕ: ಸಂಜಯಕುಮಾರ ಸಿಂಗ್

ಗೇಲ್ ಕಂಪನಿಯ ಪ್ರಧಾನ ವ್ಯವಸ್ಥಾಪಕ ಸಂಜಯಕುಮಾರ ಸಿಂಗ್ ಮಾತನಾಡಿ, ಪಶ್ಚಿಮ ಏಷ್ಯಾದಲ್ಲಿ ಬಿಕ್ಕಟ್ಟು ಆರಂಭವಾದಾಗಿನಿಂದ ಈವರೆಗೆ ದೇಶದಲ್ಲಿ 5.01 ಲಕ್ಷ ಪಿಎನ್​ಜಿ ಸಂಪರ್ಕವನ್ನು ಕಲ್ಪಿಸಲಾಗಿದೆ. ಗ್ರಾಹಕರು ಆನ್​​ಲೈನ್‍ ಅಥವಾ ನೇರವಾಗಿ ಕಚೇರಿಗೆ ಬಂದು ಪಿಎನ್​ಜಿ ಸಂಪರ್ಕ ಪಡೆಯಬಹುದು. ಪಿಎನ್​​ಜಿ ಸಂಪರ್ಕದ ಜಾಲವನ್ನು ಮತ್ತಷ್ಟು ಬಲಪಡಿಸಲು ಹೊಟೇಲ್​ ಸಂಘಗಳು ಹಾಗೂ ಅಪಾರ್ಟ್‌ಮೆಂಟ್‌ ಮಾಲೀಕರ ಜೊತೆ ನಿರಂತರ ಮಾತುಕತೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಎಲ್​ಪಿಜಿಯಿಂದ ಪಿಎನ್​ಜಿಗೆ ಬದಲಾಗಿ: ಎಸ್​ಜಿ ರವೀಂದ್ರ

ಬೆಂಗಳೂರಿನ ಪಿಐಬಿ ಹೆಚ್ಚುವರಿ ಮಹಾನಿರ್ದೇಶಕ ಎಸ್​ಜಿ ರವೀಂದ್ರ ಮಾತನಾಡಿ, ಗ್ರಾಹಕರು ಪಿಎನ್​ಜಿ ಸೌಲಭ್ಯಕ್ಕೆ ವರ್ಗಾಯಿಸುವಂತೆ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ. ಇದು ಕಡಿಮೆ ವೆಚ್ಚದಾಯಕ ಹಾಗೂ ಸುಲಭವಾಗಿ ಬಳಸಿಕೊಳ್ಳಬಹುದು ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

MI vs CSK IPL 2026 Live Score: ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ಕೆ – Kannada News | Mumbai Indians vs Chennai Super Kings IPL 2026 Live Cricket Score MI vs CSK Match on 23rd April latest news in Kannada

ಐಪಿಎಲ್ 2026 ರ 33 ನೇ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯುತ್ತಿದೆ. ಮುಂಬೈ ತಂಡವು ಈ ಪಂದ್ಯವನ್ನು ತನ್ನ ತವರು ಮೈದಾನವಾದ ವಾಂಖೆಡೆ ಕ್ರೀಡಾಂಗಣದಲ್ಲಿ ಆಡುತ್ತಿದೆ. ಎರಡೂ ತಂಡಗಳ ನಡುವಿನ ಪಂದ್ಯಗಳನ್ನು ಐಪಿಎಲ್​ನ ಎಲ್ ಕ್ಲಾಸಿಕೊ ಎಂದೂ ಕರೆಯಲಾಗುತ್ತದೆ. ಈ ಪಂದ್ಯದಲ್ಲಿ, ಎರಡೂ ತಂಡಗಳು ಆವೃತ್ತಿಯ ಮೂರನೇ ಗೆಲುವನ್ನು ಹುಡುಕುತ್ತಿವೆ. ಎರಡೂ ತಂಡಗಳು ಇಲ್ಲಿಯವರೆಗೆ ಆರು ಪಂದ್ಯಗಳಲ್ಲಿ ನಾಲ್ಕರಲ್ಲಿ ಸೋತಿವೆ.

Source link

ವಿಜಯ್ ಪಕ್ಷಕ್ಕೆ ಮತ ಹಾಕಿ ಖುಷಿಯಿಂದ ಪೋಸ್ ಕೊಟ್ಟ ನಟಿ ತ್ರಿಶಾ ಕೃಷ್ಣನ್ – Kannada News | Trisha Krishnan hints support for Thalapathy Vijay TVK Party in Tamil Nadu Elections 2026

ತಮಿಳುನಾಡು ವಿಧಾನಸಭಾ ಚುನಾವಣೆ (Tamil Nadu Election) ಇಂದು (ಏಪ್ರಿಲ್ 23) ನಡೆದಿದೆ. ಮತದಾನದ ಪ್ರಕ್ರಿಯೆಯಲ್ಲಿ ಸಿನಿಮಾ ತಾರೆಯರು ಪಾಲ್ಗೊಂಡಿದ್ದಾರೆ. ನಟ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷದ ಭವಿಷ್ಯ ಏನಾಗಲಿದೆ ಎಂಬುದನ್ನು ತಿಳಿಯಲು ಜನರು ಕಾದಿದ್ದಾರೆ. ವಿಜಯ್ ಅವರ ಆಪ್ತ ಗೆಳತಿ ಎನ್ನಲಾದ ನಟಿ ತ್ರಿಶಾ ಕೃಷ್ಣನ್ (Trisha Krishnan) ಕೂಡ ಬಂದು ಮತದಾನ ಮಾಡಿದ್ದಾರೆ. ವೋಟ್ ಹಾಕಿದ ಬಳಿಕ ಅವರು ಒಂದು ಫೋಟೋ ಹಂಚಿಕೊಂಡಿದ್ದಾರೆ. ಅದರಲ್ಲಿ ಒಂದು ಸಂದೇಶ ನೀಡಿದ್ದಾರೆ.

ಚೆನ್ನೈನಲ್ಲಿ ಮತದಾನ ಮಾಡಿದ ಬಳಿಕ ತ್ರಿಶಾ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಬೆರಳಿನ ಶಾಯಿ ತೋರಿಸುತ್ತಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಆದರೆ, ಈ ಫೋಟೋಕ್ಕಿಂತ ಹೆಚ್ಚಾಗಿ ಅವರು ಬಳಸಿದ ಹಾಡು ಈಗ ಸುದ್ದಿಯಲ್ಲಿದೆ. ತ್ರಿಶಾ ಮತ್ತು ವಿಜಯ್ ಜೋಡಿಯ ಸೂಪರ್ ಹಿಟ್ ಚಿತ್ರ ‘ಗಿಲ್ಲಿ’ ಹಾಡನ್ನು ಅವರು ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಆಗಿ ಬಳಸಿದ್ದಾರೆ.

ಅಚ್ಚರಿಯ ವಿಷಯವೆಂದರೆ, ಅವರು ಆ ಹಾಡಿನಲ್ಲಿ ವಿಸಿಲ್ ಬರುವ ಭಾಗವನ್ನೇ ಆರಿಸಿಕೊಂಡಿದ್ದಾರೆ. ವಿಜಯ್ ಅವರ TVK ಪಕ್ಷದ ಅಧಿಕೃತ ಚಿಹ್ನೆ ವಿಸಿಲ್ ಆಗಿರುವುದರಿಂದ, ತ್ರಿಶಾ ಅವರು ತಾವು ವಿಜಯ್‌ಗೆ ಮತ ಹಾಕಿರುವುದಾಗಿ ಪರೋಕ್ಷವಾಗಿ ಅಭಿಮಾನಿಗಳಿಗೆ ತಿಳಿಸಿದಂತಾಗಿದೆ. ಅದು ಅಭಿಮಾನಿಗಳಿಗೆ ಸುಲಭವಾಗಿ ಅರ್ಥ ಆಗಿದೆ. ಆ ಬಗ್ಗೆ ಅನೇಕರು ಕಮೆಂಟ್ ಮಾಡಿದ್ದಾರೆ.

ತ್ರಿಶಾ ಅವರ ಈ ಪೋಸ್ಟ್ ನೋಡಿ ಖುಷಿಯಾದ ವಿಜಯ್ ಅಭಿಮಾನಿಗಳು ಕಾಮೆಂಟ್ ಬಾಕ್ಸ್‌ನಲ್ಲಿ ಹಬ್ಬ ಮಾಡುತ್ತಿದ್ದಾರೆ. ‘ಕೋಡ್ ವರ್ಡ್ ಗೊತ್ತಾಯಿತು’, ‘ಇದು ಅತ್ತಿಗೆಯ ಕಡೆಯಿಂದ ಸಿಕ್ಕ ಗ್ರೀನ್ ಸಿಗ್ನಲ್’ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು, ಕೆಲವರು ‘ಹಾಡಿನ ಮೂಲಕವೇ ಯಾರಿಗೆ ವೋಟ್ ಹಾಕಿದ್ದಾರೆಂದು ತಿಳಿಸಿಬಿಟ್ಟರು’ ಎಂದು ಅಭಿಪ್ರಾಯ ತಿಳಿಸಿದ್ದಾರೆ.

ಇದನ್ನೂ ಓದಿ: ವಿಜಯ್ ಜೊತೆಗಿನ ಅಫೇರ್ ಬಗ್ಗೆ ನೇರ ಪ್ರಶ್ನೆ: ತ್ರಿಶಾ ಪ್ರತಿಕ್ರಿಯೆ ಹೇಗಿತ್ತು ನೋಡಿ

ತಾಯಿ ಉಮಾ ಅವರೊಂದಿಗೆ ಮತಗಟ್ಟೆಗೆ ಬಂದ ತ್ರಿಶಾ ಅವರು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ‘ದಯವಿಟ್ಟು ಎಲ್ಲರೂ ಬಂದು ಮತದಾನ ಮಾಡಿ. ಇದು ನಿಮ್ಮ ಹಕ್ಕು ಮತ್ತು ಕರ್ತವ್ಯ’ ಎಂದು ಮನವಿ ಮಾಡಿದರು. ವಿಜಯ್ ಮತ್ತು ತ್ರಿಶಾ ನಡುವಿನ ಒಡನಾಟ ಜಾಸ್ತಿ ಆಗಿದೆ. ಅದರ ಬೆನ್ನಲ್ಲೇ ವಿಜಯ್ ಪತ್ನಿ ಸಂಗೀತಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರಿನ ರಾಂಪುರ ಬಳಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ – Kannada News | A massive fire has erupted In Plastic recycling godown Near Rampura at bengaluru

