ಕಾಲಿವುಡ್ ನಟ ಅಜಿತ್ ಅವರು ಮುಂಜಾನೆಯೇ ಬಂದು ಮತ ಹಾಕಿದ್ದಾರೆ. ಈ ಮೊದಲು ಅವರು ರೇ್ ಕಾರಣಕ್ಕೆ ವಿದೇಶಕ್ಕೆ ತೆರಳಿದ್ದರು. ಅವರು ಮತ ಹಾಕಲು ಚೆನ್ನೈಗೆ ಬಂದಿದ್ದರು ಎನ್ನಲಾಗಿದೆ.
ಕಾಲಿವುಡ್ ನಟ ಅಜಿತ್ ಅವರು ಮುಂಜಾನೆಯೇ ಬಂದು ಮತ ಹಾಕಿದ್ದಾರೆ. ಈ ಮೊದಲು ಅವರು ರೇ್ ಕಾರಣಕ್ಕೆ ವಿದೇಶಕ್ಕೆ ತೆರಳಿದ್ದರು. ಅವರು ಮತ ಹಾಕಲು ಚೆನ್ನೈಗೆ ಬಂದಿದ್ದರು ಎನ್ನಲಾಗಿದೆ.
ಸಾಯಿ ಪಲ್ಲವಿ (Sai Pallavi) ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟಿ. ಅವರನ್ನು ಲೇಡಿ ಪವರ್ ಸ್ಟಾರ್ ಎಂದು ಸಹ ಕರೆಯಲಾಗುತ್ತದೆ. ಇತರೆ ಸಮಕಾಲೀನ ನಟಿಯರಂತಲ್ಲದೆ, ಪಾತ್ರಕ್ಕೆ ಪ್ರಾಧಾನ್ಯತೆ ಇದ್ದರಷ್ಟೆ ಸಿನಿಮಾಗಳನ್ನು ಒಪ್ಪಿಕೊಳ್ಳುವ ಮತ್ತು ಸಿನಿಮಾನಲ್ಲಿಯೂ ಸಹ ಗ್ಲಾಮರ್ ರಹಿತವಾದ ಉಡುಪುಗಳನ್ನು ಮಾತ್ರವೇ ಧರಿಸುವ, ಐಟಂ ಹಾಡುಗಳಿಂದ ಬಹಳ ದೂರವೇ ಉಳಿದಿರುವ ನಟಿ ಸಾಯಿ ಪಲ್ಲವಿ, ಸಿನಿಮಾಗಳ ಜೊತೆಗೆ ಪರದೆಯಾಚೆಯ ತಮ್ಮ ವ್ಯಕ್ತಿತ್ವದಿಂದಲೂ ಗಮನ ಸೆಳೆಯುತ್ತಲೇ ಬಂದಿದ್ದಾರೆ. ಅತ್ಯಂತ ವೃತ್ತಿಪರ ನಟಿಯರಲ್ಲಿ ಒಬ್ಬರಾಗಿರುವ ಸಾಯಿ ಪಲ್ಲವಿ, ಒಮ್ಮೆ ಮಾತ್ರ ಸೆಟ್ನಲ್ಲಿ ಕಣ್ನೀರು ಹಾಕಿದ್ದರಂತೆ.
ಸಾಯಿ ಪಲ್ಲವಿ ಸಾಮಾನ್ಯವಾಗಿ ಒಂದು ಬಾರಿಗೆ ಒಂದು ಸಿನಿಮಾನಲ್ಲಿ ಮಾತ್ರ ನಟಿಸುತ್ತಾರಂತೆ. ಆದರೆ ಕೋವಿಡ್ ಇಂದಾಗಿ ಈ ನಿಯಮ ಮುರಿಯಿತಂತೆ. ಕೋವಿಡ್ ಬಳಿಕ ಅನಿವಾರ್ಯವಾಗಿ ಒಟ್ಟಿಗೆ ಮೂರು ಸಿನಿಮಾನಲ್ಲಿ ಸಾಯಿ ಪಲ್ಲವಿ ನಟಿಸಬೇಕಾಯ್ತಂತೆ. ನಿರ್ಮಾಪಕರಿಗೆ ಸಮಸ್ಯೆ ಆಗುತ್ತದೆ ಎಂಬ ಕಾರಣಕ್ಕೆ ಸಾಯಿ ಪಲ್ಲವಿ ನಿಯಮ ಮುರಿದು ನಟಿಸಲು ಒಪ್ಪಿಕೊಂಡರಂತೆ. ಆದರೆ ಅದರಿಂದ ಅವರು ಸಾಕಷ್ಟು ಸಮಸ್ಯೆಗೆ ತುತ್ತಾದರಂತೆ.
