ಹಣ ಇಲ್ಲ ಎಂದು ಬಿಟ್ಟು ಹೋದ ಪತ್ನಿ; ಈಗ ಮನೋಜ್​ ಬಾಜ್​​ಪಾಯಿ ಸ್ಟಾರ್ ಹೀರೋ – Kannada News | Manoj Bajpayee’s Love Story: From Struggles to Stardom and Shabana Raza’s Role in His Life

ಮನೋಜ್ ಬಾಜ್​​ಪಾಯಿ ಅವರು ಹಲವು ವರ್ಷ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದರು. ಅವರಿಗೆ ‘ಫ್ಯಾಮಿಲಿ ಮ್ಯಾನ್’ ಸರಣಿ ತುಂಬಾನೇ ಜನಪ್ರಿಯತೆ ತಂದುಕೊಟ್ಟಿತು. ‘ಫ್ಯಾಮಿಲಿ ಮ್ಯಾನ್ 3’ ರಿಲೀಸ್ ಆಗಿ ಗಮನ ಸೆಳೆದಿದೆ. ಇದರ ಮುಂದಿನ ಭಾಗಕ್ಕಾಗಿ ಎಲ್ಲರೂ ಕಾದಿದ್ದಾರೆ. ಅವರಿಗೆ ಇಂದು (ಏಪ್ರಿಲ್ 23) ಜನ್ಮದಿನ. ಈ ವೇಳೆ ಅವರ ಜೀವನದ ಬಗ್ಗೆ ನೋಡೋಣ.

ಮನೋಜ್ ತಮ್ಮ ವೃತ್ತಿ ಜೀವನದ ಆರಂಭದಲ್ಲೇ ಮದುವೆ ಆದರು. ಆದರೆ, ಈ ಮದುವೆ ಹೆಚ್ಚು ದಿನ ಉಳಿಯಲೇ ಇಲ್ಲ. ಏಕೆಂದರೆ ಮನೋಜ್ ಅವರು ಚಿತ್ರರಂಗದಲ್ಲಿ ಆಗ ಸಾಕಷ್ಟು ಒದ್ದಾಡುತ್ತಿದ್ದರು. ಈ ಒದ್ದಾಟದಿಂದ ಅವರಿಗೆ ಹಣ ಬರುತ್ತಾ ಇರಲಿಲ್ಲ. ಹೀಗಾಗಿ, ಮನೋಜ್ ಅವರನ್ನು ಬಿಟ್ಟು ಹೋಗುವ ನಿರ್ಧಾರ ಮಾಡಿದರು. ಅವರ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಲಭ್ಯವಿಲ್ಲ.

ನಂತರ ಮನೋಜ್ ಅವರು ನಂತರ ಶಬಾನಾ ರಾಜಾ ಅವರನ್ನು ವಿವಾಹ ಆದರು. ಅವರು ತಮ್ಮ ಹೆಸರಿನ ಜೊತೆಗೆ ನೇಹಾ ಎಂದು ಸೇರಿಸಿಕೊಂಡಿದ್ದಾರೆ. ಶಬಾನಾ 1998ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ. ಅವರು ಬಾಬಿ ಡಿಯೋಲ್ ಎದುರು ನಟಿಸಿದರು. ವಿಧು ವಿನೋದ್ ಚೋಪ್ರಾ ಅವರು ಶಬಾನಾಗೆ ನೇಹಾ ಎಂಬ ಹೆಸರನ್ನು ನೀಡಿದರು ಅವರು ಅಜಯ್ ದೇವಗನ್ ಅವರೊಂದಿಗೆ “ಹೋಗಿ ಪ್ಯಾರ್ ಕಿ ಜೀತ್” ನಲ್ಲಿಯೂ ಕಾಣಿಸಿಕೊಂಡರು.

ಶಬಾನಾ ತಮ್ಮ ಮೊದಲ ಚಿತ್ರದ ನಂತರ ಮನೋಜ್ ಬಾಜಪೇಯಿ ಅವರನ್ನು ಭೇಟಿಯಾದರು. ಅವರು ‘ಸತ್ಯ’ ಚಿತ್ರದ ವೇಳೆ ಪರಸ್ಪರ ಭೇಟಿಯಾದರು. ಅವರು ಪರಸ್ಪರ ಪ್ರೀತಿಯಲ್ಲಿ ಸಿಲುಕಿದರು. ಎಂಟು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ, ಅವರು ತಮ್ಮ ಸಂಬಂಧವನ್ನು ಮುಂದುವರಿಸಲು ನಿರ್ಧರಿಸಿದರು ಮತ್ತು 2006 ರಲ್ಲಿ ವಿವಾಹವಾದರು.

ಮನೋಜ್ ಬಾಜಪೇಯಿ ಮತ್ತು ಶಬಾನಾ ಬೇರೆ ಬೇರೆ ಧರ್ಮಗಳಿಗೆ ಸೇರಿದವರು, ಆದರೆ ಅವರ ಪ್ರೀತಿಗೆ ಯಾವುದೇ ಅಡ್ಡಿಯಾಗಲಿಲ್ಲ. ಅವರಿಗೆ ಈಗ ಅವಾ ನೈಲಾ ಬಾಜಪೇಯಿ ಎಂಬ ಮಗಳಿದ್ದಾಳೆ. ಶಬಾನಾ ಮದುವೆಯ ನಂತರ ಚಲನಚಿತ್ರಗಳಿಂದ ವಿರಾಮ ತೆಗೆದುಕೊಂಡು ಈಗ ಚಲನಚಿತ್ರ ನಿರ್ಮಾಪಕಿಯಾಗಿರುವುದು ಗಮನಿಸಬೇಕಾದ ಸಂಗತಿ.

ಇದನ್ನೂ ಓದಿ: ದುಬಾರಿ ವಸ್ತು ಖರೀದಿಸೋಕೆ ಇಷ್ಟಪಡಲ್ಲ ಮನೋಜ್ ಬಾಜ್​ಪಾಯಿ; ಹಣ ಸುರಿಯೋದೆಲ್ಲಿ?