ಬೆಂಗಳೂರು, (ಏಪ್ರಿಲ್ 23): ಬೆಂಗಳೂರಿನ (Bengaluru) ರಾಂಪುರ ಬಳಿ ಭಾರೀ ಅಗ್ನಿ (Fire) ದುರಂತ ಸಂಭವಿಸಿದೆ. ದೊಡ್ಡಗುಬ್ಬಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ರಾಂಪುರ ಗ್ರಾಮದಲ್ಲಿ ಅನುಪಯುಕ್ತ ವಸ್ತುಗಳ (ಗುಜರಿ) ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಸುತ್ತ 10 ಕಿಲೋ ಮೀಟರ್ ವ್ಯಾಪ್ತಿಗೂ ದಟ್ಟ ಹೊಗೆ ಗೋಚರಿಸುತ್ತಿದೆ. ಅಷ್ಟರ ಮಟ್ಟಿಗೆ ಬೆಂಕಿ ಹೊತ್ತಿಕೊಂಡಿದೆ. ದೊಡ್ಡ ಪ್ರಮಾಣದಲ್ಲಿ ಹೊಗೆ ಆವರಿಸುತ್ತಿರುವರಿಂದ ಸುತ್ತಮುತ್ತ ಆತಂಕದ ವಾತವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ವಾಹನಗಳು ಸಹ ದೌಡಾಯಿಸಿದ್ದು, ಬೆಂಕಿ ನಂದಿಸಲು ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ತಂದೆ ಸಾವಿನ ನಡುವೆಯೂ SSLC ಪರೀಕ್ಷೆ ಬರೆದು ಉತ್ತೀರ್ಣನಾದ ಶಿವಮೊಗ್ಗದ ವಿದ್ಯಾರ್ಥಿ – Kannada News | SSLC Student Passes Exam After Fathers Demise With BEOs Support

ಶಿವಮೊಗ್ಗ, ಏಪ್ರಿಲ್​​ 23: ತಂದೆ ಸಾವಿನ ನಡುವೆಯೂ SSLC ಪರೀಕ್ಷೆ ಬರೆದ ಶಿವಮೊಗ್ಗದ ವಿದ್ಯಾರ್ಥಿಯೋರ್ವ ಉತ್ತೀರ್ಣನಾಗಿದ್ದಾನೆ. ತಾಲೂಕಿನ ಧ್ಯಾವನಕೆರೆ ಗ್ರಾಮದ ವಿದ್ಯಾರ್ಥಿ ಪ್ರೀತಮ್ ತಂದೆ ಗಣಿತ ಪರೀಕ್ಷೆಯ ಹಿಂದಿನ ದಿನ ನಿಧನರಾಗಿದ್ದರು. ಕುಟುಂಬ ದುಃಖದಲ್ಲಿದ್ದ ಕಾರಣ ಪ್ರೀತಮ್ ಪರೀಕ್ಷೆ ಬರೆಯುವ ಮನಸ್ಥಿತಿಯಲ್ಲಿ ಇರಲಿಲ್ಲ. ಈ ವಿಷಯ ತಿಳಿದ ಶಿವಮೊಗ್ಗದ ಬಿಇಓ ಬಿ. ರಮೇಶ್ ಅವರು ಪ್ರೀತಮ್ ಮನೆಗೆ ಭೇಟಿ ನೀಡಿ, ವಿದ್ಯಾರ್ಥಿ ಮತ್ತು ಅವರ ತಾಯಿಯನ್ನು ಮನವೊಲಿಸಿದ್ದರು. ಬಿಇಒ ಅವರ ಧೈರ್ಯದ ಮಾತುಗಳ ನಂತರ ಪ್ರೀತಮ್ ಗಣಿತ, ಹಿಂದಿ ಮತ್ತು ಸಮಾಜ ವಿಜ್ಞಾನ ವಿಷಯಗಳ ಪರೀಕ್ಷೆಗಳನ್ನು ಬರೆದಿದ್ದ. ಇಂದು ಪ್ರಕಟವಾದ ಫಲಿತಾಂಶದಲ್ಲಿ ಪ್ರೀತಮ್ ಶೇ.50 ಅಂಕಗಳೊಂದಿಗೆ ಯಶಸ್ವಿಯಾಗಿ ಉತ್ತೀರ್ಣವಾಗಿದ್ದು, ಬಿಇಓ ರಮೇಶ್ ಅವರು ಪ್ರೀತಮ್ ಮುಂದಿನ ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಭಾರತದ ಆರ್ಥಿಕ ಪ್ರಗತಿಗೆ ತೊಡಕಾಗಿರುವ ಅಂಶಗಳೇನು? ಬರ್ನ್​ಸ್ಟೈನ್ ಸಲಹೆ ನೀಡಿರುವ ಪರಿಹಾರಗಳೇನು? – Kannada News | Bernstein’s Bold Reforms for India’s Economy: Cash Free, Manufacturing & AI Focus

ನವದೆಹಲಿ, ಏಪ್ರಿಲ್ 23: ಜಾಗತಿಕ ಬ್ರೋಕರೇಜ್ ಸಂಸ್ಥೆಯಾದ ಬರ್ನ್‌ಸ್ಟೈನ್ (Bernstein), ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಮುಕ್ತ ಪತ್ರದಲ್ಲಿ ಭಾರತದ ಆರ್ಥಿಕತೆಯನ್ನು ಸುಧಾರಿಸಲು ಹಲವು ಕ್ರಾಂತಿಕಾರಿ ಮತ್ತು ದಿಟ್ಟ ಸಲಹೆಗಳನ್ನು ನೀಡಿದೆ. ಭಾರತವು ತನ್ನ ಇತ್ತೀಚಿನ ಆರ್ಥಿಕ ಸಾಧನೆಗಳ ಬಗ್ಗೆ ಅತಿಯಾದ ಆತ್ಮವಿಶ್ವಾಸ ಹೊಂದದೆ, ರಚನಾತ್ಮಕ ಸುಧಾರಣೆಗಳಿಗೆ ಮುಂದಾಗಬೇಕು ಎಂದು ಈ ಪತ್ರದಲ್ಲಿ ಎಚ್ಚರಿಸಲಾಗಿದೆ. ಭಾರತದ ಆರ್ಥಿಕ ಸಾಧನೆಗೆ ತೊಡಕಾಗಿರುವ ಕೆಲ ಅಂಶಗಳನ್ನೂ ಗುರುತಿಸಿ ಎತ್ತಿ ತೋರಿಸಿದೆ. ಅದರಲ್ಲೂ ಮುಖ್ಯವಾಗಿ ಉದ್ಯೋಗ ಮತ್ತು ಉತ್ಪಾದನಾ ಕ್ಷೇತ್ರದಲ್ಲಿ ಇರುವ ಸಮಸ್ಯೆಗಳನ್ನು ವಿವರಿಸಲಾಗಿದೆ. ವೇಣುಗೋಪಾಲ್ ಗಾರೆ ಮತ್ತು ಅನಿಖಿಲ್ ಅರೇಲಾ ಅವರು ಬರ್ನ್​ಸ್ಟೈನ್ ಪರವಾಗಿ ಈ ಪತ್ರ ಸಿದ್ಧಪಡಿಸಿದ್ದಾರೆ.

