SSLC Results 2026: 1 ಅಂಕದಿಂದ ಫಸ್ಟ್ ರ‍್ಯಾಂಕ್ ಮಿಸ್, ವಿದ್ಯಾರ್ಥಿನಿ ಹೇಳಿದ್ದೇನು? – Kannada News | SSLC Results 2026: Mysuru Student Manaswini Missed Top Place Just 1 Marks

ಮೈಸೂರು, (ಏಪ್ರಿಲ್ 23): 2025-26ನೇ ಸಾಲಿನ ಕರ್ನಾಟಕ SSLC ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಪರೀಕ್ಷೆ ಬರೆದಿದ್ದ 7,70,209 ಮಕ್ಕಳ ಪೈಕಿ 7,24,794 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಆ ಮೂಲಕ ಈ ವರ್ಷ ಎಸ್​​ಎಸ್​​ಎಲ್​​ಸಿಯಲ್ಲಿ ಶೇ.94.1ರಷ್ಟು ವಿದ್ಯಾರ್ಥಿಗಳು ಪಾಸ್​​ ಆಗಿದ್ದಾರೆ. ಇದರಲ್ಲಿ ಮೈಸೂರಿನ ವಿದ್ಯಾರ್ಥಿನಿ ಕೇವಲ ಒಂದು ಅಂಕದಿಂದ ಔಟ್ ಆಫ್ ಔಟ್ ಮಿಸ್ ಮಾಡಿಕೊಂಡಿದ್ದಾಳೆ. ಹೌದು.. ಮೈಸೂರಿನ ಸರಸ್ವತಿಪುರಂನಲ್ಲಿರುವ ವಿಜಯ ವಿಠ್ಠಲ್ ವಿದ್ಯಾ ಸಂಸ್ಥೆ ವಿದ್ಯಾರ್ಥಿನಿ ಮನಸ್ವಿನಿ ಪ್ರದೀಪ್‌ 625 ಕ್ಕೆ 624 ಅಂಕ ಪಡೆದುಕೊಂಡಿದ್ದಾರೆ. ಎಲ್ಲಾ ವಿಷಯದಲ್ಲೂ ಔಟ್ ಆಫ್ ಔಟ್ ತೆಗೆದಿದ್ದಾಳೆ. ಆದ್ರೆ, ವಿಜ್ಞಾನದಲ್ಲಿ ಕೇವಲ 1 ಅಂಕ ಕಡಿಮೆಯಾಗಿದೆ. ಇದರಿಂದ ಔಟ್ ಆಫ್​​ ಔಟ್​​ನಿಂದ ವಂಚಿತಳಾಗಿದ್ದಾಳೆ. ಇನ್ನು ಈ ಬಗ್ಗೆ ಮಾತನಾಡಿರುವ ಮನಸ್ವಿನಿ ಸಂತಸ ಜೊತೆಗೆ ಕೇವಲ ಒಂದು ಅಂಕ ಕಡಿಮೆಯಾಗಿರುವುದಕ್ಕೆ ಕೊಂಚ ಬೇಸರ ಹೊರಹಾಕಿದ್ದಾಳೆ.

ಇದನ್ನೂ ಓದಿ: Karnataka SSLC Result 2026: 625ಕ್ಕೆ 625 ಅಂಕ ಪಡೆದ ಟಾಪರ್ಸ್ ಯಾರು? ಇಲ್ಲಿದೆ ಮಾಹಿತಿ

Source link

ಪ್ರೆಗ್ನೆಂಟ್ ಎಂಬ ಕಾರಣಕ್ಕೆ ದೀಪಿಕಾ ಪಡುಕೋಣೆ ಪಾತ್ರಕ್ಕೆ ಕತ್ತರಿ? ‘ರಾಕಾ’ ಚಿತ್ರತಂಡದ ಸ್ಪಷ್ಟನೆ – Kannada News | Deepika Padukone Raaka Movie role trimming rumours clarified Allu Arjun Atlee

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಎರಡನೇ ಬಾರಿ ತಾಯಿಯಾಗುತ್ತಿರುವ ಸಂಭ್ರಮದಲ್ಲಿದ್ದಾರೆ. ಈ ಸುದ್ದಿ ಹೊರಬಿದ್ದ ಬೆನ್ನಲ್ಲೇ, ಅವರು ನಟಿಸುತ್ತಿರುವ ಬಹುನಿರೀಕ್ಷಿತ ‘ರಾಕಾ’ (Raaka) ಸಿನಿಮಾ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಲವು ವದಂತಿಗಳು ಹರಿದಾಡುತ್ತಿದ್ದವು. ದೀಪಿಕಾ ಗರ್ಭಿಣಿಯಾಗಿರುವ ಕಾರಣ ಚಿತ್ರದಲ್ಲಿ ಅವರ ಪಾತ್ರಕ್ಕೆ ಕತ್ತರಿ ಹಾಕಲಾಗುತ್ತಿದೆ ಅಥವಾ ಅವರನ್ನು ಸಿನಿಮಾದಿಂದ ಕೈಬಿಡಲಾಗುತ್ತಿದೆ ಎಂಬ ಸುದ್ದಿಗಳು ಹಬ್ಬಿದ್ದವು. ಆದರೆ, ಈಗ ಚಿತ್ರತಂಡ ಈ ಎಲ್ಲಾ ವದಂತಿಗಳಿಗೆ ಅಧಿಕೃತವಾಗಿ ಸ್ಪಷ್ಟನೆ ನೀಡಿದೆ.

