‘ಕರ್ಣ’ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್; ಕರ್ಣ-ನಿಧಿ ಮದುವೆ ಮಾಡಿಸ್ತಾಳೆ ನಿತ್ಯಾ – Kannada News | Karna Serial Big Twist: Nithya Orchestrates Karna Nidhi Wedding

‘ಕರ್ಣ’ ಧಾರಾವಾಹಿಯಲ್ಲಿ ಈಗ ಒಂದು ದೊಡ್ಡ ಟ್ವಿಸ್ಟ್ ಎದುರಾಗಿದೆ ಎಂದೇ ಹೇಳಬಹುದು. ಇಷ್ಟು ದಿನ ಈ ಧಾರಾವಾಹಿಯಲ್ಲಿ ಕರ್ಣ ಹಾಗೂ ನಿತ್ಯಾ ಸಂಸಾರ ನಡೆಸುತ್ತಿರುವುದನ್ನು ತೋರಿಸಲಾಗಿದೆ. ಆದರೆ, ಈಗ ಧಾರಾವಾಹಿಯಲ್ಲಿ ದೊಡ್ಡ ತಿರುವು ಬಂದಿದೆ. ಕರ್ಣ ಹಾಗೂ ನಿಧಿ ಮದುವೆ ನಡೆಯಲಿದೆ. ಇದನ್ನು ನಿತ್ಯಾ ಮಾಡಿಸುತ್ತಾ ಇದ್ದಾಳೆ. ಇದು ದೊಡ್ಡ ಟ್ವಿಸ್ಟ್ ಎಂದು ಪರಿಗಣಿಸಬಹುದು.

‘ಕರ್ಣ’ ಧಾರಾವಾಹಿಯಲ್ಲಿ ಕರ್ಣನ ತಂದೆ ರಮೇಶ್ ಮೋಸದಿಂದ ಕರ್ಣ ಹಾಗೂ ನಿತ್ಯಾಳ ಮದುವೆ ಮಾಡಿಸುತ್ತಾನೆ. ಈ ಮದುವೆಗೂ ಮೊದಲು ಕರ್ಣನು ನಿಧಿಯನ್ನು ಪ್ರೀತಿ ಮಾಡುತ್ತಾ ಇರುತ್ತಾನೆ. ಈ ವಿಷಯ ಗೊತ್ತಾಗಿಯೇ ನಿತ್ಯಾ ಹಾಗೂ ಕರ್ಣನ ಮದುವೆ ಮಾಡಿಸುತ್ತಾನೆ ರಮೇಶ್. ಈ ಮೂಲಕ ಮಗನ ಮೇಲೆ ದ್ವೇಷ ಸಾಧಿಸುತ್ತಾನೆ. ಆದರೆ, ಇಷ್ಟು ದಿನ ಈ ವಿಷಯ ಗುಟ್ಟಾಗಿ ಇಡಲಾಗಿತ್ತು.

ಈಗ ನಿತ್ಯಾಳಿಗೆ ನಿಧಿ ಹಾಗೂ ಕರ್ಣನ ಪ್ರೀತಿ ವಿಷಯ ಗೊತ್ತಾಗಿದೆ. ಎಲ್ಲರ ಸಮ್ಮುಖದಲ್ಲಿ ಆಕೆ ಕರ್ಣ ಹಾಗೂ ನಿಧಿ ಮದುವೆ ಮಾಡಿಸುತ್ತಾಳೆ. ಅಲ್ಲದೆ ತನ್ನ ಮಗುವಿಗೆ ತೇಜಸ್ ಕಾರಣ ಎಂಬುದನ್ನು ನಿಧಿ ಹೇಳುತ್ತಾಳೆ. ಈ ಸಂದರ್ಭದ ವಿಡಿಯೋ ಗಮನ ಸೆಳೆದಿದೆ. ಈ ಪ್ರೋಮೋಗೆ ನಾನಾ ರೀತಿಯ ಕಮೆಂಟ್ಗಳು ಬಂದಿವೆ. ಕೆಲವರು ಇದನ್ನು ಕನಸು ಇರಬಹುದು ಎಂದೇ ಹೇಳುತ್ತಿದ್ದಾರೆ.

ಏಕೆಂದರೆ ಕರ್ಣ ಹಾಗೂ ನಿಧಿ ಲವರ್ಸ್ ಎಂಬುದು ತುಂಬಾನೇ ದೊಡ್ಡ ತಿರುವು. ಈ ತಿರುವು ಬಂದರೆ ಧಾರಾವಾಹಿ ಮತ್ತೊಂದು ಹಂತಕ್ಕೆ ಹೋಗಲಿದೆ. ಹೀಗಿರುವಾಗ ಇಷ್ಟು ಬೇಗ ಧಾರಾವಾಹಿಯಲ್ಲಿ ಆ ಟ್ವಿಸ್ಟ್ ತಂದರೇ ಎನ್ನುವ ಪ್ರಶ್ನೆ ಮೂಡಿದೆ.

ಕರ್ಣ ಧಾರಾವಾಹಿಯು ಟಿಆರ್ಪಿಯಲ್ಲಿ ಒಳ್ಳೆಯ ಟಿವಿಆರ್ ಪಡೆದು ಮುನ್ನುಗ್ಗುತ್ತಿದೆ. ಈಗ ಎದುರಾಗಿರುವ ಒಂದು ದೊಡ್ಡ ಟ್ವಿಸ್ಟ್ನಿಂದ ಸಾಕಷ್ಟು ನಿರೀಕ್ಷೆ ಮಾಡಬಹುದು. ಇದು ಕನಸೇ ಆಗಿದ್ದಲ್ಲಿ ವೀಕ್ಷಕರಿಗೆ ಸಾಕಷ್ಟು ನಿರಾಸೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹೀನಾಯ ಸೋಲಿನ ಬೆನ್ನಲ್ಲೇ ರಿಷಭ್ ಪಂತ್ ಜೊತೆ ಗೋಯೆಂಕಾ ಮಾತುಕತೆ..! – Kannada News | Sanjiv Goenka chat with Rishabh Pant after LSG loss

ಸಾಮಾನ್ಯವಾಗಿ ಸೋಲಿನ ಬೆನ್ನಲ್ಲೇ ಕ್ಲಾಸ್ ತೆಗೆದುಕೊಳ್ಳುವ ಸಂಜೀವ್ ಗೊಯೇಂಕಾ ಈ ಬಾರಿ ಕೂಲ್ ಆಗಿ ಕಾಣಿಸಿಕೊಂಡಿದ್ದು ವಿಶೇಷ. ಅಲ್ಲದೆ ನಗು ಮುಖದೊಂದಿಗೆ ರಿಷಭ್ ಪಂತ್ ಅವರನ್ನು ಅಪ್ಪಿಕೊಂಡು ಬೆನ್ನು ತಟ್ಟಿದರು. ಪಂದ್ಯದಲ್ಲಿ ಸೋತಿದ್ದರೂ, ನಾಯಕನ ಹೋರಾಟದ ಗುಣವನ್ನು ಮಾಲೀಕರು ಬೆಂಬಲಿಸಿದ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

Source link

ಮನೆ ಹಾಲ್ ಹ್ಯಾಂಗಿಂಗ್​ನಲ್ಲಿ ರಾಜನಂತೆ ಕುಳಿತಿದ್ದ ನಾಗರಾಜ! ಮೈಸೂರಿನಲ್ಲಿ ಮನೆ ಒಳಗಿದ್ದ ನಾಗರಹಾವು ರಕ್ಷಣೆ – Kannada News | Mysore Snake Rescue: Snake Shyam Rescues Cobra inside house and Trapped in Net as Heatwave Forces Snakes into Houses

ಮೈಸೂರು, ಏಪ್ರಿಲ್ 23: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ತಾಪಮಾನ ಏರಿಕೆಯಾಗುತ್ತಿದ್ದಂತೆಯೇ, ತಂಪಾದ ಜಾಗ ಅರಸುತ್ತಾ ವಿಷಕಾರಿ ಹಾವುಗಳು ಜನವಸತಿ ಪ್ರದೇಶಗಳಿಗೆ ಲಗ್ಗೆ ಇಡುತ್ತಿವೆ. ನಗರದ ಟೆಲಿಕಾಂ ಬಡಾವಣೆ ಸೇರಿದಂತೆ ವಿವಿಧ ಬಡಾವಣೆಗಳ ಮನೆಗಳಲ್ಲಿ ಹಾವುಗಳು ಪ್ರತ್ಯಕ್ಷವಾಗುತ್ತಿದ್ದು, ನಿವಾಸಿಗಳಲ್ಲಿ ಆತಂಕ ಮೂಡಿಸಿವೆ. ನಗರದ ಟೆಲಿಕಾಂ ಬಡಾವಣೆಯ ಮನೆಯೊಂದರ ಒಳಗೆ ಹಾಲ್​ನಲ್ಲಿ ನೇತುಹಾಕಿದ್ದ ಹ್ಯಾಂಗಿಂಗ್​ನಲ್ಲಿ ನಾಗರಹಾವು ಕುಳಿತಿದ್ದು ನೋಡಿ ಮನೆ ಮಂದಿ ಬೆಚ್ಚಿ ಬಿದ್ದಿದ್ದಾರೆ. ಮತ್ತೊಂದೆಡೆ, ಅದೇ ಬಡಾವಣೆಯ ಮನೆಯೊಂದರ ಕಾಂಪೌಂಡ್‌ನಲ್ಲಿ ಹಾಕಲಾಗಿದ್ದ ಬಲೆಗೆ ನಾಗರಹಾವೊಂದು ಸಿಲುಕಿ ನರಳಾಡುತ್ತಿತ್ತು. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಖ್ಯಾತ ಉರಗ ತಜ್ಞ ಸ್ನೇಕ್ ಶ್ಯಾಮ್, ಅತ್ಯಂತ ಜಾಗರೂಕತೆಯಿಂದ ಹಾವನ್ನು ಬಲೆಯಿಂದ ಮುಕ್ತಗೊಳಿಸಿ ರಕ್ಷಿಸಿದ್ದಾರೆ. ಬಿಸಿಲಿನ ಬೇಗೆ ತಾಳಲಾರದೆ ಹಾವುಗಳು ಮನೆಗಳ ಒಳಗೆ, ಶೂ ಸ್ಟ್ಯಾಂಡ್ ಹಾಗೂ ತಂಪಾದ ಮೂಲೆಗಳಲ್ಲಿ ಆಶ್ರಯ ಪಡೆಯುತ್ತಿವೆ.

ಬೇಸಿಗೆಯ ಈ ಸಮಯದಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಮತ್ತು ಹಾವುಗಳು ಕಂಡುಬಂದಲ್ಲಿ ಸ್ವತಃ ಹಿಡಿಯಲು ಮುಂದಾಗದೆ ತಜ್ಞರಿಗೆ ಮಾಹಿತಿ ನೀಡಬೇಕು ಎಂದು ಸ್ನೇಕ್ ಶ್ಯಾಮ್ ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಐಷಾರಾಮಿ ಡಿಫೆಂಡರ್ ಖರೀದಿಸಿದ ಆ್ಯಕ್ಷನ್ ನಿರ್ದೇಶಕ ರವಿ ವರ್ಮ; ವಿಶೇಷ ವ್ಯಕ್ತಿಯಿಂದ ಹಸ್ತಾಕ್ಷರ – Kannada News | Action Director Ravi Varma Buys Land Rover Defender; Sunny Deol Signs Luxury SUV