ನಗದು ರಹಿತ ಆರ್ಥಿಕತೆಗೆ ದಿಟ್ಟ ಹೆಜ್ಜೆ

ಬರ್ನ್‌ಸ್ಟೈನ್ ನೀಡಿದ ಅತ್ಯಂತ ಆಶ್ಚರ್ಯಕರ ಸಲಹೆಯೆಂದರೆ, ಮುಂದಿನ 5 ವರ್ಷಗಳಲ್ಲಿ ಭಾರತವು ಕೇವಲ 10 ರೂಪಾಯಿ ಮುಖಬೆಲೆಯ ನೋಟುಗಳನ್ನು ಮಾತ್ರ ಚಲಾವಣೆಯಲ್ಲಿ ಇಟ್ಟು, ಉಳಿದ ಎಲ್ಲಾ ಹೆಚ್ಚಿನ ಮುಖಬೆಲೆಯ ನೋಟುಗಳನ್ನು ಹಂತಹಂತವಾಗಿ ರದ್ದುಗೊಳಿಸಬೇಕು. ಇದರಿಂದ ಕಪ್ಪು ಹಣ ಮತ್ತು ಅನಧಿಕೃತ ನಗದು ವಹಿವಾಟುಗಳಿಗೆ ಕಡಿವಾಣ ಬೀಳುತ್ತದೆ. ಡಿಜಿಟಲ್ ಪಾವತಿಗಳು ಸಂಪೂರ್ಣವಾಗಿ ಚಲಾವಣೆಗೆ ಬರುತ್ತವೆ. ಆರ್ಥಿಕತೆಯಲ್ಲಿ ಪಾರದರ್ಶಕತೆ ಹೆಚ್ಚಾಗುತ್ತದೆ.

ಉದ್ಯೋಗ ಮತ್ತು ಉತ್ಪಾದನಾ ವಲಯ

ಕೃತಕ ಬುದ್ಧಿಮತ್ತೆ (Generative AI) ಭಾರತದ ಸೇವಾ ವಲಯದ (Services Sector) ಉದ್ಯೋಗಗಳಿಗೆ ಕುತ್ತು ತರಬಹುದು. ಆದ್ದರಿಂದ, ಕಾರ್ಮಿಕರನ್ನು ಉತ್ಪಾದನಾ ವಲಯದಲ್ಲಿ ತೊಡಗಿಸಿಕೊಳ್ಳಲು ಹೆಚ್ಚಿನ ಸುಧಾರಣೆಗಳು ಬೇಕು.

ಭಾರತವು ತಂತ್ರಜ್ಞಾನದ ಕೇವಲ ‘ಬಳಕೆದಾರ’ನಾಗದೆ, ತಂತ್ರಜ್ಞಾನವನ್ನು ‘ಸೃಷ್ಟಿಸುವ’ ದೇಶವಾಗಬೇಕು. ಕೇವಲ ಡೇಟಾ ಸೆಂಟರ್‌ಗಳನ್ನು ನಿರ್ಮಿಸುವ ಬದಲು, ಸ್ವದೇಶಿ AI ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬೇಕು.

ಇದನ್ನೂ ಓದಿ: ಏಪ್ರಿಲ್‌ನಲ್ಲಿ ಭಾರತದ ಖಾಸಗಿ ವಲಯ ಭರ್ಜರಿ ಏರಿಕೆ: ಉತ್ಪಾದನಾ, ಸೇವಾ ವಲಯಗಳ PMI ವರದಿಯಲ್ಲಿ ಗಮನಾರ್ಹ ಸಂಗತಿಗಳು

ಕೃಷಿ ಮತ್ತು ಇಂಧನ ಸುಧಾರಣೆ

ದೇಶದ ಶೇ. 45ರಷ್ಟು ಉದ್ಯೋಗಿಗಳು ಕೃಷಿಯಲ್ಲಿದ್ದರೂ, ಜಿಡಿಪಿಗೆ ಅವರ ಕೊಡುಗೆ ಕೇವಲ ಶೇ. 15ರಷ್ಟಿದೆ. ಸಾಲ ಮನ್ನಾದಂತಹ ತಾತ್ಕಾಲಿಕ ಕ್ರಮಗಳ ಬದಲು, ಕೃಷಿ ಕ್ಷೇತ್ರದಲ್ಲಿ ಆಳವಾದ ಸುಧಾರಣೆಗಳನ್ನು ತರಬೇಕು.

ಕಚ್ಚಾ ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಎಲೆಕ್ಟ್ರಿಕ್ ವಾಹನಗಳಿಗೆ (EV) ಸಂಪೂರ್ಣವಾಗಿ ಬದಲಾಗುವ ಸ್ಪಷ್ಟ ಯೋಜನೆಯನ್ನು ರೂಪಿಸಬೇಕು.

ಮೂಲಸೌಕರ್ಯ ಮತ್ತು ಸಂಶೋಧನೆ

ವಿಮಾನಯಾನಕ್ಕಿಂತ ಹೆಚ್ಚಾಗಿ ರೈಲ್ವೆ ಮತ್ತು ಸಮೂಹ ಸಾರಿಗೆಯ (Mass Transit) ಅಭಿವೃದ್ಧಿಗೆ ಒತ್ತು ನೀಡಬೇಕು.

