ರಿಷಭ್ ಪಂತ್ ಮತ್ತು ಸಂಜೀವ್ ಗೋಯೆಂಕಾ ನಡುವಣ ವಿಡಿಯೋ ವೈರಲ್

ಐಪಿಎಲ್ 2026ರ ಲಕ್ನೋ ಸೂಪರ್ ಜೈಂಟ್ಸ್ (LSG) ಮತ್ತು ರಾಜಸ್ಥಾನ್ ರಾಯಲ್ಸ್ (RR) ನಡುವಿನ ಪಂದ್ಯವು ಕೇವಲ ಆಟದ ಕಾರಣಕ್ಕಷ್ಟೇ ಅಲ್ಲದೆ, ಮಾಲೀಕ ಸಂಜೀವ್ ಗೋಯೆಂಕಾ ಮತ್ತು ನಾಯಕ ರಿಷಬ್ ಪಂತ್ ಅವರ ನಡುವಿನ ವಿಶೇಷ ಬಾಂಧವ್ಯದ ಕಾರಣಕ್ಕಾಗಿ ಸುದ್ದಿಯಲ್ಲಿದೆ.

ಪಂದ್ಯದ ವೇಳೆ ವಿಕೆಟ್ ಕೀಪಿಂಗ್ ಮಾಡುತ್ತಿದ್ದಾಗ, ಅನಿರೀಕ್ಷಿತವಾಗಿ ಪುಟಿದ ಚೆಂಡು ರಿಷಬ್ ಪಂತ್ ಅವರ ಮೂಗಿಗೆ ಬಲವಾಗಿ ಬಡಿದಿತ್ತು. ಈ ನೋವಿನ ನಡುವೆ ಪಂತ್ ಪಂದ್ಯದಲ್ಲಿ ಮುಂದುವರೆದಿದ್ದರು. ಇದಾಗ್ಯೂ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಪಂದ್ಯ ಗೆಲ್ಲಿಸಿಕೊಡಲು ರಿಷಭ್ ಪಂತ್​ಗೆ ಸಾಧ್ಯವಾಗಿರಲಿಲ್ಲ.

ಇತ್ತ ಸೋಲಿನ ನೋವಿನ ನಡುವೆ ರಿಷಭ್ ಪಂತ್ ಎಲ್​ಎಸ್​ಜಿ ತಂಡದ ಮಾಲೀಕರಾದ ಸಂಜೀವ್ ಗೋಯೆಂಕಾ ಅವರನ್ನು ಮೈದಾನದಲ್ಲಿ ಭೇಟಿಯಾಗಿದ್ದರು.

ಸಾಮಾನ್ಯವಾಗಿ ಮೈದಾನದಲ್ಲಿ ಗಂಭೀರವಾಗಿ ಕಾಣಿಸಿಕೊಳ್ಳುತ್ತಿದ್ದ ಗೋಯೆಂಕಾ, ಈ ಬಾರಿ ಪಂತ್ ಅವರ ಬಳಿ ಬಂದು ಅತ್ಯಂತ ಪ್ರೀತಿಯಿಂದ ಮಾತನಾಡಿಸಿದರು. ಅಲ್ಲದೆ ಪಂತ್ ಅವರ ಮೂಗಿನ ಗಾಯದ ಬಗ್ಗೆ ವಿಚಾರಿಸಿ, ಅವರನ್ನು ಅಪ್ಪಿಕೊಂಡು ಬೆನ್ನುತಟ್ಟುವ ಮೂಲಕ ಧೈರ್ಯ ತುಂಬಿದರು.

ಹಿಂದಿನ ಸೀಸನ್‌ಗಳಲ್ಲಿ ಸಂಜೀವ್ ಗೋಯೆಂಕಾ ಅವರು ಆಟಗಾರರೊಂದಿಗೆ ನಡೆಸುತ್ತಿದ್ದ ಸಂವಾದಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳಾಗುತ್ತಿದ್ದವು. ಆದರೆ, ಈ ಬಾರಿ ಗೋಯೆಂಕಾ ಅವರ ಸೌಮ್ಯ ಸ್ವಭಾವ ಮತ್ತು ಕಾಳಜಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಇದರೊಂದಿಗೆ ರಿಷಭ್ ಪಂತ್ ಮತ್ತು ಸಂಜೀವ್ ಗೋಯೆಂಕಾ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ವದಂತಿಗಳಿಗೆ ಈ ಒಂದು ದೃಶ್ಯ ಪೂರ್ಣವಿರಾಮ ಇಟ್ಟಿದೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು 20 ಓವರ್​ಗಳಲ್ಲಿ 159 ರನ್ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ 18 ಓವರ್​ಗಳಲ್ಲಿ 118 ರನ್​ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಎಲ್​ಎಸ್​ಜಿ ಪಡೆ 40 ರನ್​ಗಳಿಂದ ಸೋಲೊಪ್ಪಿಕೊಂಡಿದೆ.

 

Source link

ಮೇ 1ರಿಂದ ಹೊಸ ಗೇಮಿಂಗ್ ರೂಲ್ಸ್; ಆಟಗಾರರಿಗೆ ಬದಲಾವಣೆಗಳೇನು? ಇಲ್ಲಿದೆ ಡೀಟೇಲ್ಸ್ – Kannada News | New online gaming rules from 2026 May 1st, know what new for players

ನವದೆಹಲಿ, ಏಪ್ರಿಲ್ 23: ಕೇಂದ್ರ ಸರ್ಕಾರವು ಆನ್‌ಲೈನ್ ಗೇಮಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು (Promotion and Regulation of Online Gaming Act, 2025) ಜಾರಿಗೊಳಿಸಿದೆ. ಈ ನಿಯಮಗಳು ಮೇ 1, 2026 ರಿಂದ ಜಾರಿಗೆ ಬರಲಿವೆ. ಕಳೆದ ವರ್ಷ (2025) ಆಗಸ್ಟ್ ತಿಂಗಳಲ್ಲಿ ಸಂಸತ್ತು ಈ ಆನ್ಲೈನ್ ಗೇಮಿಂಗ್ ಕಾಯ್ದೆಗೆ ಅನುಮೋದನೆ ಕೊಟ್ಟಿತ್ತು. ಇದೀಗ ಕಾರ್ಯಾತ್ಮಕ ನಿಯಮಗಳನ್ನು ಚಾಲನೆಗಳಿಸಲಾಗಿದೆ. ಬಳಕೆದಾರರಿಗೆ ರಕ್ಷಣೆ ಹಾಗೂ ಉದ್ಯಮ ಬೆಳವಣಿಗೆ ಎರಡನ್ನೂ ಸಮತೋಲನಗೊಳಿಸಲು ಸಾಧ್ಯವಾಗುವಂತೆ ಒಂದು ಫ್ರೇಮ್​ವರ್ಕ್ ರೂಪಿಸಲಾಗುತ್ತಿದೆ. ಈ ಆನ್ಲೈನ್ ಗೇಮಿಂಗ್ ಕಾನೂನಿನ ಕೆಲ ಪ್ರಮುಖ ಅಂಶಗಳು ಇಲ್ಲಿವೆ:

