ಕೊಳ್ಳೇಗಾಲ: ಮದುವೆ ಮನೆಯಲ್ಲಿ ಚಿನ್ನದ ವಿಚಾರಕ್ಕೆ ಭಾರಿ ಗಲಾಟೆ, ಚಾಕುವಿನಿಂದ ಇರಿದು ಮರ್ಮಾಂಗಕ್ಕೆ ಒದ್ದು ಹಲ್ಲೆ – Kannada News | Kollegal Wedding Horror: Groom’s Relative Stabbed Over Gold Ornament Dispute; Police Investigation Underway

ಗಲಾಟೆ ನಡೆದ ಆರ್​ಎಸ್ ಫಂಕ್ಷನ್ ಹಾಲ್‌ ಹಾಗೂ ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿರುವುದುImage Credit source: tv9

ಚಾಮರಾಜನಗರ, ಏಪ್ರಿಲ್ 29: ಮದುವೆ (Marriage) ಮನೆಯಲ್ಲಿ ಸಂಭ್ರಮ ಮನೆ ಮಾಡಬೇಕಿದ್ದ ಹೊತ್ತಲ್ಲಿ ಚಿನ್ನಾಭರಣದ ವಿಚಾರಕ್ಕೆ ಶುರುವಾದ ಜಗಳ ವಿಕೋಪಕ್ಕೆ ಹೋಗಿ, ಚಾಕು ಇರಿತದಲ್ಲಿ ಅಂತ್ಯವಾಗಿರುವ ಘಟನೆ ಚಾಮರಾಜನಗರ (Chamarajanagar) ಜಿಲ್ಲೆಯ ಕೊಳ್ಳೇಗಾಲದ ಆರ್​ಎಸ್ ಫಂಕ್ಷನ್ ಹಾಲ್‌ನಲ್ಲಿ ನಡೆದಿದೆ. ಕೇವಲ 70 ಗ್ರಾಂ ಚಿನ್ನದ ವ್ಯತ್ಯಾಸಕ್ಕಾಗಿ ವಧು-ವರರ ಕಡೆಯವರು ಬೀದಿಯಲ್ಲಿ ಬಡಿದಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಚಾಕುವಿನಿಂದ ಇರಿದು, ಮರ್ಮಾಂಗಕ್ಕೆ ಒದ್ದು ಹಲ್ಲೆ ಮಾಡಲಾಗಿದ್ದು, ಸದ್ಯ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಗಾಯಾಗಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊಳ್ಳೇಗಾಲದ ಆರ್​ಎಸ್ ಫಂಕ್ಷನ್ ಹಾಲ್‌ನಲ್ಲಿ ನಡೆದಿದ್ದೇನು?

ಮುದಾಸಿರ್ ಮತ್ತು ಗುಲ್ನಾಜ್ ಭಾನು ಎಂಬವರ ವಿವಾಹ ಇಂದು (ಏಪ್ರಿಲ್ 29) ನಿಶ್ಚಯವಾಗಿತ್ತು. ಆದರೆ ಮಂಗಳವಾರ ರಾತ್ರಿ ನಡೆದ ಅರಶಿಣ ಶಾಸ್ತ್ರದ ವೇಳೆ ವರನ ಕಡೆಯವರು ಒಂದೂವರೆ ಗಂಟೆ ತಡವಾಗಿ ಬಂದಿದ್ದಕ್ಕೆ ವಧುವಿನ ಕುಟುಂಬಸ್ಥರು ತಕರಾರು ತೆಗೆದಿದ್ದರು. ಈ ಮನಸ್ಥಾಪದ ನಡುವೆಯೇ ಚಿನ್ನಾಭರಣದ ವಿಚಾರ ಮುನ್ನೆಲೆಗೆ ಬಂದಿದೆ. ವಧುವಿನ ಕಡೆಯವರು 100 ಗ್ರಾಂ ಚಿನ್ನಕ್ಕೆ ಬೇಡಿಕೆ ಇಟ್ಟಿದ್ದರು, ಆದರೆ ವರನ ಕಡೆಯವರು ಕೇವಲ 30 ಗ್ರಾಂ ಚಿನ್ನ ತಂದಿದ್ದರು. ಇದರಿಂದ ಆಕ್ರೋಶಗೊಂಡ ವಧುವಿನ ಕುಟುಂಬಸ್ಥರು ಮದುವೆಯೇ ಬೇಡ ಎಂದು ಗಲಾಟೆ ಆರಂಭಿಸಿದ್ದಾರೆ.

ಮರ್ಮಾಂಗಕ್ಕೆ ಒದ್ದು ಚಾಕು ಇರಿತ

ಬುಧವಾರ ಮುಂಜಾನೆ ವರನ ಪರವಾಗಿ ಸಂಬಂಧಿ ಮೊಹಮ್ಮದ್ ಕೈಸರ್ ರಾಜಿ ಮಾತುಕತೆಗೆ ತೆರಳಿದ್ದಾರೆ. ಈ ವೇಳೆ ತಮಿಳುನಾಡಿನಿಂದ ಬಂದಿದ್ದ ವಧುವಿನ ಸಂಬಂಧಿಕರು ರೊಚ್ಚಿಗೆದ್ದು ಕೈಸರ್ ಅವರ ಮರ್ಮಾಂಗಕ್ಕೆ ಒದ್ದು, ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿ ವರನ ಸಂಬಂಧಿಗಳಾದ ಸಮೀರ್ ಅಯಾಜ್, ಶೋಯೆಬ್ ಹಾಗೂ ವಧುವಿನ ಕಡೆಯ ಫೈರೋಜ್ ಖಾನ್, ಅಬ್ದುಲ್ ವಾಹೀದ್ ಮತ್ತು ಅಬ್ದುಲ್ ಆರೀಫ್ ಮೇಲೂ ಹಲ್ಲೆ ನಡೆದಿದೆ.