ಆ್ಯಕ್ಷನ್ ಡೈರೆಕ್ಟರ್ ರವಿ ವರ್ಮ (Ravi Varma) ಅವರು ಕನ್ನಡ ಮಾತ್ರವಲ್ಲದೆ ತೆಲುಗು, ಹಿಂದಿ ಮೊದಲಾದ ಭಾಷೆಗಳಲ್ಲಿ ಕೆಲಸ ಮಾಡಿದ್ದಾರೆ. ಸಾಕಷ್ಟು ಚಾಲೆಂಜ್​​ಗಳನ್ನು ಎದುರಿಸಿ ಅವರು ಈ ಹಂತಕ್ಕೆ ಬಂದು ನಿಂತಿದ್ದಾರೆ. ತಮ್ಮ ಕೆಲಸ ಮಾತನಾಡುವಂತೆ ಅವರು ಮಾಡಿದ್ದಾರೆ. ಸನ್ನಿ ಯಶ್, ಸಲ್ಮಾನ್ ಖಾನ್, ಸನ್ನಿ ಡಿಯೋಲ್ ಸೇರಿದಂತೆ ಅನೇಕ ಸ್ಟಾರ್​​ಗಳ ಜೊತೆ ಕೆಲಸ ಮಾಡಿದ್ದಾರೆ. ಈ ಮಧ್ಯೆ ರವಿ ವರ್ಮ ಅವರು ದುಬಾರಿ ಕಾರನ್ನು ಖರೀದಿ ಮಾಡಿದ್ದಾರೆ. ಇದು ಇನ್ನೂ ಕನಸಿನ ರೀತಿ ಕಾಣುತ್ತಿದೆ ಎಂದು ಅವರು ಹೇಳಿದ್ದಾರೆ. ಈ ಕಾರಿಗೆ ವಿಶೇಷ ವ್ಯಕ್ತಿಯ ಹಸ್ತಾಕ್ಷರ ಬಿದ್ದಿದೆ.

ರವಿ ವರ್ಮ ಅವರು ಲ್ಯಾಂಡ್ ರೋವರ್ ಡಿಫೆಂಡರ್ ಕಾರನ್ನು ಖರೀದಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಇದರ ಬೆಲೆ 1.27 ಕೋಟಿ ರೂಪಾಯಿ ಇಂದ ಆರಂಭ ಆಗಿ, 3.35 ಕೋಟಿ ರೂಪಾಯಿವರೆಗೆ ಇದೆ. ವಿವಿಧ ರೀತಿಯ ವೇರಿಯಂಟ್​​ಗೆ ವಿವಿಧ ರೀತಿಯ ಬೆಲೆ ನಿಗದಿ ಆಗಿದೆ. 2 ಲೀಟರ್ ಪೆಟ್ರೋಲ್ ಇಂಜಿನ್, 3 ಲೀಟರ್ ಡೀಸೆಲ್ ಇಂಜಿನ್, 5 ಲೀಟರ್ ವಿ8 ಇಂಜಿನ್ ವೇರಿಯಂಟ್​​ಗಳಲ್ಲಿ ಈ ಕಾರು ಲಭ್ಯ. ಇದು ಐಷಾರಾಮಿ ಆಫ್​​ರೋಡ್ ಎಸ್​​ಯಿವಿ ಕಾರು. ಐದು ಲೀಟರ್ ವಿ8 ಇಂಜಿನ್ ಕೇವಲ 4 ಸೆಕೆಂಡ್​​ಗಳಲ್ಲಿ ಜೀರೋದಿಂದ 100 ಕಿಮೀ ವೇಗವನ್ನು ತಲುಪುತ್ತದೆ.

ರವಿ ವರ್ಮ ಅವರು ಈ ಕಾರನ್ನು ಬಾಲಿವುಡ್ ನಟ ಸನ್ನಿ ಡಿಯೋಲ್ ಎದುರು ತೆಗೆದುಕೊಂಡು ಹೋಗಿದ್ದಾರೆ. ಈ ಕಾರನ್ನು ಸನ್ನಿ ಒಮ್ಮೆ ಓಡಿಸಿ ನೋಡಿದ್ದಾರೆ. ಇಷ್ಟೇ ಅಲ್ಲ, ಕಾರಿನ ಡ್ಯಾಶ್​​ಬೋರ್ಡ್ ಮೇಲೆ ಪ್ರೀತಿಯಿಂದ ಹಸ್ತಾಕ್ಷರ ಕೂಡ ಹಾಕಿ ಕೊಟ್ಟಿದ್ದಾರೆ. ಈ ಸಂದರ್ಭದ ವಿಡಿಯೋನ ರವಿ ವರ್ಮ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಕೊಲೆ ಬೆದರಿಕೆ ಆರೋಪ: ಫೈಟ್ ಮಾಸ್ಟರ್ ರವಿ ವರ್ಮಾ ಪ್ರತಿಕ್ರಿಯೆ

‘ಇನ್ನೂ ಎಲ್ಲವನ್ನೂ ಅರ್ಥಮಾಡಿಕೊಳ್ಳುತ್ತಿದ್ದೇನೆ’ ಎಂದು ಬರಹ ಆರಂಭಿಸಿದ್ದಾರೆ ರವಿ ವರ್ಮ. ಇಂದು ನನ್ನ ಹೊಸ ಡಿಫೆಂಡರ್ ಡ್ರೈವ್ ಮಾಡಿದೆ. ಇದು ಅವಾಸ್ತವಿಕವೆನಿಸುತ್ತಿದೆ’ ಎಂಬುದು ರವಿ ವರ್ಮ ಮಾತು. ಅವರಿಗೆ ಇದನ್ನು ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ. ‘ಸನ್ನಿ ಡಿಯೋಲ್ ಅವರೇ ನಿಮ್ಮ ನಿರಂತರ ಬೆಂಬಲಕ್ಕಾಗಿ ತುಂಬಾ ಧನ್ಯವಾದಗಳು. ಇದಕ್ಕೆ ಕೃತಜ್ಞನಾಗಿರುತ್ತೇನೆ’ ಎಂದು ಅವರು ಬರೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಎರಡು ದಿನ, ಎರಡು ಅತ್ಯಾಚಾರ, ಒಂದು ಕೊಲೆ, ಐಆರ್​ಎಸ್ ಅಧಿಕಾರಿ ಮಗಳ ಕೊಂದವನು ಸಾಮಾನ್ಯದವನಲ್ಲ – Kannada News | Delhi Crime Spree Probe: Former House Help Linked to Multiple Offences