ಭಾರತವು ತನ್ನ ಜಿಡಿಪಿಯ ಕೇವಲ ಶೇ. 0.7ರಷ್ಟನ್ನು ಸಂಶೋಧನೆ ಮತ್ತು ಅಭಿವೃದ್ಧಿಗೆ (Research & Development) ಬಳಸುತ್ತಿದೆ. ಇದನ್ನು ಹೆಚ್ಚಿಸದಿದ್ದರೆ ಜಾಗತಿಕ ಸ್ಪರ್ಧೆಯಲ್ಲಿ ಹಿಂದೆ ಬೀಳುವ ಅಪಾಯವಿದೆ.

ಬರ್ನ್​ಸ್ಟೀನ್ ವರದಿ ಪ್ರಕಾರ ಭಾರತಕ್ಕೆ ತೊಡಕಾಗಿರುವ ಕೆಲ ಅಂಶಗಳು

  • ಪಿಎಲ್​ಐನಂತಹ ಉಪಕ್ರಮಗಳು ಉತ್ಪಾದನೆಗೆ ಪುಷ್ಟಿ ಕೊಟ್ಟಿವೆಯಾದರೂ ಈ ಕ್ಷೇತ್ರದ ಜಿಡಿಪಿ ಪಾಲು ಶೇ. 16-17ರಷ್ಟೇ ಇದೆ.
  • ಅನಿಯಂತ್ರಿತ ಮತ್ತು ಕಡಿಮೆ ಉತ್ಪನ್ನಶೀಲತೆಯ ಕ್ಷೇತ್ರಗಳಲ್ಲಿ ಉದ್ಯೋಗ ಹೆಚ್ಚು ಕೇಂದ್ರಿತವಾಗಿದೆ.
  • ಸಪ್ಲೈ ಚೈನ್​ಗಳು ದುರ್ಬಲವಾಗವೆ. ಸುಧಾರಿತ ಉತ್ಪಾದನಾ ಕ್ಷೇತ್ರದಲ್ಲಿ ಪ್ರತಿಭಾ ಲಭ್ಯತೆ ಕಡಿಮೆ ಇದೆ. ಉತ್ಪಾದನಾ ಸಮಯ ಇತರ ಆರ್ಥಿಕತೆಗಳಿಗೆ ಹೋಲಿಸಿದರೆ ನಿಧಾನ ಇದೆ.
  • ಐಟಿ, ಬಿಪಿಒ ಕ್ಷೇತ್ರವು ಬಹಳ ವರ್ಷಗಳಿಂದ ಮಧ್ಯಮ ವರ್ಗದವರಿಗೆ ಉದ್ಯೋಗಾವಕಾಶ ಕೊಟ್ಟಿವೆ. ಆದರೆ, ಜನರೇಟಿವ್ ಎಐ, ಆಟೊಮೇಶನ್ ಅಳವಡಿಕೆಯಿಂದ ಈ ಸೆಕ್ಟರ್​ನ ಹೆಚ್ಚಿನ ಉದ್ಯೋಗಗಳಿಗೆ ಕುತ್ತು ಬರಲಿದೆ.
  • ಭಾರತವು ತಯಾರಕನಾಗುವುದರ ಬದಲು ಬಳಕೆದಾರನಾಗುವ ಅಪಾಯ ಇದೆ.
  • ಮ್ಯಾನುಫ್ಯಾಕ್ಚರಿಂಗ್​ನಲ್ಲಿ ಹೂಡಿಕೆ ಸೀಮಿತವಾಗಿದೆ. ಫ್ಯಾಕ್ಟರಿಗಳ ಸಂಖ್ಯೆ ಅಥವಾ ಉದ್ಯೋಗಗಳ ಸಂಖ್ಯೆ ಹೆಚ್ಚಿಲ್ಲ.
  • ಹೆಚ್ಚಿನ ಕೆಲಸಗಾರರು ಕಡಿಮೆ ವೇತನದ ನಗರ ಸೇವೆಗಳು ಹಾಗೂ ಅಸ್ಥಿರ ಸ್ವ ಉದ್ಯೋಗಗಳಿಗೆ ಜಾರುತ್ತಿದ್ದಾರೆ. ಇದರಿಂದ ಒಟ್ಟಾರೆ ಉದ್ಯೋಗ ಗುಣಮಟ್ಟ ಕಡಿಮೆ ಇದೆ.
  • ಕೃಷಿ ದುರ್ಬಲ ಅಂಶವಾಗಿ ಮುಂದುವರಿದಿದೆ. ಶೇ. 42-45 ಕೆಲಸಗಾರರು ಕೃಷಿ ಕ್ಷೇತ್ರದಲ್ಲಿದ್ದರೂ ಅದರ ಜಿಡಿಪಿ ಕೊಡುಗೆ ಶೇ. 15-16 ಇರಬಹುದು.
  • ವಿದ್ಯುತ್ ಸೆಕ್ಟರ್​ನಲ್ಲಿ ಕ್ಷಮತೆಯ ಕೊರತೆ ಇದೆ. ಕಚ್ಚಾ ತೈಲ ಆಮದು ಮೇಲೆ ಹೆಚ್ಚಿನ ಅವಲಂಬನೆ ಇದೆ.