ಅಲ್ಲು ಅರ್ಜುನ್ ನಾಯಕನಾಗಿ ನಟಿಸುತ್ತಿರುವ ‘ರಾಕಾ’ ಚಿತ್ರದಿಂದ ದೀಪಿಕಾ ಅವರ ಪಾತ್ರವನ್ನು ಟ್ರಿಮ್ ಮಾಡಲಾಗುತ್ತಿದೆ ಎಂಬ ವರದಿಗಳು ಸಂಪೂರ್ಣ ಆಧಾರರಹಿತ ಎಂದು ಚಿತ್ರತಂಡ ಹೇಳಿದೆ. ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಚಿತ್ರತಂಡದವರು, ‘ಎಲ್ಲವೂ ಯೋಜನೆಯಂತೆಯೇ ನಡೆಯುತ್ತಿದೆ. ದೀಪಿಕಾ ಪಡುಕೋಣೆ ಈ ಚಿತ್ರದಲ್ಲಿ ಅತ್ಯಂತ ನಿರ್ಣಾಯಕ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಚಿತ್ರೀಕರಣವು ಯಾವುದೇ ಅಡೆತಡೆಯಿಲ್ಲದೆ ಸಾಗುತ್ತಿದೆ’ ಎಂದು ತಿಳಿಸಿದ್ದಾರೆ.

ವರದಿಗಳ ಪ್ರಕಾರ, ದೀಪಿಕಾ ಪಡುಕೋಣೆ ಅವರು ಗರ್ಭಿಣಿಯಾಗಿದ್ದರೂ ಸಹ ಚಿತ್ರದ ಕೆಲಸಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಚಿತ್ರೀಕರಣದ ವೇಳಾಪಟ್ಟಿಗೆ ಯಾವುದೇ ತೊಂದರೆಯಾಗದಂತೆ ಅವರು ಪಾಲ್ಗೊಂಡಿದ್ದಾರೆ. ಅಷ್ಟೇ ಅಲ್ಲದೇ, ಚಿತ್ರದ ಕೆಲವು ಪ್ರಮುಖ ಸಾಹಸ ದೃಶ್ಯಗಳಲ್ಲೂ ಅವರು ಭಾಗಿಯಾಗಿದ್ದಾರೆ ಎನ್ನಲಾಗಿದೆ. ಪ್ರೆಗ್ನೆಂಟ್ ಆದ ಕಾರಣ ಚಿತ್ರತಂಡವು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಚಿತ್ರೀಕರಣ ನಡೆಸುತ್ತಿದೆ.

ಅಟ್ಲಿ ನಿರ್ದೇಶನದ ಈ ಚಿತ್ರವನ್ನು ‘ಸನ್ ಪಿಕ್ಚರ್ಸ್’ ಸಂಸ್ಥೆ ನಿರ್ಮಿಸುತ್ತಿದೆ. ಈಗಾಗಲೇ ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾದ ಅವರ ಫಸ್ಟ್ ಲುಕ್ ಪೋಸ್ಟರ್ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಅಲ್ಲು ಅರ್ಜುನ್ ಮತ್ತು ದೀಪಿಕಾ ಪಡುಕೋಣೆ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವ ಈ ಚಿತ್ರವು 2027ರಲ್ಲಿ ಬಿಡುಗಡೆ ಆಗಲಿದೆ.

ಇದನ್ನೂ ಓದಿ: ಪ್ರೆಗ್ನೆನ್ಸಿಯಲ್ಲಿರುವಾಗಲೇ ದೊಡ್ಡ ರಿಸ್ಕ್ ತೆಗೆದುಕೊಂಡ ದೀಪಿಕಾ ಪಡುಕೋಣೆ

ಈ ಮೊದಲು ದೀಪಿಕಾ ಪಡುಕೋಣೆ ಅವರು ‘ಸ್ಪಿರಿಟ್’ ಹಾಗೂ ‘ಕಲ್ಕಿ 2898 ಎಡಿ’ ಸಿನಿಮಾದ ಸೀಕ್ವೆಲ್​​ನಿಂದ ಹೊರಬಂದಿದ್ದರು. ದಿನಕ್ಕೆ ಕೇವಲ 8 ಗಂಟೆ ಮಾತ್ರ ಕೆಲಸ ಮಾಡುವುದಾಗಿ ಅವರು ಷರತ್ತು ಹಾಕಿದ್ದರಿಂದ ಆ ಸಿನಿಮಾ ತಂಡಗಳು ಅವರನ್ನು ಬಿಟ್ಟು ಬೇರೆ ನಟಿಯರನ್ನು ಆಯ್ಕೆ ಮಾಡಿಕೊಂಡವು. ಆದರೂ ದೀಪಿಕಾ ಡಿಮ್ಯಾಂಡ್ ಕಡಿಮೆ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಯುವ ಜೊತೆಗಿನ ಫೋಟೋ ಹಂಚಿಕೊಂಡು ಮಹಿಳೆಯರಿಗೆ ಸಂದೇಶ ಕೊಟ್ಟ ಶ್ರೀದೇವಿ ಭೈರಪ್ಪ – Kannada News | Sridevi Byrappa’s Empowering Message for Women Amidst Yuva Divorce Case

