Headlines

ಮೈಸೂರಲ್ಲೊಂದು ಮನಕಲಕುವ ಘಟನೆ: ಇರುವೆ ಕಚ್ಚಿ ಐಸಿಯುವಿನಲ್ಲಿದ್ದ ಹಸುಳೆ ಸಾವು? – Kannada News | Cheluvamba Hospital: Mysuru Infant Dies in ICU, Parents Allege Ant Bites and Negligence

ಮೈಸೂರು, ಏಪ್ರಿಲ್​​ 23: ವೈದ್ಯರ ನಿರ್ಲಕ್ಷ್ಯಕ್ಕೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿ ಡಿಸ್ಚಾರ್ಜ್​​ ಆಗಿದ್ದ ರೋಗಿಯೋರ್ವ ನರಳಿ ನರಳಿ ಪ್ರಾಣಬಿಟ್ಟಿರುವ ಆರೋಪ ನಿನ್ನೆಯಷ್ಟೇ ಕೇಳಿಬಂದಿತ್ತು. ಅದು ಮಾಸುವ ಮುನ್ನವೇ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನವಜಾತ ಶಿಶುವೊಂದು ಇರುವೆ ಕಚ್ಚಿ ಮೃತಪಟ್ಟಿರುವ ಬಗ್ಗೆ ಮೈಸೂರಿನಲ್ಲಿ (Mysuru) ದೂರು ಕೇಳಿಬಂದಿದೆ. ಚೆಲುವಾಂಬ ಆಸ್ಪತ್ರೆವಿರುದ್ಧ ಮೃತ ಮಗುವಿನ ಪೋಷಕರು ದೂರಿದ್ದು, ವೈದ್ಯರು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯವೇ ಹಸುಳೆಯ ಸಾವಿಗೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏಪ್ರಿಲ್ 15ರಂದು ಅವಧಿ ಪೂರ್ವ ಗಂಡು…

Read More

ಜಿಬಿಎ ಘನ ತ್ಯಾಜ್ಯ ಟೆಂಡರ್: IAS ಅಧಿಕಾರಿಗಳ ವಿರುದ್ಧ ಲಂಚ ಆರೋಪ, ಹೈಕೋರ್ಟ್ ಮೊರೆಹೋದ ಗುತ್ತಿಗೆದಾರ – Kannada News | GBB Solid Waste Tender: IAS Officers Accused of 15% Bribery, Contractor Files High Court Petition

ಹೈಕೋರ್ಟ್ (ಸಂಗ್ರಹ ಚಿತ್ರ)Image Credit source: google ಬೆಂಗಳೂರು, ಏಪ್ರಿಲ್​​ 23: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಘನತ್ಯಾಜ್ಯ ನಿರ್ವಹಣೆ ಟೆಂಡರ್ ಪ್ರಕ್ರಿಯೆಯಲ್ಲಿ ಹಿರಿಯ ಐಎಎಸ್ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಇದೀಗ ಪ್ರಕರಣ ಹೈಕೋರ್ಟ್ (High Court) ಮೆಟ್ಟಿಲೇರಿದೆ. ಐಎಎಸ್ ಅಧಿಕಾರಿಗಳಾದ ತುಷಾರ್ ಗಿರಿನಾಥ್ ಮತ್ತು ಕರಿಗೌಡ ವಿರುದ್ಧ ಲಂಚದ ಆರೋಪ ಮಾಡಿರುವ ಗುತ್ತಿಗೆದಾರ ಎಸ್.ಎನ್.ಬಾಲಸುಬ್ರಮಣಿಯನ್ ಸಲ್ಲಿಸಿದ್ದ ರಿಟ್ ಅರ್ಜಿ ಹೈಕೋರ್ಟ್​ ವಿಚಾರಣೆ ಕೈಗೆತ್ತಿಕೊಂಡಿದ್ದು, ಈ ವೇಳೆ ಸರ್ಕಾರದ…

Read More

ಶ್ರೀಲೀಲಾ ಮೊದಲ ಹಿಂದಿ ಸಿನಿಮಾಕ್ಕೆ ಹಲವು ಅಡೆ-ತಡೆ, ಬಿಡುಗಡೆಗೆ ಹಿನ್ನಡೆ – Kannada News | Sreeleela’s first Hindi movie not releasing soon