ಹೊಸ ನಿಯಂತ್ರಣ ಮಂಡಳಿ

ಆನ್‌ಲೈನ್ ಗೇಮಿಂಗ್ ಕ್ಷೇತ್ರವನ್ನು ಮೇಲ್ವಿಚಾರಣೆ ಮಾಡಲು ಕೇಂದ್ರ ಸರ್ಕಾರವು ‘ಭಾರತೀಯ ಆನ್‌ಲೈನ್ ಗೇಮಿಂಗ್ ಪ್ರಾಧಿಕಾರ’ವನ್ನು (Online Gaming Authority of India) ಸ್ಥಾಪಿಸಿದೆ. ಇದು ಐಟಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಗೃಹ, ಹಣಕಾಸು ಮತ್ತು ಕ್ರೀಡಾ ಸಚಿವಾಲಯದ ಅಧಿಕಾರಿಗಳನ್ನು ಒಳಗೊಂಡಿರುತ್ತದೆ.

ಗೇಮ್‌ಗಳ ವರ್ಗೀಕರಣ

ಹಣದ ಆಟಗಳು (Money games) ಮತ್ತು ಕೌಶಲ್ಯದ ಆಟಗಳನ್ನು ವರ್ಗೀಕರಿಸಲು ಸ್ಪಷ್ಟ ಮಾನದಂಡಗಳನ್ನು ತರಲಾಗಿದೆ. ಬಳಕೆದಾರರು ಹಣ ಪಾವತಿಸುತ್ತಾರೆಯೇ? ಬಹುಮಾನವಾಗಿ ನಗದು ಸಿಗುತ್ತದೆಯೇ? ಗೇಮ್ ಹೇಗೆ ಆದಾಯ ಸೃಷ್ಟಿಸುತ್ತದೆ? ಗೇಮ್​ನಲ್ಲಿ ಕ್ಯಾಷ್ ಅಥವಾ ರಿವಾರ್ಡ್ ಗೆಲ್ಲುವ ನಿರೀಕ್ಷೆ ಇದೆಯೇ? ಎಂಬಿತ್ಯಾದಿ ಅಂಶಗಳ ಆಧಾರದ ಮೇಲೆ ಆಟಗಳನ್ನು ಮನಿ ಗೇಮ್ ಅಥವಾ ಸ್ಕಿಲ್ ಗೇಮ್ ಎಂದು ವರ್ಗೀಕರಿಸಲಾಗುತ್ತದೆ.

ಇದನ್ನೂ ಓದಿ: ಜಾಗತಿಕ ಆಘಾತಗಳಿಗೆ ಭಾರತದ 3 ಆರ್ಥಿಕ ರಕ್ಷಾ ಕವಚಗಳು: ಫಿಚ್ ಬಿಎಂಐ ವಿಶ್ಲೇಷಣೆ

ನೋಂದಣಿ ಕಡ್ಡಾಯ

ಎಲ್ಲಾ ಗೇಮ್‌ಗಳಿಗೆ ನೋಂದಣಿ ಅಗತ್ಯವಿಲ್ಲದಿದ್ದರೂ, ‘ಇ-ಸ್ಪೋರ್ಟ್ಸ್’ ಶೀರ್ಷಿಕೆಗಳಿಗೆ (Esports titles) ನೋಂದಣಿ ಕಡ್ಡಾಯವಾಗಿದೆ. ಕಂಪನಿಯ ಮೂಲ, ಬಳಕೆದಾರರ ಸಂಖ್ಯೆ ಮತ್ತು ಹಣಕಾಸಿನ ವಹಿವಾಟಿನ ಆಧಾರದ ಮೇಲೆ ಕೆಲವು ಆಟಗಳಿಗೆ ಅನುಮತಿ ಪಡೆಯುವುದು ಅಗತ್ಯವಿರುತ್ತದೆ. ಒಮ್ಮೆ ಅನುಮತಿ ಸಿಕ್ಕರೆ ಅದು 10 ವರ್ಷಗಳವರೆಗೆ ಮಾನ್ಯವಾಗಿರುತ್ತದೆ.

ಆಟಗಾರರ ಸುರಕ್ಷತೆಗೆ ಆದ್ಯತೆ

  • ಅಪ್ರಾಪ್ತ ವಯಸ್ಸಿನ ಮಕ್ಕಳಿಗಾಗಿ ಕಟ್ಟುನಿಟ್ಟಾದ ವಯಸ್ಸಿನ ಪರಿಶೀಲನೆ ಇರಲಿದೆ.
  • ಆಟಗಾರರು ಅತಿಯಾಗಿ ಆಟಕ್ಕೆ ಅಡಿಕ್ಟ್ ಆಗುವುದನ್ನು ತಪ್ಪಿಸಲು ಸಮಯದ ಮಿತಿಯನ್ನು ನಿಗದಿಪಡಿಸಲಾಗಿದೆ.
  • ಪೋಷಕರು ತಮ್ಮ ಮಕ್ಕಳ ಗೇಮಿಂಗ್ ಚಟುವಟಿಕೆಯನ್ನು ನಿಯಂತ್ರಿಸಲು ವಿಶೇಷ ಆಯ್ಕೆಗಳನ್ನು ನೀಡಲಾಗುವುದು.

ಬ್ಯಾಂಕಿಂಗ್ ಮತ್ತು ಪಾವತಿ ನಿಯಮಗಳು

ಯಾವುದೇ ಗೇಮಿಂಗ್ ಪ್ಲಾಟ್‌ಫಾರ್ಮ್ ಸರ್ಕಾರದಿಂದ ಅನುಮೋದನೆ ಪಡೆದಿದೆಯೇ ಎಂದು ಬ್ಯಾಂಕುಗಳು ಪರಿಶೀಲಿಸಬೇಕು. ಅನಧಿಕೃತ ಅಥವಾ ನಿಷೇಧಿತ ಆಟಗಳಿಗೆ ಹಣ ಸಂದಾಯ ಮಾಡುವುದನ್ನು ಬ್ಯಾಂಕುಗಳು ನಿರ್ಬಂಧಿಸಲಿವೆ.

ಇದನ್ನೂ ಓದಿ: ಈ ವರ್ಷದ ಪ್ರಮುಖ ಸೆಕ್ಟರ್ ಇದು; ಗಮನಿಸಬೇಕಾದ 6 ಪ್ರಮುಖ ಮ್ಯೂಚುವಲ್ ಫಂಡ್​ಗಳಿವು

ದೂರು ಸಲ್ಲಿಸಲು ಅವಕಾಶ

ಆಟಗಾರರಿಗೆ ಯಾವುದೇ ತೊಂದರೆಯಾದಲ್ಲಿ ಮೊದಲು ಗೇಮಿಂಗ್ ಕಂಪನಿಗೆ ದೂರು ನೀಡಬೇಕು. ಅಲ್ಲಿ ಪರಿಹಾರ ಸಿಗದಿದ್ದರೆ 30 ದಿನಗಳ ಒಳಗಾಗಿ ಸರ್ಕಾರಿ ಪ್ರಾಧಿಕಾರಕ್ಕೆ ದೂರು ನೀಡಬಹುದು.

ಒಟ್ಟಾರೆಯಾಗಿ, ಈ ನಿಯಮಗಳು ಆನ್‌ಲೈನ್ ಗೇಮಿಂಗ್ ಕ್ಷೇತ್ರವನ್ನು ವ್ಯವಸ್ಥಿತಗೊಳಿಸಲು ಮತ್ತು ಆಟಗಾರರ ಹಿತರಕ್ಷಣೆಯನ್ನು ಕಾಯುವ ಉದ್ದೇಶ ಹೊಂದಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕೇವಲ 3.30 ರೂಪಾಯಿಗೆ ಒಂದು ಮೊಟ್ಟೆ ಲಭ್ಯ; ಕಂಗಾಲಾದ ಕೋಳಿ ಸಾಕಾಣಿಕೆದಾರರು! – Kannada News | Karnataka Egg Price Crash: Farmers Face Crisis Amidst Gulf Conflict and Holiday Season

ಚಿಕ್ಕಬಳ್ಳಾಪುರ, ಏ.23: ಗಲ್ಫ್ ರಾಷ್ಟ್ರಗಳೊಂದಿಗಿನ ಯುದ್ಧ ಮತ್ತು ಸರ್ಕಾರಿ ಶಾಲೆಗಳಿಗೆ ರಜೆ ಘೋಷಿಸಿರುವ ಕಾರಣದಿಂದಾಗಿ ರಾಜ್ಯದಲ್ಲಿ, ಅದರಲ್ಲೂ ವಿಶೇಷವಾಗಿ ಚಿಕ್ಕಬಳ್ಳಾಪುರದಲ್ಲಿ ಮೊಟ್ಟೆಗಳ ಬೆಲೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ. ವಿದೇಶಗಳಿಗೆ ಮೊಟ್ಟೆಗಳನ್ನು ರಫ್ತು ಮಾಡಲು ಸಾಧ್ಯವಾಗದೆ ಮತ್ತು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಣೆ ನಿಂತುಹೋಗಿರುವುದರಿಂದ ಮಾರುಕಟ್ಟೆಯಲ್ಲಿ ಮೊಟ್ಟೆಗಳಿಗೆ ಬೇಡಿಕೆ ಕುಸಿದಿದೆ. ಪರಿಣಾಮವಾಗಿ, ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯಂತಹ ಪ್ರದೇಶಗಳಲ್ಲಿ ಕೋಳಿ ಸಾಕಾಣಿಕೆದಾರರು ರಸ್ತೆ ಬದಿಯಲ್ಲಿ ಮೊಟ್ಟೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಈ ಮೊಟ್ಟೆಗಳು ಕೇವಲ ಮೂರು ರೂಪಾಯಿ 30 ಪೈಸೆಗೆ ಲಭ್ಯವಿದೆ. ಹಿಂದೆ ಒಂದು ಮೊಟ್ಟೆಗೆ ಐದರಿಂದ ಆರು ರೂಪಾಯಿ ಇತ್ತು. ಮೊಟ್ಟೆಗೆ ಬೆಲೆ ಇಲ್ಲದೆ ಕೋಳಿ ಸಾಕಾಣಿಕೆದಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದು ಮೊಟ್ಟೆ ಉತ್ಪಾದಕರಿಗೆ ದೊಡ್ಡ ಹೊಡೆತ ನೀಡಿದ್ದು, ಹಲವರು ನಷ್ಟ ಅನುಭವಿಸುತ್ತಿದ್ದಾರೆ. ಇದೇ ವೇಳೆ, ಮೊಟ್ಟೆ ಪ್ರಿಯರಿಗೆ ಇದು ಸಿಕ್ಕಿದ್ದೇ ಚಾನ್ಸ್ ಎಂಬಂತಾಗಿದೆ. ಕಡಿಮೆ ಬೆಲೆಗೆ ಮೊಟ್ಟೆಗಳು ಸಿಗುತ್ತಿರುವುದರಿಂದ ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾರೆ. ಒಂದು ದಿನದಲ್ಲಿ ತಿನ್ನುವ ಮೊಟ್ಟೆಗಳಿಗಿಂತ ಹೆಚ್ಚಾಗಿ ಖರೀದಿಸಿ ಸೇವಿಸುತ್ತಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಈ ಅನಿರೀಕ್ಷಿತ ಬೆಳವಣಿಗೆಯಿಂದ ಮೊಟ್ಟೆ ಮಾರುಕಟ್ಟೆಯಲ್ಲಿ ವಿಭಿನ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಣಾ ದಗ್ಗುಬಾಟಿ, ಕರಣ್ ಜೋಹರ್ ಸಿನಿಮಾನಲ್ಲಿ ನಟಿಸಲ್ಲ ಅಕ್ಷಯ್ ಕುಮಾರ್ – Kannada News | Akshay Kumar not acting with Rana Daggubati in Karan Johar’s movie

ಅಕ್ಷಯ್ ಕುಮಾರ್ (Akshay Kumar), ಬಾಲಿವುಡ್​ನ ಅತ್ಯಂತ ಬ್ಯುಸಿ ಸ್ಟಾರ್ ನಟ. ವರ್ಷಕ್ಕೆ ನಾಲ್ಕೈದು ಸಿನಿಮಾಗಳಲ್ಲಿ ನಟಿಸಿಬಿಡುತ್ತಾರೆ. ಅಕ್ಷಯ್ ಕುಮಾರ್ ಅವರು, ಸಿನಿಮಾ ಆಫರ್​​ಗಳನ್ನು ರಿಜೆಕ್ಟ್ ಮಾಡುವುದೇ ಇಲ್ಲ ಎಂಬ ಮಾತಿದೆ. ಆದರೆ ಇದೀಗ ಅಕ್ಷಯ್ ಕುಮಾರ್ ಅವರು ಸಿನಿಮಾ ಒಂದನ್ನು ರಿಜೆಕ್ಟ್ ಮಾಡಿದ್ದಾರೆ. ಅದೂ ಸಾಮಾನ್ಯ ನಿರ್ಮಾಣ ಸಂಸ್ಥೆಯನ್ನಲ್ಲ. ಬದಲಿಗೆ ಬಾಲಿವುಡ್​ನ ದೊಡ್ಡ ನಿರ್ಮಾಣ ಸಂಸ್ಥೆಯ ಆಫರ್ ಅನ್ನೇ ರಿಜೆಕ್ಟ್ ಮಾಡಿ ಆಶ್ಚರ್ಯ ಮೂಡಿಸಿದ್ದಾರೆ.