ಶಬಾನಾ ಬಾಜ್‌ಪೇಯಿ 2018 ರ “ಮಿಸ್ಸಿಂಗ್” ಚಿತ್ರವನ್ನು ನಿರ್ಮಿಸಿದ್ದಾರೆ. ಅವರು ತಮ್ಮ ಪತಿಯ “ಭೈಯಾ ಜಿ” ಚಿತ್ರವನ್ನು ಸಹ ನಿರ್ಮಿಸಿದ್ದಾರೆ. ಅವರು ತಮ್ಮ ಪತಿ ಮನೋಜ್ ಬಾಜ್‌ಪೇಯಿ ಅವರೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಆಗಾಗ್ಗೆ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಅವರು ಸುಂದರಿ ಮಾತ್ರವಲ್ಲ, ಗ್ಲಾಮರ್‌ನಲ್ಲಿಯೂ ಸಹ ಸರಿಸಾಟಿಯಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮದುವೆ ಮನೆಯಲ್ಲಿ ಅತಿಥಿಗಳ ಮೇಲೆ ಬೀದಿ ನಾಯಿ ದಾಳಿ, 60ಕ್ಕೂ ಹೆಚ್ಚು ಮಂದಿಗೆ ಗಾಯ – Kannada News | Street Dog Attack at Badaun Wedding Injures more than 60 Guests in UP Chaos

ಸಾಂದರ್ಭಿಕ ಚಿತ್ರ Image Credit source: Free Press Journal

ಲಕ್ನೋ, ಏಪ್ರಿಲ್ 23: ಮದುವೆ(Marriage) ಎಲ್ಲವೂ ಸುಸೂತ್ರವಾಗಿ ನೆರವೇರಿತ್ತು, ವಧುವನ್ನು ಬೀಳ್ಕೊಡುವ ಭಾವುಕ ಕ್ಷಣ ಅದು. ಆ ಸಮಯದಲ್ಲಿ ಬೀದಿ ನಾಯಿ ಮಂಟಪಕ್ಕೆ ನುಗ್ಗಿ ಅತಿಥಿಗಳ ಮೇಲೆ ದಾಳಿ ನಡೆಸಿರುವ ಘಟನೆ ಉತ್ತರ ಪ್ರದೇಶದ ಬುಡೌನ್​ನಲ್ಲಿ ನಡೆದಿದೆ. 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಸಭಾಂಗಣದಲ್ಲಿ ಕಾಲ್ತುಳಿತದಂತಹ ಸನ್ನಿವೇಶ
ಬಿಸೌಲಿ ಪೊಲೀಸ್ ಠಾಣೆ ವ್ಯಾಪ್ತಿಯ ಬಿಲ್ಸಿ ರಸ್ತೆಯಲ್ಲಿರುವ ಅಭಿನಂದನ್ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸೋಮವಾರ ಈ ಘಟನೆ ಜರುಗಿದೆ. ನಾಯಿ ಆವರಣಕ್ಕೆ ನುಗ್ಗಿ ಸಿಕ್ಕಸಿಕ್ಕವರ ಮೇಲೆ ಮನಬಂದಂತೆ ದಾಳಿ ಮಾಡಲಾರಂಭಿಸಿತು. ಇದರಿಂದ ಭಯಭೀತರಾದ ಮಹಿಳೆಯರು ಮತ್ತು ಮಕ್ಕಳು ಸುರಕ್ಷತೆಗಾಗಿ ಓಡಲಾರಂಭಿಸಿದರು. ಈ ಅವಸರದಲ್ಲಿ ಕೆಲವರು ಬಿದ್ದು ಗಾಯಗೊಂಡರೆ, ಇನ್ನು ಕೆಲವರು ಕಾಲ್ತುಳಿತದಂತಹ ಪರಿಸ್ಥಿತಿಗೆ ಸಿಲುಕಿದರು.

ಸಭಾಂಗಣದ ಒಳಗೆ ತನ್ನ ಅಟ್ಟಹಾಸ ಮೆರೆದ ನಾಯಿ, ನಂತರ ರಸ್ತೆಗೆ ಜಿಗಿದು ದಾರಿಹೋಕರು ಮತ್ತು ಅಂಗಡಿಯವರ ಮೇಲೂ ದಾಳಿ ನಡೆಸಿತು. ಅಷ್ಟಕ್ಕೇ ನಿಲ್ಲದೆ ಸಮೀಪದ ಹಳ್ಳಿಗೆ ಓಡಿಹೋಗಿ ಅಲ್ಲಿನ ದನಕರುಗಳನ್ನೂ ಕಚ್ಚಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. 9 ವರ್ಷದ ಮಗುವಿನಿಂದ ಹಿಡಿದು 66 ವರ್ಷದ ವೃದ್ಧರವರೆಗೆ ಈ ದಾಳಿಗೆ ತುತ್ತಾಗಿದ್ದಾರೆ.

ಚಿಕಿತ್ಸೆಗಾಗಿ ಆಸ್ಪತ್ರೆಗೆ ಮುಗಿಬಿದ್ದ ಜನ
ಗಾಯಗೊಂಡವರನ್ನು ತಕ್ಷಣ ಬಿಸೌಲಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ (CHC) ಕರೆದೊಯ್ಯಲಾಯಿತು. ಸಿಎಚ್‌ಸಿ ವೈದ್ಯಾಧಿಕಾರಿ ಅರವಿಂದ್ ವರ್ಮಾ ಅವರ ಪ್ರಕಾರ, ಅಂದು ಸುಮಾರು 109 ಜನರು ರೇಬೀಸ್ ವಿರೋಧಿ ಚುಚ್ಚುಮದ್ದಿಗಾಗಿ ನೋಂದಾಯಿಸಿಕೊಂಡಿದ್ದು, ಅವರಲ್ಲಿ 60ಕ್ಕೂ ಹೆಚ್ಚು ಜನರು ಮದುವೆಗೆ ಬಂದ ಅತಿಥಿಗಳಾಗಿದ್ದಾರೆ, ಗಾಯಾಳುಗಳಿಗೆ ಚಿಕಿತ್ಸೆ ನೀಡಿ ಈಗ ಬಿಡುಗಡೆ ಮಾಡಲಾಗಿದೆ. ಈ ಘಟನೆಯು ಸ್ಥಳೀಯರಲ್ಲಿ ತೀವ್ರ ಕೋಪಕ್ಕೆ ಕಾರಣವಾಗಿದೆ.

ಮತ್ತಷ್ಟು ಓದಿ: 2ನೇ ಮದುವೆ ತಯಾರಿಯಲ್ಲಿದ್ದ ವೈದ್ಯನ ಭೀಕರ ಕೊಲೆ: ವಿವಾಹದ ಸಂಭ್ರಮದಲ್ಲಿದ್ದ ಮನೆಯಲ್ಲೀಗ ಸೂತಕ!

ಬೀದಿ ನಾಯಿಗಳ ನಿರ್ವಹಣೆಗೆ ಪುರಸಭೆ ಬಜೆಟ್‌ನಲ್ಲಿ ಹಣ ಖರ್ಚು ಮಾಡುತ್ತಿದ್ದರೂ, ಇಂತಹ ಅಪಾಯಕಾರಿ ನಾಯಿಗಳು ಮುಕ್ತವಾಗಿ ತಿರುಗಾಡುತ್ತಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂದು ಜನರು ಕಿಡಿಕಾರಿದ್ದಾರೆ.