ಶ್ರೀಲೀಲಾ (Sreeleela) ಭಾರತದ ಸ್ಟಾರ್ ಪ್ಯಾನ್ ಇಂಡಿಯಾ ನಟಿ ಆಗುವತ್ತ ದಾಪುಗಾಲಿಟ್ಟಿದ್ದಾರೆ. ಕನ್ನಡದ ಈ ನಟಿ, ಈಗಾಗಲೇ ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟಿ ಎನಿಸಿಕೊಂಡಿದ್ದು, ತಮಿಳಿನಲ್ಲೂ ಬ್ಯುಸಿ ಆಗಿದ್ದಾರೆ. ಶ್ರೀಲೀಲಾ ಈಗಾಗಲೇ ಕೆಲವು ಹಿಂದಿ ಸಿನಿಮಾಗಳನ್ನೂ ಸಹ ಒಪ್ಪಿಕೊಂಡಿದ್ದು, ದೊಡ್ಡ ನಿರ್ಮಾಣ ಸಂಸ್ಥೆಗಳ ಜೊತೆಗೆ ಕೆಲಸ ಮಾಡುತ್ತಿದ್ದಾರೆ. ಶ್ರೀಲೀಲಾ ಮೊದಲ ಹಿಂದಿ ಸಿನಿಮಾ ಒಪ್ಪಿಕೊಂಡು ವರ್ಷವಾಗುತ್ತಾ ಬಂದಿದೆ. ಆದರೆ ಸಿನಿಮಾದ ಬಿಡುಗಡೆ ಇನ್ನೂ ಸಾಕಷ್ಟು ತಡ ಆಗಬಹುದು ಎಂದು ಸ್ವತಃ ನಿರ್ದೇಶಕರೇ ಹೇಳಿದ್ದಾರೆ. ಮೊದಲ ಹಿಂದಿ ಸಿನಿಮಾ…

Read More

SSLC Results 2026: 1 ಅಂಕದಿಂದ ಫಸ್ಟ್ ರ‍್ಯಾಂಕ್ ಮಿಸ್, ವಿದ್ಯಾರ್ಥಿನಿ ಹೇಳಿದ್ದೇನು? – Kannada News | SSLC Results 2026: Mysuru Student Manaswini Missed Top Place Just 1 Marks

ಮೈಸೂರು, (ಏಪ್ರಿಲ್ 23): 2025-26ನೇ ಸಾಲಿನ ಕರ್ನಾಟಕ SSLC ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಪರೀಕ್ಷೆ ಬರೆದಿದ್ದ 7,70,209 ಮಕ್ಕಳ ಪೈಕಿ 7,24,794 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಆ ಮೂಲಕ ಈ ವರ್ಷ ಎಸ್​​ಎಸ್​​ಎಲ್​​ಸಿಯಲ್ಲಿ ಶೇ.94.1ರಷ್ಟು ವಿದ್ಯಾರ್ಥಿಗಳು ಪಾಸ್​​ ಆಗಿದ್ದಾರೆ. ಇದರಲ್ಲಿ ಮೈಸೂರಿನ ವಿದ್ಯಾರ್ಥಿನಿ ಕೇವಲ ಒಂದು ಅಂಕದಿಂದ ಔಟ್ ಆಫ್ ಔಟ್ ಮಿಸ್ ಮಾಡಿಕೊಂಡಿದ್ದಾಳೆ. ಹೌದು.. ಮೈಸೂರಿನ ಸರಸ್ವತಿಪುರಂನಲ್ಲಿರುವ ವಿಜಯ ವಿಠ್ಠಲ್ ವಿದ್ಯಾ ಸಂಸ್ಥೆ ವಿದ್ಯಾರ್ಥಿನಿ ಮನಸ್ವಿನಿ ಪ್ರದೀಪ್‌ 625 ಕ್ಕೆ 624 ಅಂಕ ಪಡೆದುಕೊಂಡಿದ್ದಾರೆ. ಎಲ್ಲಾ ವಿಷಯದಲ್ಲೂ…

Read More

ಪ್ರೆಗ್ನೆಂಟ್ ಎಂಬ ಕಾರಣಕ್ಕೆ ದೀಪಿಕಾ ಪಡುಕೋಣೆ ಪಾತ್ರಕ್ಕೆ ಕತ್ತರಿ? ‘ರಾಕಾ’ ಚಿತ್ರತಂಡದ ಸ್ಪಷ್ಟನೆ – Kannada News | Deepika Padukone Raaka Movie role trimming rumours clarified Allu Arjun Atlee

