ಚಿಂತೆಯೆಲ್ಲಾ ಬಿಟ್ಟು ಸಂತೋಷದಿಂದ ಜೀವನ ನಡೆಸಲು ಈ ಸಿಂಪಲ್ ಸಲಹೆ ಪಾಲಿಸಿದರೆ ಸಾಕು – Kannada News | Just follow this simple advice to live a happy life without worrying
ಹಣವಿದ್ದರೆ ಸಂತೋಷದಿಂದ ಜೀವನ (happy life) ಸಾಗಿಸಬಹುದು ಎಂದು ಹಲವರು ಭಾವಿಸುತ್ತಾರೆ. ಆದರೆ ವಾಸ್ತವ ಏನೆಂದರೆ ಹಣವೊಂದರಿಂದಲೇ ಸಂತೋಷದಿಂದಿರಲು ಸಾಧ್ಯವಿಲ್ಲ, ಹಣದಿಂದ ಸಂತೋಷವನ್ನು ಖರೀದಿಸಲು ಸಾಧ್ಯವಿಲ್ಲ. ಬದಲಿಗೆ ನಮ್ಮಲ್ಲೇ ನಾವು ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಸಂತೋಷವನ್ನು ಕಂಡುಕೊಳ್ಳಬಹುದು. ಇಂದಿನ ಈ ಬ್ಯುಸಿ ಜೀವನದಲ್ಲಿ ಹೆಚ್ಚಿನವರು ಚಿಂತೆಯಲ್ಲಿಯೇ ಸಮಯ ಕಳೆಯುತ್ತಿದ್ದಾರೆ. ಈ ಚಿಂತೆಯಿಂದ ನೆಮ್ಮದಿ ಹಾಳಾಗುವುದಂತೂ ಖಂಡಿತ. ಹಾಗಾಗಿ ಈ ಕೆಲವೊಂದು ಸರಳ ಸೂತ್ರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಂತೋಷದ ಜೀವನವನ್ನು ನಡೆಸಿ. ಸಂತೋಷವಾಗಿರಲು ಏನು ಮಾಡಬೇಕು?…