ಇದನ್ನೂ ಓದಿ: ನಗರಸಭೆ ಅಧಿಕಾರಿಗಳ ಸುಳ್ಳು ಹೇಳಿಕೆ ಡಿಸಿ ಎದುರೇ ಬಯಲು: ಕಳ್ಳಾಟ ತಿಳಿಯುತ್ತಿದ್ದಂತೆ TV9 ಕ್ಯಾಮರಾಮ್ಯಾನ್ ಮೇಲೆ ಅಧಿಕಾರಿ ದರ್ಪ

ಗಾಯಾಳುಗಳಿಗೆ ಮೊದಲು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆ ಹಾಗೂ ಚಾಮರಾಜನಗರದ ಸಿಮ್ಸ್ (CIMS) ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಡಿವೈಎಸ್ಪಿ ಧರ್ಮೇಂದ್ರ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವೈಭವ್ ಬಿರುಗಾಳಿಗೆ ಕ್ರಿಸ್ ಗೇಲ್​ಗೆ ಶ್ರೇಷ್ಠ ದಾಖಲೆಯೇ ಶೇಕಿಂಗ್..!

Source link

ರಾಬರಿ ಪ್ರಕರಣದ ಆರೋಪಿ ಹೈಡ್ರಾಮ: ಪೊಲೀಸರ ಮೇಲೆ ಹಲ್ಲೆ ಯತ್ನ! – Kannada News | High Drama During Robbery Case Spot Inspection, Accused Creates Chaos, Attack Attempt Made On Police

ಬೆಳಗಾವಿ, ಏಪ್ರಿಲ್ 29: ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಶಿವಾಜಿನಗರದಲ್ಲಿ ರಾಬರಿ ಪ್ರಕರಣವೊಂದರ ಸ್ಥಳ ಮಹಜರ್ ಸಂದರ್ಭದಲ್ಲಿ ಹೈಡ್ರಾಮಾ ನಡೆದಿದೆ. ಚಿಕ್ಕೋಡಿ ಠಾಣೆ ಪೊಲೀಸರು ಆರೋಪಿ ಧೀರಜ್‌ನನ್ನು ಸ್ಥಳ ಮಹಜರಿಗಾಗಿ ಕರೆತಂದಿದ್ದರು. ಈ ವೇಳೆ ಆರೋಪಿ ಧೀರಜ್, ತನ್ನನ್ನು ಸುಮ್ಮನೆ ಬಂದಿಸಲಾಗಿದೆ ಎಂದು ಕೂಗಾಡಲು ಆರಂಭಿಸಿದ್ದಾನೆ.

ಆರೋಪಿಯ ಈ ಕೃತ್ಯದಿಂದ ಪರಿಸ್ಥಿತಿ ಉದ್ವಿಗ್ನಗೊಂಡಾಗ ಅಲ್ಲಿದ್ದ ಆರೋಪಿಯ ಸಂಬಂಧಿಕರು ಮತ್ತು ಸ್ನೇಹಿತರು ಸೇರಿಕೊಂಡು, ಸಿಪಿಐ ವಿಶ್ವನಾಥ ಚೌಗಲ್ ಹಾಗೂ ಪೇದೆಗಳ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ರಾಬರಿ ಪ್ರಕರಣದ ತನಿಖೆಗಾಗಿ ಕೊಲ್ಲಾಪುರಕ್ಕೆ ತೆರಳಿದ್ದ ಚಿಕ್ಕೋಡಿ ಪೊಲೀಸರು ಈ ಅನಿರೀಕ್ಷಿತ ಹಲ್ಲೆ ಯತ್ನದಿಂದ ಕೆಲಕಾಲ ಗೊಂದಲಕ್ಕೊಳಗಾಗಿದ್ದರು. ಆದಾಗ್ಯೂ, ಕ್ಷಣಾರ್ಧದಲ್ಲಿ ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸಿ ಹಲ್ಲೆಯಿಂದ ಪಾರಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Hindu Rituals: ಜನಿವಾರವನ್ನು ಎಲ್ಲೆಂದರಲ್ಲಿ ತೆಗೆಯಬಾರದು ಏಕೆ? ಯಜ್ಞೋಪವೀತ ಧಾರಣೆ ಮಹತ್ವ ಇಲ್ಲಿ ತಿಳಿಯಿರಿ – Kannada News | Yagnopaveetha: Sacred Janivara Rules, Significance and When to Change