ನಟ ಯುವ ರಾಜ್​ಕುಮಾರ್ (Yuva) ಹಾಗೂ ಶ್ರೀದೇವಿ ಬೈರಪ್ಪ ವಿವಾಹ ಆದ ಕೆಲವೇ ವರ್ಷಗಳಲ್ಲಿ ದೂರ ಆಗುವ ನಿರ್ಧಾರಕ್ಕೆ ಬಂದರು. ನಟಿಯ ಜೊತೆ ಯುವ ಅಫೇರ್ ಹೊಂದಿದ್ದಾರೆ ಎಂದು ಶ್ರೀದೇವಿ ಆರೋಪಿಸಿದ್ದಾರೆ. ಇದೇ ಕಾರಣ ನೀಡಿ ಅವರು ಯುವ ಅವರಿಂದ ವಿಚ್ಛೇದನ ಕೇಳಿದ್ದಾರೆ. ಈ ಪ್ರಕರಣ ಇನ್ನೂ ಕೋರ್ಟ್​​ನಲ್ಲಿ ಇದೆ ಎನ್ನಲಾಗಿದೆ. ಈಗ ಶ್ರೀದೇವಿ ಅವರು ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಅದು ಕೂಡ ಯುವ ಜೊತೆಗಿನ ಫೋಟೋ ಹಂಚಿಕೊಂಡು! ಫೋಟೋ ಕ್ಯಾಪ್ಶನ್​​ ಅಲ್ಲಿ ಉದ್ದನೆಯ ಸಂದೇಶ ಬರೆದಿದ್ದಾರೆ.

‘ತಡವಾಗುವುದಕ್ಕೂ ಮೊದಲು ಮಹಿಳೆಯರೇ ನಿಮ್ಮ ಹಕ್ಕುಗಳ ಬಗ್ಗೆ ತಿಳಿಯಿರಿ’ ಎಂದು ಬರಹ ಆರಂಭಿಸಿದ್ದಾರೆ ಶ್ರೀದೇವಿ. ‘ನಾನು ಈ ಹಕ್ಕುಗಳ ಬಗ್ಗೆ ಶಿಕ್ಷಣದ ಮೂಲಕ ಕಲಿತಿಲ್ಲ. ಕಠಿಣ ಸಮಯಗಳಲ್ಲಿ ಮತ್ತು ಎಲ್ಲಾ ಮಹಿಳೆಯರು ಘನತೆಯಿಂದ ಬದುಕುವ ಸಲುವಾಗಿ ನಮಗಿಂತ ಮೊದಲು ಹೋರಾಡಿದ ಜನರಿಂದ ಕಲಿತಿದ್ದೇನೆ. ಮದುವೆ ಮಾಡಿ ಮತ್ತೊಂದು ಮನೆಗೆ ಕಳುಹಿಸಿಕೊಡಲು ಮಾತ್ರ ನಾವು ಹುಡುಗಿಯರನ್ನು ಸಿದ್ಧಪಡಿಸುತ್ತೇವೆ. ಆದರೆ, ಅವರ ಅವರ ಹಕ್ಕುಗಳನ್ನು ಪಡೆದುಕೊಳ್ಳಲು ಸಿದ್ಧಪಡಿಸೋದು ತುಂಬಾನೇ ಕಡಿಮೆ’ ಎಂದು ಅವರು ಹೇಳಿದ್ದಾರೆ.

‘ನೋವು ಮತ್ತು ಸಂಕಟಗಳನ್ನು ಅನುಭವಿಸುತ್ತಿರುವ, ಇನ್ನೂ ಹೋರಾಡಲು ಮತ್ತು ಬಿಟ್ಟುಕೊಡದ ಮಸ್ಥಿತಿ ಇರುವ ಮಹಿಳೆರಿಗೆ ಎರಡು ಸಂದೇಶ.

1. ‘ಸಂತೋಷದಿಂದ ದಾಂಪತ್ಯ ಆರಂಭಿಸಿ ನಂತರ ಅವರು ನಿಮ್ಮ ಬಗ್ಗೆ ಸುಳ್ಳು ಆರೋಪ ಮಾಡಿದರೆ ತಾಳ್ಮೆಯಿಂದ ಇರಿ. ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ. ಸಾಬೀತುಪಡಿಸಬೇಕಿರುವುದು ಅವರ ಜವಾಬ್ದಾರಿ, ನಿಮ್ಮದಲ್ಲ. ಮಹಿಳೆಯರಿಗೆ ಅವಮಾನ ಮಾಡುವುದು ಅವರು ತಪ್ಪಿಸಿಕೊಳ್ಳಲು ಬಳಸುವ ಅಗ್ಗದ ತಂತ್ರ. ನೆನಪಿಡಿ, ನ್ಯಾಯಾಲಯವು ಪುರಾವೆಗಳನ್ನು ಕೇಳುತ್ತದೆಯೇ ಹೊರತು, ಕೆಲವು ಅಗ್ಗದ ಸ್ಕ್ರಿಪ್ಟ್ ಅಲ್ಲ’ ಎಂದಿದ್ದಾರೆ ಶ್ರೀದೇವಿ.

2. ‘ಸೋಶಿಯಲ್ ಮೀಡಿಯಾ ಫೋಟೋಗಳನ್ನು ತೆಗೆದುಹಾಕಲು ನಿಮ್ಮನ್ನು ಅವರು ಒತ್ತಾಯಿಸುತ್ತಾರೆ. ಅದಕ್ಕೆ ಅವರು ನೀಡುತ್ತಿರುವ ಕಾರಣ, ನಮಗೆ ಅದನ್ನು ಇಟ್ಟುಕೊಳ್ಳಲು ಕಾನೂನುಬದ್ಧ ಹಕ್ಕಿಲ್ಲ ಎಂದು. ಮದುವೆಯಾಗಿದ್ದರೂ ಅಕ್ರಮ ಸಂಬಂಧದಲ್ಲಿ ಇರುವುದು ಮತ್ತು ಮದುವೆ ಆದರೂ ಸ್ವತಂತ್ರವಾಗಿ ಓಡಾಡುವುದು ಕಾನೂನುಬದ್ಧವಲ್ಲ’ ಎಂದಿದ್ದಾರೆ ಅವರು.