ವಿಷಯ ತಿಳಿದ ತಕ್ಷಣ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅರುಣ್ ಕುಮಾರ್ ಅವರು ಪ್ರತಿಕ್ರಿಯಿಸಿದ್ದು, ಬಿಸೌಲಿ ಪುರಸಭೆಯ ಕಾರ್ಯನಿರ್ವಾಹಕ ಅಧಿಕಾರಿಗೆ ಕೂಡಲೇ ಸಮಸ್ಯೆಯನ್ನು ಪರಿಹರಿಸಲು ಮತ್ತು ದಾಳಿ ಮಾಡಿದ ನಾಯಿಯನ್ನು ಪತ್ತೆ ಹಚ್ಚಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಮದುವೆಯಂತಹ ಮಂಗಳಕರ ಸಮಾರಂಭಗಳು ಇಂತಹ ಅನಿರೀಕ್ಷಿತ ಘಟನೆಗಳಿಂದ ಕಹಿ ನೆನಪಾಗಿ ಉಳಿಯುವುದು ದುರದೃಷ್ಟಕರ. ನಗರ ಪ್ರದೇಶಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚುತ್ತಿರುವುದು ಮತ್ತು ಅವುಗಳಿಗೆ ಲಸಿಕೆ ಹಾಕದಿರುವುದು ಇಂತಹ ಘಟನೆಗಳಿಗೆ ಕಾರಣವಾಗುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರಣ ಬಿಸಿಲಿಗೆ ಬಲಿಯಾದ ಕಾಡಾನೆ: 17 ಗಂಟೆಗಳ ಹೋರಾಟದ ಬಳಿಕವೂ ಚಿಕಿತ್ಸೆ ಫಲಿಸದೆ ಹೆಣ್ಣಾನೆ ಸಾವು! – Kannada News | Karnataka Heatwave: Chamarajanagar Elephant Dies After Getting Stuck in Mud Seeking Water

ಚಾಮರಾಜನಗರ, ಏ. 23: ರಾಜ್ಯದಲ್ಲಿ ಬಿಸಿಲಿನ ಪರಿಣಾಮ ಹೆಚ್ಚಾಗುತ್ತಿದೆ. ಈ ಬಿಸಿಯನ್ನು ಮನುಷ್ಯರಿಗೂ ತಡೆಯಲಾಗುತ್ತಿಲ್ಲ. ಇನ್ನು ಪಾಪ ಮೂಕ ಪ್ರಾಣಿಗಳಿಗೆ ತಡೆದುಕೊಳ್ಳಲು ಹೇಗೆ ಸಾಧ್ಯ. ಪ್ರಾಣಿಗಳಿಗೆ ಮನುಷ್ಯರಿಗಿಂತ ಬಾಯರಿಕೆ ಹೆಚ್ಚು. ಹಾಗಾಗಿ ದೊಡ್ಡ ನದಿ, ಕರೆಗಳನ್ನು ಅರಸಿಕೊಂಡು ಬರುತ್ತದೆ. ಅದರಲ್ಲೂ ದೈತ್ಯ ಗಾತ್ರದ ಪ್ರಾಣಿಯಾಗಿರುವ ಆನೆಗಳಿಗೆ ನೀರು ಹೆಚ್ಚುಬೇಕು. ಇದೀಗ ಇಲ್ಲೊಂದು ಆನೆ ನೀರು ಕಡಿಯಲು ಬಂದು ಪ್ರಾಣ ಕಳೆದುಕೊಂಡಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ನೀರು ಅರಸಿ ಬಂದು ಉಡುತೊರೆ ಹಳ್ಳದ ಕೆಸರಿನಲ್ಲಿ ಮೂರು ಕಾಡಾನೆಗಳು ಸಿಲುಕಿಕೊಂಡಿತ್ತು. ಇದರ ಪೈಕಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಒಂದು ಹೆಣ್ಣಾನೆ ಚಿಕಿತ್ಸೆ ಫಲಿಸದೆ ನಿನ್ನೆ ತಡರಾತ್ರಿ ಸಾವನ್ನಪ್ಪಿದೆ. ಕಳೆದ ಎರಡು ದಿನಗಳ ಹಿಂದೆ, ತೀವ್ರ ಬಿಸಿಲಿನಿಂದ ಬಸವಳಿದಿದ್ದ ಐದು ಆನೆಗಳ ಹಿಂಡು ನೀರು ಕುಡಿಯಲು ಮಲೆ ಮಹದೇಶ್ವರ ವನ್ಯಜೀವಿಧಾಮದ ವ್ಯಾಪ್ತಿಯ ಉಡುತೊರೆ ಹಳ್ಳದ ಹಿನ್ನೀರಿಗೆ ಬಂದಿದ್ದವು. ಈ ವೇಳೆ ಮೂರು ಆನೆಗಳು ಕೆಸರಿನಲ್ಲಿ ಹೂತು ಹೋಗಿದ್ದವು. ಇದನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ಅದರ ರಕ್ಷಣೆಗೆ ಧಾವಿಸಿದ್ದಾರೆ. ಅರಣ್ಯ ಇಲಾಖೆ, ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಜಂಟಿಯಾಗಿ ಸುಮಾರು 17 ಗಂಟೆಗಳ ಕಾಲ ಸಾಹಸಮಯ ಕಾರ್ಯಾಚರಣೆ ನಡೆಸಿದರು. ಈ ವೇಳೆ ಎರಡು ಆನೆಗಳು ಸುರಕ್ಷಿತವಾಗಿ ಕೆಸರಿನಿಂದ ಹೊರಬಂದು ಕಾಡಿನತ್ತ ಕಳುಹಿಸಲಾಗಿದೆ. ಆದರೆ, ಸುಮಾರು 25 ವರ್ಷ ಪ್ರಾಯದ ಹೆಣ್ಣಾನೆಯೊಂದು ತೀವ್ರ ಅಶಕ್ತತೆಯಿಂದಾಗಿ ಎದ್ದು ನಿಲ್ಲಲು ಸಾಧ್ಯವಾಗದೆ ಅಲ್ಲಿಯೇ ಉಳಿದುಕೊಂಡಿತ್ತು. ಅಸ್ವಸ್ಥಗೊಂಡಿದ್ದ ಆನೆಗೆ ನಾಗರಹೊಳೆ ಮತ್ತು ಮಲೆ ಮಹದೇಶ್ವರ ವನ್ಯಧಾಮದ ಪಶುವೈದ್ಯರು ಸ್ಥಳದಲ್ಲೇ ಗ್ಲೂಕೋಸ್ ಮತ್ತು ತುರ್ತು ಚಿಕಿತ್ಸೆ ನೀಡಿದ್ದರು. ಜೆಸಿಬಿ ಮತ್ತು ಕ್ರೇನ್‌ಗಳ ಸಹಾಯದಿಂದ ಆನೆಯನ್ನು ಎಬ್ಬಿಸುವ ಪ್ರಯತ್ನ ಮಾಡಿದರೂ ಅದು ಯಶಸ್ವಿಯಾಗಲಿಲ್ಲ. ನಿರ್ಜಲೀಕರಣ (Dehydration) ಮತ್ತು ಬಿಸಿಲಿನ ತಾಪದಿಂದ ತೀವ್ರವಾಗಿ ಬಳಲಿದ್ದ ಆನೆ, ನಿನ್ನೆ ತಡರಾತ್ರಿ ಕೊನೆಯುಸಿರೆಳೆದಿದೆ ಎಂದು ಅರಣ್ಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Assembly Elections 2026: ಪಶ್ಚಿಮ ಬಂಗಾಳ, ತಮಿಳುನಾಡು ವಿಧಾನಸಭಾ ಚುನಾವಣೆ, ಮತದಾನ ಶುರು, ಯಾರ್ಯಾರ ನಡುವೆ ಪೈಪೋಟಿ – Kannada News | Tamil Nadu and West Bengal Assembly Polls 2026: Stalin, Mamata Face Tough Challenges as Voting Starts