ಕರಣ್ ಜೋಹರ್ ಅವರ ಧರ್ಮಾ ಪ್ರೊಡಕ್ಷನ್ಸ್ ಅಡಿಯಲ್ಲಿ, ಉಜ್ಜಯಿನಿ ನಗರದ ಹಿನ್ನೆಲೆಯ ಐತಿಹಾಸಿಕ ಥ್ರಿಲ್ಲರ್ ಚಿತ್ರವೊಂದರಲ್ಲಿ ಅಕ್ಷಯ್ ಕುಮಾರ್ ನಟಿಸಲಿದ್ದಾರೆ ಎನ್ನಲಾಗಿತ್ತು. ಇದೇ ಸಿನಿಮಾನಲ್ಲಿ ‘ಬಾಹುಬಲಿ’ ಸಿನಿಮಾದ ವಿಲನ್ ರಾಣಾ ದಗ್ಗುಬಾಟಿ ಸಹ ನಟಿಸಲಿದ್ದು, ‘ಬಾಹುಬಲಿ’ ಮಾದರಿಯ ಸಿನಿಮಾ ಇದಾಗಿರಲಿದೆ ಎಂಬ ಸುದ್ದಿಗಳು ಇತ್ತೀಚೆಗೆ ಹರಿದಾಡಿದ್ದವು. ಆದರೆ ಇದೀಗ ಅಕ್ಷಯ್ ಕುಮಾರ್ ಅವರು ಆ ಸಿನಿಮಾನಲ್ಲಿ ನಟಿಸುವುದಿಲ್ಲ ಎನ್ನಲಾಗುತ್ತಿದೆ.

ಅಕ್ಷಯ್ ಕುಮಾರ್ ಮತ್ತು ರಾಣಾ ದಗ್ಗುಬಾಟಿ ಕರಣ್ ಜೋಹರ್ ಅವರ ಚಿತ್ರಕ್ಕಾಗಿ ಒಂದಾಗಲಿದ್ದಾರೆ ಎಂಬ ಸುದ್ದಿ ಹರಡಿತ್ತು. ಅಕ್ಷಯ್ ಕುಮಾರ್ ಅವರ ತಂಡವು ಇದನ್ನು ಅಧಿಕೃತವಾಗಿ ನಿರಾಕರಿಸಿದ್ದು, ಇದು ಕೇವಲ ವದಂತಿ ಎಂದು ತಿಳಿಸಿದೆ. ಅಕ್ಷಯ್ ಕುಮಾರ್ ಸದ್ಯ ತಮ್ಮ ಇತ್ತೀಚಿನ ಚಿತ್ರ ‘ಭೂತ್ ಬಂಗ್ಲಾ’ ಯಶಸ್ಸಿನಲ್ಲಿದ್ದಾರೆ. ಪ್ರಿಯದರ್ಶನ್ ನಿರ್ದೇಶನದ ಈ ಹಾರರ್ ಕಾಮಿಡಿ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಅಕ್ಷಯ್ ಕುಮಾರ್ ಅವರು ಮುಂದೆ ‘ವೆಲ್ಕಮ್ ಟು ದಿ ಜಂಗಲ್’, ‘ಹೈವಾನ್’, ಅನೀಸ್ ಬಾಜ್ಮಿ ಅವರ ಚಿತ್ರ ಮತ್ತು ‘ಗೋಲ್‌ಮಾಲ್ 5’ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:ಅಕ್ಷಯ್ ಕುಮಾರ್ ಪುತ್ರ ಆರವ್ ಭಾಟಿಯಾ ತಿಂಗಳ ಸಂಬಳ ಕೇವಲ 4,500 ರೂಪಾಯಿ

ಆದರೆ ಈಗ ಉಜ್ಜಯಿನಿ ಆಧರಿತ ಸಿನಿಮಾನಲ್ಲಿ ನಟಿಸುವುದಿಲ್ಲ ಎಂದು ಅಕ್ಷಯ್ ಹೇಳಲು ಕಾರಣ ಏನೆಂದು ತಿಳಿದು ಬಂದಿಲ್ಲ. ಅಕ್ಷಯ್ ಕುಮಾರ್ ಅವರು ಸಾಮಾನ್ಯವಾಗಿ ಐತಿಹಾಸಿಕ ಸಿನಿಮಾಗಳಲ್ಲಿ ನಟಿಸಲು ಹೆಚ್ಚು ಆಸಕ್ತಿ ತೋರುತ್ತಾರೆ ಆದರೆ ಈ ಸಿನಿಮಾಕ್ಕೆ ಒಲ್ಲೆ ಎಂದಿದ್ದಾರೆ. ಕರಣ್ ಜೋಹರ್ ಜೊತೆಗೆ ಮನಸ್ತಾಪದ ಕಾರಣಕ್ಕೆ ಅಕ್ಷಯ್ ನಟಿಸುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇನ್ನು ರಾಣಾ ದಗ್ಗುಬಾಟಿ ಸಹ ಕೆಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಅವರು ನಟನೆಗಿಂತಲೂ ಸಿನಿಮಾ ನಿರ್ಮಾಣ, ವಿತರಣೆಗಳಲ್ಲಿ ತಮ್ಮನ್ನು ಹೆಚ್ಚು ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೆ ‘ಕಾಂತಾ’ ಹೆಸರಿನ ಸಿನಿಮಾ ನಿರ್ಮಿಸಿದ್ದರು. ಇದೀಗ ಇನ್ನೂ ಕೆಲವು ಸಿನಿಮಾಗಳ ಮೇಲೆ ಬಂಡವಾಳ ಹೂಡಿದ್ದಾರೆ. ಕೆಲ ಸಿನಿಮಾಗಳಲ್ಲಿ ನಟನೆ ಸಹ ಮಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Copper Ring Benefits: ತಾಮ್ರದ ಉಂಗುರವನ್ನು ಈ ರಾಶಿಯವರು ಧರಿಸಿದ್ರೆ ಅದೃಷ್ಟವೇ ಬದಲಾಗಲಿದೆ – Kannada News | Copper Ring Benefits: Astrology, Health and Sun’s Grace for Prosperity

ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಶಾಂತಿ ಮತ್ತು ದೈಹಿಕ ಆರೋಗ್ಯಕ್ಕೆ ಲೋಹಗಳಿಗೆ ವಿಶೇಷ ಸ್ಥಾನವಿದೆ. ಹಿಂದೂ ಸಂಪ್ರದಾಯದಲ್ಲಿ ಚಿನ್ನ ಮತ್ತು ಬೆಳ್ಳಿಯಷ್ಟೇ ತಾಮ್ರವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಪೂಜೆ, ಯಜ್ಞ ಮತ್ತು ಸೂರ್ಯ ದೇವರಿಗೆ ಅರ್ಘ್ಯ ಅರ್ಪಿಸಲು ತಾಮ್ರದ ಪಾತ್ರೆಗಳನ್ನೇ ಬಳಸುವುದು ವಾಡಿಕೆ. ತಾಮ್ರವು ಎಂದಿಗೂ ಅಶುದ್ಧವಾಗದ ಲೋಹವೆಂದು ನಂಬಲಾಗಿದ್ದು, ಇದನ್ನು ಧರಿಸುವುದರಿಂದ ದೇಹ ಮತ್ತು ಮನಸ್ಸನ್ನು ಶುದ್ಧವಾಗಿರಿಸಿಕೊಳ್ಳಬಹುದು ಎಂಬ ನಂಬಿಕೆಯಿದೆ.