ಇದನ್ನೂ ಓದಿ: ವಾಟ್ಸಾಪ್​ನಲ್ಲಿ ಪ್ರೀಪೇಡ್ ಮೊಬೈಲ್ ರೀಚಾರ್ಜ್; ಬಂದಿದೆ ಹೊಸ ಫೀಚರ್

ಬರ್ನ್​ಸ್ಟೀನ್ ವರದಿಯಲ್ಲಿ ನೀಡಲಾಗಿರುವ ಕೆಲ ಸಲಹೆಗಳು

  • ಎಲೆಕ್ಟ್ರಿಕ್ ವಾಹನಗಳಿಗೆ ಪುಷ್ಟಿ ಕೊಡಬೇಕು. ಪೆಟ್ರೋಲ್, ಡೀಸಲ್ ವಾಹನಗಳನ್ನು ಹಂತ ಹಂತವಾಗಿ ನೀಗಿಸಬೇಕು.
  • ನೀರಾವರಿ ಹೆಚ್ಚಿಸಬೇಕು. ಸಬ್ಸಿಡಿ ಮೇಲಿನ ಅವಲಂಬನೆ ಕಡಿಮೆ ಮಾಡಬೇಕು.
  • ಕೃಷಿಯಲ್ಲಿ ಉತ್ಪನ್ನಶೀಲತೆ ಮತ್ತು ರೈತರ ಆದಾಯ ಹೆಚ್ಚಿಸಲು ಸಂಗ್ರಹಗಾರ ಮತ್ತು ಸಾಗಣೆ ವ್ಯವಸ್ಥೆಯನ್ನು ಹೆಚ್ಚಿಸಬೇಕು.
  • ಎಐ, ಆಟೊಮೇಶನ್, ರೋಬೋಟಿಕ್ಸ್, ಅಡ್ವಾನ್ಸ್ಡ್ ಮೆಟೀರಿಯಲ್ಸ್, ಎಐ ಅಳವಡಿಕೆಯ ಮ್ಯಾನುಫ್ಯಾಕ್ಚರಿಂಗ್ ಇತ್ಯಾದಿ ಉದಯೋನ್ಮುಖ ಕ್ಷೇತ್ರಗಳನ್ನು ಗುರುತಿಸುವ ಒಂದು ವ್ಯವಸ್ಥೆ ನಿರ್ಮಾಣವಾಗಬೇಕು.
  • ಹತ್ತು ರೂ ಮುಖಬೆಲೆಯ ನೋಟುಗಳನ್ನು ಉಳಿಸಿ ಉಳಿದವನ್ನು ಕೈಬಿಡಬೇಕು. ಇದರಿಂದ ಕಪ್ಪು ಹಣ ಶೇಖರಣೆ ತಪ್ಪಿಸಬಹುದು.

“ಭಾರತದ ಬಳಿ ಬಂಡವಾಳ, ಪ್ರತಿಭೆ ಅಥವಾ ಮಹತ್ವಾಕಾಂಕ್ಷೆಯ ಕೊರತೆಯಿಲ್ಲ. ಆದರೆ ಕಠಿಣ ನಿರ್ಧಾರಗಳನ್ನು ಮುಂದೂಡುವ ಬದಲು ಈಗಲೇ ತೆಗೆದುಕೊಳ್ಳುವ ಮನಸ್ಸು ಬೇಕು. ಸುಧಾರಣೆಗಳ ಕಿಟಕಿ ಈಗ ತೆರೆದಿದೆ, ಆದರೆ ಅದು ಬೇಗನೆ ಮುಚ್ಚಬಹುದು” ಎಂದು ಈ ವರದಿಯಲ್ಲಿ ಹೇಳಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಮುಂಬೈ ವಿರುದ್ಧದ ಪಂದ್ಯಕ್ಕೂ ಮುನ್ನ ಸಿಎಸ್​ಕೆ ಆಟಗಾರನಿಗೆ ಮಾತೃ ವಿಯೋಗ – Kannada News | Mukesh Choudhary Out of MI vs CSK IPL 2026 Match After Mother’s Demise

ಐಪಿಎಲ್ 2026 ರ 33ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಉಭಯ ತಂಡಗಳಿಗೂ ಅತ್ಯಂತ ಮಹತ್ವದ್ದಾಗಿದೆ. ಆದರೆ ಈ ಪಂದ್ಯಕ್ಕೂ ಮುನ್ನ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯುವ ವೇಗದ ಬೌಲರ್ ಮುಖೇಶ್ ಚೌಧರಿ ಅವರ ತಾಯಿ ನಿಧನರಾಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಮುಖೇಶ್ ಚೌಧರಿ ಅವರ ತಾಯಿಯ ನಿಧನಕ್ಕೆ ಸಂತಾಪ ಸೂಚಿಸಿದೆ. ಅಲ್ಲದೆ ತಾಯಿಯನ್ನು ಕಳೆದುಕೊಂಡ ನೋವಿನಲ್ಲಿರುವ ಮುಖೇಶ್ ಚೌಧರಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆಡುವುದಿಲ್ಲ ಎಂಬುದನ್ನು ಖಚಿತಪಡಿಸಿದೆ.

ಸಂತಾಪ ಸೂಚಿಸಿದ ಸಿಎಸ್‌ಕೆ

ಮುಖೇಶ್ ಚೌಧರಿ ಅವರ ತಾಯಿಯ ನಿಧನದಿಂದ ತೀವ್ರ ದುಃಖಿತರಾಗಿದ್ದೇವೆ ಈ ಕಷ್ಟದ ಸಮಯದಲ್ಲಿ ದುಃಖವನ್ನು ಬರಿಸುವ ಶಕ್ತಿಯನ್ನು ಮುಖೇಶ್ ಕುಮಾರ್ ಅವರ ಕುಟುಂಬಕ್ಕೆ ಭಗವಂತ ಕರುಣಿಸಲಿ ಎಂದು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲು ಬರೆದುಕೊಂಡಿದೆ.