ಕೋಲ್ಕತ್ತಾ, ಏಪ್ರಿಲ್ 23: ಇಂದು ಪಶ್ಚಿಮ ಬಂಗಾಳ ಹಾಗೂ ತಮಿಳುನಾಡು ವಿಧಾನಸಭಾ ಚುನಾವಣೆ(Assembly Election)ಗೆ ಮತದಾನ ಶುರುವಾಗಿದೆ. ತಮಿಳುನಾಡಿನ ಎಲ್ಲಾ ಸ್ಥಾನಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಕ್ರಿಯೆಯು ಮೊದಲ ಹಂತದ ಮತದಾನದೊಂದಿಗೆ ಪ್ರಾರಂಭವಾಗಿದೆ.ತಮಿಳುನಾಡಿನಲ್ಲಿ ಎಂ.ಕೆ. ಸ್ಟಾಲಿನ್ ಮತ್ತು ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ತಮ್ಮ ಭದ್ರಕೋಟೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ತಮಿಳುನಾಡಿನ ಎಲ್ಲಾ 234 ವಿಧಾನಸಭಾ ಸ್ಥಾನಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ರಾಜ್ಯದಲ್ಲಿ ಪ್ರಮುಖ ಸ್ಪರ್ಧೆ ಆಡಳಿತಾರೂಢ ಡಿಎಂಕೆ ಮತ್ತು ವಿರೋಧ ಪಕ್ಷ ಎಐಎಡಿಎಂಕೆ ನಡುವೆ ನಡೆಯುವ ನಿರೀಕ್ಷೆಯಿದೆ. ರಾಜ್ಯದ 234 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 4,023 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಒಟ್ಟು 57,343,291 ಮತದಾರರು ಚುನಾವಣೆಯಲ್ಲಿ ತಮ್ಮ ಮತ ಚಲಾಯಿಸಲಿದ್ದಾರೆ. ಮತದಾನ ಗುರುವಾರ ಕೊನೆಗೊಳ್ಳುತ್ತದೆ ಮತ್ತು ಮೇ 4 ರಂದು ಎಣಿಕೆ ನಡೆಯಲಿದೆ.

ನಟ ವಿಜಯ್ ಅವರ ಪಕ್ಷ ಟಿವಿಕೆ ಪ್ರವೇಶವು ಚುನಾವಣೆಯನ್ನು ಇನ್ನಷ್ಟು ಆಸಕ್ತಿದಾಯಕವಾಗಿಸಿದೆ, ಇದು ಮತ ಹಂಚಿಕೆಯ ಮೇಲೆ ಪರಿಣಾಮ ಬೀರಬಹುದು. ಬಿಜೆಪಿ ಮತ್ತು ಕಾಂಗ್ರೆಸ್ ಕೂಡ ಮೈತ್ರಿಗಳ ಮೂಲಕ ತಮ್ಮ ಅಸ್ತಿತ್ವವನ್ನು ಬಲಪಡಿಸಲು ಪ್ರಯತ್ನಿಸುತ್ತಿವೆ. ಪಶ್ಚಿಮ ಬಂಗಾಳದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೊದಲ ಹಂತದ ಮತದಾನ ಚುನಾವಣಾ ಪ್ರಕ್ರಿಯೆಯೊಂದಿಗೆ ಆರಂಭವಾಗಲಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಸತತ ಮೂರನೇ ಅವಧಿಗೆ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದೆ.

ಮತ್ತಷ್ಟು ಓದಿ: ಅಸ್ಸಾಂ, ಕೇರಳ ಮತ್ತು ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆ ಮುಕ್ತಾಯ

ಉತ್ತರ ಬಂಗಾಳದ ಎಂಟು, ದಕ್ಷಿಣ ಬಂಗಾಳದ ಮೂರು ಮತ್ತು ಜಂಗಲ್‌ಮಹಲ್ ಪ್ರದೇಶದ ಐದು ಸ್ಥಾನಗಳು ಸೇರಿದಂತೆ 16 ಜಿಲ್ಲೆಗಳ 152 ಸ್ಥಾನಗಳಲ್ಲಿ ಅಭೂತಪೂರ್ವ ಭದ್ರತೆಯ ನಡುವೆ ಗುರುವಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆಯಲಿದೆ.
ರಾಜ್ಯದಲ್ಲಿ ತನ್ನ ಹಿಡಿತವನ್ನು ಬಲಪಡಿಸಿಕೊಳ್ಳಲು ಬಿಜೆಪಿ ತನ್ನೆಲ್ಲ ಶಕ್ತಿಯನ್ನು ಪ್ರಯೋಗಿಸುತ್ತಿದೆ. ಕಾಂಗ್ರೆಸ್ ಮತ್ತು ಎಡಪಕ್ಷಗಳು ಕೂಡ ಮೈತ್ರಿ ಮಾಡಿಕೊಂಡು ಸ್ಪರ್ಧಿಸುತ್ತಿದ್ದು, ಸ್ಪರ್ಧೆ ಬಹುಕೋನವಾಗಿದೆ.

ಡಿಎಂಕೆ ಪ್ರಸ್ತುತ ತಮಿಳುನಾಡಿನಲ್ಲಿ ಬಲವಾದ ಸ್ಥಾನದಲ್ಲಿದೆ, ಆದರೆ ಎಐಎಡಿಎಂಕೆ ಮತ್ತು ಹೊಸ ಆಟಗಾರರಿಂದ ಸವಾಲು ಎದುರಿಸಬಹುದು.ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಹಿಡಿತ ಪ್ರಬಲವಾಗಿದೆ ಎಂದು ಪರಿಗಣಿಸಲಾಗಿದೆ, ಆದರೆ ಬಿಜೆಪಿಯ ಹೆಚ್ಚುತ್ತಿರುವ ಕ್ರಿಯಾಶೀಲತೆಯು ಸ್ಪರ್ಧೆಯನ್ನು ಕಠಿಣಗೊಳಿಸುತ್ತಿದೆ.