ನವದೆಹಲಿ, ಏಪ್ರಿಲ್ 23: ದೆಹಲಿಯ ಕೈಲಾಶ್ ಪೂರ್ವ ಭಾಗದಲ್ಲಿ ನಡೆದ ಈ ಭೀಕರ ಹತ್ಯೆ(Murder) ಮತ್ತು ಅತ್ಯಾಚಾರ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಆ ಆರೋಪಿ ಮಾಡಿದ್ದು ಕೇವಲ ಒಂದು ಅಪರಾಧವಲ್ಲ, ಎರಡು ದಿನಗಳಲ್ಲಿ ಎರಡು ಅತ್ಯಾಚಾರವೆಸಗಿ ಒಬ್ಬರನ್ನು ಕೊಲೆ ಮಾಡಿದ್ದ ಎನ್ನುವ ಆಘಾತಕಾರಿ ಸಂಗತಿ ಬಯಲಿಗೆ ಬಂದಿದೆ. 22 ವರ್ಷದ ಎಂಜಿನಿಯರಿಂಗ್ ಪದವೀಧರೆ ಹಾಗೂ ಯುಪಿಎಸ್‌ಸಿ (UPSC) ಪರೀಕ್ಷೆಯ ಸಿದ್ಧತೆಯಲ್ಲಿದ್ದ ಯುವತಿಯನ್ನು ಆಕೆಯ ಮನೆಯಲ್ಲೇ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 19 ವರ್ಷದ ಆರೋಪಿ ರಾಹುಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಭಾರತೀಯ ಕಂದಾಯ ಸೇವಾ (IRS) ಅಧಿಕಾರಿಯ ಪುತ್ರಿಯಾಗಿರುವ ಈ ಯುವತಿ, ಬುಧವಾರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ರಾಹುಲ್ ಯುವತಿಯ ಮೇಲೆ ಮೊದಲು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ನಂತರ ಮೊಬೈಲ್ ಫೋನ್ ಚಾರ್ಜರ್ ಕೇಬಲ್ ಬಳಸಿ ಕತ್ತು ಹಿಸುಕಿ ಆಕೆಯನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ರಾಹುಲ್ ಈ ಹಿಂದೆ ಇದೇ ಮನೆಯಲ್ಲಿ ಕೆಲಸಗಾರನಾಗಿ ಕೆಲಸ ನಿರ್ವಹಿಸುತ್ತಿದ್ದ, ಆದರೆ ಕೆಲಸಗಾರರಿಂದ ಹಣ ಸಾಲ ಪಡೆದು ಮರುಪಾವತಿಸಲು ಸಾಧ್ಯವಾಗದ ಕಾರಣ ಒಂದು ತಿಂಗಳ ಹಿಂದಷ್ಟೇ ಆತನನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಈ ದ್ವೇಷವೇ ಕೊಲೆಗೆ ಪ್ರಚೋದನೆ ನೀಡಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಆತನ ಚಲನವಲನಗಳನ್ನು ಪತ್ತೆಹಚ್ಚಿ ದ್ವಾರಕಾ ಪ್ರದೇಶದ ಹೋಟೆಲ್‌ವೊಂದರಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮತ್ತಷ್ಟು ಓದಿ: ಗಾಜಿಯಾಬಾದ್‌ನಲ್ಲಿ 4 ವರ್ಷದ ಮಗುವನ್ನು ಕೊಂದಿದ್ದ ಆರೋಪಿಯ ಎನ್​ಕೌಂಟರ್; ಶವ ಬೇಡವೆಂದ ಕುಟುಂಬಸ್ಥರು

ತನಿಖೆ ವೇಳೆ ಪೊಲೀಸರಿಗೆ ಅತ್ಯಂತ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ದೆಹಲಿಯಲ್ಲಿ ಕೊಲೆ ಮಾಡುವ ಕೆಲವೇ ಗಂಟೆಗಳ ಮೊದಲು, ಈತ ರಾಜಸ್ಥಾನದ ಅಲ್ವಾರ್​ನಲ್ಲಿ ಮತ್ತೊಬ್ಬ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದ ಎನ್ನಲಾಗಿದೆ.

ಅಲ್ವಾರ್‌ನ ಸಂತ್ರಸ್ತೆಯ ಪತಿಯೊಂದಿಗೆ ರಾಹುಲ್ ಸ್ನೇಹ ಹೊಂದಿದ್ದ, ಅವರೊಂದಿಗೆ ಲುಡೋ ಆಡಲು ಹೋಗುತ್ತಿದ್ದ ಈತ, ಅಲ್ಲಿನ ಮಹಿಳೆಯ ಮೇಲೆ ದೌರ್ಜನ್ಯ ಎಸಗಿ ಕೂಡಲೇ ದೆಹಲಿಗೆ ಪ್ರಯಾಣ ಬೆಳೆಸಿದ್ದ.

ಜಂಟಿ ಪೊಲೀಸ್ ಆಯುಕ್ತ ವಿಜಯ್ ಕುಮಾರ್ ಈ ಬಗ್ಗೆ ಮಾತನಾಡಿ, “ಆರೋಪಿ ಒಂದೇ ದಿನ ಎರಡು ಕಡೆ ಒಂದೇ ರೀತಿಯ ಘೋರ ಅಪರಾಧಗಳನ್ನು ಮಾಡಿದ್ದಾನೆ. ಇದು ಆತನ ವಿಕೃತ ಕ್ರಿಮಿನಲ್ ಮನಸ್ಥಿತಿಯನ್ನು ತೋರಿಸುತ್ತದೆ. ಕೆಲಸದಿಂದ ತೆಗೆದುಹಾಕಿದ್ದ ಅಸಮಾಧಾನ ಮತ್ತು ಈ ವಿಕೃತ ಮನಸ್ಥಿತಿಯೇ ಕೃತ್ಯಕ್ಕೆ ಕಾರಣವಾಗಿರಬಹುದು. ಸದ್ಯಕ್ಕೆ ವಿಚಾರಣೆ ನಡೆಯುತ್ತಿದ್ದು, ಇನ್ನಷ್ಟು ಸತ್ಯಗಳು ಹೊರಬರಬೇಕಿದೆ ಎಂದಿದ್ದಾರೆ.
ಈ ಘಟನೆಯು ಮನೆಯ ಕೆಲಸಕ್ಕೆ ಬರುವವರ ಹಿನ್ನೆಲೆ ಪರಿಶೀಲನೆ (Verification) ಮಾಡುವುದು ಎಷ್ಟು ಮುಖ್ಯ ಎಂಬುದರ ಬಗ್ಗೆ ಎಚ್ಚರಿಸಿದಂತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ದೇವರಿಗೆ ಕಣ್ಣಿಲ್ಲ ಎಂದು ದೂರುವ ಮುನ್ನ ಈ ಸ್ಟೋರಿ ನೋಡಿ ! ಭಗವಂತನ ಅನುಗ್ರಹ ಪಡೆಯಲು ಬೇಕಿಲ್ಲ ವಿಶೇಷ ಯೋಗ್ಯತೆ – Kannada News | Divine Intervention: Understanding the Power of Heartfelt Pleas