‘ಪ್ರತಿಯೊಂದು ಗಾಯವು ಗೋಚರಿಸುವುದಿಲ್ಲ. ಆದರೆ ಪ್ರತಿಯೊಂದು ಮೌನಕ್ಕೂ ಬೆಲೆ ಇರುತ್ತದೆ. ಮಹಿಳೆಯರಿಗೆ ಹಾನಿ ಮಾಡುವ ಮತ್ತು ಅವರನ್ನು ಹಗುರವಾಗಿ ಪರಿಗಣಿಸುವ ಸಮಾಜವನ್ನು ನಾವು ಸಾಮಾನ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ. ನಮ್ಮ ಪೀಳಿಗೆಯೊಂದಿಗೆ ಇದು ಕೊನೆಗೊಳ್ಳಬೇಕು. ನಮ್ಮ ಮನೆಗಳಲ್ಲಿರುವ ಹೆಣ್ಣು ಮಕ್ಕಳು ವಾಸಿಸಲು ಉತ್ತಮ ಹಾಗೂ ಸುರಕ್ಷಿತ ಜಗತ್ತನ್ನು ಹೊಂದಬೇಕು’ ಎಂದು ತಮ್ಮ ಸಾಲುಗಳನ್ನು ಪೂರ್ಣಗೊಳಿಸಿದ್ದಾರೆ.

ಇದನ್ನೂ ಓದಿ: ಯುವ ಹಾಗೂ ಆ ನಟಿ ಬಗ್ಗೆ ಕೇಳಿದ್ದಕ್ಕೆ ರಾಜ್​​ಕುಮಾರ್ ಹಾಡಿನ ಮೂಲಕ ಉತ್ತರಿಸಿದ ಶ್ರೀದೇವಿ

2019ರಲ್ಲಿ ಯುವ ಹಾಗೂ ಶ್ರೀದೇವಿ ವಿವಾಹ ನಡೆಯಿತು. ಇಬ್ಬರೂ ಪ್ರೀತಿಸಿ ಮದುವೆ ಆದರು. ವಿವಾಹ ಆದ ಕೆಲ ವರ್ಷಗಳ ಬಳಿಕ ಇಬ್ಬರೂ ದೂರ ಆಗುವ ನಿರ್ಧಾರಕ್ಕೆ ಬಂದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 3:05 pm, Thu, 23 April 26

Source link

ಡೆನ್​ಮಾರ್ಕ್ನಲ್ಲಿ ಎರಡು ರೈಲುಗಳ ಮುಖಾಮುಖಿ ಡಿಕ್ಕಿ, 12 ಮಂದಿಗೆ ಗಾಯ, ನಾಲ್ವರ ಸ್ಥಿತಿ ಚಿಂತಾಜನಕ – Kannada News | Train Collision Near Copenhagen Leaves Several Critically Injured

ಡೆನ್ಮಾರ್ಕ್​, ಏಪ್ರಿಲ್ 23: ಎರಡು ರೈಲುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಕಾರಣ 12 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಡೆನ್​ಮಾರ್ಕ್​ನಲ್ಲಿ ನಡೆದಿದೆ. ಕೋಪನ್ ಹ್ಯಾಗನ್ ನಿಂದ ಉತ್ತರಕ್ಕೆ ಸುಮಾರು 40 ಕಿ.ಮೀ ದೂರದಲ್ಲಿರುವ ಹಿಲ್ಲರೋಡ್ ಬಳಿ ಬೆಳಗ್ಗೆ 6.30 ರ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು,12 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, 4 ಮಂದಿಗೆ ಅತ್ಯಂತ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಎಲ್ಲಾ ಪ್ರಯಾಣಿಕರನ್ನು ರೈಲುಗಳಿಂದ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡಿಕ್ಕಿಯ ಕಾರಣವನ್ನು ನಿರ್ಧರಿಸಲು ತನಿಖೆಗಳು ನಡೆಯುತ್ತಿವೆ, ಸ್ಥಳದಿಂದ ಬಂದ ಚಿತ್ರಗಳು ಎರಡೂ ರೈಲುಗಳ ಮುಂಭಾಗದ ಭಾಗಗಳು ತೀವ್ರವಾಗಿ ಹಾನಿಗೊಳಗಾಗಿರುವುದನ್ನು ತೋರಿಸುತ್ತವೆ, ಆದರೂ ರೈಲುಗಳು ಹಳಿ ತಪ್ಪಿಲ್ಲ. ಈ ಮಾರ್ಗವನ್ನು ಸ್ಥಳೀಯ ನಿವಾಸಿಗಳು, ಕಾರ್ಮಿಕರು ಮತ್ತು ಶಾಲಾ ಮಕ್ಕಳು ಹೆಚ್ಚಾಗಿ ಬಳಸುತ್ತಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ತೃತೀಯ ಭಾಷೆ ಹಿಂದಿಯಲ್ಲಿ ಅನುತ್ತೀರ್ಣರಾದವರ ಸಂಖ್ಯೆ ಬಾರಿ ಇಳಿಕೆ – Kannada News | SSLC Results 2026: Number of students failing in third language Hindi has decreased