ತಮಿಳುನಾಡಿನ ಫಲಿತಾಂಶವು ದಕ್ಷಿಣ ಭಾರತದ ವಿರೋಧ ಪಕ್ಷಗಳ ಕಾರ್ಯತಂತ್ರದ ಮೇಲೆ ಪ್ರಭಾವ ಬೀರಬಹುದು, ಆದರೆ ಬಂಗಾಳದ ಫಲಿತಾಂಶವು ಪೂರ್ವ ಭಾರತದಲ್ಲಿ ಬಿಜೆಪಿ ಮತ್ತು ಪ್ರಾದೇಶಿಕ ಪಕ್ಷಗಳ ನಡುವಿನ ಅಧಿಕಾರದ ಸಮತೋಲನವನ್ನು ನಿರ್ಧರಿಸುತ್ತದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಕರ್ಣ’ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್; ಕರ್ಣ-ನಿಧಿ ಮದುವೆ ಮಾಡಿಸ್ತಾಳೆ ನಿತ್ಯಾ – Kannada News | Karna Serial Big Twist: Nithya Orchestrates Karna Nidhi Wedding

‘ಕರ್ಣ’ ಧಾರಾವಾಹಿಯಲ್ಲಿ ಈಗ ಒಂದು ದೊಡ್ಡ ಟ್ವಿಸ್ಟ್ ಎದುರಾಗಿದೆ ಎಂದೇ ಹೇಳಬಹುದು. ಇಷ್ಟು ದಿನ ಈ ಧಾರಾವಾಹಿಯಲ್ಲಿ ಕರ್ಣ ಹಾಗೂ ನಿತ್ಯಾ ಸಂಸಾರ ನಡೆಸುತ್ತಿರುವುದನ್ನು ತೋರಿಸಲಾಗಿದೆ. ಆದರೆ, ಈಗ ಧಾರಾವಾಹಿಯಲ್ಲಿ ದೊಡ್ಡ ತಿರುವು ಬಂದಿದೆ. ಕರ್ಣ ಹಾಗೂ ನಿಧಿ ಮದುವೆ ನಡೆಯಲಿದೆ. ಇದನ್ನು ನಿತ್ಯಾ ಮಾಡಿಸುತ್ತಾ ಇದ್ದಾಳೆ. ಇದು ದೊಡ್ಡ ಟ್ವಿಸ್ಟ್ ಎಂದು ಪರಿಗಣಿಸಬಹುದು.

‘ಕರ್ಣ’ ಧಾರಾವಾಹಿಯಲ್ಲಿ ಕರ್ಣನ ತಂದೆ ರಮೇಶ್ ಮೋಸದಿಂದ ಕರ್ಣ ಹಾಗೂ ನಿತ್ಯಾಳ ಮದುವೆ ಮಾಡಿಸುತ್ತಾನೆ. ಈ ಮದುವೆಗೂ ಮೊದಲು ಕರ್ಣನು ನಿಧಿಯನ್ನು ಪ್ರೀತಿ ಮಾಡುತ್ತಾ ಇರುತ್ತಾನೆ. ಈ ವಿಷಯ ಗೊತ್ತಾಗಿಯೇ ನಿತ್ಯಾ ಹಾಗೂ ಕರ್ಣನ ಮದುವೆ ಮಾಡಿಸುತ್ತಾನೆ ರಮೇಶ್. ಈ ಮೂಲಕ ಮಗನ ಮೇಲೆ ದ್ವೇಷ ಸಾಧಿಸುತ್ತಾನೆ. ಆದರೆ, ಇಷ್ಟು ದಿನ ಈ ವಿಷಯ ಗುಟ್ಟಾಗಿ ಇಡಲಾಗಿತ್ತು.

ಈಗ ನಿತ್ಯಾಳಿಗೆ ನಿಧಿ ಹಾಗೂ ಕರ್ಣನ ಪ್ರೀತಿ ವಿಷಯ ಗೊತ್ತಾಗಿದೆ. ಎಲ್ಲರ ಸಮ್ಮುಖದಲ್ಲಿ ಆಕೆ ಕರ್ಣ ಹಾಗೂ ನಿಧಿ ಮದುವೆ ಮಾಡಿಸುತ್ತಾಳೆ. ಅಲ್ಲದೆ ತನ್ನ ಮಗುವಿಗೆ ತೇಜಸ್ ಕಾರಣ ಎಂಬುದನ್ನು ನಿಧಿ ಹೇಳುತ್ತಾಳೆ. ಈ ಸಂದರ್ಭದ ವಿಡಿಯೋ ಗಮನ ಸೆಳೆದಿದೆ. ಈ ಪ್ರೋಮೋಗೆ ನಾನಾ ರೀತಿಯ ಕಮೆಂಟ್ಗಳು ಬಂದಿವೆ. ಕೆಲವರು ಇದನ್ನು ಕನಸು ಇರಬಹುದು ಎಂದೇ ಹೇಳುತ್ತಿದ್ದಾರೆ.

ಏಕೆಂದರೆ ಕರ್ಣ ಹಾಗೂ ನಿಧಿ ಲವರ್ಸ್ ಎಂಬುದು ತುಂಬಾನೇ ದೊಡ್ಡ ತಿರುವು. ಈ ತಿರುವು ಬಂದರೆ ಧಾರಾವಾಹಿ ಮತ್ತೊಂದು ಹಂತಕ್ಕೆ ಹೋಗಲಿದೆ. ಹೀಗಿರುವಾಗ ಇಷ್ಟು ಬೇಗ ಧಾರಾವಾಹಿಯಲ್ಲಿ ಆ ಟ್ವಿಸ್ಟ್ ತಂದರೇ ಎನ್ನುವ ಪ್ರಶ್ನೆ ಮೂಡಿದೆ.

ಕರ್ಣ ಧಾರಾವಾಹಿಯು ಟಿಆರ್ಪಿಯಲ್ಲಿ ಒಳ್ಳೆಯ ಟಿವಿಆರ್ ಪಡೆದು ಮುನ್ನುಗ್ಗುತ್ತಿದೆ. ಈಗ ಎದುರಾಗಿರುವ ಒಂದು ದೊಡ್ಡ ಟ್ವಿಸ್ಟ್ನಿಂದ ಸಾಕಷ್ಟು ನಿರೀಕ್ಷೆ ಮಾಡಬಹುದು. ಇದು ಕನಸೇ ಆಗಿದ್ದಲ್ಲಿ ವೀಕ್ಷಕರಿಗೆ ಸಾಕಷ್ಟು ನಿರಾಸೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹೀನಾಯ ಸೋಲಿನ ಬೆನ್ನಲ್ಲೇ ರಿಷಭ್ ಪಂತ್ ಜೊತೆ ಗೋಯೆಂಕಾ ಮಾತುಕತೆ..! – Kannada News | Sanjiv Goenka chat with Rishabh Pant after LSG loss

ಸಾಮಾನ್ಯವಾಗಿ ಸೋಲಿನ ಬೆನ್ನಲ್ಲೇ ಕ್ಲಾಸ್ ತೆಗೆದುಕೊಳ್ಳುವ ಸಂಜೀವ್ ಗೊಯೇಂಕಾ ಈ ಬಾರಿ ಕೂಲ್ ಆಗಿ ಕಾಣಿಸಿಕೊಂಡಿದ್ದು ವಿಶೇಷ. ಅಲ್ಲದೆ ನಗು ಮುಖದೊಂದಿಗೆ ರಿಷಭ್ ಪಂತ್ ಅವರನ್ನು ಅಪ್ಪಿಕೊಂಡು ಬೆನ್ನು ತಟ್ಟಿದರು. ಪಂದ್ಯದಲ್ಲಿ ಸೋತಿದ್ದರೂ, ನಾಯಕನ ಹೋರಾಟದ ಗುಣವನ್ನು ಮಾಲೀಕರು ಬೆಂಬಲಿಸಿದ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