ಬೆಂಗಳೂರು. ಏ.23: ನಮ್ಮ ದೈನಂದಿನ ಜೀವನದಲ್ಲಿ ಕೇಳುವ ನುಡಿಗಳ ಹಿಂದಿರುವ ಆಳವಾದ ತತ್ವಗಳನ್ನು ಅನಾವರಣಗೊಳಿಸುತ್ತದೆ. “ದೇವರಿಗೆ ಕಣ್ಣಿಲ್ಲವಾ” ಎಂಬ ಲೋಕರೂಢಿ ಮಾತು ಇಂತಹ ಒಂದು ವಿಶೇಷ ಮಹತ್ವವನ್ನು ಹೊಂದಿದೆ. ಈ ಮಾತನ್ನು ನಾವು ಯಾವಾಗಲು ನೋವು, ಅಸಹಾಯಕತೆ, ಅಥವಾ ಅನ್ಯಾಯಕ್ಕೆ ಒಳಗಾದಾಗ, ಮನದಾಳದಿಂದ ಹೊರಡುವ ಭಾವನಾತ್ಮಕ ಅಭಿವ್ಯಕ್ತಿಯಾಗಿ ಬಳಸುತ್ತೇವೆ. ಇದು ಕೇವಲ ಒಂದು ವಾಕ್ಯವಲ್ಲ, ಬದಲಿಗೆ ಯಾವ ಜಪ, ತಪ, ಪೂಜೆ ಇಲ್ಲದೆ, ಹೃದಯದಿಂದ ಹೊರಹೊಮ್ಮುವ ತೀವ್ರವಾದ ಭಾವನೆಯನ್ನು ಪ್ರತಿನಿಧಿಸುತ್ತದೆ. ಸಂಕಷ್ಟದ ಸಮಯದಲ್ಲಿ, ನಾವು ಎಲ್ಲ ರೀತಿಯಿಂದಲೂ ಕುಗ್ಗಿ ಹೋದಾಗ, ನ್ಯಾಯಯುತವಾಗಿ ನಡೆದುಕೊಂಡಿದ್ದರೂ ಕಷ್ಟಗಳು ಬಂದಾಗ ಈ ಮಾತು ಬರುತ್ತದೆ. ಈ ವಾಕ್ಯಶಕ್ತಿಗೆ ಯಾವುದೇ ವಿಶೇಷ ಯೋಗ್ಯತೆ, ಮಹನೀಯತೆ ಅಥವಾ ತಪಸ್ವಿಯ ಸ್ಥಾನ ಅಗತ್ಯವಿಲ್ಲ. ಸಾಮಾನ್ಯ ಮನುಷ್ಯರ ನೈಜ ಅಳಲು ಇದು. ಈ ಮಾತನ್ನು ಉಚ್ಚರಿಸಿದಾಗ ಭಗವಂತನ ಅನುಗ್ರಹವು ತಕ್ಷಣವೇ ಲಭಿಸುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಸಿಲ ಬೇಗೆಗೆ ಮನೆಗಳಿಗೆ ಲಗ್ಗೆ ಇಡುತ್ತಿವೆ ವಿಷಸರ್ಪಗಳು! ಇರಲಿ ಎಚ್ಚರ – Kannada News | Bengaluru Heatwave: Poisonous Snakes Entering Houses to Escape Heat; Safety Tips for Parents and Residents

ಬೆಂಗಳೂರು, ಏಪ್ರಿಲ್ 23: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಈ ಬಾರಿ ಸೂರ್ಯನ ತಾಪ ದಾಖಲೆ ಮಟ್ಟಕ್ಕೆ ಏರಿದೆ. ಈಗಾಗಲೇ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, 38 ಡಿಗ್ರಿ ಸೆಲ್ಸಿಯಸ್ ವರೆಗೂ ಏರಿಕೆಯಾಗಬಹುದು ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ. ಈ ರಣಬಿಸಿಲಿನ ಬೇಗೆಗೆ ಮನುಷ್ಯರು ಮಾತ್ರವಲ್ಲದೆ, ಮೂಕಪ್ರಾಣಿಗಳೂ ತತ್ತರಿಸುತ್ತಿವೆ. ಮುಖ್ಯವಾಗಿ ಹುತ್ತದೊಳಗಿನ ಶಾಖ ತಾಳಲಾರದೆ ವಿಷಕಾರಿ ಹಾವುಗಳು (Snakes) ತಂಪಾದ ಜಾಗ ಹುಡುಕುತ್ತಾ ಮನೆಗಳಿಗೆ ನುಗ್ಗುತ್ತಿವೆ. ಶೂಗಳ ಒಳಗೆ, ಅಡುಗೆ ಮನೆ, ಬಾತ್‌ರೂಮ್‌ ಹಾಗೂ ವಾಹನಗಳ ಎಂಜಿನ್ ಭಾಗದಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಿದ್ದು, ನಗರವಾಸಿಗಳಲ್ಲಿ ಭೀತಿ ಸೃಷ್ಟಿಸಿದೆ.