ಒಂದೂ ದಿನವೂ ಬ್ರೇಕ್ ಇಲ್ಲದೆ ಸತತವಾಗಿ ಸಿನಿಮಾಗಳಲ್ಲಿ ನಟಿಸುತ್ತಲೇ ಇದ್ದರಂತೆ. ಅದರಲ್ಲೂ ‘ಶಾಮ ಸಿಂಘ ರಾಯ್’ ಸಿನಿಮಾನಲ್ಲಿ ನಟಿಸುವಾಗಂತೂ ಬಹಳ ಕಷ್ಟವಾಯ್ತಂತೆ. ಅದು ರಾತ್ರಿ ಶೂಟಿಂಗ್ ಮಾಡಬೇಕಿತ್ತಂತೆ. ಆದರೆ ಸಾಯಿ ಪಲ್ಲವಿಗೆ ರಾತ್ರಿ ಶೂಟಿಂಗ್ ಆಗುತ್ತಿರಲಿಲ್ಲವಂತೆ, ‘ನನಗೆ ಬೆಳಿಗಿನ ಹೊತ್ತು ನಿದ್ದೆ ಬರುವುದಿಲ್ಲ. ಆದರೆ ರಾತ್ರಿ ಶೂಟಿಂಗ್ ಇದ್ದ ಕಾರಣ, ರಾತ್ರಿ ನಿದ್ದೆಯೂ ಆಗುತ್ತಿರಲಿಲ್ಲ. ಸತತವಾಗಿ ಒಂದು ವಾರದ ವರೆಗೆ ನಿದ್ದೆ ಇಲ್ಲದೆ ಶೂಟಿಂಗ್ ಮಾಡಿದೆ. ಒಂದು ರಾತ್ರಿ ನನ್ನ ಕೈಯಲ್ಲಿ ಸಾಧ್ಯವಾಗಲಿಲ್ಲ ಅಳು ಒತ್ತರಿಸಿ ಬಂದು, ಕಣ್ನೀರು ಹಾಕಿಬಿಟ್ಟೆ’ ಎಂದಿದ್ದರು ಸಾಯಿ ಪಲ್ಲವಿ.
ಇದನ್ನೂ ಓದಿ:ಸಾಯಿ ಪಲ್ಲವಿಗೆ ಕೊಟ್ಟ ಮಾತನ್ನು ಉಳಿಸಿಕೊಂಡ ಮಣಿರತ್ನಂ
‘ನನಗೆ ಸಿನಿಮಾ ಎಂದರೆ ಬಹಳ ಇಷ್ಟ, ನಟಿಸುವುದು, ಡ್ಯಾನ್ಸ್ ಮಾಡುವುದೆಂದರೆ ಪಂಚ ಪ್ರಾಣ. ಆದರೆ ಅದರಿಂದಲೇ ನನಗೆ ಸುಸ್ತಾಗಿ ಹೋಗಿತ್ತು, ಒಂದು ದಿನವಾದರೂ ಇದರಿಂದ ಬಿಡುಗಡೆ ಬೇಕು ಅನಿಸಿಬಿಟ್ಟಿತ್ತು ಅಷ್ಟು ಸುಸ್ತಾಗಿ ಹೋಗಿದ್ದೆ. ನಾನು ಅಳುವುದು ಕಂಡು ನನ್ನ ಸಹೋದರಿ ಹೋಗಿ ನಿರ್ಮಾಪಕರ ಬಳಿ ಮನವಿ ಮಾಡಿಕೊಂಡರಂತೆ. ನಿರ್ಮಾಪಕರು ಸಹ ಬಹಳ ಒಳ್ಳೆಯ ಮನಸ್ಸಿನವರಾಗಿದ್ದು, ಕೂಡಲೇ ಸಾಯಿ ಪಲ್ಲವಿ ಅವರಿಗೆ ಎರಡು ದಿನದ ಬ್ರೇಕ್ ನೀಡಿದರಂತೆ.
ಸಾಯಿ ಪಲ್ಲವಿ ಪ್ರಸ್ತುತ ‘ರಾಮಾಯಣ’ ಸಿನಿಮಾನಲ್ಲಿ ನಟಿಸಿದ್ದಾರೆ. ಅದರ ಜೊತೆಗೆ ಶಿವಕಾರ್ತಿಕೇಯನ್ ಜೊತೆಗೆ ಹೊಸ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಮಣಿರತ್ನಂ ನಿರ್ದೇಶನದ ಸಿನಿಮಾನಲ್ಲಿ ಸಹ ನಟಿಸುತ್ತಿದ್ದಾರೆ. ಒಂದು ತೆಲುಗು ಸಿನಿಮಾ ಸಹ ಒಪ್ಪಿಕೊಂಡಿದ್ದಾರೆ. ಹಿಂದಿಯಲ್ಲಿ ಆಮಿರ್ ಖಾನ್ ಪುತ್ರನ ಜೊತೆಗೆ ಒಂದು ಸಿನಿಮಾನಲ್ಲಿ ನಟಿಸಿದ್ದು, ಆ ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಬೆಡ್ ರೂಮಿಗೆ ಪ್ರಿಯಕರನನ್ನು ಕರೆಸಿದ್ದ ಯುವತಿ ಅಮ್ಮನ ಕೈಗೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ವಿಡಿಯೋ ವೈರಲ್ ಆಗಿದೆ. ತಾಯಿಯ ಬಳಿ ಯಾರಿಗೂ ಹೇಳದಂತೆ ಆಕೆ ಮನವಿ ಮಾಡಿದರೂ ಕೂಡ ಆಕೆ ಮನೆಯವರನ್ನೆಲ್ಲಾ ಕರೆಸಿದ್ದಾಳೆ. ಎಲ್ಲರೂ ಇಬ್ಬರನ್ನು ಒಂದೇ ಕೋಣೆಯಲ್ಲಿ ನೋಡಿ ಬೆಚ್ಚಿಬಿದ್ದಿದ್ದಾರೆ. ಇಬ್ಬರೂ ಹಾಸಿಯ ಮೇಲೆ ಕುಳಿತಿರುವಾಗ ತಾಯಿ ಅಚಾನಕ್ಕಾಗಿ ಬಂದು ಲೈಟ್ ಆನ್ ಮಾಡಿದ್ದಾರೆ. ಆಗ ಇಬ್ಬರೂ ಸಿಕ್ಕಿಹಾಕಿಕೊಂಡಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕೆಲಸದ ಸ್ಥಳದಲ್ಲಿನ ಅತಿಯಾದ ಒತ್ತಡImage Credit source: gemini ai
ಉದ್ಯೋಗ ಎನ್ನುವುದು ಕೇವಲ ಜೀವನೋಪಾಯಕ್ಕಲ್ಲ; ಅದು ಕುಟುಂಬವನ್ನು ಪೋಷಿಸಲು, ಸ್ವಾವಲಂಬನೆಯನ್ನು ಸಾಧಿಸಲು ಮತ್ತು ಸಮಾಜದಲ್ಲಿ ಗೌರವಾನ್ವಿತ ಜೀವನ ನಡೆಸಲು ಇರುವ ಒಂದು ಮಾರ್ಗ. ಇದರಿಂದಲೇ ಸಾವಿರಾರು ಜನರು ತಮ್ಮ ಹುಟ್ಟೂರನ್ನು ಬಿಟ್ಟು ಪರವೂರುಗಳಿಗೆ ಕೆಲಸಕ್ಕಾಗಿ ವಲಸೆ ಹೋಗುತ್ತಾರೆ. ಆದರೆ, ಇತ್ತೀಚೆಗೆ ಜಿನೀವಾದ ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO) ಆಘಾತಕಾರಿ ವರದಿಯೊಂದನ್ನು ಬಿಡುಗಡೆ ಮಾಡಿದೆ. ವರದಿಯ ಪ್ರಕಾರ, ಕೆಲಸದ ಸ್ಥಳದಲ್ಲಿನ ಮಾನಸಿಕ ಒತ್ತಡದಿಂದಾಗಿ ಜಾಗತಿಕವಾಗಿ ಪ್ರತಿ ವರ್ಷ 8.4 ಲಕ್ಷಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಅಂಕಿಅಂಶವು ಕೆಲಸದ ಸಂಸ್ಕೃತಿಯು ಎಷ್ಟು ಮಾರಕವಾಗುತ್ತಿದೆ ಎಂಬುದಕ್ಕೆ ಪ್ರತ್ಯಕ್ಷ ಉದಾಹರಣೆಯಾಗಿದೆ.
ಪ್ರಶ್ನೆ ಏನೆಂದರೆ, ಈ ಅಪಾಯಗಳು ಹುಟ್ಟುವುದು ಎಲ್ಲಿಂದ? ಕೆಲಸಕ್ಕೆ ಸಂಬಂಧಿಸಿದ ಅತಿಯಾದ ಚಿಂತೆ, ದೀರ್ಘಾವಧಿಯ ಕೆಲಸದ ಸಮಯ ಮತ್ತು ಯಾವುದೇ ಕ್ಷಣದಲ್ಲಿ ಕೆಲಸ ಕಳೆದುಕೊಳ್ಳಬಹುದು ಎಂಬ ಭಯ – ಇವು ಮಾನಸಿಕ ಸಾಮಾಜಿಕ ಅಪಾಯಗಳ ಮುಖ್ಯ ಕಾರಣಗಳು. ಇವು ಕೇವಲ ಮಾನಸಿಕ ಆರೋಗ್ಯವನ್ನಷ್ಟೇ ಅಲ್ಲದೆ, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಮೆದುಳಿನ ಪಾರ್ಶ್ವವಾಯುವಿನಂತಹ ಗಂಭೀರ ದೈಹಿಕ ಸಮಸ್ಯೆಗಳಿಗೂ ದಾರಿಯೊದಗಿಸುತ್ತವೆ. ಕೆಲವು ಸಂದರ್ಭಗಳಲ್ಲಿ, ವಿಪರೀತ ಕೆಲಸದ ಒತ್ತಡವು ವ್ಯಕ್ತಿಯನ್ನು ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರಕ್ಕೂ ತಳ್ಳುತ್ತಿದೆ.