ಯಜ್ಞೋಪವೀತ ಅಥವಾ ಜನಿವಾರImage Credit source: Pinterest

ಹಿಂದೂ ಸಂಪ್ರದಾಯದಲ್ಲಿ ಯಜ್ಞೋಪವೀತ ಅಥವಾ ಜನಿವಾರಕ್ಕೆ ಅತ್ಯಂತ ಪವಿತ್ರವಾದ ಸ್ಥಾನವಿದೆ. ಇದನ್ನು ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯ ಸಮುದಾಯದವರು ಉಪನಯನ ಸಂಸ್ಕಾರದ ನಂತರ ಧರಿಸುತ್ತಾರೆ. ಯಜ್ಞೋಪವೀತವು ಕೇವಲ ದಾರವಲ್ಲ, ಅದು ಧರಿಸಿದವನಿಗೆ ತನ್ನ ಕರ್ತವ್ಯ ಮತ್ತು ಶಿಸ್ತಿನ ನೆನಪು ಮಾಡಿಕೊಡುವ ಒಂದು ದೈವಿಕ ಸಾಧನವಾಗಿದೆ.

ಎಲ್ಲೆಂದರಲ್ಲಿ ಜನಿವಾರ ತೆಗೆಯಬಾರದು ಯಾಕೆ?

ಸಾಮಾನ್ಯವಾಗಿ ಯಜ್ಞೋಪವೀತ(ಜನಿವಾರ) ವನ್ನು ಒಮ್ಮೆ ಧರಿಸಿದ ನಂತರ ದೇಹದಿಂದ ಬೇರ್ಪಡಿಸಬಾರದು. ಆದರೆ ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಹಳೆಯದನ್ನು ಬದಲಾಯಿಸಿ ಹೊಸದನ್ನು ಧರಿಸುವುದು ಅನಿವಾರ್ಯವಾಗುತ್ತದೆ. ಪ್ರತಿ ವರ್ಷ ಶ್ರಾವಣ ಮಾಸದ ನೂಲು ಹುಣ್ಣಿಮೆಯಂದು ಹೊಸ ಯಜ್ಞೋಪವೀತವನ್ನು ಧರಿಸುವುದು ರೂಢಿ. ಇದಲ್ಲದೆ ಮನೆಯಲ್ಲಿ ಜನನ ಅಥವಾ ಮರಣ ಸಂಭವಿಸಿ ಸೂತಕದ ಅವಧಿ ಮುಗಿದ ನಂತರ, ಗ್ರಹಣದ ಪರ್ವಕಾಲ ಮುಗಿದ ಬಳಿಕ ಅಥವಾ ಯಜ್ಞೋಪವೀತವು ಬಣ್ಣ ಕಳೆದುಕೊಂಡು ಸವೆದುಹೋಗಿದ್ದರೆ ತಕ್ಷಣವೇ ಅದನ್ನು ಬದಲಾಯಿಸಬೇಕು. ನೆನಪಿಡಬೇಕಾದ ಮುಖ್ಯ ಅಂಶವೆಂದರೆ, ಹೊಸದನ್ನು ಧರಿಸಿದ ನಂತರವೇ ಹಳೆಯದನ್ನು ತೆಗೆಯಬೇಕು; ಉಪನಯನವಾದ ವ್ಯಕ್ತಿಯು ಕ್ಷಣಕಾಲವೂ ಜನಿವಾರವಿಲ್ಲದೆ ಇರಬಾರದು.

ಧರಿಸುವಾಗ ಕೆಲವು ಕಟ್ಟುನಿಟ್ಟಿನ ನಿಯಮಗಳು:

ಯಜ್ಞೋಪವೀತವನ್ನು ಧರಿಸುವಾಗ ಮತ್ತು ನಿರ್ವಹಿಸುವಾಗ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಮೂತ್ರ ವಿಸರ್ಜನೆ ಅಥವಾ ಮಲ ವಿಸರ್ಜನೆಯ ಸಮಯದಲ್ಲಿ ಜನಿವಾರವನ್ನು ಬಲ ಕಿವಿಯ ಮೇಲೆ ಧರಿಸಬೇಕು. ಪೂಜೆ, ಹೋಮ, ವೇದಾಧ್ಯಯನ ಮತ್ತು ಸಂಧ್ಯಾವಂದನೆಯ ಸಮಯದಲ್ಲಿ ಯಜ್ಞೋಪವೀತ ಧಾರಣೆ ಕಡ್ಡಾಯ. ಹಳೆಯ ಜನಿವಾರವನ್ನು ಬದಲಾಯಿಸಿದಾಗ ಅದನ್ನು ಎಲ್ಲೆಂದರಲ್ಲಿ ಎಸೆಯಬಾರದು ಅಥವಾ ಸುಡಬಾರದು. ಬದಲಾಗಿ ಹರಿಯುವ ನೀರಿಗೆ ಅಥವಾ ಪವಿತ್ರವಾದ ಜಲಮೂಲಕ್ಕೆ ಅರ್ಪಿಸಬೇಕು. ಜನಿವಾರವು ಯಾವಾಗಲೂ ಹೊಕ್ಕುಳಿನ ಮಟ್ಟದಲ್ಲಿರಬೇಕು, ಅದು ತುಂಬಾ ಕೆಳಕ್ಕೆ ಅಥವಾ ಮೇಲಕ್ಕೆ ಇರಬಾರದು ಎಂಬುದು ಶಾಸ್ತ್ರದ ನಿಯಮ.

ಇದನ್ನೂ ಓದಿ: ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಮೋದಿ ವಿಶೇಷ ಪೂಜೆ; ಸರ್ವಾರ್ಥ ಸಿದ್ಧಿ ಯೋಗದ ಮಹತ್ವವೇನು ಗೊತ್ತಾ?

ಹೊಸ ಜನಿವಾರ ಧರಿಸುವಾಗ ಈ ನಿಯಮ ತಿಳಿದಿರಲಿ:

ಹೊಸ ಯಜ್ಞೋಪವೀತವನ್ನು ಧರಿಸುವಾಗ ಪೂರ್ವ ಅಥವಾ ಉತ್ತರಕ್ಕೆ ಮುಖಮಾಡಿ ಕುಳಿತು ಸಂಕಲ್ಪ ಮಾಡಬೇಕು. ಈ ಸಂದರ್ಭದಲ್ಲಿ “ಯಜ್ಞೋಪವೀತಂ ಪರಮಂ ಪವಿತ್ರಂ…” ಎನ್ನುವ ಮಂತ್ರವನ್ನು ಪಠಿಸುತ್ತಾ ಎಡ ಭುಜದ ಮೇಲಿಂದ ಬಲಗೈ ಕೆಳಗೆ ಬರುವಂತೆ ಧರಿಸಬೇಕು. ಗೃಹಸ್ಥರು ತಮ್ಮ ಸಂಪ್ರದಾಯಕ್ಕೆ ಅನುಗುಣವಾಗಿ ಎರಡು ಅಥವಾ ಮೂರು ಜನಿವಾರಗಳನ್ನು ಧರಿಸಬಹುದು. ಪ್ರತಿ ಬಾರಿ ಹೊಸದನ್ನು ಧರಿಸುವಾಗಲೂ ಮಂತ್ರ ಪಠನೆ ಮತ್ತು ಆಚಮನ ಮಾಡುವುದು ಅಗತ್ಯ. ಈ ವಿಧಿವಿಧಾನದ ನಂತರ ಕನಿಷ್ಠ 10 ಅಥವಾ 28 ಬಾರಿ ಗಾಯತ್ರಿ ಮಂತ್ರವನ್ನು ಜಪಿಸಿ ಸಂಧ್ಯಾವಂದನೆ ಪೂರೈಸುವುದರಿಂದ ಯಜ್ಞೋಪವೀತಕ್ಕೆ ಸಂಪೂರ್ಣ ಚೈತನ್ಯ ಲಭಿಸುತ್ತದೆ ಎಂದು ನಂಬಲಾಗಿದೆ.

ಗಮನಿಸಿ: ವೈಯಕ್ತಿಕ ಗೋತ್ರ ಮತ್ತು ಕುಟುಂಬದ ಸಂಪ್ರದಾಯಕ್ಕೆ ಅನುಗುಣವಾಗಿ ನಿಯಮಗಳಲ್ಲಿ ಸಣ್ಣಪುಟ್ಟ ಬದಲಾವಣೆಗಳಿರುವುದರಿಂದ ಹೆಚ್ಚಿನ ಮಾಹಿತಿಗಾಗಿ ಕುಟುಂಬದ ಪುರೋಹಿತರನ್ನು ಸಂಪರ್ಕಿಸುವುದು ಉತ್ತಮ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 1:00 pm, Wed, 29 April 26

Source link

ದೇವಕಿ-ಯಶೋದೆಯಂತೆ ಕನ್ನಡ ಮತ್ತು ಮರಾಠಿ: ಭಾಷಾ ಬಾಂಧವ್ಯದ ಬಗ್ಗೆ ಸುಧಾಮೂರ್ತಿ ಅವರ ಮನದಾಳದ ಮಾತು! – Kannada News | Sudha Murthy on Kannada Marathi Bond: Kannada is Mother, Marathi is Aunt

ಬೆಂಗಳೂರು, ಏಪ್ರಿಲ್ 29: ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರು ಕನ್ನಡ ಮತ್ತು ಮರಾಠಿ ಭಾಷೆಗಳ ನಡುವಿನ ಸಂಬಂಧವನ್ನು ತಾಯಿ ಮತ್ತು ಮೌಶಿ (ಚಿಕ್ಕಮ್ಮ) ಬಾಂಧವ್ಯಕ್ಕೆ ಹೋಲಿಸಿದ್ದಾರೆ. ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸುಧಾಮೂರ್ತಿ ತಮ್ಮ ಜೀವನದಲ್ಲಿ ಈ ಎರಡು ಭಾಷೆಗಳ ಸ್ಥಾನವನ್ನು ಸುಂದರವಾಗಿ ಬಣ್ಣಿಸುತ್ತಾರೆ. ನನಗೆ ಕನ್ನಡ ನನ್ನ ಹೆತ್ತ ತಾಯಿಯಿದ್ದಂತೆ, ಆದರೆ ಮರಾಠಿ ಭಾಷೆ ನನಗೆ ಚಿಕ್ಕಮ್ಮನಿದ್ದಂತೆ. ಶ್ರೀಕೃಷ್ಣನಿಗೆ ದೇವಕಿ ಮತ್ತು ಯಶೋದೆಯೆಂಬ ಇಬ್ಬರು ತಾಯಂದಿರಿದ್ದಂತೆ, ನನಗೂ ಈ ಎರಡು ಭಾಷೆಗಳು ಅಷ್ಟೇ ಪ್ರಿಯವಾದವು ಎಂದು ಹೇಳಿದ್ದಾರೆ.