ಹಾವುಗಳು ಮರಿ ಮಾಡುವ ಸಮಯ: ಎಚ್ಚರ ಅಗತ್ಯ

ಮಾರ್ಚ್ ಮತ್ತು ಏಪ್ರಿಲ್ ತಿಂಗಳು ಹಾವುಗಳು ಮೊಟ್ಟೆಯಿಟ್ಟು ಮರಿ ಮಾಡುವ ಸಮಯ. ಹೀಗಾಗಿ ಈ ಅವಧಿಯಲ್ಲಿ ಹಾವುಗಳ ಸಂಚಾರ ಹೆಚ್ಚಾಗಿರುತ್ತದೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾ ಅಥವಾ ಯೂಟ್ಯೂಬ್ ನೋಡಿ ತಾವೇ ಹಾವು ಹಿಡಿಯಲು ಮುಂದಾಗುವವರ ಸಂಖ್ಯೆ ಹೆಚ್ಚಿದೆ. ಇದು ಅತ್ಯಂತ ಅಪಾಯಕಾರಿ. ಇದರಿಂದ ಹಾವುಗಳಿಗೆ ಹಾನಿಯಾಗುವುದಲ್ಲದೆ, ಅನಾಹುತಗಳು ಸಂಭವಿಸುವ ಸಾಧ್ಯತೆ ಇರುತ್ತದೆ ಎಂದು ಉರಗ ತಜ್ಞ ಮೋಹನ್ ಎಚ್ಚರಿಕೆ ನೀಡಿದ್ದಾರೆ.

ಮಕ್ಕಳ ಬಗ್ಗೆ ಇರಲಿ ವಿಶೇಷ ನಿಗಾ

ಶಾಲೆಗಳಿಗೆ ಬೇಸಿಗೆ ರಜೆ ನೀಡಿರುವುದರಿಂದ ಮಕ್ಕಳು ಮನೆಯಲ್ಲಿ ಅಥವಾ ಕಾಂಪೌಂಡ್ ಆವರಣದಲ್ಲಿ ಆಟವಾಡುತ್ತಿರುತ್ತಾರೆ. ಸಣ್ಣ ಮಕ್ಕಳಿಗೆ ಹಾವುಗಳ ಅಪಾಯದ ಬಗ್ಗೆ ಅರಿವಿರುವುದಿಲ್ಲ. ಪೋಷಕರು ಕೆಲಸಕ್ಕೆ ಹೋದಾಗ ಮಕ್ಕಳು ಒಂಟಿಯಾಗಿ ಆಟವಾಡುವಾಗ ಹೆಚ್ಚು ಜಾಗರೂಕರಾಗಿರಬೇಕು. ಬಿಸಿಲು ಆರಂಭವಾದ ಮೇಲೆ ಮಕ್ಕಳನ್ನು ಹೊರಗೆ ಕಳಿಸಲು ಭಯವಾಗುತ್ತಿದೆ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.

ಏನೇನು ಮುನ್ನೆಚ್ಚರಿಕೆ ವಹಿಸಬೇಕು?

  • ಮನೆಯ ಸುತ್ತಮುತ್ತ ಇರುವ ಹಳೆಯ ವಸ್ತುಗಳು, ಪ್ಲಾಸ್ಟಿಕ್ ಹಾಗೂ ಕಸದ ರಾಶಿಯನ್ನು ತಕ್ಷಣ ವಿಲೇವಾರಿ ಮಾಡಿ.
  • ಹೂದಾನಿಗಳನ್ನು (Flower Pots),  ಗಿಡಗಳ ಪಾಟ್​​ಗಳನ್ನು ಸ್ವಚ್ಛವಾಗಿಡಿ, ಅಲ್ಲಿ ತೇವಾಂಶ ಇರುವುದರಿಂದ ಹಾವುಗಳು ಆಶ್ರಯ ಪಡೆಯಬಹುದು.
  • ಶೂಗಳನ್ನು ಧರಿಸುವ ಮುನ್ನ ಅವುಗಳನ್ನು ಚೆನ್ನಾಗಿ ಕೊಡವಿ ಪರೀಕ್ಷಿಸಿ.
  • ಮನೆಯ ಬಾಗಿಲುಗಳ ಕೆಳಭಾಗದಲ್ಲಿ ಸಣ್ಣ ಸಂದಿ ಇಲ್ಲದಂತೆ ನೋಡಿಕೊಳ್ಳಿ.
  • ಹಾವು ಕಾಣಿಸಿಕೊಂಡರೆ ಕೂಡಲೇ ಬಿಬಿಎಂಪಿ ವನ್ಯಜೀವಿ ವಿಭಾಗ ಅಥವಾ ನುರಿತ ಉರಗ ತಜ್ಞರಿಗೆ ಕರೆ ಮಾಡಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೇವಲ 227 ಎಸೆತಗಳು… ವೈಭವ್ ಆರ್ಭಟಕ್ಕೆ ಐಪಿಎಲ್ ದಾಖಲೆ ಉಡೀಸ್ – Kannada News | Vaibhav Sooryavanshi Creates New Record In IPL With Just 227 Balls

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ವೈಭವ್ ಸೂರ್ಯವಂಶಿ (Vaibhav Sooryavanshi) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಸಹ ಕೇವಲ 227 ಎಸೆತಗಳಲ್ಲಿ ಎಂಬುದು ವಿಶೇಷ. ಈ 227 ಎಸೆತಗಳ ಮೂಲಕ ವೈಭವ್ ಮುರಿದಿರುವುದು ಗ್ಲೆನ್ ಮ್ಯಾಕ್ಸ್​​ವೆಲ್ ಹೆಸರಿನಲ್ಲಿದ್ದ ಭರ್ಜರಿ ದಾಖಲೆಯನ್ನು..!

Source link

‘ಮಗು ಜನಿಸಿ ಏಳು ತಿಂಗಳಾಗಿದೆ’; ಇಷ್ಟು ದಿನ ವಿಷಯ ಮುಚ್ಚಿಟ್ಟಿದ್ದೇಕೆ ಮಂಜು ಪಾವಗಡ? – Kannada News | Bigg Boss Winner Manju Pavagada Welcomes Son 7 Months Ago, Kept Quiet

ಮಂಜು ಪಾವಗಡ ಅವರು (Manju Pavagada) 2024ರಲ್ಲಿ ನಂದಿನ ಎಂಬುವವರ ಜೊತೆ ವಿವಾಹ ಆದರು. ಸರಳವಾಗಿ ಅವರ ಮದುವೆ ನೆರವೇರಿತು. ಏಳು ತಿಂಗಳ ಹಿಂದೆ ಅವರು ತಂದೆಯಾಗಿದ್ದಾರೆ. ಆದರೆ, ಈ ವಿಷಯವನ್ನು ಅವರು ಎಲ್ಲಿಯೂ ರಿವೀಲ್ ಮಾಡಿರಲಿಲ್ಲ. ಈ ವಿಷಯವನ್ನು ಅವರು ಈಗ ಹೇಳಿಕೊಂಡಿದ್ದಾರೆ. ಇದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಇಷ್ಟು ದಿನ ಖುಷಿ ಸುದ್ದಿಯನ್ನು ಯಾಕೆ ರಿವೀಲ್ ಮಾಡಿರಲಿಲ್ಲ ಎಂಬ ವಿಷಯವನ್ನು ಕೂಡ ಅವರು ಹೇಳಿಕೊಂಡಿದ್ದಾರೆ.

