ಪುಟಾಣಿ ಮಕ್ಕಳಿಗೆ (little kids) ತಾವು ಏನು ಮಾಡುತ್ತಿದ್ದೇವೆ, ತಾವು ಮಾಡುವುದು ಸರಿಯೋ ತಪ್ಪೋ ಎನ್ನುವುದು ತಿಳಿದಿರಲ್ಲ. ಹೆತ್ತವರು ಏನು ಹೇಳಿಕೊಡುತ್ತಾರೋ ಅದನ್ನೇ ಕಲಿಯುತ್ತದೆ. ಈ ದೃಶ್ಯವು ತಾಯಿ ಹೇಳಿದ ಮಾತನ್ನು ಈ ಪುಟಾಣಿ ಹೇಗೆ ಪಾಲಿಸುತ್ತಿದೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಪುಟಾಣಿ ಶಾಪಿಂಗ್ ಮಾಲ್‌ನಲ್ಲಿ ನಿಲ್ಲಿಸಿಟ್ಟ ಆಕರ್ಷಕ ಗೊಂಬೆಗಳನ್ನು ಕಂಡೊಡನೆ ಅದರ ಪಾದ ಸ್ಪರ್ಶಿಸಿ ನಮಸ್ಕಾರ ಮಾಡಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಈ ಪುಟ್ಟ ಹುಡುಗಿಯ ಸಂಸ್ಕಾರಯುತ ನಡವಳಿಕೆಯನ್ನು ಮೆಚ್ಚಿಕೊಂಡಿದ್ದಾರೆ.
sarcastic_doctorrr ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಪುಟಾಣಿಯೊಂದು ಮಾಲ್ ನಲ್ಲಿ ನಿಲ್ಲಿಸಿಟ್ಟ ಗೊಂಬೆಗಳ ಪಾದ ಮುಟ್ಟಿ ನಮಸ್ಕರಿಸುತ್ತಿರುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ
ಇದನ್ನೂ ಓದಿ: ನಂಗೆ ಮನೆಗೆ ಹೋಗಬೇಕು ಅಷ್ಟೇ; ಕ್ಲಾಸ್ ರೂಮ್ ಕಿಟಕಿ ಹತ್ತಿ ರಂಪಾಟ ಮಾಡಿದ ಪುಟಾಣಿ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಪುಟಾಣಿಯ ಸಂಸ್ಕಾರಯುತ ನಡವಳಿಕೆಯನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಒಬ್ಬ ಬಳಕೆದಾರ, ಕ್ಯೂಟ್ ನೆಸ್ ಎಂದರೆ, ಮತ್ತೊಬ್ಬರು, ಮುಗ್ಧತೆ ಇನ್ನೊಂದು ಉದಾಹರಣೆ ಈ ದೃಶ್ಯ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ನನ್ನ ಮಗನು ಇದೇ ರೀತಿ ಮಾಡ್ತಾನೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