ಸೂರ್ಯನ ಪ್ರಭಾವ ಮತ್ತು ಅದೃಷ್ಟದ ಬದಲಾವಣೆ:

ತಾಮ್ರವನ್ನು ನವಗ್ರಹಗಳ ರಾಜನಾದ ಸೂರ್ಯನಿಗೆ ಸಂಬಂಧಿಸಿದ ಲೋಹವೆಂದು ಪರಿಗಣಿಸಲಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಜೀವನದ ಕಷ್ಟದ ದಿನಗಳು ಕಳೆದು ಶುಭ ದಿನಗಳು ಬರಲೆಂದು ಆಶಿಸುತ್ತಾರೆ. ಇದಕ್ಕಾಗಿ ರತ್ನಗಳು ಮತ್ತು ಲೋಹಗಳನ್ನು ಧರಿಸುವ ಸಾಂಪ್ರದಾಯಿಕ ಮಾರ್ಗಗಳನ್ನು ಅನುಸರಿಸಲಾಗುತ್ತದೆ. ಸರಿಯಾದ ಕ್ರಮದಲ್ಲಿ ತಾಮ್ರದ ಉಂಗುರವನ್ನು ಧರಿಸುವುದರಿಂದ ಜಾತಕದಲ್ಲಿ ಸೂರ್ಯನ ಸ್ಥಾನ ಬಲಗೊಳ್ಳುತ್ತದೆ ಮತ್ತು ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಪ್ರಾರಂಭವಾಗುತ್ತವೆ.

ವಿಶೇಷ ಫಲ ಪಡೆಯುವ ರಾಶಿಗಳು:

ಜ್ಯೋತಿಷ್ಯದ ಪ್ರಕಾರ, ಈ ಉಂಗುರವು ಕೆಲವು ರಾಶಿಚಕ್ರದವರಿಗೆ ವರದಾನವಾಗಿ ಪರಿಣಮಿಸುತ್ತದೆ. ಮಂಗಳನ ಆಳ್ವಿಕೆಯ ಮೇಷ ರಾಶಿಯವರು ಇದನ್ನು ಧರಿಸುವುದರಿಂದ ಆತ್ಮವಿಶ್ವಾಸ ಮತ್ತು ಯಶಸ್ಸನ್ನು ಪಡೆಯುತ್ತಾರೆ. ಸೂರ್ಯನ ಅಧಿಪತ್ಯದ ಸಿಂಹ ರಾಶಿಯವರಿಗೆ ಇದು ವೃತ್ತಿಜೀವನದಲ್ಲಿ ಅಭಿವೃದ್ಧಿ ಹಾಗೂ ಕೀರ್ತಿಯನ್ನು ತಂದುಕೊಡುತ್ತದೆ. ಇನ್ನು ಗುರುವಿನ ಆಳ್ವಿಕೆಯ ಧನು ರಾಶಿಯವರು ಇದನ್ನು ಧರಿಸುವುದರಿಂದ ಅದೃಷ್ಟ ಸುಧಾರಿಸಿ, ಜೀವನದಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಧರಿಸುವ ಕ್ರಮ ಮತ್ತು ಸಮಯ:

ತಾಮ್ರದ ಉಂಗುರವನ್ನು ಧರಿಸಲು ಭಾನುವಾರ ಮತ್ತು ಮಂಗಳವಾರ ಅತ್ಯಂತ ಶುಭ ದಿನಗಳು. ಭಾನುವಾರ ಧರಿಸುವುದರಿಂದ ಸೂರ್ಯ ದೇವನ ಅನುಗ್ರಹ ಸಿಕ್ಕರೆ, ಮಂಗಳವಾರ ಧರಿಸುವುದರಿಂದ ಮಂಗಳ ದೋಷದ ಪ್ರಭಾವ ಕಡಿಮೆಯಾಗುತ್ತದೆ. ಇದನ್ನು ಸಾಮಾನ್ಯವಾಗಿ ಬಲಗೈಯ ಉಂಗುರದ ಬೆರಳಿಗೆ ಧರಿಸುವುದು ಉತ್ತಮ. ಧರಿಸುವ ಮೊದಲು ಉಂಗುರವನ್ನು ಪವಿತ್ರ ಜಲದಿಂದ ಶುದ್ಧೀಕರಿಸುವುದು ಶಾಸ್ತ್ರೋಕ್ತ ವಿಧಾನವಾಗಿದೆ.

ಆರೋಗ್ಯ ಮತ್ತು ಮಾನಸಿಕ ಲಾಭಗಳು:

ಇದು ಕೇವಲ ಜ್ಯೋತಿಷ್ಯಕ್ಕೆ ಮಾತ್ರ ಸೀಮಿತವಲ್ಲದೆ, ಆರೋಗ್ಯದ ದೃಷ್ಟಿಯಿಂದಲೂ ಪ್ರಯೋಜನಕಾರಿಯಾಗಿದೆ. ತಾಮ್ರದ ಸಂಪರ್ಕವು ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಚರ್ಮದ ಕಾಂತಿಯನ್ನು ಹೆಚ್ಚಿಸಲು ಸಹಕಾರಿ ಎಂದು ನಂಬಲಾಗಿದೆ. ಮನಸ್ಸಿನಲ್ಲಿ ಅತಿಯಾದ ಆತಂಕ ಅಥವಾ ಕೋಪ ಇರುವವರು ತಾಮ್ರದ ಉಂಗುರ ಧರಿಸುವುದರಿಂದ ಮಾನಸಿಕ ಶಾಂತಿಯನ್ನು ಕಂಡುಕೊಳ್ಳಬಹುದು ಮತ್ತು ಪರಿಸ್ಥಿತಿಗಳನ್ನು ಎದುರಿಸುವ ಧೈರ್ಯ ಪಡೆಯಬಹುದು ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:27 am, Thu, 23 April 26

Source link

ಮಗನ ಚಿನ್ನದ ಪದಕದ ಸಂಭ್ರಮ ನೋಡಲು ಬರುವಾಗಲೇ ಅಪಘಾತದಲ್ಲಿ ತಂದೆ ಸಾವು: ಘಟಿಕೋತ್ಸವ ದಿನವೇ ಭೀಕರ ದುರಂತ – Kannada News | Tragedy in Kalaburagi: Father Dies in Auto Accident Just Before Son Receives Two Gold Medals at CUK Convocation

ಪತ್ನಿ ಜತೆ ಶಿವಕುಮಾರ್ ಶರ್ಮಾ ಹಾಗೂ ಬಲಚಿತ್ರದಲ್ಲಿ ದಿವ್ಯಾಂಶು ಸಕ್ಸೇನಾImage Credit source: tv9

ಕಲಬುರಗಿ, ಏಪ್ರಿಲ್ 23: ಮಗ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಎರಡು ಚಿನ್ನದ ಪದಕಗಳನ್ನು ಪಡೆಯುವ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಬಂದ ತಂದೆಯೊಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ದಾರುಣ ಘಟನೆ ಕಲಬುರಗಿಯಲ್ಲಿ (Kalaburagi) ನಡೆದಿದೆ. ಮಗನ ಸಾಧನೆಯ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಈಗ ಮರಣದ ಶೋಕ ಆವರಿಸಿದೆ. ಮೃತರನ್ನು ಮಧ್ಯ ಪ್ರದೇಶದ ಉಜ್ಜಯಿನಿ ಮೂಲದ ಶಿವಕುಮಾರ್ ಶರ್ಮಾ (59) ಎಂದು ಗುರುತಿಸಲಾಗಿದೆ.