ಸಾಮಾನ್ಯವಾಗಿ ಚಿತ್ರರಂಗದವರು ಚಿತ್ರರಂಗದವರನ್ನೇ ಮದುವೆ ಆಗುತ್ತಾರೆ. ಆದರೆ, ಮಂಜು ಪಾವಗಡ ಆ ರೀತಿ ಅಲ್ಲ. ಅವರು, ಚಿತ್ರರಂಗದ ಜೊತೆ ನಂಟು ಇಲ್ಲದ ಹುಡುಗಿಯನ್ನು ಮದುವೆ ಆಗಿದ್ದಾರೆ. ಮಂಜು ಪತ್ನಿ ನಂದಿನಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 2024ರಲ್ಲಿ ಈ ಮದುವೆ ಸರಳವಾಗಿ ನಡೆಯಿತು. ಈಗ ಇವರ ಕಡೆಯಿಂದ ಗುಡ್ ನ್ಯೂಸ್ ಸಿಕ್ಕಿದೆ.

‘ಗಂಡು ಮಗು ಆಗಿ ಏಳು ತಿಂಗಳಾಗಿದೆ. ಹೇಳೋಕೆ ಸಮಯ ಸಿಕ್ಕಿರಲಿಲ್ಲ, ಹಾಗಾಗಿ ಹೇಳಿಲ್ಲ. ಆತ ತುಂಬಾ ತರ್ಲೆ ಮಾಡ್ತಾನೆ’ ಎಂದು ಮಂಜು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ಈಗ ಎಲ್ಲರೂ ಅವರಿಗೆ ಅಭಿನಂದನೆ ತಿಳಿಸುತ್ತಾ ಇದ್ದಾರೆ.

ಇದನ್ನೂ ಓದಿ: ಮಂಜು ಪಾವಗಡ ಮದುವೆಯಲ್ಲಿ ಶುಭ ಪೂಂಜಾ, ವರನ ಕೆನ್ನೆ ಹಿಂಡಿದ ನಟಿ

ಮಂಜು ಪಾವಗಡ ಅವರು ಹಾಸ್ಯ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿ ಗಮನ ಸೆಳೆದರು. ‘ಬಿಗ್ ಬಾಸ್ ಕನ್ನಡ ಸೀಸನ್ 8’ರ ವಿನ್ನರ್ ಕೂಡ ಹೌದು. ಮಂಜು ಪಾವಗಡ ಅವರು ಕಲರ್ಸ್ ಕನ್ನಡದ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಅಂತರಪಟ’ ಧಾರಾವಾಹಿಯಲ್ಲಿ ಅವರು ನೆಗೆಟಿವ್ ರೋಲ್ ಮಾಡಿದ್ದರು.ಈಗ ಅವರು ‘ಜೆರಾಕ್ಸ್’ ಹೆಸರಿನ ಸರಣಿಯಲ್ಲಿ ನಟಿಸಿದ್ದಾರೆ. ‘ಬ್ಲಿಂಕ್‌’ ಖ್ಯಾತಿಯ ಶ್ರೀನಿಧಿ ಬೆಂಗಳೂರು ಈ ಸರಣಿಗೆ ನಿರ್ದೇಶನ ಮಾಡಿದ್ದಾರೆ. ನಾಗಭೂಷಣ, ಪಾಯಲ್‌ ಚೆಂಗಪ್ಪ, ಮಂಜು ಪಾವಗಡ, ಓಂ ಪ್ರಕಾಶ್‌ ರಾವ್‌, ಯಶವಂತ್‌ ಶೆಟ್ಟಿ, ಮೊದಲಾದವರು ಇದರಲ್ಲಿ ನಟಿಸಿದ್ದಾರೆ. ಏಪ್ರಿಲ್‌ 24ರಿಂದ ಈ ವೆಬ್‌ ಸರಣಿಯನ್ನು ಜೀ5 ಒಟಿಟಿಯಲ್ಲಿ ನೋಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಿಮ್ಮ ನಗರದ ಗಾಳಿ ಎಷ್ಟು ಶುದ್ಧವಾಗಿದೆ? ಬೆಂಗಳೂರು, ಮೈಸೂರು, ಹುಬ್ಬಳ್ಳಿಯ ಇಂದಿನ ವಾಯು ಗುಣಮಟ್ಟ ಹೇಗಿದೆ? – Kannada News | Bengaluru AQI Improves Post Rain; Madikeri Cleanest, Kalaburagi Moderate Air

ಬೆಂಗಳೂರು, ಏ.23: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ಇಂದು ವಾಯು ಗುಣಮಟ್ಟವು ಮಿಶ್ರಫಲ ನೀಡಿದೆ. ಕಳೆದ ರಾತ್ರಿ ನಗರದ ಕೆಲವು ಭಾಗಗಳಲ್ಲಿ ಬಿದ್ದ ಹಗುರ ಮಳೆಯಿಂದಾಗಿ ಬೆಂಗಳೂರಿನ ಗಾಳಿಯ ಗುಣಮಟ್ಟವು ‘ತೃಪ್ತಿದಾಯಕ’ (Satisfactory) ಮಟ್ಟಕ್ಕೆ ತಲುಪಿದೆ. ಆದರೆ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಧೂಳಿನ ಪ್ರಮಾಣ ಹೆಚ್ಚಾಗಿದೆ. ನಗರದ ಸರಾಸರಿ AQI 78 ದಾಖಲಾಗಿದೆ. ಸಿಲ್ಕ್ ಬೋರ್ಡ್ ಮತ್ತು ಜಯನಗರದಲ್ಲಿ ಮಾಲಿನ್ಯ ಸ್ವಲ್ಪ ಹೆಚ್ಚಿದ್ದರೆ, ಸಿಟಿ ರೈಲ್ವೆ ನಿಲ್ದಾಣ ಮತ್ತು ಪೀಣ್ಯ ಭಾಗದಲ್ಲಿ ಗಾಳಿ ಶುದ್ಧವಾಗಿದೆ.