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಎರಡನೇ ಬಾರಿ ತಾಯಿಯಾಗುತ್ತಿರುವ ಸಂಭ್ರಮದಲ್ಲಿದ್ದಾರೆ. ಈ ಸುದ್ದಿ ಹೊರಬಿದ್ದ ಬೆನ್ನಲ್ಲೇ, ಅವರು ನಟಿಸುತ್ತಿರುವ ಬಹುನಿರೀಕ್ಷಿತ ‘ರಾಕಾ’ (Raaka) ಸಿನಿಮಾ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಲವು ವದಂತಿಗಳು ಹರಿದಾಡುತ್ತಿದ್ದವು. ದೀಪಿಕಾ ಗರ್ಭಿಣಿಯಾಗಿರುವ ಕಾರಣ ಚಿತ್ರದಲ್ಲಿ ಅವರ ಪಾತ್ರಕ್ಕೆ ಕತ್ತರಿ ಹಾಕಲಾಗುತ್ತಿದೆ ಅಥವಾ ಅವರನ್ನು ಸಿನಿಮಾದಿಂದ ಕೈಬಿಡಲಾಗುತ್ತಿದೆ ಎಂಬ ಸುದ್ದಿಗಳು ಹಬ್ಬಿದ್ದವು. ಆದರೆ, ಈಗ ಚಿತ್ರತಂಡ ಈ ಎಲ್ಲಾ ವದಂತಿಗಳಿಗೆ ಅಧಿಕೃತವಾಗಿ ಸ್ಪಷ್ಟನೆ ನೀಡಿದೆ. ಅಲ್ಲು ಅರ್ಜುನ್ ನಾಯಕನಾಗಿ ನಟಿಸುತ್ತಿರುವ ‘ರಾಕಾ’…

Read More

ಯುವ ಜೊತೆಗಿನ ಫೋಟೋ ಹಂಚಿಕೊಂಡು ಮಹಿಳೆಯರಿಗೆ ಸಂದೇಶ ಕೊಟ್ಟ ಶ್ರೀದೇವಿ ಭೈರಪ್ಪ – Kannada News | Sridevi Byrappa’s Empowering Message for Women Amidst Yuva Divorce Case

ನಟ ಯುವ ರಾಜ್​ಕುಮಾರ್ (Yuva) ಹಾಗೂ ಶ್ರೀದೇವಿ ಬೈರಪ್ಪ ವಿವಾಹ ಆದ ಕೆಲವೇ ವರ್ಷಗಳಲ್ಲಿ ದೂರ ಆಗುವ ನಿರ್ಧಾರಕ್ಕೆ ಬಂದರು. ನಟಿಯ ಜೊತೆ ಯುವ ಅಫೇರ್ ಹೊಂದಿದ್ದಾರೆ ಎಂದು ಶ್ರೀದೇವಿ ಆರೋಪಿಸಿದ್ದಾರೆ. ಇದೇ ಕಾರಣ ನೀಡಿ ಅವರು ಯುವ ಅವರಿಂದ ವಿಚ್ಛೇದನ ಕೇಳಿದ್ದಾರೆ. ಈ ಪ್ರಕರಣ ಇನ್ನೂ ಕೋರ್ಟ್​​ನಲ್ಲಿ ಇದೆ ಎನ್ನಲಾಗಿದೆ. ಈಗ ಶ್ರೀದೇವಿ ಅವರು ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಅದು ಕೂಡ ಯುವ ಜೊತೆಗಿನ ಫೋಟೋ ಹಂಚಿಕೊಂಡು! ಫೋಟೋ ಕ್ಯಾಪ್ಶನ್​​ ಅಲ್ಲಿ ಉದ್ದನೆಯ…

Read More

ಡೆನ್​ಮಾರ್ಕ್ನಲ್ಲಿ ಎರಡು ರೈಲುಗಳ ಮುಖಾಮುಖಿ ಡಿಕ್ಕಿ, 12 ಮಂದಿಗೆ ಗಾಯ, ನಾಲ್ವರ ಸ್ಥಿತಿ ಚಿಂತಾಜನಕ – Kannada News | Train Collision Near Copenhagen Leaves Several Critically Injured

ಡೆನ್ಮಾರ್ಕ್​, ಏಪ್ರಿಲ್ 23: ಎರಡು ರೈಲುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಕಾರಣ 12 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಡೆನ್​ಮಾರ್ಕ್​ನಲ್ಲಿ ನಡೆದಿದೆ. ಕೋಪನ್ ಹ್ಯಾಗನ್ ನಿಂದ ಉತ್ತರಕ್ಕೆ ಸುಮಾರು 40 ಕಿ.ಮೀ ದೂರದಲ್ಲಿರುವ ಹಿಲ್ಲರೋಡ್ ಬಳಿ ಬೆಳಗ್ಗೆ 6.30 ರ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು,12 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, 4 ಮಂದಿಗೆ ಅತ್ಯಂತ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಎಲ್ಲಾ ಪ್ರಯಾಣಿಕರನ್ನು ರೈಲುಗಳಿಂದ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡಿಕ್ಕಿಯ ಕಾರಣವನ್ನು…

Read More

ತೃತೀಯ ಭಾಷೆ ಹಿಂದಿಯಲ್ಲಿ ಅನುತ್ತೀರ್ಣರಾದವರ ಸಂಖ್ಯೆ ಬಾರಿ ಇಳಿಕೆ – Kannada News | SSLC Results 2026: Number of students failing in third language Hindi has decreased