ಕೆಲಸದ ಸ್ಥಳದ ಮಾನಸಿಕ ಆರೋಗ್ಯವು ಮುಖ್ಯವಾಗಿ ಮೂರು ಅಂಶಗಳನ್ನು ಅವಲಂಬಿಸಿದೆ. ಮೊದಲನೆಯದಾಗಿ, ಉದ್ಯೋಗಿ ತನ್ನ ಗುರಿಯನ್ನು ತಲುಪಲು ಕೆಲಸದ ಪ್ರಕ್ರಿಯೆಗಳನ್ನು ಎಷ್ಟು ಸುಗಮವಾಗಿ ವಿನ್ಯಾಸಗೊಳಿಸಲಾಗಿದೆ ಎಂಬುದು. ಎರಡನೆಯದಾಗಿ, ಕಚೇರಿಯ ವಾತಾವರಣ ಹಾಗೂ ಸಹೋದ್ಯೋಗಿಗಳು ಮತ್ತು ಮೇಲಧಿಕಾರಿಗಳೊಂದಿಗೆ ಉದ್ಯೋಗಿ ಹೊಂದಿರುವ ಸಂಬಂಧಗಳು. ಇವುಗಳಲ್ಲಿ ಕಹಿ ಉಂಟಾದಾಗ ಮಾನಸಿಕ ಅಸ್ವಸ್ಥತೆ ಹೆಚ್ಚಾಗುತ್ತದೆ. ಮೂರನೆಯದಾಗಿ, ಕಚೇರಿಯ ನೀತಿಗಳು; ಉದಾಹರಣೆಗೆ ವೈಯಕ್ತಿಕ ಅಗತ್ಯಗಳಿಗೆ ಸಿಗುವ ರಜೆಗಳು ಮತ್ತು ಆರೋಗ್ಯ ವಿಮೆಯಂತಹ ಸೌಲಭ್ಯಗಳು ಉದ್ಯೋಗಿಯ ಮನೋಸ್ಥಿತಿಯನ್ನು ನಿರ್ಧರಿಸುತ್ತವೆ.
ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!
ಈ 8.4 ಲಕ್ಷ ಸಾವುಗಳ ಅಂಕಿಅಂಶವು ಐದು ಪ್ರಮುಖ ಅಪಾಯಕಾರಿ ಅಂಶಗಳ ಆಧಾರದ ಮೇಲೆ ಬೆಳಕಿಗೆ ಬಂದಿದೆ. ಕೆಲಸದ ವಿಪರೀತ ಒತ್ತಡ, ಮಾಡುವ ಕೆಲಸಕ್ಕೆ ತಕ್ಕಷ್ಟು ಪ್ರತಿಫಲ ಅಥವಾ ವೇತನ ಇಲ್ಲದಿರುವುದು, ಕೆಲಸದ ಅಭದ್ರತೆ ಮತ್ತು ವಿಶ್ರಾಂತಿ ಇಲ್ಲದ ದೀರ್ಘ ಕೆಲಸದ ಅವಧಿ ಇವುಗಳೇ ಆ ಐದು ಅಂಶಗಳು. ILO ಈ ದತ್ತಾಂಶವನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ (GBD) ಅಧ್ಯಯನದೊಂದಿಗೆ ಸಮೀಕರಿಸಿ ಈ ಆತಂಕಕಾರಿ ವರದಿಯನ್ನು ಸಿದ್ಧಪಡಿಸಿದೆ.
ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಲಿಫ್ಟ್ನಲ್ಲಿ ವ್ಯಕ್ತಿಯೊಬ್ಬ ಮಹಿಳೆ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ವೈರಲ್ ಆಗಿದೆ. ಆತ ಮಹಿಳೆಗೆ ಥಳಿಸುತ್ತಿರುವುದನ್ನು ಕಂಡ ಭದ್ರತಾ ಸಿಬ್ಬಂದಿ ಕೂಡಲೇ ಬಂದು ಬಿಡಿಸಲು ಮುಂದಾದರು,ಅಷ್ಟಕ್ಕೆ ನಿಲ್ಲದ ಆರೋಪಿ ಭದ್ರತಾ ಸಿಬ್ಬಂದಿ ಮೇಲೂ ಹಲ್ಲೆ ನಡೆಸಿದ್ದಾನೆ, ಕೂಡಲೇ ಭದ್ರತಾ ಸಿಬ್ಬಂದಿ ಕೂಡ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಅದಾದ ಬಳಿಕ ತನ್ನದು ತಪ್ಪಾಯ್ತು ನೀವು ಹೋಗಿ ಎಂದು ಕ್ಷಮೆಯಾಚಿಸಿದ್ದಾರೆ. ಆ ಸಮಯದಲ್ಲಿ ಮಹಿಳೆ ಹೇಗೋ ಲಿಫ್ಟ್ನಿಂದ ಹೊರ ನಡೆದಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನವದೆಹಲಿ, ಏಪ್ರಿಲ್ 23: ಕೆಲ ರಾಜ್ಯಗಳ ವಿಧಾನಸಭಾ ಚುನಾವಣೆ ನಂತರ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳು (Petrol and Diesel Prices) ಏರಿಕೆ ಆಗಲಿವೆ ಎನ್ನುವಂತಹ ಸುದ್ದಿ ಕೆಲ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ಸರ್ಕಾರ ತತ್ಕ್ಷಣವೇ ಈ ವಿಚಾರದಲ್ಲಿ ಪ್ರತಿಕ್ರಿಯಿಸಿದೆ. ಪೆಟ್ರೋಲ್ ಬೆಲೆ ಏರಿಕೆಯ ಯಾವ ಸಾಧ್ಯತೆಯೂ ಇಲ್ಲ ಎಂದು ಹೇಳಿರುವ ಪೆಟ್ರೋಲಿಯಂ ಸಚಿವಾಲಯ, ಮಾಧ್ಯಮಗಳಲ್ಲಿ ಬಂದ ವರದಿಯನ್ನು ತಳ್ಳಿ ಹಾಕಿದೆ.