ನಾವು ಎಲ್ಲಿ ವಾಸಿಸುತ್ತೇವೆಯೋ ಆ ರಾಜ್ಯದ ಭಾಷೆಯನ್ನು ಕಲಿಯಬೇಕು ಎಂದ ಅವರು, ಮಹಾರಾಷ್ಟ್ರದಲ್ಲಿರುವ ಕನ್ನಡಿಗರು ಮರಾಠಿ ಕಲಿಯಬೇಕು, ಕರ್ನಾಟಕದಲ್ಲಿರುವ ಮರಾಠಿಗರು ಕನ್ನಡ ಕಲಿಯಬೇಕು. ಭಾಷೆ ಎಂಬುದು ಮನುಷ್ಯರನ್ನು ಬೆಸೆಯುವ ಸೇತುವೆಯಾಗಬೇಕೇ ಹೊರತು ಗೋಡೆಯಾಗಬಾರದು ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಟಾಕ್ಸಿಕ್’ ಜಾಗ ತುಂಬಲು ಬರ್ತಿದೆ ‘ಮ್ಯಾಂಗೋ ಪಚ್ಚ’; ಕಿಚ್ಚನ ಘೋಷಣೆ – Kannada News | Mango Paccha Release Date: Kiccha Sudeep announces June 5th; fills Toxic’s slot

ಕಿಚ್ಚ ಸುದೀಪ್ ಅಳಿಯ ಸಂಚಿತ್ ಸಂಜೀವ್ ಅಭಿನಯದ ‘ಮ್ಯಾಂಗೋ ಪಚ್ಚ’ ಪೋಸ್ಟರ್ ಹಾಗೂ ಟೀಸರ್​​ಗಳ ಮೂಲಕ ಗಮನ ಸೆಳೆದಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಜನವರಿಯಲ್ಲೇ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಚಿತ್ರದ ಬಿಡುಗಡೆ ಕಾರಣಾಂತರಗಳಿಂದ ವಿಳಂಬ ಆಯಿತು. ಈಗ ಸಿನಿಮಾಗೆ ಹೊಸ ರಿಲೀಸ್ ದಿನಾಂಕ ಘೋಷಣೆ ಆಗಿದೆ. ಜೂನ್ 5ರಂದು ಸಿನಿಮಾ ತೆರೆಗೆ ಬರಲಿದೆ.

ಈ ಮೊದಲು ‘ಟಾಕ್ಸಿಕ್’ ಸಿನಿಮಾ ಜೂನ್ 4ರಂದು ಬರುವುದಾಗಿ ಘೋಷಣೆ ಮಾಡಿತ್ತು. ಆದರೆ, ಇಂದು (ಏಪ್ರಿಲ್ 29) ಯಶ್ ಅವರು ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದರು. ಸಿನಿಮಾ ವಿಳಂಬ ಆಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಈ ಬೆನ್ನಲ್ಲೇ ಆ ದಿನಾಂಕವನ್ನು ‘ಮ್ಯಾಂಗೋ ಪಚ್ಚ’ ಚಿತ್ರ ಲಾಕ್ ಮಾಡಿಕೊಂಡಿದೆ. ಆ ದಿನಾಂಕದಂದು ಸಿನಿಮಾ ರಿಲೀಸ್ ಆಗಲಿದೆ ಎಂದು ತಂಡ ಮಾಹಿತಿ ನೀಡಿದೆ. ಸುದೀಪ್ ಟ್ವೀಟ್ ಮಾಡಿ ರಿಲೀಸ್ ದಿನಾಂಕ ಘೋಷಣೆ ಮಾಡಿದ್ದಾರೆ.

‘ಮ್ಯಾಂಗೋ ಪಚ್ಚ’ ಸಿನಿಮಾದ ಟೀಸರ್ ಈ ಮೊದಲು ರಿಲೀಸ್​ ಆಗಿ ಗಮನ ಸೆಳೆದಿತ್ತು. ಈಗ ಮೇ ತಿಂಗಳಲ್ಲಿ ಸಿನಿಮಾದ ಟ್ರೇಲರ್ ರಿಲೀಸ್ ಆಗುವ ಸಾಧ್ಯತೆ ಇದೆ. ಈ ಚಿತ್ರಕ್ಕಾಗಿ ಅಭಿಮಾನಿಗಳು ಕಾದಿದ್ದಾರೆ.