ಕರಾವಳಿ ನಗರಿ ಮಂಗಳೂರಿನಲ್ಲಿ AQI 54 ದಾಖಲಾಗಿದ್ದು, ಅತ್ಯಂತ ಶುದ್ಧವಾದ ಗಾಳಿ ಲಭ್ಯವಿದೆ. ಸಮುದ್ರ ತೀರದ ಗಾಳಿಯಿಂದಾಗಿ ಇಲ್ಲಿನ ವಾತಾವರಣ ಹಿತಕರವಾಗಿದೆ. ಇಲ್ಲಿನ ವಾಯು ಗುಣಮಟ್ಟ 115 ಕ್ಕೆ ಏರಿಕೆಯಾಗಿದ್ದು, ‘ಸಾಧಾರಣ’ (Moderate) ಮಟ್ಟದಲ್ಲಿದೆ. ರಸ್ತೆ ಕಾಮಗಾರಿ ಮತ್ತು ಒಣ ಹವಾಮಾನದಿಂದಾಗಿ ಧೂಳಿನ ಕಣಗಳು ಹೆಚ್ಚಾಗಿವೆ.

ಉತ್ತರ ಕರ್ನಾಟಕದ ಈ ಭಾಗದಲ್ಲಿ AQI 132 ದಾಖಲಾಗಿದೆ. ಬಿಸಿಲಿನ ತಾಪ ಮತ್ತು ವಾಹನಗಳ ಹೊಗೆಯಿಂದಾಗಿ ಉಸಿರಾಟದ ಸಮಸ್ಯೆ ಇರುವವರು ಜಾಗರೂಕರಾಗಿರಲು ಸೂಚಿಸಲಾಗಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ AQI 62 ಇದ್ದು, ಗಾಳಿಯು ಶುದ್ಧವಾಗಿದೆ. ಇನ್ನು ಮಡಿಕೇರಿಯಲ್ಲಿ ವಾಯು ಗುಣಮಟ್ಟ ಅತ್ಯಂತ ಸುಸ್ಥಿತಿಯಲ್ಲಿದೆ. AQI 42 (ಉತ್ತಮ) ದಾಖಲಾಗಿದೆ. ಕಾಫಿ ತೋಟಗಳು ಮತ್ತು ಅರಣ್ಯ ಪ್ರದೇಶ ಹೆಚ್ಚಿರುವುದರಿಂದ ರಾಜ್ಯದಲ್ಲೇ ಅತ್ಯಂತ ಶುದ್ಧವಾದ ಗಾಳಿ ಇಲ್ಲಿ ಲಭ್ಯವಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಸಂಜೆ ಮಳೆ ಫಿಕ್ಸ್: ಕರಾವಳಿ ಜನರಿಗೆ ಸೆಖೆಯ ಕಾಟ; ಉಷ್ಣಾಂಶದ ಮಟ್ಟ ಏರಿಕೆಯಾಗುವ ಸಾಧ್ಯತೆ

ಚಿಕ್ಕಮಗಳೂರಿನಲ್ಲಿ ಗಾಳಿಯ ಮಟ್ಟ ತೃಪ್ತಿದಾಯಕವಾಗಿದೆ. AQI 55 (ತೃಪ್ತಿದಾಯಕ) ದಾಖಲಾಗಿದೆ. ಪ್ರವಾಸಿ ತಾಣಗಳಲ್ಲಿ ವಾತಾವರಣ ಹಿತಕರವಾಗಿದೆ. ಹಾಸನದಲ್ಲೂ ಸರಾಸರಿ AQI 68 ಇದ್ದು, ಗಾಳಿಯು ಶುದ್ಧವಾಗಿದೆ. ನಗರ ಪ್ರದೇಶಗಳಲ್ಲಿ ವಾಹನ ಸಂಚಾರದಿಂದಾಗಿ ಅಲ್ಪ ಪ್ರಮಾಣದ ಧೂಳು ಕಂಡುಬಂದರೂ ಆರೋಗ್ಯಕ್ಕೆ ಯಾವುದೇ ತೊಂದರೆಯಿಲ್ಲ. ಆದರೆ ಗುಲ್ಬರ್ಗದಲ್ಲಿ ವಾಯು ಗುಣಮಟ್ಟ 135 (ಸಾಧಾರಣ) ದಾಖಲಾಗಿದೆ. ತೀವ್ರ ಬಿಸಿಲು ಮತ್ತು ಒಣ ಹವೆಯಿಂದಾಗಿ ಗಾಳಿಯಲ್ಲಿ ಧೂಳಿನ ಕಣಗಳ ಪ್ರಮಾಣ ಹೆಚ್ಚಿದೆ. ಉಸಿರಾಟದ ಸಮಸ್ಯೆ ಇರುವವರು ಜಾಗರೂಕರಾಗಿರುವುದು ಒಳಿತು. ಇಲ್ಲಿ AQI 128 ದಾಖಲಾಗಿದ್ದು, ‘ಸಾಧಾರಣ’ ಮಟ್ಟದಲ್ಲಿದೆ. ಇಲ್ಲಿನ ಉಷ್ಣ ವಿದ್ಯುತ್ ಸ್ಥಾವರ ಹಾಗೂ ಗಣಿಗಾರಿಕೆ ಚಟುವಟಿಕೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾಲಿನ್ಯದ ಮಟ್ಟ ತುಸು ಏರಿಕೆಯಾಗಿದೆ.

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

ಉತ್ತಮ- 0-50

ಮಧ್ಯಮ – 50-100

ಕಳಪೆ – 100-150

ಅನಾರೋಗ್ಯಕರ – 150-200

ಗಂಭೀರ – 200 – 300

ಅಪಾಯಕಾರಿ – 300 -500+

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version