ಘಟಿಕೋತ್ಸವ ಸಂಭ್ರಮದ ಮಧ್ಯೆ ನಡೆದಿದ್ದೇನು?

ಉಜ್ಜಯಿನಿಯ ಶಿವಕುಮಾರ್ ಶರ್ಮಾ ಪುತ್ರ ದಿವ್ಯಾಂಶು ಸಕ್ಸೇನಾ ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ (CUK) ಬಿ.ಟೆಕ್ (ಇ ಆಂಡ್ ಸಿ) ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು, ಎರಡು ಚಿನ್ನದ ಪದಕಗಳಿಗೆ ಭಾಜನರಾಗಿದ್ದಾರೆ. ನಿನ್ನೆ (ಏಪ್ರಿಲ್ 22) ನಡೆದ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವದಲ್ಲಿ ದಿವ್ಯಾಂಶು ಚಿನ್ನದ ಪದಕಗಳನ್ನು ಸ್ವೀಕರಿಸಿದ್ದಾರೆ. ಮಗನ ಈ ಸಾಧನೆಯನ್ನು ನೋಡಲೆಂದೇ ತಂದೆ ಶಿವಕುಮಾರ್ ಅವರು ಮಧ್ಯಪ್ರದೇಶದಿಂದ ಕಲಬುರಗಿಗೆ ಆಗಮಿಸಿದ್ದರು.

ಆಟೋ ಪಲ್ಟಿಯಾಗಿ ದುರ್ಮರಣ

ಬುಧವಾರ ಬೆಳಗ್ಗೆ ಘಟಿಕೋತ್ಸವ ಕಾರ್ಯಕ್ರಮಕ್ಕೆ ಹಾಜರಾಗಲು ಆಳಂದ ತಾಲೂಕಿನ ಕಡಗಂಚಿ ಗ್ರಾಮದ ಬಳಿಯಿರುವ ವಿಶ್ವವಿದ್ಯಾಲಯದ ಕ್ಯಾಂಪಸ್‌ಗೆ ಶಿವಕುಮಾರ್ ಶರ್ಮಾ ಆಟೋದಲ್ಲಿ ತೆರಳುತ್ತಿದ್ದರು. ಈ ವೇಳೆ ಆಟೋ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಶಿವಕುಮಾರ್ ಶರ್ಮಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಆಟೋದಲ್ಲಿದ್ದ ಇತರರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಇದನ್ನೂ ಓದಿ: ಕಲಬುರಗಿಯಲ್ಲಿ ಹೆಚ್ಚಾಯ್ತು ಹದಿಹರೆಯದ ಗರ್ಭಧಾರಣೆ! ಒಂದೇ ವರ್ಷದಲ್ಲಿ 61 ಪ್ರಕರಣಗಳು ದಾಖಲು

ಒಂದೆಡೆ ಮಗ ದಿವ್ಯಾಂಶು ವೇದಿಕೆಯ ಮೇಲೆ ಪದಕ ಸ್ವೀಕರಿಸಬೇಕಾದ ಸಂಭ್ರಮದಲ್ಲಿದ್ದರೆ, ಇನ್ನೊಂದೆಡೆ ಆತನನ್ನು ಸಲಹಿ ಬೆಳೆಸಿದ ತಂದೆಯ ಶವವಾಗಿ ಪಕ್ಕದ ಆಸ್ಪತ್ರೆಯಲ್ಲಿದ್ದರು. ಈ ದೃಶ್ಯ ನೆರೆದಿದ್ದವರ ಕಣ್ಣಾಲಿಗಳನ್ನು ತೇವಗೊಳಿಸಿತು. ಘಟನೆ ಸಂಬಂಧ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ನಾಲ್ಕು ವರ್ಷದ ಬಾಲಕಿಗೆ ಒಂದೇ ಅವಧಿಯಲ್ಲಿ 18 ಹಲ್ಲುಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲು ದಂತ ವೈದ್ಯರ ಯತ್ನ, ಬಾಲಕಿ ಸಾವು – Kannada News | Tragic Dental Case in Kazakhstan: Child Dies After Procedure Under Sedation

ಕಝಾಕಿಸ್ತಾನ, ಏಪ್ರಿಲ್ 23: ನಾಲ್ಕು ವರ್ಷದ ಬಾಲಕಿಗೆ ದಂತ ವೈದ್ಯರೊಬ್ಬರು ಒಂದೇ ಬಾರಿಗೆ 18 ಹಲ್ಲುಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲು ಯತ್ನಿಸಿದ ಕಾರಣ ಬಾಲಕಿ ಕೊನೆಯುಸಿರೆಳೆದಿರುವ ಘಟನೆ ಕಝಾಕಿಸ್ತಾನದಲ್ಲಿ ನಡೆದಿದೆ. ಆದರೆ ಬಾಲಕಿಗೆ ಅನಸ್ತೇಶಿಯಾ ಅಥವಾ ಆ ಶಸ್ತ್ರಚಿಕಿತ್ಸೆಯನ್ನೇ ತಡೆದುಕೊಳ್ಳಲಾಗದೆ ಉಸಿರುಚೆಲ್ಲಿದ್ದಾಳೆ. ಸಿಪಿಆರ್ ಮಾಡಿದರೂ ಆಕೆ ಮತ್ತೆ ಎಚ್ಚರಗೊಳ್ಳಲೇ ಇಲ್ಲ. ಮಕ್ಕಳ ಹಲ್ಲುಗಳಿಗೆ ಚಿಕಿತ್ಸೆ ಕೊಡಿಸುವಾಗ ತುಂಬಾ ಎಚ್ಚರಿಕೆಯಿಂದಿರಬೇಕು.