‘ಪೆಟ್ರೋಲ್ ಮತ್ತು ಡೀಸಲ್ ಬೆಲೆ ಏರಿಕೆ ಮಾಡಬಹುದು ಎಂದು ಕೆಲ ವರದಿಗಳು ಹೇಳಿವೆ. ಇಂಥ ಯಾವುದೇ ಪ್ರಸ್ತಾವವು ಸರ್ಕಾರದ ಪರಿಗಣನೆಯಲ್ಲಿ ಇಲ್ಲ. ಜನರಿಗೆ ಭಯ ಮತ್ತು ಆತಂಕ ಹುಟ್ಟಿಸಲು ಈ ವರದಿಗಳನ್ನು ಸೃಷ್ಟಿಸಲಾಗಿದೆ’ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಟ್ವೀಟ್ ಮಾಡಿದೆ.
ಪೆಟ್ರೋಲಿಯಂ ಸಚಿವಾಲಯದ ಎಕ್ಸ್ ಪೋಸ್ಟ್
FAKE NEWS
There are some news reports suggesting a price hike of petrol and diesel. It is hereby clarified that there is no such proposal under consideration by the Government.
Such news items are designed to create fear and panic amongst the citizens and are mischievous and… pic.twitter.com/yTAfJdah2o— Ministry of Petroleum and Natural Gas #MoPNG (@PetroleumMin) April 23, 2026
ಇದನ್ನೂ ಓದಿ: ಮೇ 1ರಿಂದ ಹೊಸ ಗೇಮಿಂಗ್ ರೂಲ್ಸ್; ಆಟಗಾರರಿಗೆ ಬದಲಾವಣೆಗಳೇನು? ಇಲ್ಲಿದೆ ಡೀಟೇಲ್ಸ್
ಚುನಾವಣೆಗಳ ಬಳಿಕ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳಲ್ಲಿ ಲೀಟರ್ಗೆ 25-28 ರೂನಷ್ಟು ಏರಿಕೆ ಮಾಡುವ ಸಾಧ್ಯತೆ ಇದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಕೋಟಕ್ ಇನ್ಸ್ಟಿಟ್ಯೂಶನಲ್ ಈಕ್ವಿಟೀಸ್ ಸಂಸ್ಥೆಯ ಅಭಿಪ್ರಾಯ ಉಲ್ಲೇಖಿಸಿ ಈ ವರದಿ ಬರೆಯಲಾಗಿದೆ. ಜಾಗತಿಕವಾಗಿ ಕಚ್ಚಾ ತೈಲ ಬೆಲೆಗಳು ಹೆಚ್ಚಾಗಿವೆ. ಆದರೆ, ದೇಶದಲ್ಲಿ ರೀಟೇಲ್ ಇಂಧನ ಬೆಲೆಯಲ್ಲಿ ಏರಿಕೆ ಆಗಿಲ್ಲ. ಇದರಿಂದ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳಿಗೆ ತಿಂಗಳಿಗೆ 27,000 ಕೋಟಿ ರೂ ಹೆಚ್ಚುವರಿ ಹೊರೆ ಆಗುತ್ತಿದೆ ಎಂದು ಕೋಟಕ್ನ ಈ ವರದಿಯಲ್ಲಿ ವಿಶ್ಲೇಷಿಸಲಾಗಿತ್ತು.
ಸರ್ಕಾರ ಇತ್ತೀಚೆಗೆ ಪೆಟ್ರೋಲ್ ಮತ್ತು ಡೀಸಲ್ ಮೇಲೆ ಅಬಕಾರಿ ಸುಂಕವನ್ನು ಕಡಿತಗೊಳಿಸಿರುವ ಕ್ರಮ ಉಲ್ಲೇಖಿಸಿದ ಕೋಟಕ್ ಇನ್ಸ್ಟಿಟ್ಯೂಶನಲ್ ಈಕ್ವಿಟೀಸ್ನ ವರದಿಯು, ಈ ಸುಂಕ ಕಡಿತದಿಂದ ತೈಲ ಕಂಪನಿಗಳಿಗೆ ಒಂದಷ್ಟು ರಿಲೀಫ್ ಕೊಟ್ಟಿವೆಯಾದರೂ, ದೀರ್ಘಕಾಲದ ಪರಿಹಾರ ಸಿಕ್ಕಿಲ್ಲ. ಹೀಗಾಗಿ, ಪೆಟ್ರೋಲ್, ಡೀಸಲ್ ಬೆಲೆ ಏರಿಸಬೇಕಾಗಬಹುದು ಎಂದು ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ಜಾಗತಿಕ ಆಘಾತಗಳಿಗೆ ಭಾರತದ 3 ಆರ್ಥಿಕ ರಕ್ಷಾ ಕವಚಗಳು: ಫಿಚ್ ಬಿಎಂಐ ವಿಶ್ಲೇಷಣೆ
ಆದರೆ, ಇಂಧನ ಬೆಲೆ ಏರಿಕೆ ಸಾಧ್ಯತೆಯನ್ನು ಸರ್ಕಾರ ಬಲವಾಗಿ ತಳ್ಳಿಹಾಕಿದೆ. ‘ಕಳೆದ 5 ವರ್ಷದಲ್ಲಿ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳನ್ನು ಏರಿಸದೇ ಇರುವ ಏಕೈಕ ದೇಶ ಭಾರತ. ಅಂತಾರಾಷ್ಟ್ರೀಯ ದರಗಳು ಗಣನೀಯವಾಗಿ ಏರಿಕೆಯಾದರೂ ಭಾರತೀಯ ನಾಗರಿಕರಿಗೆ ಅದರ ಬಿಸಿ ತಾಗದಂತೆ ಭಾರತ ಸರ್ಕಾರ ಹಾಗೂ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ನಿರಂತರವಾಗಿ ಕ್ರಮಗಳನ್ನು ಕೈಗೊಳ್ಳುತ್ತಿವೆ’ ಎಂದು ಪೆಟ್ರೋಲಿಯಂ ಸಚಿವಾಲಯವು ತನ್ನ ಟ್ವೀಟ್ನಲ್ಲಿ ಹೇಳಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ವೇಗದ ಅಸ್ತ್ರ ಜಸ್‌ಪ್ರೀತ್ ಬುಮ್ರಾ ಅವರನ್ನು ಮುಂಬರುವ ‘ಬಾರ್ಡರ್-ಗವಾಸ್ಕರ್’ ಟ್ರೋಫಿಗಾಗಿ ಫ್ರೆಶ್ ಆಗಿ ಇರಿಸಲು ಬಿಸಿಸಿಐ (BCCI) ವಿಶೇಷ ಕಾರ್ಯತಂತ್ರ ರೂಪಿಸಿದೆ. 2026ರ ಸಾಲಿನಲ್ಲಿ ನಡೆಯಲಿರುವ ಪ್ರಮುಖ ಏಕದಿನ (ODI) ಸರಣಿಗಳಿಂದ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲು ಆಯ್ಕೆ ಸಮಿತಿ ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ.
ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಸೈಕಲ್ ಭಾರತ ತಂಡದ ಪಾಲಿಗೆ ಅತ್ಯಂತ ನಿರ್ಣಾಯಕವಾಗಿದೆ. ಅದರಲ್ಲೂ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿಯು ವಿಶ್ವ ಟೆಸ್ಟ್ ಫೈನಲ್ ತಲುಪಲು ಬಹಳ ಮುಖ್ಯ.
ಬುಮ್ರಾ ಅವರ ಬೆನ್ನು ನೋವಿನ ಸಮಸ್ಯೆ ಮತ್ತು ಅವರ ಬೌಲಿಂಗ್ ಶೈಲಿಯನ್ನು ಪರಿಗಣಿಸಿ, ಅವರನ್ನು ಕೇವಲ ಪ್ರಮುಖ ಟೆಸ್ಟ್ ಪಂದ್ಯಗಳಿಗೆ ಮಾತ್ರ ಬಳಸಿಕೊಳ್ಳಲು ಮಂಡಳಿ ಮುಂದಾಗಿದೆ. ಹೀಗಾಗಿ ಮುಂಬರುವ ಏಕದಿನ ಸರಣಿಗಳಲ್ಲಿ ಜಸ್‌ಪ್ರೀತ್ ಬುಮ್ರಾ ಕಾಣಿಸಿಕೊಳ್ಳುವ ಸಾಧ್ಯತೆಯಿಲ್ಲ.
ಜಸ್‌ಪ್ರೀತ್ ಬುಮ್ರಾ ಅಲಭ್ಯತೆಯ ಸಮಯದಲ್ಲಿ ಆಕಾಶ್ ದೀಪ್, ಹರ್ಷಿತ್ ರಾಣಾ ಅಥವಾ ಮಯಾಂಕ್ ಯಾದವ್ ಅವರಂತಹ ಯುವ ವೇಗಿಗಳನ್ನು ಏಕದಿನ ಸರಣಿಗಳಲ್ಲಿ ಪರೀಕ್ಷಿಸಲು ಆಯ್ಕೆಗಾರರು ಚಿಂತಿಸಿದ್ದಾರೆ. ಇದು ಭವಿಷ್ಯದ 2027ರ ಏಕದಿನ ವಿಶ್ವಕಪ್‌ಗೆ ಬಲಿಷ್ಠ ತಂಡವನ್ನು ಕಟ್ಟಲು ಸಹಕಾರಿಯಾಗಲಿದೆ.
ಇದನ್ನೂ ಓದಿ: MI vs CSK ಪಂದ್ಯವನ್ನು ‘ಎಲ್ ಕ್ಲಾಸಿಕೋ’ ಎಂದು ಕರೆಯುವುದು ಯಾಕೆ?
ಒಟ್ಟಾರೆಯಾಗಿ ಹೇಳುವುದಾದರೆ, ಭಾರತ ತಂಡಕ್ಕೆ ಬುಮ್ರಾ ಕೇವಲ ಒಬ್ಬ ಆಟಗಾರನಲ್ಲ, ಅವರು ತಂಡದ ಗೆಲುವಿನ ಮಂತ್ರ. ಹೀಗಾಗಿ, ಅವರನ್ನು ಅತಿ ಹೆಚ್ಚು ಒತ್ತಡವಿಲ್ಲದೆ ಬಳಸಿಕೊಳ್ಳುವುದು ಬಿಸಿಸಿಐನ ಜಾಣತನದ ನಡೆಯಾಗಿದೆ. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸರಣಿಯಲ್ಲಿ ಅವರನ್ನು ಸಂಪೂರ್ಣ ಫಿಟ್ನೆಸ್ನೊಂದಿಗೆ ಬಳಸಿಕೊಳ್ಳಲು ಬಿಸಿಸಿಐ ಪ್ಲ್ಯಾನ್ ರೂಪಿಸಿದೆ.