ಬೆಂಗಳೂರು, (ಏಪ್ರಿಲ್ 23): ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಲಿ (Karnataka School Examination and Assessment Board) 2025–26ನೇ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ (10ನೇ ತರಗತಿ) ಮುಖ್ಯ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದ್ದು, ಈ ಬಾರಿ ರಾಜ್ಯದಲ್ಲಿ ದಾಖಲೆಯ ಮಟ್ಟದ ಸಾಧನೆ ಕಂಡುಬಂದಿದೆ. ಒಟ್ಟಾರೆ ಉತ್ತೀರ್ಣ ಪ್ರಮಾಣವು ಶೇಕಡಾ 94.10 ಆಗಿದ್ದು, ಕಳೆದ ವರ್ಷಗಳಿಗಿಂತ ಗಮನಾರ್ಹ ಏರಿಕೆಯಾಗಿದೆ. ಅದರಲ್ಲೂ ಮುಖ್ಯವಾಗಿ ಈ ಬಾರಿ ಹಿಂದಿ ಬಗ್ಗೆ ಭಾರೀ ಗೊಂದಲಗಳು ಉದ್ಭವಿಸಿದ್ದವು. ಪರೀಕ್ಷೆ ಸಮಯದಲ್ಲೇ ಅಂಕ ಇಲ್ಲ ಗ್ರೇಡ್ ನೀಡುವ ಬಗ್ಗೆ ತೀರ್ಮಾನಿಸಲಾಗಿದ್ದು, ಕೊನೆ ಹೈಕೋರ್ಟ್ ಏಕಾಏಕಿ ಈ ರೀತಿ ಮಾಡುವುದು ಸರಿ ಅಲ್ಲ. ಅಂಕ ನೀಡಿಬೇಕೆಂದು ಆದೇಶಿಸಿದ್ದು, ಅದರಂತೆ ಇದೀಗ ಗ್ರೇಡ್ ಬದಲಾಗಿ ಅಂಕಗಳನ್ನ ನೀಡಲಾಗಿದೆ. ಹೀಗೆ ಹಲವು ಗೊಂದಲಗಳ ನಡುವೆಯೇ ಹಿಂದಿ ಪರೀಕ್ಷೆಯಲ್ಲಿ ಫೇಲಾದವರ ಸಂಖ್ಯೆ ಇಳಿಕೆಯಾಗಿದ್ದು, 11,128 ವಿದ್ಯಾರ್ಥಿಗಳು ಹಿಂದಿ ಭಾಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ. ಇದೀಗ ಫೇಲಾದವರಿಗೆ ತೃತೀಯ ಭಾಷೆಗೆ ಅಂಕಗಳ ಉತ್ತಮ ಪಡಿಸಲು ಶುಲ್ಕ ವಿನಾಯಿತಿ ನೀಡಲಾಗಿದೆ.

ಇದನ್ನೂ ಓದಿ: SSLC District Wise Result: ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ

Source link

SSLC ಪರೀಕ್ಷೆಯಲ್ಲಿ ಕಲಬುರಗಿಗೆ ಕೊನೇ ಸ್ಥಾನ: ಪ್ರಿಯಾಂಕ್​​ ಖರ್ಗೆ ಗುರಿಯಾಗಿಸಿ ಬಿಜೆಪಿ, ಜೆಡಿಎಸ್​​ ವ್ಯಂಗ್ಯ – Kannada News | Kalaburagi Last in SSLC: BJP, JDS Slam Priyank Kharge Over District’s Poor Results

ಪ್ರಿಯಾಂಕ್​​ ಖರ್ಗೆ ವಿರುದ್ಧ ಬಿಜೆಪಿ, ಜೆಡಿಎಸ್​​ ಕಿಡಿ

ಬೆಂಗಳೂರು, ಏಪ್ರಿಲ್​​ 23: 2025-26ನೆ ಸಾಲಿನ ಎಸ್​​ಎಸ್​​ಎಲ್​​ಸಿ ಪರೀಕ್ಷೆಯ ಫಲಿತಾಂಶ ಇಂದು (ಏ.23) ಪ್ರಕಟಗೊಂಡಿದೆ. ಈ ಬಾರಿ ಶೇ. 98.40 ಫಲಿತಾಂಶದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದ್ದರೆ, ಶೇ. 98.18 ಫಲಿತಾಂಶ ಪಡೆದ ಉಡುಪಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಶೇ.85.06 ಫಲಿತಾಂಶದೊಂದಿಗೆ ಕಲಬುರಗಿಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ಇದೇ ವಿಚಾರವನ್ನೀಗ ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್​​ ಅಸ್ತ್ರಮಾಡಿಕೊಂಡಿದ್ದು, ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್​​ ಖರ್ಗೆ ಗುರಿಯಾಗಿಸಿ ವಾಗ್ದಾಳಿ ನಡೆಸಿವೆ. ಸ್ವಂತ ಜಿಲ್ಲೆಯ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಖರ್ಗೆ ಕುಟುಂಬ ವಿಫಲವಾಗಿದೆ ಎಂದು ವ್ಯಂಗ್ಯವಾಡಿವೆ.