ಬೆಂಗಳೂರು, (ಏಪ್ರಿಲ್ 23): ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಲಿ (Karnataka School Examination and Assessment Board) 2025–26ನೇ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ (10ನೇ ತರಗತಿ) ಮುಖ್ಯ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದ್ದು, ಈ ಬಾರಿ ರಾಜ್ಯದಲ್ಲಿ ದಾಖಲೆಯ ಮಟ್ಟದ ಸಾಧನೆ ಕಂಡುಬಂದಿದೆ. ಒಟ್ಟಾರೆ ಉತ್ತೀರ್ಣ ಪ್ರಮಾಣವು ಶೇಕಡಾ 94.10 ಆಗಿದ್ದು, ಕಳೆದ ವರ್ಷಗಳಿಗಿಂತ ಗಮನಾರ್ಹ ಏರಿಕೆಯಾಗಿದೆ. ಅದರಲ್ಲೂ ಮುಖ್ಯವಾಗಿ ಈ ಬಾರಿ ಹಿಂದಿ ಬಗ್ಗೆ ಭಾರೀ ಗೊಂದಲಗಳು ಉದ್ಭವಿಸಿದ್ದವು. ಪರೀಕ್ಷೆ ಸಮಯದಲ್ಲೇ ಅಂಕ ಇಲ್ಲ…

Read More

SSLC ಪರೀಕ್ಷೆಯಲ್ಲಿ ಕಲಬುರಗಿಗೆ ಕೊನೇ ಸ್ಥಾನ: ಪ್ರಿಯಾಂಕ್​​ ಖರ್ಗೆ ಗುರಿಯಾಗಿಸಿ ಬಿಜೆಪಿ, ಜೆಡಿಎಸ್​​ ವ್ಯಂಗ್ಯ – Kannada News | Kalaburagi Last in SSLC: BJP, JDS Slam Priyank Kharge Over District’s Poor Results

ಪ್ರಿಯಾಂಕ್​​ ಖರ್ಗೆ ವಿರುದ್ಧ ಬಿಜೆಪಿ, ಜೆಡಿಎಸ್​​ ಕಿಡಿ ಬೆಂಗಳೂರು, ಏಪ್ರಿಲ್​​ 23: 2025-26ನೆ ಸಾಲಿನ ಎಸ್​​ಎಸ್​​ಎಲ್​​ಸಿ ಪರೀಕ್ಷೆಯ ಫಲಿತಾಂಶ ಇಂದು (ಏ.23) ಪ್ರಕಟಗೊಂಡಿದೆ. ಈ ಬಾರಿ ಶೇ. 98.40 ಫಲಿತಾಂಶದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದ್ದರೆ, ಶೇ. 98.18 ಫಲಿತಾಂಶ ಪಡೆದ ಉಡುಪಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಶೇ.85.06 ಫಲಿತಾಂಶದೊಂದಿಗೆ ಕಲಬುರಗಿಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ಇದೇ ವಿಚಾರವನ್ನೀಗ ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್​​ ಅಸ್ತ್ರಮಾಡಿಕೊಂಡಿದ್ದು, ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್​​ ಖರ್ಗೆ ಗುರಿಯಾಗಿಸಿ ವಾಗ್ದಾಳಿ…

Read More

ವಿದ್ಯಾರ್ಥಿಗಳೇ ಗಮನಿಸಿ: SSLC ಫೇಲ್​​ ಆದವರಿಗೆ ಮೂರನೇ ಬಾರಿ ಪರೀಕ್ಷೆ ಇರಲ್ಲ – Kannada News | Karnataka SSLC Exam: No Third Exam for Failed Students

ಬೆಂಗಳೂರು, ಏಪ್ರಿಲ್ 23: ಶಿಕ್ಷಣ ಸಚಿವ ಮಧು ಬಂಗಾರಪ್ಪನವರು 2025-26ನೇ ಸಾಲಿನ SSLC ಫಲಿತಾಂಶವನ್ನು ಪ್ರಕಟಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ. ಉಡುಪಿ ದ್ವಿತೀಯ ಹಾಗೂ ಉತ್ತರ ಕನ್ನಡ ಜಿಲ್ಲೆ ತೃತೀಯ ಸ್ಥಾನದಲ್ಲಿವೆ. ಈ ಬಾರಿಯ ಫಲಿತಾಂಶವು ದಾಖಲೆ ಮಟ್ಟದ ಪ್ರಗತಿ ಕಂಡಿರುವುದರಿಂದ, ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮೂರನೇ ಬಾರಿಯ ಪರೀಕ್ಷೆ ಇರುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಎರಡನೇ ಪರೀಕ್ಷೆಯು ಮೇ 18 ರಿಂದ ಮೇ 25ರವರೆಗೆ ನಡೆಯಲಿದೆ. ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ಪಾಸ್ ಆಗಲು…

Read More