ಮುಖೇಶ್ ಪ್ರದರ್ಶನ

2026 ರ ಐಪಿಎಲ್‌ನಲ್ಲಿ ಮುಖೇಶ್ ಚೌಧರಿ ಇಲ್ಲಿಯವರೆಗೆ ಕೇವಲ ಒಂದು ಪಂದ್ಯವನ್ನು ಆಡಿದ್ದಾರೆ. ಏಪ್ರಿಲ್ 18 ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆಡಿದ್ದ ಅವರು 21 ರನ್‌ಗಳಿಗೆ 2 ವಿಕೆಟ್‌ಗಳನ್ನು ಕಬಳಿಸಿದ್ದರು. ಈ ಪಂದ್ಯದಲ್ಲಿ ಅವರು ಇಶಾನ್ ಕಿಶನ್ ಮತ್ತು ಟ್ರಾವಿಸ್ ಹೆಡ್ ಅವರ ವಿಕೆಟ್‌ಗಳನ್ನು ಕಬಳಿಸಿದ್ದರು.

ಖಲೀಲ್ ಅಹ್ಮದ್ ಬದಲಿಗೆ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಸಿಎಸ್‌ಕೆಯ ಪ್ಲೇಯಿಂಗ್ ಇಲೆವೆನ್‌ನಲ್ಲಿ ಮುಖೇಶ್ ಚೌಧರಿ ಅವರನ್ನು ಆಯ್ಕೆ ಮಾಡಲಾಗಿತ್ತು. ಗಾಯದ ಕಾರಣದಿಂದಾಗಿ ಖಲೀಲ್ ಅಹ್ಮದ್ ಐಪಿಎಲ್ 2026 ರಿಂದ ಹೊರಬಿದ್ದಿರುವುದರಿಂದ ಮುಖೇಶ್ ಚೌಧರಿಗೆ ಆಡುವ ಅವಕಾಶ ಸಿಕ್ಕಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

SSLC Exam 2 Time Table: 10ನೇ ತರಗತಿಯಲ್ಲಿ ಫೇಲ್ ಆದವರಿಗೆ ಮತ್ತೊಂದು ಚಾನ್ಸ್: ಪರೀಕ್ಷೆ-2 ವೇಳಾಪಟ್ಟಿ ಪ್ರಕಟ – Kannada News | Karnataka SSLC exam 2 time table Announced By KSEAB, here Is date And Fee details

ಬೆಂಗಳೂರು, (ಏಪ್ರಿಲ್ 23): ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರು ಕುತೂಹಲದಿಂದ ಕಾಯುತ್ತಿದ್ದ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ (SSLC Results 2026)   ಪ್ರಕಟವಾಗಿದ್ದು, ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶೇ.94.10 ಫಲಿತಾಂಶ ಬಂದಿದೆ. ಇನ್ನು ಜಿಲ್ಲೆಗಳಲ್ಲಿ 98.40% ಉತ್ತೀರ್ಣ ಫಲಿತಾಂಶದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ‌ ಸ್ಥಾನ ಪಡೆದುಕೊಂಡಿದ್ದರೆ, ಕಲಬುರಗಿ ಕೊನೆ ಸ್ಥಾನದಲ್ಲಿದೆ. ಇನ್ನು ಪಾಸಾದ ವಿದ್ಯಾರ್ಥಿಗಳ ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು, ಮುಂದೆ ಯಾವ ಕಾಲೇಜಿ ಏನು ಅಂತೆಲ್ಲಾ ಚರ್ಚೆಯಲ್ಲಿ ತೊಡಗಿದ್ದಾರೆ. ಇನ್ನು ಫೇಲಾದ ವಿದ್ಯಾರ್ಥಿಗಳು ಚಿಂತಿಸುವ ಅಗತ್ಯವಿಲ್ಲ. ಇನ್ನೊಂದು ಪರೀಕ್ಷೆ ಬರೆಯಲು ಅವಕಾಶ ಇದ್ದು, ಎರಡನೇ ಪರೀಕ್ಷೆ ಬರೆದು ಪಾಸಾಗಿ ಕಾಲೇಜು ಮೆಟ್ಟಿಲು ಏರಬಹುದು. ಹೌದು…ಪರೀಕ್ಷೆ 2 ವೇಳಾಪಟ್ಟಿ ಸಹ ಪ್ರಕಟವಾಗಿದ್ದು, ಅದು ಈ ಕೆಳಗಿನಂತಿದೆ ನೋಡಿ.

ಮೇ 18ರಿಂದ ಮೇ 25ರವರೆಗೆ ಪರೀಕ್ಷೆ 2

ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮರುಪರೀಕ್ಷೆ (ಪೂರಕ ಪರೀಕ್ಷೆ) ನಡೆಸಲಾಗುತ್ತದೆ. ಪರೀಕ್ಷೆ-2 ಮೇ 18ರಿಂದ ಮೇ 25, 2026ರವರೆಗೆ ನಡೆಯಲಿದೆ. ಈ ಮರುಪರೀಕ್ಷೆಗೆ ವಿದ್ಯಾರ್ಥಿಗಳು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬೇಕಾಗಿದ್ದು, ಈ ಬಾರಿ ಮರುಪರೀಕ್ಷೆಯ ತೃತೀಯ ಪರೀಕ್ಷೆಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಇದನ್ನೂ ಓದಿ: SSLC District Wise Result: ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ

ಪರೀಕ್ಷೆ 1ಕ್ಕೆ ಗೈರು ಹಾಜರಾಗಿರುವ ವಿದ್ಯಾರ್ಥಿಗಳು ಈಗಾಗಲೇ ಅಭ್ಯಾಸ ಮಾಡಿದ ಶಾಲೆಯಲ್ಲಿ  ಪರೀಕ್ಷೆ 2ಕ್ಕೆ ನೊಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ.  ಇವರು ಖಾಸಗಿ ವಿದ್ಯಾರ್ಥಿಗಳಾಗಿ ನೊಂದಾಯಿಸಲು  ನಿಗಧಿಪಡಿಸಿರುವ  ನೋಂದಣಿ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸಬೇಕು.