ನಾಚಿಕೆಗೇಡಿನ ಸಂಗತಿ ಎಂದ JDS

ಜೆಡಿಎಸ್​​ ಪೋಸ್ಟ್

​​SSLC ಫಲಿತಾಂಶದಲ್ಲಿ ಕಲಬುರಗಿ 35 ಅಂದರೆ ಕೊನೆಯ ಸ್ಥಾನ ಪಡೆದಿದ್ದು, ಹಿಂದಿನ ಸಾಲಿನಲ್ಲಿಯೂ 34ನೇ ಸ್ಥಾನದಲ್ಲಿತ್ತು. 4-5 ದಶಕಗಳಿಂದ ಕಲಬುರಗಿ ಜಿಲ್ಲೆ ಆಳುತ್ತಿರುವ ಖರ್ಗೆ ಕುಟುಂಬ ಸ್ವಂತ ಜಿಲ್ಲೆಯ ಮಕ್ಕಳ ಭವಿಷ್ಯ ರೂಪಿಸುವಲ್ಲಿ ವಿಫಲವಾಗಿರುವುದು ನಾಚಿಕೆಗೇಡಿನ ಸಂಗತಿ. ಕಲಬುರಗಿ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ವಾತಾವರಣ, ಶಿಕ್ಷಕರ ನೇಮಕ ಸೇರಿದಂತೆ ಶಿಕ್ಷಣದ ಪ್ರಗತಿಗೆ ಅಗತ್ಯವಿರುವ ಮೂಲಸೌಕರ್ಯ ಕಲ್ಪಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದೀರಿ ಎಂದು ಪ್ರಿಯಾಂಕ್ ಖರ್ಗೆ ವಿರುದ್ಧ JDS ಆಕ್ರೋಶ ವ್ಯಕ್ತಪಡಿಸಿದೆ. ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಅವರೇ, ನಿಮ್ಮ ಭಾಷಣದ ‘ಸಾಧನೆ’ಗೆ ಈ ಫಲಿತಾಂಶವನ್ನು ಸೇರಿಸಿಕೊಳ್ಳಿ. ಕಲಬುರಗಿಯನ್ನು ಅಕ್ಷರಶಃ ಶೈಕ್ಷಣಿಕ ಅಂಧಕಾರಕ್ಕೆ ದೂಡಿದ್ದೀರಿ. ಮಾತಿನಲ್ಲಿ ತೋರಿಸುವ ಶೌರ್ಯ ಶಿಕ್ಷಣದ ಸುಧಾರಣೆಯಲ್ಲಿ ತೋರಿಸಿ ಎಂದಿರುವ ಜೆಡಿಎಸ್​​ ಪ್ರಿಯಾಂಕ್ ಖರ್ಗೆಯನ್ನು ನಾಟಿಕೋಳಿ ಮಿನಿಸ್ಟರ್‌ ಎಂದು ವ್ಯಂಗ್ಯವಾಡಿದೆ.

ಇದನ್ನೂ ಓದಿ: ವಿದ್ಯಾರ್ಥಿಗಳೇ ಗಮನಿಸಿ; SSLC ಫೇಲ್​​ ಆದವರಿಗೆ ಮೂರನೇ ಬಾರಿ ಪರೀಕ್ಷೆ ಇರಲ್ಲ

ಟ್ವೀಟ್ ಎಲ್ಲಿ ಮಹಾಜ್ಞಾನಿ ಎಂದ ಬಿಜೆಪಿ

ಮತ್ತೊಂದೆಡೆ ಫಲಿತಾಂಶ ಸಂಬಂಧ ವಿಪಕ್ಷ ಬಿಜೆಪಿಯೂ ತನ್ನ ಎಕ್ಸ್​​ ಖಾತೆಯ ಮೂಲಕ ಸಚಿವ ಪ್ರಿಯಾಂಕ್​​ ಖರ್ಗೆ ಅವರ ಕಾಲೆಳೆದಿದೆ. ಪ್ರಿಯಾಂಕ್​​ ರಿಸಲ್ಟ್​​ ವೀಕ್ಷಿಸುತ್ತಿರುವಂತಹ ಫೋಟೋ ಜೊತೆಗೆ SSLC ಫಲಿತಾಂಶ ಬಂದಿದೆ. ಟ್ವೀಟ್​​ ಮಾಡಿ ಖರ್ಗೆ ಎಂಬ ಶೀರ್ಷಿಕೆಯ ಜೊತೆ ​​ ಪೋಸ್ಟ್​ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 2:44 pm, Thu, 23 April 26

Source link

ವಿದ್ಯಾರ್ಥಿಗಳೇ ಗಮನಿಸಿ: SSLC ಫೇಲ್​​ ಆದವರಿಗೆ ಮೂರನೇ ಬಾರಿ ಪರೀಕ್ಷೆ ಇರಲ್ಲ – Kannada News | Karnataka SSLC Exam: No Third Exam for Failed Students

ಬೆಂಗಳೂರು, ಏಪ್ರಿಲ್ 23: ಶಿಕ್ಷಣ ಸಚಿವ ಮಧು ಬಂಗಾರಪ್ಪನವರು 2025-26ನೇ ಸಾಲಿನ SSLC ಫಲಿತಾಂಶವನ್ನು ಪ್ರಕಟಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ. ಉಡುಪಿ ದ್ವಿತೀಯ ಹಾಗೂ ಉತ್ತರ ಕನ್ನಡ ಜಿಲ್ಲೆ ತೃತೀಯ ಸ್ಥಾನದಲ್ಲಿವೆ. ಈ ಬಾರಿಯ ಫಲಿತಾಂಶವು ದಾಖಲೆ ಮಟ್ಟದ ಪ್ರಗತಿ ಕಂಡಿರುವುದರಿಂದ, ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮೂರನೇ ಬಾರಿಯ ಪರೀಕ್ಷೆ ಇರುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಎರಡನೇ ಪರೀಕ್ಷೆಯು ಮೇ 18 ರಿಂದ ಮೇ 25ರವರೆಗೆ ನಡೆಯಲಿದೆ. ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ಪಾಸ್ ಆಗಲು ಪ್ರಯತ್ನಿಸಬಹುದು. ಇದಕ್ಕಾಗಿ ಶಿಕ್ಷಕರು ಮತ್ತು ಇಲಾಖೆಯು ಸೂಕ್ತ ತರಬೇತಿ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