ಮ್ಯಾಂಗೋ ಪಚ್ಚ ಈ ವರ್ಷದ ಸಂಕ್ರಾಂತಿಗೆ ಅಂದರೆ ಜನವರಿ 15ಕ್ಕೆ ಅದ್ದೂರಿಯಾಗಿ ತೆರೆಗೆ ಬರಲು ಸಜ್ಜಾಗಿತ್ತು. ಆದರೆ, ಇದನ್ನು ತಂಡ ಮುಂದೂಡಿಕೊಂಡಿತ್ತು. ಮ್ಯಾಂಗೋ ಪಚ್ಚ ವಿವೇಕ ನಿರ್ದೇಶನದ ಚೊಚ್ಚಲ ಸಿನಿಮಾ . ಸಿನಿಮಾದ ಕತೆ ಮೈಸೂರಿನಲ್ಲಿ ನಡೆಯುತ್ತದೆ. ಕ್ರೈಂ ಥ್ರಿಲ್ಲರ್ ಕತೆ ಒಳಗೊಂಡಿದೆ. 2001 ರಿಂದ 2011ರ ಅವಧಿಯಲ್ಲಿ ಮೈಸೂರಿನಲ್ಲಿ ನಡೆದ ಪ್ರಮುಖ ಘಟನೆಗಳು ಈ ಸಿನಿಮಾದಲ್ಲಿವೆ. ಸಿನಿಮಾದ ಬಹುತೇಕ ಚಿತ್ರೀಕರಣ ಮೈಸೂರಿನಲ್ಲೇ ಮಾಡಲಾಗಿದೆ.

ಇದನ್ನೂ ಓದಿ: ಕಿಚ್ಚ ಸುದೀಪ್ ಅಳಿಯನ ‘ಮ್ಯಾಂಗೋ ಪಚ್ಚ’ ಸಿನಿಮಾ ಟೀಸರ್: ಇದು ಮೈಸೂರಿನ ಕ್ರೈಂ ಕಥೆ

ಸಂಚಿತ್ ಚೊಚ್ಚಲ ಚಿತ್ರ ಇದು. ಈ ಚಿತ್ರಕ್ಕೆ ಕಾಜಲ್ ಕುಂದರ್ ನಾಯಕಿ. ಮಯೂರ್‌ ಪಟೇಲ್‌, ಭಾವನಾ, ಹರಿಣಿ ಶ್ರೀಕಾಂತ್‌, ಹಂಸ, ವಿಜಯ ರಾಘವೇಂದ್ರ ಅವರ ಅಳಿಯ ಜೈ ಗೋಪಿನಾಥ್‌, ಪ್ರಶಾಂತ್‌ ಹಿರೇಮಠ್‌, ಇನ್ನೂ ಅನೇಕರು ಬಣ್ಣ ಹಚ್ಚಿದ್ದಾರೆ. ಶೇಖರ್‌ ಚಂದ್ರ ಛಾಯಾಗ್ರಹಣ, ಚರಣ್‌ ರಾಜ್‌ ಸಂಗೀತ ಸಂಯೋಜನೆ, ರವಿವರ್ಮ ಹಾಗೂ ರಿಯಲ್‌ ಸತೀಶ್‌ ಮ್ಯಾಂಗೋ ಪಚ್ಚ ಸಿನಿಮಾಗೆ ಸ್ಟಂಟ್‌ ಡೈರೆಕ್ಟ್‌ ಮಾಡಿದ್ದಾರೆ. ಸಿನಿಮಾದ ಮೆಲೋಡಿ ಹಾಡೊಂದಕ್ಕೆ ಎ ಹರ್ಷ ನೃತ್ಯ ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಕೇವಲ 1,200 ರೂ. ಬಾಕಿ ಹಣಕ್ಕಾಗಿ ಮಹಿಳೆಯ ಕಪಾಳಕ್ಕೆ ಬಾರಿಸಿದ ಅಂಗಡಿ ಓನರ್ – Kannada News | Altercation Over Dues in Bareilly Leads to Assault Case

ಬರೇಲಿ, ಏಪ್ರಿಲ್ 29: ದಿನಸಿ ಅಂಗಡಿ ಮಾಲೀಕರೊಬ್ಬರು 1,200 ರೂ. ಹಣಕ್ಕಾಗಿ ಮಹಿಳೆಯ ಕಪಾಳಕ್ಕೆ ಹೊಡೆದಿರುವ ವಿಡಿಯೋ ವೈರಲ್ ಆಗಿದೆ. ವೀಡಿಯೊದಲ್ಲಿ ಕಂಡುಬರುವಂತೆ, ಆ ಮಹಿಳೆ ಯುವತಿಗೆ ಪದೇ ಪದೇ ಕಪಾಳಮೋಕ್ಷ ಮಾಡುತ್ತಿದ್ದರೂ, ದಿನಸಿ ಅಂಗಡಿಯ ಕೌಂಟರ್​ನಲ್ಲಿ ಕುಳಿತ ವ್ಯಕ್ತಿ ತನಗೇನೂ ಗೊತ್ತಿಲ್ಲ ಎಂಬಂತೆಯೇ ಇದ್ದರು. ಹಲ್ಲೆಗೊಳಗಾದ ಯುವತಿಯು ಪ್ರತಿರೋಧವನ್ನೂ ತೋರದೆ ಸುಮ್ಮನೆ ಹೊಡೆತಗಳನ್ನು ತಿನ್ನುತ್ತಾ ನಿಂತಿರುವುದರ ಬಗ್ಗೆಯೂ ಕೂಡ ಬೇಸರ ವ್ಯಕ್ತವಾಗಿದೆ. @gharkekalesh’ ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಸದ್ಯ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ.ಹಣದ ಅಹಂನಿಂದ ಒಬ್ಬ ಅಸಹಾಯಕ ವ್ಯಕ್ತಿಯ ಮೇಲೆ ಇಷ್ಟೊಂದು ಕ್ರೌರ್ಯ ತೋರುವುದು ಎಷ್ಟು ಸರಿ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಯೇ ಮರಗಳ ಮಾರಣಹೋಮ: 10ಕ್ಕೂ ಹೆಚ್ಚು ವೃಕ್ಷಗಳಿಗೆ ಕೊಡಲಿಯೇಟು – Kannada News | Udupi DC Office Cuts Down 10+ Trees After Staff Electrocution Death; Environmentalists Slam District Admin