ಪರೀಕ್ಷೆ 2 ವೇಳಾಪಟ್ಟಿ

  • 18-5-26 ಪ್ರಥಮ ಭಾಷೆ: ಕನ್ನಡ, ತೆಗಲು, ಹಿಂದಿ, ಇಂಗ್ಲೀಷ್, ಮರಾಠಿ, ಉರ್ದು, ಸಂಸ್ಕೃತ.
  • 19-5-26: (ಕೋರ್ ಸಬ್ಜೆಕ್ಟ್) ಪೊಲಿಟಿಕಲ್ ಸೈನ್ಸ್,.
  • 20-5-26 ದ್ವಿತೀಯ ಭಾಷೆ: ಇಂಗ್ಲೀಷ್, ಕನ್ನಡ.
  • 21-5-26: (ಕೋರ್ ಸಬ್ಜೆಕ್ಟ್) ಗಣಿತ, ಸಮಾಜಶಾಸ್ತ್ರ,.
  • 22 5-26: ತೃತೀಯ ಭಾಷೆ: ಹಿಂದಿ, ಕನ್ನಡ, ಇಂಗ್ಲೀಷ್, ಅರೇಬಿಕ್, ಉರ್ದು, ಕೊಂಕಣಿ, ತುಳು, ಮರಾಠಿ, ಸಂಸ್ಕೃತ.
  • 23-5-26 ಕೋರ್ ಸಬ್ಜೆಕ್ಟ್: ಸೋಷಿಯಲ್ ಸೈನ್ಸ್

ಪರೀಕ್ಷೆ 2  ಶುಲ್ಕ ಎಷ್ಟು?

ಪರೀಕ್ಷೆ 1ರಲ್ಲಿ ಅನುತ್ತೀರ್ಣರಾದವರಿಗೆ  ಪರೀಕ್ಷೆ 2 ಅವಕಾಶ ಇದ್ದು, ನೊಂದಾಯಿಸಿಕೊಳ್ಳಲು ವಿಷಯಕ್ಕೆ ಇಂತಿಷ್ಟು ಎಂದು ಶುಲ್ಕು ನಿಗಧಿಪಡಿಸಲಾಗಿದೆ.  ಒಂದು ವಿಷಯಕ್ಕೆ  ಅಂದರೆ ಒಂದೇ ವಿಷಯದಲ್ಲಿ ಫೇಲಾಗಿದ್ದರೆ 448 ರೂ. , ಎರಡು ವಿಷಯಕ್ಕೆ 559 ರೂ., ಇನ್ನು ಮೂರು ಅಥವಾ 3ಕ್ಕಿಂತ ಹೆಚ್ಚು ವಿಷಯಗಳಿಗೆ 752 ರೂಪಾಯಿ ಕಟ್ಟಬೇಕು. ವಿಶೇಷ ಅಂದ್ರೆ ತೃತೀಯ ಭಾಷೆ ಹಿಂದಿಯಲ್ಲಿ ಅಂಕಗಳನ್ನು ಉತ್ತಮಗೊಳಿಸಲು ಶುಲ್ಕ ವಿನಾಯಿ ನೀಡಲಾಗಿದೆ.

ಮರುಮೌಲ್ಯಮಾಪನ ಮತ್ತು ಮರುಎಣಿಕೆ

ಫಲಿತಾಂಶದಲ್ಲಿ ಅಸಮಾಧಾನವಿದ್ದ ವಿದ್ಯಾರ್ಥಿಗಳಿಗೆ ಮರುಮೌಲ್ಯಮಾಪನ (Revaluation) ಮತ್ತು ಅಂಕಗಳ ಮರುಎಣಿಕೆ (Re-totalling) ಅವಕಾಶ ಕಲ್ಪಿಸಲಾಗಿದೆ. ಫಲಿತಾಂಶ ಪ್ರಕಟವಾದ ದಿನಾಂಕದಿಂದ 15 ದಿನಗಳೊಳಗೆ ಅರ್ಜಿ ಸಲ್ಲಿಸಬೇಕು. ಈ ಸಂಬಂಧ ಅರ್ಜಿಯನ್ನು kseab.karnataka.gov.in ವೆಬ್‌ಸೈಟ್ ಮೂಲಕ ಸಲ್ಲಿಸಬಹುದು.’

ಸ್ಕ್ಯಾನ್ ಪ್ರತಿ ಮತ್ತು ಮರುಮೌಲ್ಯಮಾಪನದ ಶುಲ್ಕ

ಫಲಿತಾಂಶದಲ್ಲಿ ಅಸಮಾಧಾನವಿದ್ದ ವಿದ್ಯಾರ್ಥಿಗಳಿಗೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಇದೆ. ಆದ್ರೆ, ಮರುಮೌಲ್ಯ ಮಾಪನಕ್ಕೆ ಒಂದು ವಿಷಯಕ್ಕೆ 800 ರೂ ಶುಲ್ಕ ಜೊತೆಗೆ 10 ರೂ. ಸೇವಾ ಶುಲ್ಕ ಕಟ್ಟಬೇಕು. ಇನ್ನು ನಿಮ್ಮ ಉತ್ತರ ಪತ್ರಿಕೆಯ ಸ್ಕ್ಯಾನ್ ಪ್ರತಿ ಬೇಕಾಗಿದ್ದಲ್ಲಿ ಒಂದು ವಿಷಯಕ್ಕೆ  410 ರೂಪಾಯಿ ಪ್ಲಸ್ 10 ರೂ. ಸೇವಾ ಶುಲ್ಕ ನಿಗಧಿಪಡಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version