IPL 2026: ಬೆರಳು ತೋರಿಸಿದಕ್ಕೆ 35,700 ರೂ. ದಂಡ..! – Kannada News | IPL 2026: Nandre Burger Fined for Rishabh Pant Send Off

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 32ನೇ ಪಂದ್ಯದಲ್ಲಿ ಅಶಿಸ್ತು ತೋರಿದ ರಾಜಸ್ಥಾನ್ ರಾಯಲ್ಸ್ ತಂಡದ ವೇಗಿ ನಾಂಡ್ರೆ ಬರ್ಗರ್ ಅವರಿಗೆ ಪಂದ್ಯದ ಸಂಭಾವನೆಯ ಶೇ. 10 ರಷ್ಟು ದಂಡ ವಿಧಿಸಲಾಗಿದೆ. ಏಪ್ರಿಲ್ 22 ರಂದು ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಬರ್ಗರ್ ಆಕ್ರಮಣಕಾರಿಯಾಗಿ ಸಂಭ್ರಮಿಸಿದ್ದರು.

ಈ ಪಂದ್ಯದ ಎರಡನೇ ಓವರ್‌ನಲ್ಲಿ ನಾಂಡ್ರೆ ಬರ್ಗರ್ ಅವರು ಎಲ್‌ಎಸ್‌ಜಿ ನಾಯಕ ರಿಷಭ್ ಪಂತ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿದರು. ವಿಕೆಟ್ ಪಡೆದ ಸಂಭ್ರಮದಲ್ಲಿ ಬರ್ಗರ್ ಅವರು ಪಂತ್ ಅವರತ್ತ ಬೆರಳು ತೋರಿಸಿ ಬೀಳ್ಕೊಡುಗೆ ನೀಡಿದ್ದರು. ಇದನ್ನು ಐಪಿಎಲ್ ನೀತಿ ಸಂಹಿತೆಯ ಉಲ್ಲಂಘನೆ ಎಂದು ಪರಿಗಣಿಸಲಾಗಿದೆ.

ಶಿಕ್ಷೆಯ ವಿವರ:

  • ನಿಯಮದ ಉಲ್ಲಂಘನೆ: ನಾಂಡ್ರೆ ಬರ್ಗರ್ ಅವರು ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.5 ರ ಅಡಿಯಲ್ಲಿ ‘ಲೆವೆಲ್ 1’ ಅಪರಾಧ ಎಸಗಿದ್ದಾರೆ ಎಂದು ಸಾಬೀತಾಗಿದೆ. ಇದು ಎದುರಾಳಿ ಆಟಗಾರನನ್ನು ಕೆರಳಿಸುವಂತಹ ಸನ್ನೆ ಅಥವಾ ಭಾಷೆಯನ್ನು ಬಳಸುವುದಕ್ಕೆ ಸಂಬಂಧಿಸಿದೆ.
  • ದಂಡ: ಪಂದ್ಯದ ಸಂಭಾವನೆಯಲ್ಲಿ ಶೇ. 10 ರಷ್ಟು ಕಡಿತ ಮಾಡಲಾಗಿದ್ದು, ಅವರ ಶಿಸ್ತಿನ ದಾಖಲೆಯಲ್ಲಿ ಒಂದು ಡಿಮೆರಿಟ್ ಪಾಯಿಂಟ್ ಸೇರಿಸಲಾಗಿದೆ. ಬರ್ಗರ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರಿಂದ ಹೆಚ್ಚಿನ ವಿಚಾರಣೆಯ ಅಗತ್ಯವಿರಲಿಲ್ಲ.

35,700 ರೂ. ದಂಡ..!

ಸೌತ್ ಆಫ್ರಿಕಾ ವೇಗಿ ನಾಂಡ್ರೆ ಬರ್ಗರ್ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡ 50 ಲಕ್ಷ ರೂ.ಗೆ ಖರೀದಿಸಿದೆ. ಅದರಂತೆ ಅವರ ಲೀಗ್​ ಹಂತದ ಪ್ರತಿ ಪಂದ್ಯದ ಸಂಭಾವನೆ 3.57 ಲಕ್ಷ ರೂ.

3.57 ಲಕ್ಷ ರೂ. ಪಂದ್ಯ ಸಂಭಾವನೆಯಿಂದ 10% ದಂಡ ಕಟ್ಟಬೇಕಾಗಿದೆ. ಅಂದರೆ ಬೆರಳು ತೋರಿಸಿ ಆಕ್ರಮಣಕಾರಿಯಾಗಿ ಸಂಭ್ರಮಿಸಿದ್ದಕ್ಕೆ ನಾಂಡ್ರೆ ಬರ್ಗರ್ 35,700 ರೂ. ದಂಡ ಕಟ್ಟಬೇಕಾಗಿ ಬಂದಿದೆ.