Source link

ಮನೆ ಹಾಲ್ ಹ್ಯಾಂಗಿಂಗ್​ನಲ್ಲಿ ರಾಜನಂತೆ ಕುಳಿತಿದ್ದ ನಾಗರಾಜ! ಮೈಸೂರಿನಲ್ಲಿ ಮನೆ ಒಳಗಿದ್ದ ನಾಗರಹಾವು ರಕ್ಷಣೆ – Kannada News | Mysore Snake Rescue: Snake Shyam Rescues Cobra inside house and Trapped in Net as Heatwave Forces Snakes into Houses

ಮೈಸೂರು, ಏಪ್ರಿಲ್ 23: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ತಾಪಮಾನ ಏರಿಕೆಯಾಗುತ್ತಿದ್ದಂತೆಯೇ, ತಂಪಾದ ಜಾಗ ಅರಸುತ್ತಾ ವಿಷಕಾರಿ ಹಾವುಗಳು ಜನವಸತಿ ಪ್ರದೇಶಗಳಿಗೆ ಲಗ್ಗೆ ಇಡುತ್ತಿವೆ. ನಗರದ ಟೆಲಿಕಾಂ ಬಡಾವಣೆ ಸೇರಿದಂತೆ ವಿವಿಧ ಬಡಾವಣೆಗಳ ಮನೆಗಳಲ್ಲಿ ಹಾವುಗಳು ಪ್ರತ್ಯಕ್ಷವಾಗುತ್ತಿದ್ದು, ನಿವಾಸಿಗಳಲ್ಲಿ ಆತಂಕ ಮೂಡಿಸಿವೆ. ನಗರದ ಟೆಲಿಕಾಂ ಬಡಾವಣೆಯ ಮನೆಯೊಂದರ ಒಳಗೆ ಹಾಲ್​ನಲ್ಲಿ ನೇತುಹಾಕಿದ್ದ ಹ್ಯಾಂಗಿಂಗ್​ನಲ್ಲಿ ನಾಗರಹಾವು ಕುಳಿತಿದ್ದು ನೋಡಿ ಮನೆ ಮಂದಿ ಬೆಚ್ಚಿ ಬಿದ್ದಿದ್ದಾರೆ. ಮತ್ತೊಂದೆಡೆ, ಅದೇ ಬಡಾವಣೆಯ ಮನೆಯೊಂದರ ಕಾಂಪೌಂಡ್‌ನಲ್ಲಿ ಹಾಕಲಾಗಿದ್ದ ಬಲೆಗೆ ನಾಗರಹಾವೊಂದು ಸಿಲುಕಿ ನರಳಾಡುತ್ತಿತ್ತು. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಖ್ಯಾತ ಉರಗ ತಜ್ಞ ಸ್ನೇಕ್ ಶ್ಯಾಮ್, ಅತ್ಯಂತ ಜಾಗರೂಕತೆಯಿಂದ ಹಾವನ್ನು ಬಲೆಯಿಂದ ಮುಕ್ತಗೊಳಿಸಿ ರಕ್ಷಿಸಿದ್ದಾರೆ. ಬಿಸಿಲಿನ ಬೇಗೆ ತಾಳಲಾರದೆ ಹಾವುಗಳು ಮನೆಗಳ ಒಳಗೆ, ಶೂ ಸ್ಟ್ಯಾಂಡ್ ಹಾಗೂ ತಂಪಾದ ಮೂಲೆಗಳಲ್ಲಿ ಆಶ್ರಯ ಪಡೆಯುತ್ತಿವೆ.

ಬೇಸಿಗೆಯ ಈ ಸಮಯದಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಮತ್ತು ಹಾವುಗಳು ಕಂಡುಬಂದಲ್ಲಿ ಸ್ವತಃ ಹಿಡಿಯಲು ಮುಂದಾಗದೆ ತಜ್ಞರಿಗೆ ಮಾಹಿತಿ ನೀಡಬೇಕು ಎಂದು ಸ್ನೇಕ್ ಶ್ಯಾಮ್ ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಐಷಾರಾಮಿ ಡಿಫೆಂಡರ್ ಖರೀದಿಸಿದ ಆ್ಯಕ್ಷನ್ ನಿರ್ದೇಶಕ ರವಿ ವರ್ಮ; ವಿಶೇಷ ವ್ಯಕ್ತಿಯಿಂದ ಹಸ್ತಾಕ್ಷರ – Kannada News | Action Director Ravi Varma Buys Land Rover Defender; Sunny Deol Signs Luxury SUV

ಆ್ಯಕ್ಷನ್ ಡೈರೆಕ್ಟರ್ ರವಿ ವರ್ಮ (Ravi Varma) ಅವರು ಕನ್ನಡ ಮಾತ್ರವಲ್ಲದೆ ತೆಲುಗು, ಹಿಂದಿ ಮೊದಲಾದ ಭಾಷೆಗಳಲ್ಲಿ ಕೆಲಸ ಮಾಡಿದ್ದಾರೆ. ಸಾಕಷ್ಟು ಚಾಲೆಂಜ್​​ಗಳನ್ನು ಎದುರಿಸಿ ಅವರು ಈ ಹಂತಕ್ಕೆ ಬಂದು ನಿಂತಿದ್ದಾರೆ. ತಮ್ಮ ಕೆಲಸ ಮಾತನಾಡುವಂತೆ ಅವರು ಮಾಡಿದ್ದಾರೆ. ಸನ್ನಿ ಯಶ್, ಸಲ್ಮಾನ್ ಖಾನ್, ಸನ್ನಿ ಡಿಯೋಲ್ ಸೇರಿದಂತೆ ಅನೇಕ ಸ್ಟಾರ್​​ಗಳ ಜೊತೆ ಕೆಲಸ ಮಾಡಿದ್ದಾರೆ. ಈ ಮಧ್ಯೆ ರವಿ ವರ್ಮ ಅವರು ದುಬಾರಿ ಕಾರನ್ನು ಖರೀದಿ ಮಾಡಿದ್ದಾರೆ. ಇದು ಇನ್ನೂ ಕನಸಿನ ರೀತಿ ಕಾಣುತ್ತಿದೆ ಎಂದು ಅವರು ಹೇಳಿದ್ದಾರೆ. ಈ ಕಾರಿಗೆ ವಿಶೇಷ ವ್ಯಕ್ತಿಯ ಹಸ್ತಾಕ್ಷರ ಬಿದ್ದಿದೆ.