Source link

ಮಿರ್ಜಾಪುರದಲ್ಲಿ ಎರಡು ಟ್ರಕ್​ಗಳ ನಡುವೆ ಸಿಲುಕಿ ನಜ್ಜುಗುಜ್ಜಾದ ವಾಹನಗಳು, ಹೊತ್ತಿದ ಬೆಂಕಿ, 11 ಮಂದಿ ಸಜೀವದಹನ – Kannada News | Brake Failure Turns Deadly: Chain Crash Claims 11 Lives in Mirzapur

ಮಿರ್ಜಾಪುರ, ಏಪ್ರಿಲ್ 23: ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಎರಡು ಬೃಹತ್ ಟ್ರಕ್​ಗಳ ನಡುವೆ ಡಿಕ್ಕಿ ಸಂಭವಿಸಿದೆ, ಅದರ ನಡುವೆ ಕಾರು  ಸಿಕ್ಕಿಹಾಕಿಕೊಂಡ ಪರಿಣಾಮ 11 ಮಂದಿ ಸಜೀವದಹನವಾಗಿದ್ದಾರೆ. ಎರಡು ಭಾರೀ ವಾಹನಗಳ ನಡುವೆ ಸಿಲುಕಿದ್ದ ಕಾರು ನಜ್ಜುಗುಜ್ಜಾಗಿದ್ದು, ನಂತರ ಬೆಂಕಿ ಹೊತ್ತಿಕೊಂಡಿತ್ತು. ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಬ್ರೇಕ್ ಫೇಲ್ ಆದ ಟ್ರಕ್ ಇಳಿಜಾರಿನಲ್ಲೊ ವೇಗವಾಗಿ ಬಂದು ಮತ್ತೊಂದು ಟ್ರಕ್​ಗೆ ಡಿಕ್ಕಿ ಹೊಡೆದಿದೆ. ಆ ಟ್ರಕ್​ ಹಿಂದೆ ಕಾರು ಕೂಡ ಇತ್ತು.ಘಟನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ದುಃಖ ವ್ಯಕ್ತಪಡಿಸಿದ್ದು, ಮೃತರ ಸಂಬಂಧಿಕರಿಗೆ 2 ಲಕ್ಷ ರೂ. ಪರಿಹಾರ ಧನ ಘೋಷಿಸಿದ್ದಾರೆ. ಗಾಯಾಳುಗಳಿಗೆ ತಲಾ 50,000 ರೂ. ಪರಿಹಾರ ಘೋಷಿಸಿದ್ದಾರೆ.

Source link

Video: ಮಾಲ್‌ನಲ್ಲಿದ್ದ ಗೊಂಬೆಗಳ ಪಾದ ಮುಟ್ಟಿ ನಮಸ್ಕರಿಸಿದ ಪುಟಾಣಿ – Kannada News | A little girl was blessed after seeing dolls at the mall and touched their feet

ಪುಟಾಣಿ ಮಕ್ಕಳಿಗೆ (little kids) ತಾವು ಏನು ಮಾಡುತ್ತಿದ್ದೇವೆ, ತಾವು ಮಾಡುವುದು ಸರಿಯೋ ತಪ್ಪೋ ಎನ್ನುವುದು ತಿಳಿದಿರಲ್ಲ. ಹೆತ್ತವರು ಏನು ಹೇಳಿಕೊಡುತ್ತಾರೋ ಅದನ್ನೇ ಕಲಿಯುತ್ತದೆ. ಈ ದೃಶ್ಯವು ತಾಯಿ ಹೇಳಿದ ಮಾತನ್ನು ಈ ಪುಟಾಣಿ ಹೇಗೆ ಪಾಲಿಸುತ್ತಿದೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಪುಟಾಣಿ ಶಾಪಿಂಗ್ ಮಾಲ್‌ನಲ್ಲಿ ನಿಲ್ಲಿಸಿಟ್ಟ ಆಕರ್ಷಕ ಗೊಂಬೆಗಳನ್ನು ಕಂಡೊಡನೆ ಅದರ ಪಾದ ಸ್ಪರ್ಶಿಸಿ ನಮಸ್ಕಾರ ಮಾಡಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಈ ಪುಟ್ಟ ಹುಡುಗಿಯ ಸಂಸ್ಕಾರಯುತ ನಡವಳಿಕೆಯನ್ನು ಮೆಚ್ಚಿಕೊಂಡಿದ್ದಾರೆ.

sarcastic_doctorrr ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಪುಟಾಣಿಯೊಂದು ಮಾಲ್ ನಲ್ಲಿ ನಿಲ್ಲಿಸಿಟ್ಟ ಗೊಂಬೆಗಳ ಪಾದ ಮುಟ್ಟಿ ನಮಸ್ಕರಿಸುತ್ತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ನಂಗೆ ಮನೆಗೆ ಹೋಗಬೇಕು ಅಷ್ಟೇ; ಕ್ಲಾಸ್ ರೂಮ್ ಕಿಟಕಿ ಹತ್ತಿ ರಂಪಾಟ ಮಾಡಿದ ಪುಟಾಣಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಪುಟಾಣಿಯ ಸಂಸ್ಕಾರಯುತ ನಡವಳಿಕೆಯನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಒಬ್ಬ ಬಳಕೆದಾರ, ಕ್ಯೂಟ್ ನೆಸ್ ಎಂದರೆ, ಮತ್ತೊಬ್ಬರು, ಮುಗ್ಧತೆ ಇನ್ನೊಂದು ಉದಾಹರಣೆ ಈ ದೃಶ್ಯ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ನನ್ನ ಮಗನು ಇದೇ ರೀತಿ ಮಾಡ್ತಾನೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

MI vs CSK ಪಂದ್ಯವನ್ನು ‘ಎಲ್ ಕ್ಲಾಸಿಕೋ’ ಎಂದು ಕರೆಯುವುದು ಯಾಕೆ?

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 33ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ತಂಡಗಳು ಮುಖಾಮುಖಿಯಾಗಲಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವನ್ನು ‘ಎಲ್ ಕ್ಲಾಸಿಕೋ’ ಮ್ಯಾಚ್ ಎಂದು ವರ್ಣಿಸಲಾಗುತ್ತಿದೆ. ಇಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯವನ್ನೇ ಯಾಕೆ ‘ಎಲ್ ಕ್ಲಾಸಿಕೋ’ ಎಂದು ಕರೆಯಲಾಗುತ್ತಿದೆ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಇಲ್ಲಿದೆ ಉತ್ತರ…

‘ಎಲ್ ಕ್ಲಾಸಿಕೋ’ ಎಂದರೇನು?

‘ಎಲ್ ಕ್ಲಾಸಿಕೋ’ (El Clásico) ಎಂಬುದು ಮೂಲತಃ ಸ್ಪ್ಯಾನಿಷ್ ಭಾಷೆಯ ಪದ. ಇದರ ಅರ್ಥ “ದಿ ಕ್ಲಾಸಿಕ್” (The Classic) ಅಥವಾ “ಶ್ರೇಷ್ಠ” ಎಂದಾಗಿದೆ.

ಕ್ರೀಡಾ ಕ್ಷೇತ್ರದಲ್ಲಿ ಈ ಪದವನ್ನು ಬಳಸಲಾಗಿದ್ದು ಸ್ಪೇನ್ ಫುಟ್​ಬಾಲ್​ ಅಂಗಳದಲ್ಲಿ. ಅಂದರೆ ವಿಶ್ವದ ಅತ್ಯಂತ ಹಳೆಯ ಫುಟ್‌ಬಾಲ್ ಪೈಪೋಟಿಗಳಲ್ಲಿ ಒಂದಾದ ಸ್ಪೇನ್‌ನ ರಿಯಲ್ ಮ್ಯಾಡ್ರಿಡ್ (Real Madrid) ಮತ್ತು ಬಾರ್ಸಿಲೋನಾ (FC Barcelona) ಕ್ಲಬ್‌ಗಳ ನಡುವಿನ ಮುಖಾಮುಖಿಯನ್ನು ಎಲ್​ ಕ್ಲಾಸಿಕೋ ಪಂದ್ಯ ಎಂದು ಬಣ್ಣಿಸಲಾಗುತ್ತದೆ.