ಉಡುಪಿ, ಏಪ್ರಿಲ್​​ 29: ಇಲ್ಲಿನ ಡಿಸಿ ಕಚೇರಿ ಆವರಣದಲ್ಲಿಯೇ ಹತ್ತಕ್ಕೂ ಹೆಚ್ಚು ಮರಗಳ ಮಾರಣಹೋಮ ನಡೆದಿದೆ. ಏ.24ರಂದು ಮಾವಿನ ಕಾಯಿ ಕೀಳುವಾಗ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಮೃತಪಟ್ಟಿದ್ದರು. ಮರದ ಮೇಲೆ ಹಾದು ಹೋಗಿದ್ದ ವಿದ್ಯುತ್‌ ತಂತಿ ಸ್ಪರ್ಶಿಸಿದ ಕಾರಣ ಪ್ರಾಣ ಬಿಟ್ಟಿದ್ದರು. ಆದರೆ ಇದೀಗ ನೆಗಡಿ ಆಯ್ತು ಎಂದು ಉಡುಪಿ ಜಿಲ್ಲಾಡಳಿತ ಮೂಗನ್ನೇ ಕತ್ತರಿಸಿಕೊಂಡಿದೆ. ವಿದ್ಯುತ್‌ ತಂತಿಯನ್ನು ಬೇರೆಡೆಗೆ ಶಿಫ್ಟ್‌ ಮಾಡುವಂತೆ ವಿವಿಧ ಸಂಘಟನೆಗಳು ಒತ್ತಾಯಿಸಿದ್ದವು. ಅದರಂತೆ ತಂತಿ ವರ್ಗಾವಣೆ ಬದಲು ಹಲವು ವರ್ಷಗಳಿಂದ ಹಣ್ಣು ನೀಡುತ್ತಿದ್ದ ಮರಗಳಿಗೇ ಕೊಡಲಿಯೇಟು ನೀಡಿರೋದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲಾಧಿಕಾರಿ ಕೂರುವ ಕೊಠಡಿ ಹೊರಭಾಗದಲ್ಲಿದ್ದ ಬೃಹದಾದ ಮರಗಳು ಪಕ್ಷಿಗಳಿಗೆ ಆಶ್ರಯತಾಣವೂ ಆಗಿತ್ತು. ಹೀಗಾಗಿ ಜಿಲ್ಲಾಡಳಿತದ ಕ್ರಮಕ್ಕೆ ಪರಿಸರ ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

IPL 2026: RCB ತಂಡದ ಸ್ಫೋಟಕ ದಾಂಡಿಗ ಡೌಟ್!

Source link

Viral Video: ಕಾರ್ಖಾನೆಯಲ್ಲಿ ಆಲೂಗಡ್ಡೆ ಚಿಪ್ಸ್ ತಯಾರಿಸುವುದು ಹೀಗೆಯೇ?, ಈ ವಿಡಿಯೋ ನೋಡಿದರೆ ತಿನ್ನುವುದನ್ನೇ ಮರೆತುಬಿಡುತ್ತೀರಿ! – Kannada News | Viral video of potato chips factory making in soap water video see before you eat

ಬೆಂಗಳೂರು (ಏ. 29): ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋವೊಂದು (Viral Video) ಕಳೆದ ಕೆಲವು ದಿನಗಳಿಂದ ಸಾಕಷ್ಟು ವಿವಾದಕ್ಕೆ ಕಾರಣವಾಗುತ್ತಿದೆ. ಕಾರ್ಖಾನೆಯೊಂದರಿಂದ ಬಂದ ಈ ಕ್ಲಿಪ್, ಆಲೂಗೆಡ್ಡೆ ಚಿಪ್ಸ್ ಉತ್ಪಾದನಾ ಪ್ರಕ್ರಿಯೆಯನ್ನು ಚಿತ್ರಿಸಿದ್ದು, ನೆಟಿಜನ್‌ಗಳಿಗೆ ವಾಕರಿಕೆ ಬರುವಂತೆ ಮಾಡಿದೆ. ನೈರ್ಮಲ್ಯ ಮಾನದಂಡಗಳನ್ನು ಉಲ್ಲಂಘಿಸುವ ಈ ಕೆಲವೇ ಸೆಕೆಂಡುಗಳ ವಿಡಿಯೋ ಆನ್‌ಲೈನ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಸಾಬೂನು ನೀರಿನಲ್ಲಿ ಆಲೂಗಡ್ಡೆ ಕ್ಲೀನ್, ಅಜಾಗರೂಕ ಕೆಲಸಗಾರರು