ರವಿ ವರ್ಮ ಅವರು ಲ್ಯಾಂಡ್ ರೋವರ್ ಡಿಫೆಂಡರ್ ಕಾರನ್ನು ಖರೀದಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಇದರ ಬೆಲೆ 1.27 ಕೋಟಿ ರೂಪಾಯಿ ಇಂದ ಆರಂಭ ಆಗಿ, 3.35 ಕೋಟಿ ರೂಪಾಯಿವರೆಗೆ ಇದೆ. ವಿವಿಧ ರೀತಿಯ ವೇರಿಯಂಟ್​​ಗೆ ವಿವಿಧ ರೀತಿಯ ಬೆಲೆ ನಿಗದಿ ಆಗಿದೆ. 2 ಲೀಟರ್ ಪೆಟ್ರೋಲ್ ಇಂಜಿನ್, 3 ಲೀಟರ್ ಡೀಸೆಲ್ ಇಂಜಿನ್, 5 ಲೀಟರ್ ವಿ8 ಇಂಜಿನ್ ವೇರಿಯಂಟ್​​ಗಳಲ್ಲಿ ಈ ಕಾರು ಲಭ್ಯ. ಇದು ಐಷಾರಾಮಿ ಆಫ್​​ರೋಡ್ ಎಸ್​​ಯಿವಿ ಕಾರು. ಐದು ಲೀಟರ್ ವಿ8 ಇಂಜಿನ್ ಕೇವಲ 4 ಸೆಕೆಂಡ್​​ಗಳಲ್ಲಿ ಜೀರೋದಿಂದ 100 ಕಿಮೀ ವೇಗವನ್ನು ತಲುಪುತ್ತದೆ.

ರವಿ ವರ್ಮ ಅವರು ಈ ಕಾರನ್ನು ಬಾಲಿವುಡ್ ನಟ ಸನ್ನಿ ಡಿಯೋಲ್ ಎದುರು ತೆಗೆದುಕೊಂಡು ಹೋಗಿದ್ದಾರೆ. ಈ ಕಾರನ್ನು ಸನ್ನಿ ಒಮ್ಮೆ ಓಡಿಸಿ ನೋಡಿದ್ದಾರೆ. ಇಷ್ಟೇ ಅಲ್ಲ, ಕಾರಿನ ಡ್ಯಾಶ್​​ಬೋರ್ಡ್ ಮೇಲೆ ಪ್ರೀತಿಯಿಂದ ಹಸ್ತಾಕ್ಷರ ಕೂಡ ಹಾಕಿ ಕೊಟ್ಟಿದ್ದಾರೆ. ಈ ಸಂದರ್ಭದ ವಿಡಿಯೋನ ರವಿ ವರ್ಮ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಕೊಲೆ ಬೆದರಿಕೆ ಆರೋಪ: ಫೈಟ್ ಮಾಸ್ಟರ್ ರವಿ ವರ್ಮಾ ಪ್ರತಿಕ್ರಿಯೆ

‘ಇನ್ನೂ ಎಲ್ಲವನ್ನೂ ಅರ್ಥಮಾಡಿಕೊಳ್ಳುತ್ತಿದ್ದೇನೆ’ ಎಂದು ಬರಹ ಆರಂಭಿಸಿದ್ದಾರೆ ರವಿ ವರ್ಮ. ಇಂದು ನನ್ನ ಹೊಸ ಡಿಫೆಂಡರ್ ಡ್ರೈವ್ ಮಾಡಿದೆ. ಇದು ಅವಾಸ್ತವಿಕವೆನಿಸುತ್ತಿದೆ’ ಎಂಬುದು ರವಿ ವರ್ಮ ಮಾತು. ಅವರಿಗೆ ಇದನ್ನು ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ. ‘ಸನ್ನಿ ಡಿಯೋಲ್ ಅವರೇ ನಿಮ್ಮ ನಿರಂತರ ಬೆಂಬಲಕ್ಕಾಗಿ ತುಂಬಾ ಧನ್ಯವಾದಗಳು. ಇದಕ್ಕೆ ಕೃತಜ್ಞನಾಗಿರುತ್ತೇನೆ’ ಎಂದು ಅವರು ಬರೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಎರಡು ದಿನ, ಎರಡು ಅತ್ಯಾಚಾರ, ಒಂದು ಕೊಲೆ, ಐಆರ್​ಎಸ್ ಅಧಿಕಾರಿ ಮಗಳ ಕೊಂದವನು ಸಾಮಾನ್ಯದವನಲ್ಲ – Kannada News | Delhi Crime Spree Probe: Former House Help Linked to Multiple Offences

ನವದೆಹಲಿ, ಏಪ್ರಿಲ್ 23: ದೆಹಲಿಯ ಕೈಲಾಶ್ ಪೂರ್ವ ಭಾಗದಲ್ಲಿ ನಡೆದ ಈ ಭೀಕರ ಹತ್ಯೆ(Murder) ಮತ್ತು ಅತ್ಯಾಚಾರ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಆ ಆರೋಪಿ ಮಾಡಿದ್ದು ಕೇವಲ ಒಂದು ಅಪರಾಧವಲ್ಲ, ಎರಡು ದಿನಗಳಲ್ಲಿ ಎರಡು ಅತ್ಯಾಚಾರವೆಸಗಿ ಒಬ್ಬರನ್ನು ಕೊಲೆ ಮಾಡಿದ್ದ ಎನ್ನುವ ಆಘಾತಕಾರಿ ಸಂಗತಿ ಬಯಲಿಗೆ ಬಂದಿದೆ. 22 ವರ್ಷದ ಎಂಜಿನಿಯರಿಂಗ್ ಪದವೀಧರೆ ಹಾಗೂ ಯುಪಿಎಸ್‌ಸಿ (UPSC) ಪರೀಕ್ಷೆಯ ಸಿದ್ಧತೆಯಲ್ಲಿದ್ದ ಯುವತಿಯನ್ನು ಆಕೆಯ ಮನೆಯಲ್ಲೇ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 19 ವರ್ಷದ ಆರೋಪಿ ರಾಹುಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಭಾರತೀಯ ಕಂದಾಯ ಸೇವಾ (IRS) ಅಧಿಕಾರಿಯ ಪುತ್ರಿಯಾಗಿರುವ ಈ ಯುವತಿ, ಬುಧವಾರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ರಾಹುಲ್ ಯುವತಿಯ ಮೇಲೆ ಮೊದಲು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ನಂತರ ಮೊಬೈಲ್ ಫೋನ್ ಚಾರ್ಜರ್ ಕೇಬಲ್ ಬಳಸಿ ಕತ್ತು ಹಿಸುಕಿ ಆಕೆಯನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ರಾಹುಲ್ ಈ ಹಿಂದೆ ಇದೇ ಮನೆಯಲ್ಲಿ ಕೆಲಸಗಾರನಾಗಿ ಕೆಲಸ ನಿರ್ವಹಿಸುತ್ತಿದ್ದ, ಆದರೆ ಕೆಲಸಗಾರರಿಂದ ಹಣ ಸಾಲ ಪಡೆದು ಮರುಪಾವತಿಸಲು ಸಾಧ್ಯವಾಗದ ಕಾರಣ ಒಂದು ತಿಂಗಳ ಹಿಂದಷ್ಟೇ ಆತನನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಈ ದ್ವೇಷವೇ ಕೊಲೆಗೆ ಪ್ರಚೋದನೆ ನೀಡಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಆತನ ಚಲನವಲನಗಳನ್ನು ಪತ್ತೆಹಚ್ಚಿ ದ್ವಾರಕಾ ಪ್ರದೇಶದ ಹೋಟೆಲ್‌ವೊಂದರಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮತ್ತಷ್ಟು ಓದಿ: ಗಾಜಿಯಾಬಾದ್‌ನಲ್ಲಿ 4 ವರ್ಷದ ಮಗುವನ್ನು ಕೊಂದಿದ್ದ ಆರೋಪಿಯ ಎನ್​ಕೌಂಟರ್; ಶವ ಬೇಡವೆಂದ ಕುಟುಂಬಸ್ಥರು