ಅಂದರೆ ಇಲ್ಲಿ ಅತ್ಯುತ್ತಮ ಪೈಪೋಟಿಯ ಪಂದ್ಯವನ್ನು ದಿ ಕ್ಲಾಸಿಕ್ ಮ್ಯಾಚ್​ ಅಥವಾ ಎಲ್ ಕ್ಲಾಸಿಕೋ ಪಂದ್ಯ ಎಂದು ಕರೆಯಲಾಗುತ್ತದೆ.  ಅದರಂತೆ ಐಪಿಎಲ್​ನಲ್ಲೂ ಈ ಪದವನ್ನು ಬಳಸಲಾಗುತ್ತಿದೆ.

CSK vs MI ಪಂದ್ಯವೇಕೆ ‘ಎಲ್ ಕ್ಲಾಸಿಕೋ’?

ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡಗಳೆಂದರೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್​. ಉಭಯ ತಂಡಗಳು ತಲಾ 5 ಬಾರಿ ಚಾಂಪಿಯನ್ ಪಟ್ಟಕ್ಕೇರಿವೆ. ಅಂದರೆ ಲೀಗ್‌ನ ಅರ್ಧಕ್ಕಿಂತ ಹೆಚ್ಚು ಟ್ರೋಫಿಗಳು ಈ ಎರಡು ತಂಡಗಳ ಬಳಿಯೇ ಇರುವುದು ವಿಶೇಷ.

ಹೀಗಾಗಿಯೇ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯವನ್ನು’ಎಲ್ ಕ್ಲಾಸಿಕೋ’ ಮ್ಯಾಚ್​ ಎಂದು ಕರೆಯಲಾಗುತ್ತದೆ. ಈ ಹೆಸರಿಗೆ ತಕ್ಕಂತೆ ಈ ಹಿಂದೆ ಉಭಯ ತಂಡಗಳು ಗೆಲುವಿಗಾಗಿ ಕೊನೆಯ ಕ್ಷಣದವರೆಗೆ ಭರ್ಜರಿ ಪೈಪೋಟಿ ನಡೆಸಿದ್ದರು.

ಉಭಯ ತಂಡಗಳ ಮುಖಾಮುಖಿ:

ಉಭಯ ತಂಡಗಳ ದಾಖಲೆಯನ್ನು ನೋಡಿದರೆ ಮುಂಬೈ ಇಂಡಿಯನ್ಸ್ ಸ್ವಲ್ಪ ಮೇಲುಗೈ ಹೊಂದಿದೆ. ಆದರೆ, ಪ್ರತಿ ಬಾರಿ ಈ ತಂಡಗಳು ಮುಖಾಮುಖಿಯಾದಾಗಲೂ ಫಲಿತಾಂಶ ಕೊನೆಯ ಓವರ್‌ವರೆಗೂ ಕುತೂಹಲಕಾರಿಯಾಗಿರುತ್ತದೆ.

  • ಒಟ್ಟು ಪಂದ್ಯಗಳು: 39
  •  ಮುಂಬೈ ಇಂಡಿಯನ್ಸ್​ ಗೆಲುವು: 21
  •  ಚೆನ್ನೈ ಸೂಪರ್ ಕಿಂಗ್ಸ್​ ಗೆಲುವು: 18
  • ಗೆಲುವಿನ ಶೇಕಡಾವಾರು: ಮುಂಬೈ ಇಂಡಿಯನ್ಸ್ (53.8%), ಚೆನ್ನೈ ಸೂಪರ್ ಕಿಂಗ್ಸ್​ (46.2%)

‘ಎಲ್ ಕ್ಲಾಸಿಕೋ’ ಪಂದ್ಯದ ಇನ್ನಿತರ ವಿಷಯಗಳು:

  • ನಗರಗಳ ನಡುವಿನ ಗೌರವ: ಇದು ಕೇವಲ ಎರಡು ತಂಡಗಳ ನಡುವಿನ ಆಟವಲ್ಲ, ಭಾರತದ ಎರಡು ದೊಡ್ಡ ನಗರಗಳಾದ ಮುಂಬೈ ಮತ್ತು ಚೆನ್ನೈ ನಡುವಿನ ಶ್ರೇಷ್ಠತೆಯ ಹೋರಾಟ.
  • ಅತಿ ಹೆಚ್ಚು ವೀಕ್ಷಣೆ: ಐಪಿಎಲ್ ಇತಿಹಾಸದಲ್ಲಿ ಲೀಗ್ ಹಂತದಲ್ಲಿ ಅತಿ ಹೆಚ್ಚು ಟಿವಿ ರೇಟಿಂಗ್ ಮತ್ತು ವೀಕ್ಷಕರ ಸಂಖ್ಯೆ ದಾಖಲಾಗಿದ್ದು ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ಮುಖಾಮುಖಿಯ ಪಂದ್ಯದಲ್ಲಿ.
  • ಬಲಿಷ್ಠ ತಂಡಗಳು: ಎರಡೂ ತಂಡಗಳು ಯಾವಾಗಲೂ ಬಲಿಷ್ಠ ಆಟಗಾರರನ್ನು ಹೊಂದಿರುತ್ತವೆ, ಹೀಗಾಗಿ ಪಂದ್ಯದ ಗುಣಮಟ್ಟ ಅತ್ಯುತ್ತಮವಾಗಿರುತ್ತದೆ.

ಇದನ್ನೂ ಓದಿ: IPL 2026: CSK ಪರ ಆಸ್ಟ್ರೇಲಿಯನ್ ವೇಗಿ ಪಾದಾರ್ಪಣೆ..!

ಆದರೆ ಇದೀಗ ಚೆನ್ನೈ ಸೂಪರ್ ಕಿಂಗ್ಸ್​ ಹಾಗೂ ಮುಂಬೈ ಇಂಡಿಯನ್ಸ್​ ತಂಡಗಳಲ್ಲಿನ ಆಟಗಾರರ ಬದಲಾಗಿದ್ದಾರೆ. ಈ ಬದಲಾವಣೆಯ ಹೊರತಾಗಿಯೂ ಎಲ್​ ಕ್ಲಾಸಿಕೋ ಕುತೂಹಲ ಹಾಗೆಯೇ ಉಳಿದಿದೆ. ಈ ಕುತೂಹಲಕ್ಕೆ ಕಿಚ್ಚು ಹಚ್ಚುವಂತಹ ಪ್ರದರ್ಶನವನ್ನು ಈ ಬಾರಿ ಕೂಡ ಉಭಯ ತಂಡಗಳು ನೀಡಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

 

Source link

Exit mobile version