ಸಚಿವ ಮಧು ಬಂಗಾರಪ್ಪ ಅವರಿಂದ ಮಾಹಿತಿImage Credit source: Tv9 Kannada
ಬೆಂಗಳೂರು, ಏಪ್ರಿಲ್ 23: 2025-26ನೇ ಸಾಲಿನ SSLC ಪರೀಕ್ಷೆ ಫಲಿತಾಂಶ (Karnataka SSLC 10th Result 2026) ಏಪ್ರಿಲ್ 23ರ ಗುರುವಾರ ಮಧ್ಯಾಹ್ನ 12 ಗಂಟೆಗೆ ಪ್ರಕಟಗೊಂಡಿದೆ. ಸುದ್ದಿಗೋಷ್ಠಿ ನಡೆಸಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ರಿಸಲ್ಟ್ ಸಂಬಂಧಿತ ಮಾಹಿತಿ ನೀಡಿದ್ದಾರೆ. ಪರೀಕ್ಷೆ ಬರೆದಿದ್ದ 7,70,209 ಮಕ್ಕಳ ಪೈಕಿ 7,24,794 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಆ ಮೂಲಕ ಎಸ್ಎಸ್ಎಲ್ಸಿಯಲ್ಲಿ ಶೇ.94.1 ಮಂದಿ ಪಾಸ್ ಆಗಿದ್ದಾರೆ. ಮಾರ್ಚ್ 18ರಿಂದ ಏಪ್ರಿಲ್ 2ರವರೆಗೂ ಒಟ್ಟು 2,870 ಪರೀಕ್ಷಾ ಕೇಂದ್ರಗಳಲ್ಲಿ SSLC ಪರೀಕ್ಷೆ ನಡೆದಿತ್ತು.
ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ. 98.40 ಫಲಿತಾಂಶದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದ್ದರೆ, ಶೇ. 98.18 ಫಲಿತಾಂಶ ಪಡೆದ ಉಡುಪಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಶೇ.85.06 ಫಲಿತಾಂಶದೊಂದಿಗೆ ಕಲಬುರಗಿಜಿಲ್ಲೆ ಕೊನೆಯ ಸ್ಥಾನದಲ್ಲಿದೆ.
(ಮಾಹಿತಿ ಅಪ್ಡೇಟ್ ಆಗುತ್ತಿದೆ)
Published On – 12:21 pm, Thu, 23 April 26
ಅಲ್ಲು ಅರ್ಜುನ್ (Allu Arjun) ಸಾಲು ಸಾಲು ಯಶಸ್ಸು ಕಾಣುತ್ತಿದ್ದಾರೆ. ‘ಪುಷ್ಪ’, ‘ಪುಷ್ಪ 2’ ದೊಡ್ಡ ಯಶಸ್ಸು ಕಂಡಿದೆ. ಈಗ ಅವರು ‘ರಾಕಾ’ ಸಿನಿಮಾ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಹೀಗಿರುವಾಗಲೇ ಅವರು ಹೈದರಾಬಾದ್ನ ಜುಬ್ಲಿ ಹಿಲ್ಸ್ನಲ್ಲಿ ದೊಡ್ಡ ಮನೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ವರದಿ ಆಗಿದೆ. ಸದ್ಯ ಅವರು ಜುಬ್ಲಿ ಹಿಲ್ಸ್ನಲ್ಲೇ ವಾಸವಿದ್ದಾರೆ. ಅದೇ ಭಾಗದಲ್ಲಿ ಈಗ ಹೊಸ ಮನೆ ಕೂಡ ನಿರ್ಮಾಣ ಆಗುತ್ತಿದೆ. ಇದು ಅವರ ಡ್ರೀಮ್ ಹೌಸ್ ಎನ್ನಲಾಗಿದೆ.
ಅಲ್ಲು ಅರ್ಜುನ್ ಅವರ ಹೊಸ ಮನೆ ನಿರ್ಮಾಣಕ್ಕೆ 80-100 ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದಾರೆ ಎನ್ನಲಾಗಿದೆ. ಅವರ ಮನೆಯ ಜಾಗ ಸುಮಾರು 4 ಸಾವಿರ ಸ್ಕ್ವೇರ್ ಯಾರ್ಡ್ ಅಲ್ಲಿ ಇರಲಿದೆ. ಇದರಲ್ಲಿ ಮನೆ, ಗಾರ್ಡನ್, ಪ್ಲೇಯಿಂಗ್ ಏರಿಯಾ, ಸ್ವಿಮಿಂಗ್ ಪೂಲ್ ಎಲ್ಲವೂ ಸೇರಿರಲಿದೆ. ಅದ್ಭುತ ವಾಸ್ತುಶಿಲ್ಪವನ್ನು ಇದು ಹೊಂದಿರಲಿದೆ. ಈಗಾಗಲೇ ಮನೆ ನಿರ್ಮಾಣ ಕಾರ್ಯ ಆರಂಭವಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಖ್ಯಾತ ನಟ ಚಿರಂಜೀವಿ ನಿವಾಸ ಕೂಡ ಜುಬ್ಲಿ ಹಿಲ್ಸ್ನಲ್ಲೇ ಇದೆ. ಈ ಮನೆಯ ಪಕ್ಕದಲ್ಲೇ ಅಲ್ಲು ಅರ್ಜುನ್ ಹೊಸ ನಿವಾಸ ರೆಡಿ ಆಗುತ್ತಿದೆ. ಈ ಮೂಲಕ ಅಲ್ಲು ಅರ್ಜುನ್ ಹಾಗೂ ಚಿರಂಜೀವಿ ನೆರೆಹೊರೆಯವಲಾಗಲಿದ್ದಾರೆ. ಸಂಬಂಧದಲ್ಲಿ ಅಲ್ಲು ಅರ್ಜುನ್ಗೆ ಚಿರಂಜೀವಿ ಮಾವ ಆಗಬೇಕು. ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಸಹೋದರಿಯನ್ನು ಚಿರಂಜೀವಿಗೆ ಕೊಟ್ಟು ಮದುವೆ ಮಾಡಲಾಗಿದೆ.