ಈ ವೈರಲ್ ವಿಡಿಯೋದಲ್ಲಿ, ಒಬ್ಬ ವ್ಯಕ್ತಿ ತನ್ನ ಒಳ ಉಡುಪುಗಳನ್ನು ಮಾತ್ರ ಧರಿಸಿ ದೊಡ್ಡ ಟ್ಯಾಂಕ್ ಒಳಗೆ ನಿಂತಿರುವುದನ್ನು ಕಾಣಬಹುದು. ಟ್ಯಾಂಕ್ ಕೊಳಕು ಸೋಪ್ ನೀರು ಮತ್ತು ಹಸಿ ಆಲೂಗಡ್ಡೆ ಚಿಪ್ಸ್‌ನಿಂದ ತುಂಬಿದೆ ಎಂದು ವರದಿಯಾಗಿದೆ. ಶಾಕಿಂಗ್ ಎಂದರೆ, ಆ ವ್ಯಕ್ತಿ ಟ್ಯಾಂಕ್ ಒಳಗೆ ನಿಂತು ಸಿಗರೇಟ್ ಸೇದುತ್ತಿರುವುದು ಮಾತ್ರವಲ್ಲದೆ, ಕ್ಯಾಮೆರಾವನ್ನು ನೋಡಿ ನಗುತ್ತಿದ್ದಾರೆ.

ಈ ಕ್ಲಿಪ್ ನೋಡಿದಾಗ, ಆಲೂಗಡ್ಡೆಯನ್ನು ಹುರಿಯುವ ಮೊದಲು ಸ್ವಚ್ಛಗೊಳಿಸುವ ಸ್ಥಳೀಯ ಚಿಪ್ ಕಾರ್ಖಾನೆಯ ದೃಶ್ಯದಂತೆ ಕಾಣುತ್ತದೆ. ಆದರೆ, ಟ್ಯಾಂಕ್‌ನಲ್ಲಿರುವ ನೀರು ತುಂಬಾ ಕೊಳಕು ಮತ್ತು ಕೆಸರುಮಯವಾಗಿದ್ದು, ಅದನ್ನು ನೋಡಿದರೆ ಜನರಿಗೆ ವಾಕರಿಕೆ ಬರುವುದು ಖಚಿತ.

ಮನೆ ಬಾಗಿಲು ಹಾಕಲು ಮರೆತು ಹೋದ ಯುವತಿ, ಪಾರ್ಸೆಲ್ ಡೆಲಿವರಿಗೆಂದು ಬಂದ ವ್ಯಕ್ತಿ ಮಾಡಿದ್ದೇನು?

@fact.flow_india ಎಂಬ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಿಂದ ಹಂಚಿಕೊಳ್ಳಲಾದ ಈ ವಿಡಿಯೋವನ್ನು ಈಗಾಗಲೇ ಸಾವಿರಾರು ಬಾರಿ ವೀಕ್ಷಿಸಲಾಗಿದೆ. ನೆಟಿಜನ್‌ಗಳು ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. “ಇದನ್ನು ನೋಡಿದರೆ ನನಗೆ ವಾಂತಿ ಬರುತ್ತಿದೆ”, “ಬಹುಶಃ ಅದಕ್ಕಾಗಿಯೇ ಈ ಚಿಪ್ಸ್ ತುಂಬಾ ಖಾರವಾಗಿದೆ”, “ಹೇ, ದಯವಿಟ್ಟು ಬ್ರಾಂಡ್ ಹೆಸರನ್ನು ಸಹ ಬಹಿರಂಗಪಡಿಸಿ, ಇದರಿಂದ ಜನರು ಜಾಗೃತರಾಗಬಹುದು ಮತ್ತು ಅವುಗಳನ್ನು ಖರೀದಿಸದಿರಬಹುದು” ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.

ಆಹಾರ ಸುರಕ್ಷತೆಯ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಕೋಲಾಹಲ ಉಂಟಾಗಿರುವುದು ಇದೇ ಮೊದಲಲ್ಲ. ಬೀದಿ ವ್ಯಾಪಾರಿಯೊಬ್ಬರು ತಮ್ಮ ಪ್ಯಾಂಟ್ ಕೆಳಗೆ ಕೈ ಹಾಕಿ ನಂತರ ಅದೇ ಕೊಳಕು ಕೈಯಿಂದ ಗ್ರಾಹಕರಿಗೆ ಸಮೋಸಾ ಬಡಿಸುತ್ತಿರುವುದನ್ನು ತೋರಿಸುವ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು.

ಹಕ್ಕುತ್ಯಾಗ: ಈ ಸುದ್ದಿಯು ಸಾಮಾಜಿಕ ಮಾಧ್ಯಮದ ವೈರಲ್ ಪೋಸ್ಟ್‌ಗಳು ಮತ್ತು ನೆಟಿಜನ್‌ಗಳ ಪ್ರತಿಕ್ರಿಯೆಗಳನ್ನು ಆಧರಿಸಿದೆ. ಈ ವಿಡಿಯೋದಲ್ಲಿ ಮಾಡಲಾದ ಯಾವುದೇ ಹಕ್ಕುಗಳ ಸತ್ಯಾಸತ್ಯತೆಯನ್ನು TV9 ಕನ್ನಡ ಪರಿಶೀಲಿಸುವುದಿಲ್ಲ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version