ಪಂದ್ಯದ ಫಲಿತಾಂಶ:

ಈ ಪಂದ್ಯದಲ್ಲಿ. ಮೊದಲು ಬ್ಯಾಟಿಂಗ್ ಮಾಡಿದ್ದ ರಾಜಸ್ಥಾನ್ ರಾಯಲ್ಸ್ ತಂಡವು ರವೀಂದ್ರ ಜಡೇಜಾ ಅವರ ಅಜೇಯ 43 ರನ್ ನೆರವಿನಿಂದ 159 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಲಕ್ನೋ ತಂಡ 119 ರನ್‌ಗಳಿಗೆ ಆಲೌಟ್ ಆಗಿ 40 ರನ್‌ಗಳ ಸೋಲೊಪ್ಪಿಕೊಂಡಿದೆ.

ಇದನ್ನೂ ಓದಿ: 4 ಸರಣಿಗಳ ವೇಳೆ ಜಸ್​ಪ್ರೀತ್ ಬುಮ್ರಾಗೆ ರೆಸ್ಟ್​..!

ಈ ಗೆಲುವಿನೊಂದಿಗೆ ರಾಜಸ್ಥಾನ್ ರಾಯಲ್ಸ್ ತಂಡವು ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದರೆ, ಲಕ್ನೋ ಸೂಪರ್ ಜೈಂಟ್ಸ್ ತಂಡವು ಪಾಯಿಂಟ್ಸ್ ಟೇಬಲ್​ನಲ್ಲಿ 9ನೇ ಸ್ಥಾನಕ್ಕೆ ಕುಸಿದಿದೆ.

Source link

Video: ಮದುವೆ ಒಂದು ವಾರವಿರುವಾಗ ಪ್ರೇಮಿಯೊಂದಿಗೆ ಓಡಿ ಹೋಗಲು ಯುವತಿ ಯತ್ನ, ಹಿಗ್ಗಾಮುಗ್ಗ ಥಳಿಸಿದ ತಂದೆ – Kannada News | Banda Incident: Man Assaulted daughter After Alleged Elopement Attempt

ಬಂದಾ, ಏಪ್ರಿಲ್ 23: ಮದುವೆ ಒಂದು ವಾರವಿರುವಾಗ ಯುವತಿ ಪ್ರೇಮಿಯೊಂದಿಗೆ ಓಡಿ ಹೋಗಲು ಯತ್ನಿಸಿರುವ ಘಟನೆ ಬಂದಾದಲ್ಲಿ ನಡೆದಿದೆ. ಸರಿಯಾದ ಸಮಯಕ್ಕೆ ಕುಟುಂಬವು ಆಕೆಯನ್ನು ಹಿಡಿದಿತ್ತು. ಆಕೆಯ ಸಹೋದರ ಹಾಗೂ ತಂದೆ ಇಬ್ಬರು ಸೇರಿ ಆಕೆಯನ್ನು ಥಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮುಂದಿನ ವಾರ ಮದುವೆ, ಮಗಳು ಇಂಥಾ ಕೆಲಸ ಮಾಡಿ ತನ್ನ ಮರ್ಯಾದೆ ತೆಗೆಯಲು ಹೊರಟಿದ್ದಾಳೆ ಎಂದು ಆರೋಪಿಸಿ ಆಕೆಯನ್ನು ರಸ್ತೆಯಲ್ಲೇ ಥಳಿಸಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

CET ಪರೀಕ್ಷೆ: ಆಭರಣ ಧರಿಸಿ ಬಂದಿದ್ದ ವಿದ್ಯಾರ್ಥಿಗಳಿಗೆ ಶಾಕ್​​ ಕೊಟ್ಟ ಸಿಬ್ಬಂದಿ – Kannada News | Karnataka CET: Student Forced to Remove Jewellery Before Exam Amid Strict Dress Code

ಬೆಂಗಳೂರು, ಏಪ್ರಿಲ್​​ 23: ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯದಾದ್ಯಂತ ಸಿಇಟಿ ಪರೀಕ್ಷೆಯು ಇಂದಿನಿಂದ ಆರಂಭವಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ವತಿಯಿಂದ ಈ ಪ್ರಮುಖ ಪರೀಕ್ಷೆಯನ್ನು ಎರಡು ದಿನಗಳ ಕಾಲ ನಡೆಸಲಾಗುತ್ತಿದೆ. ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಅಭ್ಯರ್ಥಿಗಳು ಯಾವುದೇ ಆಭರಣಗಳನ್ನು ಧರಿಸಿ ಪರೀಕ್ಷಾ ಕೊಠಡಿಗೆ ಪ್ರವೇಶಿಸದಂತೆ ಸೂಚನೆ ನೀಡಲಾಗಿದೆ. ಮೊಬೈಲ್ ಫೋನ್‌ಗಳು, ಸ್ಮಾರ್ಟ್ ವಾಚ್‌ಗಳು ಅಥವಾ ಇತರ ಯಾವುದೇ ಎಲೆಕ್ಟ್ರಾನಿಕ್ ಸಾಧನಗಳಿಗೂ ಕೂಡ ಪರೀಕ್ಷಾ ಕೇಂದ್ರದೊಳಗೆ ಅನುಮತಿ ಇರುವುದಿಲ್ಲ. ಈ ನಡುವೆಯೂ ಕಿವಿಯೋಲೆ, ಬಳೆ, ಚೈನ್ ಧರಿಸಿ ಬಂದಿದ್ದ ವಿದ್ಯಾರ್ಥಿಗಳಿಂದ ಅವನ್ನು ತೆಗೆಸಿ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟ ಪ್ರಸಂಗ ಕೆಲವೆಡೆ ನಡೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version