ಇದನ್ನೂ ಓದಿ: ಮುಂಬೈನಲ್ಲಿ ಐಷಾರಾಮಿ ಮನೆ ಬಾಡಿಗೆಗೆ ಪಡೆದ ಅಲ್ಲು ಅರ್ಜುನ್: ತಿಂಗಳ ಬಾಡಿಗೆ ಎಷ್ಟು ಗೊತ್ತೆ?
ಮನೆ ನಿರ್ಮಾಣ ಪೂರ್ಣಗೊಂಡ ಬಳಿಕ ಅಲ್ಲು ಅರ್ಜುನ್ ಹೊಸ ಮನೆಗೆ ಶಿಫ್ಟ್ ಆಗಬಹುದು. ಅಲ್ಲು ಅರ್ಜುನ್ ಅವರು ಪ್ರತಿ ವರ್ಷ ಬರ್ತ್ಡೇ ಸಂದರ್ಭದಲ್ಲಿ ಅಭಿಮಾನಿಗಳನ್ನು ಮನೆ ಬಳಿ ಭೇಟಿ ಆಗುತ್ತಾರೆ. ಈಗ ಹೊಸ ನಿವಾಸದಲ್ಲಿ ಅಭಿಮಾನಿಗಳನ್ನು ನೋಡಲು ಗ್ಯಾಲರಿ ಕೂಡ ನಿರ್ಮಾಣ ಮಾಡಬಹುದೇ ಎಂಬ ಪ್ರಶ್ನೆ ಮೂಡಿದೆ.
ಅಲ್ಲು ಅರ್ಜುನ್ ಅವರು ‘ರಾಕಾ’ ಸಿನಿಮಾ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರಕ್ಕೆ ದೀಪಿಕಾ ಪಡುಕೋಣೆ ನಾಯಕಿ ಆದರೆ, ಅಟ್ಲೀ ನಿರ್ದೇಶಕರಾಗಿದ್ದಾರೆ. ಈ ಸಿನಿಮಾ ಶೂಟ್ಗಾಗಿ ಅಲ್ಲು ಅರ್ಜುನ್ ಅವರು ಮುಂಬೈಗೆ ತೆರಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಎಂಜಿನಿಯರಿಂಗ್ ಸೇರಿದಂತೆ ನಾನಾ ವೃತ್ತಿಪರ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಪ್ರಾರಂಭವಾಗಿದೆ. ಇದೀಗ CET ಪರೀಕ್ಷೆ ಬರೆಯಲು ವಿದ್ಯಾರ್ಥಿನಿಯರು ಧರಿಸಿದ್ದ ಮೂಗು ಬೊಟ್ಟಿಗೆ ಪರೀಕ್ಷಾ ಕೇಂದ್ರದ ಸಿಬ್ಬಂದಿ ಗಮ್ ಟೇಪ್ ಅಂಟಿಸಿದ ಘಟನೆ ಬೆಳಕಿಗೆ ಬಂದಿದೆ. ಪರೀಕ್ಷಾ ಕೇಂದ್ರಗಳಲ್ಲಿ ಆಭರಣಗಳನ್ನು ಧರಿಸುವುದನ್ನು ನಿಷೇಧಿಸುವ ಕಟ್ಟುನಿಟ್ಟಿನ ಭದ್ರತಾ ನಿಯಮಗಳ ಭಾಗವಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಮೂಗುತ್ತಿ ಧರಿಸಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿಯರಿಗೆ ಆರಂಭದಲ್ಲಿ ಅವುಗಳನ್ನು ತೆಗೆದುಹಾಕುವಂತೆ ಸೂಚನೆ ನೀಡಲಾಗಿತ್ತು. ಆಭರಣ ತೆಗೆಯಲು ಸೂಚಿಸಿದರೂ ಸಾಧ್ಯವಾಗದ ವಿದ್ಯಾರ್ಥಿನಿಯರಿಗೆ ಸಿಬ್ಬಂದಿ ತಾತ್ಕಾಲಿಕ ಪರಿಹಾರವಾಗಿ ಟೇಪ್ ಅಂಟಿಸಿರುವುದು ವರದಿಯಾಗಿದೆ.
ಇದನ್ನೂ ಓದಿ: ಸಿಇಟಿ ಪರೀಕ್ಷೆಗೆ ಹೋಗುವವರ ಗಮನಕ್ಕೆ; ಕಾಲರ್ ಇಲ್ಲದ ಅರ್ಧ ತೋಳಿನ ಬಟ್ಟೆ ಕಡ್ಡಾಯ
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