ತನಿಖೆ ವೇಳೆ ಪೊಲೀಸರಿಗೆ ಅತ್ಯಂತ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ದೆಹಲಿಯಲ್ಲಿ ಕೊಲೆ ಮಾಡುವ ಕೆಲವೇ ಗಂಟೆಗಳ ಮೊದಲು, ಈತ ರಾಜಸ್ಥಾನದ ಅಲ್ವಾರ್​ನಲ್ಲಿ ಮತ್ತೊಬ್ಬ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದ ಎನ್ನಲಾಗಿದೆ.

ಅಲ್ವಾರ್‌ನ ಸಂತ್ರಸ್ತೆಯ ಪತಿಯೊಂದಿಗೆ ರಾಹುಲ್ ಸ್ನೇಹ ಹೊಂದಿದ್ದ, ಅವರೊಂದಿಗೆ ಲುಡೋ ಆಡಲು ಹೋಗುತ್ತಿದ್ದ ಈತ, ಅಲ್ಲಿನ ಮಹಿಳೆಯ ಮೇಲೆ ದೌರ್ಜನ್ಯ ಎಸಗಿ ಕೂಡಲೇ ದೆಹಲಿಗೆ ಪ್ರಯಾಣ ಬೆಳೆಸಿದ್ದ.

ಜಂಟಿ ಪೊಲೀಸ್ ಆಯುಕ್ತ ವಿಜಯ್ ಕುಮಾರ್ ಈ ಬಗ್ಗೆ ಮಾತನಾಡಿ, “ಆರೋಪಿ ಒಂದೇ ದಿನ ಎರಡು ಕಡೆ ಒಂದೇ ರೀತಿಯ ಘೋರ ಅಪರಾಧಗಳನ್ನು ಮಾಡಿದ್ದಾನೆ. ಇದು ಆತನ ವಿಕೃತ ಕ್ರಿಮಿನಲ್ ಮನಸ್ಥಿತಿಯನ್ನು ತೋರಿಸುತ್ತದೆ. ಕೆಲಸದಿಂದ ತೆಗೆದುಹಾಕಿದ್ದ ಅಸಮಾಧಾನ ಮತ್ತು ಈ ವಿಕೃತ ಮನಸ್ಥಿತಿಯೇ ಕೃತ್ಯಕ್ಕೆ ಕಾರಣವಾಗಿರಬಹುದು. ಸದ್ಯಕ್ಕೆ ವಿಚಾರಣೆ ನಡೆಯುತ್ತಿದ್ದು, ಇನ್ನಷ್ಟು ಸತ್ಯಗಳು ಹೊರಬರಬೇಕಿದೆ ಎಂದಿದ್ದಾರೆ.
ಈ ಘಟನೆಯು ಮನೆಯ ಕೆಲಸಕ್ಕೆ ಬರುವವರ ಹಿನ್ನೆಲೆ ಪರಿಶೀಲನೆ (Verification) ಮಾಡುವುದು ಎಷ್ಟು ಮುಖ್ಯ ಎಂಬುದರ ಬಗ್ಗೆ ಎಚ್ಚರಿಸಿದಂತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ದೇವರಿಗೆ ಕಣ್ಣಿಲ್ಲ ಎಂದು ದೂರುವ ಮುನ್ನ ಈ ಸ್ಟೋರಿ ನೋಡಿ ! ಭಗವಂತನ ಅನುಗ್ರಹ ಪಡೆಯಲು ಬೇಕಿಲ್ಲ ವಿಶೇಷ ಯೋಗ್ಯತೆ – Kannada News | Divine Intervention: Understanding the Power of Heartfelt Pleas

ಬೆಂಗಳೂರು. ಏ.23: ನಮ್ಮ ದೈನಂದಿನ ಜೀವನದಲ್ಲಿ ಕೇಳುವ ನುಡಿಗಳ ಹಿಂದಿರುವ ಆಳವಾದ ತತ್ವಗಳನ್ನು ಅನಾವರಣಗೊಳಿಸುತ್ತದೆ. “ದೇವರಿಗೆ ಕಣ್ಣಿಲ್ಲವಾ” ಎಂಬ ಲೋಕರೂಢಿ ಮಾತು ಇಂತಹ ಒಂದು ವಿಶೇಷ ಮಹತ್ವವನ್ನು ಹೊಂದಿದೆ. ಈ ಮಾತನ್ನು ನಾವು ಯಾವಾಗಲು ನೋವು, ಅಸಹಾಯಕತೆ, ಅಥವಾ ಅನ್ಯಾಯಕ್ಕೆ ಒಳಗಾದಾಗ, ಮನದಾಳದಿಂದ ಹೊರಡುವ ಭಾವನಾತ್ಮಕ ಅಭಿವ್ಯಕ್ತಿಯಾಗಿ ಬಳಸುತ್ತೇವೆ. ಇದು ಕೇವಲ ಒಂದು ವಾಕ್ಯವಲ್ಲ, ಬದಲಿಗೆ ಯಾವ ಜಪ, ತಪ, ಪೂಜೆ ಇಲ್ಲದೆ, ಹೃದಯದಿಂದ ಹೊರಹೊಮ್ಮುವ ತೀವ್ರವಾದ ಭಾವನೆಯನ್ನು ಪ್ರತಿನಿಧಿಸುತ್ತದೆ. ಸಂಕಷ್ಟದ ಸಮಯದಲ್ಲಿ, ನಾವು ಎಲ್ಲ ರೀತಿಯಿಂದಲೂ ಕುಗ್ಗಿ ಹೋದಾಗ, ನ್ಯಾಯಯುತವಾಗಿ ನಡೆದುಕೊಂಡಿದ್ದರೂ ಕಷ್ಟಗಳು ಬಂದಾಗ ಈ ಮಾತು ಬರುತ್ತದೆ. ಈ ವಾಕ್ಯಶಕ್ತಿಗೆ ಯಾವುದೇ ವಿಶೇಷ ಯೋಗ್ಯತೆ, ಮಹನೀಯತೆ ಅಥವಾ ತಪಸ್ವಿಯ ಸ್ಥಾನ ಅಗತ್ಯವಿಲ್ಲ. ಸಾಮಾನ್ಯ ಮನುಷ್ಯರ ನೈಜ ಅಳಲು ಇದು. ಈ ಮಾತನ್ನು ಉಚ್ಚರಿಸಿದಾಗ ಭಗವಂತನ ಅನುಗ್ರಹವು ತಕ್ಷಣವೇ ಲಭಿಸುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version