ಝಲ್ಮುರಿ ತಿಂದಿದ್ದು ನಾನು, ಖಾರವಾಗಿದ್ದು ಟಿಎಂಸಿಗೆ: ಬಂಗಾಳದಲ್ಲಿ ಪ್ರಧಾನಿ ಮೋದಿ ಲೇವಡಿ – Kannada News | I ate jhalmuri TMC felt the heat PM Modi jab at Mamata Banerjee in West Bengal
ನವದೆಹಲಿ, ಏಪ್ರಿಲ್ 23: “ಬಂಗಾಳದಲ್ಲಿ ನಾನು ಝಲ್ಮುರಿ ಸವಿದ ವಿಷಯವು ಇಲ್ಲಿನ ಕೆಲವು ಜನರನ್ನು ನಡುಗಿಸಿತು ಎಂದು ನಾನು ಕೇಳಿದೆ. ತಮಾಷೆಯೆಂದರೆ ಝಲ್ಮುರಿ ತಿಂದಿದ್ದು ನಾನೇ ಆದರೂ ಅದರ ಖಾರ ಅನುಭವಿಸಿದ್ದು ತೃಣಮೂಲ ಕಾಂಗ್ರೆಸ್. ಮೇ 4ರಂದು ಫಲಿತಾಂಶಗಳು ಘೋಷಣೆಯಾದ ನಂತರ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ವಿಜಯವನ್ನು ಆಚರಿಸುತ್ತದೆ. ಆ ಸಮಯದಲ್ಲಿ ಸಿಹಿತಿಂಡಿಗಳು ಮತ್ತು ಝಲ್ಮುರಿ ಎರಡನ್ನೂ ವಿತರಿಸಲಾಗುತ್ತದೆ” ಎಂದು ಪ್ರಧಾನಿ ಮೋದಿ (PM Narendra Modi) ಹೇಳಿದ್ದಾರೆ. “ಇಂದು ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಮತದಾನ…